ನಾಪೋಕ್ಲು ಅ.4 : ಬೆಟ್ಟಗೇರಿ ಸಮೀಪದ ಬಕ್ಕ ಸ್ವಸಹಾಯ, ಸ್ತ್ರೀ ಶಕ್ತಿ, ಗಜಾನನ ಭಕ್ತ ಮಂಡಳಿ ,ಸ್ವಸಹಾಯ ಗುಂಪುಗಳು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ 17ನೇ ವರ್ಷದ ಕೈಲ್ ಪೋಳ್ಡ್ ಕ್ರೀಡಾಕೂಟ ನಡೆಯಿತು. ಬೆಟ್ಟಗೇರಿ ಗ್ರಾ.ಪಂ ಅಧ್ಯಕ್ಷ ಚಳಿಯಂಡ ಕಮಲಾ ಉತ್ತಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ತಹಶೀಲ್ದಾರರಾದ ಸೂದನ ಮೋಹನ್ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವುದು, ಎಲ್ ಕೆ ಜಿ ,ಯು ಕೆ ಜಿ ಮಕ್ಕಳಿಗೆ ಕಪ್ಪೆ ಹಾರುವುದು, ಮೆರಥಾನ್, 100 ಮೀಟರ್ ಓಟ,ಮೂರು ಕಾಲಿನ ಓಟ, ಗೋಣಿಚೀಲದ ಓಟ, ಮಹಿಳೆಯರಿಗೆ ಏರ್ ಗನ್ ಶೂಟಿಂಗ್, ನೀರು ಚೆಂಬಿನ ಓಟ, ನಿಂಬೆ ಹಣ್ಣು ಚಮಚದ ಓಟ, ಬಕೇಟಿಗೆ ಚೆಂಡು ಹಾಕುವುದು, ಹಗ್ಗ ಜಗ್ಗಾಟ, ವಾದ್ಯ ಕುಣಿತ ಸೇರಿದಂತೆ ಕಿರಿಯರಿಂದ ವಯಸ್ಕರ ವರೆಗೆ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಆಟೊಟ ಸ್ಪರ್ಧೆಗಳು ನಡೆದವು. ಸಭಾ ಕಾರ್ಯಕ್ರಮ : ಸಂಜೆ ನಡೆದ ಸಮರೋಪ ಸಮಾರಂಭವನ್ನು…
ಲೇಖಕ: admin
ನಾಪೋಕ್ಲು ಅ.4 : ಕೊಡವ ಸಮಾಜದ ಅಧಿಕಾರ ಹಸ್ತಾಂತರ ಸಮಾರಂಭವು ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಮಾಜದ ಹಾಲಿ ಅಧ್ಯಕ್ಷ ಅಪ್ಪಚೆಟೋಳಂಡ ಮನು ಮುತ್ತಪ್ಪ ಕೂಡವ ಸಮಾಜ ನಡೆದುಕೊಂಡು ಬಂದಿರುವ ಮಾಹಿತಿ ನೀಡಿದರು. ನೂತನ ಅಧ್ಯಕ್ಷ ಮುಂಡಂಡ. ಸಿ.ನಾಣಯ್ಯ ಸಮಾಜದ ಲೆಕ್ಕಪತ್ರ ಪುಸ್ತಕವನ್ನು ನೀಡುವುದರೊಂದಿಗೆ ಅಧಿಕಾರ ಹಸ್ತಾಂತರಿಸಿ ನೂತನ ಆಡಳಿತ ಮಂಡಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮುಂಡಂಡ.ಸಿ.ನಾಣಯ್ಯ ಮಾತನಾಡಿ, ಕೊಡವ ಜನಾಂಗದ ಅಭಿವೃದ್ಧಿಗೆ ಹಾಗೂ ಕೊಡವ ಸಮಾಜದ ಅಭಿವೃದ್ಧಿಗೆ ಎಲ್ಲಾ ಆಡಳಿತ ಮಂಡಳಿ ಅವರನ್ನು ಒಟ್ಟುಗೂಡಿಸಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು. ವೇದಿಕೆಯಲ್ಲಿ ನೂತನ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ, ನೂತನ ಖಜಾಂಚಿ ಚೌರಿರ ಉದಯ, ನೂತನ ಜಂಟಿ ಕಾರ್ಯದರ್ಶಿ ಮಾಚೇಟಿರ ಕುಸು ಕುಶಾಲಪ್ಪ, ಹಾಲಿ ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ, ಹಾಲಿ ಖಜಾಂಜಿ ಅಪ್ಪರ0ಡ ಸುಧೀರ್ ಅಯ್ಯಪ್ಪ, ಹಾಲಿ ಹಾಗೂ ನೂತನ ನಿರ್ದೇಶಕರು, ಸದಸ್ಯರು ಹಾಜರಿದ್ದರು. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಅ.4 : (ವರದಿ : ಬೊಳ್ಳಜಿರ ಬಿ.ಅಯ್ಯಪ್ಪ) ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸರಕಾರದ ಆದೇಶದಂತೆ ಇತ್ತೀಚೆಗೆ ಕೊಡಗು ವಿಶ್ವವಿದ್ಯಾನಿಯಕ್ಕೆ ಸೇರ್ಪಡೆಗೊಂಡಿದೆ. ಇದಾದ ನಂತರ ಕಾಲೇಜ್ ನಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. 2023-24ನೇ ಸಾಲಿನಲ್ಲಿ ಕಾಲೇಜ್ ಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ 2/3 ರಷ್ಟು ಅತಿಥಿ ಉಪನ್ಯಾಸಕರನ್ನು ಮಾತ್ರ ನೇಮಕ ಮಾಡಲಾಗಿದೆ ಹಾಗೂ ಕೊಡಗು ವಿಶ್ವವಿದ್ಯಾನಿಲಯದಿಂದ ಯಾವುದೇ ಅತಿಥಿ ಉಪನ್ಯಾಸಕರ ನೇಮಕ ಮಾಡಿಲ್ಲ. ಇದರಿಂದ ಕಾಲೇಜ್ ನಲ್ಲಿ ಸುಮಾರು ಶೇ.40ರಷ್ಟು ಅತಿಥಿ ಉಪನ್ಯಾಸಕರ ಕೊರತೆ ಎದುರಾಗಿದ್ದು, ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ತೊಂದರೆಯಾಗಿದೆ. ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶುಚಿತ್ವ, ಭದ್ರತೆ ಹಾಗೂ ಗ್ರೂಪ್ ಡಿ ಸಿಬ್ಬಂದಿಗಳನ್ನು ಒಳಗೊಂಡ 31 ಮಂದಿಯ ಮಾನವ ಸಂಪನ್ಮೂಲ ಸೇವೆಯನ್ನು 2023 ಅಕ್ಟೋಬರ್ 1ಕ್ಕೆ ಅಂತ್ಯಗೊಳಿಸಲಾಗಿದೆ. ಅಲ್ಲದೆ 14 ಮಂದಿ ತಾತ್ಕಾಲಿಕ ನೆಲೆಯಲ್ಲಿ ನೇಮಕಗೊಂಡ ಸಿಬ್ಬಂದಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.…
ವಿರಾಜಪೇಟೆ ಅ.4 : ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗ, ಅಂತರೀಕ ಗುಣಮಟ್ಟ ಭರವಸಾ ಕೋಶ ಹಾಗೂ ಸ್ವಾವಲಂಬಿ ಭಾರತ ಅಭಿಯಾನ, ಕೊಡಗು ಜಿಲ್ಲೆ ಆಶ್ರಯದಲ್ಲಿ ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾವಲಂಬಿ ಭಾರತ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾಲೇಜಿನ ಸಭಾಂಗಣದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸ್ವಾವಲಂಬಿ ಭಾರತ ಅಭಿಯಾನದ ಕರ್ನಾಟಕ ರಾಜ್ಯ ಸಂಚಾಲಕ ಪ್ರೊ.ಸತ್ಯನಾರಯಣ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರಾಚೀನ ಕಾಲದಲ್ಲಿ ಶ್ರೀಮಂತ ರಾಷ್ಟ್ರವಾಗಿದ್ದ ಭಾರತ ಹೇಗೆ ವಿದೇಶಿಯರ ಆಕ್ರಮಣದ ನಂತರ ಬಡರಾಷ್ಟ್ರವಾಯಿತು, ಸ್ವಾತಂತ್ರ್ಯ ನಂತರ ರಾಷ್ಟ್ರದ ಅಭಿವೃದ್ಧಿಗೆ ಹೇಗೆ ವಿವಿಧ ಕಾರ್ಯಕ್ರಮವನ್ನು ಆಯೋಜಿಸಿದರು, 1990ರ ದಶಕದ ನಂತರ ಹೊಸ ಆರ್ಥಿಕ ನೀತಿಯನ್ನು ರೂಪಿಸಿ ಹೇಗೆ ಅಭಿವೃದ್ಧಿಯ ಪಥದಲ್ಲಿ ಸಾಗುತಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಕಳೆದ ಒಂದು ದಶಕದಿಂದ ಭಾರತದ ಬೆಳವಣಿಗೆಯ ದರ ಏರಿಕೆಯಾಗುತ್ತಿರುವುದು ಮತ್ತು ಅದಕ್ಕೆ ಸರ್ಕಾರ ರೂಪಿಸಿದ ಜನಹಿತ ಕಾರ್ಯಕ್ರಮಗಳು ಮತ್ತು ಇಂದು ಭಾರತ ಜಗತ್ತಿನ ಪ್ರಬಲ…
ವಿರಾಜಪೇಟೆ ಅ.4 : ನಗರದ ಕಾಫಿ ತೋಟದ ಒಂದರಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ತಜ್ಞರಾದ ಸತೀಶ್ ಮತ್ತು ಅಮಾನ್ ರಕ್ಷಿಸಿದ್ದಾರೆ. ವಿರಾಜಪೇಟೆ ನಗರದ ಪಂಜರ್ ಪೇಟೆಯ ನಿವಾಸಿ ದಿವಂಗತ ಜನರಲ್ ಕೊದಂಡ ಸೋಮಣ್ಣ ಅವರ ಮನೆಯ ತೋಟದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಇರುವ ಬಗ್ಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಉರಗ ತಜ್ಞರಾದ ಸತೀಶ್ ಹಾಗೂ ಅಮಾನ್ ಸತತ ಎರಡು ಗಂಟೆಯ ಪ್ರಯತ್ನದಿಂದ ಸುಮಾರು 11 ಅಡಿ ಉದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ ವನ್ನು ರಕ್ಷಿಸಿದ್ದಾರೆ. ನಂತರ ಕಾಳಿಂಗ ಸರ್ಪವನ್ನು ಮಾಕುಟ್ಟ ವಲಯ ಅರಣ್ಯಕ್ಕೆ ಬಿಟ್ಟರು. ವರದಿ : ಕಿಶೋರ್ ಕುಮಾರ್ ಶೆಟ್ಟಿ
ಕಡಂಗ ಅ.3 : ನರಿಯಂದಡ ಗ್ರಾಮ ಪಂಚಾಯಿತಿ ಹಾಗೂ ಆಟೋ ಚಾಲಕರ ಸಂಘದ ವತಿಯಿಂದ ಅರಪಟ್ಟು ಕಡಂಗ ಪಟ್ಟಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ಮಹಾತ್ಮ ಗಾಂಧೀಜಿಯವರ ಜನ್ಮ ದಿನದ ಅಂಗವಾಗಿ ಪಟ್ಟಣದ ಮುಖ್ಯರಸ್ತೆಗಳ ಬದಿ ಕಸ ಕಟ್ಟಿಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು. ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಸ್ವಚ್ಛತೆ ಕಾಪಾಡಲು ನಮ್ಮೆಲ್ಲರ ಕರ್ತವ್ಯ ಹಾಗೂ ಸ್ವಚ್ಛತೆಯಿಂದ ಆಗುವ ಪ್ರಾಮುಖ್ಯತೆಯನ್ನು ತಿಳಿಸಲಾಯಿತು. ಗ್ರಾಮ ಪಂಚಾಯತ್ ಸದಸ್ಯರಾದ ಸಿ.ಇ.ಸುಬ್ಬೀರ್ , ಪಾಂಡ0ಡ ರಾಣಿ ಗಣಪತಿ , ವಾಣಿ ತಮ್ಮಯ್ಯ ,ಗ್ರಾಮ ಪಂಚಾಯಿತಿ ಅಧಿಕಾರಿ ಆಶಾ ಕುಮಾರಿ, ದಿನೇಶ್, ಗಣಪತಿ ದೇವಸ್ಥಾನ ಅಧ್ಯಕ್ಷ ಕುಲ್ಲಚಂಡ ಸಾಬಾ ಕರುಂಬಯ್ಯ, ಸ್ಥಳೀಯರಾದ ಝಕರಿಯ , ಆಟೋ ಚಾಲಕರಾದ, ಸಿದ್ದಿಕ್, ತಿಮ್ಮಯ್ಯ, ಹಂಸ, ಲೋಕೇಶ್, ಮಮ್ಮುಟ್ಟಿ ಸುನಿಲ್ ಹಾಜರಿದ್ದರು. ವರದಿ : ನೌಫಲ್ ಕಡಂಗ
ಮಡಿಕೇರಿ ಅ.3 : ಗಾಂಧಿ ಜಯಂತಿಯ ಅಂಗವಾಗಿ ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ ಆವರಣದಲ್ಲಿ ನಿರ್ಮಾಣಗೊಂಡ 9 ಅಡಿಯ ಗಾಂಧಿ ಪ್ರತಿಮೆನ್ನು ಶಾಸಕ ಡಾ.ಮಂತರ್ ಗೌಡ ಅವರು ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆ ಮತ್ತು ಉತ್ತಮ ಚಾರಿತ್ರ್ಯವನ್ನು ಬೆಳೆಸಿಕೊಳ್ಳಲು ಕರೆ ನೀಡಿದರು. ನವೋದಯ ವಿದ್ಯಾಲಯ ಸಮಿತಿಯ ನಿವೃತ್ತ ಉಪ ನಿರ್ದೇಶಕ ರಾಘವನ್ ಮಾತನಾಡಿದರು. ಆರ್ಟ್ ಇನ್ ಎಜುಕೇಶನ್ ಯೋಜನೆಯಡಿಯಲ್ಲಿ ಪ್ರತಿಮೆ ನಿರ್ಮಾಣ ಮಾಡಿದ ಮಡಿಕೇರಿ ಕಲಾವಿದ ಆರ್.ಸಂದೀಪ್ ಕುಮಾರ್ ಅವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಹಾಗೂ ವಿದ್ಯಾಲಯದ ಪೋಷಕ ಶಿಕ್ಷಕ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು. ಗಾಂಧೀಜಿಯ ಮೆಚ್ಚಿನ ಭಜನ್ ವೈಷ್ಣವ ಜನತೋ ಹಾಡಿನೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ವಿದ್ಯಾರ್ಥಿಗಳಿಂದ ಭರತನಾಟ್ಯ ಮತ್ತು ಕೊಡವ ನೃತ್ಯ ನಡೆಯಿತು. ಪ್ರಾಂಶುಪಾಲರಾದ ಪಂಕಜಾಕ್ಷನ್ ಅವರು ಸ್ವಾಗತಿಸಿದರು. ಉಪ ಪ್ರಾಚಾರ್ಯರಾದ ಸುಧಾಮಣಿ ಅವರು ವಂದಿಸಿದರು. ಕನ್ನಡ ಶಿಕ್ಷಕರಾದ ಮಾರುತಿ ದಾಸಣ್ಣವರ್ ಕಾರ್ಯಕ್ರಮ ನಿರ್ವಹಿಸಿದರು. :::…
ಮಡಿಕೇರಿ ಅ.3 : ಪೌರಕಾರ್ಮಿಕರಿಗೆ ದೊರಕಬೇಕಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಮಡಿಕೇರಿ ನಗರಸಭೆಯ ಆಡಳಿತ ಮಂಡಳಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ, ಪೌರಸೇವಾ ನೌಕರರ ಸಂಘದ ನೇತೃತ್ವದಲ್ಲಿ ಮಡಿಕೇರಿ ನಗರಸಭೆಯ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು. ನಗರಸಭೆಯ ಕಚೇರಿ ಎದುರು ಘೋಷಣೆಗಳನ್ನು ಕೂಗಿದ ಪೌರ ಕಾರ್ಮಿಕರು ಮೂಲಭೂತ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿದರು. ಸಂಘದ ಉಪಾಧ್ಯಕ್ಷ ಹೆಚ್.ಎಂ.ಲೋಕೇಶ್ ಮಾತನಾಡಿ ಸರಕಾರದಿಂದ ಪೌರಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ. ವಸತಿ ಮತ್ತು ಆಹಾರ ಸೌಲಭ್ಯದಿಂದ ನಾವು ವಂಚಿತರಾಗಿದ್ದೇವೆ. ಗಾಂಧಿ ಜಯಂತಿಯಂದು ಸರಕಾರಿ ರಜೆ ಇದ್ದರೂ ಪೌರಕಾರ್ಮಿಕರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ನಗರಸಭೆಯ ಆರೋಗ್ಯಾಧಿಕಾರಿ ಹಾಜರಿ ಪುಸ್ತಕದಲ್ಲಿ ಗೈರು ಹಾಜರೆಂದು ನಮೂದಿಸಿದ್ದಾರೆ. ಇದು ಪೌರಕಾರ್ಮಿಕರಿಗೆ ಅತೀವ ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಕಳೆದ ಎರಡು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ನಗರಸಭೆಯಿಂದ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸಲಿಲ್ಲ, ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು. …
ಮಡಿಕೇರಿ ಅ.3 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2023 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರ ಹೆಸರುಗಳನ್ನು ಸಾರ್ವಜನಿಕರು ‘ಸೇವಾ ಸಿಂಧು ಪೋರ್ಟಲ್‍ನ’ ವೆಬ್‍ಸೈಟ್ https://sevasindhu.karnataka.gov.in ನಾಮ ನಿರ್ದೇಶನ ಮಾಡಬಹುದಾಗಿದ್ದು, ನಾಮ ನಿರ್ದೇಶನಕ್ಕೆ ಅ. 15 ಕಡೆ ದಿನವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಡಿಕೇರಿ ಅ.3 : ಪೌರಕಾರ್ಮಿಕರಿಗೆ ದೊರಕಬೇಕಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಮಡಿಕೇರಿ ನಗರಸಭೆಯ ಆಡಳಿತ ಮಂಡಳಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ, ಪೌರಸೇವಾ ನೌಕರರ ಸಂಘದ ನೇತೃತ್ವದಲ್ಲಿ ಮಡಿಕೇರಿ ನಗರಸಭೆಯ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು. ನಗರಸಭೆಯ ಕಚೇರಿ ಎದುರು ಘೋಷಣೆಗಳನ್ನು ಕೂಗಿದ ಪೌರ ಕಾರ್ಮಿಕರು ಮೂಲಭೂತ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿದರು. ಸಂಘದ ಉಪಾಧ್ಯಕ್ಷ ಹೆಚ್.ಎಂ.ಲೋಕೇಶ್ ಮಾತನಾಡಿ ಸರಕಾರದಿಂದ ಪೌರಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ. ವಸತಿ ಮತ್ತು ಆಹಾರ ಸೌಲಭ್ಯದಿಂದ ನಾವು ವಂಚಿತರಾಗಿದ್ದೇವೆ. ಗಾಂಧಿ ಜಯಂತಿಯಂದು ಸರಕಾರಿ ರಜೆ ಇದ್ದರೂ ಪೌರಕಾರ್ಮಿಕರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ನಗರಸಭೆಯ ಆರೋಗ್ಯಾಧಿಕಾರಿ ಹಾಜರಿ ಪುಸ್ತಕದಲ್ಲಿ ಗೈರು ಹಾಜರೆಂದು ನಮೂದಿಸಿದ್ದಾರೆ. ಇದು ಪೌರಕಾರ್ಮಿಕರಿಗೆ ಅತೀವ ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಕಳೆದ ಎರಡು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ನಗರಸಭೆಯಿಂದ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸಲಿಲ್ಲ, ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.






