ವಿರಾಜಪೇಟೆ ಜು.10 NEWS DESK : ವಿರಾಜಪೇಟೆಯಲ್ಲಿ ಅಂತಾರಾಷ್ಟ್ರೀಯ ಚಿತ್ರ ಕಲಾವಿದೆ ಆಶಾ ಮಂದಪ್ಪ ನುಡಿನಮನ ಕಾರ್ಯಕ್ರಮ ನಡೆಯಿತು. ವಿರಾಜಪೇಟೆಯ ಶಾನುಭಾಗ್ ಕಾಂಪ್ಲೆಕ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಲಾಯಿತು. ಈ ಸಂದರ್ಭ ಮಾತನಾಡಿದ ಕಾರ್ಯಕ್ರಮದ ಆಯೋಜಕರು ಹಾಗೂ ವಕೀಲರಾದ ಎಸ್.ಆರ್. ಜಗದೀಶ್, ಮೂಲತಃ ವಿರಾಜಪೇಟೆಯವರಾದ ಆಶಾ ಮಂದಪ್ಪ ಅವರು ದಿ.ಬಿದ್ದಂಡ ಕರ್ನಲ್ ಚಂಗಪ್ಪ ಅವರ ಸೊಸೆಯಾಗಿದ್ದು, ಚಿತ್ರ ಕಲಾವಿದೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿಯನ್ನು ಪಡೆದಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. ಸಿ.ಎಂ.ಪೂಣಚ್ಚ ಅವರ ಪುತ್ರ ಸಿ.ಪಿ.ಬೆಳ್ಳಿಯಪ್ಪ ಮಾತನಾಡಿ, ಆಶಾ ಮಂದಪ್ಪ ಬಹುಮುಖ ಪ್ರತಿಭೆಯಾಗಿದ್ದು, ಅವರು ಯಾವುದೇ ಕಾರ್ಯಕ್ರಮಗಳಿಗೆ ತೆರಳಿದರೂ ಅವರ ಉಪಸ್ಥಿತಿ ಎದ್ದು ಕಾಣುತಿತ್ತು. ಜನರನ್ನು ತಮ್ಮ ಪ್ರತಿಭೆಯಿಂದಲೇ ಆಕರ್ಷಸುತ್ತಿದ್ದರು ಎಂದು ಹೇಳಿದರು. ವಿರಾಜಪೇಟೆಯ ಸಾಧಿಕ್ ಆರ್ಟ್ಸ್ ನ ಸಾಧಿಕ್ ಮತ್ತು ವೈದ್ಯರಾದ ಫಾತಿಮಾ ಕಾರ್ಯಪ್ಪ ಮಾತನಾಡಿ, ಆಶಾ ಮಂದಪ್ಪ ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡರು. ಈ ಸಂದರ್ಭದಲ್ಲಿ ದಿ. ಆಶಾ ಮಂದಪ್ಪ ಚಿತ್ರ ಕಲಾಕೃತಿಗಳ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ನಂದಕುಮಾರ್…
ಲೇಖಕ: admin
ಮಡಿಕೇರಿ ಜು.10 NEWS DESK : ವೀರ ಯೋಧರ ನಾಡು ಕೊಡಗು. ಎಷ್ಟೋ ಆಟಗಾರರನ್ನು ಭಾರತಕ್ಕೆ ಆಡಿಸಿದ ಕೀರ್ತಿ ಕೊಡಗಿಗಿದೆ. ಅದೇ ರೀತಿ ಸೈನ್ಯದಲ್ಲಿ ಕೊಡಗಿನ ವೀರ ಯೋಧರು ಹಾಕಿಯನ್ನು ಆಡಿದ್ದಾರೆ. ಅಂತಹವರಲ್ಲಿ ಪ್ರಥಮ ಗೋಲ್ ಕೀಪರ್ ಆಗಿ ಸರ್ವಿಸಸ್ ಆಡಿದ ಹಾಕಿ ಆಟಗಾರನೇ ರಘು ತಿಮ್ಮಯ್ಯ. ಚೌಕಿಮನೆ ಪುಟ್ಟಪ್ಪ ಹಾಗೂ ಮಾಚಮ್ಮ ದಂಪತಿಯರ ಪುತ್ರನಾಗಿ ರಘು ತಿಮ್ಮಯ್ಯನವರು 15 ಮಾರ್ಚ್ 1959ರಂದು ಜಂಬೂರಿನ ಮಾದಾಪುರದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಾದಾಪುರದಲ್ಲಿಯೇ ಮುಗಿಸಿ, ಪ್ರೌಢ ಶಿಕ್ಷಣವನ್ನು ಚೆನ್ನಮ್ಮ ಜೂನಿಯರ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. A.S.C ಗೆ ಸೇರ್ಪಡೆ : ಬಾಲ್ಯದಿಂದಲೇ ಫುಟ್ಬಾಲ್ ನಲ್ಲಿ ಆಸಕ್ತಿ ಇದ್ದಿದ್ದರಿಂದ ಗೋಲ್ ಕೀಪರ್ ಆಗಲು ದಾರಿಯು ಸುಗಮವಾಯಿತು. ಇವರು 1979ರಲ್ಲಿ ಆರ್ಮಿ ಸರ್ವಿಸಸ್ ಕೋರ್(A.S.C) ಗೆ ಪಾದರ್ಪಣೆ ಮಾಡಿದರು. ಪ್ರಥಮವಾಗಿ A.S.C ಪರ ಬೆಂಗಳೂರಿಗೆ, ತದನಂತರ ಜಲಂಧರ್ ಗೆ ಆಡಿದರು. ಪಶ್ಚಿಮ ಕಮಾಂಡ್ : A.S.C ಗೆ ಆಡುವಾಗ ಇವರ ಗೋಲ್ ಕೀಪಿಂಗ್ ನ ಚಾತುರ್ಯತೆಯಿಂದ ಪಶ್ಚಿಮ…
ನಾಪೋಕ್ಲು ಜು.10 NEWS DESK : ಕಲ್ಲುಮೊಟ್ಟೆ ನಿವಾಸಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಮೊಗೇರ ದಿ.ಮಾಯಿಲ ಅವರ ಪತ್ನಿ ಕಮಲ (85) ನಿಧಾನರಾದರು. ಮೃತರ ಅಂತ್ಯಕ್ರಿಯೆ ಕಲ್ಲುಮೊಟ್ಟೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಮೃತರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ನಾಪೋಕ್ಲು ಜು.10 NEWS DESK : ಹಳೆತಾಲೂಕಿನ ಅಂಕುರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಕೊಡಗು ಅಗ್ನಿಶಾಮಕ ದಳದ ವತಿಯಿಂದ ಅಗ್ನಿ ಅವಘಡ ತಡೆಯುವಿಕೆಯ ಬಗ್ಗೆ ಕಾರ್ಯಾಗಾರ ನಡೆಯಿತು. ಅಗ್ನಿ ಅವಘಡದ ತುರ್ತು ಪರಿಸ್ಥಿತಿಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಕ್ರಮಗಳ ಬಗ್ಗೆ ಅಗ್ನಿ ಶಾಮಕ ದಳದ ಸಿಬ್ಬಂಧಿಗಳು ಪ್ರತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಈ ಸಂದರ್ಭ ಅಗ್ನಿಶಾಮಕ ದಳದ ಅಧಿಕಾರಿ ಶೋಬಿತ್ ಕುಮಾರ್, ಸಿಬ್ಬಂದಿವರ್ಗ, ಶಾಲೆಯ ಅಧ್ಯಕ್ಷೆ ಕೆಟೋಳಿರ ರಾಜ ಚರ್ಮಣ್ಣ, ಕಾರ್ಯದರ್ಶಿ ರತ್ನಾ ಚರ್ಮಣ್ಣ, ಪ್ರಾಂಶುಪಾಲರಾದ ಮಮತ, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವರದಿ : ದುಗ್ಗಳ ಸದಾನಂದ
ಮಡಿಕೇರಿ ಜು.10 NEWS DESK : ಕುಶಾಲನಗರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ “ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು” ಆಚರಿಸಲಾಯಿತು. ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶ್ರೀರಾಮ ಅಂಗೀರಸ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ಕಾರ್ಯಕಾರಣಿ ಸದಸ್ಯರಾದ ರೋಹಿತ್ ಹಾಗೂ ಸುದೀಪ್, ಅರ್ಜುನ್, ರಾಘವೇಂದ್ರ ಹಾಜರಿದ್ದರು.
ಮಡಿಕೇರಿ ಜು.10 NEWS DESK : ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕಿನ ಭೂಕುಸಿತ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಎನ್.ಡಿ.ಆರ್.ಎಫ್ ತಂಡ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಆರ್.ಎಂ.ಅನನ್ಯ ವಾಸುದೇವ್ ಭೇಟಿ ನೀಡಿ, ವೀಕ್ಷಿಸಿದರು.
ಮಡಿಕೇರಿ ಜು.10 NEWS DESK : ದಕ್ಷಿಣ ಕನ್ನಡದ ಕಡಬ ಶಾಲೆಯ ವಿದ್ಯಾರ್ಥಿನಿ ಸಾನ್ವಿ ದೊಡ್ಡಮನೆ ಸದ್ದಿಲ್ಲದೆ ದೊಡ್ಡ ಯೋಗ ಸಾಧನೆ ಮಾಡಿದ್ದಾರೆ. ಸಾನ್ವಿ ದೊಡ್ಡಮನೆ : 7 ನೇ ತರಗತಿ ಕ್ನನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಡಬ ತಂದೆ : ನಿತ್ಯಾನಂದ ದೊಡ್ಡ ಮನೆ ತಾಯಿ : ಸೀತಾಲಕ್ಷ್ಮಿ ದೊಡ್ಡಮನೆ ::: ಯೋಗ ಸಾಧನೆ ::: 1) ಗೋಮುಖ ಆಸನದಲ್ಲಿ 01 ಗಂಟೆ01 ನಿಮಿಷ 21ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ವಿಶ್ವದಾಖಲೆ. 2)ನೊಬೆಲ್ ವಲ್ಡ್ ರೆಕಾರ್ಡ್ – 2022 ( 3 ಆಸನಗಳನ್ನು 120 ಸೆಕುಂಡ್ ಗಳ ಕಾಲಮಾಡಿ ) 3)ಅಬ್ದುಲ್ ಕಲಾಂ ಬ್ಲೈಂಡ್ ಫೋಲ್ಡ್ ವಲ್ಡ್ ರೆಕಾರ್ಡ್ – 2022. 4)ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ -2023. 5)ಯುನಿವರ್ಸಲ್ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ – 2022 6)ಯೋಗ ಬುಕ್ ಆಫ್ ರೆಕಾರ್ಡ್ – 2022(ಗೀಸಾ ವಲ್ಡ್ ರೆಕಾರ್ಡ್ ಆಯೋಜಿಸಿದ 1 ನಿಮಿಷ ದಲ್ಲಿ…
ನವದೆಹಲಿ ಜು.10 NEWS DESK : ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ನೇಮಕ ಮಾಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಭಾರತೀಯ ಕ್ರಿಕೆಟ್ ತಂಡದ ಹೊಸ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರನ್ನು ಸ್ವಾಗತಿಸಲು ನನಗೆ ಅಪಾರ ಸಂತೋಷವಾಗುತ್ತದೆ. ಆಧುನಿಕ- ದಿನದ ಕ್ರಿಕೆಟ್ ವೇಗವಾಗಿ ವಿಕಸನಗೊಂಡಿದೆ ಮತ್ತು ಗೌತಮ್ ಈ ಬದಲಾಗುತ್ತಿರುವ ಕ್ರಿಕೆಟ್ ನ್ನು ಹತ್ತಿರದಿಂದ ನೋಡಿದ್ದಾರೆ. ತಮ್ಮ ವೃತ್ತಿಜೀವನದುದ್ದಕ್ಕೂ ವಿವಿಧ ಪಾತ್ರಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ, ಭಾರತೀಯ ಕ್ರಿಕೆಟನ್ನು ಮುನ್ನಡೆಸಲು ಗೌತಮ್ ಆದರ್ಶ ವ್ಯಕ್ತಿ ಎಂದು ನನಗೆ ವಿಶ್ವಾಸವಿದೆ. ಅವರು ಈ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ ಬಿಸಿಸಿಐ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದಿದ್ದಾರೆ.
ಮಂಗಳೂರು ಜು.10 NEWS DESK : ದಕ್ಷಿಣ ಕನ್ನಡ ಪೊಲೀಸ್ ಅಧೀಕ್ಷಕ ಯತೀಶ್ ಎನ್, ಅವರು ಬಂಟ್ವಾಳ ನಗರ ಠಾಣೆ, ಪುಂಜಾಲಕಟ್ಟೆ ಠಾಣೆ ಹಾಗೂ ಬಂಟ್ವಾಳ ಉಪವಿಭಾಗಾಧಿಕಾರಿಗಳ ಕಛೇರಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಅಧಿಕಾರಿ/ಸಿಬ್ಬಂದಿಗಳಿಗೆ ಬ್ರೀಫಿಂಗ್ ನಡೆಸಿ, ಠಾಣಾ ದಾಖಲಾತಿ/ಕಡತಗಳ ಸೂಕ್ತ ನಿರ್ವಹಣೆ, ಠಾಣಾ ಪರಿಸರದ ಸ್ವಚ್ಚತೆ ಹಾಗೂ ಠಾಣಾ ಕರ್ತವ್ಯಗಳ ಬಗ್ಗೆ ಅಗತ್ಯ ಸೂಚನೆಗಳನ್ನು ನೀಡಿದರು.
ಮಡಿಕೇರಿ ಜು.10 NEWS DESK : ಸಕಲೇಶಪುರ ತಾಲೂಕಿನ ಹಣಸೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ನೋಟ್ ಪುಸ್ತಕ ಹಾಗೂ ಶೈಕ್ಷಣಿಕ ಸಾಮಾಗ್ರಿಗಳನ್ನು ವಿತರಿಸಲಾಯಿತು. ದಾನಿಗಳಾದ ಪ್ರೆಸಿಲ್ಲ ಕುಮಾರಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿ, ನಾನು ಇದೇ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯಾಗಿದ್ದು ಕಿನ್ಯಾ ಹೊರ ದೇಶದಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಮೈಸೂರಿನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಆದ್ದರಿಂದ ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಎಂದು ಕೀಳರಿಮೆ ಪಡೆದೆ ಹೆಚ್ಚು ಶಿಕ್ಷಣವನ್ನು ಪಡೆಯುವ ಮೂಲಕ ಉನ್ನತ ಹುದ್ದೆಗೆ ಏರಬೇಕೆಂದು ಕರೆ ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯರ ಅಂಬಾಮಣಿ ಮಾತನಾಡಿ, ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉನ್ನತ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ವತಿಯಿಂದ ಸಿಸ್ಟರ್ ಪ್ರೆಸಿಲ್ಲ ಕುಮಾರಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಸಹ ಶಿಕ್ಷಕರಾದ ದಿವ್ಯ ದಿನೇಶ್, ಎಸ್‌ಡಿಎಂಸಿ ಅಧ್ಯಕ್ಷರಾದ ಪೂರ್ಣಿಮ ಹಾಗೂ ಸಹ…






