ನಾಪೋಕ್ಲು ಫೆ.28 NEWS DESK : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕೊಂಬಂಡ ಸೀತಾರಾಮ (ಸಾಬು) ಅವರಿಗೆ ಸಂಘದ ವತಿಯಿಂದ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಸಂಘದ ಕಟ್ಟಡದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಶಾಲು ಹೊದಿಸಿ ಫಲ ತಾಂಬೂಲ ಕಿರು ಕಾಣಿಕೆ ನೀಡಿ ಸನ್ಮಾನಿಸಿ, ಬೀಳ್ಕೊಟ್ಟರು. ಈ ಸಂದರ್ಭ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಸಂಘದಲ್ಲಿ 30 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಕೊಂಬಂಡ ಸೀತಾರಾಮ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿದರು. ಅಲ್ಲದೆ ನಿವೃತ್ತ ಜೀವನ ಸುಖಕರವಾಗಿರಲೆಂದು ಹಾರೈಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿ, ಎಲ್ಲರಿಗೂ ಧನ್ಯವಾದಗಳು ಅರ್ಪಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಕೆಟೋಳಿರ ಎಸ್ .ಪೂವಯ್ಯ, ಉಪಾಧ್ಯಕ್ಷೆ ಕುಂಡ್ಯೋಳಂಡ ಎಂ.ಕವಿತಾ , ನಿರ್ದೇಶಕರಾದ ಕೆಲೇಟಿರ ಬಿ.ಮುತ್ತಮ್ಮ , ಚಿಯಕಪೂವಂಡ ಎನ್. ಸತೀಶ್ ದೇವಯ್ಯ, ಚೋಕಿರ ಬಿ.ಪ್ರಭು ಪೂವಪ್ಪ, ಹೆಚ್.ಎ.ಬೊಳ್ಳು , ಶಿವಚಾಳಿಯಂಡ ಎಂ.ಅಂಬಿ…
ಲೇಖಕ: admin
ಮಡಿಕೇರಿ ಫೆ.28 NEWS DESK : ಮಡಿಕೇರಿಯ ಅಮೃತ ಇ.ಎನ್.ಟಿ ಮತ್ತು ವರ್ಟಿಗೋ ಕ್ಲಿನಿಕ್, ಕಾವೇರಿ ಹಿಯರಿಂಗ್ ಕ್ಲಿನಿಕ್, ಜಿ.ಎನ್.ರಿಸೌಂಡ್ ಹಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಸಂಯುಕ್ತಾಶ್ರಯದಲ್ಲಿ ಮಾ.3 ರಂದು ಉಚಿತ ಇಎನ್‍ಟಿ ಮತ್ತು ಶ್ರವಣ ತಪಾಸಣಾ ಶಿಬಿರ ನಡೆಯಲಿದೆ ಎಂದು ಶ್ರವಣ ತಜ್ಞ ಡಾ. ಮೋಹನ್ ಅಪ್ಪಾಜಿ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ನಗರದ ಕಾಫಿ ಕೃಪಾ ಬಿಲ್ಡಿಂಗ್ ನಲ್ಲಿರುವ ಅಮೃತ ಇಎನ್‍ಟಿ, ವರ್ಟಿಗೋ ಕ್ಲಿನಿಕ್ ಹಾಗೂ ಕಾವೇರಿ ಹಿಯರಿಂಗ್ ಕ್ಲಿನಿಕ್ ನಲ್ಲಿ ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು. ಶಿಬಿರದಲ್ಲಿ ಉಚಿತ ಇ.ಎನ್.ಟಿ, ಶ್ರವಣ ತಪಾಸಣೆಯೊಂದಿಗೆ 40 ವರ್ಷ ಮೇಲ್ಪಟ್ಟವರಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ತಪಾಸಣೆ ನಡೆಯಲಿದ್ದು, ತಜ್ಞ ವೈದ್ಯರಿಂದ ಮಧುಮೇಹ, ಆಹಾರ ಸಮಾಲೋಚನೆ, ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ಕೂಡ ಮಾಡಲಾಗುವುದೆಂದರು. ಅಲ್ಲದೆ ಹಳೆಯ ಶ್ರವಣ ಸಾಧನಗಳನ್ನು ಬದಲಾಯಿಸಲು ಅವಕಾಶ ಇರುವುದಾಗಿ ತಿಳಿಸಿದರು. ಆಸಕ್ತರು ಮಾ.2ರ…
ಮಡಿಕೇರಿ ಫೆ.28 NEWS DESK : ಅಮ್ಮತಿಯಲ್ಲಿ ನಡೆದ ಅಮೃತ ಮೊಗೇರ ಕ್ರಿಕೆಟ್ ಪ್ರೀಮಿಯರ್ ಲೀಗ್ ನ ಸೀಸನ್-2 ರಲ್ಲಿ ಟೀಮ್ ಕಾರ್ಣಿಕ ಕೊಡಗು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಫ್ರೆಂಡ್ಸ್ ಇಲೆವೆನ್ ಅಮ್ಮತಿ ತಂಡವು ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ತೃತೀಯ ಸ್ಥಾನವನ್ನು ಮರ್ಸಿಲೆಸ್ ಪಡೆದು ಕೊಂಡರೆ, ಉತ್ತಮ ತಂಡವಾಗಿ ಕ್ಯಾಪ್ಟನ್ ಕ್ರಿಕೆಟರ್ಸ್ ಸುಂಟಿಕೊಪ್ಪ ಪಡೆದುಕೊಂಡಿತು. ಅಮ್ಮತಿ ಪ್ರೌಢ ಶಾಲಾ ಮೈದಾನದಲ್ಲಿ ನಡೆದ ಅಮೃತ ಯುವ ಮೊಗೇರ ಸೇವಾ ಸಮಾಜ ಸಿದ್ದಾಪುರ ಹಾಗೂ ಅಮ್ಮತಿ ಹೋಬಳಿ ನೇತೃತ್ವದಲ್ಲಿ ಮೂರು ದಿನಗಳ ಕಾಲ ಒಟ್ಟು ಹತ್ತು ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು. ಇದಕ್ಕೂ ಮೊದಲು ನಡೆದ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಫ್ರೆಂಡ್ಸ್ ಇಲೆವೆನ್ ಅಮ್ಮತಿ ತಂಡವು ಟೀಮ್ ಕಾರ್ಣಿಕ ಕೊಡಗು ತಂಡದ ವಿರುದ್ಧ 9 ವಿಕೆಟ್ ಗಳ ಜಯ ಸಾಧಿಸಿ ನೇರವಾಗಿ ಫೈನಲ್ ಗೆ ಅರ್ಹತೆ ಪಡೆದುಕೊಂಡಿತು. ಎಲಿಮಿನೇಟರ್ ಪಂದ್ಯವು ಕ್ಯಾಪ್ಟನ್ ಕ್ರಿಕೆಟರ್ಸ್ ಸುಂಟಿಕೊಪ್ಪ ಹಾಗೂ ಮರ್ಸಿಲೆಸ್ ತಂಡದ ನಡುವೆ ನಡೆದ ಪಂದ್ಯದಲ್ಲಿ…
ಸುಂಟಿಕೊಪ್ಪ,ಫೆ.28 NEWS DESK : ನಾಕೂರು ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‍ನ 24ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಕಾನ್‍ಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಿವೈಸಿ ಮಳ್ಳೂರು ತಂಡವು ಪ್ರಶಸ್ತಿಯನ್ನು ಮುಂಡಿಗೇರಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಬಿಲಾಲ್ ಫ್ರೆಂಡ್ಸ್ ನಾಕೂರು, ತೃತೀಯ ಸ್ಥಾನವನ್ನು ಸಂತೋಷ್ ಫ್ರೆಂಡ್ಸ್ ತಂಡವು ಪಡೆದುಕೊಂಡಿತು. ಸ್ಥಳೀಯ ಪರುಷರಿಗೆ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಎಫ್.ವೈ.ಸಿ.ಎ ಪ್ರಥಮ, ಎಫ್.ವೈ.ಸಿ. ಬಿ. ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಮಕ್ಕಳ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಸವೆಂತ್ ಸ್ಟಾರ್, ದ್ವಿತೀಯ ಸ್ಥಾನವನ್ನು ರಾಯಲ್ ಅಫಶೀಯಲ್ಸ್ ಪಡೆದುಕೊಂಡಿತು. ಸ್ಥಳೀಯ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕಾವೇರಿ ಸಮುದಾಯ ಸಂಘ ಮಂಜಿಕೆರೆ ತಂಡ ಪ್ರಥಮ, ಎಫ್.ವೈ.ಸಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಬಾಂಬ್ ಇನ್‍ದ ಸಿಟಿ ಪ್ರಥಮ ನೀತು, ದ್ವಿತೀಯ ಬೀನಾ ಬಾರಿಕೆ ಪಡೆದುಕೊಂಡರು, ಪಾಸಿಂಗ್‍ದ ಬಾಲ್ ವಾಣಿ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ರಮ್ಯ ಪಡೆದರು. ಸ್ಥಳೀಯ…
ಮಡಿಕೇರಿ ಫೆ.28 : ನಗರಸಭೆಯ 2024-25 ನೇ ಸಾಲಿನ ಆಯವ್ಯಯ ತಯಾರಿಸುವ ಸಲುವಾಗಿ ಆದಾಯ ಮತ್ತು ಖರ್ಚುಗಳ ಬಗ್ಗೆ ಸೂಕ್ತ ಸಲಹೆ ಸೂಚನೆ ಪಡೆಯಲು ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಮಧ್ಯಾಹ್ನ 3.30 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ಸಭೆಗೆ ಹಿರಿಯ ನಾಗರಿಕರು, ನೋಂದಾಯಿತ ಸಂಘ ಸಂಸ್ಥೆಗಳು, ಎನ್‍ಜಿಒಗಳು ಮತ್ತು ಮಾಜಿ ಚುನಾಯಿತ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳು ಹಾಗೂ ಆಸಕ್ತಿಯುಳ್ಳ ಸಾರ್ವಜನಿಕರು ಹಾಜರಾಗಿ ತಮ್ಮ ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ನಗರಸಭೆ ಪೌರಾಯುಕ್ತರಾದ ವಿಜಯ್ ಕೋರಿದ್ದಾರೆ.
ಮಡಿಕೇರಿ ಫೆ.27 NEWS DESK : ಭಾರತೀಯ ಜನತಾ ಪಾರ್ಟಿಯ ಕೊಡಗು ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಪದಾಧಿಕಾರಿಗಳು ಹಾಗೂ ಸದಸ್ಯರುಗಳನ್ನು ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ಅನುಮೋದನೆಯೊಂದಿಗೆ ನೇಮಕ ಮಾಡಲಾಗಿದೆ ಎಂದು ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ ಅವರು ತಿಳಿಸಿದ್ದಾರೆ. ಜಿಲ್ಲಾ ಸಮಿತಿಯ ಉಪಾಧ್ಯಕ್ಷರುಗಳಾಗಿ ಡಿ.ಕೆ.ತಿಮ್ಮಪ್ಪ ಕುಶಾಲನಗರ, ಬಿ.ಎಸ್.ಚಂದ್ರಶೇಖರ್ ಹಳ್ಳಿಗಟ್ಟು, ಕೋಲೆಯಂಡ ಗಿರೀಶ್ ಕಡಂಗ, ಟಿ.ಜಿ.ಮನು ಪೊನ್ನಂಪೇಟೆ, ಪಿ.ಎನ್.ಗಂಗಾಧರ್ ಮಾಲಂಬಿ, ಕಾರ್ಯದರ್ಶಿಗಳಾಗಿ ಕೆ.ರಾಜೇಶ್ ಗೋಣಿಕೊಪ್ಪ, ಸತೀಶ್ ಕುಂದಾರ್ ಕುಶಾಲನಗರ, ಬಿ.ಎಂ.ರಾಜೇಶ್ ಮಡಿಕೇರಿ, ಕೆ.ಎಸ್.ಸರಸ್ವತಿ ಎಂ.ಬಾಡಗ, ಬಿ.ಡಿ.ಪದ್ಮನಾಭ ಸುಂಟಿಕೊಪ್ಪ ನೇಮಕಗೊಂಡಿದ್ದಾರೆ. ಖಜಾಂಚಿಯಾಗಿ ಬಿ.ವಿ.ರೋಶನ್ ಮಡಿಕೇರಿ, ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಸಿನಿತ್ ಕುಲಾಲ್ ನಲ್ವತ್ತೆಕ್ರೆ ಹಾಗೂ ಕಾರ್ಯಾಲಯ ಕಾರ್ಯದರ್ಶಿಯಾಗಿ ಜಿ.ಜಿ.ಬಾಲಕೃಷ್ಣ ಮಡಿಕೇರಿ ಆಯ್ಕೆಯಾಗಿದ್ದಾರೆ. ಸದಸ್ಯರುಗಳಾಗಿ ಎಂ.ಎಂ.ಲಿಜೇಶ್ ಅಮ್ಮತ್ತಿ, ಬಿ.ಟಿ.ಕೃಷ್ಣಪ್ಪ ಪೂಜಾರಿ ರ‍್ವತ್ತೋಕ್ಲು, ಕೆ.ಎಂ.ಮಣಿಕಂಠ ಪಾರಾಣೆ, ಬಿ.ಎಸ್.ಅರುಣ ಕೆದಮುಳ್ಳೂರು, ಬಿ.ಕೆ.ಪ್ರದೀಪ್ ಮರಗೋಡು, ಟಿ.ಎಸ್.ಅಕ್ಷಯ್ ಗೋಣಿಕೊಪ್ಪ, ಬೈಲುಗುಂದರ ಮನು ಮೇದಪ್ಪ ಪಾರಾಣೆ, ಬಿ.ಬಿ.ನಳಿನಿ ಮಡಿಕೇರಿ, ಉಮಾಪ್ರಭ ನಾಪೋಕ್ಲು, ಸಿ.ಕೆ.ಬಾಲಕೃಷ್ಣ ಮಡಿಕೇರಿ, ಸುದೀಶ್ ಪುಲಿಯೇರಿ…
ಮಡಿಕೇರಿ ಫೆ.27 NEWS DESK : ಕೊಡಗು-ಮೈಸೂರು ಲೋಕಸಭಾ ಕ್ಷೇತ್ರಕ್ಕೆ ತಾವು ಕೂಡ ಆಕಾಂಕ್ಷಿಯಾಗಿರುವುದಾಗಿ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಸ್ಪರ್ಧೆಗೆ ಅವಕಾಶ ನೀಡುವಂತೆ ಈಗಾಗಲೇ ಬಿಜೆಪಿ ವರಿಷ್ಠರ ಗಮನ ಸೆಳೆದಿದ್ದೇನೆ, ಆದರೆ ಪಕ್ಷದ ತೀರ್ಮಾನವೇ ಅಂತಿಮವಾಗಿದೆ. ಪಕ್ಷ ಯಾವುದೇ ಅಭ್ಯರ್ಥಿಗೆ ಸ್ಪರ್ಧೆಗೆ ಅವಕಾಶ ನೀಡಿದರೂ ಅಂತಹ ಅಭ್ಯರ್ಥಿಯ ಪರವಾಗಿ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುವುದಾಗಿ ಸ್ಪಷ್ಟಪಡಿಸಿದರು. ಜೆಡಿಎಸ್ ಅಭ್ಯರ್ಥಿಯನ್ನು ಬಿಜೆಪಿ ಚಿಹ್ನೆಯಡಿ ಕಣಕ್ಕಿಳಿಸುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಭಾಸ್ಕರ್ ರಾವ್, ಚರ್ಚೆಗಳು ಮಾತ್ರವೇ ನಡೆಯುತ್ತಿದೆ ಎಂದರು. ಸಂಸದ ಪ್ರತಾಪ್ ಸಿಂಹ ಅವರು 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಎಲ್ಲಾ ಪಕ್ಷಗಳಲ್ಲೂ ಎರಡು ಮೂರು ಮಂದಿ ಆಕಾಂಕ್ಷಿಗಳು ಇರುತ್ತಾರೆ. ಅದರಂತೆ ತಾವು ಕೂಡ ಅವಕಾಶ ಬಯಸಿದ್ದೇನೆ. ಅಭ್ಯರ್ಥಿಗಳ ಅಂತಿಮ ತೀರ್ಮಾನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಮಿತಿ ಮಾಡಲಿದೆ ಎಂದು ಹೇಳಿದರು. ಕಳೆದ 33 ವರ್ಷಗಳಿಂದ ತಾವು ವಿವಿಧ…
ಮಡಿಕೇರಿ ಫೆ.27 NEWS DESK : ಭಾರತೀಯ ಜನತಾ ಪಾರ್ಟಿಯ ಕೊಡಗು ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ವಿವಿಧ ಮಂಡಲಗಳಿಗೆ ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ಅನುಮೋದನೆಯೊಂದಿಗೆ ನೂತನ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ ಎಂದು ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ ಅವರು ತಿಳಿಸಿದ್ದಾರೆ. ಮಡಿಕೇರಿ ನಗರ ಅಧ್ಯಕ್ಷರಾಗಿ ಪಿ.ಜಿ.ಗಜೇಂದ್ರ (ಕುಶ) ಭಗವತಿ ನಗರ, ಮಡಿಕೇರಿ ಗ್ರಾಮಾಂತರ ಅಧ್ಯಕ್ಷರಾಗಿ ಬಿ.ಎಂ.ಪ್ರದೀಪ್ ನಾಪೋಕ್ಲು, ವಿರಾಜಪೇಟೆ ಅಧ್ಯಕ್ಷರಾಗಿ ಪೊಟ್ಟಂಡ ನವೀನ್ ಉತ್ತಯ್ಯ ಹಾಲುಗುಂದ ಹಾಗೂ ಸೋಮವಾರಪೇಟೆ ಅಧ್ಯಕ್ಷರಾಗಿ ಪಿ.ಆರ್.ಸುನಿಲ್ ಕುಮಾರ್ ಸುಂಟಿಕೊಪ್ಪ ಅವರನ್ನು ನೇಮಕ ಮಾಡಲಾಗಿದೆ. ಪಕ್ಷ ಸಂಘಟನೆಯ ದೃಷ್ಟಿಯಿಂದ ನಾಲ್ವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಅಪ್ರು ರವೀಂದ್ರ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಮಡಿಕೇರಿ ಫೆ.27 NEWS DESK : ಭಾರತೀಯ ಜನತಾ ಪಾರ್ಟಿಯ ಕೊಡಗು ಜಿಲ್ಲಾ ಯುವ ಮೋರ್ಚಾದ ವಿವಿಧ ಮಂಡಲಗಳಿಗೆ ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ಅನುಮೋದನೆಯೊಂದಿಗೆ ನೂತನ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ ಎಂದು ಮೋರ್ಚಾದ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ ತಿಳಿಸಿದ್ದಾರೆ. ಮಡಿಕೇರಿ ನಗರ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾಗಿ ಪಾಂಡಿರ ಪೂಣಚ್ಚ, ಮಡಿಕೇರಿ ಗ್ರಾಮಾಂತರ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾಗಿ ಚೇತನ್ ಬಂಗೇರ, ಸೋಮವಾರಪೇಟೆ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾಗಿ ಮೋಹಿತ್ ತಿಮ್ಮಯ್ಯ ಹಾಗೂ ವಿರಾಜಪೇಟೆ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾಗಿ ನಿತಿನ್ ಮೊಣ್ಣಪ್ಪ ಅವರನ್ನು ನೇಮಕ ಮಾಡಲಾಗಿದೆ. ಬಿಜೆಪಿ ಯುವ ಮೋರ್ಚಾದ ಮುಂದಿನ ಸಂಘಟನಾತ್ಮಕ ಚಟುವಟಿಕೆಗಳನ್ನು ಚುರುಕುಗೊಳಿಸುವ ಉದ್ದೇಶದಿಂದ ಈ ನಾಲ್ವರು ಪಕ್ಷಕ್ಕಾಗಿ ನೀಡಿದ ಕೊಡುಗೆ ಮತ್ತು ಸೇವೆಯನ್ನು ಪರಿಗಣಿಸಿ ಅಧ್ಯಕ್ಷರುಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಮಹೇಶ್ ತಿಮ್ಮಯ್ಯ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಮಡಿಕೇರಿ ಫೆ.27 NEWS DESK : ತೆಕ್ಕಿಲ್ ಪ್ರವಾಸಿ ಒಕ್ಕೂಟದ ವತಿಯಿಂದ ದುಬೈ ನಲ್ಲಿ ನಡೆದ “ಬಂದು ಸೇರಿ ಸಂತೋಷಪಡುವ” ತೆಕ್ಕಿಲ್ ಒಕ್ಕೂಟದ ಸಂಗಮ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ದುಬೈ ಇತ್ತಿಹಾದ್ ಗ್ರೌಂಡಿನಲ್ಲಿ ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಯು ಎ ಇ ವಾಸ್ತವ್ಯವಿರುವ ಮತ್ತು ಭಾರತದಿಂದ ಬಂದು ನೆಲೆಸಿರುವ ತೆಕ್ಕಿಲ್ ಒಕ್ಕೂಟದ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರವನ್ನು ಭಾರತದ ಮತ್ತು ಯು ಎ ಇ ರಾಷ್ಟ್ರ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ಟಿ.ಎಂ.ಶಾಹಿದ್ ತೆಕ್ಕಿಲ್ ಅವರನ್ನು ಒಕ್ಕೂಟದ ಅಧ್ಯಕ್ಷ ಅಜೀಜ್ ಕೊವ್ವಲ್ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಿದರು. ನಂತರ ವಿವಿಧ ದೇಶದಲ್ಲಿ ವಾಸ್ತವ್ಯವಿರುವವರ ಸದಸ್ಯರ ಆಚಾರ ವಿಚಾರ ವಿನಿಮಯ, ವಿವಿಧ ರೀತಿಯ ತಿಂಡಿ ತಿನಿಸುಗಳ ರುಚಿ ಸವಿಯುವ , ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ಸಭಾ ಕಾರ್ಯಕ್ರಮ, ಸಾಧಕರಿಗೆ ಪ್ರಶಸ್ತಿ ಪ್ರಧಾನ, ಕ್ರೀಡಾಕೂಟಗಳು ನಡೆದವು. ಭಾರತದಿಂದ ಬಂದ ಮತ್ತು ಯು ಎ ಇ ಯಲ್ಲಿ ವಾಸ್ತವ್ಯವಿರುವ ತೆಕ್ಕಿಲ್ ಒಕ್ಕೂಟದ ಸದಸ್ಯರ…






