ಲೇಖಕ: admin

ನಾಪೋಕ್ಲು ಅ.3 : ಇಂದಿನ ಮಕ್ಕಳೇ ಮುಂದಿನ ಸಂಪತ್ತು ಆಗಿದ್ದು, ಮಕ್ಕಳು ತಮ್ಮ ಕಾಲ ಮೇಲೆ ನಿಂತು ಸ್ವಾವಲಂಬನೆಯ ಬದುಕು ಸಾಗಿಸಬೇಕು ಎಂಬ ಉದ್ದೇಶದಿಂದ ಹರ್ ಮಂದಿರ್ ಶಾಲೆಯನ್ನು ಸ್ಥಾಪಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಹೇಳಿದರು. ಕಾಟಕೇರಿಯ ಹರ್ ಮಂದಿರ್ ಶಾಲಾ ವತಿಯಿಂದ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ಅಂಗವಾಗಿ ನಾಪೋಕ್ಲು ಮಹಿಳಾ ಸಮಾಜದಲ್ಲಿ ಸಾರ್ವಜನಿಕರಿಗಾಗಿ ಏರ್ಪಡಿಸಲಾಗಿದ್ದ ತಕಲಿ ಮತ್ತು ಚರಕ ದಿಂದ ನೂಲು ತೆಗೆಯುವ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹರ್ ಮಂದಿರ್ ಶಾಲೆಯು ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ. 19 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಶಾಲೆಯಲ್ಲಿ ಇಂದು 130 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 10 ಲಕ್ಷ ಕುಟುಂಬದವರಿಗೆ ಸಮುದಾಯ ಸಬಲೀಕರಣ ಮಾಡಬೇಕು ಎಂಬ ಉದ್ದೇಶವನ್ನು ಶಾಲೆ ಹೊಂದಿದೆ. ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುವುದರೊಂದಿಗೆ ಸಂತ ಹಾಗೂ ಸೈನಿಕ ಗುಣಗಳನ್ನು ಬೆಳಸಿಕೊಂಡು ಅತ್ಯುತ್ತಮ ನಾಯಕರಾಗಿ ಬೆಳೆಯಬೇಕು ಎಂದರು. ಗಾಂಧೀಜಿಯವರು ಬ್ರಿಟಿಷರನ್ನು ಅವಲಂಬಿಸುವುದು ಬೇಡ ಎನ್ನುವ ಉದ್ದೇಶದಿಂದ ಸ್ವದೇಶಿ ಚಳುವಳಿಯನ್ನು…

Read More

ಮಡಿಕೇರಿ ಅ.3 : ಕರ್ನಾಟಕ ರಾಜ್ಯ ಸರ್ಕಾರಿ ಎಸ್‍ಸಿ, ಎಸ್‍ಟಿ ನೌಕರರ ಸಮನ್ವಯ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಕುಶಾಲನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಎಪಿಸಿಎಂ ಸಭಾಂಗಣದ ಜೈ ಭೀಮ್ ಸ್ಮರಣೆ ವೇದಿಕೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು, ದೇಶಕ್ಕೆ ವಿಶ್ವ ಶೇಷ್ಠ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಮಹಾ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರು ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ ಎಂದು ತಿಳಿಸಿದರು. ನೌಕರರ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ಮಾತನಾಡಿ, ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ ಸೇರಿ ಹಲವು ಕ್ಷೇತ್ರಗಳಿಗೆ ಡಾ.ಅಂಬೇಡ್ಕರ್ ಅವರು ನೀಡಿದ ಕೊಡುಗೆ ಅಪಾರ ಎಂದರು. ಅಂಬೇಡ್ಕರ್ ವಿಚಾರವಾದಿ ಬಿ.ಗೋಪಾಲ ಮಾತನಾಡಿ, ಅಸ್ಪೃಶ್ಯತೆ ಮತ್ತು ಅಸಮಾನತೆ ಅಂದೋಲನ ಪ್ರಾರಂಭಿಸಿ ಶೋಷಿತ ವರ್ಗಕ್ಕೆ ನ್ಯಾಯ ಒದಗಿಸಲು ನಿರಂತರ ಹೋರಾಟ ಮಾಡಿದ ಅಂಬೇಡ್ಕರ್ ಅವರು ದೇಶ ಕಂಡ ಮಹಾರತ್ನ ಎಂದು…

Read More

ಮಡಿಕೇರಿ ಅ.3 : ದೇವರಕೊಲ್ಲಿ ಬದ್ರಿಯಾ ಮಸ್ಜಿದ್ ಮತ್ತು ನೂರುಲ್ ಇಸ್ಲಾಂ ಸಮಿತಿ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ ಜನ್ಮ ದಿನದ ಅಂಗವಾಗಿ ಇಸ್ಕ್ ಹಾಗೂ ಮಕ್ಕಳ ಪ್ರತಿಭೋತ್ಸವ ಕಾರ್ಯಕ್ರಮ ನಡೆಯಿತು. ಮಸೀದಿ ಅಧ್ಯಕ್ಷ  ಕೆ.ಸಿ.ಹಂಸ  ಧ್ವಜಾರೋಹಣ ನೆರವೇರಿಸಿದರು. ಮಸೀದಿ ಇಮಾಮಾರಾದ ಜಲೀಲ್ ಸಖಾಫಿ ದುಆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಹನೀಫ್ ಚೊಕ್ಕಂಡಳ್ಳಿ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಮದೆ ಗ್ರಾ.ಪಂ ಸದಸ್ಯ ಸೈದಲವಿ ಪಾಲ್ಗೊಂಡು ಶುಭಹಾರೈಸಿದರು. ಮಗ್ರಿಬ್ ನಮಾಜಿನ ನಂತರ ಉಮ್ಮರ್ ಸಖಾಫಿ ಕೊಂಡಂಗೇರಿ, ಮುದರಿಸ್ ಸಿರಾಜುಲ್ ಹುದಾ ಕುಟ್ಯಾಡಿ  ಹುಬ್ಬುರಸೂಲ್ ಪ್ರಭಾಷಣ  ಹಾಗೂ ದುಆ ನೆರವೇರಿಸಿದರು.  ಕೊನೆಯಲ್ಲಿ ಅಬ್ಬಾಸ್ ಹಾಜಿ ಉಚ್ಚಿಲ, ಜಾಬಿರ್ ನಿಜಾಮಿ (save the dreams) ಮತ್ತು ಹಲವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ  ದೇವರಕೊಲ್ಲಿ ಬದ್ರಿಯಾ ಮಸ್ಜಿದ್  ಕಾರ್ಯದರ್ಶಿ ಮುಸ್ತಫಾ, ಮಾಜಿಅಧ್ಯಕ್ಷ ಸಿ.ಎ.ಅಶ್ರಫ್, ಮಾಜಿ ಕಾರ್ಯದರ್ಶಿ ಈ.ಕೆ. ನಾಸಿರ್, ನೂರುಲ್ ಇಸ್ಲಾಂ ಅಧ್ಯಕ್ಷ ಟಿ.ಬಿ.ಸಮೀರ್, ನೂರುಲ್ ಇಸ್ಲಾಂ ಕಾರ್ಯದರ್ಶಿ…

Read More

ಶನಿವಾರಸಂತೆ ಅ.3 :  ಮಠ ಮಾನ್ಯಗಳಿಂದ ಸಮಾಜದಲ್ಲಿ ಸಮಾನತೆ ಸಾಧಿಸಬಹುದು. ಇಲ್ಲಿ ಎಲ್ಲಾ ಜಾತಿ ಜನಾಂಗದವರು ಭಕ್ತರಾಗಿ ಆಗಮಿಸುವುದರಿಂದ ಮೇಲು- ಕೀಳು ಭಾವನೆ ಬರುವುದಿಲ್ಲ. ವಿದ್ಯೆ, ದಾಸೋಹ ಸೇವೆಗಳಲ್ಲೂ ಮಠಗಳ ಸೇವೆ ಅವಿಸ್ಮರಣೀಯ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ಹೇಳಿದರು. ಅಂಕನಹಳ್ಳಿ ತಪೋವನ ಕ್ಷೇತ್ರ ಮನೆಹಳ್ಳಿ ಮಠದಲ್ಲಿ ಶ್ರೀ ವೀರಭದ್ರೇಶ್ವರ ವರ್ಧಂತಿ ಮಹೋತ್ಸವ, ಗಣಪತಿ ವಿಸರ್ಜನೆ, ಶ್ರೀ ಗುರುಸಿದ್ದವೀರೇಶ್ವರ ತಿಂಗಳ ಮಹಾಮಂಗಳಾರತಿ, ಜ್ಞಾನದಾರೆ ಕಾರ್ಯಕ್ರಮದ  ಸಮಾರೋಪ ಉದ್ಘಾಟಿಸಿ  ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮನೆಹಳ್ಳಿ ಮಠಾಧ್ಯಕ್ಷ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ದೇವರೆಂದರೆ ಸತ್ಯ, ಸತ್ಯವೆಂದರೆ ನುಡಿದಂತೆ ನಡೆಯುವುದು ನಡೆದಂತೆ ನುಡಿಯುವುದು ಬಸವಣ್ಣನವರು ಜಗತ್ತಿಗೆ ಹಾಕಿಕೊಟ್ಟ ಜೀವನದ ದಾರಿದೀಪ್ತಿ, ಇವುಗಳೆಲ್ಲವನ್ನು ಆಚರಣೆಯಲ್ಲಿ ತಂದಾಗ ಮಾತ್ರ ಪ್ರತಿಫಲ ಸಿಗುತ್ತದೆ ಎಂದರು. ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಮಾತನಾಡಿ, ವೀರಭದ್ರ ಸ್ವಾಮಿ ಸಾಕ್ಷಾತ್ ಶಿವನೇ ತೊಂದರೆ ಯಲ್ಲಿದ್ದಾಗ ರಕ್ಷಣೆಗೆ ಅವತರಿಸಿದ ದೈವ ಪುರುಷ, ದುಷ್ಟರ…

Read More

ಮಡಿಕೇರಿ ಅ.3 : ತಲಕಾವೇರಿಯ ಶ್ರೀ ತಲಕಾವೇರಿ ದೇವಾಲಯಲ್ಲಿ  ಅ.4 ರಂದು ಮಧ್ಯಾಹ್ನ 2 ಗಂಟೆಯ ನಂತರ ಸ್ವಚ್ಛತಾ ಕಾರ್ಯದ ಪ್ರಯುಕ್ತ ಶ್ರೀ ತಲಕಾವೇರಿ ದೇವಾಲಯದ ಪ್ರವೇಶ ಇರುವುದಿಲ್ಲ. ಆದ್ದರಿಂದ ಸಾರ್ವಜನಿಕ ಭಕ್ತಾದಿಗಳು ಸಹಕರಿಸುವಂತೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಎನ್.ಜಿ ಅವರು ಕೋರಿದ್ದಾರೆ.

Read More

ಮಡಿಕೇರಿ ಅ.2 : ಮಡಿಕೇರಿ ನಗರದ ಕಲಾವಿದ ಸಂದೀಪ್ ಕುಮಾರ್ ಆರ್. ಅವರು ರಚಿಸಿದ 9 ಅಡಿ  ಎತ್ತರದ ಸುಂದರವಾದ ಮಹಾತ್ಮಗಾಂಧಿ ಪ್ರತಿಮೆಯನ್ನು ಗಾಳಿಬೀಡು ನವೋದಯ ವಿದ್ಯಾಸಂಸ್ಥೆಯ ಆವರಣದಲ್ಲಿ ಅನಾವರಣಗೊಳಿಸಲಾಯಿತು. ಗಾಂಧಿ ಜಯಂತಿಯ ದಿನವಾದ ಇಂದು ಪ್ರತಿಮೆಯನ್ನು ಅನಾವರಣಗೊಳಿಸಿದ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಕಲಾವಿದ ಸಂದೀಪ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಶಾಲಾ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.

Read More

ಸುಂಟಿಕೊಪ್ಪ ಅ.2 : ಮಲಯಾಳಿ ಸಮಾಜದ ಸಂಸ್ಕೃತಿ ವಿಶಿಷ್ಟವಾಗಿದ್ದು, ಇದನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಯುವ ಜನಾಂಗ ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್ ಹೇಳಿದರು. ಸುಂಟಿಕೊಪ್ಪ ಮಲಯಾಳಿ ಸಮಾಜದ 16ನೇ ವಾರ್ಷಿಕೋತ್ಸವ ಮತ್ತು ಓಣಂ ಹಬ್ಬದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಘೋಷಕರು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಮಲಯಾಳಿ ಸಮಾಜದಲ್ಲಿ ಬಡವರು, ಅವಿದ್ಯಾವಂತರು ಇನ್ನೂ ಇದ್ದಾರೆ. ಇವರುಗಳನ್ನು ಮುಖ್ಯ ವಾಹಿನಿಗೆ ತರಬೇಕು. ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸಶಕ್ತರಾಗಬೇಕೆಂದು ಕರೆ ನೀಡಿದರು. ಸುಂಟಿಕೊಪ್ಪ ಮಲಯಾಳಿ ಸಮಾಜದ ಸ್ಥಾಪಕ ಅಧ್ಯಕ್ಷ ಪಿ.ಆರ್.ಸುಕುಮಾರ್ ಮಾತನಾಡಿ 16 ವರ್ಷದ ಹಿಂದೆ ಸ್ಥಾಪಿಸಲಾದ ಸಮಾಜ ಈಗ ಪ್ರವರ್ಧಮಾನಕ್ಕೆ ಬರುತ್ತಿದೆ. ಕೊಡಗಿನಲ್ಲಿ ಪ್ರಥಮವಾಗಿ ಸ್ಥಾಪಿಸಿದ ಮಲಯಾಳಿ ಸಮಾಜ ಎಂಬ ಹೆಗ್ಗಳಿಕೆಗೆ ನಾವು ಪಾತ್ರರಾಗಿದ್ದೇವೆ. ಸರಕಾರದ ಸೌಲಭ್ಯ ಪ್ರತಿಯೊಬ್ಬರು ಪಡೆದುಕೊಳ್ಳವಂತಾಗಬೇಕು, ರಾಜಕೀಯವಾಗಿ ಮುಂದೆ ಬರಬೇಕು ಎಂದು ಹೇಳಿದರು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ ಅಪ್ಪಟ ಮನುಷ್ಯ ಪ್ರೀತಿಯ…

Read More

ಸುಂಟಿಕೊಪ್ಪ ಅ.2 : ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಜೀವನ ಮೌಲ್ಯ, ಆದರ್ಶಗಳನ್ನು ವಿದ್ಯಾರ್ಥಿಗಳು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಲತಾ ಹೇಳಿದರು. ಮಹಾತ್ಮಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಕಾಲೇಜ್ ನಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳು ಸರ್ವ ಧರ್ಮ ಸಮನ್ವಯತೆ ಕುರಿತಾದ ಋಘುಪತಿ ರಾಘವರಾಜಾರಾಮ್ ಪ್ರಾರ್ಥನೆ ಮಾಡಿದರು. ವಿದ್ಯಾರ್ಥಿಗಳಿಂದ ವಿವಿಧ ಧಾರ್ಮಿಕ ಗ್ರಂಥಗಳ ಪಠನ ವಾಚನ ನಡೆಯಿತು. ಕಾಲೇಜಿನ ಇತಿಹಾಸ ಉಪನ್ಯಾಸಕಿ ಕವಿತಾ ಕೆ.ಸಿ. ದಿನದ ಮಹತ್ವ ಕುರಿತು ಮಾತನಾಡಿ ಗಾಂಧೀಜಿ ಅವರ ಜೀವನ ಕ್ರಮ ಎಲ್ಲಾ ಕಾಲಕ್ಕೂ ಪ್ರಸ್ತುವಾದುದು ಎಂದು ಹೇಳಿದರು. ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು. ಈ ಸಂದರ್ಭ ಉಪನ್ಯಾಸಕರುಗಳಾದ ಅಭಿಷೇಕ್, ಸುನೀತಾ, ಪದ್ಮಾವತಿ, ಸುಚಿತ್ರಾ, ಕವಿತ, ಮಂಜುಳಾ ಕೆ.ಸಿ, ಅನುಷಾ, ಸಂಧ್ಯಾ, ಕನಕ ಇದ್ದರು.

Read More

ಮಡಿಕೇರಿ ಅ.2 : ಬಾಳೆಲೆ ಗ್ರಾಮ ಪಂಚಾಯಿತಿ, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಮತ್ತು ಶಾಲಾ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಬಾಳೆಲೆ ಮುಖ್ಯ ರಸ್ತೆ,  ಪದವಿಪೂರ್ವ ಕಾಲೇಜಿನ  ಸುತ್ತಮುತ್ತ ಸ್ವಚ್ಛತಾ ಶ್ರಮದಾನ ನಡೆಸಲಾಯಿತು. ಗ್ರಾ.ಪಂ ಪ್ರತಿನಿಧಿಗಳು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ಸದಸ್ಯರು,  ಶಾಲಾ  ಕಾಲೇಜು  ವಿದ್ಯಾರ್ಥಿಗಳು ಏಕಕಾಲಕ್ಕೆ ಸ್ವಚ್ಛತಾ ಕಾರ್ಯ ಕೈಗೊಂಡರು. ಪಂಚಾಯತಿ ಅಧ್ಯಕ್ಷೆ ಮುಕ್ಕಾಟಿರ ಜಾನಕಿ ಕಾವೇರಪ್ಪ, ಮಾಜಿ ಅಧ್ಯಕ್ಷ ಪೊಡಮಾಡ ಸುಕೇಶ್ ಭೀಮಯ್ಯ, ಸದಸ್ಯರಾದ ಅದೇಂಗಡ ವಿನು ಉತ್ತಪ್ಪ, ಕಾಲೇಜು ಪ್ರಾಂಶುಪಾಲ ಎನ್.ಕೆ ಪ್ರಭು, ಪ್ರೌಢಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್, ಪ್ರಮುಖರಾದ ಅಡ್ಡೇಂಗಡ ಅರುಣ್, ಸಜನ್, ರಾಖಿ, ಅಜಯ್, ಕಾವೇರಮ್ಮ, ಶೌರ್ಯ, ಪಡಿಞರಂಡ ಪ್ರಭು ಕುಮಾರ್, ಲಕ್ಷ್ಮಿ, ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಸುಜಾತಾ ವಿಜಯನಾಥನ್ ಹಾಗೂ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

Read More

ಕುಶಾಲನಗರ ಅ.2 : ರಾಷ್ಟ್ರಪಿತ ಮಹಾತ್ಮ ಗಾಂಧಿ  ಅವರ 154 ನೇ ಜಯಂತಿ ಅಂಗವಾಗಿ  ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ  ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಚ್ಚತಾ ಹಿ ಸೇವಾ ( ಸ್ವಚ್ಚತೆಯೇ ಸೇವೆ) ಅಭಿಯಾನದ ಮೂಲಕ ಶ್ರಮದಾನ ಕಾರ್ಯ ನಡೆಸಲಾಯಿತು.  ಶಾಲೆಯ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ( ಎನ್ನೆಸ್ಸೆಸ್) ವತಿಯಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ‌ಘಟಕ, ಸುಂಟಿಕೊಪ್ಪ ಜೆಸಿಐ ಸಂಸ್ಥೆ, ಎಸ್ ಡಿ ಎಂ ಸಿ ಹಾಗೂ ವಿದ್ಯಾರ್ಥಿ ಸಂಘದ‌ ಸಂಯುಕ್ತಾಶ್ರಯದಲ್ಲಿ ಗಾಂಧಿ ಜಯಂತಿಗೆ ಮುನ್ನಾ ದಿನ ಕೂಡ್ಲೂರು ಗ್ರಾಮದ ಜನರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಲಾಯಿತು. ಶಾಲಾವರಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜತೆಗೂಡಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯವನ್ನು ತೆರವುಗೊಳಿಸುವ ಮೂಲಕ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.    ವಿದ್ಯಾರ್ಥಿಗಳಿಗೆ ಸ್ವಚ್ಛತೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ “ಸ್ವಚ್ಛ ತಾ ಹಿ ಸೇವೆ” ಹಾಗೂ ಶ್ರಮದಾನದ ಮಹತ್ವ ಕುರಿತು ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್,‌ ಸ್ವಚ್ಛ ಭಾರತ್ ಮಿಷನ್…

Read More