“ಎಲ್ಲಾ ಆಡಂಬರಗಳಿಂದ ಮುಕ್ತರಾಗಿ, ಸರಳ ಮನಸ್ಸಿನಿಂದ ಶಿವನನ್ನು ನೆನದು, ಭಜಿಸಿ ಶಿವರಾತ್ರಿಯನ್ನು ಆಚರಿಸೋಣ. ಸರಳತೆ, ಪ್ರಾಮಾಣಿಕತೆ, ಸತ್ಯ ಮತ್ತು ಶಕ್ತಿಯ ದೇವತೆ ಈಶ್ವರ ಲೋಕದಲ್ಲಿರುವ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡಲಿ” ಎಲ್ಲರಿಗೂ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. (ತೇಲಪಂಡ ಶಿವಕುಮಾರ್ ನಾಣಯ್ಯ, ಸಂಚಾಲಕರು, ಕೊಡಗು ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ)
ಲೇಖಕ: admin
“ಮಹಾ ಶಿವನು ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸಲಿ” ಕೊಡಗಿನ ಸರ್ವ ಜನತೆಗೆ ಮಹಾಶಿವರಾತ್ರಿಯ ಶುಭಾಶಯಗಳು (ಪಿ.ಯು.ಕವನ್ ಕಾವೇರಪ್ಪ, ಪ್ರಧಾನ ಕಾರ್ಯದರ್ಶಿ, ಬಿಜೆಪಿ ಮಡಿಕೇರಿ ನಗರ ಮಂಡಲ)
“ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ ಅಮೃತೇಶಾಯ ಸರ್ವಾಯ ಮಹಾದೇವಾಯ ತೇ ನಮ:” ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು (ಪ್ರತಾಪ್ ಸಿಂಹ, ಸಂಸದರು, ಮೈಸೂರು, ಕೊಡಗು ಲೋಕಸಭಾ ಕ್ಷೇತ್ರ)
“ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿ ವರ್ಧನಂ ಉರ್ವಾರುಕ ಮಿವ ಬಂಧನಾನ್ ಮೃತ್ಯೋರ್‌ಮುಕ್ಷೀಯಮಾಮೃತಾತ್” ಸರ್ವರಿಗೂ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು ಮಹೇಶ್ ತಿಮ್ಮಯ್ಯ, ಜಿಲ್ಲಾಧ್ಯಕ್ಷರು, ಬಿಜೆಪಿ ಯುವ ಮೋರ್ಚಾ, ಕೊಡಗು ಜಿಲ್ಲೆ)
“ಕರಚರಣಕೃತಂ ವಾ ಕಾಯಜಂ ಕರ್ಮಜಂ ವಾ ಶ್ರವಣನಯನಜಂ ವಾ ಮಾನಸಾಪರಾಧಂ ವಾ ವಿಹಿತಂ ವಿಹಿತಂ ವಾ ಸರ್ವಮೇತತ್ ಕ್ಷಮಸ್ವ ಜಯ ಜಯ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ” ಸಮಸ್ತ ಜನತೆಗೆ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು (ಪಾಂಡಿರ ಪೂಣಚ್ಚ, ಅಧ್ಯಕ್ಷರು, ಮಡಿಕೇರಿ ನಗರ ಬಿಜೆಪಿ ಯುವ ಮೋರ್ಚಾ)
“ಓಂ ತತ್‌ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರ: ಪ್ರಚೋದಯಾತ್” ಸರ್ವರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು* (ಪ್ರಶಾಂತ್ ಭೀಮಯ್ಯ, ಕಾರ್ಯದರ್ಶಿ, ಕೊಡಗು ಜಿಲ್ಲಾ ಬಿಜೆಪಿ)
“ಓಂ ನಮೋ ಭಗವತೇ ರುದ್ರಾಯ” “ಓಂ ನಮಃ ಶಿವಾಯ” ನಿಮಗೆಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು* (ಚೆಪ್ಪುಡಿರ ರಾಕೇಶ್ ದೇವಯ್ಯ, ಅಧ್ಯಕ್ಷರು, ಕಿರುಗೂರು ಗ್ರಾಮ ಪಂಚಾಯಿತಿ, ವಕ್ತಾರರು, ಬಿಜೆಪಿ ವಿರಾಜಪೇಟೆ ಮಂಡಲ)
ಮಡಿಕೇರಿ ಮಾ.7 NEWS DESK : ಕೆಲವು ತಿಂಗಳುಗಳ ಹಿಂದೆ ಬಸ್ ಅಪಘಾತದಿಂದ ಹಾನಿಗೊಳಗಾಗಿದ್ದ ವೀರಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆಗೆ ಈಗ ಹೊಸ ಮೆರುಗು ಬಂದಿದೆ. ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ಮೈಸೂರಿಗೆ ತೆರಳಿ ಪ್ರತಿಮೆಯನ್ನು ಪರಿಶೀಲಿಸಿದರು. ಮಾ.8 ರಂದು ಪ್ರತಿಮೆ ಮೈಸೂರಿನಿಂದ ಮಡಿಕೇರಿಗೆ ಬರಲಿದ್ದು, ಅದ್ದೂರಿ ಸ್ವಾಗತ ದೊರೆಯಲಿದೆ. ನಂತರ ಅಭಿವೃದ್ಧಿಗೊಂಡಿರುವ ನೂತನ ವೃತ್ತದಲ್ಲಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಅನಾವರಣಗೊಳ್ಳಲಿದ್ದು, ಸಕಲ ಗೌರವ ಸಲ್ಲಿಸಲಾಗುವುದು ಎಂದು ಅನಿತಾ ಪೂವಯ್ಯ ತಿಳಿಸಿದ್ದಾರೆ.
ಮಡಿಕೇರಿ ಮಾ.7 NEWS DESK : ಕಾವೇರಿ ನದಿಗೆ ಸ್ನಾನಕ್ಕಿಳಿದ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹಳೆ ಕೂಡಿಗೆ ಬಳಿ ನಡೆದಿದೆ. ಚಿಕ್ಕತ್ತೂರಿನ ಶ್ರೀನಿವಾಸ್ ಅಲಿಯಾಸ್ ಅಪ್ಪು(24), ಕಣಿವೆಯ ಹಕ್ಕೆ ಸಚಿನ್(23) ಹಾಗೂ ಮುಳ್ಳುಸೋಗೆ ಜನತಾಕಾಲನಿ ವಿನೋದ್(24) ಎಂಬುವವರೇ ಮೃತ ದುರ್ದೈವಿಗಳಾಗಿದ್ದಾರೆ. ಐವರು ಸ್ನೇಹಿತರು ಕಾವೇರಿ ನದಿ ಬಳಿ ಕಾರು ನಿಲ್ಲಿಸಿ ಸ್ನಾನಕ್ಕೆ ತೆರಳಿದ ಸಂದರ್ಭ ಓರ್ವ ಆಳವಾದ ಪ್ರದೇಶದಲ್ಲಿ ಮುಳುಗಿದ್ದಾನೆ. ಆತನನ್ನು ರಕ್ಷಿಸಲು ತೆರಳಿದ ಮತ್ತೋರ್ವ ಮುಳುಗುವುದನ್ನು ನೋಡಿ ರಕ್ಷಿಸಲು ಇನ್ನೊಬ್ಬ ಸ್ನೇಹಿತ ಮುಂದಾದ ಸಂದರ್ಭ ಮೂವರೂ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಕುಶಾಲನಗರ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹಾಗೂ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಶೋಧ ಕಾರ್ಯ ನಡೆಸಿದರು. ಈ ವೇಳೆ ಶ್ರೀನಿವಾಸ್ ದೇಹ ಪತ್ತೆಯಾಗಿದ್ದು, ಕುಶಾಲನಗರ ಆಸ್ಪತ್ರೆಗೆ ಸಾಗಿಸಿದ ಸಂದರ್ಭ ಆತ ಮೃತಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿದ್ದಾರೆ. ಇನ್ನುಳಿದ ಇಬ್ಬರ ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಈ ಘಟನೆ ಮಧ್ಯಾಹ್ನದ ವೇಳೆ ನಡೆದಿದ್ದು,…
ಮಡಿಕೇರಿ ಮಾ.7 NEWS DESK : ವಿರಾಜಪೇಟೆ ವಿಧಾಸಭಾ ಕೇತ್ರದ ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು. ಪೆರಾಜೆ ಗ್ರಾ.ಪಂ ಕಚೇರಿಯಲ್ಲಿ ಪಂಚಾಯತ್ ವ್ಯಾಪ್ತಿಯ ಪುತ್ಯ ಪೆರಾಜೆ ಶಾಲೆಯ ಪಕ್ಕದಿಂದ ನಿಡ್ಯಮಲೆ ಲಿಂಕ್ ರಸ್ತೆಯ ಅಭಿವೃದ್ಧಿ, ಪೆರಂಗಾಜೆ ಕುಟುಂಬಸ್ಥರ ರಸ್ತೆ ಅಭಿವೃದ್ಧಿ, ಕುಂಡಾದು ರಸ್ತೆಯ ಪೀಚೆ ಕುಟುಂಬಸ್ಥರ ಮನೆಯ ಹತ್ತಿರ ರಸ್ತೆ ಅಭಿವೃದ್ಧಿ, ಪೇತಾಜೆ – ಪುಲ್ಲಾಜೆ ರಸ್ತೆ ಅಭಿವೃದ್ಧಿ, ಬಂಗಾರಕೋಡಿ – ಚಾಮಕಜೆ ಗಿರಿಜನ ಕಾಲೋನಿ ರಸ್ತೆ ಅಭಿವೃದ್ಧಿ, ಕನ್ನಡ ಪೆರಾಜೆ ರಸ್ತೆ ಅಭಿವೃದ್ಧಿ, ವ್ಯಯಾನಾಟು ಕುಲವಾನ್ ದೇವಸ್ಥಾನ ಅಭಿವೃದ್ಧಿ, ಪುತ್ಯ ಉಳ್ಳಾಕುಲು ದೇವಸ್ಥಾನದ ತಡೆ ಗೋಡೆ ನಿರ್ಮಾಣ, ಅಡ್ಕ ಕುಟುಂಬಸ್ಥರ ಐನ್ ಮನೆ ಪಕ್ಕ ತಡೆಗೋಡೆ, ಪೆರಂಗಾಜೆ ಕುಟುಂಬಸ್ಥರ ಐಎನ್ ಮನೆ ಅಭಿವೃದ್ಧಿ, ಪೆರಾಜೆ ಮಸೀದಿಯ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು. ಇದಕ್ಕು ಮೊದಲು ಚೆಂಬು…






