ಮಡಿಕೇರಿ ಫೆ.19 NEWS DESK : ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986 ರನ್ವಯ ಮಕ್ಕಳ ಶಿಕ್ಷಣದ ಹಕ್ಕಿಗೆ ಮಾರಕವಾಗದಂತೆ ಬಾಲ ನಟ/ ನಟಿಯಾಗಿ ನಟನಾ ಕೆಲಸ ನಿರ್ವಹಿಸುವ ಚಟುವಟಿಕೆಗಳನ್ನು ಹೊರತುಪಡಿಸಿ, ಕಾಯ್ದೆಯು ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ ಹಾಗೂ ಕಾಯ್ದೆಯು 14 ರಿಂದ 18 ವಯಸ್ಸಿನ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಂಡಲ್ಲಿ ಅಂತಹ ಮೊದಲ ಅಪರಾಧಕ್ಕೆ ತಪ್ಪಿತಸ್ಥ ಮಾಲೀಕರಿಗೆ 6 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ, ರೂ.20 ಸಾವಿರದಿಂದ 50 ಸಾವಿರದವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ. ಬಾಲ ಹಾಗೂ ಕಿಶೋರ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986 ರ ಕರ್ನಾಟಕ ನಿಯಮಗಳು ‘2ಸಿ’ ರಲ್ಲಿ…
ಲೇಖಕ: admin
ಮಡಿಕೇರಿ ಫೆ.19 NEWS DESK : ಕೊಡವರ ಮೂಲ ಪರಂಪರೆಯ ಆಚಾರ, ವಿಚಾರ, ಭಾಷೆ, ಪದ್ಧತಿ, ಪರಂಪರೆಯ ಜೊತೆಗೆ ಕೊಡವ ಆಟ್ ಪಾಟನ್ನು ಉಳಿಸಿ ಬೆಳೆಸುವ ಉದ್ದೇಶದೊಂದಿಗೆ ಕೊಡಗಿನ ಉತ್ಸಾಹಿ ಕೊಡವ ಯುವಕ, ಯುವತಿಯರ ತಂಡ 2013 ಫೆ.18 ರಂದು ಸಂಘಟನೆಯೊಂದನ್ನು ಹುಟ್ಟು ಹಾಕಿತು. ಮುಂದೆ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಸಾರಥ್ಯದಲ್ಲಿ ಕೊಡವ ಮಕ್ಕಡ ಕೂಟ(ರಿ)ವಾಗಿ ಬೆಳೆದು ಇಂದು 11ನೇ ವರ್ಷ ಪೂರೈಸಿ 12ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಜಂಟಿ ಕಾರ್ಯದರ್ಶಿ ಕೇಲೇಟ್ಟಿರ ದೇವಯ್ಯ ಹಾಗೂ ಖಜಾಂಚಿ ಅಮ್ಮಾಟಂಡ ಮೇದಪ್ಪ ಮತ್ತಿತರರು ಬೊಳ್ಳಜಿರ ಬಿ.ಅಯ್ಯಪ್ಪ ಅವರ ನೇತೃತ್ವದಲ್ಲಿ ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಕೊಡವ ಜನಾಂಗದ ಭಾಷೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೂಟ ಅವಿರತ ಶ್ರಮ ವಹಿಸುತ್ತಿದೆ. ಕೊಡವ ಪದ್ಧತಿ, ಪರಂಪರೆ, ಆಚಾರ, ವಿಚಾರವನ್ನು ಯುವ ಪೀಳಿಗೆಗೆ ಮನವರಿಕೆ ಮಾಡಿಕೊಡುತ್ತಿದೆ. ಮಡಿಕೇರಿ, ನಾಪೋಕ್ಲು ಸೇರಿದಂತೆ ಜಿಲ್ಲೆಯ ಹಲವೆಡೆ ಆಟ್‌ಪಾಟ್ ಪಡಿಪು…
ವಿರಾಜಪೇಟೆ ಫೆ.19 NEWS DESK : ನ್ಯಾಷನಲ್ ಸ್ಪೋಟ್ರ್ಸ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಜಮ್ಮು ಅಭಿನವ ಥಿಯೇಟರ್‍ನಲ್ಲಿ ನಡೆದ ರಾಷ್ಟ್ರೀಯ ಮಟ್ಟ ನೃತ್ಯ ಸ್ಪರ್ಧೆಯಲ್ಲಿ ವಿರಾಜಪೇಟೆಯ ಟೀಂ ಇಂಟೋಪೀಸ್ ನೃತ್ಯ ತಂಡದಿಂದ ಸುಮಾರು 27 ಮಕ್ಕಳು ಭಾಗವಹಿಸಿ ಕರ್ನಾಟಕ ರಾಜ್ಯಕ್ಕೆ 9 ಚಿನ್ನ, 5 ಬೆಳ್ಳಿ ಹಾಗೂ 5 ಕಂಚಿನ ಪದಕ ಗೆದ್ದು ಚಾಂಪಿಯನ್ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ. ನೃತ್ಯ ಫ್ರೀಸ್ಟೈಲ್, ಹಿಪ್ಪೋಪ್, ಜಾನಪದ, ಶಾಸ್ತ್ರೀಯ ನೃತ್ಯ ಸ್ಪರ್ಧೆ ನಡೆದು ರಾಜ್ಯದ ವಿವಿಧ ಭಾಗಗಳಿಂದ ಹಲವಾರು ನೃತ್ಯ ಪಟುಗಳು ಭಾಗವಹಿಸಿದರು.
ಮಡಿಕೇರಿ ಫೆ.19 NEWS DESK : ಸಾಮಾಜಿಕ ಜಾಗೃತಿ ಮೂಡಿಸುವ “ನಂಬಿಕೆ” ಎಂಬ ಕಿರುಚಿತ್ರಕ್ಕೆ ಸಾಧಕ ಕಲಾರತ್ನ ಪ್ರಶಸ್ತಿ ಲಭಿಸಿದೆ. ನಿಸರ್ಗ ಪ್ರೇರಣ ಟ್ರಸ್ಟ್ ಮತ್ತು ರಾಯಲ್ ಫಿಲಂಸ್ ಇನ್ಸ್ಟಿಟ್ಯೂಟ್ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಿರುಚಿತ್ರ ಅವಾರ್ಡ್-2024 ನಲ್ಲಿ ನಂಬಿಕೆ ಕಿರುಚಿತ್ರದ ನಾಯಕ ನಟ ವಿಶ್ವ ಕುಂಬೂರು ಮತ್ತು ನಿರ್ದೇಶನಕ್ಕಾಗಿ ಗೌತಮ್ ಸೂರ್ಯ ಸಾಧಕ ಕಲಾ ರತ್ನ ಪ್ರಶಸ್ತಿ ಪಡೆದುಕೊಂಡರು. 60 ಕಿರುಚಿತ್ರಗಳ ಪ್ರದರ್ಶನ ನಡೆದಿದ್ದು, ಅಂತಿಮವಾಗಿ 8 ಕಿರುಚಿತ್ರಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದವು. ಅದರಲ್ಲಿ ಎರಡನೇ ಸ್ಥಾನದಲ್ಲಿ ಪ್ರದರ್ಶನ ಕಂಡ ನಂಬಿಕೆ ಕಿರು ಚಿತ್ರವು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಮಡಿಕೇರಿ ಫೆ.19 : ಸಿದ್ದಾಪುರ ಅಮೃತ ಯುವ ಮೊಗೇರ ವತಿಯಿಂದ ಫೆ.24, 25 ಹಾಗೂ 26 ರಂದು ಅಮ್ಮತಿಯಲ್ಲಿ ದ್ವಿತೀಯ ವರ್ಷದ ಮೊಗೇರ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ನಡೆಯಲಿದೆ. ಅಮ್ಮತಿಯ ಪ್ರೌಢಶಾಲೆ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಒಟ್ಟು ಹತ್ತು ಮಾಲೀಕತ್ವದ ಹತ್ತು ತಂಡಗಳು ಪಾಲ್ಗೊಳ್ಳಲಿದ್ದು ,ಟೀಮ್ ಹಂಟರ್ಸ್ ಮರಗೋಡು, ಫ್ರೆಂಡ್ಸ್ ಕ್ರಿಕೆಟರ್ಸ್ ಅಮ್ಮತಿ, SPM ರಾಯಲ್ ವಿರಾಜಪೇಟೆ, ಪ್ರೆಸಿಡೆಂಟ್ಸ್ XI ಸೋಮವಾರಪೇಟೆ, ಟೀಮ್ ಕಾರ್ಣಿಕ ಕೊಡಗು, ರಾಪ್ಟಾರ್ ಕಾನನಕಾಡು, ಟೀಮ್ ಬ್ರದರ್ಸ್ ಬಕ್ಕ, ಫ್ರೆಂಡ್ಸ್ ಘಿಟ ಅಮ್ಮತಿ, ಮರ್ಸಿಲೆಸ್ಸ್ ಕ್ರಿಕೆಟರ್ಸ್, ಕ್ಯಾಪ್ಟನ್ ಕ್ರಿಕೆಟರ್ಸ್ ಸುಂಟಿಕೊಪ್ಪ, ತಂಡಗಳ ನಡುವೆ ಲೀಗ್ ಪಂದ್ಯಗಳು ನಡೆಯಲಿವೆ. ಪಂದ್ಯಾವಳಿಯ ವಿಜೇತ ತಂಡಕ್ಕೆ 50,000 ನಗದು ಹಾಗೂ ಆಕರ್ಷಕ ಟ್ರೊಫಿ, ರನ್ನರ್ಸ್ ತಂಡಕ್ಕೆ 25,000 ನಗದು ಹಾಗೂ ಆಕರ್ಷಕ ಟ್ರೊಫಿ ಹಾಗೆಯೇ ವೈಯಕ್ತಿಕ, ಟ್ರೊಫಿಗಳು ಕೂಡ ಕ್ರೀಡಾಪಟುಗಳಿಗೆ ಸಿಗಲಿದೆ. ಪಂದ್ಯಾವಳಿಯನ್ನು ಅಮೃತ ಯುವ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷ ಪಿ.ಸಿ.ರಮೇಶ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಅಮೃತ ಯುವ…
ಮಡಿಕೇರಿ ಫೆ.19 NEWS DESK : ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಮಡಿಕೇರಿಯ ಅಶೋಕ ಪುರ ಮತ್ತು ಚೌಡೇಶ್ವರಿ ದೇವಾಲಯ ಬಳಿಯಲ್ಲಿನ ಅಂಗನವಾಡಿಗಳಿಗೆ ವಿವಿಧ ಸಾಮಾಗ್ರಿಗಳನ್ನು ನೀಡಲಾಯಿತು. ಊಟದ ತಟ್ಟೆ, ಲೋಟ, ನೆಲಹಾಸು, ತಟ್ಟೆ ಇರಿಸಲು ಸ್ಟಾಂಡ್ ಗಳನ್ನು ಮಿಸ್ಟಿ ಹಿಲ್ಸ್ ಮೂಲಕ ರೋಟರಿ ಜಿಲ್ಲಾ ಗವನ೯ರ್ ಎಚ್.ಆರ್.ಕೇಶವ್ ವಿತರಿಸಿದರು. ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾಯ೯ದಶಿ೯ ರತ್ನಾಕರ್ ರೈ, ಸಹಾಯಕ ಗವನ೯ರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್ . ಎಸ್.ಸಂಪತ್ ಕುಮಾರ್ ನಿದೇ೯ಶಕರಾದ ಬಿ.ಜಿ. ಅನಂತಶಯನ, ಅನಿಲ್ ಎಚ್.ಟಿ., ಪೊನ್ನಚ್ಚನ ಮಧುಸೂದನ್ , ಜಗದೀಶ್ ಪ್ರಶಾಂತ್, ಬಿ.ಕೆ. ರವೀಂದ್ರರೈ, ವಿನೋದ್ ಅಂಬೆಕಲ್, ಪ್ರಸಾದ್ ಗೌಡ, ನಗರಸಭೆಯ ಮಾಜಿ ಸದಸ್ಯೆ ವೀಣಾಕ್ಷಿ, ರೋಟರಿ ಸದಸ್ಯ ರವಿಕುಮಾರ್ ಹಾಜರಿದ್ದರು.
ಮಡಿಕೇರಿ ಫೆ.19 NEWS DESK : ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ರೋಹನ್ ಬೋಪಣ್ಣ ಅವರನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಅವರು ಇಂದು ಬೆಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಿದರು.
ಸೋಮವಾರಪೇಟೆ ಫೆ.19 NEWS DESK : ತಾಲ್ಲೂಕಿನ ಗರ್ವಾಲೆ ಗ್ರಾಮದ ಗೀಜಿಗಂಡ ಸಂತೋಷ್ ಎಂಬುವರ ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿರುವ ಘಟನೆ ನಡೆದಿದೆ. ರಸ್ತೆ ಬದಿಯ ಕಾಡಿಗೆ ಬೆಂಕಿ ಬಿದ್ದು ಪಕ್ಕದ ಕಾಫಿ ತೋಟಕ್ಕೂ ವ್ಯಾಪಿಸಿ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಠಾಣೆಯವರು ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ಭಾಗದಲ್ಲಿ ಕೋಟೆ ಬೆಟ್ಟ ಸೇರಿದಂತೆ ಹಲವು ಪ್ರವಾಸಿ ತಾಣಗಳಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಧೂಮಪಾನ ಮಾಡಿ ಎಸೆದ ಸಿಗರೇಟ್‍ನಿಂದ ಬೆಂಕಿ ಹತ್ತಲು ಕಾರಣವಾಗಿರಬಹುದು ಎಂದು ಸ್ಥಳೀಯ ನಿವಾಸಿ ಗೀಜಿಗಂಡ ಲೋಕೇಶ್ ಹೇಳಿದ್ದಾರೆ. ಬಿಸಿಲು ಹೆಚ್ಚಾಗುತ್ತಿರುವುದರಿಂದ ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ಅವಶ್ಯಕತೆ ಇದೆ ಎಂದು ತಿಳಿಸಿದರು.
ನಾಪೋಕ್ಲು ಫೆ.19 NEWS DESK : ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ರಸ್ತೆಯ ಬದಿಗೆ ಸರಿದ ಘಟನೆ ಕೋರಂಗಳದಲ್ಲಿ ಜರುಗಿದೆ. ಬೆಂಗಳೂರು ಕಡೆಯಿಂದ ಭಾಗಮಂಡಲಕ್ಕೆ ತೆರಡುತ್ತಿದ್ದ ಕರ್ನಾಟಕ ಸರಕಾರ ರಸ್ತೆ ಸಾರಿಗೆ ರಾಜಹಂಸ ಬಸ್ಸೊಂದು ಅಯ್ಯಂಗೇರಿ ಗ್ರಾಮದ ಕೋರಂಗಲ ಶಾಲೆಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದಿದ್ದು, ಅಪಾಯದಂಚಿನಿಂದ ಪಾರಾಗಿದೆ. ಬಸ್ಸಿಗೆ ಸಣ್ಣ ಪುಟ್ಟ ಹಾನಿಯಾಗಿದ್ದು,ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ವರದಿ : ದುಗ್ಗಳ ಸದಾನಂದ
ನಾಪೋಕ್ಲು ಫೆ.19 NEWS DESK : ಕರ್ನಾಟಕ ಹಿರಿಯ ಫುಟ್ಬಾಲ್ ತಂಡಕ್ಕೆ ಬಾಳೆಯಡ ಮೃನಲ್ ಮುತ್ತಣ್ಣ ಆಯ್ಕೆಯಾಗಿದ್ದಾರೆ. ಇವರು ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ ಶಿಪ್ ಸಂತೋಷ ಟ್ರೋಫಿಗಾಗಿ ಆಡಿದ ಯುವ ಆಟಗಾರ. ಮೃನಲ್ ಮುತ್ತಣ್ಣ ಬಾಳೆಯಡ ಸತೀಶ್ ಮತ್ತು ಬಿಂದು ದಂಪತಿಗಳ ಪುತ್ರ. ವರದಿ : ದುಗ್ಗಳ ಸದಾನಂದ.






