ಮಡಿಕೇರಿ ಅ.21 : ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಕರಾವಳಿ-ಮಲೆನಾಡು ಜನಪರ ಒಕ್ಕೂಟ ರಚಿಸಲಾಗಿದ್ದು, ಅ.31 ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೋಳಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಹಾಗೂ ಮಲೆನಾಡು ಪ್ರದೇಶ ಒಳಗೊಂಡ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಭಾಗದ ಜನರ, ಕೂಲಿ ಕಾರ್ಮಿಕರ, ಬೆಳೆಗಾರರ ಸಮಸ್ಯೆ ಬಗೆಹರಿಸಲು ಒಕ್ಕೂಟ ರಚಿಸಲಾಗಿದೆ ಎಂದರು. ಎಲ್ಲ ಜಿಲ್ಲೆಗಳ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 200 ಕುಟುಂಬಗಳಿಗೆ ನಿವೇಶನ ಒದಗಿಸಲು ಕ್ರಮಕೈಗೊಳ್ಳಬೇಕು, ಧಾರವಾಡ, ಕಲಬುರಗಿಯಲ್ಲಿ ಹೈಕೋರ್ಟ್ ಪೀಠದಂತೆ ಮಲೆನಾಡು ಹಾಗೂ ಕರಾವಳಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಭಾಗದಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಸ್ಥಾಪಿಸಬೇಕು, ಆಟೋ, ಟ್ಯಾಕ್ಸಿ ಚಾಲಕರ ಮಂಡಳಿಯನ್ನು ರಚಿಸಿ, ಪರ್‍ಮಿಟರ್ ನಿಯಮವನ್ನು ಇಲ್ಲಿನ ಭೂ ಪ್ರದೇಶಕ್ಕೆ ಅನುಗುಣವಾಗಿ ತಾಲೂಕು ಪರಿಮಿಟ್ ನೀಡಬೇಕು, ಕ್ಷೇತ್ರ ಪುನರ್ ವಿಂಗಡಣೆ…
ಲೇಖಕ: admin
ಸಿದ್ದಾಪುರ ಆ.20 : ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಿದ್ದಾಪುರದಲ್ಲಿ 30ನೇ ವರ್ಷದ ಆಯುಧ ಪೂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸೂದನ ಸತೀಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಹಾಗೂ ಕೋವಿಡ್‍ನಿಂದಾಗಿ ಕಳೆದ 5ವರ್ಷಗಳಿಂದ ಸರಳವಾಗಿ ಆಚರಣೆ ಮಾಡಲಾಗಿದ್ದ ಆಯುಧ ಪೂಜೆ ಸಮಾಂಭವನ್ನು ಈ ಭಾರಿ ವಿವಿಧ ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದರು. ಅ.23 ರಂದು ಸಿದ್ದಾಪುರದ ಬಸ್ ನಿಲ್ದಾಣದಲ್ಲಿನ ವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಮಕ್ಕಳ ಸೈಕಲ್ ನಿಧಾನ ಸ್ಪರ್ಧೆ15 ರಿಂದ 20ವರ್ಷ ವಯೋಮಿತಿಯ ಯುವಕರಿಗೆ ರಸ್ತೆ ಓಟ , ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು. ವಾಹನ ಚಾಲಕರ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ ಸಾಂಸ್ಕೃತಿಕ ಕಾರ್ಯಕ್ರಮವು ನಾಲ್ಕು ವಿಭಾಗಗಳಲ್ಲಿ ನಡೆಯುತ್ತಿದ್ದು, ಒಂದರಿಂದ ಏಳನೇ ತರಗತಿವರೆಗೆ ಭರತನಾಟ್ಯ, ಜಾನಪದ ನೃತ್ಯ ,ಸಾಮೂಹಿಕ ನೃತ್ಯ, ಪ್ರೌಢಶಾಲಾ…
ಮಡಿಕೇರಿ ಅ.21 : ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಆಸ್ತಿ ರಕ್ಷಣೆ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರಿಗೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ಜಿ.ಪಂ.ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಸುಂದರರಾಜ್, ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಡಿವೈಎಸ್‍ಪಿ ಜಗದೀಶ್, ಪ್ರಮುಖರಾದ ಪಿ.ಎ.ನಂಜಪ್ಪ, ಐ.ಪಿ.ಮೇದಪ್ಪ, ಅನೂಪ್ ಮಾದಪ್ಪ, ಅನಂತ ಎಚ್.ಎಸ್., ಚೆನ್ನನಾಯಕ, ಮಂಜು ಎಚ್.ಡಿ., ವಾಣಿಶ್ರೀ, ಸವಿತಾ, ಲಿಂಗಪ್ಪ, ಶ್ರೀಧರನ್ ನಾಯರ್, ಮುತ್ತಪ್ಪ, ಅಂಬೆಕಲ್ಲು ನವೀನ್, ಸೂರ್ತಲೆ ಸೋಮಣ್ಣ, ಗೀತಾ ಗಿರೀಶ್, ನಿರಂಜನ, ಮಧುಕರ, ಆಂಥೋಣಿ ಡಿಸೋಜ, ಪೂಣಚ್ಚ, ಬಿ.ಬಿ.ಜಗದೀಶ್, ವೆಂಕಪ್ಪ, ಸಿದ್ದೇಶ್, ಸೇರಿದಂತೆ ಹಲವರು ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ, ಗೌರವ ನಮನ ಸಲ್ಲಿಸಿದರು. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಕಳೆದ ವರ್ಗ ಕರ್ತವ್ಯ ನಿರ್ವಹಿಸುವಾಗ ದೇಶದಲ್ಲಿ ಪ್ರಾಣ ಕಳೆದುಕೊಂಡ ಪೆÇಲೀಸ್ ಅಧಿಕಾರಿಗಳು ಮತ್ತು ಪೇದೆಗಳ…
ಮಡಿಕೇರಿ ಅ.21 : ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರಸಭಾ ಸದಸ್ಯೆಯರು, ಮಹಿಳೆಯರ ಬಳಗ, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅ.22 ರಂದು ಗಾಂಧಿ ಮೈದಾನದಲ್ಲಿ ಮಹಿಳಾ ದಸರಾ ಆಯೋಜಿತವಾಗಿದೆ. ಬೆಳಗ್ಗೆ 9.30 ಗಂಟೆಯಿಂದಲೇ ವಿವಿಧ ಸ್ಪಧೆಗಳನ್ನು ಮಹಿಳೆಯರಿಗೆ ಆಯೋಜಿಸಲಾಗಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ಮತ್ತು ಮಹಿಳಾ ದಸರಾ ಸಮಿತಿ ಸಂಚಾಲಕಿ ಕುಡೆಕಲ್ ಸವಿತಾ ಸಂತೋಷ್ ತಿಳಿಸಿದ್ದಾರೆ. 8ನೇ ವಷ೯ದ ಮಹಿಳಾ ದಸರಾ ಅಂಗವಾಗಿ ಎಥ್ ನಿಕ್ ಫ್ಯಾಷನ್ ಶೋ , ಸಾಂಪ್ರದಾಯಿಕ ಉಡುಗೆ ಸ್ಪಧೆ೯, ಗಾರ್ಭಾ ನೃತ್ಯ ಸ್ಪಧೆ೯, 100 ಮೀಟರ್ ಓಟದ ಸ್ಪರ್ಧೆ , ತೆಂಗಿನ ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆ , ಹಗ್ಗ ಜಗ್ಗಾಟ, ಚಮಚದಲ್ಲಿ ನಿಂಬೆ ಹಣ್ಣು ಇಟ್ಟು ವೇಗವಾಗಿ ನಡೆಯುವುದು., ಬಕೆಟ್ ಗೆ ಚೆಂಡನ್ನು ಹಾಕುವುದು, ತಲೆಯ ಮೇಲೆ ಪುಸ್ತಕ ಇಟ್ಟು ನಡೆಯುವುದು, ಕೋಲಿಗೆ ರಿಂಗ್ ಹಾಕುವುದು, ನಿಧಾನವಾಗಿ ನಡೆಯುವುದು. ಸೂಜಿಗೆ ನೂಲನ್ನು…
ಮಡಿಕೇರಿ ಅ.21 : ಅಖಿಲ ಕೊಡವ ಸಮಾಜದ ಮಾಜಿ ಅಧ್ಯಕ್ಷ, ವಿರಾಜಪೇಟೆ ಸಮೀಪದ ಕೆದಮಳ್ಳೂರು ಗ್ರಾಮದ ನಿವಾಸಿ ಮಾತoಡ ಮೊಣ್ಣಪ್ಪ( 76) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕೊಡಗು ಏಕೀಕರಣ ರಂಗ ಸೇರಿದಂತೆ ಹಲವಾರು ಸಂಘ-ಸಂಸ್ಥೆಯಲ್ಲಿ ತೊಡಗಿಸಿಕೊಂಡ ಮಾತoಡ ಮೊಣ್ಣಪ್ಪನವರು, ತಲಕಾವೇರಿ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾಗಿ ತಲಕಾವೇರಿ ಜೀರ್ಣೋದ್ಧಾರಕ್ಕೆ ಕಾರಣಕರ್ತರಾದವರು. ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ ಮೊಣ್ಣಪ್ಪ, ಹಲವಾರು ಸಹಕಾರ ಸಂಘಗಳಲಿ ಕೂಡ ಸೇವೆಯನ್ನು ಸಲ್ಲಿಸಿದ್ದರು. ಸಾಮಾಜಿಕ ಪ್ರಜ್ಞೆ ಹಾಗೂ ಸಾಮಾಜಿಕ ಕಳಕಳಿ ಹೊಂದಿದ್ದ ಇವರ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ. ಮೃತರ ಅಂತ್ಯಕ್ರಿಯೆ ಅ.22 ರಂದು ಸ್ವಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಡಿಕೇರಿ ಅ.21 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಿಯು ಶರನ್ನವರಾತ್ರಿಯ 7ನೇ ದಿನವಾದ ಇಂದು ತಾವರೆ ಪುಷ್ಪದ ಅಲಂಕಾರದಲ್ಲಿ ಗಮನ ಸೆಳೆಯುತ್ತಿದೆ. ನವರಾತ್ರಿಯ 6ನೇ ದಿನ ಶಾರದಾ ದೇವಿಯ ಅಲಂಕಾರದಲ್ಲಿ ಪೂಜೆ ಸಲ್ಲಿಸಲಾಯಿತು. ಅ.22 ರಂದು ಬಳೆ ಅಲಂಕಾರ ಅಲಂಕಾರ ನೆರವೇರಲಿದೆ.
ಬೆಂಗಳೂರು ಅ.20 : ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿಯ ಗುಂಪು ವಿಮೆ ಮೊತ್ತವನ್ನು 20 ಲಕ್ಷ ರೂಪಾಯಿಗಳಿಂದ 50 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಘೋಷಿಸಿದ್ದಾರೆ. ಬೆಂಗಳೂರಿನ ಮೈಸೂರು ರಸ್ತೆಯ ಹುತಾತ್ಮರ ಉದ್ಯಾನವನದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಪೊಲೀಸ್ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಈ ವಿಷಯ ಪ್ರಕಟಿಸಿದರು. ಪೊಲೀಸ್ ವ್ಯವಸ್ಥೆಯು ರಾಜ್ಯ ಮತ್ತು ಸರ್ಕಾರದ ಘನತೆ ಹೆಚ್ಚಿಸುವ ಕೆಲಸ ಮಾಡುತ್ತದೆ. ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆ ನಡುವೆ ನೇರ ಸಂಬಂಧವಿದೆ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದ್ದಾಗ ಹೆಚ್ಚಿನ ಬಂಡವಾಳ ಹೂಡಿಕೆಯಾಗುತ್ತದೆ ಎಂದು ಹೇಳಿದರು. ಇದು ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುತ್ತದೆ ಮತ್ತು ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ. ಪರಿಣಾಮವಾಗಿ, ದೇಶದ ಜನರ ತಲಾ ಆದಾಯವೂ ಹೆಚ್ಚಾಗುತ್ತದೆ. ದೇಶದ ಕಾನೂನು ಸುವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಕಾಪಾಡಬೇಕು ಎಂದು ಕರೆ ನೀಡಿದರು. ತಂತ್ರಜ್ಞಾನದ ಪ್ರಗತಿಯಿಂದ ಪೊಲೀಸ್ ಇಲಾಖೆಗೆ ಹೊಸ ಸವಾಲುಗಳು ಎದುರಾಗುತ್ತಿದ್ದು, ಸೈಬರ್ ತಂತ್ರಜ್ಞಾನದ ಜತೆಗೆ ಸೈಬರ್…
ಕುಶಾಲನಗರ, ಅ.21 : ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಳ್ಳಲಿರುವ ಸುವರ್ಣ ಮಹೋತ್ಸವದ ಸುಸಂದರ್ಭದಲ್ಲಿ “ಕರ್ನಾಟಕ ಸುವರ್ಣ ಸಂಭ್ರಮ : 50, “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ವರ್ಷಪೂರ್ತಿ ವೈವಿಧ್ಯಮಯವಾಗಿ, ವರ್ಣಮಯವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಿದ್ದತೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆದ ಜಿಲ್ಲಾ ಕ.ಸಾ.ಪ. ಸಲಹೆಗಾರ ಟಿ.ಪಿ.ರಮೇಶ್ ಹೇಳಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು( ಕ.ಸಾ.ಪ.) ಹಾಗೂ ಕುಶಾಲನಗರ ತಾಲ್ಲೂಕು ಕ.ಸಾ.ಪ. ವತಿಯಿಂದ ಕ.ಸಾ.ಪ.ಹೆಬ್ಬಾಲೆ ಘಟಕದ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಉತ್ತರ ಕೊಡಗಿನ ಗಡಿಭಾಗದ ಹೆಬ್ಬಾಲೆ ಗ್ರಾಮದಲ್ಲಿ ನವೆಂಬರ್ : 2023 ರಲ್ಲಿ ನಡೆಸಲುದ್ದೇಶಿಸಿರುವ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ ಸಂಘಟನೆ ಕುರಿತು ಹೆಬ್ಬಾಲೆ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಆಚರಣೆ ಕುರಿತು ರೂಪುರೇಷೆ ಕುರಿತು ಮಾಹಿತಿ ನೀಡಿದರು. ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಜನಜನಿತವಾಗಿದ್ದು,…
ಮಡಿಕೇರಿ ಅ.21 : ಸಮರ್ಥ ಕನ್ನಡಿಗರು ವತಿಯಿಂದ ನ.5 ರಂದು ಮಡಿಕೇರಿಯಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಚಾಲಕಿ ಕೆ. ಜಯಲಕ್ಷ್ಮಿ ತಿಳಿಸಿದ್ದಾರೆ. 1-7 ವರ್ಷದ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ (ಎರಡು ವಿಭಾಗಗಳಲ್ಲಿ ) : ಪ್ರೌಢಶಾಲೆಯ ಮಕ್ಕಳಿಗೆ ಜಾನಪದ ಸಮೂಹ ನೃತ್ಯ ಸ್ಪರ್ಧೆ. ನೃತ್ಯಕ್ಕೆ ಕಾಲಾವಕಾಶ 5 ನಿಮಿಷಗಳು, ತಂಡದಲ್ಲಿ ಕನಿಷ್ಠ 6 ಗರಿಷ್ಠ 8 ಮಕ್ಕಳಿರಬೇಕು. ಮಹಿಳೆಯರಿಗೆ ಸಮೂಹ ಗಾಯನ ಸ್ಪರ್ಧೆ :: ಯಾವ ಕನ್ನಡ ಹಾಡನ್ನಾದರೂ ಹಾಡಬಹುದು. ತಂಡದಲ್ಲಿ 6ರಿಂದ 10 ಸದಸ್ಯರು ಇರಬೇಕು. ಕರೋಕೆ ಬಳಸಿ ಹಾಡುವಂತಿಲ್ಲ. 4 ನಿಮಿಷ ಕಾಲಾವಕಾಶ. ಪ್ರೌಡಶಾಲೆ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಸಮೂಹ ನೃತ್ಯ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಗೆ ಹೆಸರು ನೋಂದಾಯಿಸಲು : ಮಹಿಳೆಯರ ಸಮೂಹ ಗಾಯನ : ಜಯಲಕ್ಷ್ಮಿ 9663119670 ಛದ್ಮವೇಷ : ಗಿರಿಜಾಮಣಿ -9110657754 ಸಮೂಹ ನೃತ್ಯ : ಚಿತ್ರಾ ಆರ್ಯನ್ 9449044117 ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಮಡಿಕೇರಿ ಅ.21 : ಕಾವೇರಿ ತೀರ್ಥೋದ್ಭವ ಹಿನ್ನೆಲೆ ವಿರಾಜಪೇಟೆಯಿಂದ ತಲಕಾವೇರಿವರೆಗೆ ಎಂಟು ಯುವಕರು ಪಾದಯಾತ್ರೆ ಮಾಡಿದರು. ಕಾವೇರಿ ಮಾತೆಯ ಭಕ್ತಾದಿಗಳಾಗಿರುವ ಚೆಟ್ಟೋಳಿರ ಶರತ್ ಸೋಮಣ್ಣ , ಮುರುವಂಡ ಸವನ್ ಸೋಮಣ್ಣ, ಕಾಳಮಂಡ ರಾಬಿನ್ ಅಚ್ಚಮ್ಮ , ಚೆಟ್ಟಿಮಾಡ ಸಜನ್ ಕುಟ್ಟಪ್ಪ, ಮಾಚಂಗಡ ಸಚಿನ್, ಪೊರುಕಂಡ ಶಾನ್ , ಮುಕ್ಕಾಟಿರ ಉತ್ತಪ್ಪ, ಅಳಮೇಂಗಡ ಸೋಮಣ್ಣ ಕಾವೇರಿ ತೀರ್ಥೋದ್ಭವದ ಹಿನ್ನೆಲೆ ವಿರಾಜಪೇಟೆಯಿಂದ ಸುಮಾರು 58 ಕಿಮೀ ಪಾದಯಾತ್ರೆ ಕೈಗೊಂಡಿದ್ದರು. ವಿರಾಜಪೇಟೆ , ಕದನೂರು , ಕಡಂಗ , ನಾಪೋಕ್ಲು, ಬಲ್ಲಮಾವಟೀ , ಅಯ್ಯಂಗೇರಿ ಮೂಲಕ ಭಾಗಮಂಡಲಕ್ಕೆ ಸಂಜೆತಲುಪಿದ ಯುವಕರು , ಮಂಗಳವಾರ ಭಾಗಮಂಡಲದಿಂದ ಎಲ್ಲರೊಂದಿಗೆ ಪಾದಯಾತ್ರೆ ಮುಂದುವರಿಸಿ ತೀರ್ಥೋದ್ಭವ ಮುನ್ನ ತಲಕಾವೇರಿಗೆ ತಲುಪಿದರು.






