ಮಂಗಳೂರು ಮೇ 19 NEWS DESK : ಬೆಳ್ತಂಗಡಿ ಬಿಜೆಪಿ ಮಂಡಲ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಬಂಧನ ಖಂಡನೀಯವೆಂದು ವಿಧಾನ ಪರಿಷತ್ ನೈರುತ್ಯ ಪದವೀದರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಕ್ರಿಯವಾಗಿರುವ ಕಾರ್ಯಕರ್ತರನ್ನು ಕೇಸ್ ದಾಖಲಿಸಿ, ಉಳಿದ ಕಾರ್ಯಕರ್ತರನ್ನು ಬೆದರಿಸಿ ಹಣಿಯಲು ಪ್ರಯತ್ನಿಸುವುದು ಕಾಂಗ್ರೆಸ್ಸಿನ ಹಳೆ ಚಾಳಿ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸುಳ್ಳು ಕೇಸ್ ಆಧಾರದ ಮೇಲೆ ಶಶಿರಾಜ್ ರನ್ನು ಬಂಧಿಸಿದೆ. ಆಡಳಿತ ಯಂತ್ರವನ್ನು ಉಪಯೋಗಿಸಿ, ಕೀಳುಮಟ್ಟದ ತಂತ್ರಗಳಿಂದ ನಮ್ಮ ಕಾರ್ಯಕರ್ತರನ್ನು ಬೆದರಿಸಲು ಸಾಧ್ಯವಿಲ್ಲ. ಕಾರ್ಯಕರ್ತರ ಜೊತೆ ಸಂಘಟನೆ ನಿಲ್ಲಲಿದೆ, ಏನೇ ಬರಲಿ ಕಾರ್ಯಕರ್ತರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸರ್ಜಿ ತಿಳಿಸಿದ್ದಾರೆ.
ಲೇಖಕ: admin
ಮಂಗಳೂರು ಮೇ 19 NEWS DESK : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ರನ್ನು ನೈರುತ್ಯ ಪದವೀದರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್ .ಭೋಜೇಗೌಡ ಅವರು ಭೇಟಿಯಾಗಿ ವಿಧಾನ ಪರಿಷತ್ ಚುನಾವಣೆ ಕುರಿತು ಸಮಾಲೋಚಿಸಿದರು. ಈ ಸಂದರ್ಭ ಬಿಜೆಪಿ ರಾಜ್ಯ ಪ್ರಕೋಸ್ಟಗಳ ಸಂಯೋಜಕ ಎಸ್ ದತ್ತಾತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿಎಚ್ ಮಾಲ್ತೇಶ್ ಮತ್ತಿತರರು ಉಪಸ್ಥಿತರಿದ್ದರು.
ಮಡಿಕೇರಿ ಮೇ 19 NEWS DESK : ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಕಳೆದ 1 ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ನದಿಯಲ್ಲಿ ನೀರಿನ ಮಟ್ಟ ಏರಿಕೆ ಕಾಣುತ್ತಿದೆ. ನೆಲ್ಯಹುದಿಕೇರಿ, ತೆಪ್ಪದಕಂಡಿ, ಕೊಪ್ಪ ಸೇತುವೆಯ ಕೆಳಭಾಗ ಹಾಗೂ ಕೂಡಿಗೆ ಬಳಿ ಹರಿಯುವ ಕಾವೇರಿ ನದಿಯ ನೀರಿನ ಹರಿವಿನಲ್ಲಿ ಹೆಚ್ಚಳವಾಗಿದ್ದು, ನದಿ ಬರಡಾಗಿ ದಡ ಸೇರಿದ್ದ ರ‍್ಯಾಫ್ಟ್ ಗಳು ದುಬಾರೆಯಲ್ಲಿ ಮತ್ತೆ ನೀರಿಗಿಳಿದಿವೆ. ಮಳೆಯಾಗಿ ತಂಪಿನ ಹವಾಮಾನ ಕಂಡು ಬಂದಿರುವ ಕಾರಣ ದುಬಾರೆಗೆ ಅತೀ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದುಬಾರೆಯಲ್ಲಿ ಮತ್ತೆ ರಿವರ್ ರ‍್ಯಾಫ್ಟಿಂಗ್ ಕ್ರೀಡೆಗೆ ಚಾಲನೆ ನೀಡಲಾಗಿದೆ. ಬಿರುಬಿಸಿಲಿನಿಂದ ಕಾವೇರಿ ನದಿ ಬತ್ತಿಹೋದ ಪರಿಣಾಮ ಕಳೆದ ಒಂದೂವರೆ ತಿಂಗಳಿನಿಂದ ದುಬಾರೆ ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. ಪ್ರವಾಸೋದ್ಯಮ ನಂಬಿ ಬದುಕು ಕಟ್ಟಿಕೊಂಡಿದ್ದ ರಿವರ್ ರ‍್ಯಾಫ್ಟ್ ಉದ್ಯಮಿಗಳಿಗೆ ಪ್ರಸ್ತುತ ಮಳೆಯ ವಾತಾವರಣ ಸಮಾಧಾನ ತರಿಸಿದೆ. ದುಬಾರೆ ರಿವರ್ ರ‍್ಯಾಫ್ಟಿಂಗ್ ಅನ್ನು ನಂಬಿಕೊಂಡು ಸುಮಾರು 41 ಮಂದಿ ರಿವರ್ ರ‍್ಯಾಫ್ಟಿಂಗ್ ಮಾಲೀಕರು, 80…
ಮಡಿಕೇರಿ ಮೇ 19 NEWS DESK : ಕಾಳು ಮೆಣಸು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು 24 ಗಂಟೆಗಳಲ್ಲಿ ಬಂಧಿಸುವಲ್ಲಿ ಗೋಣಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ. ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಅರವತ್ತೊಕ್ಲು ಗ್ರಾಮದ ನಿವಾಸಿ ಎಂ.ಸುಬ್ಬಯ್ಯ ಅವರ ಮನೆಯ ಸಂಗ್ರಹಣಾ ಕೊಠಡಿಯಲ್ಲಿ ಶೇಖರಿಸಿಟ್ಟಿದ್ದ 450 ಕೆ.ಜಿ ಕಾಳುಮೆಣಸನ್ನು ಮೇ 16 ರಂದು ಮನೆಯಲ್ಲಿ ಯಾರೂ ಇಲ್ಲದಿರುವ ಸಂದರ್ಭ ಕಳ್ಳತನ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಐವರನ್ನು ಬಂಧಿಸಿದ್ದಾರೆ. ಅರವತ್ತೊಕ್ಲು ಗ್ರಾಮದ ನಿವಾಸಿಗಳಾದ ಸುಬ್ರಮಣಿ (24), ಮಂಜು (25), ಬೆಳ್ಳಿ (36), ಕರ್ಪ (49) ಹಾಗೂ ಕುಶಾಲ (19) ಬಂಧಿತ ಆರೋಪಿಗಳು. ಇವರ ಬಳಿಯಿಂದ 450 ಕೆ.ಜಿ ಕಾಳುಮೆಣಸು ಮತ್ತು ಕೃತ್ಯಕ್ಕೆ ಬಳಸಿದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿರಾಜಪೇಟೆ ಉಪ ವಿಭಾಗದ ಡಿವೈಎಸ್‌ಪಿ ಆರ್.ಮೋಹನ್‌ಕುಮಾರ್, ಗೋಣಿಕೊಪ್ಪ ವೃತ್ತದ ಸಿಪಿಐ ಶಿವರಾಜ ಮುಧೋಳ್, ಪಿಎಸ್‌ಐಗಳಾದ ರೂಪದೇವಿ ಬಿರಾದರ್, ಗೌರಿಶಂಕರ್, ಸಿಬ್ಬಂದಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳ ವಿಶೇಷ ತನಿಖಾ ತಂಡ…
ಮಡಿಕೇರಿ ಮೇ 19 NEWS DESK : ಕೇಕ್ ಪ್ರಿಯರ ಹಲವು ದಿನಗಳ ಕನಸು ನನಸಾಗಿದೆ. ಕುಶಾಲನಗರದ ರಥಬೀದಿಯ ಗಿರಿಜಾ ಕಾಂಪ್ಲೆಕ್ಸ್ ನಲ್ಲಿ ಸದ್ದಾಂ ಹುಸೇನ್ ಮಾಲೀಕತ್ವದ ಆರ್ಟ್ ಆಫ್ ಕೇಕ್ಸ್ (ART OF CAKES)- The Unwind Cafe ಮಳಿಗೆ ಆರಂಭಗೊಂಡಿದೆ. >>> ಹೋಂ ಮೇಡ್ ಕೇಕ್ ಗಳು <<< Bride to be & groom to be Pastries, Wedding Pastries, Birthday Pastries, Customized Pastries, Unique type of desserts, ಗ್ರಾಹಕರ ಅವಶ್ಯಕತೆಗೆ ಅನುಗುಣವಾಗಿ ಎಲ್ಲಾ ತರಹದ ಪೇಸ್ಟ್ರೀಸ್ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮತ್ತು Order ಗಳಿಗಾಗಿ ಸಂಪರ್ಕಿಸಿ : 8197300217 | 9742155293 (ಶುಚಿ, ರುಚಿ ಮತ್ತು ತಾಜಾತನಕ್ಕೆ ಮತ್ತೊಂದು ಹೆಸರೇ ಆರ್ಟ್ ಆಫ್ ಕೇಕ್ಸ್ (ART OF CAKES). ಗ್ರಾಹಕರ ಹಿತವೇ ನಮ್ಮ ಹಿತ, ಕುಟುಂಬ ಸಹಿತರಾಗಿ ಇಂದೇ ಭೇಟಿ ನೀಡಿ.
ಮಡಿಕೇರಿ ಮೇ 18 NEWS DESK : ಶಿಕ್ಷಕರೇ ಅಲ್ಲದವರು, ರಾಜಕಾರಣಿಗಳು, ಕೆಲವು ಸಂದರ್ಭಗಳಲ್ಲಿ ಪದವಿಯನ್ನೇ ಪಡೆಯದವರು ಸುಶಿಕ್ಷಿತ ಮತದಾರರ ಕ್ಷೇತ್ರದಿಂದ ಚುನಾಯಿತರಾಗುತ್ತಿರುವುದು ವಿಪರ್ಯಾಸ ಎಂದು ವಿಧಾನ ಪರಿಷತ್ ನ ನೈಋತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಶಸ್ತ್ರ ಚಿಕಿತ್ಸಾ ತಜ್ಞ ಹೆಬ್ರಿಬೀಡುವಿನ ಡಾ.ನರೇಶ್ಚಂದ್ ಹೆಗ್ಡೆ ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೂನ್ 3 ರಂದು ನಡೆಯುವ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿದ್ದು, ಈಗಾಗಲೇ ನಾಮಪತ್ರ ಸಲ್ಲಿಸಿದ್ದೇನೆ. ಈ ಬಾರಿ ಮತದಾರರು ವಿದ್ಯಾವಂತರನ್ನು ಬಹುಮತದಿಂದ ಆಯ್ಕೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನೈಋತ್ಯ ಶಿಕ್ಷಕರ ಕ್ಷೇತ್ರ ಅತ್ಯಂತ ಸುಶಿಕ್ಷಿತ ಮತದಾರರ ಕ್ಷೇತ್ರವಾಗಿದೆ. ಇಲ್ಲಿನ ಮತದಾರರು ಕನಿಷ್ಠ ಎರೆಡೆರಡು ಪದವಿಗಳನ್ನು ಪಡೆದಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರ ರಚನೆಯಾದ ಬಳಿಕ ಎಲ್ಲೋ ಒಂದೆರಡು ಸಂದರ್ಭದಲ್ಲಿ ಮಾತ್ರ ಪದವೀದರರು, ಸುಶಿಕ್ಷಿತರು ಆಯ್ಕೆಯಾಗಿದ್ದಾರೆ. ಅರ್ಹರು ವಿಧಾನ ಪರಿಷತ್ ಪ್ರವೇಶ ಮಾಡಬೇಕು ಎನ್ನುವುದು ನನ್ನ ಉದ್ದೇಶ ಎಂದರು. ಸುಮಾರು 22 ಸಾವಿರಕ್ಕೂ ಅಧಿಕ…
ಮಡಿಕೇರಿ ಮೇ 18 NEWS DESK : ಕಾಂಗ್ರೆಸ್ ಪಕ್ಷದಲ್ಲಿ ಸುದೀರ್ಘಾವಧಿ ಸೇವೆ ಸಲ್ಲಿಸಿರುವ ಕಾರ್ಯಕರ್ತರನ್ನು ಮೀರಿ, ಇತರೆ ಪಕ್ಷಗಳಿಂದ ಬಂದವರಿಗೆ ಮಣೆ ಹಾಕಲಾಗಿದೆ. ಇಂತಹ ಪಕ್ಷಾಂತರಿಗಳ ವಿರುದ್ಧ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ತಾನು ಸ್ಪರ್ಧೆಗೆ ಇಳಿದಿದ್ದೇನೆ ಎಂದು ವಿಧಾನ ಪರಿಷತ್ ಅಭ್ಯರ್ಥಿ ಶಿವಮೊಗ್ಗದ ಎಸ್.ಪಿ.ದಿನೇಶ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2012 ರ ಎಂಎಲ್‌ಸಿ ಚುನಾವಣೆಯಲ್ಲಿ ತಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯ ಪ್ರಬಲ ಅಭ್ಯರ್ಥಿ ಡಿ.ಹೆಚ್.ಶಂಕರಮೂರ್ತಿ ಅವರ ವಿರುದ್ಧ ಕೇವಲ 918 ಮತಗಳ ಅಲ್ಪ ಅಂತರದಿಂದ ಪರಾಭವಗೊಂಡಿದ್ದೆ. 2018 ರಲ್ಲು ಕಾಂಗ್ರೆಸ್ ಪರವಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದೆ. ಈ ಬಾರಿ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಪಕ್ಷದಿಂದ ನಿಷ್ಠಾವಂತ ಯಾವುದೇ ಕಾರ್ಯಕರ್ತನನ್ನು ಪಕ್ಷ ಕಣಕ್ಕಿಳಿಸಿದ್ದಲ್ಲಿ ತಾನು ಕಣಕ್ಕಿಳಿಯುತ್ತಿರಲಿಲ್ಲ. ಆದರೆ ಹಿಂದೆ ಬಿಜೆಪಿಯಲ್ಲಿದ್ದು ವಿಧಾನಸಭಾ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡು, ಇದೀಗ ಕಾಂಗ್ರೆಸ್ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆ ನನ್ನ ಸ್ಪರ್ಧೆ ಪಕ್ಷಾಂತರಿಯ ವಿರುದ್ಧ ಎಂದು ಪರೋಕ್ಷವಾಗಿ ಕಾಂಗ್ರೆಸ್…
ಮಡಿಕೇರಿ ಮೇ 18 NEWS DESK : ಹಾಡಹಗಲೇ ನಿರಾತಂಕವಾಗಿ ಕಾಡಾನೆಯೊಂದು ವಸತಿ ಪ್ರದೇಶದ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಸಾರ್ವಜನಿಕರನ್ನು ಆತಂಕಕ್ಕೆ ದೂಡಿದ ಘಟನೆ ಸುಂಟಿಕೊಪ್ಪ ಬಳಿಯ ಕಂಬಿಬಾಣೆಯಲ್ಲಿ ನಡೆದಿದೆ. ಕಂಬಿಬಾಣೆ ಗ್ರಾಮದ ಮುಖ್ಯ ರಸ್ತೆಯ ಇಕ್ಕೆಲಗಳು ಜನವಸತಿಯ ಪ್ರದೇಶವಾಗಿದ್ದು, ಶನಿವಾರ ಬೆಳಗ್ಗೆ ಅಚಾನಕ್ ಕಾಡಾನೆಯೊಂದು ಗ್ರಾಮದ ಮುಖ್ಯ ರಸ್ತೆಯಲ್ಲಿ ಕಾಣಿಸಿಕೊಂಡಿತು. ಇದರಿಂದ ಕಂಗಾಲಾದ ಅಲ್ಲಿನ ನಿವಾಸಿಗಳು ತಕ್ಷಣ ಸ್ಥಳದಿಂದ ದೂರಕ್ಕೆ ತೆರಳಿದರು. ಕಾಡಾನೆ ಮುಖ್ಯ ರಸ್ತೆಯ ಉದ್ದಕ್ಕೂ ಸಾಗಿ ಕೆಲ ಕಾಲ ಆತಂಕವನ್ನುಂಟುಮಾಡಿತಾದರು, ಬಳಿಕ ಗ್ರಾಮದ ಅಂಚಿನಿಂದ ಅgಣ್ಯ ಪ್ರದೇಶದತ್ತ ಸಾಗಿತು. ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಹಗಲಿನಲ್ಲೆ ಇದೀಗ ಕಾಡಾನೆಗಳು ಬರುತ್ತಿರುವುದು ಸಾರ್ವಜನಿಕರ ಸಂಕಷ್ಟಕ್ಕೆ ಕಾರಣವಾಗಿದೆ.
ಮಡಿಕೇರಿ ಮೇ.18 NEWS DESK : ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರರ ಕ್ಷೇತ್ರಗಳಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆ ಸಂಬಂಧ ಭಾರತ ಚುನಾವಣಾ ಆಯೋಗವು ಹಿರಿಯ ಐಎಎಸ್ ಅಧಿಕಾರಿಗಳನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಕ ಮಾಡಿ ಆದೇಶಿಸಿದೆ. ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರಕ್ಕೆ (ಕೊಡಗು ಜಿಲ್ಲೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆ) ಚುನಾವಣಾ ವೀಕ್ಷಕರಾಗಿ ಅನಿಲ್ ಕುಮಾರ್ ಟಿ.ಕೆ, ಸಹಾಯಕ ಅಧಿಕಾರಿಯಾಗಿ ಮೈಸೂರು ಜಿಲ್ಲೆ ತೋಟಗಾರಿಕೆ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿಯ ಉಪ ನಿರ್ದೇಶಕರಾದ ರುದ್ರೇಶ್ ಕೆ. ದೂ. ಸಂ.9964174107, 7204064565. ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರ(ಕೊಡಗು ಜಿಲ್ಲೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆ) ಕ್ಕೆ ಹರ್ಷ್ ಗುಪ್ತ ಅವರನ್ನು ಚುನಾವಣಾ ವೀಕ್ಷಕರಾಗಿ ಹಾಗೂ ಸಹಾಯಕ ಅಧಿಕಾರಿಯಾಗಿ ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ.ಸುದರ್ಶನ್ ಅವರನ್ನು…
ಮಡಿಕೇರಿ ಮೇ 18 NEWS DESK : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸೃಜನಶೀಲತೆ, ನಾವೀನ್ಯತೆ ಮತ್ತು ವಿಶ್ವ ಪರಿಸರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳ ಸಕ್ರಿಯತೆಯನ್ನು ಉತ್ತೇಜಿಸಲು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಾಗೂ ಮಣ್ಣು ಮತ್ತು ಭೂಮಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ ತಮ್ಮ ಕೊಡುಗೆ ನೀಡಲು ಅವಕಾಶವನ್ನು ಒದಗಿಸುತ್ತದೆ. ಕರ್ನಾಟಕ ರಾಜ್ಯದ ಯಾವುದೇ ಮಂಡಳಿಯಲ್ಲಿ ಪ್ರಸ್ತುತ ದಾಖಲಾದ ಪ್ರೌಢಶಾಲಾ ವಿದ್ಯಾರ್ಥಿಗಳು ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರಬಂಧಗಳನ್ನು ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಸಲ್ಲಿಸಬಹುದು. ಪ್ರತಿ ಭಾಷೆಗೆ ಒಬ್ಬ ಸ್ಪರ್ಧಿಗೆ ಕೇವಲ ಒಂದು ಪ್ರಬಂಧವನ್ನು ಮಾತ್ರ ಸಲ್ಲಿಸಲು ಅವಕಾಶವಿದೆ. ಯಾವುದೇ ಸ್ಪರ್ಧಿಯು ಒಂದು ನಿರ್ದಿಷ್ಟ ಭಾಷೆಯಲ್ಲಿ ಒಂದಕ್ಕಿಂತ ಹೆಚ್ಚು ಪ್ರಬಂಧಗಳನ್ನು ಸಲ್ಲಿಸಿರುವುದು ಕಂಡುಬಂದರೆ, ಅವರು ಸಲ್ಲಿಸಿದ ಎಲ್ಲಾ ಪ್ರಬಂಧಗಳನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ಪ್ರಬಂಧದ ಕೊನೆಯಲ್ಲಿ ಹೆಸರು, ವಿಳಾಸ. ಸಂಪರ್ಕ ಸಂಖ್ಯೆ ಮತ್ತು ಇ-ಮೇಲ್ ವಿವರಗಳನ್ನು ಒದಗಿಸಬೇಕು. ಪ್ರಬಂಧವನ್ನು ಸಲ್ಲಿಸಲು ಮೇ, 27 ಕೊನೆಯ…






