ಮಡಿಕೇರಿ ಜ.10 NEWS DESK : ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಉತ್ಸವ ಸಮಿತಿ ವತಿಯಿಂದ ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಯಲ್ಲಿ 36ನೇ ವರ್ಷದ ಮಕರ ಸಂಕ್ರಾಂತಿ ಮಹೋತ್ಸವ ಜ.14ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಟಿ.ಕೆ.ಸುಧೀರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂರ್ಯನು ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ‘ಉತ್ತರಾಯಣ’ ಪುಣ್ಯಕಾಲದ ಮಕರಸಂಕ್ರಾಂತಿ ಉತ್ಸವ ಅತ್ಯಂತ ವಿಶೇಷವಾದದ್ದು. ಮಕರ ಸಂಕ್ರಾಂತಿಯ ದಿನದಿಂದ ಸೂರ್ಯನ ಚಲನೆ ದಕ್ಷಿಣದಿಂದ ಉತ್ತರದಿಕ್ಕಿನತ್ತ ಸರಿಯಲಾರಂಭಿಸುತ್ತದೆ. ವೈಜ್ಞಾನಿಕವಾಗಿಯು ಇದೊಂದು ಮಹತ್ವದ ದಿನ ಮತ್ತು ಹಬ್ಬವಾಗಿದೆ ಎಂದರು. ಮಕರಸಂಕ್ರಾಂತಿಯ ಮುನ್ನಾ ದಿನವಾದ ಜ.13 ರಂದು ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ತುಪ್ಪಾಭಿಷೇಕ ಇತ್ಯಾದಿ ಸೇವೆ ನಡೆಯಲಿದೆ. ಜ.14ರ ಬೆಳಗ್ಗೆ 6.30 ಗಂಟೆಗೆ ನಿರ್ಮಾಲ್ಯ ವಿಸರ್ಜನೆ, ಉಷಾಪೂಜೆ, 7 ಗಂಟೆಗೆ ಮುತ್ತಪ್ಪ ಮತ್ತು ಸುಬ್ರಹ್ಮಣ್ಯ ದೇವರ ಪೂಜೆ, 7.30ರಿಂದ ಪಂಚಾಮೃತಾಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ,…
ಲೇಖಕ: admin
ಮಡಿಕೇರಿ ಜ.10 NEWS DESK : ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಮಡಿಕೇರಿಯಲ್ಲಿ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿ ಹಾಗೂ ಶ್ರೀಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿಗಳ ದೈವಜ್ಞ ದರ್ಶನ ಕಾರ್ಯಕ್ರಮ ನಡೆಯಿತು. ಶ್ರೀಗಳ ಪುರಪ್ರವೇಶದ ನಂತರ ಪೂರ್ಣ ಕುಂಭ ಮೆರವಣಿಗೆ ನಗರದ ಹಳೇ ಖಾಸಗಿ ಬಸ್ ನಿಲ್ದಾಣದಿಂದ ಚೌಡೇಶ್ವರಿ ದೇವಾಲಯದವರೆಗೆ ಸಾಗಿತು. ನಂತರ ಶ್ರೀಗಳ ಪಾದುಕಾ ಪೂಜೆ, ಶ್ರೀಗಳಿಂದ ಆಶೀರ್ವಚನ, ಫುಲಪುಷ್ಪ ಸಮರ್ಪಣೆ, ಫಲ ಮಂತ್ರಾಕ್ಷತೆ ನೆರವೇರಿತು. ಸ್ವಾಮೀಜಿಗಳ ಭವ್ಯ ಸ್ವಾಗತಕ್ಕಾಗಿ ನಗರದ ಮಹದೇವಪೇಟೆ ಹಾಗೂ ಶ್ರೀಚೌಡೇಶ್ವರಿ ದೇವಾಲಯವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಆಕರ್ಷಣೀಯವಾಗಿ ಅಲಂಕಾರಗೊಳಿಸಲಾಗಿತ್ತು. ದೈವಜ್ಞ ಬ್ರಾಹ್ಮಣ ಸಮಾಜದ ಬಂಧುಗಳು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮಡಿಕೇರಿ ಜ.10 NEWS DESK : ನಗರದ ಮೈತ್ರಿ ಭವನದ ಬಳಿ ನೂತನವಾಗಿ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಿರುವ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭ ಹಳೆ ರೈಫಲ್ ರೇಂಜ್ ವಸತಿ ಗೃಹಗಳ ಸಮುಚ್ಚಯಕ್ಕೆ ಭೇಟಿ ನೀಡಿ ಅಲ್ಲಿರುವ ಸಿಬ್ಬಂದಿ ಕುಟುಂಬದವರೊಂದಿಗೆ ಮಾತನಾಡಿ ಮೂಲಭೂತ ಸೌಕರ್ಯ ಮತ್ತು ಸಮಸ್ಯೆಗಳ ಬಗ್ಗೆ ಆಲಿಸಿದರು.
ಮಡಿಕೇರಿ ಜ.10 NEWS DESK : ಬಾಳೆಲೆ ವಿಜಯಲಕ್ಷ್ಮಿ ವಿದ್ಯಾ ಸಂಸ್ಥೆಯಲ್ಲಿ 1997- 1998ನೇ ಶೈಕ್ಷಣಿಕ ವರ್ಷಗಳಲ್ಲಿ ವ್ಯಾಸಂಗ ಮುಗಿಸಿದ ಹಳೆಯ ಹಳೇಯ ವಿದ್ಯಾರ್ಥಿಗಳಿಂದ ಶಾಲಾಭಿವೃದ್ಧಿಗೆ ಆರ್ಥಿಕ ನೆರವು ನೀಡ ಲಾಯಿತು. ವಿದ್ಯಾರ್ಥಿಗಳಾದ ಶಿವದಾಸನ್, ವನಿತಾ, ಸುಂದರ, ಶಿವಪ್ಪ, ಮುಕುಂದ, ಅಶ್ವಿನಿ , ವಸಂತಿ, ಅರವಿಂದ, ಪವನ್, ಮಂಜುನಾಥ್, ಬೀಮಣಿ ಬಾಳೆಲೆ ಸೆಂಟರ್ ಎಜ್ಯುಕೇಶನ್ ಸೊಸೈಟಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದನ್ನು ಪ್ರೋತ್ಸಾಹಿಸಲು 20,250ರೂ. ಗಳ ಧನ ಸಹಾಯವನ್ನು ನೀಡಿದರು. ಈ ಸಂದರ್ಭ ಮಾತನಾಡಿದ ಹಳೇಯ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಮಂಜುನಾಥ್, ನಾವು ಈಗ ನೀಡಿದ ಅರ್ಥಿಕ ನೆರವಿನ ರೀತಿಯಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ವ್ಯಾಸಾಂಗ ಮಾಡಿ ಭವಿಷ್ಯದಲ್ಲಿ ಕಷ್ಟದಲ್ಲಿ ಇರುವವರಿಗೆ ನೆರವು ನೀಡಿ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕರಿಸುವಂತೆ ಕರೆ ನೀಡಿದರು. ವಿದ್ಯಾಸಂಸ್ಥೆಯ ಪರವಾಗಿ ಹಿರಿಯ ಸಹಾಯಕ ಅಧ್ಯಾಪಕರಾದ ಚಂದ್ರಶೇಖರ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಗದನ್ನು ಸ್ವೀಕರಿಸಿದರು.
ವಿರಾಜಪೇಟೆ ಜ.10 NEWS DESK : ಜೀವನದಲ್ಲಿ ನಮ್ಮ ಮನಸ್ಸಿನ ಯೋಚನೆ, ಉತ್ತಮವಾದ ಚಿಂತನೆಗಳೇ ಎಲ್ಲದಕ್ಕೂ ಕಾರಣವಾಗುತ್ತವೆ. ನಾವು ಯೋಚಿಸುವ ರೀತಿ, ನಡೆಯುವ ಮಾರ್ಗ ಸೂಕ್ತವಾಗಿದ್ದರೆ ನಮ್ಮ ಬದುಕು ಉತ್ತಮವಾಗಿರುತ್ತದೆ ಎಂದು ಶ್ರೀ ಕ್ಷೇತ್ರ ಕರ್ಕಿ ದೈವಜ್ಞ ಬ್ರಾಹ್ಮಣ ಮಠದ ಜ್ಞಾನೇಶ್ವರಿ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ನುಡಿದರು. ವಿರಾಜಪೇಟೆಯ ನಿಸರ್ಗ ಬಡಾವಣೆಯ ದೈವಜ್ಞ ಬ್ರಾಹ್ಮಣ ಸಮಾಜದಲ್ಲಿ ದಕ್ಷಿಣ ಕೊಡಗು ದೈವಜ್ಞ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದೈವಜ್ಞ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಸ್ವಾಮಿಜಿಗಳು, ನಾಲ್ಕು ದಶಕಗಳ ಹಿಂದೆ ದೈವಜ್ಞ ಸಮಾಜ ತೀರಾ ಹಿಂದುಳಿದಿತ್ತು. ಸಾಮಾಜಿಕ, ಶೈಕ್ಷಣಿಕವಾಗಿ ಬೆಳೆಯಬೇಕೆಂಬ ಸಂಕಲ್ಪ, ಶ್ರಮದಿಂದ ಈಗ ಉತ್ತಮ ಪ್ರಗತಿ ಕಂಡಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಮೋಹದಲ್ಲಿ ನಮ್ಮತನ ಕಳೆದುಕೊಳ್ಳಬಾರದು. ಮಕ್ಕಳಿಗೆ ಸನಾತನ ಪರಂಪರೆಯ ಸಂಸ್ಕಾರ ನೀಡುವ ಹೊಣೆ ಪಾಲಕರದ್ದು ಎಂದ ಶ್ರೀಗಳು, ಸಮಾಜ ಬಾಂಧವರೆಲ್ಲರೂ ಸಂಘಟಿತರಾಗಿ ಶ್ರಮಿಸಿದರೆ ಅದು ಅಸಾಧ್ಯವೇನಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಆಸ್ತಿ,…
ಮಡಿಕೇರಿ ಜ.10 NEWS DESK : ಪುಟ್ಟ ಮಕ್ಕಳು ಮನೆಗಿಂತ ಹೆಚ್ಚಾಗಿ ಅಂಗನವಾಡಿಗಳಲ್ಲಿಯೇ ಪಾಲನೆಯಾಗುತ್ತಿರುವ ಈ ದಿನಗಳಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುವಲ್ಲಿ ಅಂಗನವಾಡಿ ಕಾಯ೯ಕತೆ೯ಯರ ಪಾತ್ರ ಮಹತ್ವದ್ದು ಎಂದು ಮಡಿಕೇರಿ ನಗರಸಭೆಯ ಅಧ್ಯಕ್ಷೆ ಕಲಾವತಿ ಹೇಳಿದ್ದಾರೆ. ನಗರದ ರೆಡ್ ಕ್ರಾಸ್ ಭವನದಲ್ಲಿ ಭಾರತೀಯ ರೆಡ್ ಕ್ರಾಸ್ ನ ಕೊಡಗು ಘಟಕದಿಂದ ಆಯೋಜಿತ ಮಡಿಕೇರಿ ತಾಲೂಕಿನ ಅಂಗನವಾಡಿಗಳ ಸಾಧಕ ಕಾಯಕತೆ೯ಯರಿಗೆ ಸನ್ಮಾನ ಕಾಯ೯ಕ್ರಮ ಉದ್ಗಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ, ಪ್ರೀತಿ, ಬುದ್ದಿಯನ್ನು ಅಂಗನವಾಡಿಗಳಲ್ಲಿ ಕಾಯ೯ಕತೆ೯ಯರು ಕಲಿಸಬೇಕು. ಅಂಗನವಾಡಿ ಶಿಕ್ಷಕಿಯರು ಮಕ್ಕಳ ಪಾಲಿಗೆ ದೇವರ ಸಮಾನವಾಗಿದ್ದು ಇಂಥ ಮಕ್ಕಳನ್ನು ಹೆಚ್ಚಿನ ಮಮತೆಯಿಂದ ಬಾಲ್ಯದಲ್ಲಿ ಬೆಳೆಸಬೇಕೆಂದು ಕಲಾವತಿ ಕಿವಿ ಮಾತು ಹೇಳಿದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈರಾಜೇಶ್ ಮಾತನಾಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕಾಯ೯ವೈಖರಿ ಶ್ಲಾಘನೀಯವಾಗಿದೆ. ಕೊಡಗಿನಲ್ಲಿಯೂ ಮಳೆಗಾಲದಲ್ಲಿ ಕಾಳಜಿ ಕೇಂದ್ರದ ಮೂಲಕ ರೆಡ್ ಕ್ರಾಸ್ ನಿರಾಶ್ರಿತರಿಗೆ ನೆರವಾಗುತ್ತಾ ಅಗತ್ಯವಿದ್ದಲೆಲ್ಲಾ ಕಷ್ಯದಲ್ಲಿದ್ದವರಿಗೆ ನೆರವಾಗುತ್ತಿದೆ ಎಂದರು. ಅಂಗನವಾಡಿ ಕಾಯ೯ಕತೆ೯ಯರ…
ಮಡಿಕೇರಿ NEWS DESK ಜ.10 : ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದು ‘ಫ್ರೆಂಡ್ ರಿಕ್ವೆಸ್ಟ್’ ಕಳುಹಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರು ಪ್ರತಿಕ್ರಿಯೆ ನೀಡಬಾರದು ಎಂದು ಮಡಿಕೇರಿ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಕೊಡಗು ಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡ ಬಿಂದುಮಣಿ ಅವರ ಹೆಸರನ್ನು ದುರ್ಬಳಕೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಿಂದು ಮಣಿ ಐಪಿಎಸ್, ಎಸ್‌ಪಿ ಕೊಡಗು ಡಿಸ್ಟ್ರಿಕ್ಟ್ ಎಂದು ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಹಲವರಿಗೆ ‘ಫ್ರೆಂಡ್ ರಿಕ್ವೆಸ್ಟ್’ ಕಳುಹಿಸಲಾಗಿದೆ. ಜ.9 ರಂದು ಇದು ವ್ಯಾಪಕವಾಗಿದ್ದು, ಹಲವು ಪತ್ರಕರ್ತರು ಹಾಗೂ ಪ್ರಮುಖ ವ್ಯಕ್ತಿಗಳಿಗೂ ‘ರಿಕ್ವೆಸ್ಟ್’ ಹೋಗಿದೆ. ಕೆಲವರು ಸಂಶಯಗೊಂಡು ಪ್ರೊಫೈಲ್ ಪರಿಶೀಲಿಸಿದಾಗ ಲಾಕ್ ಆಗಿರುವುದು ಕಂಡು ಬಂದಿದೆ. ಮತ್ತೆ ಕೆಲವರು ‘ಫ್ರೆಂಡ್ ರಿಕ್ವೆಸ್ಟ್’ ಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ವಿಚಾರ ಮಡಿಕೇರಿ ಪೊಲೀಸರ ಗಮನಕ್ಕೆ ಬಂದಿದ್ದು, ಇದೊಂದು ನಕಲಿ ಫೇಸ್ ಬುಕ್ ಖಾತೆ ಎಂದು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು…
ಮಡಿಕೇರಿ ಜ.10 NEWS DESK : ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಜ.18 ರಂದು ನಡೆಯಲಿರುವ “ಸಂಕ್ರಾಂತಿ ಸಂಭ್ರಮ” ಕ್ರಿಕೆಟ್ ಪಂದ್ಯಾವಳಿಯ ಲೋಗೋ ಅನಾವರಣ ನಡೆಯಿತು. ಸುಂಟಿಕೊಪ್ಪ ಸಮೀಪದ 7 ನೇ ಹೊಸಕೋಟೆಯಲ್ಲಿರುವ ನೇಚರ್ ಪಾರ್ಕ್ ಹೋಂ ಸ್ಟೇಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಲೋಗೋ ಅನಾವರಣ ಮಾಡಲಾಯಿತು. ಈ ಸಂದರ್ಭ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ., ಸ್ಥಾಪಕಾಧ್ಯಕ್ಷ ಎಸ್.ಎ.ಮುರಳೀಧರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಖಜಾಂಚಿ ಟಿ.ಕೆ.ಸಂತೋಷ್, ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಿ.ವಿ. ರವಿಕುಮಾರ್, ಕಾರ್ಯದರ್ಶಿ ಅರುಣ್ ಕೂರ್ಗ್ ಸೇರಿದಂತೆ ಸಂಘದ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಜ.18 ರ ಭಾನುವಾರದಂದು ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲ್ಪಟ್ಟಿರುವ “ಸಂಕ್ರಾಂತಿ ಸಂಭ್ರಮ” ಕ್ರಿಕೆಟ್ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ (ರಾಜಕಾರಣಿಗಳು) ಶಾಸಕಾಂಗ ವರ್ಸಸ್ (ಅಧಿಕಾರಿ ವರ್ಗ) ಕಾರ್ಯಾಂಗದ ನಡುವೆ ಸೌಹಾರ್ದ ಪಂದ್ಯಾವಳಿ ನಡೆಯಲಿದೆ. ಪಂದ್ಯಾವಳಿಯಲ್ಲಿ ಕೊಡಗು ಪತ್ರಕರ್ತರ ಸಂಘದ ” ಹೊನ್ನು, ಸುಗ್ಗಿ, ಸಿರಿ, ಸಮೃದ್ಧಿ” ಹೆಸರಿನ…
ಮಡಿಕೇರಿ ಜ.10 NEWS DESK : ಶನಿವಾರಸಂತೆ ಮತ್ತು ಸೋಮವಾರಪೇಟೆ ಠಾಣೆಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಠಾಣೆಗಳ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರೊಂದಿಗೆ ಸಭೆ ನಡೆಸಿದರು. ನಂತರ ಠಾಣಾ ವ್ಯಾಪ್ತಿಯ ಕಾನೂನು ಸುವ್ಯವಸ್ಥೆ, ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡುವುದು ಮುಂತಾದ ವಿಷಯಗಳ ಬಗ್ಗೆ ಸೂಕ್ತ ನಿರ್ದೇಶನಗಳನ್ನು ನೀಡಿದರು.
ಮಡಿಕೇರಿ ಜ.10 NEWS DESK : ವಿಜಯಲಕ್ಷ್ಮಿ ವಿದ್ಯಾ ಸಂಸ್ಥೆಯಲ್ಲಿ 1997 ರಿಂದ 2002ರ ವರೆಗೆ ಪ್ರೌಢ ಮತ್ತು ಪಿಯುಸಿ ವ್ಯಾಸಂಗವನ್ನು ಮುಗಿಸಿದ ಹಳೇಯ ವಿದ್ಯಾರ್ಥಿಗಳಿಂದ ಶಾಲಾಭಿವೃದ್ಧಿಗೆ ಆರ್ಥಿಕ ನೆರವು ನೀಡಲಾಯಿತು. ಹಳೇ ವಿದ್ಯಾರ್ಥಿಗಳಾದ ಉಷಾರಾಣಿ, ಸಿ.ಜೆ.ಉಷಾ, ಟಿ.ಕೆ.ಮಾಲತಿ, ಪಟ್ಟಡ ಬೋಪಯ್ಯ, ಎ.ಎ.ಸೋಮಯ್ಯ, ಯಂ.ಕೆ.ಕುಮಾರ, ಯಂ.ಸಂತೋಷ್, ಕೆ.ವಿ.ಸುಷ್ಮಿತಾ, ಪಿ.ಪಿ.ಸೌಮ್ಯ, ಎನ್.ಆರ್.ಸಜಿತಾ, ಹೆಚ್.ಆರ್.ನಂದಿನಿ, ಎಂ.ಜಿ.ಮಿನೋದ್, ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜಯಮ್ಮ ವಿಜಯಲಕ್ಷ್ಮಿ ಪ್ರೌಢ ಶಾಲಾ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಂಪ್ಯೂಟರ್ ಶಿಕ್ಷಣ ನೀಡುವ ಸಲುವಾಗಿ 12000ರೂ.ಗಳ ಧನ ಸಹಾಯವನ್ನು ನೀಡಿದರು. ವಿದ್ಯಾಸಂಸ್ಥೆಯ ಪರವಾಗಿ ಉಪ ಹಿರಿಯ ಸಹಾಯಕ ಅಧ್ಯಾಪಕರುಗಳಾದ ಬೆನಡಿಕ್ಟ್ ಫರ್ನಾಂಡಿಸ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಗದನ್ನು ಸ್ವೀಕರಿಸಿದರು.






