ವಿರಾಜಪೇಟೆ ಮಾ.2 NEWS DESK : ವಿರಾಜಪೇಟೆ ಚಿಕ್ಕಪೇಟೆಯಲ್ಲಿರುವ ಜಯಪ್ರಕಾಶ್ ನಾರಾಯಣ ಸ್ಮಾರಕ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಬಿ.ಎಸ್.ಲಾಲ್ ಕುಮಾರ್ ಅವರಿಗೆ ಶಾಲಾ ಆಡಳಿತ ಮಂಡಳಿ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಪ್ರಮುಖರು ಹಾಗೂ ಶಿಕ್ಷಕರು ಫಲ, ತಂಬೂಲ ನೀಡಿ ಸನ್ಮಾನಿಸಿ ಬೀಳ್ಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಜಯಪ್ರಕಾಶ್ ನಾರಾಯಣ ಪ್ರೌಢಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ತ್ರಿಶು ಗಣಪತಿ ಲಾಲ್ ಕುಮಾರ್ ಅವರು ಮುಖ್ಯ ಶಿಕ್ಷಕರಾಗಿ ವಿದ್ಯಾರ್ಥಿಗಳನ್ನು ಉತ್ತಮ ಪ್ರೀತಿ, ವಾತ್ಸಲ್ಯದಿಂದ ಕಾಣುತ್ತ ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ಭಾಗವಹಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದರು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪ್ರಕಾಶ್ ಮಾತನಾಡಿ, ಲಾಲ್ ಕುಮಾರ್ ಅವರ ಸೇವೆ ವಿದ್ಯಾರ್ಥಿಗಳಿಗೆ ಅವಶ್ಯವಾಗಿದ್ದು, ಈ ಅನುದಾನಿತ ಶಾಲೆಗೆ 2021-22 ರಲ್ಲಿ ಇವರ ಅವಧಿಯಲ್ಲಿ ಸ್ವಚ್ಚ ವಿದ್ಯಾಲಯ ಎಂಬ ಪುರಸ್ಕಾರ ದೊರಕಿದ್ದು ಶ್ಲಾಘಿಸಿಯ ಎಂದರು. ಸನ್ಮಾನ ಸ್ವಿಕರಿಸಿದ ಲಾಲ್‍ಕುಮಾರ್ ಮಾತನಾಡಿ ಶಿಕ್ಷಕ ವೃತ್ತಿಯಲ್ಲಿ ಸಾಗಿಬಂದ…
ಲೇಖಕ: admin
ವಿರಾಜಪೇಟೆ ಮಾ.2 NEWS DESK : ವನದೇವರುಗಳ ಆರಾಧನೆ ಮತ್ತು ಕುಲ ಕುಟುಂಬಗಳ ಆರಾಧನಾ ಪದ್ಧತಿಗಳು ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ನಿಟ್ಟಿನಲ್ಲಿ ಮೂರೀರ ಕುಟುಂಬದ ವಾರ್ಷಿಕ ತೆರೆ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಗ್ರಾ.ಪಂ ವ್ಯಾಪ್ತಿಯ ಬಾಳುಗೋಡು ಗ್ರಾಮದಲ್ಲಿ ನೆಲೆಸಿರುವ ಮೂರೀರ ಕುಟುಂಬದ ಅಧೀನದಲ್ಲಿರುವ ಮಂದ್ರಮೂರ್ತಿ, ವಿಷ್ಣು ಮೂರ್ತಿ ಮತ್ತು ಕಾಳೇಘಾಟು ದೇವಿಯ ದೇಗುಲದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ನಡೆಯಿತು. ದೇಗುಲ ಆವರಣದಲ್ಲಿ ನಡೆಯುವ ಉತ್ಸವವನ್ನು ಕೇರಳ ರಾಜ್ಯದ ಕಾಳೇಘಾಟ್ ಸ್ಥಳದ ಪ್ರಸಿದ್ಧ ತಂತ್ರಿಗಳಾದ ಸಂದೀಪ್ ತಂತ್ರಿಗಳಿಂದ ಗಣಪತಿ ಹೋಮ ಮತ್ತು ದೈವಿಕ ವಿಧಾನಗಳನ್ನು ನಡೆಸಲಾಯಿತು. ಬಳಿಕ ದೇವಿ ಮತ್ತು ಶಾಸ್ತವು, ಮಂದ್ ಅಜ್ಜಪ್ಪ ದೇವರಿಗೆ ವಿಶೇಷ ಅಲಂಕಾರ ಪೂಜೆ, ಮಹಾಪೂಜೆ ಸಲ್ಲಿಸಲಾಯಿತು. ಪ್ರಥಮ ದಿನದಂದು ಕಾರಣ ತೆರೆ, ಮಾ.ತೆರೆ, ನುಚ್ಚುಟ್ಟೆ ತೆರೆಗಳು ಮುಂಜಾನೆ ಯ ವರೆಗೂ ನಡೆದು ಮರು ದಿನ ಚೌಂಡಿ ತೆರೆ,ಕುಳಿಯ ತೆರೆ, ತೌಡು ತೆರೆ, ಶಾಸ್ತಾವು ತೆರೆ…
ಮಡಿಕೇರಿ ಮಾ.2 NEWS DESK : ಸಕಾಲದಲ್ಲಿ ವೇತನ ಪಾವತಿಸುವಂತೆ ಒತ್ತಾಯಿಸಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರ ಪ್ರತಿಭಟನೆ ಮೂರನೇ ದಿನವೂ ಮುಂದುವರೆದಿದೆ. ಕಾಲೇಜಿನ ಅತಿಥಿ ಉಪನ್ಯಾಸಕರ ಬೇಡಿಕೆಗೆ ಯಾವುದೇ ಸಕಾರಾತ್ಮಕ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಮೂರನೇ ದಿನಕ್ಕೆ ಮುಂದುವರಿದ್ದು, ವೇತನ ಪಾವತಿಸುವವರೆಗೆ ತರಗತಿಗೆ ತೆರಳುವುದಿಲ್ಲ ಎಂದು ಹೇಳಿದರು.
ಮೈಸೂರು, ಮಾ.7 NEWS DESK : ಸ್ಫೋಟಕ ಇಟ್ಟು ಹೋಗಿದ್ದ ಆರೋಪಿಯ ಪತ್ತೆ ಹಚ್ಚುವ ಕಾರ್ಯ ಚುರುಕಾಗಿ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು. ಸ್ಫೋಟವಾಗಿರುವುದು ನಿಜ. ಆರೋಪಿ ಮಾಸ್ಕ್ ಮತ್ತು ಟೋಪಿ ಧರಿಸಿ ಬಸ್ಸಿನಲ್ಲಿ ಬಂದು ತಿಂಡಿ ತಿಂದು ನಂತರ ಸ್ಫೋಟಕವುಳ್ಳ ಬ್ಯಾಗ್ ಇಟ್ಟು ತೆರಳಿದ್ದಾನೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಪಮುಖ್ಯಮಂತ್ರಿ , ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಂದು ನಾನೂ ಕೂಡ ಸ್ಥಳಕ್ಕೆ ತೆರಳಲಿದ್ದೇನೆ ಎಂದರು. ಮಂಗಳೂರು ಕುಕ್ಕರ್ ಬಾಂಬ್ ಹಾಗೂ ಈ ಸ್ಫೋಟಕ್ಕೂ ಸಾಮ್ಯತೆ ಇರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ತನಿಖೆ ನಡೆಯುತ್ತಿದೆ ಎಂದರು. ಅಲ್ಪಸಂಖ್ಯಾತರ ತುಷ್ಟೀಕರಣದಿಂದಾಗಿ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ಬಿಜೆಪಿ ನಾಯಕರು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ರಾಜಕೀಯವಾದ ಹೇಳಿಕೆ ನೀಡಿದ್ದಾರೆ. ಅವರ ಕಾಲದಲ್ಲಿಯೂ ಬಾಂಬ್ ಸ್ಪೋಟವಾಗಿದೆ. ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟವಾದಾಗ ಏನು ಮಾಡಿದ್ದರು? ಆಗಲೂ ತುಷ್ಟೀಕರಣದಿಂದಾಗಿ ಆಗಿತ್ತೇ…
ಮಡಿಕೇರಿ ಮಾ.2 NEWS DESK : ನೂತನವಾಗಿ ನಿರ್ಮಾಣ ಗೊಂಡಿರುವ ಆಸ್ಪತ್ರೆಯ ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಕೊಲ್ಕತ್ತ ಮೂಲದ ಕಾರ್ಮಿಕ ರಾಕಿಬ್ (22) ಮೃತ ದುರ್ದೈವಿ. ರಾಕಿಬ್ ಮುಂಜಾನೆ ಆಸ್ಪತ್ರೆ ಕಿಟಕಿ ಕೆಲಸ ಮಾಡಲು ಮುಂದಾಗಿದ್ದ ಸಂದರ್ಭ ಹೊರ ಭಾಗದಲ್ಲಿ ಹಾಕಿದ್ದ ಸ್ಟೇಜ್‌ನಿಂದ ಬಿದ್ದಿದ್ದಾರೆ. 30 ಅಡಿ ಎತ್ತರದಿಂದ ಸಿಮೆಂಟ್ ನೆಲಕ್ಕೆ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಶವಗಾರಕ್ಕೆ ರವಾನಿಸಿದ್ದಾರೆ. ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದೇ ಈ ಅನಾಹುತಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಮಡಿಕೇರಿ ಮಾ.2 NEWS DESK : ಟೀಮ್ ಬ್ರದರ್ಸ್ ವತಿಯಿಂದ ಮಾ.3 ರಂದು ಕ್ರೀಡಾಪಟು ದಿವಂಗತ ಧರ್ಮ ಅವರ ಮೂರನೇ ವರ್ಷದ ಜ್ಞಾಪಕರ್ಥವಾಗಿ ಲೀಗ್ ಮಾದರಿಯ ವಾಲಿಬಾಲ್ ಪಂದ್ಯವಳಿ ನಡೆಯಲಿದೆ. ಮಡಿಕೇರಿಯ ಗಾಂಧಿ ಮೈದಾನದಲ್ಲಿ ಪಂದ್ಯವಳಿ ನಡೆಯಲಿದ್ದು,ವಿಜೇತ ತಂಡಕ್ಕೆ 60 ಸಾವಿರ ನಗದು ಹಾಗೂ ಆಕರ್ಷಕ ಟ್ರೊಫಿ, ರನ್ನರ್ಸ್ ತಂಡಕ್ಕೆ 40 ಸಾವಿರ ನಗದು ಹಾಗೂ ಆಕರ್ಷಕ ಟ್ರೊಫಿ, ತೃತೀಯ ಬಹುಮಾನವಾಗಿ ಹತ್ತು ಸಾವಿರ ನಗದು ಹಾಗೂ ಆಕರ್ಷಕ ಟ್ರೊಫಿ, ನಾಲ್ಕನೇಯ ಬಹುಮಾನವಾಗಿ ಆಕರ್ಷಕ ಟ್ರೊಫಿ ಸಿಗಲಿದ್ದು ಹಾಗೆಯೆ ವೈಯಕ್ತಿಕ, ಟ್ರೊಫಿಗಳು ಕೂಡ ಕ್ರೀಡಾಪಟುಗಳಿಗೆ ನೀಡಲಾಗುವುದು. ಒಟ್ಟು 9 ತಂಡಗಳನ್ನು ಒಳಗೊಂಡ, ಟೀಮ್ ಭಗವತಿ, ಟೀಮ್ ಧರ್ಮ, ಡಿ ಎಸ್ ಆರ್ ಎಂ, ತುಷಾರ್ ಫ್ರೆಂಡ್ಸ್, ಮನ್ವಿತ್ ಫ್ರೆಂಡ್ಸ್, ಟೀಮ್ 14, ಟೀಮ್ ಡಿ. ಸಿ, ಟೀಮ್ ಫಾರ್ಮರ್ಸ್, ಹಿಲ್ ವ್ಯೂ ಬಾಯ್ಸ್ ತಂಡದ ನಡುವೆ ಲೀಗ್ ಮಾದರಿಯ ಪಂದ್ಯಗಳು ನಡೆಯಲಿವೆ ಎಂದು ಆಯೋಜಕರಗಿರುವ, ರವಿ, ನಂದೀಶ್, ರಾಜೇಶ್, ರಮೇಶ್ ಪ್ರಕಟಣೆಯಲ್ಲಿ…
ಸೋಮವಾರಪೇಟೆ ಮಾ.2 NEWS DESK : ಚಿಕ್ಕಮಗಳೂರು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಹಾಗೂ ಚಿಕ್ಕಮಗಳೂರು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಹಿರಿಯರ ರಾಜ್ಯಮಟ್ಟದ ಮ್ಯಾರಥಾನ್‍ನಲ್ಲಿ ಶಾಂತಳ್ಳಿಯ ಗಿರಿಜಾ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 50 ರಿಂದ 60 ವರ್ಷ ವಯೋಮಾನದ ರಾಜ್ಯಮಟ್ಟದ ಮ್ಯಾರಥಾನ್‍ನಲ್ಲಿ ಭಾಗವಹಿಸಿದ್ದ ಗಿರಿಜಾ ಅವರು ದ್ವಿತೀಯ ಸ್ಥಾನಗಳಿಸುವ ಮೂಲಕ ನಗದು ಬಹುಮಾನದೊಂದಿಗೆ ಪಾರಿತೋಷಕಕ್ಕೆ ಭಾಜನರಾಗಿದ್ದಾರೆ. ಅಸೋಸಿಯೇಷನ್‍ನ ಅಧ್ಯಕ್ಷ ಉದಯ್ ಪೈ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಎಚ್.ಸಿ. ಮಂಜುಳಾ, ಜಿಲ್ಲಾ ಆಯುಕ್ತೆ ಮೀನಾ ನಾಗರಾಜ್, ಉಪಸ್ಥಿತರಿದ್ದು ಬಹುಮಾನ ವಿತರಿಸಿದರು.
ಸೋಮವಾರಪೇಟೆ ಮಾ.2 NEWS DESK : ಶಾಂತಳ್ಳಿ ಹೋಬಳಿಯ ತಲ್ತರೆಶೆಟ್ಟಳ್ಳಿ-ಅಭಿಮಠ ಗ್ರಾಮದ ಚೌಡೇಶ್ವರಿ ಯೂತ್ ಕ್ಲಬ್ ವತಿಯಿಂದ ಸರ್ಕಾರಿ ಶಾಲಾ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಸೋಮವಾರಪೇಟೆಯ ಭಾಗ್ಯ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನವನ್ನು ಗೆದ್ದುಕೊಂಡಿದೆ. ವಿರಾಜಪೇಟೆಯ ಮಹಿಳಾ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಪುರುಷರ ಕಬಡ್ಡಿ ಪ್ರಶಸ್ತಿಯನ್ನು ಬೆಂಗಳೂರಿನ ಕವನ್ ಫ್ರೆಂಡ್ಸ್ ತಂಡ ಪ್ರಥಮ, ನಾರ್ತ್‍ಕೂರ್ಗ್ ತಂಡ ದ್ವಿತೀಯ, ಯಡೂರು ಶ್ರಿರಾಮ ಯುವಕ ಸಂಘ ತೃತೀಯ ಸ್ಥಾನ ಗಳಿಸಿತು. ಪುರುಷರ ವಾಲಿಬಾಲ್‍ನಲ್ಲಿ ಲೋಕೇಶ್ ಫ್ರೆಂಡ್ಸ್ ದೊಡ್ಡಮಳ್ತೆ ಪ್ರಥಮ, ಸಿದ್ದಲಿಂಗಪುರ ಗೆಳೆಯರ ತಂಡ ದ್ವಿತೀಯ ಸ್ಥಾನ ಪಡೆಯಿತು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಶಾಂತಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತ, ಉಪಾಧ್ಯಕ್ಷ ಚಂಗಪ್ಪ, ಚೌಡೇಶ್ವರಿ ಯೂತ್ ಕ್ಲಬ್ ಅಧ್ಯಕ್ಷ ರವಿ, ಪ್ರಮುಖರಾದ ಮುತ್ತಣ್ಣ ಸೇರಿದಂತೆ ಇತರರು ಇದ್ದರು.
ಮಡಿಕೇರಿ ಮಾ.1 NEWS DESK : ಭಾರತೀಯ ಜನತಾ ಪಾರ್ಟಿಯ ಎಸ್‌ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಸೋಮವಾರಪೇಟೆಯ ಪಿ.ಕೆ.ಚಂದ್ರು ಹಾಗೂ ವಿರಾಜಪೇಟೆಯ ಚೇತನ್ ಶಿವಪ್ಪ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ಅನುಮೋದನೆಯೊಂದಿಗೆ ಆಯ್ಕೆ ಮಾಡಲಾಗಿದೆ ಎಂದು ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ ತಿಳಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಅರೆಕಾಡಿನ ಚೆನ್ನಿಗಯ್ಯ ಹೆಚ್.ಡಿ, ವಿರಾಜಪೇಟೆ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಅಮ್ಮತ್ತಿಯ ಅಭಿಜಿತ್ ಹೆಚ್.ಎ, ಸೋಮವಾರಪೇಟೆ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಜಗನ್ನಾಥ್ ಜಿ. ಚೌಡ್ಲು ಹಾಗೂ ಮಡಿಕೇರಿ ನಗರ ಮಂಡಲ ಅಧ್ಯಕ್ಷರನ್ನಾಗಿ ಮುಕುಂದ ಹೆಚ್.ಜಿ ಅವರುಗಳನ್ನು ನೇಮಕ ಮಾಡಿರುವುದಾಗಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಮಡಿಕೇರಿ ಮಾ.1 NEWS DESK : ಮಡಿಕೇರಿ ನಗರಸಭೆಗೆ ಕಾಂಗ್ರೆಸ್ ಪ್ರಮುಖರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಶಾಸಕ ಡಾ.ಮಂತರ್‍ಗೌಡ ಅವರ ಶಿಫಾರಸ್ಸಿನ ಮೇರೆಗೆ ನಗರಾಭಿವೃದ್ಧಿ ಇಲಾಖೆ ಮಡಿಕೇರಿ ನಗರದ ಸದಾ ಮುದ್ದಪ್ಪ, ಬಿ.ಎನ್.ಮುದ್ದುರಾಜ್, ಮೊಹಮ್ಮದ್ ಯಾಕೂಬ್, ಬಿ.ಸಿ.ಜಗದೀಶ್ ಹಾಗೂ ಜುಲೈಕಾಬಿ ಅವರನ್ನು ನೇಮಕ ಮಾಡಿದೆ.






