ಮಡಿಕೇರಿ ಅ.24 : ನಗರದ ನಾಲ್ಕು ಶಕ್ತಿ ದೇವತೆಗಳ ಹಿರಿಯ ಅಕ್ಕಳೆಂದೆ ಖ್ಯಾತಿ ಪಡೆದಿರುವ ಕುಂದುರುಮೊಟ್ಟೆ ಶ್ರೀಚೌಟಿ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ಶ್ರೀ ದುರ್ಗಾ ಸಪ್ತಶತಿ ಪುರಾಣದಿಂದ ಅಧ್ಯಾಯ 6 ರಿಂದ 10ರವರೆಗಿನ ಕದಂಬ ಕೌಶಿಕೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಕೆ.ಆರ್.ರವಿ ತಿಳಿಸಿದ್ದಾರೆ. ಎರಡು ಟ್ರಾಕ್ಟರ್ ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್‌ನ ಮಾತಾ ಎಲೆಕ್ಟಿçಕಲ್ಸ್ನವರು ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಕೊಲ್ಲಂನ ಶಿವು ಪ್ರೊ ಲೈಟ್ಸ್ನವರು ಧ್ವನಿವರ್ಧಕವನ್ನು ಒದಗಿಸಲಿದ್ದು, ಮಡಿಕೇರಿ ಈವೆಂಟ್ ಟೆಕ್‌ನ ಅವಿನ್‌ಕುಮಾರ್ ತಂಡ ಸ್ಟುಡಿಯೋ ಸೆಟ್ಟಿಂಗ್ಸ್ ಹಾಗೂ ಫೈರ್ ಎಫೆಕ್ಟ್ ವ್ಯವಸ್ಥೆ ಮಾಡಲಿದೆ. ಒಟ್ಟು 18 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಐಂಡ್ ಸನ್ಸ್ ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಕಲಾಕೃತಿಗಳಿಗೆ ಚಲನವಲನವನ್ನು ಸಮಿತಿ ಸದಸ್ಯರೆ ನೀಡಲಿದ್ದಾರೆ. ಟ್ರಾ÷್ಯಕ್ಟರ್ ಸೆಟ್ಟಿಂಗ್ಸ್ ಅನ್ನು ಮಂಜು ಮತ್ತು ತಂಡ ಮಾಡಲಿದ್ದು, ಮಯೂರಿ ಆರ್ಟ್ಸ್ ತಂಡ ಕಲಾಕೃತಿ ಅಲಂಕಾರ ಮಾಡಲಿದೆ. ಒಟ್ಟು 26…
ಲೇಖಕ: admin
ಮಡಿಕೇರಿ ಅ.24 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕಂಚಿಕಾಮಾಕ್ಷಿ ಮುತ್ತು ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ 60ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗಿದ್ದು, ಈ ಬಾರಿ ಶಿವನಿಂದ ತ್ರಿಪುರಾಸುರರ ವಧೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಜಿ.ಆರ್.ರಾಘವೇಂದ್ರ ತಿಳಿಸಿದ್ದಾರೆ. ಎರಡು ಟ್ರ್ಯಾಕ್ಟರ್ ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್‌ನ ಡೇವಿಡ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಧ್ವನಿವರ್ಧಕವನ್ನು ಬೆಳಗಾಂನ ಕೃಷ್ಣ ಸಂಸ್ಥೆ ಒದಗಿಸಲಿದ್ದು, ಚೆನ್ನೈನ ಸನ್‌ಬರ್ನ್ ಸಂಸ್ಥೆ ಸ್ಟುಡಿಯೋ ಸೆಟ್ಟಿಂಗ್ಸ್ ಹಾಗೂ ಮುಂಬೈನ ಸನ್‌ಬರ್ನ್ ಸಂಸ್ಥೆ ಫೈರ್ ಎಫೆಕ್ಟ್ ಕಲ್ಪಿಸಲಿದೆ. ಪ್ಲಾಟ್ ಫಾರಂನ್ನು ಸೈಜು ಮತ್ತು ಸಮಿತಿ ಸದಸ್ಯರು ನಿರ್ಮಿಸಿದ್ದಾರೆ. ಟ್ರಾ÷್ಯಕ್ಟರ್ ಸೆಟ್ಟಿಂಗ್ಸ್ನ್ನು ಬಿಪಿನ್ ಮತ್ತು ತಂಡ ಸೆಂಟ್ ಆಂಟೋನಿ ಫ್ಯಾಬ್ರಿಕೇಶನ್, ಎಸ್.ಎಲ್. ರಹಮತ್ ನಿಸಾ ಇಂಜಿನಿಯರಿಂಗ್ ತಂಡ ಮಾಡಲಿದೆ. 28 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಕಲಾಕೃತಿಗಳನ್ನು ತಯಾರಿಸಿದ್ದಾರೆ. ಎಲ್‌ಇಡಿ ಎಫೆಕ್ಟನ್ನು ಪ್ರಮೋದ್ ಪರ್ಫೆಕ್ಟ್ ಈವೆಂಟ್, ಲೇಜರ್ ಶೋವನ್ನು ಮನೋಜ್ ಒದಗಿಸಲಿದ್ದಾರೆ.…
ಮಡಿಕೇರಿ ಅ.24 : ಶ್ರೀ ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯ ದಸರಾ ಮಂಟಪ ಸಮಿತಿ 28ನೇ ವರ್ಷದ ಉತ್ಸವ ಆಚರಿಸುತ್ತಿದ್ದು, ಉಗ್ರನರಸಿಂಹನಿಂದ ಹಿರಣ್ಯಕಶ್ಯಪು ಸಂಹಾರ ಕಥಾ ಸಾರಾಂಶವನ್ನು ಅಳವಡಿಸಲಾಗಿದೆ ಎಂದು ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಪಿ.ಜಿ. ಗಜೇಂದ್ರ (ಕುಶ) ತಿಳಿಸಿದ್ದಾರೆ. ಎರಡು ಟ್ರಾಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್‌ನ ಜೇಮ್ಸ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದು, ಸಮಿತಿ ಸದಸ್ಯರೇ ಫ್ಲಾಟ್ ಫಾರಂ ನಿರ್ಮಾಣ ಮಾಡಲಿದ್ದಾರೆ. ಮಡಿಕೇರಿಯ ಸ್ಕಂದ ಸಂಸ್ಥೆಯವರು ಧ್ವನಿವರ್ಧಕವನ್ನು ಒದಗಿಸಲಿದ್ದು, ಬೆಂಗಳೂರಿನ ಅನುಪ್ರೋ ಈವೆಂಟ್ ನವರು ಸ್ಟುಡಿಯೋ ಸೆಟ್ಟಿಂಗ್ ಮಾಡಲಿದ್ದಾರೆ. ಫೈರ್ ಎಫೆಕ್ಟನ್ನು ಬೆಂಗಳೂರಿನ ಸ್ಟಾನಿ ಎಫ್‌ಎಕ್ಸ್ ತಂಡ ನೀಡಲಿದೆ. 22 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ನಾಗರಾಜ್ ತಂಡ ಹಾಗೂ ಮಡಿಕೇರಿಯ ಶೋಮ್ಯಾನ್ ಕ್ರಿಯೇಷನ್ಸ್ ಕಲಾಕೃತಿಗಳನ್ನು ತಯಾರಿಸಿದ್ದಾರೆ. ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ನ್ನು ಶೋಮ್ಯಾನ್ ಕ್ರಿಯೇಷನ್ಸ್ ತಂಡ ಮಾಡಲಿದ್ದು, ಕಲಾಕೃತಿಗಳಿಗೆ ಚಲನವಲನವನ್ನು ಸಮಿತಿ ಸದಸ್ಯರೆ ನೀಡಲಿದ್ದಾರೆ. ರೂ.22 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಕೊಡಗಿನ ವಾಲಗ…
ಮಡಿಕೇರಿ ಅ.24 : ನಗರದ ಶ್ರೀ ಚೌಡೇಶ್ವರಿ ದೇವಾಲಯ ದಸರಾ ಮಂಟಪ ಸಮಿತಿ 61ನೇ ವರ್ಷದ ದಸರಾ ಉತ್ಸವ ಆಚರಿಸುತ್ತಿದ್ದು, ಶ್ರೀ ಕಟೀಲು ಕ್ಷೇತ್ರ ಮಹಾತ್ಮ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ ಎಂದು ಚೌಡೇಶ್ವರಿ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ವಿಶಾಕ್ ರಮೇಶ್ ತಿಳಿಸಿದ್ದಾರೆ. ಎರಡು ಟ್ರ್ಯಾಕ್ಟರ್ ಗಳನ್ನು ಬಳಸಲಾಗುತ್ತಿದ್ದು, ಮಧುರೈನ ಶ್ರೀ ಕಾರ್ತಿಕೇಯನ್ ಲೈಟಿಂಗ್ ಬೋರ್ಡ್ಸ್ ಅಂಡ್ ಡಿಸ್ ಪ್ಲೇ ಸಂಸ್ಥೆಯವರು ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಧ್ವನಿವರ್ಧಕ ಹಾಗೂ ಸ್ಟುಡಿಯೋ ಲೈಟ್ ವ್ಯವಸ್ಥೆಯನ್ನು ಸೋಮವಾರಪೇಟೆಯ ನಂದಿ ಸೌಂಡ್ ನವರು ಮಾಡಲಿದ್ದಾರೆ. ಪ್ಲಾಟ್ ಫಾರಂನ್ನು ಜಯರಾಂ ಆಚಾರ್, ಹರೀಶ್, ಲಕ್ಷ್ಮಣಾಚಾರ್ ಶೇಖರ್, ರಾಕಿ, ಜನ್ನು, ಶಶಿ ಮತ್ತು ತಂಡ, ಗುಣ ಮತ್ತು ತಂಡದವರು ನಿರ್ಮಿಸಲಿದ್ದಾರೆ. ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ನ್ನು ಕ್ರಿಯೇಟಿವ್ ಸ್ಟುಡಿಯೋ ಬಾಯ್ಸ್ ಮಾಡಲಿದ್ದಾರೆ. ಒಟ್ಟು 23 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಮತ್ತು ಕ್ರಿಯೇಟಿವ್ ಸ್ಟುಡಿಯೋ ಬಾಯ್ಸ್ ಮಾಡಲಿದ್ದಾರೆ. ಕಲಾಕೃತಿಗಳಿಗೆ ಚಲನವಲನವನ್ನು ಕ್ರಿಯೇಟಿವ್ ಸ್ಟುಡಿಯೋ ಹಾಗೂ…
ಮಡಿಕೇರಿ ಅ.24 : ನಗರದ ದೇಚೂರು ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ 105ನೇ ವರ್ಷದ ದಸರಾ ಉತ್ಸವ ಆಚರಿಸುತ್ತಿದ್ದು, ವಿಷ್ಣುವಿನಿಂದ ಮಧು ಖೈಟಭರ ಸಂಹಾರ ಕಥಾ ಸಾರಾಂಶವನ್ನು ಈ ಬಾರಿ ಮಂಟಪದಲ್ಲಿ ಅಳವಡಿಸಲಾಗುತ್ತಿದೆ ಎಂದು ದೇಚೂರು ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಪಿ.ವೇಣುಗೋಪಾಲ್ ತಿಳಿಸಿದ್ದಾರೆ. ಎರಡು ಟ್ರ್ಯಾಕ್ಟರ್ ಗಳನ್ನು ಬಳಸಲಾಗುತ್ತಿದ್ದು, ಮಡಿಕೇರಿಯ ಪ್ರೊಫೆಷನಲ್ ಲೈಟ್ ಅಂಡ್ ಸೌಂಡ್ಸ್ ನ ಪವನ್ ತಂಡ ಲೈಟಿಂಗ್ ಬೋರ್ಡ್ ಅಳವಡಿಸಲಿದೆ. ಪ್ಲಾಟ್ ಫಾರಂ ನಿರ್ಮಾಣ ಮತ್ತು ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ಅನ್ನು ಅನಿಲ್ ಕಮಾರ್ ಹಾಗೂ ತಂಡದವರು ಮಾಡಲಿದ್ದಾರೆ. ಬೆಂಗಳೂರಿನ ಕಿಂಗ್ಸ್ ಆಫ್ ಮ್ಯೂಸಿಕ್ ಸಂಸ್ಥೆ ಧ್ವನಿವರ್ಧಕ ಹಾಗೂ ಸ್ಟುಡಿಯೋ ಲೈಟ್ ವ್ಯವಸ್ಥೆ ಮಾಡಲಿದೆ. ಮಂಗಳೂರಿನ ಜೆಪಿ ಆರ್ಟ್ಸ್ ರಚಿಸಿದ ಒಟ್ಟು 14 ಕಲಾಕೃತಿಗಳನ್ನು ಬಳಸಲಾಗುತ್ತಿದೆ. ಕಲಾಕೃತಿಗಳಿಗೆ ಚಲನವಲನವನ್ನು ಸಮಿತಿ ಸದಸ್ಯರೇ ನೀಡಲಿದ್ದಾರೆ. ಒಟ್ಟು 10 ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಜನಾಕರ್ಷಣೆ ಜೊತೆಗೆ ಬಹುಮಾನಕ್ಕೂ ಪೈಪೋಟಿ ನೀಡಲಾಗುತ್ತದೆ…
ಮಡಿಕೇರಿ ಅ.24 : ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ ದಶಮಂಟಪಗಳ ಸಾರಥಿ ಎಂದೇ ಖ್ಯಾತಿ ಪಡೆದಿರುವ 150 ವರ್ಷಗಳ ಇತಿಹಾಸ ಹೊಂದಿರುವ ಪೇಟೆ ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ ಮಂಟಪದಲ್ಲಿ ವೈಕುಂಠ ದರ್ಶನ ಕಥಾ ಸಾರಾಂಶವನ್ನು ಪ್ರದರ್ಶಿಸಲಿದೆ. ಒಂದು ಟ್ರ್ಯಾಕ್ಟರ್, 10 ಕಲಾಕೃತಿಗಳು, ದಿಂಡಿಗಲ್‌ನ ಸೆಲ್ವಂ ಎಲೆಕ್ಟ್ರಿಕಲ್ ನವರ ಲೈಟಿಂಗ್ ಬೋರ್ಡ್ ಇರಲಿದೆ. ಪ್ಲಾಟ್‌ಫಾರಂ ನಿರ್ಮಾಣ ಮತ್ತು ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ನ್ನು ಸಮಿತಿ ಸದಸ್ಯರೆ ಮಾಡಲಿದ್ದಾರೆ. ಧ್ವನಿವರ್ಧಕ ಮತ್ತು ಸ್ಟುಡಿಯೋ ಲೈಟ್ ವ್ಯವಸ್ಥೆಯನ್ನು ಮಡಿಕೇರಿಯ ಮರ್ಕರ ಪವರ್ ನವರು ಒದಗಿಸಲಿದೆ. ಒಟ್ಟು 8 ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದೆ ಎಂದು ಅಧ್ಯಕ್ಷ ಭರತ್ ಬಿದ್ದಪ್ಪ ತಿಳಿಸಿದ್ದಾರೆ.
*ದೇವಿ ಸರ್ವರಿಗೂ ಒಳಿತು ಮಾಡಲಿ : ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳು*(ಅಚ್ಚಂಡೀರ ಪವನ್ ಪೆಮ್ಮಯ್ಯ, ಅಧ್ಯಕ್ಷರು, ಕೊಡಗು ರಕ್ಷಣಾ ವೇದಿಕೆ)
ಮಡಿಕೇರಿ ಅ.22 : ಮಡಿಕೇರಿ ದಸರಾ ಜನೋತ್ಸವದ ಭಾಗವಾಗಿ ಕ್ರೀಡಾ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ‘ಮ್ಯಾಟ್ ಕಬಡ್ಡಿ’ ನಡೆಯಿತು. ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ದೈಹಿಕ ಸಾಮರ್ಥ್ಯ ಬಯಸುವ ಕಬಡ್ಡಿ ಕ್ರೀಡೆಯಲ್ಲಿ ಸಾಧನೆ ಮಾಡಲು ನಿರಂತರ ಪರಿಶ್ರಮ ಅಗತ್ಯ. ಕಠಿಣ ಪರಿಶ್ರಮದಿಂದ ಏನನ್ನು ಬೇಕಾದರು ಸಾಧಿಸಬಹುದಾಗಿದೆ. ದಸರಾ ಕ್ರೀಡಾ ಸಮಿತಿ ಉತ್ಸವದ ಅಂಗವಾಗಿ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವೆಂದು ಹೇಳಿದರು. ದಸರಾ ಸಾಂಸ್ಕೃತಿಕ ಸಮಿತಿಯ ತೆನ್ನಿರ ಮೈನಾ ಮಾತನಾಡಿ, ಕ್ರೀಡೆಯಲ್ಲಿ ಜಾತಿ, ಮತ ಭೇದಗಳಿಲ್ಲ. ಇಲ್ಲಿ ಎಲ್ಲರು ಸಮಾನರಾಗಿದ್ದು, ಆಸಕ್ತಿ ಉತ್ಸಾಹ ಇರುವ ಯಾರು ಕೂಡ ಕ್ರೀಡೆಗಳಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಹಿನ್ನೆಲೆ ಪರಸ್ಪರ ಸೌಹಾರ್ದತೆ ಮೂಡಿಸುವ ಕ್ರೀಡಾಂಗಣವಾಗಿ ನಮ್ಮ ಸಮಾಜ ರೂಪುಗೊಳ್ಳಲಿ ಎಂದು ಹಾರೈಸಿದರು. ಶಕ್ತಿ ದಿನಪತ್ರಿಕೆಯ ಸಂಪಾದಕರಾದ ಜಿ.ಚಿದ್ವಿಲಾಸ್ ಮಾತನಾಡಿ, ಜಾತಿ ಮತಗಳ ಎಲ್ಲೆಯನ್ನು ಮೀರಿದ ಕ್ಷೇತ್ರ ಕ್ರೀಡಾ ಕ್ಷೇತ್ರವಾಗಿದೆ. ಇಂತಹ ಕ್ರೀಡಾ ಚಟುವಟಿಕೆಗಳನ್ನು ದಸರಾ ಕ್ರೀಡಾ ಸಮಿತಿ ಆಯೋಜಿಸುವ…
*ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಶಾಯಗಳು : ಹಬ್ಬ ಸರ್ವರಿಗೂ ಶುಭ ತರಲಿ*(ಜಾನ್ಸ್ ನ್ ಪಿಂಟೋ, ಸದಸ್ಯರು, ಕೆ.ನಿಡುಗಣೆ ಗ್ರಾಮ ಪಂಚಾಯ್ತಿ, ಮಡಿಕೇರಿ)
*ಕೊಡಗಿನ ಸಮಸ್ತ ಜನತೆಗೆ ಹಾಗೂ ಬೆಳೆಗಾರರಿಗೆ ನಾಡಹಬ್ಬ ದಸರಾದ ಶುಭಾಶಯಗಳು*(ಕೊಡಗು ಜಿಲ್ಲಾ ಏಲಕ್ಕಿ ಮಾರಾಟ ಸಹಕಾರ ಸಂಘ)






