ಲೇಖಕ: admin

ಮಡಿಕೇರಿ ಅ.3 : ಮಡಿಕೇರಿ ನಗರದ ರಸ್ತೆಗಳ ಅಭಿವೃದ್ಧಿಗೆ ನಗರಸಭೆ ಯಾವುದೇ ಕಾಳಜಿ ತೋರುತ್ತಿಲ್ಲವೆಂದು ಆರೋಪಿಸಿ ಕೊಡಗು ರಕ್ಷಣಾ ವೇದಿಕೆ ನಗರದಲ್ಲಿ ಪ್ರತಿಭಟನೆ ನಡೆಸಿತು. ಸ್ಥಳಕ್ಕೆ ಆಗಮಿಸಿದ ಶಾಸಕ ಡಾ.ಮಂತರ್ ಗೌಡ ಅವರು ರಸ್ತೆ ದುರಸ್ತಿ ಸಂದರ್ಭ ಗುಣಮಟ್ಟ ಕಾಯ್ದುಕೊಳ್ಳುವ ಭರವಸೆ ನೀಡಿದರು. ಕೊರವೇ ಅಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ ಅವರ ನೇತೃತ್ವದಲ್ಲಿ ನಗರದ ಗಾಂಧಿ ಮೈದಾನದಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ನಗರಸಭೆ ವಿರುದ್ಧ ಘೋಷಣೆಗಳನ್ನು ಕೂಗಿದರು. ನಗರದ ಜನತೆಗೆ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯ ನೀಡುವಲ್ಲಿ ನಗರಸಭೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪವನ್ ಪೆಮ್ಮಯ್ಯ ಮಾತನಾಡಿ ನಗರದ ಎಲ್ಲಾ ರಸ್ತೆಗಳು ಹದಗೆಟ್ಟು ಹೊಂಡ ಗುಂಡಿಗಳಾಗಿವೆ, ಪಾದಾಚಾರಿಗಳು ಹಾಗೂ ದ್ವಿಚಕ್ರ ವಾಹನ ಚಾಲಕರು ಬಿದ್ದು ಗಾಯಗೊಂಡ ಘಟನೆಗಳೂ ನಡೆದಿದೆ. ಕೆಲವು ಬಡಾವಣೆಗಳಲ್ಲಿ ವಾಹನ ಸಂಚಾರವೇ ದುಸ್ತರವಾಗಿದೆ. ಹೊಂಡ ಗುಂಡಿಗಳಾದ ಅಶುಚಿತ್ವದ ರಸ್ತೆಗಳಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ರಸ್ತೆಗಳ ಅಭಿವೃದ್ಧಿ ಮತ್ತು ದುರಸ್ತಿ ಬಗ್ಗೆ ಕಾಳಜಿ ತೋರದ ನಗರಸಭೆ ಕಳಪೆ…

Read More

ಮಡಿಕೇರಿ ಅ.3 : ಕುಶಾಲನಗರ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸುವ ಸಭೆಯು ಅಕ್ಟೋಬರ್, 4 ರಂದು ಬೆಳಗ್ಗೆ 10.30 ರಿಂದ 11.30 ಗಂಟೆವರೆಗೆ ಕುಶಾಲನಗರ ಉಪ ವಿಭಾಗ ಕಚೇರಿ ಆವರಣದಲ್ಲಿ ಅಧೀಕ್ಷಕ ಎಂಜಿನಿಯರ್, ಸೆಸ್ಕ್, ಕೊಡಗು ಮತ್ತು ಚಾಮರಾಜನಗರ ವೃತ್ತರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹಾಗೆಯೇ ಸೋಮವಾರಪೇಟೆ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸುವ ಸಭೆಯು ಅಕ್ಟೋಬರ್, 4 ರಂದು ಮಧ್ಯಾಹ್ನ 12.30 ಗಂಟೆಯಿಂದ 01.30 ಗಂಟೆವರೆಗೆ ಸೋಮವಾರಪೇಟೆ ಉಪ ವಿಭಾಗ ಕಚೇರಿ ಆವರಣದಲ್ಲಿ ಅಧೀಕ್ಷಕ ಎಂಜಿನಿಯರ್, ಸೆಸ್ಕ್, ಕೊಡಗು ಮತ್ತು ಚಾಮರಾಜನಗರ ವೃತ್ತರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹಾಗೆಯೇ ಮಡಿಕೇರಿ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದುಕೊರತೆ ನಿವಾರಿಸುವ ಸಭೆಯು ಅಕ್ಟೋಬರ್, 4 ರಂದು ಸಂಜೆ 4 ಗಂಟೆಯಿಂದ 5 ಗಂಟೆವರೆಗೆ ಮಡಿಕೇರಿ ಉಪವಿಭಾಗ ಕಚೇರಿ ಆವರಣದಲ್ಲಿ ಅಧೀಕ್ಷಕ ಎಂಜಿನಿಯರ್, ಸೆಸ್ಕ್, ಕೊಡಗು ಮತ್ತು ಚಾಮರಾಜನಗರ ವೃತ್ತರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸೋಮವಾರಪೇಟೆ, ಕುಶಾಲನಗರ ಮತ್ತು…

Read More

ಮಡಿಕೇರಿ ಅ.3 : ಮಡಿಕೇರಿ 66/11ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಓಂಕಾರೇಶ್ವರ ಫೀಡರ್‍ನಲ್ಲಿ ದಸರಾ ಹಬ್ಬದ ಪ್ರಯುಕ್ತ ವಿದ್ಯುತ್ ಮಾರ್ಗದಲ್ಲಿ ನಿರ್ವಹಣೆ ಹಾಗೂ ದುರಸ್ತಿ ಕಾರ್ಯ ನಿರ್ವಹಿಸಬೇಕಿರುವುದರಿಂದ ಅ.4 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಗೌಡ ಸಮಾಜ, ಕನ್ನಂಬಾಣೆ, ವೈವಸ್, ಗಣಪತಿ ಬೀದಿ, ಓಂಕಾರೇಶ್ವರ ದೇವಸ್ಥಾನ ಸುತ್ತಮುತ್ತ, ಬ್ರಾಹ್ಮಣಬೀದಿ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಹಾಗೆಯೇ ಗದ್ದಿಗೆ ಫೀಡರ್‍ನಲ್ಲಿ ದಸರಾ ಹಬ್ಬದ ಪ್ರಯುಕ್ತ ವಿದ್ಯುತ್ ಮಾರ್ಗದಲ್ಲಿ ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ಅಕ್ಟೋಬರ್, 5 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಎ.ವಿ.ಶಾಲೆ, ಆಜಾದ್‍ನಗರ, ಸಂಪಿಗೆಕಟ್ಟೆ, ತ್ಯಾಗರಾಜ ಕಾಲೋನಿ, ಮಾರುಕಟ್ಟೆ, ರಾಣಿಪೇಟೆ, ಕಾನ್ವೆಂಟ್ ಜಂಕ್ಷನ್, ಕಾವೇರಿ ಬಡಾವಣೆ, ಭಗವತಿನಗರ, ಮಲ್ಲಿಕಾರ್ಜುನ ನಗರ, ಮುತ್ತಪ್ಪ ದೇವಸ್ಥಾನ, ಗಾಳಿಬೀಡು, ಕಾಲೂರು, ಹೆಬ್ಬೆಟ್ಟಗೇರಿ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.…

Read More

ಮಡಿಕೇರಿ ಅ.3 : ಮಾಸ್ಟರ್ ಮೈಂಡ್ ಚೆಸ್ ಸ್ಕೂಲ್ ವತಿಯಿಂದ ಅಕ್ಟೋಬರ್, 08 ರಂದು ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಕೊಡಗು ಜಿಲ್ಲಾ ಮಟ್ಟದ ಚದುರಂಗದ ಆಟ ಪಂದ್ಯಾವಳಿ ನಡೆಯಲಿದೆ. ಅಕ್ಟೋಬರ್, 08 ರಂದು ಬೆಳಗ್ಗೆ 9 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. 7 ರಿಂದ 9 ವರ್ಷದೊಳಗಿನವರಿಗೆ 7 ಟ್ರೋಪಿಗಳು, 11 ರಿಂದ 13 ವರ್ಷದೊಳಗಿನವರಿಗೆ 9 ಟ್ರೋಪಿಗಳು ಹಾಗೂ ಯುವಕರಿಗೆ ಉತ್ತಮ ಆಟಗಾರರಿಗೆ (ಹುಡುಗರಿಗೆ 1, ಹುಡುಗಿಯರಿಗೆ 1) ಟ್ರೋಪಿ ಇರುತ್ತದೆ. ಚೆಸ್ ಆಟಗಾರರು ತಮ್ಮ ಸ್ವಂತ ಚೆಸ್ ಸೆಟ್‍ಗಳನ್ನು ತರಬೇಕು. ಪ್ರವೇಶ ಶುಲ್ಕ ರೂ.300, ಆಟಗಾರರು ಅಕ್ಟೋಬರ್, 08 ರಂದು ಬೆಳಗ್ಗೆ 9.30 ರೊಳಗೆ ಹಾಜರಿರಬೇಕು. 1 ನೇ ಸುತ್ತು ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ. ಅಕ್ಟೋಬರ್, 06 ರೊಳಗೆ ನೋಂದಣಿ ಮಾಡಿಕೊಳ್ಳಬೇಕು(7 ರಿಂದ 9 ವರ್ಷದೊಳಗಿನ ಮತ್ತು 11…

Read More

ಸಿದ್ದಾಪುರ  ಅ.3 :   ಗುಹ್ಯ ಗ್ರಾಮದಲ್ಲಿ  ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ತರಬ್ಯಿತ್ತುಲ್ ಇಸ್ಲಾಂ ಕಮಿಟಿ ವತಿಯಿಂದ  ನೂರುಲ್ ಇಸ್ಲಾಂ ಮದರಸ ಆವರಣದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ  ನಡೆಯಿತು. ಮಿಲಾದ್ ಅಂಗವಾಗಿ ಮಸೀದಿ ಹಾಗೂ ಮದರಸ ಕಟ್ಟಡವು  ವಿದ್ಯುತ್ ಅಲಂಕೃತ ದೀಪಗಳಿಂದ ಕಂಗೊಳಿಸುತ್ತಿತ್ತು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ಮದರಸ ವಿದ್ಯಾರ್ಥಿಗಳಿಂದ ಮೌಲುದ್ ಪಾರಾಯಣ, ದಪ್ ಪ್ರದರ್ಶನ, ಮಜ್ಲಿಸ್, ಖವಾಲಿ, ಗಾಯನ, ಧಾರ್ಮಿಕ, ಸಾಂಸ್ಕೃತಿಕ, ಸ್ಕೌಟ್ಸ್ ಕಾರ್ಯಕ್ರಮಗಳು ಗಮನ ಸೆಳೆಯಿತು. ಮದರಸ ಶಿಕ್ಷಣದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಮಿಲಾದ್ ಆಚರಣೆಯ ಅಂಗವಾಗಿ ಪ್ರವಾದಿ ಸಂದೇಶ ಘೋಷಣ ರ‍್ಯಾಲಿ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮದರಸಾ ವಿದ್ಯಾರ್ಥಿಗಳ ಸ್ಕೌಟ್ಸ್, ದಫ್ ಪ್ರದರ್ಶನಗಳ ಮೂಲಕ ಸಂಚರಿಸಿತು. ಸುತ್ತಮುತ್ತಲ ಭಾಗಗಳಿಂದ ಆಗಮಿಸಿದ ಸಾವಿರಾರು ಮಂದಿ ಸಂದೇಶ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಹಿರಿಯರು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಸಮಿತಿಯ ಅಧ್ಯಕ್ಷ…

Read More

ಸುಂಟಿಕೊಪ್ಪ ಅ.3 : ಮಾದಾಪುರ ಗ್ರಾಮ ಪಂಚಾಯಿತಿಗೆ 2023ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ವಿಕಾಸಸೌಧದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರು ಮಾದಾಪುರ ಗ್ರಾ.ಪಂ ಅಧ್ಯಕ್ಷ ಮನುಬಿದ್ದಪ್ಪ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸುಮೇಶ್ ಭಾವೆ ಸ್ವೀಕರಿಸಿದರು. ಗ್ರಾಮ ಪಂಚಾಯಿತಿಯ ಅತ್ಯುತ್ತಮ ಕಾರ್ಯನಿರ್ವಹಣೆ ಕಸ ವಿಲೇವಾರಿ ಅಭಿವೃದ್ಧಿ ಕಾರ್ಯದಲ್ಲಿ ತೋರಿದ ಕಾರ್ಯಕ್ಷಮತೆ, ಪಾರದರ್ಶಕ ಆಡಳಿತ, ಸ್ವಚ್ಚತೆಗೆ ಆದ್ಯತೆ ಸೇರಿದಂತೆ ಉತ್ತಮ ಆಡಳಿತ ನಡೆಸಿದ ರಾಜ್ಯದ 233 ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಸರಕಾರ ಗಾಂಧಿ ಗ್ರಾಮ ಪ್ರಶಸ್ತಿ ನೀಡಿದ್ದು, ಅದರಲ್ಲಿ ಕೊಡಗಿನ ಮಾದಾಪುರ, ಗುಡ್ಡೆಹೊಸೂರು, ಗಾಳಿಬೀಡು, ಹಾತೂರು ಹಾಗೂ ಕಣ್ಣಂಗಾಲ ಗ್ರಾ.ಪಂ ಪ್ರಶಸ್ತಿಗೆ ಭಾಜನವಾಗಿದೆ. 5 ಲಕ್ಷ ರೂ ನಗದು ಬಹುಮಾನ ಹಾಗೂ ಪ್ರಶಸ್ತಿಯನ್ನು ವಿತರಿಸಲಾಯಿತು.

Read More

ಮಡಿಕೇರಿ ಅ.3 : ಭಾಗಮಂಡಲ ಗಜಾನನ ಯುವಕ ಸಂಘದ ಗಣೇಶ ಹಬ್ಬದ ಬಳಿಕ  2023-24ನೇ ಸಾಲಿನ ಗಜಾನನ ಯುವಕ ಸಂಘಕ್ಕೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ಭಾಗಮಂಡಲ ಶಾಲಾ ಮೈದಾನದಲ್ಲಿ ನಡೆದ ಸಭೆಯಲ್ಲಿ ಸಂಘದ ಸದಸ್ಯರ ಸಮ್ಮುಖದಲ್ಲಿ  ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಗೌರೀಶ್ ರೈ ಹಾಗೂ ಉಪಾಧ್ಯಕ್ಷರಾಗಿ ಪ್ರಜ್ವಲ್ (ಮುನ್ನ) ಹಾಗೂ ಕಾರ್ಯದರ್ಶಿಯಾಗಿ ಬಿ.ಕೆ.ಮಂಜು ಮೂರನೇ ಬಾರಿಗೆ ನೇಮಕಗೊಂಡರು. ನಿರ್ದೇಶಕರಾಗಿ ಕೀರ್ತನ್ (ಮುದ್ದು), ಆದೇಶ್ (ಅದಿ), ಮನೋಜ್ ಮನು, ಜೆ.ಪಿ. ಜಯಪ್ರಕಾಶ್, ಕಿಶೋರ್, ಬಿ.ಆರ್. ಮಂಜು, ಜಸ್ವಂತ್ (ದೊರೆ), ಜಿತೇಶ್ (ಜಿತ್ತು), ಬಿ.ಬಿ.ಹರ್ಷಿತ್ , ದೇಶಿಕ್, ಅಭಿಜಿತ್, ಸಚಿನ್, ಕೀರ್ತನ್, ಲತೇಶ್ , ರಾಜೇಶ್  ನೇಮಕಗೊಂಡರು. 

Read More

ಸಿದ್ದಾಪುರ ಅ.3 :  ಅಮ್ಮತ್ತಿ ಕಾರ್ಮಾಡು ಶ್ರೀ ಗಜಾನನ ಗೆಳೆಯರ ಬಳಗದ ವತಿಯಿಂದ ಪ್ರಥಮ ವರ್ಷದ ಗೌರಿ ಗಣೇಶ ವಿಸರ್ಜನೋತ್ಸವ ಶ್ರದ್ಧಾಭಕ್ತಿಯಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಗೌರಿ ಗಣೇಶ ವಿಸರ್ಜನೆ ಸಂದರ್ಭ ಮುಂಜಾನೆಯಿಂದಲೇ ಗಣಪತಿ ಹೋಮ, ಪೂಜಾ ಕೈಂಕರ್ಯಗಳು ನಡೆಯಿತು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ವಿಸರ್ಜನೋತ್ಸವ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ನಂತರ ಅಲಂಕೃತ ಮಂಟಪದಲ್ಲಿ ಗೌರಿ ಗಣೇಶ ಮೂರ್ತಿಯನ್ನು ಕುಳ್ಳಿರಿಸಿ ವಾದ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಸಿ ಮದ್ರೀರ ಗಣೇಶ್  ಅವರ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.

Read More

ನಾಪೋಕ್ಲು ಅ.3 : ಗ್ರಾಮಗಳ ಪರಿಸರ ಸ್ವಚ್ಛವಾದಾಗ ಮಾತ್ರ ಎಲ್ಲರೂ ಆರೋಗ್ಯವಂತರಾಗಲು ಸಾಧ್ಯ ಎಂದು ಸ್ಥಳಿಯ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಹೇಳಿದರು. ಕಲ್ಲುಮೊಟ್ಟೆ ಗ್ರಾಮ ಪಂಚಾಯಿತಿ ವತಿಯಿಂದ ಸಮುದಾಯ ಭವನದಲ್ಲಿ ಆಯೋಜಿಸಿದ ಸ್ವಚ್ಚ ಭಾರತ್ ಅಭಿಯಾನ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಎಲ್ಲರೂ ಒಗ್ಗಟ್ಟಾಗಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವುದರ ಮೂಲಕ ಸ್ವಚ್ಛ ಭಾರತ್ ಅಭಿಯಾನಕ್ಕೆ ಸಹರಿಸುವಂತೆ ಮನವಿ ಮಾಡಿದರು. ಅಭಿವೃದ್ಧಿ ಅಧಿಕಾರಿ ಚೋoದಕ್ಕಿ ಮಾತನಾಡಿ, ಗ್ರಾಮಸ್ಥರು ತಮ್ಮ ವ್ಯಾಪ್ತಿಯಲ್ಲಿ ಸಮಸ್ಯೆ ಬಂದಾಗ ಗ್ರಾಮ ಸಭೆಗೆ ಅಥವಾ ಪಂಚಾಯಿತಿ ಗಮನಕ್ಕೆ ತರುವಂತೆ ತಿಳಿಸಿದರು. ಗ್ರಾ.ಪಂ ಉಪಾಧ್ಯಕ್ಷ ಹೇಮಾ ಅರುಣ್, ಸದಸ್ಯ ಕುಲ್ಲೇಟಿರ ಅರುಣ್ ಬೇಬ, ಶಿವಚಳಿಯಂಡ ಜಗದೀಶ್ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸ್ವಚ್ಚತಾ ಪ್ರತಿಜ್ಞಾ ವಿಧಿ ಮಾಡಲಾಯಿತು. ಶೌರ್ಯ ತಂಡ ಬಾಳೆಯಡ ದಿವ್ಯಾ,ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತೆಯರು, ಸಾರ್ವಜನಿಕರು ಹಾಜರಿದ್ದರು. ಆಶಾಲತಾ ಸ್ವಾಗತಿಸಿದರು. ಪಿಡಿಒ ಚೋoದಕ್ಕಿ ವಂದಿಸಿದರು. ಈ ಸಂದರ್ಭ ಸಮುದಾಯ ಭವನ ದ…

Read More

ನಾಪೋಕ್ಲು ಅ.3 : ಇಂದಿನ ಮಕ್ಕಳೇ ಮುಂದಿನ ಸಂಪತ್ತು ಆಗಿದ್ದು, ಮಕ್ಕಳು ತಮ್ಮ ಕಾಲ ಮೇಲೆ ನಿಂತು ಸ್ವಾವಲಂಬನೆಯ ಬದುಕು ಸಾಗಿಸಬೇಕು ಎಂಬ ಉದ್ದೇಶದಿಂದ ಹರ್ ಮಂದಿರ್ ಶಾಲೆಯನ್ನು ಸ್ಥಾಪಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಹೇಳಿದರು. ಕಾಟಕೇರಿಯ ಹರ್ ಮಂದಿರ್ ಶಾಲಾ ವತಿಯಿಂದ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ಅಂಗವಾಗಿ ನಾಪೋಕ್ಲು ಮಹಿಳಾ ಸಮಾಜದಲ್ಲಿ ಸಾರ್ವಜನಿಕರಿಗಾಗಿ ಏರ್ಪಡಿಸಲಾಗಿದ್ದ ತಕಲಿ ಮತ್ತು ಚರಕ ದಿಂದ ನೂಲು ತೆಗೆಯುವ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹರ್ ಮಂದಿರ್ ಶಾಲೆಯು ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ. 19 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಶಾಲೆಯಲ್ಲಿ ಇಂದು 130 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 10 ಲಕ್ಷ ಕುಟುಂಬದವರಿಗೆ ಸಮುದಾಯ ಸಬಲೀಕರಣ ಮಾಡಬೇಕು ಎಂಬ ಉದ್ದೇಶವನ್ನು ಶಾಲೆ ಹೊಂದಿದೆ. ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುವುದರೊಂದಿಗೆ ಸಂತ ಹಾಗೂ ಸೈನಿಕ ಗುಣಗಳನ್ನು ಬೆಳಸಿಕೊಂಡು ಅತ್ಯುತ್ತಮ ನಾಯಕರಾಗಿ ಬೆಳೆಯಬೇಕು ಎಂದರು. ಗಾಂಧೀಜಿಯವರು ಬ್ರಿಟಿಷರನ್ನು ಅವಲಂಬಿಸುವುದು ಬೇಡ ಎನ್ನುವ ಉದ್ದೇಶದಿಂದ ಸ್ವದೇಶಿ ಚಳುವಳಿಯನ್ನು…

Read More