ಮಡಿಕೇರಿ ಜು.11 NEWS DESK : ಮಾದಾಪುರದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ವಿದ್ಯುತ್ ಕಂಬವನ್ನು ಗಮನಿಸಿದ ಶಾಸಕ ಡಾ.ಮಂತರ್ ಗೌಡ, ತಕ್ಷಣವೇ ವಿದ್ಯುತ್ ಕಂಬ ದುರಸ್ತಿಗೊಳಿಸುವಂತೆ ಇಲಾಖೆಯ ಸಿಬ್ಬಂದಿಗಳಿಗೆ ಸೂಚಿಸಿದರು.
ಲೇಖಕ: admin
ಮಡಿಕೇರಿ NEWS DESK : ದಕ್ಷಿಣ ಭಾರತದ ಕಾಶ್ಮೀರ ಎಂದೇ ಪ್ರಖ್ಯಾತವಾಗಿರುವ ಕೊಡಗಿನ ಜಲಪಾತಗಳಲ್ಲಿ ಒಂದು. ಕೊಡಗಿನ ಹಲವಾರು ಜಲಪಾತಗಳಲ್ಲಿ ಒಂದಾಗಿರುವ ಈ ಜಲಪಾತ ತುಂಬಾ ರೋಮಾಂಚನಕಾರಿಯಾಗಿದೆ. ನಿಶ್ಯಬ್ದ ಕಾಡಿನಲ್ಲಿ ನೆಲೆಗೊಂಡಿರುವ, ಹರಿಯುವ ನೀರಿನ ಶಬ್ಧವು, ಪಕ್ಷಿ ಮತ್ತು ಪ್ರಕೃತಿಯ ಸಮ್ಮೋಹನಗೊಳನ್ನು ಒಳಗೊಂಡಿದೆ. ಮಡಿಕೇರಿಯಿಂದ ಸುಮಾರು 50.ಕಿಮಿ ದೂರದಲ್ಲಿ ಇರುವ ಈ ಜಲಪಾತ,ನಾಗರಹೊಳೆ ಪ್ರಾಣಿ ರಕ್ಷಣಧಾಮದ ಕಾಡಿನಲ್ಲಿ ಸ್ಥಾಪಿತವಾಗಿದೆ.ಎಲ್ಲಾ ಕಾಲದಲ್ಲೂ ನೀರಿನಿಂದ ತುಂಬಿರುವ ಈ ಜಲಪಾತ ಮಳೆಗಾಲದಲ್ಲಿ ನೋಡಲು ತುಂಬಾ ಸುಂದರವಾಗಿರುತ್ತದೆ.ಈ ಜಲಪಾತವು ಪ್ರಸಿದ್ಧವಾದ ಪ್ರವಾಸಿತಾಣವಾಗಿದೆ.ಬ್ರಹ್ಮಗಿರಿ ಬೆಟ್ಟದಿಂದ ಉಗಮವಾಗುವ ಈ ಜಲಪಾತ ಲಕ್ಷಣತೀರ್ಥ ನದಿಗೆ ಸೇರ್ಪಡೆಯಾಗುತ್ತದೆ. ಪುರಾಣದಲ್ಲಿ ಬರುವ ಹಾಗೆ ರಾಮಾಯಣದ ಯುಗದಲ್ಲಿ ರಾಮನು ತನ್ನ ವನವಾಸದ ಕಾಲದಲ್ಲಿ ಈ ಕಾಡಿನಲ್ಲಿ ತಂಗಿದ್ದನು ಲಕ್ಷಣನು ರಾಮನಿಗೆ ನೀರು ತರಲು ಹೊರಟಾಗ ನೀರು ಎಲ್ಲೂ ಸಿಗದೆ ಬಾಣವನ್ನು ಕಾಡಿಗೆ ಬಿಟ್ಟನು.ಬಾಣ ಮುಟ್ಟಿದ ಜಾಗದಿಂದ ಜಲಪಾತವು ಸೃಷ್ಟಿಯಾಗುತ್ತದೆ.ಈ ಜಲಪಾತವೇ ಈಗಿನ ಇರ್ಪು ಜಲಪಾತ.ಜಲಪಾತವಿರುವ ಬೆಟ್ಟದ ಕೆಳಭಾಗದಲ್ಲಿ ರಾಮೇಶ್ವರ ದೇವಸ್ತಾನವಿದೆ.ಪುರಾಣದ ಪ್ರಕಾರ ಈ ದೇವಸ್ಥಾನದಲ್ಲಿರುವ ಶಿವಲಿಂಗವನ್ನು…
ಮಡಿಕೇರಿ ಜು.11 NEWS DESK : ರಾಜ್ಯದಲ್ಲಿ ಡೆಂಗ್ಯು ಜ್ವರ ವ್ಯಾಪಿಸುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ವರ್ಷಾರಂಭದಿಂದ ಇಲ್ಲಿಯವರೆಗೆ ಒಟ್ಟು 126 ಪ್ರಕರಣಗಳು ದಾಖಲಾಗಿದೆ. ಒಟ್ಟು 13 ಮಂದಿ ಡೆಂಗ್ಯು ಜ್ವರಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಒಟ್ಟು 14 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದರೆ, ವಿರಾಜಪೇಟೆ ತಾಲ್ಲೂಕಿನಲ್ಲಿ 19, ಸೋಮವಾರಪೇಟೆ 1, ಕುಶಾಲನಗರದಲ್ಲಿ 32 ಮತ್ತು ಜಿಲ್ಲೆಯಲ್ಲಿಯೇ ಅತೀ ಹೆಚ್ಚು 42 ಪ್ರಕರಣಗಳು ಪೊನ್ನಂಪೇಟೆ ತಾಲ್ಲೂಕಿನಲ್ಲಿ ದಾಖಲಾಗಿದೆ. ಕೊಡಗು ಜಿಲ್ಲೆಯಲ್ಲಿ ಕಂಡು ಬಂದ ಬಹುತೇಕ ‘ಡೆಂಗ್ಯು’ ಪ್ರಕರಣಗಳು ಟ್ರಾವೆಲ್ ಹಿಸ್ಟರಿ ಹೊಂದಿರುವಂತದ್ದು. ಹೊರ ಜಿಲ್ಲೆಗಳ ವ್ಯಕ್ತಿಗಳಿಂದ ಡೆಂಗ್ಯು ಪತ್ತೆಯಾಗಿದೆಯಷ್ಟೆ. ಸ್ಥಳೀಯವಾಗಿ ಡೆಂಗ್ಯು ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ, ಇದಕ್ಕೆ ಜಾಗೃತಿ ಕಾರ್ಯಕ್ರಮಗಳು ಕೂಡ ಕಾರಣ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ತಿಳಿಸಿದ್ದಾರೆ. ಅಂಕಿ ಅಂಶಗಳಂತೆ ಕಳೆದ ಮೇ ತಿಂಗಳಿನಲ್ಲಿ ಜಿಲ್ಲೆಯಲ್ಲಿ 25 ಡೆಂಗ್ಯು ಪ್ರಕರಣ ದಾಖಲಾಗಿದ್ದರೆ, ಜೂನ್‍ನಲ್ಲಿ 40 ಮತ್ತು ಜುಲೈನಲ್ಲಿ 13 ಪ್ರಕರಣ ಪತ್ತೆಯಾಗಿದೆ. ಡೆಂಗ್ಯುವಿನಿಂದ ಜೀವಹಾನಿಯ…
ಮಡಿಕೇರಿ ಜು.11 NEWS DESK : ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮಾಧ್ಯಮಿಕ, ಪ್ರೌಢಶಾಲಾ ವಿದ್ಯಾರ್ಥಿ ಕ್ರೀಡಾಪಟು (6 ರಿಂದ 10 ನೇ ತರಗತಿ) ಗಳಿಗೆ ವಾರ್ಷಿಕ ರೂ.10 ಸಾವಿರ ದಂತೆ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನವನ್ನು ನೀಡುವ ಯೋಜನೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಜಾರಿಯಲ್ಲಿದ್ದು, ಈ ಯೋಜನೆಯನ್ವಯ ಪ್ರಸ್ತುತ ಮಾಧ್ಯಮಿಕ ಅಥವಾ ಪ್ರೌಢಶಾಲೆಯಲ್ಲಿ ಓದುತ್ತಿರುವ ಕ್ರೀಡಾಪಟುಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಆಸಕ್ತ ಕ್ರೀಡಾಪಟುಗಳು ಇಲಾಖಾ ಅಧಿಕೃತ ಜಾಲತಾಣ http://sevasindhuservices.karnataka.gov.in ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಜುಲೈ, 20 ರವರೆಗೆ ಅವಧಿ ವಿಸ್ತರಿಸಲಾಗಿದೆ. ಆಸಕ್ತ ಕ್ರೀಡಾಪಟುಗಳು ಜುಲೈ, 20 ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು 2024-25ನೇ ಸಾಲಿನಲ್ಲಿ ವಿದ್ಯಾರ್ಥಿಯಾಗಿದ್ದು, ಮಾಧ್ಯಮಿಕ ಅಥವಾ ಪ್ರೌಢಶಾಲೆ (6 ರಿಂದ 10ನೇ ತರಗತಿ)ಯಲ್ಲಿ ಓದುತ್ತಿರಬೇಕು. ಅರ್ಜಿದಾರರು ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ನೊಂದಾಯಿತವಾದ ಕ್ರೀಡಾ ಸಂಸ್ಥೆಗಳು 2023ರ ಏಪ್ರಿಲ್, 01 ರಿಂದ 2024 ರ ಮಾರ್ಚ್, 31…
ಮಡಿಕೇರಿ ಜು.11 NEWS DESK : ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿರಾಜಪೇಟೆಯಲ್ಲಿ 2024-25ರ ಸಾಲಿನ ಪ್ರಥಮ ವರ್ಷದ ಬಿ.ಎ(ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಕನ್ನಡ ಐಚ್ಛಿಕ), ಬಿ.ಕಾಂ ಮತ್ತು ಬಿಬಿಎ ಪದವಿ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಕಾಲೇಜು ಸುಸಜ್ಜಿತವಾದ ತರಗತಿ ಕೊಠಡಿಗಳನ್ನು ಮತ್ತು ನುರಿತ ಬೋಧಕರನ್ನು ಒಳಗೊಂಡಿದೆ. ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಶ್ಯಕತೆ ಇರುವ 14,000 ಪುಸ್ತಕಗಳನ್ನು ಹೊಂದಿರುವ ವಿಶಾಲವಾದ ಗ್ರಂಥಾಲಯ, ಇ-ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್ ಸೌಲಭ್ಯ, ವೈಫೈ ಸೌಲಭ್ಯ, ಸಿ.ಸಿ.ಕ್ಯಾಮರಾ ಕಣ್ಗಾವಲಿನಲ್ಲಿರುವ ಸುಸಜ್ಜಿತ ಕಟ್ಟಡ, ಮಾದಕ ವಸ್ತು ನಿರ್ಮೂಲನಾ ಸಮಿತಿ, ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಆಧುನಿಕ ರೀತಿಯ ಬೋಧನಾ ಕ್ರಮ, ಉದ್ಯೋಗ ಮಾರ್ಗ ದರ್ಶನ ಕೇಂದ್ರ, ವಿದ್ಯಾರ್ಥಿ ನಿಲಯ, ಕ್ಯಾಂಟೀನ್ ವ್ಯವಸ್ಥೆ, ಇಕೋಕ್ಲಬ್,ವಿದ್ಯಾರ್ಥಿ ಭ್ರಾತೃತ್ವ ವೇದಿಕೆ, ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಸಂಘ,ಅಂತರ ಕಾಲೇಜು ವಿದ್ಯಾರ್ಥಿಗಳ ಕಲಿಕಾ ವಿನಿಮಯ ಕಾರ್ಯಕ್ರಮಗಳು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕøತಿಕ, ಎನ್.ಎಸ್.ಎಸ್.,ರೋವರ್ಸ್, ರೇಂಜರ್ಸ್, ರೆಡ್‍ಕ್ರಾಸ್ ಮುಂತಾದ ಘಟಕಗಳ ಕಾರ್ಯನಿರತವಾಗಿದೆ. ಎಲ್ಲಾ ವರ್ಗದ ವಿದ್ಯಾರ್ಥಿನಿಯರಿಗೆ ಶುಲ್ಕ…
ಸುಂಟಿಕೊಪ್ಪ ಜು.11 NEWS DESK : ಯಾವುದೇ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಹೇಳಿದರು. ಕೊಡಗರಹಳ್ಳಿ, ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೋಟ್ ಪುಸ್ತಕಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು. ಸಮಾಜದಲ್ಲಿ ಒಬ್ಬ ಮನುಷ್ಯನ ಉನ್ನತೀಕರಣ ಆಗಬೇಕಾದರೆ ಅವನ ಜೀವನದಲ್ಲಿ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ತನ್ನಿಂದಾದ ಸಹಾಯ ಮಾಡಿರುವುದಾಗಿ ತಿಳಿಸಿದರು. ಶಿಕ್ಷಣ ಎಲ್ಲಾ ಮಕ್ಕಳ ಹಕ್ಕು, ಈ ಹಿಂದೆ ನಾನು ಶಾಲೆಯಲ್ಲಿ ಕಲಿಯುವ ಸಂದರ್ಭದಲ್ಲಿ ಶಿಕ್ಷಣ ಕಲಿಯಲು ತೊಂದರೆಯಾಗುತ್ತಿತ್ತು, ಆದರೆ ಇಂದಿನ ಮಕ್ಕಳಿಗೆ ಆ ತೊಂದರೆಯಾಗಬಾರದು ಎಂದರು. ನಾಡು ಪ್ರೌಢಶಾಲೆ ಗೌರವ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ಮಾತನಾಡಿ, ವಿದ್ಯೆ ಬಹಳ ಮುಖ್ಯವಾದದ್ದು. ಈ ವಿದ್ಯೆಯಿಂದ ಏನು ಬೇಕಾದರೂ ಜೀವನದಲ್ಲಿ ಸಾಧಿಸಬಹುದು. ಸೃಜನಶೀಲತೆ, ಸಂಸ್ಕಾರ, ಒಳ್ಳೆಯ ನಡತೆ, ಒಳ್ಳೆಯ ಗುಣಗಳನ್ನು ಬೆಳಸುತ್ತಾರೆ ಎಂದರು. ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಚಂಗಪ್ಪ ಮಾತನಾಡಿ, ಹಣ ಆಸ್ತಿಯನ್ನು…
ಮಡಿಕೇರಿ ಜು.11 NEWS DESK : ಮನೆಯೊಂದರಲ್ಲಿ ಕಳ್ಳತನ ನಡೆಸಿದ್ದ ಆರೋಪಿಯೋರ್ವನನ್ನು ಜಿಲ್ಲಾ ಶ್ವಾನದಳದ ‘ಬ್ರೂನೋ’ ಪತ್ತೆ ಮಾಡಿ ಪೊಲೀಸರಿಗೆ ನೆರವಾಗಿರುವ ಪ್ರಕರಣ ನಡೆದಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ತಾರ್ಮುಡಿ ಗ್ರಾಮದ ಪಿ.ಎಂ.ಮೋಹನ್ ಕುಮಾರ್ ಎಂಬವರ ಮನೆಯಲ್ಲಿ ಕಳ್ಳತನವಾಗಿತ್ತು. ಮನೆಗೆ ನುಗ್ಗಿದ ಕಳ್ಳರು ಚಿನ್ನ ಹಾಗೂ ನಗದು ಅಪಹರಿಸಿದ್ದ ಕುರಿತು ದೂರು ದಾಖಲಾಗಿತ್ತು. ಇದರಂತೆ ಶ್ವಾನದಳದೊಂದಿಗೆ ಕಾರ್ಯಾಚರಣೆ ನಡೆಸಲಾಗಿದ್ದು, ಬ್ರೂನೋ ಇವರ ಮನೆಯ ಸನಿಹದ ಲೈನ್‍ಮನೆಯಲ್ಲಿದ್ದ ವ್ಯಕ್ತಿಯೋರ್ವನನ್ನು ಗುರುತಿಸಿದೆ. ಈ ಶಂಕಿತ ವ್ಯಕ್ತಿಯ ವಿಚಾರಣೆ ನಡೆಸಿದಾಗ ಕಳವು ನಡೆಸಿರುವುದು ಬೆಳಕಿಗೆ ಬಂದಿದೆ. ಆರೋಪಿ ಮಂಜು ಎಂಬಾತನನ್ನು ಬಂಧಿಸಲಾಗಿದ್ದು, ಬಂಧಿತನಿಂದ ಕಳವು ಮಾಡಲಾಗಿದ್ದ 5 ಗ್ರಾಂ ಚಿನ್ನ ಹಾಗೂ ರೂ.2 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲಾಖೆಯ ಈ ಹೆಮ್ಮೆಯ ಶ್ವಾನ ಎ.ಆರ್.ಎಸ್.ಐ ಜಿತೇಂದ್ರ ರೈ, ಮನಮೋಹನ್, ಸಿದ್ಧನಗೌಡ ಪಾಟೀಲ್ ಅವರ ಗರಡಿಯಲ್ಲಿ ಪಳಗಿದೆ. ಈ ಬಗ್ಗೆ ಎಸ್.ಪಿ.ರಾಮರಾಜನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ಜು.11 NEWS DESK : ಕೊಡಗು ಜಿ.ಪಂ.ಮುಖ್ಯ ಕಾರ್ಯನಿರ್ವಣಾಧಿಕಾರಿಯಾಗಿ ಆನಂದ್ ಪ್ರಕಾಶ್ ಮೀನಾ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ನೂತನ ಸಿಇಒ ಅವರು ಈ ಹಿಂದೆ ಚಾಮರಾಜನಗರ ಜಿಲ್ಲೆಯಲ್ಲಿ ಜಿ.ಪಂ.ಸಿಇಒ ಆಗಿ ಕಾರ್ಯನಿರ್ವಹಿಸಿದ್ದಾರೆ.
ಮಡಿಕೇರಿ ಜು.11 NEWS DESK : ಭಾರತೀಯ ವಾಯುಪಡೆಯಿಂದ ಅಗ್ನಿಪತ್ ಯೋಜನೆಯಡಿಯಲ್ಲಿ ಅಗ್ನಿವೀರ್ ವಾಯು ಪ್ರವೇಶ ಆಯ್ಕೆ ಪರೀಕ್ಷೆಗಾಗಿ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.50 ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಅಥವಾ ಡಿಪ್ಲೋಮಾ ವಿಭಾಗದ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಷ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್, ಇನ್‍ಸ್ಟ್ರುಮೆಂಟ್ ಟೆಕ್ನಾಲಜಿ, ಇನ್ಪಾರ್ಮೇಶನ್ ಟೆಕ್ನಾಲಜಿಯಲ್ಲಿ ಶೇ,50 ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಇಲ್ಲವೇ 02 ವರ್ಷದ ವೃತ್ತಿಪರ ಕೋರ್ಸ್‍ಗಳಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ವ್ಯಾಸಂಗ ಮಾಡಿ ಶೇ.50ರಷ್ಟು ಅಥವಾ ಯಾವುದೇ ಪಿ.ಯು.ಸಿ ವಿಭಾಗದಲ್ಲಿ ಶೇ,50ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಅಭ್ಯರ್ಥಿಯು 03 ಜುಲೈ 2004 ರಿಂದ 03 ಜನವರಿ 2008ರ ನಡುವೆ ಜನಿಸಿರಬೇಕು.(ಎರಡೂ ದಿನಾಂಕಗಳು ಸೇರಿದಂತೆ) ಅರ್ಜಿ ಶುಲ್ಕ 550 ರೂ.ಗಳಾಗಿದೆ. ಆಸಕ್ತ ಅಭ್ಯರ್ಥಿಗಳು ಸಂಪೂರ್ಣ ವಿವರ ಮತ್ತು ಸೂಚನೆಗಳಿಗೆ ವೆಬ್‍ಸೈಟ್ https://agnipathvayu.cdac.in ನೋಡಬಹುದು. ವೆಬ್‍ಸೈಟ್‍ನಲ್ಲಿ 08 ಜುಲೈ 2024ರಿಂದ 28 ಜುಲೈ 2024ರೊಳಗೆ ಅರ್ಜಿ…
ಬೆಂಗಳೂರು ಜು.11 NEWS DESK : ವಿಶ್ವದ ಅಗ್ರ ಉತ್ಪಾದಕ ವಿಯೆಟ್ನಾಂನಿಂದ ಸಾಗಣೆಯಲ್ಲಿನ ನಿಧಾನಗತಿಯಿಂದ ಜಾಗತಿಕ ಮಾರುಕಟ್ಟೆ ಬಿಗಿಯಾಗಿ ರೋಬಸ್ಟಾ ಕಾಫಿ ಬೆಲೆಗಳು ಮಂಗಳವಾರ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿ ಹೊಸ ದಾಖಲೆಯೇ ನಿರ್ಮಾಣವಾಗಿದೆ. ಅರೇಬಿಕಾ ಮತ್ತು ರೊಬಸ್ಟಾ ಪಾರ್ಚ್‌ಮೆಂಟ್ ಕಾಫಿಗಳೆರಡೂ ಚೀಲಕ್ಕೆ 300 ರಿಂದ 500 ರೂಪಾಯಿಗಳವರೆಗೆ ಏರಿಕೆ ದಾಖಲಿಸಿವೆ. ಬುಧವಾರ ದೇಶೀ ಮಾರುಕಟ್ಟೆಯಲ್ಲಿ ಅರೆಬಿಕಾ ಪಾರ್ಚ್‌ಮೆಂಟ್ ದರ 50 ಕೆಜಿಗೆ ಚೀಲವೊಂದಕ್ಕೆ 16,4೦೦ ರೂಪಾಯಿಗಳಿಗೂ ರೊಬಸ್ಟಾ ಪಾರ್ಚ್‌ಮೆಂಟ್ ಬೆಲೆ 17,500 ರೂಪಾಯಿಗಳವರೆಗೂ ಏರಿಕೆ ದಾಖಲಿಸಿತು. ರೊಬಸ್ಟಾ ಚೆರಿ ದರ ಚೀಲಕ್ಕೆ 10 ಸಾವಿರ ತಲುಪಿದ್ದು ಅರೇಬಿಕಾ ಚೆರಿ ೯ ಸಾವಿರ ತಲುಪಿದೆ. ಮೂಡಿಗೆರೆಯ ಮುದ್ರೆಮನೆ ಕಾಫಿ ಸಂಸ್ಥೆಯ ಖರೀದಿ ದರದ ಪ್ರಕಾರ ಅರೇಬಿಕಾ ಪಾರ್ಚ್‌ಮೆಂಟ್ ದರ ಚೀಲಕ್ಕೆ 18 ಸಾವಿರ ಮತ್ತು ರೊಬಸ್ಟಾ ಪಾರ್ಚ್ ಮೆಂಟ್ ದರ ಚೀಲಕ್ಕೆ 19,200 ರೂಪಾಯಿ ಇದ್ದು ಇದ್ದು ಅರೆಬಿಕಾ ಚೆರಿ ಕಿಲೋಗೆ 355 ರಂತೆ ಮತ್ತು ರೊಬಸ್ಟಾ ಚೆರಿ ದರ ಕಿಲೋಗೆ…






