ಲೇಖಕ: admin

ಮಡಿಕೇರಿ ಜು.13 NEWS DESK : ಮಡಿಕೇರಿ ನಗರ ಸಂಚಾರಿ ಪೊಲೀಸ್ ಅಧಿಕಾರಿಗಳು ಮಾರುಕಟ್ಟೆ ಪ್ರದೇಶ ಸೇರಿದಂತೆ ವಿವಿಧೆಡೆ ಸುವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತಿರುವುದು ಸ್ವಾಗತಾರ್ಹ. ಆದರೆ ಇದು ಒಂದು ದಿನಕ್ಕೆ ಸೀಮಿತವಾಗಬಾರದು ಎಂದು ನಗರಸಭೆಯ ಮಾಜಿ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಕೆ.ಯು.ಅಬ್ದುಲ್ ರಜಾಕ್ ಮನವಿ ಮಾಡಿದ್ದಾರೆ. ಮಡಿಕೇರಿ ನಗರದಲ್ಲಿ ದಿನದಿಂದ ದಿನಕ್ಕೆ ವಾಹನದಟ್ಟಣೆ ಅಧಿಕವಾಗುತ್ತಿದ್ದು, ಪಾರ್ಕಿಂಗ್ ವ್ಯವಸ್ಥೆ ಹದಗೆಡುತ್ತಿದೆ. ಮಾರುಕಟ್ಟೆ, ರಾಜಾಸೀಟ್, ಕಾಲೇಜು ರಸ್ತೆ ಮತ್ತು ಕಾವೇರಿ ಹಾಲ್ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಇಲ್ಲದಾಗಿದೆ. ಮಾರುಕಟ್ಟೆ ಭಾಗದಲ್ಲಿ ಪ್ರತಿ ಶುಕ್ರವಾರ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆಗೊಳಿಸುತ್ತಿರುವುದರಿಂದ ವಾಹನದಟ್ಟಣೆ ಉಂಟಾಗಿ ಜನ ಕಷ್ಟ ಪಡುವಂತ್ತಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆ ನಗರ ಸಂಚಾರಿ ಪೊಲೀಸ್ ಅಧಿಕಾರಿಗಳು ಈ ಶುಕ್ರವಾರ ಪಾರ್ಕಿಂಗ್ ವ್ಯವಸ್ಥೆಯನ್ನು ಸುಗಮಗೊಳಿಸಿದ್ದರು. ರಸ್ತೆಯಲ್ಲಿ ಎಲ್ಲೆಂದರಲ್ಲಿ ನಿಲುಗಡೆಗೊಂಡಿದ್ದ ವಾಹನಗಳನ್ನು ವ್ಯವಸ್ಥಿತವಾಗಿ ನಿಲುಗಡೆಗೊಳಿಸಲು ಪೊಲೀಸರು ಕ್ರಮ ಕೈಗೊಂಡ ಪರಿಣಾಮ ಮಾರುಕಟ್ಟೆ ಆವರಣ ಜನ…

Read More

ಮಡಿಕೇರಿ ಜು.13 NEWS DESK : ಕೊಡಗು ಜಿಲ್ಲಾ‌ ಪಂಚಾಯತ್ ನಲ್ಲಿ ಕಳೆದ 1 ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ವರ್ಣಿತ್ ನೇಗಿ ಅವರಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಕೊಡಗು ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ವಿವಿಧ ಇಲಾಖೆಗಳಿಂದ ಸನ್ಮಾನಿ ಬೀಳ್ಕೊಡುಗೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲೆಯ ಉತ್ತಮ ಆಡಳಿತಕ್ಕೆ ತಂಡದ ಕೋಚ್ ರೀತಿ ಶ್ರಮಿಸಿದ್ದು, ಮಾತು ಕಡಿಮೆ ಕೆಲಸ ಜಾಸ್ತಿ ಎಂಬ ತತ್ವದ ಮೇಲೆ ಕೆಲಸ ನಿರ್ವಹಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ಮುಂದಿನ ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಸಿಗಲಿ ಎಂದು ಶುಭ ಕೋರಿದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ರಾಮಾರಾಜನ್ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಎಂಬುದು ನಿಶ್ಚಿತ. ಕುಟುಂಬದ ಸದಸ್ಯರಂತೆ ಹಾಗೂ ಉತ್ತಮ ಸ್ನೇಹಿತರಾಗಿ ಕಳೆದ ಒಂದು ವರ್ಷದಿಂದ ಇದ್ದು, ಇಂದು ವರ್ಗಾವಣೆಗೊಳ್ಳುತ್ತಿರುವುದು ಬೇಸರವನ್ನುಂಟು ಮಾಡಿದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ…

Read More

ಕಾಸರಗೋಡು ಜು.13 NEWS DESK : ಕಾಸರಗೋಡು ಕನ್ನಡಿಗರಿಗೆ ಸರ್ಕಾರ ಧ್ವನಿಯಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು. ಕಾಸರಗೋಡು ಪತ್ರಕರ್ತರ ಸಂಘದ ವತಿಯಿಂದ ನಡೆದ ದತ್ತಿನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹೊರನಾಡಿನ ಕನ್ನಡಿಗರ ಅಭಿಮಾನ ದೊಡ್ಡದು. ವಿಶೇಷವಾಗಿ ಕಾಸರಗೋಡು ಕನ್ನಡಿಗರ ಭಾವನೆ ಅರ್ಥವಾಗುತ್ತದೆ. ನಿಮ್ಮ ಜೊತೆಯಲ್ಲಿ ಕರ್ನಾಟಕ ಸರ್ಕಾರ ಸದಾ ಇದೆ. ನಿಮ್ಮ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಗಡಿ ನಾಡಿನ ಕಾಸರಗೊಡು ಪತ್ರಕರ್ತರ ಬಸ್ ಪಾಸ್ ಕೊಡಿಸುವ ಭರವಸೆ ನೀಡಿದ ಕೆ.ವಿ.ಪ್ರಭಾಕರ್ ಅವರು, ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಸಿಎಂ ಜೊತೆಗೆ ಮಾತನಾಡಿ ಅನುದಾನ ಒದಗಿಸುವುದಾಗಿ ತಿಳಿಸಿದರು. ‌ ಬೆಂಗಳೂರಿನಲ್ಲಿ ನಾವು ರಾಜ್ಯೋತ್ಸವ ಕನ್ನಡಿಗರಾಗಿದ್ದೇವೆ. ಆದರೆ ನೀವು ವರ್ಷದ ಅನುಕಾಲವೂ ಕನ್ನಡ ಭಾಷೆ ಉಳಿಸುವ ಪ್ರಯತ್ನ ಮಾಡುತ್ತಿರುವುದು ಹೆಮ್ಮೆಯ ಮತ್ತು ಅಭಿಮಾನದ ಸಂಗತಿ ಎಂದರು. ಕಾಸರಗೋಡು ದತ್ತಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು,…

Read More

ಮಡಿಕೇರಿ ಜು.13 NEWS DESK : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಹುಟ್ಟು ಹಬ್ಬದ ಪ್ರಯುಕ್ತ ಚೇರಂಬಾಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸ್ವಚ್ಛತಾ ಶ್ರಮದಾನ ಮಾಡಿದರು. ಚೇರಂಬಾಣೆ (ಬೆಂಗೂರು )ಗ್ರಾ.ಪಂ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದ ಸುತ್ತಲು ಪ್ಲಾಸ್ಟಿಕ್ ತ್ಯಾಜ್ಯ, ಕಸ, ಕಡ್ಡಿಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷ ಮಿಲನ್ ಮುತ್ತಣ್ಣ, ಉಪಾಧ್ಯಕ್ಷ ಸೋಮಣ್ಣ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಿಪಿನ್ ಮತ್ತು ವಲಯ ಕಾರ್ಯದರ್ಶಿ ಕೆ.ಎಂ.ಬಶೀರ್, ಪಕ್ಷದ ಸದಸ್ಯರುಗಳಾದ ಕುಂಚೆಟ್ಟಿ ಗೋಪಾಲ, ಕಾರ್ಯಪ್ಪ, ಕೇಕಡ ತಮ್ಮಯ್ಯ, ಕೀಪಾಡ0ಡ ಜಗದೀಶ, ಪಟ್ಟಮಾಡ ಹೆಮ್ ಮಾದಪ್ಪ, ಉಡುದೋಳಿ ಶೇಖರ, ಕೇಕಡ ಡ್ಯೂಕ, ಮುಕ್ಕಾಟಿ ಸುಗು, ಇರ್ಷಾದ್ (ಇಚ್ಚು), ದೇವಯ್ಯ ಬೆಂಗೂರ್, ಶಿವ, ಮೋಹನ, ಕೂಡಕಂಡಿ ಲವ, ದಯಾನಂದ ಬೆಂಗೂರ್, ಯತೀಶ್ ಪರಂಬು ಹಾಗೂ ಪಂಚಾಯತ್ ಸದಸ್ಯ ಪಾಲ್ಗೊಂಡಿದ್ದರು.

Read More

ಮಡಿಕೇರಿ ಜು.13 NEWS DESK : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ಕೆಲಸಗಳನ್ನು ಕಾರ್ಯಾಂಗದ ಮೂಲಕ‌ ಪರಿಹರಿಸುವುದು ಶಾಸಕಾಂಗದ ಕರ್ತವ್ಯ ಆಗಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ‘ಜನಸ್ಪಂದನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹೇಳಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ‘ಜನಸ್ಪಂದನ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಂದಾಯ, ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಲೋಕೋಪಯೋಗಿ, ಸೆಸ್ಕ್, ಆರೋಗ್ಯ, ಶಿಕ್ಷಣ, ಪೌರಾಡಳಿತ, ಸೇರಿದಂತೆ ಹಲವು ಇಲಾಖೆ ವ್ಯಾಪ್ತಿಯ ಕೆಲಸ-ಕಾರ್ಯಗಳಿಗೆ ಸಾರ್ವಜನಿಕರಿಂದ ಪ್ರತಿನಿತ್ಯ ಹೆಚ್ಚಿನ ಮನವಿ ಸಲ್ಲಿಸುತ್ತಾರೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಶಾಸಕರು ತಿಳಿಸಿದರು. ಸಾರ್ವಜನಿಕರಿಗೆ ನ್ಯಾಯ ಒದಗಿಸುವುದು ಸರ್ಕಾರದ ಪ್ರಥಮ ಆದ್ಯತೆ ಆಗಿದೆ. ಸಲ್ಲಿಕೆಯಾದ ಅರ್ಜಿಗೆ ಮಾತ್ರ ಸೀಮಿತವಾಗದೆ. ಸ್ಥಳೀಯ ಎಲ್ಲಾ ರೀತಿಯ ಸಮಸ್ಯೆ ಬಗೆಹರಿಸುವುದು ಅತಿಮುಖ್ಯ ಎಂದು ಡಾ.ಮಂತರ್ ಗೌಡ ಅವರು…

Read More

ಕಡಂಗ ಜು.13 NEWS DESK : ರಾತ್ರಿ ಸುರಿದ ಬಾರಿ ಮಳೆಯಿಂದಾಗಿ ಕಡಂಗ ಚೆಯ್ಯಂಡಾಣೆ ಮುಖ್ಯ ರಸ್ತೆಯ ಪೊದ್ಧಮಾನಿ ಗ್ರಾಮದಲ್ಲಿರುವ ಬೃಹತ್ ಮಾವಿನ ಮರದ ಕೊಂಬೆ ರಸ್ತೆಗೆ ಬಿದ್ದಿದೆ. ಅಲ್ಲದೆ ವಿದ್ಯುತ್ ತಂತಿಗೆ ಹಾನಿಯಗಿದ್ದು, ಗ್ರಾಮದ ಸುತ್ತಮುತ್ತಲ ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ. ವರದಿ : ನೌಫಲ್

Read More

ಮಡಿಕೇರಿ ಜು.13 NEWS DESK : ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.17 ರಂದು ನಡೆಯಲಿದೆ ಎಂದು ನೂತನ ಅಧ್ಯಕ್ಷ ಬಿ.ವೈ.ರಾಜೇಶ್ ಯಲ್ಲಪ್ಪ ತಿಳಿಸಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ತಾವು ಸೇರಿದಂತೆ ಸದಸ್ಯರುಗಳಾದ ಸುದಯ್ ನಾಣಯ್ಯ, ಕಾನೆಹಿತ್ಲು ಮೊಣ್ಣಪ್ಪ, ಆರ್.ಪಿ.ಚಂದ್ರಶೇಖರ್ ಹಾಗೂ ಮೀನಾಜ್ ಪ್ರವೀಣ್ ಅಧಿಕಾರ ಸ್ವೀಕರಿಸಲಿರುವುದಾಗಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

Read More

ಮಡಿಕೇರಿ ಜು.13 NEWS DESK : ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಸದಸ್ಯರುಗಳೊಂದಿಗೆ ಶಾಸಕ ಡಾ.ಮಂತರ್ ಗೌಡ ಸಭೆ ನಡೆಸಿ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ನಂತರ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಿಗೆ ಮಳೆಗಾಲದ ಹಿನ್ನೆಲೆಯಲ್ಲಿ ರೈನ್ ಕೋಟ್ ವಿತರಣೆ ಮಾಡಿದರು.

Read More

ಮಡಿಕೇರಿ ಜು.13 NEWS DESK : ಸಮುದಾಯ ವೈದ್ಯಶಾಸ್ತ್ರವಿಭಾಗ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಬೋಧಕ ಆಸ್ಪತ್ರೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೊಡಗು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಮಡಿಕೇರಿಯಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ನಗರದ ಮೈತ್ರಿ ಹಾಲ್ ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ  ಸಾಮಾನ್ಯ ವೈದ್ಯ ಶಾಸ್ತ್ರ, ಶಸ್ತ್ರ ಚಿಕಿತ್ಸೆ, ಕಣ್ಣು, ಪ್ರಸೂತಿ ಮತ್ತು ಸ್ತ್ರೀ ರೋಗ, ಮಕ್ಕಳ ವಿಭಾಗ, ಚರ್ಮ ರೋಗ, ಕಿವಿ ಮೂಗು ಗಂಟಲು, ಮೂಳೆ ಮತ್ತು ಕೀಲು, ಸಮುದಾಯ ವೈದ್ಯಕೀಯ ವಿಭಾಗದ ನುರಿತ ತಜ್ಞ ವೈದ್ಯರು ವೈದ್ಯಕೀಯ ಸೇವೆಯನ್ನು ನೀಡಿದರು. ಸುಮಾರು 100 ಕ್ಕಿಂತ ಹೆಚ್ಚು ಹೊರ ರೋಗಿಗಳು ರಕ್ತದೊತ್ತಡ ಮದುಮೇಹ ರಕ್ತಹೀನತೇ ಇನ್ನಿತರ ರೋಗಗಳಿಗೆ ಚಿಕಿತ್ಸೆ ಪಡೆದರು. ಭಾರತೀಯ ರೆಡ್‌ ಕ್ರಾಸ್‌ನ ಸಭಾಪತಿಗಳಾದ ಬಿ.ಕೆ.ರವೀಂದ್ರ ರೈ ಮಾತನಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ, ನವದೆಹಲಿಯ ಶಿಫರಸ್ಸಿನಂತೆ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸಮಾಜದಲ್ಲಿರುವ…

Read More

ಮಡಿಕೇರಿ ಜು.13 NEWS DESK : ಪ್ರಾಮಾಣಿಕ ಬದ್ಧತೆ ಇದ್ದಲ್ಲಿ ಯಶಸ್ಸು ಸಾಧ್ಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ರೇಣುಕಾಚಾರ್ಯ ಕಾನೂನು ಮಹಾವಿದ್ಯಾಲಯ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆದ ಅಭಿನಂದನ ಸಮಾರಂಭದಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿಗಳಾದ ವೀರಪ್ಪರವರು ಪ್ರಾಮಾಣಿಕ ವ್ಯಕ್ತಿ. ಅವರನ್ನು ಅಭಿನಂದಿಸಲಿಕ್ಕೆ ಆಗಮಿಸಿದ ಯುವ ವಕೀಲರು ಅವರ ಜೀವನದಾರಿಯನ್ನ ಅಳವಡಿಸಿಕೊಳ್ಳಬೇಕು. ಅವರ ಮಾರ್ಗದರ್ಶನ ಕಂಡುಕೊಳ್ಳುತ್ತಾ  ತಮ್ಮ ಜೀವನವನ್ನು ನಡೆಸಿದರೆ ಖಂಡಿತವಾಗಿ ಎಲ್ಲರೂ ಯಶಸ್ಸನ್ನು ಕಾಣಲು ಸಾಧ್ಯವಿದೆ ಎಂದರು. ವಕೀಲರ ವೃತ್ತಿ ಕೆಲವೊಮ್ಮೆ ಹತ್ತಿರದಿಂದ ಕಂಡಾಗ ಎಲ್ಲೋ ದಾರಿ ತಪ್ಪುತ್ತಿದೆ ಎಂದ ಅವರು ಯುವ ವಕೀಲರು ತಮ್ಮ ವೃತ್ತಿಯನ್ನು ಪ್ರಮಾಣಿಕತೆಯಿಂದ ನಡೆಸಿ ಅದಕ್ಕೆ ಫಲ ಸಿಗುತ್ತದೆ ಎಂದು ಹೇಳಿದರು. ಉಪ ಲೋಕಾಯುಕ್ತರಾಗಿ ಆಯ್ಕೆ ಆಗಿರುವ ನ್ಯಾಯಮೂರ್ತಿ ವೀರಪ್ಪ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ಯಶಸ್ಸು ಇನ್ನಷ್ಟು ವಿಸ್ತಾರವಾಗಲೆಂದು ಹಾರೈಸುತ್ತೇನೆ. ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ, ಉಪ ಲೋಕಾಯುಕ್ತ ರನ್ನಾಗಿ…

Read More