ಮಡಿಕೇರಿ ಜು.2 NEWS DESK : ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ನಡೆಯಿತು. ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯದ ನಿವೃತ್ತ ಡೆಪ್ಯೂಟಿ ಮಾನೈಜಿಂಗ್ ಡೈರೆಕ್ಟರ್ ಕಂಜಿತಂಡ ಸ್ವಾತಿ ಸುಬ್ರಮಣಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿ ನಾಯಕರ ಜವಬ್ದಾರಿಯ ಬಗ್ಗೆ ತಿಳಿಸಿ, ಉತ್ತಮ ನಾಗರಿಕರಾಗಬೇಕು ಎಂದರು. ಬದುಕಿನಲ್ಲಿ ಮೇಲೆ ಬರುವ ಪ್ರಯತ್ನ ಪಡಬೇಕು, ತಂದೆ – ತಾಯಿಗಳ ಬಗ್ಗೆ ಗೌರವ ಇರಬೇಕು ಎಂದ ಅವರು, ಶಾಲಾ ದಿನಗಳ ಮೆಲುಕು ಹಾಕಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಕೊಡವ ಸಮಾಜ ಹಾಗೂ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ಶಾಲಾ ನಾಯಕರುಗಳು ಜವಾಬ್ದಾರಿ ವಹಿಸಿ ಕೆಲಸ ಮಾಡಿ ಪ್ರತಿಭೆಯನ್ನು ಪ್ರದರ್ಶಿಸಬೇಕು. ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಆ ಮೂಲಕ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತರವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರು,…
ಲೇಖಕ: admin
ವಿರಾಜಪೇಟೆ ಜು.2 NEWS DESK : ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಕ್ಷಿಣ ಕೊರಿಯಾದ ಸಿಯೋಲ್‍ನಲ್ಲಿರುವ ಪ್ರತಿಷ್ಠಿತ ಕ್ಯುಂಗ್ ಹೀ ವಿಶ್ವವಿದ್ಯಾಲಯದ ಸಂಶೋಧನಾ ಘಟಕ ಹಾಗೂ ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಮುಖ್ಯಸ್ಥ ಪ್ರೊ.ಯೋಂಗ್-ಡೇ ಕ್ವಾನ್ ಭೇಟಿ ನೀಡಿದರು. ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಬೆಳ್ಳಿ ಮಹೋತ್ಸವದ ಚಟುವಟಿಕೆಗಳ ಅಂಗವಾಗಿ ವಿದ್ಯಾಲಯದ ಡಾ.ಸುನಿಲ್ ಮುದ್ದಯ್ಯ ಅವರ ಆಹ್ವಾನದ ಮೇರೆಗೆ ಭೇಟಿ ನೀಡಿದ ಅವರು, ಕೊಡಗು ದಂತ ವೈಧ್ಯಕೀಯ ಮಹಾವಿದ್ಯಾಲಯ ಹಾಗೂ ವಿಶ್ವವಿದ್ಯಾನಿಲಯದ ಪರಸ್ಪರ ಸಹಯೋಗದ ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಂದರ್ಭ ಇಂಪ್ಲಾಂಟ್ ಡೆಂಟಿಸ್ಟ್ರಿ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿಯಲ್ಲಿ ಪರಿಣಿತರು, ಇಂಪ್ಲಾಂಟ್ ಬೆಂಬಲಿತ ದಂತ ಪುನರ್ವಸತಿ ಸಾಧಿಸಲು ಸಂಬಂಧಿಸಿದ ವಿಷಯಗಳ ಕುರಿತು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರೊ.ಕ್ವಾನ್, ಇದರಿಂದ ಕೊಡಗಿನ ಸಾಮಾನ್ಯ ಜನತೆಗೆ ವಿಶ್ವದರ್ಜೆಯ ಇಂಪ್ಲಾಂಟ್ ಕೃತಕ ದಂತ ಚಿಕಿತ್ಸೆಯನ್ನು ಈಗ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನೀಡಲಾಗುತ್ತದೆ. ಇಂಪ್ಲಾಂಟ್ ಕೃತಕ ದಂತ ಚಿಕಿತ್ಸೆಯಲ್ಲಿ ವಿಶ್ವವಿಖ್ಯಾತಿಗಳಿಸಿದೆ ಎಂದರಲ್ಲದೆ ಹಲವು ಜಟಿಲವಾದ…
ಮಡಿಕೇರಿ ಜು.2 NEWS DESK : ರೋಟರಿ ಮಡಿಕೇರಿಯ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುದಯ್ ನಾಣಯ್ಯ ಹಾಗೂ ಕಾರ್ಯದರ್ಶಿಯಾಗಿ ಪ್ರಿನ್ಸ್ ಪೊನ್ನಣ್ಣ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜು.5 ರಂದು ಸಂಜೆ 7 ಗಂಟೆಗೆ ಮಡಿಕೇರಿ ರೋಟರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ರೋಟರಿ ಪ್ರಕಟಣೆ ತಿಳಿಸಿದೆ.
ಮಡಿಕೇರಿ ಜು.2 NEWS DESK : ಪೋಷಣ್ ಅಭಿಯಾನ ಯೋಜನೆಯಡಿ ಭಾರತ ಸರ್ಕಾರದ ಮಾರ್ಗಸೂಚಿಯಂತೆ ಸೋಮವಾರಪೇಟೆ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ನಡೆಯುವ ದಿನನಿತ್ಯ ಚಟುವಟಿಗಳನ್ನು ಆನ್ಲೈನ್ ನಲ್ಲಿ ಅಳವಡಿಸಲು ಅನುಕೂಲವಾಗುವಂತೆ ಸ್ಮಾರ್ಟ್ ಫೋನ್ ಮತ್ತು ಪರಿಕರಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸೋಮವಾರಪೇಟೆಯ ಶಾಸಕರ ಕಚೇರಿಯಲ್ಲಿ ಶಾಸಕ ಡಾ.ಮಂತರ್ ಗೌಡ ವಿತರಿಸಿದರು.
ವಿರಾಜಪೇಟೆ ಜು.2 NEWS DESK : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029 ರ ಅವಧಿಗೆ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಸಂಘದ ಅಧ್ಯಕ್ಷ ಬಿ.ಎಸ್.ಗುರುರಾಜ್ , ಬೈಲಾದ ನಿಯಮದಂತೆ ಚುನಾವಣೆಯನ್ನು ನಡೆಸಲು ಎಲ್ಲಾ ಇಲಾಖೆಗಳಿಂದ ರಾಜ್ಯ ಸರ್ಕಾರಿ ನೌಕರರ ಕರಡು ಮತದಾರರ ಪಟ್ಟಿಯನ್ನು ಸಿದ್ದಪಡಿಸಿದ್ದು, ಸದರಿ ಪಟ್ಟಿಯನ್ನು ಸಂಘದ ವಿರಾಜಪೇಟೆ ಶಾಖೆಯಲ್ಲಿ ಸೂಚನ ಫಲಕದಲ್ಲಿ ಪ್ರಕಟಿಸಲಾಗಿರುತ್ತದೆ. ಜು.2 ರಿಂದ ಜು.10ರ ವರೆಗೆ ಸದರಿ ಪಟ್ಟಿಗೆ ಸಂಭಂದಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ಮುಕ್ತವಾದ ಅವಕಾಶವಿರುತ್ತದೆ ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ ಸಂಘದ ಕಾರ್ಯದರ್ಶಿಗಳಾದ ದೇವರಾಜ್ ಬಿ.ಟಿ. (ಮೊ. ಸ.9739570806)ನ್ನು ಸಂಪರ್ಕಿಸಲು ಕೋರಿದೆ.
ಮಡಿಕೇರಿ ಜು.2 NEWS DESK : ಕಾಂಗ್ರೆಸ್ ನ ತೆನ್ನಿರ ಮೈನಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜು.3ರಂದು ಜಿಲ್ಲಾವ್ಯಾಪಿ ಪೊಲೀಸ್ ಠಾಣೆಗಳೆದುರು ನಡೆಸಲುದ್ದೇಶಿಸಿದ್ದ ಪ್ರತಿಭಟನೆಯನ್ನು ರದ್ದುಗೊಳಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಬಿ.ಕೆ.ಅರುಣ್ ಕುಮಾರ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಅವಹೇಳನ ಮಾಡಿದ ಆರೋಪದಡಿ ತೆನ್ನಿರ ಮೈನಾ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿರುವುದರಿಂದ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಮಡಿಕೇರಿ ಜು.3 NEWS DESK : ಗಾಳಿ ಮಳೆಗೆ ನಿಟ್ಟೂರು ಗ್ರಾ.ಪಂ ವ್ಯಾಪ್ತಿಯ ಕಾರ್ಮಾಡು ಕುದನೆಕೊಡಿರ ಮಣಿ ಬೆಳ್ಳಿಯಪ್ಪ ಎಂಬುವವರ ಮನೆಯ ಗೋಡೆ ಕುಸಿದು ಬಿದ್ದಿದ್ದು, ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಸ್ಥಳಕ್ಕೆ ಬಾಳೆಲೆ ಕಂದಾಯ ಪರಿವೀಕ್ಷಕ ಶರೀಫ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಷ್ಟವನ್ನು ಅಂದಾಜು ಮಾಡಿ ಪರಿಹಾರಕ್ಕೆ ಶಿಪಾರಾಸು ಮಾಡುವುದಾಗಿ ತಿಳಿಸಿದ್ದಾರೆ. ಗ್ರಾ.ಪಂ ಉಪಾಧ್ಯಕ್ಷ ಚಕ್ಕೇರ ಅಯ್ಯಪ್ಪ, ಸದಸ್ಯರಾದ ಪಡಿಞರಂಡ ಕವಿತಾ ಪ್ರಭು, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಸುರೇಶ್, ಗ್ರಾಮಲೆಕ್ಕಿಗರಾದ ಕಾಸವ್ವ, ಕಂದಾಯ ಇಲಾಖಾ ಸಿಬ್ಬಂದಿ ಗಣೇಶ್, ಪ್ರಮುಖರಾದ ಗಾಣಂಗಡ ಸುದೀಪ್ ಹಾಜರಿದ್ದರು.
ನಾಪೋಕ್ಲು ಜು.2 NEWS DESK : ಹಲವಾರು ಸಮಾಜಮುಖಿ ಕೆಲಸ ಮಾಡುತ್ತಿರುವ ಪುನಶ್ಚೇತನ ಸಂಸ್ಥೆಯ ಕಾರ್ಯ ಸಮಾಜಕ್ಕೆ ಮಾದರಿ ಎಂದು ಗ್ರಾ.ಪಂ ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್ ಬೇಬ ಹೇಳಿದರು. ಪುನಶ್ಚೇತನ ಸಂಸ್ಥೆಯ ಕಚೇರಿಯಲ್ಲಿ ಸಂಸ್ಥೆ ವತಿಯಿಂದ ಹೆಣ್ಣು ಮಕ್ಕಳಿಗೆ ಆಯೋಜಿಸಲಾಗಿದ್ದ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ, ಮಹಿಳೆಯರ ಅಭಿವೃದ್ಧಿಗಾಗಿ ಸಂಸ್ಥೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಪದಾಧಿಕಾರಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಗ್ರಾ.ಪಂ ಸದಸ್ಯ ಬಿ.ಎಂ.ಪ್ರತೀಪ ಮಾತನಾಡಿ, ವಿಶೇಷ ಮಕ್ಕಳನ್ನ ಮುಖ್ಯವಾಹಿನಿಗೆ ತರುವುದರ ಜೊತೆಗೆ ಬಡಹೆಣ್ಣು ಮಕ್ಕಳಿಗೆ ಸ್ವಾವಲಂಬನೆ ಜೀವನ ನಡೆಸಲು ಟೈಲರಿಂಗ್ ತರಬೇತಿ ಕೊಡುವುತ್ತಿರುವುದು ಒಳ್ಳೆಯ ಉತ್ತಮ ವಿಚಾರ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಬೊಪ್ಪಂಡ ಸೂರಜ್ ಗಣಪತಿ ಮತ್ತು ಬಾಳೆಯಡ ದಿವ್ಯ ಮಂದಪ್ಪ, ತರಬೇತಿ ಶಿಕ್ಷಕಿ ಅಶ್ವಿನಿ, ಸಂಸ್ಥೆಯ ಶಿಕ್ಷಕಿ ಅಸ್ಮ , ವಿಶೇಷ ಮಕ್ಕಳು ಹಾಜರಿದ್ದರು. ವರದಿ : ದುಗ್ಗಳ ಸದಾನಂದ
ಮಡಿಕೇರಿ ಜು.2 NEWS DESK : ಪ್ರವಾಸೋದ್ಯಮವನ್ನು ಅಭಿವೃದ್ಧಿ ಹಾಗೂ ಪ್ರಚಾರ ಪಡಿಸುವ ಉದ್ದೇಶದಿಂದ ಜಿಲ್ಲೆಯ ಪ್ರವಾಸಿ ತಾಣಗಳ ಐತಿಹಾಸಿಕ, ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಕಲಾವೈವಿಧ್ಯತೆಗಳನ್ನು ಒಳಗೊಂಡ ಸೃಜನಶೀಲತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ದೇಶ/ ವಿದೇಶಿ ಪ್ರವಾಸಿಗರಿಗೆ ನೀಡಲು ಅಂದರೆ ‘ಒಂದು ರಾಜ್ಯ-ಹಲವು ವಿಸ್ಮಯಗಳು’ ಎಂಬುದನ್ನು ಪರಿಚಯಿಸವುದರ ಮೂಲಕ ನಾಡಿನ ಸಮಗ್ರತೆಯ ಬಗ್ಗೆ ವಿವಿಧ ಆಯಾಮಗಳ ಮೂಲಕ ಪ್ರವಾಸಿಗರನ್ನು ನಾಡಿಗೆ ಸೆಳೆಯಲು ಸ್ಥಳೀಯ ಪ್ರವಾಸಿ ಸಂಪನ್ಮೂಲಗಳ ಬಗ್ಗೆ ಜ್ಞಾನ ಮತ್ತು ಅನುಭವವಿರುವ ಪ್ರವಾಸಿ ಮಾರ್ಗದರ್ಶಿಗಳು ಅವಶ್ಯವಾಗಿ ಬೇಕಾಗಿರುವುದರಿಂದ ಜಿಲ್ಲಾ ಪ್ರವಾಸಿ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 21 ರಿಂದ 45 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳಿಂದ ಹಾಗೂ ರಾಜ್ಯ ಪ್ರವಾಸಿ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 21 ರಿಂದ 45 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯೊಂದಿಗೆ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿಯ ಪ್ರತಿ, ಪದವಿ ಪೂರ್ವ ಶಿಕ್ಷಣದ ಅಂಕಪಟ್ಟಿಯ ಪ್ರತಿ, ಪದವಿ ಅಂಕಪಟ್ಟಿಯ ಪ್ರತಿ, ಜಾತಿ ಪ್ರಮಾಣ…
ಮಡಿಕೇರಿ ಜು.2 NEWS DESK : ಸೋಮವಾರಪೇಟೆ ರೇoಜರ್ಸ್ ಬ್ಲಾಕ್ ನಿವಾಸಿ ಸ್ಟೇಟ್ ಬ್ಯಾಂಕ್ ನಿವೃತ್ತ ನೌಕರ ಹೆಚ್.ಶಿವಣ್ಣ (86) ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತ್ನಿ ಹಾಗೂ ಹಿರಿಯ ಪತ್ರಕರ್ತ ಎಸ್.ಮಹೇಶ್ ಸೇರಿದಂತೆ ಮೂವರು ಪುತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಜು.3 ರಂದು 10ಗಂಟೆಗೆ ಕರ್ಕಳ್ಳಿ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ.






