ಲೇಖಕ: admin

ಮಡಿಕೇರಿ ಅ.4 : ಮಡಿಕೇರಿ ದಸರಾ ಉತ್ಸವಕ್ಕೆ ಸರ್ಕಾರದಿಂದ ಬರುವ ಅನುದಾನಲದಲ್ಲಿ ದಶಮಂಟಪಗಳಿಗೆ ಅನ್ಯಾಯವಾಗದಂತೆ ಉತ್ತಮ ಅನುದಾನ ನೀಡಲು ಕ್ರಮ ಕೈಗೊಳ್ಳುವುದಾಗಿ ಶಾಸಕ ಡಾ.ಮಂತರ್ ಗೌಡ ಭರವಸೆ ನೀಡಿದರು. ನಗರದ ರಾಜ್‍ದರ್ಶನ್ ಸಭಾಂಗದಣಲ್ಲಿ ನಡೆದ ದಶಮಂಟಪ ಸಮಿತಿ ಸಭೆಯಲ್ಲಿ ದಶಮಂಟಪ ಸಮಿತಿಗಳ ವಿವಿಧ ಬೇಡಿಕೆಯ ಮನವಿ ಪತ್ರವನ್ನು ಸ್ವೀಕರಿಸಿ ಬಳಿಕ ಅವರು, ಮಾತನಾಡಿದರು. ದಶಮಂಟಪಗಳು ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದು, ಅವುಗಳಿಗೆ ಪ್ರಾಮುಖ್ಯತೆ ನೀಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಬಾರಿ ಬಾಕಿ ಇರುವ ಅನುದಾನದೊಂದಿಗೆ ಈ ಬಾರಿಯೂ ಉತ್ತಮ ಅನುದಾನವನ್ನು ದಶಮಂಟಪಗಳಿಗೆ ನೀಡುವ ನಿಟ್ಟಿನಲ್ಲಿ ಅತ್ಯ ಕ್ರಮ ಕೈಗೊಳ್ಳುವುದಾಗಿ ಮಂತರ್ ಗೌಡ ಆಶ್ವಾಸನೆ ನೀಡಿದರು. ಹಾಲಿ ಜನಪ್ರತಿನಿಧಿಗಳು ಹಾಗೂ ಮಾಜಿ ಜನಪ್ರತಿನಿಧಿಗಳೆಲ್ಲರನ್ನು ಉತ್ಸವಕ್ಕೆ ಆಹ್ವಾನಿಸುವ ಕೆಲಸವಾಗಬೇಕೆಂದು ದಸರಾ ಸಮಿತಿಗೆ ಸೂಚಿಸಿದ ಶಾಸಕರು, ನಗರದ ರಸ್ತೆ ಕಾರ್ಯವನ್ನು ಕಡ್ಡಾಯವಾಗಿ ದಸರಾ ಉತ್ಸವಕ್ಕೂ ಮುನ್ನ ನಿರ್ವಹಿಸುವಂತೆ ನಗರಸಭಾಧ್ಯಕ್ಷರಿಗೆ ನಿರ್ದೇಶ ನೀಡಿದರು. ದಸರಾ ಹಿನ್ನೆಲೆ ವಿವಿಧ ಇಲಾಖೆಗಳಿಂದ ಆಗಬೇಕಾಗಿರುವ ಪೂರ್ವ ತಯಾರಿ…

Read More

ಮಡಿಕೇರಿ ಅ.4 : ಸತ್ಯ, ಅಸ್ತಿತ್ವ, ಸಮರ್ಪಣೆ”ಎಂಬ ದ್ಯೇಯದಡಿಯಲ್ಲಿ ಅ.11 ರಂದು ಎಸ್‍ಕೆಎಸ್‍ಎಸ್‍ಎಫ್ ಕೊಡಗು ಜಿಲ್ಲಾ ಸಮ್ಮೇಳನ ಹಾಗೂ ಬೃಹತ್ ಮೀಲಾದ್ ಸಮಾವೇಶ ಮತ್ತು ನೂರೇ ಅಜ್ಮೀರ್ ಕಾರ್ಯಕ್ರಮ ಕುಶಾಲನಗರದಲ್ಲಿ ನಡೆಯಲಿದೆ ಎಂದು ಎಸ್‍ಕೆಎಸ್‍ಎಸ್‍ಎಫ್ ಕೊಡಗು ಅಧ್ಯಕ್ಷ ಎಂ.ತಮೀಖ್ ದಾರಿಮಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 4 ಗಂಟೆಗೆ ಮೀಲಾದ್ ಸಂದೇಶ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ನಂತರ ಕುಶಾಲನಗರದ ಎಸ್ ಎಲ್ ಎನ್ ಮೈದಾನದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಪಾಣಕ್ಕಾಡ್ ಸೈಯ್ಯಿದ್ ಮುನವ್ವರಲಿ ಶಿಹಾಬ್ ತಂಙಳ್ ಸಮ್ಮೇಖವನ್ನು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಎಸ್‍ಕೆಎಸ್‍ಎಸ್‍ಎಫ್ ಕೊಡಗು ಸಮಿತಿ ಉಪಾಧ್ಯಕ್ಷ ಸತ್ತಾರ್ ಪಂದಲ್ಲೂರ್ ‘ಸತ್ಯ, ಅಸ್ತಿತ್ವ, ಸಮರ್ಪಣೆ ಎಂಬ ವಿಷಯವನ್ನಾಧರಿಸಿ ದಿಕ್ಸೂಚಿ ಭಾಷಣ ಮಾಡಲಿದ್ದು, ಮುಖ್ಯ ಅಥಿತಿಗಳಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್ ಸೇರಿದಂತೆ ಮತ್ತಿತರ ಗಣ್ಯ…

Read More

ಮಡಿಕೇರಿ ಸೆ.4 :  ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಾಳತ್ತಮನೆ, ಮೇಕೇರಿ, ಬಿಳಿಗೇರಿ ಅರ್ವತ್ತೋಕ್ಲು ಮೂಲಕ ಬೆಟ್ಟಗೇರಿ ಗೆ ಸಂಪರ್ಕಿಸುವ ರಸ್ತೆಯನ್ನು ಆಧುನೀಕರಿಸಲು ಲೋಕೋಪಯೋಗಿ ಇಲಾಖೆಗೆ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ  ನಿರ್ದೇಶನ ನೀಡಿದ್ದಾರೆ. ಇಂದು ವಿಧಾನಸೌಧ ದಲ್ಲಿರುವ ಎ.ಎಸ್.ಪೊನ್ನಣ್ಣ ಅವರ ಕಚೇರಿಯಲ್ಲಿ ಶಾಸಕರನ್ನು ಭೇಟಿ ಮಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ  ತೆನ್ನಿರ ಮೈನಾ ಹಾಗೂ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಮಡಿಕೇರಿಯಿಂದ ನಾಪೋಕ್ಲುವಿಗೆ ಪರ್ಯಾಯ ರಸ್ತೆಯ ಉದ್ದೇಶದಿಂದ ನಿರ್ಮಾಣಗೊಂಡ ಅರವತ್ತರ ದಶಕದ ಈ ರಸ್ತೆ ಕಡೆ ಗಣನೆಗೆ ಒಳಪಟ್ಟು ಗ್ರಾಮದ ಅನೇಕರು ಮಕ್ಕಳ ವಿಧ್ಯಾಭ್ಯಾಸದ ಸಲುವಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗಿರುವುದನ್ನು ವಿವರಿಸಿದರು. ಅಲ್ಲದೆ ಸುಮಾರು ಐದು ಗ್ರಾಮಗಳಿಗೆ ಸೇರಿದ ನೂರಾರು ವಿಧ್ಯಾರ್ಥಿಗಳು, ಸಾರ್ವಜನಿಕರು ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚಾರ ಮಾಡಲು ಹರಸಾಹಸ ಪಡುತ್ತಿರುವ ಬಗ್ಗೆ ಮಾಹಿತಿ ನೀಡಿದರು. ತಾವು ಕೋವಿಡ್…

Read More

ನಾಪೋಕ್ಲು ಅ.4 :  ನಾಪೋಕ್ಲು  ಕೃಷಿ ಪತ್ತಿನ ಸಹಕಾರ ಸಂಘದ  ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಕೇಟೋಳಿರ ಹರೀಶ್ ಪೂವಯ್ಯ, ಉಪಾಧ್ಯಕ್ಷರಾಗಿ ಕುಂಡ್ಯೂಳಂಡ  ಕವಿತಾ ಮುತ್ತಣ್ಣ ಆಯ್ಕೆಯಾಗಿದ್ದಾರೆ. ನಾಪೋಕ್ಲುವಿನಲ್ಲಿ ಇಂದು ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ  ಬಿಜೆಪಿ ಬೆಂಬಲಿತ 13 ಅಭ್ಯರ್ಥಿಗಳ ಗೆಲುವು ಸಾಧಿಸಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಕಕ್ಕಬೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ಕುಮಾರ್ ಕಾರ್ಯನಿರ್ವಹಿಸಿದ್ದಾರೆ. ವರದಿ : ದುಗ್ಗಳ ಸದಾನಂದ

Read More

ಮಡಿಕೇರಿ ಅ.4  :  ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರಸಭಾ ಸದಸ್ಯೆಯರು, ಮಹಿಳೆಯರ ಬಳಗ, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅ.22 ರಂದು  ಗಾಂಧಿ ಮೈದಾನದಲ್ಲಿ ಮಹಿಳಾ ದಸರಾ ಆಯೋಜಿಸಲಾಗಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮತ್ತು ಮಹಿಳಾ ದಸರಾ ಸಮಿತಿ ಸಂಚಾಲಕಿ ಶ್ವೇತಾ ಪ್ರಶಾಂತ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅ.22 ರಂದು ಬೆಳಗ್ಗೆ 10 ಗಂಟೆಯಿಂದಲೇ ನಗರದ ಗಾಂಧಿ ಮೈದಾನದಲ್ಲಿ 8ನೇ ವಷ೯ದ ಮಹಿಳಾ ದಸರಾವನ್ನು ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ವಿವಿಧ ಸ್ಪಧೆ೯ಗಳನ್ನು ಜಿಲ್ಲೆಯ ಮಹಿಳೆಯರಿಗಾಗಿ ಆಯೋಜಿಸಲಾಗಿದೆ. ಮಹಿಳಾ ದಸರಾ ಅಂಗವಾಗಿನ ಸ್ಪಧೆ೯ಗಳ ವಿವರ ಇಂತಿದೆ. ಎಥ್ ನಿಕ್ ಫ್ಯಾಷನ್ ಶೋ 20 ರಿಂದ 30, ಮತ್ತು 35 ರಿಂದ 45 ವಷ೯ ವಯೋಮಿತಿಯ ಮಹಿಳೆಯರಿಗೆ. ಕನಾ೯ಟಕದ ವಿವಿಧ ಉಡುಗೆಗಳಿಗೆ ಆದ್ಯತೆ – (ಒಟ್ಟು 3 ರಿಂದ 4 ಗುಂಪುಗಳಿಗೆ ಅವಕಾಶ, 1 ಗುಂಪಿನಲ್ಲಿ 10 ಜನರು ಕಡ್ಡಾಯವಾಗಿ…

Read More

ಮಡಿಕೇರಿ, ಅ.4 : ಶಾಂತಿನಿಕೇತನ ಯುವಕ ಸಂಘದ 45ನೇ ವರ್ಷದ ಗಣೇಶ ವಿಸರ್ಜನೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಸೆ.19 ರಂದು ಪ್ರತಿಷ್ಠಾಪಿಸಲ್ಪಟ್ಟು 15 ದಿನಗಳ ಕಾಲ  ವಿಶೇಷ ಪೂಜೆ ಸಲ್ಲಿಸಿದ ಬಳಿಕ  ನಗರದ ಗೌರಿಕೆರೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು. ಗಮನ ಸೆಳೆದ ಮಂಟಪ : ಗಣೇಶ ಮೂರ್ತಿ ವಿಸರ್ಜನೋತ್ಸವ ಅಂಗವಾಗಿ  ಶಾಂತಿನಿಕೇತನ ಯುವಕ ಸಂಘದ ವತಿಯಿಂದ  ರೂ.12 ಲಕ್ಷ  ವೆಚ್ಚದಲ್ಲಿ “ಲೋಕ ಕಲ್ಯಾಣಕ್ಕಾಗಿ ಸಿಂಧೂರ ರಾಕ್ಷಸನನ್ನು ವಧಿಸುವ ಮೂಲಕ ಗಣಪತಿಗೆ ಸಿಂಧೂರ ಗಣಪ” ಎಂಬ ಹೆಸರು ಬಂದಿರುವ ಚಲನವಲನ ಹೊಂದಿರುವ ಕಥಾನಕ ಎಲ್ಲರ ಗಮನ ಸೆಳೆಯಿತು. ಮಂಟಪದ ಪ್ರದರ್ಶನ ನಡೆಯಿತು. ಬ್ರಹ್ಮನ ಮಗ ಸಿಂಧೂರ ದೇವಲೋಕವನ್ನು ವಶಪಡಿಸಿಕೊಳ್ಳಲು ಯುದ್ಧಕ್ಕೆ ಮುಂದಾದ ಸಂದರ್ಭ ನಡೆಯುವ ಸನ್ನಿವೇಶಗಳನ್ನು ಮನಮೋಹಕವಾಗಿ ಕಟ್ಟಿಕೊಡಲಾಯಿತು. ಕಥಾನಕ ಪ್ರದರ್ಶನ ಸಂದರ್ಭ ಚಿಮ್ಮುವ ಹೊಗೆ, ಬೆಂಕಿ ಹಾಗೂ ಸಿಡಿಯುವ ಪಟಾಕಿಗಳು ರೋಮಾಂಚನ ಅನುಭವ ನೀಡಿತು. ಶಾಂತಿನಿಕೇತನ, ಕೆಎಸ್‍ಆರ್‍ಟಿಸಿ ಡಿಪೋ ಮುಂಭಾಗ, ಜನರತ್ ತಿಮ್ಮಯ್ಯ ವೃತ್ತ, ಹಳೆಯ ಖಾಸಗಿ ಬಸ್ ನಿಲ್ದಾಣ, ಇಂದಿರಾಗಾಂಧಿ ವೃತ್ತ, ಚೌಡೇಶ್ವರಿಯಲ್ಲಿ …

Read More

ಮಡಿಕೇರಿ ಅ.4 :  ಕೊಡಗು ಜಿಲ್ಲೆಯ ಪರಿಶಿಷ್ಟ ಪಂಗಡದ ಹಾಡಿ ನಿವಾಸಿಗಳಿಗೆ  2 ನೇ ಬಾರಿಯ ಪೌಷ್ಠಿಕ ಆಹಾರ ವನ್ನು ವಿತರಿಸಲಾಯಿತು. 250 ಹಾಡಿಗಳಲ್ಲಿ ಪರಿಶಿಷ್ಟ ಪಂಗಡದ ಜನಾಂಗದವರು ವಾಸಿಸುತ್ತಿದ್ದು,  ಜೇನುಕುರುಬ, ಯರವ, ಕಾಡುಕುರುಬ ಮತ್ತು ಕುಡಿಯ ಜನಾಂಗದವರ ಅಂದಾಜು 9500 ಕುಟುಂಬಗಳಿಗೆ 2023-24 ನೇ ಸಾಲಿನ ಪೌಷ್ಠಿಕ ಆಹಾರದ 2ನೇ ಬಾರಿಯ ಸರಬರಾಜನ್ನು  ಪ್ರಾರಂಭಿಸಲಾಗಿದೆ.

Read More

ಸೋಮವಾರಪೇಟೆ ಅ.4 : ವೀರಭದ್ರೇಶ್ವರ ವರ್ದಂತಿ ಮಹೋತ್ಸವದ ಅಂಗವಾಗಿ ಗೌಡಳ್ಳಿ ಹಾಗೂ ಕೋಟೆಯೂರು ವೀರಭದ್ರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ನೇತೃತ್ವದಲ್ಲಿ ತಾಲೂಕಿನ ವಿವಿಧ ವೀರಭದ್ರ ದೇವಾಲಯ ಸಮಿತಿ ಸಹಯೋಗದೊಂದಿಗೆ ವರ್ದಂತಿ ಮಹೋತ್ಸವದ ಅಂಗವಾಗಿ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕಲ್ಲು ಮಠದ ಮಹಾಂತ ಸ್ವಾಮೀಜಿ ಸಾನಿಧ್ಯದಲ್ಲಿ ದೇವರಿಗೆ ಅಭಿಷೇಕ, ಅಷ್ಟೋತ್ತರ ಹಾಗೂ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು. ಐದನೇ ವರ್ಷದ ವೀರಭದ್ರೇಶ್ವರ ವರ್ದಂತಿ ನೆನಪಿಗಾಗಿ ದೇವಾಲಯದ ಆವರಣದಲ್ಲಿ ಬಿಲ್ವಪತ್ರೆ ಹಾಗೂ ರುದ್ರಾಕ್ಷಿ ಗಿಡ ನೆಡಲಾಯಿತು. ಈ ಸಂದರ್ಭ ಸಂಘಟನಾ ವೇದಿಕೆಯ ರಾಷ್ಟ್ರೀಯ ಕಾರ್ಯದರ್ಶಿ ಎಸ್.ಮಹೇಶ್.ತಾಲೂಕು ಅಧ್ಯಕ್ಷ ಜಯರಾಜ್, ಹೋಬಳಿ ಅಧ್ಯಕ್ಷ ಪ್ರಸನ್ನ, ಗೌಡಳ್ಳಿ ಗ್ರಾ.ಪಂ ಅಧ್ಯಕ್ಷ ಅಜ್ಜಳ್ಳಿ ನವೀನ್, ದೇವಾಲಯ ಸಮಿತಿ ಅಧ್ಯಕ್ಷ ದಿನೇಶ್, ಗೌಡಳ್ಳಿ ದೇವಾಲಯ ಸಮಿತಿ ಅಧ್ಯಕ್ಷ ರಾಜಪ್ಪ, ಪ್ರಮುಖರುಗಳಾದ ದಿಲೀಪ್, ಸುನೀಲ್, ಲೋಹಿತ್, ದಿನೇಶ್ ಹಾಗೂ ಮುಂತಾದವರು ಹಾಜರಿದ್ದರು.  

Read More

ನಾಪೋಕ್ಲು ಅ.4 : ಬೆಟ್ಟಗೇರಿ ಸಮೀಪದ ಬಕ್ಕ ಸ್ವಸಹಾಯ, ಸ್ತ್ರೀ ಶಕ್ತಿ, ಗಜಾನನ ಭಕ್ತ ಮಂಡಳಿ ,ಸ್ವಸಹಾಯ ಗುಂಪುಗಳು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ 17ನೇ ವರ್ಷದ ಕೈಲ್ ಪೋಳ್ಡ್ ಕ್ರೀಡಾಕೂಟ ನಡೆಯಿತು. ಬೆಟ್ಟಗೇರಿ ಗ್ರಾ.ಪಂ ಅಧ್ಯಕ್ಷ ಚಳಿಯಂಡ ಕಮಲಾ ಉತ್ತಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ತಹಶೀಲ್ದಾರರಾದ ಸೂದನ ಮೋಹನ್ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವುದು, ಎಲ್ ಕೆ ಜಿ ,ಯು ಕೆ ಜಿ ಮಕ್ಕಳಿಗೆ ಕಪ್ಪೆ ಹಾರುವುದು, ಮೆರಥಾನ್, 100 ಮೀಟರ್ ಓಟ,ಮೂರು ಕಾಲಿನ ಓಟ, ಗೋಣಿಚೀಲದ ಓಟ, ಮಹಿಳೆಯರಿಗೆ ಏರ್ ಗನ್ ಶೂಟಿಂಗ್, ನೀರು ಚೆಂಬಿನ ಓಟ, ನಿಂಬೆ ಹಣ್ಣು ಚಮಚದ ಓಟ, ಬಕೇಟಿಗೆ ಚೆಂಡು ಹಾಕುವುದು, ಹಗ್ಗ ಜಗ್ಗಾಟ, ವಾದ್ಯ ಕುಣಿತ ಸೇರಿದಂತೆ ಕಿರಿಯರಿಂದ ವಯಸ್ಕರ ವರೆಗೆ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಆಟೊಟ ಸ್ಪರ್ಧೆಗಳು ನಡೆದವು. ಸಭಾ ಕಾರ್ಯಕ್ರಮ : ಸಂಜೆ ನಡೆದ ಸಮರೋಪ ಸಮಾರಂಭವನ್ನು…

Read More

ನಾಪೋಕ್ಲು ಅ.4 : ಕೊಡವ ಸಮಾಜದ ಅಧಿಕಾರ ಹಸ್ತಾಂತರ ಸಮಾರಂಭವು ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಮಾಜದ ಹಾಲಿ ಅಧ್ಯಕ್ಷ ಅಪ್ಪಚೆಟೋಳಂಡ ಮನು ಮುತ್ತಪ್ಪ ಕೂಡವ ಸಮಾಜ ನಡೆದುಕೊಂಡು ಬಂದಿರುವ ಮಾಹಿತಿ ನೀಡಿದರು. ನೂತನ ಅಧ್ಯಕ್ಷ ಮುಂಡಂಡ. ಸಿ.ನಾಣಯ್ಯ ಸಮಾಜದ ಲೆಕ್ಕಪತ್ರ ಪುಸ್ತಕವನ್ನು ನೀಡುವುದರೊಂದಿಗೆ ಅಧಿಕಾರ ಹಸ್ತಾಂತರಿಸಿ ನೂತನ ಆಡಳಿತ ಮಂಡಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮುಂಡಂಡ.ಸಿ.ನಾಣಯ್ಯ ಮಾತನಾಡಿ, ಕೊಡವ ಜನಾಂಗದ ಅಭಿವೃದ್ಧಿಗೆ ಹಾಗೂ ಕೊಡವ ಸಮಾಜದ ಅಭಿವೃದ್ಧಿಗೆ ಎಲ್ಲಾ ಆಡಳಿತ ಮಂಡಳಿ ಅವರನ್ನು ಒಟ್ಟುಗೂಡಿಸಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು. ವೇದಿಕೆಯಲ್ಲಿ ನೂತನ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ, ನೂತನ ಖಜಾಂಚಿ ಚೌರಿರ ಉದಯ, ನೂತನ ಜಂಟಿ ಕಾರ್ಯದರ್ಶಿ ಮಾಚೇಟಿರ ಕುಸು ಕುಶಾಲಪ್ಪ, ಹಾಲಿ ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ, ಹಾಲಿ ಖಜಾಂಜಿ ಅಪ್ಪರ0ಡ ಸುಧೀರ್ ಅಯ್ಯಪ್ಪ, ಹಾಲಿ ಹಾಗೂ ನೂತನ ನಿರ್ದೇಶಕರು, ಸದಸ್ಯರು ಹಾಜರಿದ್ದರು. ವರದಿ : ದುಗ್ಗಳ ಸದಾನಂದ.  

Read More