ವಿರಾಜಪೇಟೆ ಮೇ 25 NEWS DESK : ವಿರಾಜಪೇಟೆ ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಸೆಂಟ್ ಆನ್ಸ್ ಪದವಿ ಕಾಲೇಜಿಗೆ ಈ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಆರಂಭವಾಗಿದೆ. ಬಿ.ಕಾಂ, ಬಿಬಿಎ, ಬಿ. ಎಸ್ಸಿ ಮತ್ತು ಬಿಸಿಎ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಿಶನ್ ಲರ್ನಿಂಗ್ ನೂತನ ಕೋರ್ಸುಗಳಿಗೆ )2024-25 ಸಾಲಿನ ಪ್ರವೇಶಾತಿ ಆರಂಭವಾಗಿದೆ. ನುರಿತ ಉಪನ್ಯಾಸಕ ವರ್ಗ, ಸುಸಜ್ಜಿತ ಕೊಠಡಿಗಳು, ಉತ್ತಮ ಗ್ರಂಥಾಲಯ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು, ವಿವಿಧ ಘಟಕಗಳಲ್ಲಿ ಭಾಗವಹಿಸುವಿಕೆಯ ಸೌಲಭ್ಯವು ಇರುತ್ತದೆ. ಮತ್ತು ಪದವಿ ಪರೀಕ್ಷೆಗಳ ಪಲಿತಾಂಶದಲ್ಲಿಯೂ ಉತ್ತಮ ಸಾಧನೆಯನ್ನು ಸಂಸ್ಥೆಯ ವಿದ್ಯಾರ್ಥಿಗಳು ಮಾಡಿರುತ್ತಾರೆ. ಪೋಷಕರು ಮತ್ತು ವಿದ್ಯಾರ್ಥಿಗಳು ಕಚೇರಿ ವೇಳೆಯಲ್ಲಿ ಆಗಮಿಸಿ ಪ್ರವೇಶಾತಿಯನ್ನು ಪಡೆಯುವಂತೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ರೆ. ಫಾ. ಐಸಾಕ್ ರತ್ನಾಕರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಲೇಖಕ: admin
ಮಡಿಕೇರಿ ಮೇ 25 NEWS DESK : ಕಂಡಕರೆಗಾಂಧಿ ಯುವಕ ಸಂಘ ಹಾಗೂ ಸರ್ವಧರ್ಮೀಯ ಬಡಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಆಚರಣಾ ಸಮಿತಿಯ ವತಿಯಿಂದ ನೀಡಲಾಗುತ್ತಿರುವ “ಮಾದರಿ ಜನಪ್ರತಿನಿಧಿ” ಪ್ರಶಸ್ತಿಗೆ ಸಮಾಜ ಸೇವಕ, ಕೆ.ನಿಡುಗಣೆ ಗ್ರಾ.ಪಂ ಸದಸ್ಯ “ಜಾನ್ಸನ್ ಪಿಂಟೋ” ಭಾಜನರಾಗಿದ್ದಾರೆ. ಪ್ರಶಸ್ತಿ ವಿತರಣಾ ಕಾರ್ಯಕ್ರಮವು ಜೂ.9 ರಂದು ಕಂಡಕರೆಯಲ್ಲಿ ನಡೆಯಲಿರುವ ಸರ್ವಧರ್ಮೀಯ ಬಡಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೀಡಲಾಗುವುದೆಂದು ಗಾಂಧಿ ಯುವಕ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕಂಡಕರೆ ತಿಳಿಸಿದ್ದಾರೆ.
ಬೆಂಗಳೂರು ಮೇ 25 NEWS DESK : ಬಂಗಾಳಕೊಲ್ಲಿಯ ಕೇಂದ್ರ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಇಂದು ಶನಿವಾರ ಬೆಳಗ್ಗೆ ವೇಳೆಗೆ ‘ರೆಮಲ್’ ಎಂಬ ಹೆಸರಿನ ಚಂಡಮಾರುತ ಆರಂಭವಾಗಿ ರಾತ್ರಿ ವೇಳೆಗೆ ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಮಡಿಕೇರಿ ಮೇ 25 NEWS DESK : ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ವೈ.ಎಸ್ ಹಾಗೂ ಎಸ್.ಎಸ್.ಎಫ್ ಸಂಘಟನೆಗಳ ಸಹಯೋಗದಲ್ಲಿ ಬಡಹೆಣ್ಣು ಮಗಳ ವಿವಾಹಕ್ಕೆ ಸಹಾಯ ಹಸ್ತಾಂತರ ಹಾಗೂ ಮಾಸಿಕ ಮಹಳರತುಲ್ ಬದ್ರಿಯ ಸಮಾರಂಭ ನಡೆಯಿತು. ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಕೂರ್ಗ್ ಜಂಇಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸೈಖುನಾ ಅಶ್ರಫ್ ಅಹ್ಸನಿ ಉಸ್ತಾದ್, ಇಸ್ಲಾಂ ಸರಳ ವಿವಾಹವನ್ನು ಪ್ರೋತ್ಸಾಹಿಸುತ್ತದೆ. ವರದಕ್ಷಿಣೆ ಎನ್ನುವುದು ಇಸ್ಲಾಂಮಿನ ಆಚಾರವಲ್ಲ. ವಧುದಕ್ಷಿಣೆ ಅಥವಾ ಮಹರ್ ನೀಡಿ ಮದುವೆಯಾಗುವುದಾಗಿದೆ ಇಸ್ಲಾಂಮಿನ ಪದ್ದತಿ. ಆದರೆ ಶ್ರೀಮಂತ ಹೆಣ್ಣುಮಕ್ಕಳು ಯತೇಚ್ಚ ಆಭರಣಗಳನ್ನು ಹೊಂದಿ ಮದುವೆಯಾಗುವಾಗ ಬಡ ಹೆಣ್ಣು ಮಕ್ಕಳಿಗೆ ಅಲ್ಪ ಪ್ರಮಾಣದ ಆಭರಣಗಳನ್ನಾದರು ನೀಡುವುದರೊಂದಿಗೆ ಅವರ ಕಣ್ಣೀರು ಒರೆಸುವ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು. ಎಸ್.ವೈ.ಎಸ್.ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ ಮಾತನಾಡಿ, ಮದುವೆ ಎನ್ನುವುದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ರವರ ಚರ್ಯೆಯಾಗಿದೆ. ಪ್ರವಾದಿ ವರ್ಯರ ಕಾಲದಲ್ಲಿ ಸರಳವಾಗಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ವಿವಾಹ ಸಮಾರಂಭವನ್ನು ಆಡಂಬರದಿಂದ ಆಚರಿಸಲಾಗುತ್ತಿದ್ದು, ಬಹಳ ದುಂದುವೆಚ್ಚ ಮಾಡಲಾಗುತ್ತಿದೆ.…
ಮಡಿಕೇರಿ ಮೇ 25 NEWS DESK : ಹುದೂರು ಶ್ರೀ ಭಗವತಿ ಹಾಗೂ ಶ್ರೀ ಭದ್ರಕಾಳಿ ದೇವರ ವಾರ್ಷಿಕ ಬೋಡ್ ನಮ್ಮೆಯು ಶ್ರದ್ಧಾಭಕ್ತಿಯಿಂದ ನಡೆಯಿತು. ಅಡ್ಡಂಡ ಬಲ್ಯಮನೆ ಸಮೀಪದ ಅಂಬಲದಿಂದ ಕುದುರೆ ಹಾಗೂ ಮೊಗ ಹೊರಟು ಸಿಐಟಿ ಕಾಲೇಜು ಸಮೀಪವಿರುವ ಶ್ರೀ ಭಗವತಿ ದೇವಸ್ಥಾನದಲ್ಲಿ ಹರಕೆ ಕಾಣಿಕೆಗಳನ್ನು ಸಲ್ಲಿಸಲಾಯಿತು. ನಾಡ್ ತಕ್ಕರಾದ ಪ್ರಕಾಶ್ ಕುಶಾಲಪ್ಪ ಹಾಗೂ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಡ್ಡಂಡ ಡಾಲಿ ಜನಾರ್ಧನ ಮುಂದಾಳತ್ವದಲ್ಲಿ ನಡೆಯಿತು. ಎರಡು ದಿನಗಳ ಕಾಲ ನಡೆದ ಬೋಡ್‍ನಮ್ಮೆಯಲ್ಲಿ ಈ ಹಿಂದಿನ ಸಂಪ್ರದಾಯದಂತೆ ಈ ಬಾರಿ ಹಳ್ಳಿಗಟ್ಟು, ಹುದೂರು ಗ್ರಾಮಸ್ಥರು ಪಾಲ್ಗೊಂಡಿರುವುದು ವಿಶೇಷ. ದೇವಸ್ಥಾನ ಅಭಿವೃದ್ಧಿ ಸಮೀತಿ ಸದಸ್ಯರು, ಊರು ತಕ್ಕರು ಸೇರಿದಂತೆ ವಿವಿಧ ಕುಟುಂಬಸ್ಥರು ಪಾಲ್ಗೊಂಡಿದ್ದರು.
ಮಡಿಕೇರಿ ಮೇ 25 NEWS DESK : ಹುಲಿ ದಾಳಿಗೆ ಎರಡು ನಾಯಿಗಳು ಬಲಿಯಾಗಿರುವ ಘಟನೆ ವಿರಾಜಪೇಟೆಯ ಕುಟ್ಟಂದಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೆ.ಕೆ.ಗ್ರೂಪ್ ಎಸ್ಟೇಟ್ ನ ಹಸ್ಕಿ ಮತ್ತು ಫಿಟ್ ಬುಲ್ ವಿದೇಶಿ ತಳಿಯ ನಾಯಿಗಳು ಬಲಿಯಾಗಿದೆ. ತೋಟದ ಒಳಗೆ ಹುಲಿ ಹೆಜ್ಜೆಗಳು ಪ್ರತ್ಯಕ್ಷಗೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಮಡಿಕೇರಿ ಮೇ 24 NEWS DESK : ಖಾಸಗಿ ಹಿಡುವಳಿ ಜಾಗದಲ್ಲಿ ಮೇ 1 ರಿಂದ ಸೆ.30 ರವರೆಗೆ ಮರಕಡಿತಲೆಗೆ ಅನುಮತಿ ನೀಡುವುದನ್ನು ತಡೆ ಹಿಡಿದಿರುವ ಅರಣ್ಯ ಇಲಾಖೆ ಕ್ರಮ ರೈತ ವಿರೋಧಿಯಾಗಿದೆ ಎಂದು ಕೊಡಗು ಜಿಲ್ಲಾ ಭೂಮಾಲೀಕರು ಮತ್ತು ಮರ ವ್ಯಾಪಾರಿಗಳ ಸಂಘ ಆರೋಪಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅರವಿಂದ್ ಕುಟ್ಟಪ್ಪ ಹಾಗೂ ಪದಾಧಿಕಾರಿಗಳು ಅರಣ್ಯ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿವರ್ಷ ಮಳೆಗಾಲದ ಸಂದರ್ಭ ಜೂ.1 ರಿಂದ ಸೆ.30 ರವರೆಗೆ ಮರಕಡಿತಲೆಗೆ ಅನುಮತಿ ನಿರಾಕರಿಸಲಾಗುತ್ತಿತ್ತು. ಆದರೆ ಪ್ರಸ್ತುತ ವರ್ಷ ಒಂದು ತಿಂಗಳು ಮೊದಲೇ ಅನುಮತಿಯನ್ನು ಸ್ಥಗಿತಗೊಳಿಸಲಾಗಿದೆ. ಕಾಫಿ ತೋಟದಲ್ಲಿ ಅತೀ ಹೆಚ್ಚು ನೆರಳು ನೀಡುವ ಮರಗಳನ್ನು ಕಾಫಿ ಹಣ್ಣು ಬಲಿತ ಸಮಯವನ್ನು ಹೊರತು ಪಡಿಸಿ ಅರಣ್ಯ ಇಲಾಖೆಯ ಅನುಮತಿ ಪಡೆದು ಕಡಿಯಲು ಕೇವಲ 2- 3 ತಿಂಗಳು ಮಾತ್ರ ಅವಕಾಶವಿರುತ್ತದೆ. ಇದೀಗ ಒಂದು ತಿಂಗಳು ಮೊದಲೇ ಅನುಮತಿ ಸ್ಥಗಿತಗೊಳಿಸಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ವಿದ್ಯುತ್…
ಮಡಿಕೇರಿ ಮೇ 24 NEWS DESK : ಬಿಜೆಪಿ ತನ್ನ ಸಿದ್ಧಾಂತವನ್ನು ಪಾಲಿಸುತ್ತಿಲ್ಲ, ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಿಲ್ಲ. ಪಕ್ಷಕ್ಕಾಗಿ ದುಡಿದ ಹಿರಿಯರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದರೆ ನಾನು ಸ್ಪರ್ಧಿಸುತ್ತಿರಲಿಲ್ಲ. ಗೆಲ್ಲುವುದಕ್ಕಾಗಿ ನಾನು ಸ್ಪರ್ಧೆಗಿಳಿದಿದ್ದೇನೆಯೇ ಹೊರತು ಯಾರನ್ನೂ ಸೋಲಿಸುವುದಕ್ಕಾಗಿ ಅಲ್ಲವೆಂದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಹಾಗೂ ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ ಸ್ಪಷ್ಟಪಡಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ನನಗೆ ಟಿಕೆಟ್ ಕೈತಪ್ಪಿದೆ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅವಕಾಶ ದೊರೆಯಲಿಲ್ಲ. ಈ ಕಾರಣದಿಂದ ಕಾರ್ಯಕರ್ತರ ಅಭಿಪ್ರಾಯ ಮತ್ತು ಒತ್ತಡದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿಯಾಗಿ ನೈರುತ್ಯ ಪದವೀದರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ರಾಜಕಾರಣಿಯಾದ ನನಗೆ ಜನಸೇವೆಗೆ ಈ ಸ್ಪರ್ಧೆ ಅನಿವಾರ್ಯವಾಗಿತ್ತು ಎಂದು ತಿಳಿಸಿದರು. ಮೂರು ಬಾರಿ ಟಿಕೆಟ್ ತಪ್ಪಿದೆ, ಯಾರೋ ನನಗೆ ಟಿಕೆಟ್ ತಪ್ಪಿಸಿದ್ದಾರೆ, ಯಾರು ತಪ್ಪಿಸಿದ್ದಾರೆ ಮತ್ತು ಯಾಕಾಗಿ ತಪ್ಪಿಸಿದ್ದಾರೆ ಎನ್ನುವ ಬಗ್ಗೆ ನನಗೆ…
ಸೋಮವಾರಪೇಟೆ ಮೇ 24 NEWS DESK : ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಗ್ರಾಮದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಧರ್ಮದೇವತೆ ತಂಡದ ಸದಸ್ಯರಾದ ವೇದಾವತಿಯವರ ಪತಿ ಪರಮೇಶ್ ಅವರು ಮರದಿಂದ ಬಿದ್ದು ಸೊಂಟದ ಮೂಳೆ ಮುರಿತಕ್ಕೊಳಗಾಗಿದ್ದಾರೆ. ಇವರ ಚಿಕಿತ್ಸೆಗೆ 3 ಲಕ್ಷದವರೆಗೆ ವೆಚ್ಚವಾದ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 30 ಸಾವಿರ ರೂ ನೆರವನ್ನು ನೀಡಲಾಯಿತು. ಚೆಕ್ಕನ್ನು ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ರೋಹಿತ್ ವಿತರಿಸಿದರು. ಈ ಸಂದರ್ಭ ಕುಟುಂಬಸ್ತರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಮಡಿಕೇರಿ ಮೇ 24 NEWS DESK : ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನಲೆಯಲ್ಲಿ ಎನ್ ಡಿ ಎ ಮೈತ್ರಿ ಕೂಟದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳಾದ ಡಾ ಧನಂಜಯ ಸರ್ಜಿ ಮತ್ತು ಎಸ್.ಲ್ ಬೋಜೆಗೌಡ ಅವರು ಉಡುಪಿಯ ತೆಂಕನಿಡಿಯೂರ್ ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ಉಪನ್ಯಾಸವರ್ಗ ಮತ್ತು ಸಿಬ್ಬಂಧಿವರ್ಗದವರಲ್ಲಿ ಮತಯಾಚಿಸಲಾಯಿತು. ಈ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಸುರೇಶ ರೈ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ , ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಸೇರಿದಂತೆ , ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಸೇರಿದಂತೆ ಕಾಲೇಜಿನ ಆಡಳಿತ ವರ್ಗ ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.






