ಲೇಖಕ: admin

ಓಂ ಕಾಳನ್ನು ಅಡುಗೆಗೆ ಸಾಮಾನ್ಯವಾಗಿ ಉಪಯೋಗಿಸುತ್ತಲೇ ಇರುತ್ತೇವೆ. ಆದರೆ, ಈ ಓಂ ಕಾಳನ್ನು ಸೇವಿಸುವುದರಿಂದ ಹತ್ತು ಹಲವು ಆರೋಗ್ಯಕಾರಿ ಲಾಭಗಳಿದೆ. ಸಾಕಷ್ಟು ಮಂದಿ ಹೊಟ್ಟೆ, ಕರುಳು ಹಾಗೂ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಅಂಗಾಂಗಗಳಲ್ಲಿ ಹುಣ್ಣುಗಳಿಂದ ಬಳಲುತ್ತಿರುತ್ತಾರೆ, ಈ ಹುಣ್ಣುಗಳಿಂದ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿರುತ್ತಾರೆ, ಇದಕ್ಕಾಗಿ ಹಲವು ಔಷಧಗಳ ಮೊರೆ ಹೋಗಿರುತ್ತಾರೆ. ಆದರೆ, ಓಂ ಕಾಳುಗಳು ಇಂತಹ ಹುಣ್ಣುಗಳನ್ನು ವಾಸಿಮಾಡಲು ಪರಿಣಾಮಕಾರಿಯಾಗಿದೆ ಎಂದರೆ ಆಶ್ಚರ್ಯವಾಗಬಹುದು. ಓಂ ಕಾಳುಗಳು ಅಸಿಡಿಟಿ, ಗ್ಯಾಸ್ ಸಮಸ್ಯೆ, ಜೀರ್ಣಕ್ರಿಯೆಯ ವಿಳಂಬವಾಗುವ ತೊಂದರೆಗಳನ್ನು ಸರಿಪಡಿಸುತ್ತದೆ. ಜೀರ್ಣಕ್ರಿಯೆಯ ತೊಂದರೆಗಳನ್ನು ಸರಿಮಾಡಿಕೊಳ್ಳಲು ಅರ್ಧ ಚಮಚದಷ್ಟು ಓಂಕಾಳು ಗಳನ್ನು ಜಗಿದು ತಿನ್ನಬಹುದು ಅಥವಾ ನೀರಿನೊಂದಿಗೆ ಬೆರೆಸಿ ಕುಡಿಯಬಹುದು. ಕಾಳುಗಳು ತೈವನ್ ಎಂಬ ಅಂಶವನ್ನು ಒಳಗೊಂಡಿದೆ. ಈ ಅಂಶವು ಕೀಟಾಣುಗಳ ಹಾಗೂ ಶಿಲಿಂಧ್ರಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಹಲವಾರು ಚರ್ಮ ಸಮಸ್ಯೆಗಳು ಶಿಲಿಂಧ್ರದ ಮುಖಾಂತರ  ಬರಬಹುದು. ಇಂತಹ ಸಮಸ್ಯೆಗಳಿಗೆ ಕೇವಲ ನಿಮಿಷಗಳಲ್ಲಿ ಓಂಕಾಳು ಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು. ಕೆಲವು ಓಂ ಕಾಳುಗಳನ್ನು ತೆಗೆದುಕೊಂಡು ಕುಟ್ಟಿ…

Read More

ಮಡಿಕೇರಿ ಮೇ 20 NEWS DESK : ಕೊಡವ ಮಕ್ಕಡ ಕೂಟದ 100ನೇ ಪುಸ್ತಕಕ್ಕೆ ಬರಗಾರರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ. 100 ಬರಹಗಾರರ ಲೇಖನಗಳನ್ನು ಒಂದೇ ಪುಸ್ತಕದಲ್ಲಿ ಪ್ರಕಟಿಸಿ 100 ನೇ ಪುಸ್ತಕವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಕೂಟದ ಸ್ಥಾಪಕಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದ್ದಾರೆ. ಕೊಡಗಿನ ಆಚಾರ, ವಿಚಾರ, ಸಂಸ್ಕೃತಿ, ಪದ್ಧತಿ, ಪರಂಪರೆ, ಇತಿಹಾಸ, ಸೇರಿದಂತೆ ಸಮಾಜಮುಖಿ ಬರಹಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರ ತರಲು ನಿರ್ಧರಿಸಲಾಗಿದೆ. ಬರಹ ಯಾವ ಭಾಷೆಯಲ್ಲಿ ಬೇಕಾದರು ಇರಬಹುದು. ಆಸಕ್ತ ಬರಹಗಾರರು ಯಾವುದೇ ಜಾತಿ, ಮತ, ಬೇಧವಿಲ್ಲದೆ ತಮ್ಮ ಬರಹಗಳನ್ನು ಟೈಪ್ ಮಾಡಿ ಅಥವಾ ಬರೆದು ಕೊಡವ ಮಕ್ಕಡ ಕೂಟ, ಕೆ.ಬಾಡಗ, ಎಫ್.ಎಂ.ಕೆ.ಎ.ಸಿ ಕಾಲೇಜು ಪೋಸ್ಟ್, ಮಡಿಕೇರಿ, ಕೊಡಗು ಈ ವಿಳಾಸಕ್ಕೆ ಕಳುಹಿಸಬಹುದು ಅಥವಾ ಬೊಳ್ಳಜಿರ ಬಿ.ಅಯ್ಯಪ್ಪ 9880778047 ಮೊ.ಸಂಖ್ಯೆಗೆ ವಾಟ್ಸ್ಅಪ್ ಮಾಡಬಹುದು. ಲೇಖನಗಳನ್ನು ಜೂನ್ 30ರೊಳಗೆ ಕಳುಹಿಸಬೇಕು ಎಂದು ಬೊಳ್ಳಜಿರ ಅಯ್ಯಪ್ಪ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

Read More

ಮಡಿಕೇರಿ ಮೇ 20 NEWS DESK : ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ ಮಳೆ 17.21 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 198.24 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 122.89 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 35.25 ಮಿ.ಮೀ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 296.79 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 179.33 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 8.40 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 122.85 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 74.11 ಮಿ.ಮೀ. ಮಳೆಯಾಗಿತ್ತು. ಪೊನ್ನಂಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 23.40 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ…

Read More

ಮಡಿಕೇರಿ ಮೇ 20 NEWS DESK : ಪತ್ರಕರ್ತೆ ವಿರಾಜಪೇಟೆಯ ರಜಿತ ಕಾರ್ಯಪ್ಪ ಸಾಧನಾ ಸೇವಾ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ. ರಜಿತ ಕಾರ್ಯಪ್ಪ ಅವರ ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ನ ಸಾಧನೆಯನ್ನು ಗುರುತಿಸಿ ಡಾ. ನಾಗೇಶ್ ರಾಗಿ ಮುದ್ದನಹಳ್ಳಿ ಅವರ ಜನ್ಮದಿನದ ಅಂಗವಾಗಿ ಪ್ರಗತಿ ಸೇವಾ ಟ್ರಸ್ಟ್ (ರಿ) ಪಾಂಡವಪುರ ಹಾಗೂ ಅಮ್ಮನ ಆಸರೆ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಮೇ 21 ರಂದು ಪಾಂಡವಪುರ ತಾಲೂಕಿನ ಚಿನಕುರಳಿ ಹೋಬಳಿಯ ಆಸರೆ ವೃದ್ಧಾಶ್ರಮದಲ್ಲಿ  ನಡೆಸಲಾಗುತ್ತಿರುವ ಆರೋಗ್ಯ ತಪಾಸಣೆ ಶಿಬಿರ ಮತ್ತು ಸಾಧನಾ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Read More

ಮೈಸೂರು ಮೇ 20 NEWS DESK : ಶ್ರೀರಂಗಪಟ್ಟಣ- ಕುಶಾಲನಗರ ಚತುಷ್ಪಥ ಹೆದ್ದಾರಿಗೆ ಭೂಮಿ ನೀಡುವ ರೈತರಿಗೆ ಎಕರೆಗೆ ಕನಿಷ್ಟ 40 ಲಕ್ಷ ನೀಡಬೇಕು ಮತ್ತು  ಕುಟುಂಬದ ಒರ್ವರಿಗೆ  ಉದ್ಯೋಗ ಕಲ್ಪಿಸಲು ಆಗ್ರಹಿಸಿ  ಗ್ರಾಮಸ್ಥರು  ಸರ್ವೆ ಕಾರ್ಯಕ್ಕೆ ತಡೆ ಒಡ್ಡಿರುವ ಘಟನೆ ಹುಣಸೂರು ಸಮೀಪದ ಅಗ್ರಹಾರ ಗ್ರಾಮದಲ್ಲಿ ಶುಕ್ರವಾರ  ನಡೆದಿದೆ. ತಾಲೂಕಿನ ಗಾವಡಗೆರೆ ಹೋಬಳಿಯ ಅಗ್ರಹಾರಕ್ಕೆ ಸರ್ವೆ ನಡೆಸಲು ತೆರಳಿದ್ದ ಅಧಿಕಾರಿಗಳನ್ನು ತಡೆದ ರೈತರು ಅವರನ್ನು ವಾಪಸ್ ಕಳುಹಿಸಿದ್ದು, ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ತೊಡಕಾಗಿದೆ. ಈ ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರಕಾರ ಈಗಾಗಲೆ 3,500 ಕೋಟಿ ರೂಪಾಯಿಗಳನ್ನು  ಬಿಡುಗಡೆಗೊಳಿಸಿದ್ದು, ಖಾಸಗಿ ಜಮೀನು ಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದು ಗುತ್ತಿಗೆದಾರರು ಕಾಮಗಾರಿ ಆರಂಭಿಸಲು  ಈಗಾಗಲೇ ಸಾಮಗ್ರಿ ದಾಸ್ತಾನು ಮಾಡಿದ್ದಾರೆ. ಹುಣಸೂರು , ಪಿರಿಯಾಪಟ್ಟಣ ತಾಲ್ಲೂಕಿನ ಬಹುತೇಕ ರೈತರು ಭೂಮಿಯನ್ನು ಬಿಟ್ಟುಕೊಟ್ಟು ಸೂಕ್ತ ಪರಿಹಾರವನ್ನೂ ಪಡೆದುಕೊಂಡಿದ್ದಾರೆ. ಇನ್ನು ಕೆಲವಡೆಗಳಲ್ಲಿ ಭೂಸ್ವಾಧೀನ ಆಗಬೇಕಾಗಿದ್ದು ಈ ಉದ್ದೇಶಿತ 4130 ಕೋಟಿ ರೂಪಾಯಿಗಳ 92…

Read More

ವಿರಾಜಪೇಟೆ ಮೇ 20 NEWS DESK : ಕಳೆದ ನಾಲ್ಕು ತಿಂಗಳ ಹಿಂದೆ ವಾಹನ ಅಪಘಾತಕ್ಕೀಡಾಗಿ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದ ಮರಗೋಡು ನಿವಾಸಿ ಜಯಂತಿಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನ ನೀಡಲಾಯಿತು. ಜಯಂತಿ ಅವರ ಇಬ್ಬರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಇವರಿಗೆ ಯಾವುದೇ ಆದಾಯದ ಮೂಲ ಇರುವುದಿಲ್ಲ. ಜಯಂತಿ ಅವರು ಸುಮಾರು 15 ವರ್ಷದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಕ್ರೀಯ ಸದಸ್ಯರಾಗಿದ್ದು, ಇವರ ಈ ಸಂಕಷ್ಟದ ಸಮಯದಲ್ಲಿ ಇವರಿಗೆ ಸಹಾಯ ಮಾಡುವಂತೆ ಶ್ರೀ ಕ್ಷೇತ್ರಕ್ಕೆ ಮನವಿ ನೀಡಿದ್ದು ಮನವಿಗೆ ಸ್ಪಂದಿಸಿ ಕ್ಷೇತ್ರದಿಂದ 20,000/ ರೂ ನಗದು ಸಹಾಯಧನ ಮಂಜೂರಾಗಿ ಬಂದಿರುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಬಿ.ದಿನೇಶ್ ಗೌಡ ಮಾಹಿತಿ ನೀಡಿದರು. ಸಹಾಯಧನ ನೀಡುವ ಸಂದರ್ಭ ವಿರಾಜಪೇಟೆ ತಾಲೂಕಿನ ಯೋಜನಾಧಿಕಾರಿ ಬಿ.ದಿನೇಶ್ ಗೌಡ ಹಾಗೂ ವಲಯದ ಮೇಲ್ವಿಚಾರಕರಾದ ಪ್ರತಾಪ್, ಸೇವಾ ಪ್ರತಿನಿಧಿ ಲತಾ ನೇತ್ರಾವತಿ, ಸಂಘದ ಎಲ್ಲಾ ಸದಸ್ಯರ ಸಮೂಹದಲ್ಲಿ ಸಹಾಯಧನವನ್ನು ಫಲಾನುಭವಿಗೆ ವಿತರಿಸಲಾಯಿತು. ಕಳೆದ…

Read More

ಮಂಗಳೂರು ಮೇ 19 NEWS DESK : ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಪ್ರತಿ ಮತದಾರರನ್ನು ನೇರವಾಗಿ ಸಂಪರ್ಕ ಮಾಡುವ ಮೂಲಕ ಶ್ರಮಿಸಬೇಕು, ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಶಿಕ್ಷಕರ ಕ್ಷೇತ್ರದ ಸಂಚಾಲಕರು ಹಾಗೂ ಶಾಸಕರಾದ ಪ್ರತಾಪ್ ಸಿಂಹ ನಾಯಕ್ ಕರೆ ನೀಡಿದರು. ಇಲ್ಲಿನ ಅಸೈಗೋಳಿಯ ಬಂಟರ ಭವನದಲ್ಲಿ ಭಾನುವಾರ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆ ಹಿನ್ನೆಲೆ ಮತದಾರರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಯೊಂದು ಚುನಾವಣೆಗೂ ಅದರದ್ದೇ ಆದ ಮಹತ್ವವಿದೆ,ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾದ ಡಾ.ಧನಂಜಯ ಸರ್ಜಿ ಅವರು, ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಎಸ್.ಎಲ್.ಬೋಜೇಗೌಡ್ರು ಸ್ಪರ್ಧಿಸಿದ್ದಾರೆ. ಅಭ್ಯರ್ಥಿಗಳ ಗೆಲುವಿಗಾಗಿ ಪ್ರತಿ ಮತದಾರರನ್ನು ನೇರವಾಗಿ ಸಂಪರ್ಕ ಮಾಡಬೇಕು. ಹಾಗಾಗಿ ಶಕ್ತಿ ಕೇಂದ್ರ ಮಹಾ ಶಕ್ತಿ ಕೇಂದ್ರದ ಪ್ರಮುಖರು ಚುರುಕಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ನೈರುತ್ಯ ಪದವೀಧರ ಕ್ಷೇತ್ರದ ಸಹ ಸಂಚಾಲಕರಾದ ವಿಕಾಸ್, ಈ ಬಾರಿ ಹೆಚ್ಚು ನೋಂದಣಿ ಆಗಿದ್ದಾರೆ, ಒಬ್ಬ ಗಟನಾಯಕರು 20 ಮತದಾರರನ್ನು ತಲುಪಬೇಕು, ಮತದಾರರ…

Read More

ಮಂಗಳೂರು ಮೇ 19 NEWS DESK : ಶಿಕ್ಷಕರು ಸಮಾಜವನ್ನು ತಿದ್ದವವರು ಹಾಗೂ ಪದವೀದರರು ಪ್ರಜ್ಞಾವಂತರು. ಜನಸಾಮಾನ್ಯರು ಮಾಡುವ ತಪ್ಪುಗಳನ್ನು ಶಿಕ್ಷಕರು, ಪದವೀಧರರು ಮಾಡುವುದಿಲ್ಲ, ಮೈತ್ರಿಯ ಅಭ್ಯರ್ಥಿಗಳನ್ನು ಅಧಿಕ ಮತಗಳಿಂದ ಗೆಲ್ಲಿಸುತ್ತಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಮಂಗಳೂರು ನಗರ ಉತ್ತರ ಬಿಜೆಪಿ ಕಾರ್ಯಾಲಯದಲ್ಲಿ ನೈರುತ್ಯ ಪದವೀಧರ  ಮ್ತತು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಪರಿಷತ್ ಚುನಾವಣೆಯನ್ನು ನಾವೆಲ್ಲರೂ ಇದು ನಮ್ಮ ಚುನಾವಣೆ ಎಂದು ಸ್ವೀರಿಸಬೇಕು, ಗ್ರಾಮ, ವಾರ್ಡ್, ಬೂತ್ ಮಟ್ಟದಲ್ಲಿ ಚುರುಕಾಗಿ ಕಲಸ ಮಾಡಬೇಕು, ಪ್ರತಿ ಶಿಕ್ಷಕರು ಹಾಗೂ ಪದವೀಧರರನ್ನು ತಲುಪಿ ಅಭ್ಯರ್ಥಿಗಳ ಬಗ್ಗೆ ಮನವರಿಕೆ ಮಾಡಿ ಮತ ನೀಡುವಂತೆ ಮನವೊಲಿಸಬೇಕು ಎಂದು ಹೇಳಿದರು. ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಹೆಚ್ಚಿನ ಲೀಡ್ ಕೊಡುವ ಶಕ್ತಿ ಮಂಗಳೂರು ಜಿಲ್ಲೆಗಿದೆ, ಇವತ್ತಿನಿಂದ ಚುನಾವಣೆ ತನಕ ಮತದಾರರ ಸಂಪರ್ಕ ಮತ್ತು ಸಂಬಂಧವನ್ನು ಬೆಳೆಸಿ…

Read More

ಮಡಿಕೇರಿ ಮೇ 19 NEWS DESK : ಕೊಡಗು ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗುತ್ತಿದೆ. ಮಳೆಯ ಪ್ರಮಾಣ ಹೆಚ್ಚಾಗುತ್ತಿರುವ ಬೆನ್ನಲ್ಲೇ ಜಿಲ್ಲೆಯಾದ್ಯಂತ ಮೇ 23ರವರೆಗೆ ‘ಆರೆಂಜ್ ಅಲರ್ಟ್’ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಗುಡುಗು, ಮಿಂಚು ಸಹಿತ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಅವಧಿಯಲ್ಲಿ 115.6 ಮಿ.ಮೀ.ನಿಂದ 204.4 ಮಿ.ಮೀ.ವರೆಗೆ ಮಳೆ ಸುರಿಯಲಿದ್ದು, ಗಾಳಿಯ ವೇಗ ಗಂಟೆಗೆ 40ರಿಂದ 50 ಕಿ.ಮೀ ಇರಲಿದೆ. ಸಾರ್ವಜನಿಕರು ಜಾಗೃತರಾಗಿರುವಂತೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

Read More

ಮಡಿಕೇರಿ ಮೇ 19 NEWS DESK : ಬೌದ್ಧಿಕ ಸಾಮರ್ಥ್ಯವನ್ನು ಅನಾವರಣಗೊಳಿಸಲು ಸ್ಪರ್ಧಾ ಕಾರ್ಯಕ್ರಮಗಳು ತುಂಬಾ ಅಗತ್ಯವಾಗಿದೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಪ್ರೊ.ಮೇಜರ್ ಬಿ.ರಾಘವ ತಿಳಿಸಿದ್ದಾರೆ. ಸ್ನಾತಕ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ನಡೆದ Brain Hack 0.2 ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೈಯುಕ್ತಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸ್ಪರ್ಧೆಗಳು ತುಂಬಾ ಅಗತ್ಯ. ಇದು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ಸ್ಪರ್ಧಾಯುಗಕ್ಕೆ ಹೊಂದಿಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಡುತ್ತವೆ ಎಂದರು. ಸ್ನಾತಕ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗವು ಉತ್ತಮವಾದ ಸ್ಪರ್ಧಾ ಕಾರ್ಯಕ್ರಮವನ್ನು ರೂಪಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಈ ರೀತಿಯ ಸ್ಪರ್ಧೆಗಳಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಸಂಯೋಜಕರಾದ ಡಾ.ಪವಿತ್ರ ಹಾಗೂ ಐಕ್ಯೂಎಸಿ ಸಂಯೋಜಕ ಡಾ.ರಾಜೇಂದ್ರ ಆರ್. ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿ ಕೌಶಲ್ ಸೋಮಯ್ಯ ಸ್ವಾಗತಿಸಿ, ಅಲೆನ್ ಜೀಸ್ಮಾ ಕಾರ್ಯಕ್ರಮ ನಿರೂಪಿಸಿದರು. ವಿಭಾಗದ ಅಧ್ಯಾಪಕರಾದ ಅಮೃತ ಹಾಗೂ…

Read More