ಲೇಖಕ: admin

ಮಡಿಕೇರಿ ಸೆ.25 :  ಕರ್ಣಂಗೇರಿ ಗ್ರಾಮದ ಮೊಣಕಾಲ್ಮುರಿ ಶಾಲೆಯ ಮಕ್ಕಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ  ಶಾಲೆಯ ಸಮವಸ್ತ್ರ ಮತ್ತು ಶೂ ವಿತರಣೆ ಮಾಡಿದರು. ಇದೇ ಸಂದರ್ಭ  ಶಾಲೆಯ ಮತ್ತು ಅಂಗನವಾಡಿ ಮಕ್ಕಳಿಗೆ ಸಿಹಿ ವಿತರಣೆ ಮಾಡಲಾಯಿತು. ಗ್ರಾ.ಪಂ  ಸದಸ್ಯ  ಜಾನ್ಸನ್ ಪಿಂಟೊ , ಅನಿತಾ ಸ್ಥಳೀಯರಾದ ಪ್ರೆೇಮ್ ಕೂಮರ್, ಕೃಷ್ಣಪ್ಪ, ಶಾಲೆಯ ಮುಖ್ಯ ಶಿಕ್ಷಕಿ ಶಾಲಿನಿ ಮತ್ತು ಅಂಗನಾವಡಿ ಸಹಾಯಕಿ ಜಂಯತಿ ಮತ್ತು ಗ್ರಾಮಸ್ಥರು ಹಾಜರಿದ್ದರು.

Read More

ಸಿದ್ದಾಪುರ ಸೆ.25  :  ಕರಡಿಗೋಡು  ಶ್ರೀ ಗಣೇಶ ಮಿತ್ರ ಮಂಡಳಿ  ವತಿಯಿಂದ 11ನೇ ವರ್ಷದ ಗೌರಿ ಗಣೇಶ ವಿಸರ್ಜನ ಮಹೋತ್ಸವವು ವಿವಿಧ ಧಾರ್ಮಿಕ  ಕಾರ್ಯಕ್ರಮಗಳೊಂದಿಗೆ ಶ್ರದ್ದಾ ಭಕ್ತಿಯಿಂದ ನಡೆಯಿತು. ಶ್ರೀ ಅಯ್ಯಪ್ಪ ಸೇವಾ ಸಮಿತಿ ಸಭಾಂಗಣದಲ್ಲಿ ಬೆಳ್ಳಿಗೆ  ಗಣಪತಿ ಹೋಮ  ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿತು. ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ವಿದ್ಯುತ್ ಅಲಂಕೃತ ಮಂಟಪದಲ್ಲಿ ಗ್ರಾಮದಲ್ಲಿ ಶೋಭಾಯಾತ್ರೆ ನಡೆಸಿ ಕೊಡಗಿನ ಪುಣ್ಯ ಕಾವೇರಿನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಈ ಸಂದರ್ಭ ಶ್ರೀ ಗಣೇಶ ಮಿತ್ರ ಮಂಡಳಿ ಅಧ್ಯಕ್ಷ ಎಂ.ಆರ್. ಶಾಜನ್ ಮಾತನಾಡಿ, ಪ್ರಾಕೃತಿಕ ವಿಕೋಪ, ಕೋವಿಡ್ ಸಂಕಷ್ಟದಿಂದ ಕಳೆದ ಕೆಲವು ವರ್ಷ ಸಾಂಕೇತಿಕವಾಗಿ ಸರಳವಾಗಿ ಆಚರಿಸಲಾಯಿತು. ಈ ಬಾರಿ ಗ್ರಾಮಸ್ಥರ ಸಹಕಾರದಿಂದ ನಾಲ್ಕುದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮದೊಂದಿಗೆ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ ಎಂದರು. ಶೋಭಾಯಾತ್ರೆಯ ಮೂಲಕ ಗ್ರಾಮದಲ್ಲಿ ಮೆರವಣಿ ನಡೆಸಲಾಯಿತು. ಯುವಕ ಯುವತಿಯರು ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ವರದಿ : ಎಂ.ಎ.ಕೃಷ್ಣ (ಸಿದ್ದಾಪುರ) 

Read More

ಮಡಿಕೇರಿ ಸೆ.24 : 2023-24ನೇ ಸಾಲಿನ ಪದವಿ ಪೂರ್ವ ಕಾಲೇಜು, ಬಾಲಕರ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲಿಬೆಟ್ಟ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪಾಲಿಬೆಟ್ಟದ ವಿದ್ಯಾರ್ಥಿಗಳು ಪ್ರಥಮ ಸುತ್ತಿನಲ್ಲಿ ಸಿದ್ದಾಪುರದ ಇಕ್ರಾ ಕಾಲೇಜು, ದ್ವಿತೀಯ ಸುತ್ತಿನಲ್ಲಿ ಸಾಯಿ ಶಂಕರ್ ಕಾಲೇಜನ್ನು, ತೃತೀಯ ಸುತ್ತಿನಲ್ಲಿ ಕಾವೇರಿ ಕಾಲೇಜು ವಿರಾಜಪೇಟೆಯನ್ನು ಹಾಗೂ ಅಂತಿಮ ಸುತ್ತಿನಲ್ಲಿ ಬಲಿಷ್ಠ ತಂಡವಾದ ಕಾವೇರಿ ಕಾಲೇಜು ಗೋಣಿಕೊಪ್ಪಲನ್ನು ಮಣಿಸಿದರು. ತಾಲೂಕು ಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ಕೆ.ಕೆ.ಶೈನಾ ಅವರು ತಿಳಿಸಿದ್ದಾರೆ. ಮಾದಾಪುರ ಚೆನ್ನಮ್ಮ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ ನಡೆಯಲಿದೆ.

Read More

ಮಡಿಕೇರಿ ಸೆ.24 : ವಿರಾಜಪೇಟೆಯ ಕೊಡಗು ಮಹಿಳಾ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ರಚನೆಗೊಂಡಿದ್ದು, ಅಧ್ಯಕ್ಷರಾಗಿ ಪಟ್ರಪಂಡ ಗೀತಾ ಬೆಳ್ಳಿಯಪ್ಪ ಹಾಗೂ ಉಪಾಧ್ಯಕ್ಷರಾಗಿ ಸಬಿತಾ ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಆಶಾ ಚಿಣ್ಣಪ್ಪ, ಉದಿಯಂಡ ಪೊನ್ನಮ್ಮ, ಕುಸುಮ ಸೋಮಣ್ಣ, ಜಯ ಲೀಲಾ ಸತೀಶ್, ಪಿ.ಕೆ.ನೀಲಮ್ಮ, ಪ್ರೇಮ ಮಂಜುನಾಥ್, ಬಿ.ಎನ್.ಭಾರತಿ, ಬಿ.ಬಿ.ಯಶೋಧ ಬಾಬು, ಹೆಚ್.ಆರ್.ಪುಷ್ಪ ವಾಸು ಹಾಗೂ ಪುಷ್ಪ ಐತ್ತಪ್ಪ ಆಯ್ಕೆಯಾಗಿದ್ದಾರೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಅಧೀಕ್ಷಕರಾದ ಆಶಾ ಪಿ. ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

Read More

ಮಡಿಕೇರಿ ಸೆ.24 : ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ಸೆಪ್ಟಂಬರ್ 27 ರಂದು ಬುಧವಾರ  ಸಾಧನೆ ಮಾಡಿದ ಶಿಕ್ಷಕರಿಗೆ ನೇಷನ್ ಬಿಲ್ಡಸ್೯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ವುಡ್ಸ್ ಸಂಸ್ಥೆಯ ಅಧ್ಯಕ್ಷ ಕೆ.ವಸಂತ್ ಕುಮಾರ್ ತಿಳಿಸಿದ್ದಾರೆ. ನಗರದ ರೋಟರಿ ಸಭಾಂಗಣದಲ್ಲಿ ಅಂದು ಸಂಜೆ 6.30 ಗಂಟೆಗೆ ಆಯೋಜಿತ ಕಾಯ೯ಕ್ರಮದಲ್ಲಿ ಸಾಧಕ ಶಿಕ್ಷಕರನ್ನು ಕೂಡಿಗೆ ಕ್ರೀಡಾಶಾಲೆಯ ನಿವೖತ್ತ ಪ್ರಾಂಶುಪಾಲರಾದ ಕುಂತಿ ಬೋಪಯ್ಯ ಸನ್ಮಾನಿಸಲಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ   ಬೊಯಿಕೇರಿ ಶಾಲೆಯ ಬಿ.ಟಿ. ಪೂಣೇ೯ಶ್, ಮೂನಾ೯ಡು ಸಕಾ೯ರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವಿ.ಕೆ.ಲಲಿತಾ, ಭಾಗಮಂಡಲ ಕಾವೇರಿ ಕಾಲೇಜಿನ ಪ್ರಾಂಶುಪಾಲ ಕೆ.ಜೆ.ದಿವಾಕರ್, ಮೂನಾ೯ಡು ಪ್ರೌಡಶಾಲೆಯ ನಿವೖತ್ತ ದೈಹಿಕ ಶಿಕ್ಷಕ ಎ.ಜಿ.  ಗಣೇಶ್, ಮಡಿಕೇರಿಯ ನಿವೖತ್ತ ಶಿಕ್ಷಕಿ ಕಸ್ತೂರಿ   ಗೋವಿಂದಮ್ಮಯ್ಯ,  ಅವರನ್ನು ಸನ್ಮಾನಿಸಲಾಗುತ್ತದೆ. ಕಾಯ೯ಕ್ರಮದಲ್ಲಿ ರೋಟರಿ ವಲಯ ಸಹಾಯಕ ಗವನ೯ರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ರೋಟರಿ ವುಡ್ಸ್ ಕಾಯ೯ದಶಿ೯ ಹರೀಶ್ ಕಿಗ್ಗಾಲು ಹಾಜರಿರುತ್ತಾರೆ ಎಂದು ರೋಟರಿ ವುಡ್ಸ್…

Read More

ಮಡಿಕೇರಿ ಸೆ.24 : ಶಿಕ್ಷಣ ಕ್ಷೇತ್ರದ ಸೇವೆಗಾಗಿ ಮೈಸೂರಿನ ಲಯನ್ಸ್ ಕ್ಲಬ್ ಆಫ್ ಮೈಸೂರು ಹೆರಿಟೇಜ್ ವತಿಯಿಂದ ಉಪನ್ಯಾಸಕರಾದ ಪಟ್ಟಡ ಶಿವಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Read More

ಮಡಿಕೇರಿ ಸೆ.24 : ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ನೂತನ ಅಧ್ಯಕ್ಷರಾಗಿ ಗೀತಾ ಗಿರೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷ ಎ.ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ  ಇಂದು ನಡೆದ ಮಹಾಸಭೆಯಲ್ಲಿ ಆಡಳಿತ ಮಂಡಳಿಯನ್ನು ರಚಿಸಲಾಯಿತು.  ಪ್ರಧಾನ ಕಾರ್ಯದರ್ಶಿಯಾಗಿ ಬಿ.ಕೆ.ಜಗದೀಶ್ ಸೋಮಯಾಜಿ, ಉಪಾಧ್ಯಕ್ಷರಾಗಿ ರಾಮಚಂದ್ರ ಮೂಗೂರು, ಜಂಟಿ ಕಾರ್ಯದರ್ಶಿಯಾಗಿ ಸವಿತಾ ಕೆ ಭಟ್, ಖಜಾಂಚಿಯಾಗಿ ಜಿ.ಆರ್.ರವಿಶಂಕರ್ ಅವಿರೋಧವಾಗಿ ಆಯ್ಕೆಯಾದರು. ಉಳಿದಂತೆ ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಜಯಶೀಲ ಪ್ರಕಾಶ್ ಹಾಗೂ ವೀಣಾ ಹೊಳ್ಳ, ಧಾರ್ಮಿಕ ಸಮಿತಿ ಸಂಚಾಲಕರಾಗಿ ನಿಧಿಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಶ್ರೀಶ ಭಟ್, ಕ್ರೀಡಾ ಸಮಿತಿ ಸಂಚಾಲಕರುಗಳಾಗಿ ಬಿ.ಕೆ.ಅರುಣ್ ಕುಮಾರ್, ಜೆ.ಡಿ.ಶಿವಶಂಕರ್ ಹಾಗೂ ಲಲಿತಾ ರಾಘವನ್, ಕಟ್ಟಡ ಸಮಿತಿಗೆ  ಭಾರತೀಶ್ ಖಂಡಿಗೆ ಹಾಗೂ ಜೆ.ಡಿ.ಶಿವಶಂಕರ್, ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರದ ನಿರ್ವಹಣೆಗೆ ಸವಿತಾ.ಕೆ ಬಟ್, ಮಂಜುನಾಥ ಎ.ವಿ ಹಾಗೂ ಪ್ರಭಾಕರ್ ನೆಲ್ಲಿತ್ತಾಯ, ಸದಸ್ಯತ್ವ ಅಭಿಯಾನಕ್ಕೆ ರಾಮಚಂದ್ರ ಮೂಗೂರು, ಬೈಲಾ ತಿದ್ದುಪಡಿ ಸಮಿತಿಗೆ ಜಿ.ಆರ್.ರವಿಶಂಕರ್ ಹಾಗೂ ನಿಕಟಪೂರ್ವ ಅಧ್ಯಕ್ಷ ಎ.ಗೋಪಾಲಕೃಷ್ಣ, ನಿಧಿ ಸಂಗ್ರಹಣೆಗೆ…

Read More

ಸುಂಟಿಕೊಪ್ಪ ಸೆ.24 : ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಸುಂಟಿಕೊಪ್ಪದ ರಾಮಮಂದಿರದಲ್ಲಿ ನಡೆಯುತ್ತಿರುವ ಗೌರಿ ಗಣೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ಕುಂದನ ನೃತ್ಯಾಲಯದ ವಿನುತ ಹೇಮಂತ್ ಅವರ ನೇತೃತ್ವದ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು. ಮಂಜುನಾಥಯ್ಯ ಮೀನಾಕ್ಷಮ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮವನ್ನು ಸಮಿತಿಯ ಅಧ್ಯಕ್ಷ ವಿಘ್ನೇಶ್ ಉದ್ಘಾಟಿಸಿದರು.

Read More

ಸುಂಟಿಕೊಪ್ಪ ಸೆ.24 : ಕೆದಕಲ್ ಗ್ರಾ.ಪಂ ವ್ಯಾಪ್ತಿಯ ಹೊರೂರು ಗ್ರಾಮದಲ್ಲಿ ಸಾರ್ವಜನಿಕ ಶ್ರೀಗೌರಿ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಹೊರೂರು ಮಠದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲಾಯಿತು. ವಿಶೇಷ ಪೂಜೆ, ಮಹಾಪೂಜೆ, ಮಂಗಳಾರತಿ, ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸಂಜೆ ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ಗೌರಿಗಣೇಶೋತ್ಸವ ಮೂರ್ತಿಗಳನ್ನು ಮೆರವಣಿಗೆ ಮಾಡಿ ತೋಟದ ಕೆರೆಯಲ್ಲಿ ವಿಸರ್ಜಿಸಲಾಯಿತು. ಸಮಿತಿಯ ಅಧ್ಯಕ್ಷರು, ಕಾರ್ಯಕಾರಿ ಮಂಡಳಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

Read More

ಮಡಿಕೇರಿ ಸೆ.23 : ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿದೆ. ವಿದ್ಯಾ ಸಂಸ್ಥೆಗೆ 25 ವರ್ಷಗಳು ತುಂಬಿದ ಹಿನ್ನೆಲೆ ಬೆಳ್ಳಿ ಹಬ್ಬದ ಲೋಗೋವನ್ನು ಇಂದು ಅನಾವರಣಗೊಳಿಸಲಾಯಿತು. ಶಾಲೆಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ಸಮಾಜ ಹಾಗೂ ಶಾಲೆಯ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಅವರು ಲೋಗೋದ ವಿಡಿಯೋವನ್ನು ಬಿಡುಗಡೆಗೊಳಿಸಿದರು. ಕೊಡವ ಸಮಾಜದ ಉಪಾಧ್ಯಕ್ಷ ಹಾಗೂ ಶಾಲೆಯ ಕಾರ್ಯಾಧ್ಯಕ್ಷ ನಂದಿನೆರವಂಡ ಚೀಯಣ್ಣ ಅವರು ಲೋಗೋವನ್ನು ಅನಾವರಣಗೊಳಿಸಿದರು. ನಂತರ ಮಾತನಾಡಿದ ಮುತ್ತಪ್ಪ ಅವರು, ಉತ್ತಮ ಶಿಕ್ಷಣ ನೀಡುವ ಮೂಲಕ ಜನರಲ್ ತಿಮ್ಮಯ್ಯ ಶಾಲೆಯು ಮಾದರಿ ಶಿಕ್ಷಣ ಸಂಸ್ಥೆಯಾಗಿ 25 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು. ಶಿಕ್ಷಕರ ಪರಿಶ್ರಮದೊಂದಿಗೆ ವಿದ್ಯಾರ್ಥಿಗಳು ಕೂಡ ಉತ್ತಮ ಫಲಿತಾಂಶ ಗಳಿಸುವ ಮೂಲಕ ಶಾಲೆ ಹಾಗೂ ಪೋಷಕರಿಗೆ ಕೀರ್ತಿ ತಂದುಕೊಡಬೇಕು ಎಂದು ಕರೆ ನೀಡಿದರು. ಶಾಲೆಯ ಪ್ರಾಂಶುಪಾಲರಾದ ಕಲ್ಲುಮಾಡಂಡ ಸರಸ್ವತಿ ಸುಬ್ಬಯ್ಯ, ಪ್ರಮುಖರಾದ ಕನ್ನಂಡ ಕವಿತಾ ಕಾವೇರಮ್ಮ, ಶಾಲಾ ಆಡಳಿತ ಮಂಡಳಿಯ ನಿರ್ದೇಶಕರುಗಳಾದ…

Read More