ಮಡಿಕೇರಿ ಜು.1 NEWS DESK : ಪ್ರಸ್ತುತ ದಿನಮಾನಗಳಲ್ಲಿ ಸಮಾಜಕ್ಕೆ ಹಿತವಿಲ್ಲದ ವಿಚಾರಗಳ ಸುತ್ತಲೆ ಮಾಧ್ಯಮಗಳು ಸುತ್ತುತ್ತಿದ್ದು, ಇವುಗಳನ್ನು ಮೀರಿ ಜನ ಹಿತದ ವಿಚಾರಗಳು ಆದ್ಯತೆಯಾಗಿರಲೆಂದು ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಾಹಿತಿಗಳಾದ ಡಾ. ನರೇಂದ್ರ ರೈ ದೇರ್ಲ ಅಭಿಪ್ರಾಯಿಸಿದರು. ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಆಯೋಜಿತ ‘ಪತ್ರಿಕಾ ದಿನಾಚರಣೆ’ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇತ್ತೀಚಿನ ಕೆಲ ಸಮಯಗಳಿಂದ ದೃಶ್ಯ ವಾಹಿನಿಗಳು ಒಂದು ಸಾವಿಗೆ ಸಂಬಂಧಿಸಿದ ಸಣ್ಣ ಸಣ್ಣ ವಿಚಾರಗಳಿಗೆ ಗಂಟೆಗಟ್ಟಲೆ ಸಮಯವನ್ನು ವಿನಿಯೋಗಿಸುತ್ತಿವೆ. ಇವುಗಳನ್ನು ಮೀರಿ ನಮ್ಮ ಸುತ್ತಮುತ್ತಲ ಜನ ಸಾಮಾನ್ಯರ ದುಃಖ ದುಮ್ಮಾನಗಳಿಗೆ ಸ್ಪಂದಿಸುವ, ನಮ್ಮಲ್ಲಿನ ಕೃಷಿ ಚಟುವಟಿಕೆ, ಹಸಿವಿನ ವಿಚಾರಗಳಿಗೆ ನಾವೇಕೆ ಆದ್ಯತೆಯನ್ನು ನೀಡುತ್ತಿಲ್ಲವೆಂದು ಅವರು ಪ್ರಶ್ನಿಸಿದರು. ಪತ್ರಿಕಾ ಕ್ಷೇತ ‘ದೀಪ’ದ ಕೆಲಸ ಮಾಡಲಿ- ಸಮಾಜ ಸರಿಯಾದ ಪಥದಲ್ಲಿ ಸಾಗುವುದಕ್ಕೆ ಪೂರಕವಾಗಿ ಪತ್ರಿಕಾ ಕ್ಷೇತ್ರವು ದಾರಿ…
ಲೇಖಕ: admin
ಮಡಿಕೇರಿ ಜು.1 NEWS DESK : ಚಾಮರಾಜನಗರದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಕೊಡಗು ಟ್ರೆಡಿಷನಲ್ ಶೊಟೊಕಾನ್ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು 3 ಚಿನ್ನ, 1 ಬೆಳ್ಳಿ ಹಾಗೂ 3 ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಸಂಸ್ಥೆಯ ಶರನ್ನಿ ಎ.ಶೆಟ್ಟಿ ಚಿನ್ನ ಹಾಗೂ ಬೆಳ್ಳಿ ಪದಕ, ಸಮನ್ವಿ, ಲಿವಿನ್ ಚಿನ್ನದ ಪದಕ ಹಾಗೂ ಚಿಂತನ್, ಲಿವಿನ್, ಜಸ್ವಿನ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಸಂಸ್ಥೆಯ ತರಬೇತುದಾರ ಎನ್.ಸಿ.ಸುದರ್ಶನ್ ತರಬೇತಿ ನೀಡಿದ್ದಾರೆ.
ಮಡಿಕೇರಿ ಜು.1 NEWS DESK : ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಶಿನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿಗಳ ಒಕ್ಕೂಟ “ಅವಿನ್ಯಂ” ವತಿಯಿಂದ ವಿದ್ಯಾರ್ಥಿಗಳಿಗೆ ಒಂದು ದಿನದ “ಕೆರಿಯರ್ ಕ್ರಾಫ್ಟ್” ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ನಡೆಯಿತು. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಶುಪಾಲರಾದ ಡಾ. ಎಂ.ಬಸವರಾಜ್, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನಗಳಲ್ಲಿ ಭಾಗವಹಿಸುವಾಗ ಆತ್ಮವಿಶ್ವಾಸವು ಹೆಚ್ಚುತ್ತದೆ ಎಂದರು. ಈ ಕಾರ್ಯಾಗಾರವನ್ನು ವಿದ್ಯಾರ್ಥಿಗಳು ತಮ್ಮ ಕೌಶಲ್ಯಾಭಿವೃದ್ಧಿಗಾಗಿ ಬಳಸುವಂತೆ ಸಲಹೆ ನೀಡಿದರು. ಮೈಸೂರಿನ ಜೆ.ಕೆ.ಟಯರ್ಸ್ ನ ಮಾನವ ಸಂಪನ್ಮೂಲ ಅಧಿಕಾರಿ ಕಲ್ಪ ಪೂಣಚ್ಚ ವಿದ್ಯಾರ್ಥಿಗಳಿಗೆ ಅಣುಕು ಸಂದರ್ಶನಗಳನ್ನು ಮಾಡುವುದರ ಮೂಲಕ ಹೇಗೆ ಸಂದರ್ಶನಗಳಲ್ಲಿ ಭಾಗವಹಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಎಐ ಎಂಡ್ ಎಂಎಲ್ ವಿಭಾಗ ಮುಖ್ಯಸ್ಥರಾದ ಡಾ. ಬಿ.ಬಿ.ರಾಮಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ಕಾರ್ಯಾಗಾರವನ್ನು ಸಂಪೂರ್ಣವಾಗಿ ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಬಳಸಿಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗೀಯ ಮುಖ್ಯಸ್ಥರುಗಳು, ಪ್ರಾದ್ಯಾಪಕ ವೃಂದದವರು ಹಾಜರಿದ್ದರು. ವಿಭಾಗದ ಸಹಾಯಕ ಪ್ರಾಧ್ಯಾಪಕ…
ಮಡಿಕೇರಿ ಜು.1 NEWS DESK : ಮಹಾಮೈತ್ರಿ ಬುದ್ಧ ವಿಹಾರ ಸ್ಥಾಪಿಸಲು ಮಾನವ ಬಂಧುತ್ವ ವೇದಿಕೆ, ದಲಿತ ಸಂಘಟನೆಗಳು ಹಾಗೂ ಗೌತಮ ಬುದ್ಧನ ಅನುಯಾಯಿಗಳು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಹೋಬಳಿಯ ಮಾದ್ರೆ ದಂಡಳ್ಳಿ ಗ್ರಾಮದಲ್ಲಿ ಜಾಗ ಗುರುತಿಸಿದ್ದಾರೆ. ಸಂಘಟನೆಗಳ ಪ್ರಮುಖರು ಹಾಗೂ ಸದಸ್ಯರು ಉದ್ದೇಶಿತ ಜಾಗದಲ್ಲಿ ಶ್ರಮದಾನ ನಡೆಸಿ ಸ್ವಚ್ಛತಾ ಕಾರ್ಯ ಕೈಗೊಂಡರು. ನಂತರ “ಮಹಾಮೈತ್ರಿ ಬುದ್ಧ ವಿಹಾರ” ಫಲಕವನ್ನು ಅಳವಡಿಸಿದರು. ಈ ಸಂದರ್ಭ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ಧನ್, ಬಹುನಿರೀಕ್ಷಿತ ಯೋಜನೆ ಹಲವು ವರ್ಷಗಳ ನಂತರ ಕೈಗೂಡುತ್ತಿದ್ದು, ಬುದ್ಧನ ಅನುಯಾಯಿಗಳಿಗೆ ಹರ್ಷ ತಂದಿದೆ. ಜಿಲ್ಲಾಧಿಕಾರಿಗಳು ಜಾಗವನ್ನು ಬುದ್ಧ ವಿಹಾರಕ್ಕೆ ಹಸ್ತಾಂತರಿಸಿದ ನಂತರ ಸುವ್ಯವಸ್ಥಿತ ವಿಹಾರಧಾಮ ನಿರ್ಮಾಣ ಮಾಡಲಾಗುವುದು ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಜಿಲ್ಲಾ ದಲಿತ ಸಂಘಟನೆಗಳ ಚಾಲನಾ ಸಮಿತಿಯ ಸಂಚಾಲಕ ಜೆ.ಆರ್.ಪಾಲಾಕ್ಷ ಮಾತನಾಡಿ ಈಗ ಗುರುತಿಸಿರುವ ಜಾಗದಲ್ಲಿ ಮಾನವ ಬಂಧುತ್ವ ವೇದಿಕೆ, ದಲಿತ ಸಂಘಟನೆಗಳು ಹಾಗೂ ಗೌತಮ ಬುದ್ಧನ ಅನುಯಾಯಿಗಳು…
ಮಡಿಕೇರಿ ಜು.1 NEWS DESK (ಲೇಖನ: ಟಿ.ಜಿ.ಪ್ರೇಮಕುಮಾರ್) : ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನಾವೆಲ್ಲರೂ ಜತೆಗೂಡಿ ನಮ್ಮ ಸುತ್ತಲಿನ ಪ್ರದೇಶದಲ್ಲಿ ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿ ಅವುಗಳನ್ನು ಪೋಷಿಸುವ ಮೂಲಕ ನಮ್ಮ ಕರ್ತವ್ಯ ಪಾಲನೆ ಮಾಡಬೇಕಿದೆ. ವನ ಮಹೋತ್ಸವ ಸಪ್ತಾಹ : ಪ್ರತಿ ವರ್ಷ ಜುಲೈ 1 ರಂದು ವನ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಜುಲೈ 1 ರಿಂದ ಒಂದು ವಾರ ಕಾಲ ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯವನ್ನು ವನ ಮಹೋತ್ಸವ ಸಪ್ತಾಹ ಎಂದು ಆಚರಿಸಲಾಗುತ್ತದೆ. ವನ ಮಹೋತ್ಸವದ ಮಹತ್ವವು ಮುಖ್ಯವಾಗಿ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಸಂಸ್ಕೃತಿಯನ್ನು ಉತ್ತೇಜಿಸುವ ಹಬ್ಬವಾಗಿದೆ. ನಾವು ಮತ್ತು ನಮ್ಮ ಅಭಿವೃದ್ಧಿ ಹೊಂದಬೇಕಾದರೆ, ಕಾಡುಗಳಲ್ಲಿನ ಸಸ್ಯ ಮತ್ತು ಪ್ರಾಣಿಗಳು ಉಳಿಸಲು ಪಣ ತೊಡಬೇಕು. ನಾವು 3R ನಿಯಮವನ್ನು ಅಭ್ಯಾಸ ಮಾಡಬಹುದು. (R: Reduce,R: Re use & R: Recycle: ಕಡಿಮೆ ಮಾಡುವುದು, ಮರು ಬಳಕೆ, ಪುನರ್ ಬಳಕೆ ಮಾಡುವುದು ). 3R ನಿಯಮವನ್ನು…
ಪುತ್ತೂರು ಜು.1 NEWS DESK : ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಅದರಲ್ಲಿಯೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸತನಕ್ಕೆ ತೆರೆದುಕೊಳ್ಳುತ್ತಲೇ ಇರುತ್ತಾರೆ. ಬದಲಾದ ತಾಂತ್ರಿಕತೆಯೊಂದಿಗೆ ಹೆಜ್ಜೆ ಹಾಕುತ್ತಾ ತನ್ನಲ್ಲಿರುವ ತಾಂತ್ರಿಕ ಜ್ಞಾನವನ್ನು ಇತರರಿಗೆ ಹಂಚಿಕೊಳ್ಳುವುದಕ್ಕೆ ಸೂಕ್ತ ವೇದಿಕೆ ನೀಡುವುದಕ್ಕಾಗಿ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಅನ್‍ಬೌಂಡ್ ಎನ್ನುವ 3 ದಿನಗಳ ತಾಂತ್ರಿಕ ಉತ್ಸವ ಕಾರ್ಯಕ್ರಮ ನಡೆಯಿತು. ರೀಸರ್ಚ್ ಎಂಡ್ ಪ್ರೆಸೆಂಟೇಶನ್, ಪ್ರಾಬ್ಲೆಮ್ ಸಾಲ್ವಿಂಗ್, ಮೆಷಿನ್ ಲರ್ನಿಂಗ್, ಡೇಟಾ ಪ್ರಾಸೆಸಿಂಗ್, ಸರ್ಕ್ಯೂಟ್ ಡಿಸೈನ್ ಎಂಡ್ ಡಿಬಗ್ಗಿಂಗ್, ಸರ್ವೆ, ಮಾಡೆಲಿಂಗ್, ಯುನಿಟ್ಸ್ ಎಂಡ್ ಮೆಶರ್‍ಮೆಂಟ್ಸ್ ಹೀಗೆ ಕಂಪ್ಯೂಟರ್ ವಿಭಾಗಕ್ಕೆ ಸಂಬಂಧಿಸಿದಂತೆ 4, ಇಲೆಕ್ಟ್ರಾನಿಕ್ಸ್ ವಿಭಾಗದಲ್ಲಿ 2, ಸಿವಿಲ್ ವಿಭಾಗದಲ್ಲಿ 2, ಮೆಕ್ಯಾನಿಕಲ್ ವಿಭಾಗದಲ್ಲಿ 2 ಹಾಗೂ ಎಲ್ಲಾ ವಿಭಾಗಗಳಿಗೆ ಸಂಬಂಧಿಸಿದಂತೆ 1 ಹೀಗೆ ಒಟ್ಟು 11 ವಿಷಯಗಳಲ್ಲಿ ವಿವಿಧ ತಾಂತ್ರಿಕ ಸ್ಪರ್ಧೆಗಳು ನಡೆದವು. ಕಾರ್ಯಕ್ರಮವನ್ನು ಇಂಜಿನಿಯರಿಂಗ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ ಸಂಸ್ಥೆಯಲ್ಲಿ ಸಿಲಿಕಾನ್ ಡಿಸೈನ್…
ಮಡಿಕೇರಿ ಜು.1 NEWS DESK : ಕನಾ೯ಟಕ ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ಔಷಧಿ ಉದ್ಯಮ ಕ್ಷೇತ್ರದಲ್ಲಿ ವ್ಯಾಪಾರಿಗಳ ಸೇವೆ ಪರಿಗಣಿಸಿ ಕೆಮಿಸ್ಟ್ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಡಿಕೇರಿಯ ಗಣೇಶ್ ಮೆಡಿಕಲ್ಸ್ ನ ಡಿ.ಐ.ಪುರುಷೋತ್ತಮ ಭಟ್ ಮತ್ತು ವೀಣಾ ಪುರುಷೋತ್ತಮ, ದಾವಣಗೆರೆಯ ಪೋಪಟ್ ಲಾಲ್ ಜೈನ್, ಮೈಸೂರಿನ ರಾಘವನ್, ಉಜಿರೆಯ ಶ್ರೀಧರ್, ತುಮಕೂರಿನ ಎಂ.ಎಸ್.ಅನಂತ್, ಬಾಗಲಕೋಟೆಯ ಬಂಡು ಆರ್.ಕಟ್ಟಿ ಅವರಿಗೆ ಭಾರತೀಯ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ್ ಶಿಂಧೆ ಮತ್ತು ಪ್ರಮುಖರು ಕೆಮಿಸ್ಟ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ಇದೇ ಸಂದಭ೯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೆ.ಹರೀಶ್ ಮೈಸೂರು (ಕಾನೂನು) ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಫ್ಯಾನ್ಸಿಸ್ ಪಿ.ಡಬ್ಲ್ಯು , ಮಡಿಕೇರಿ (ಲೆಕ್ಕಪರಿಶೋಧಕ) , ಕೆ.ಎಸ್.ರಮೇಶ್ ಹೊಳ್ಳ, ಮಡಿಕೇರಿ ( ಧಾಮಿ೯ಕ) , ಅನಿಲ್ ಹೆಚ್.ಟಿ. ಮಡಿಕೇರಿ (ಮಾಧ್ಯಮ) , ಚೇತನ್ ಶಾಂತಿನಿಕೇತನ, ಮಡಿಕೇರಿ ( ಸಾಮಾಜಿಕ ಸೇವೆ) ಅವರುಗಳನ್ನೂ ರಾಜ್ಯ ಔಷಧಿ ವ್ಯಾಪಾರಸ್ಥರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.
ಮಡಿಕೇರಿ ಜು.1 NEWS DESK : ಮಾದಕ ವ್ಯಸನಿಗಳಾಗುವುದನ್ನು ತಪ್ಪಿಸುವಲ್ಲಿ ಔಷಧಿ ವ್ಯಾಪಾರಸ್ಥರ ಪಾತ್ರ ಮಹತ್ವದ್ದಾಗಿದೆ, ಮಕ್ಕಳು, ಯುವಪೀಳಿಗೆ ಭಾರತದ ಜನಸಂಖ್ಯೆಯಲ್ಲಿ ಹೆಚ್ಚಾಗಿದ್ದಾರೆ ಎಂಬುದನ್ನು ಪರಿಗಣಿಸಿ ಈ ಸಮುದಾಯವು ಮಾದಕ ವ್ಯಸನಿಗಳಾಗದಂತೆ ತಡೆಗಟ್ಟುವಲ್ಲಿ ವ್ಯಾಪಾರಸ್ಥರು ಜಾಗ್ರತಿ ಮೂಡಿಸಬೇಕೆಂದು ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ್ ಎಸ್.ಶಿಂಧೆ ಕರೆ ನೀಡಿದ್ದಾರೆ. ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿತ ಕನಾ೯ಟಕ ಔಷಧಿ ವ್ಯಾಪಾರಿಗಳ ಸಂಘದ 66 ನೇ ವಾಷಿ೯ಕ ಮಹಾಸಭೆ ಮತ್ತು ನಿರಂತರ ಕಲಿಕಾ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಸಮಾಜ ನಿಮಾ೯ಣದಲ್ಲಿ ಔಷಧಿ ವ್ಯಾಪಾರಸ್ಥರ ಹೊಣೆಗಾರಿಕೆ ಹಿಂದೆಂದಿಗಿಂತಲೂ ಇಂದಿನ ದಿನಗಳಲ್ಲಿ ಹೆಚ್ಚಾಗಿದೆ. ಮಕ್ಕಳು, ಯುವಪೀಳಿಗೆಯಲ್ಲಿ ಮಾದಕ ವ್ಯಸನ ಆತಂಕಕಾರಿ ರೀತಿಯಲ್ಲಿ ಹೆಚ್ಚಾಗುತ್ತಿರುವ ಕಾಲಘಟ್ಟದಲ್ಲಿ ಇಂಥ ಅಂಶಗಳುಳ್ಳ ಔಷಧಿಗಳನ್ನು ಯುವಜನಾಂಗಕ್ಕೆ ನೀಡಬಾರದು. ಮುಖ್ಯವಾಗಿ ಮಕ್ಕಳು ಬೇರೆ ಬೇರೆ ರೀತಿಯಲ್ಲಿ ಮಾದಕ ಚಟವನ್ನು ಹೊಂದುತ್ತಿದ್ದು ಇದಕ್ಕಾಗಿ ಔಷಧಿ ವ್ಯಾಪಾರಿಗಳ ಬಳಿ ಬಂದಾಗ ಅವರನ್ನು ಉತ್ತೇಜಿಸದೇ ದುಷ್ಟಟಗಳಿಂದ ದೂರವಿರುವಂತೆ ತಿಳುವಳಿಕೆ ನೀಡುವ ಕೆಲಸವೂ…
ಬೆಂಗಳೂರು ಜು.1 NEWS DESK : ಫೇಕ್ ನ್ಯೂಸ್ ಗಳ ಬಗ್ಗೆ ಇಡೀ ಸಮಾಜ ಬಹಳ ಎಚ್ಚರದಿಂದ ಇರಬೇಕು. ಪತ್ರಿಕಾ, ಮಾಧ್ಯಮ ಸಂಘಟನೆಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಬೆಂಗಳೂರು ಪ್ರೆಸ್ ಕ್ಲಬ್ , ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ. ಸುಳ್ಳು ಸುದ್ದಿಗಳ ಮೇಲೆ ತೀವ್ರ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ ಸ್ಥಾಪಿಸಲಾಗಿದ್ದು ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು. ಫೇಕ್ ನ್ಯೂಸ್ ಗಳ ಪತ್ತೆಗೆ, ನಿಯಂತ್ರಣಕ್ಕೆ, ಈ ಬಗ್ಗೆ ಕ್ರಮಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ Fact check ಘಟಕಗಳನ್ನು ಕ್ರಿಯಾಶೀಲಗೊಳಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಕಾರ್ಯದರ್ಶಿ ಕೆ.ವಿ.ತ್ರಿಲೋಕಚಂದ್ರ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ವಾರ್ತಾ ಇಲಾಖೆ ಆಯುಕ್ತರಾದ…
ಮಡಿಕೇರಿ ಜು.1 NEWS DESK : ಕೊಡಗು ಪತ್ರಕರ್ತರ ಸಂಘ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಪತ್ರಿಕಾ ದಿನಾಚರಣೆನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಕೊಡಗು ಪತ್ರಿಕಾ ಭವನ ಟ್ರಸ್ಟ್ ನ ಮ್ಯಾನೆಂಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಹಿತಿಗಳು, ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ನರೇಂದ್ರ ರೈ ದೇರ್ಲ, ಗಡಿನಾಡ ಸಂಚಾರಿ ಸಂಪಾದಕ ಟಿ.ಪಿ.ರಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಪತ್ರಕರ್ತರಾದ ಶಕ್ತಿ ದಿನಪತ್ರಿಕೆಯ ಸಂಪಾದಕರಾದ ಜಿ. ಚಿದ್ವಿಲಾಸ್, ಗಡಿನಾಡ ಸಂಚಾರಿ ಸಂಪಾದಕ ಟಿ.ಪಿ.ರಮೇಶ್, ಸುಂಟಿಕೊಪ್ಪದ ಸಂಯುಕ್ತ ಕರ್ನಾಟಕ ವರಿಗಾರರಾದ ಕೆ.ಹೆಚ್.ಶಿವಣ್ಣ, ಗೋಣಿಕೊಪ್ಪಲು ಸುದ್ದಿ ಸಂಸ್ಥೆ ಸಂಪಾದಕ ಟಿ.ಎಲ್.ಶ್ರೀನಿವಾಸ್ ಹಾಗೂ ಸೋಮವಾರಪೇಟೆ ವಿಜಯ ಕರ್ನಾಟಕ ವರದಿಗಾರ ತೇಲಪಂಡ ಕವನ್ ಕಾರ್ಯಪ್ಪ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.






