ಮಡಿಕೇರಿ ಅ.22 – ಮಡಿಕೇರಿ ದಸರಾ ಸಾಂಸ್ಕೃತಿಕ ಕಾಯ೯ಕ್ರಮಗಳ 9 ದಿನವಾದ ಮಂಗಳವಾರ ವಿಜಯದಶಮಿ ಸಂದಭ೯ ವೈವಿಧ್ಯಮಯ ಕಾಯ೯ಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿಸಲ್ಪಟ್ಟಿದೆ. ಅ.24 ರಂದು ಮಂಗಳವಾರ ವಿಜಯದಶಮಿ ಪ್ರಯುಕ್ತ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಮುದ್ರ ಸ್ಕೂಲ್ ಆಫ್ ಡಾನ್ಸ್ ತಂಡದಿಂದ ನೃತ್ಯ ವೈವಿಧ್ಯ , ಉಡುಪಿಯ ಭಾಗ೯ವಿ ಡಾನ್ಸ್ ಟೀಮ್ ನಿಂದ ಗ್ರಾವಿಟಿ ಡಾನ್ಸ್ , ಚಕ್ಕೇರ ಪಂಚಮ್ ತ್ಯಾಗರಾಜ್ ಮತ್ತು ತಂಡದಿಂದ ಗಾನಸುಧೆ ಸೇರಿದಂತೆ ಅನೇಕ ಕಾಯ೯ಕ್ರಮಗಳನ್ನು ದಸರಾ ಸಾಂಸ್ಕೖತಿಕ ಸಮಿತಿಯಿಂದ ಆಯೋಜಿಸಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗಿನ ಜಾವ 5 ಗಂಟೆಯವರೆಗೆ ರಾಜ್ಯದ ಹೆಸರಾಂತ ಗಾಯಕ, ಗಾಯಕಿಯರಿಂದ ಸಂಗೀತ ರಸಮಂಜರಿ ಕಾಯ೯ಕ್ರಮವನ್ನು ಮಡಿಕೇರಿ ನಗರ ದಸರಾ ಸಮಿತಿಯಿಂದ ಆಯೋಜಿಸಲಾಗಿದೆ.
ಲೇಖಕ: admin
ಮಡಿಕೇರಿ ಅ.22 : ಸಂಸಾರ ನೌಕೆಯನ್ನು ಸಮತೋಲನದಿಂದ ಮುನ್ನಡೆಸಿಕೊಂಡು ಹೋಗುವ ಮಹಿಳೆಯರ ನಿತ್ಯ ಜಂಜಡಗಳಿಗೆ ಒಂದಷ್ಟು ವಿರಾಮ ನೀಡುವ ನಿಟ್ಟಿನಲ್ಲಿ ಮಡಿಕೇರಿ ದಸರಾ ಉತ್ಸವದ ಅಂಗವಾಗಿ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಆಯೋಜಿತ ‘ಮಹಿಳಾ ದಸರಾ’ ನಾಡಿನ ವಿವಿಧೆಡೆಗಳಿಂದ ಆಗಮಿಸಿದ ಮಹಿಳೆಯರ ಸಂಗಮಕ್ಕೆ ವೇದಿಕೆಯಾಯಿತು. ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಮಹಿಳೆಯರ ಸಂತಸ ಮೇರೆ ಮೀರಿತು. ಮಹಿಳಾ ದಸರಾ ಕಾರ್ಯಕ್ರಮವನ್ನು ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರಿಗೆ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಉತ್ತಮ ಬೆಳವಣಿಗೆ. ಕುಟುಂಬವನ್ನು ನಿಭಾಯಿಸುವ ಮಹಿಳೆಯ ಮುಖದಲ್ಲಿನ ನಗು ಎಂದಿಗೂ ಮಾಸದಿರಲಿ. ದಿನನಿತ್ಯದ ಜಂಜಾಟ ಬಿಟ್ಟು ಎಲ್ಲರೂ ಒಟ್ಟಾಗಿ ಸಂಭ್ರಮಿಸುತ್ತಿರುವುದು ಖುಷಿ ಕೊಟ್ಟಿದೆ ಎಂದು ಹೇಳಿದರು. ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರಾದ ನಗರಸಭಾ ಅಧಕ್ಷೆ ಅನಿತಾ ಪೂವಯ್ಯ ಮಾತನಾಡಿ, ಗ್ರಾಮೀಣ ಮಹಿಳೆಯರಿಗೂ ಮಹಿಳಾ ದಸರಾ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಇಂತಹ ಕಾರ್ಯಕ್ರಮದಲ್ಲಿ ಮಹಿಳೆಯರು ಪಾಲ್ಗೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ…
ಮಡಿಕೇರಿ ಅ.22 : ಮಡಿಕೇರಿ ದಸರಾ ಪ್ರಯುಕ್ತ ಸಾಮಾಜಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ‘ದಸರಾ ಸೈಕ್ಲಥಾನ್ 2023’ ನಡೆಯಿತು. ಯುವ ದಸರಾ ಸಮಿತಿ, ಗ್ರೀನ್ ಸಿಟಿ ಫೋರಂ ಸಹಭಾಗಿತ್ವದಲ್ಲಿ ನಡೆದ ಸೈಕಲ್ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಚಾಲನೆ ನೀಡಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಿಂದ ಆರಂಭವಾದ ಜಾಥಾ ಜನರಲ್ ತಿಮ್ಮಯ್ಯ ಸರ್ಕಲ್, ಹಳೆ ಖಾಸಗಿ ಬಸ್ ನಿಲ್ದಾಣ, ಇಂದಿರಾಗಾಂಧಿ ವೃತ್ತ, ಎಲ್‌ಐಸಿ ಮಾರ್ಗವಾಗಿ ಸಾಗಿ ಗಾಂಧಿ ಮೈದಾನದಲ್ಲಿ ಕೊನೆಗೊಂಡಿತು. ಪ್ಲಾಸ್ಟಿಕ್ ಮುಕ್ತ ಕೊಡಗು, ಡ್ರಗ್ಸ್ ಮುಕ್ತ ಕೊಡಗು ಧ್ಯೇಯದೊಂದಿಗೆ ಸೈಕ್ಲಥಾನ್ ಜರುಗಿತು. ಜಾಥಾದಲ್ಲಿ ಪಾಲ್ಗೊಂಡಿದ್ದವರಿಗೆ ಗಾಂಧಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದ ಧ್ಯೇಯದ ಕುರಿತಾಗಿ ಪ್ರಮಾಣ ವಚನವನ್ನು ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಚೈಯ್ಯಂಡ ಸತ್ಯಗಣಪತಿ ಬೋಧಿಸಿದರು. ಫೋರಂ ಉಪಾಧ್ಯಕ್ಷ ಕುಕ್ಕೇರ ಜಯಚಿಣ್ಣಪ್ಪ, ಶಕ್ತಿ ದಿನಪತ್ರಿಕೆ ಸಂಪಾದಕ ಜಿ.ಚಿದ್ವಿಲಾಸ್, ಯುವದಸರಾ ಸಮಿತಿ ಅಧ್ಯಕ್ಷ ಕೊತ್ತೊಳಿ ಕವನ್, ಯುವದಸರಾ ಸಮಿತಿ ಪ್ರಮುಖರಾದ ಅಜ್ಜೆಟ್ಟಿರ…
*ದಸರಾ ಹಬ್ಬದ ಶುಭಾಶಯಗಳು : ಸರ್ವರಿಗೂ ಸುಖ, ಶಾಂತಿ, ಸಮೃದ್ಧಿ ಸಿಗಲಿ*(ಸುರೇಶ್ ಮುತ್ತಪ್ಪ, ಕಾರ್ಯಾಧ್ಯಕ್ಷರು, ವಿಶ್ವ ಹಿಂದೂ ಪರಿಷತ್, ಕೊಡಗು ಜಿಲ್ಲೆ)
ಮಡಿಕೇರಿ ಅ.22 : ನದಿಗಳನ್ನು ರಾಷ್ಟ್ರೀಕರಣಗೊಳಿಸುವ ಮೂಲಕ ಜಲ ಮೂಲಗಳ ಸಂರಕ್ಷಣೆ ಮತ್ತು ರಾಜ್ಯಗಳ ನಡುವೆ ಉಂಟಾಗಿರುವ ಗೊಂದಲದ ಶಾಶ್ವತ ನಿರ್ಮೂಲನೆ ಸಾಧ್ಯ ಎಂದು ಅಖಿಲ ಭಾರತ ಸನ್ಯಾಸಿ ಸಂಘದ ಕಾರ್ಯದರ್ಶಿ ಶ್ರೀ ಶಿವರಾಮನಂದ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕುಶಾಲನಗರದಲ್ಲಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ನಡೆದ 150ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಜಲಮೂಲಗಳ, ನದಿ ತೊರೆಗಳ ಸಂರಕ್ಷಣೆ ಮಾಡುವಲ್ಲಿ ಪ್ರತಿಯೊಬ್ಬರೂ ವಿಫಲರಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ ಸ್ವಾಮೀಜಿ, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ಹರಿಸಬೇಕಾಗಿದೆ. ಈ ಮೂಲಕ ರಾಜ್ಯ ರಾಜ್ಯಗಳ ನಡುವೆ ಉಂಟಾಗುತ್ತಿರುವ ಜಲ ಕ್ಷಾಮದ ಸಮಸ್ಯೆಯನ್ನು ನೀಗಿಸಲು ಬೃಹತ್ ಯೋಜನೆಗಳನ್ನು ರೂಪಿಸಬೇಕಾಗಿದೆ. ದಕ್ಷಿಣ ಭಾರತದಲ್ಲಿ ಬಹುತೇಕ ನದಿಗಳು ತನ್ನ ಮೂಲ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಹವಾಮಾನ ವೈಪರಿತ್ಯದ ನಡುವೆ ನಿಗದಿತ ಅವಧಿಗಿಂತಲೇ ಮುನ್ನ ನದಿಗಳು ಬತ್ತಿ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಈ ನಿಟ್ಟಿನಲ್ಲಿ ಅಖಿಲ ಭಾರತ ಸಾಧುಸಂತರ ಸಂಘ…
*ದಸರಾ ಹಬ್ಬದ ಶುಭಾಶಯಗಳು : ಶ್ರೀಚಾಮುಂಡೇಶ್ವರಿ ತಾಯಿ ಸರ್ವರಿಗೂ ಆರೋಗ್ಯ, ಐಶ್ವರ್ಯ, ನೆಮ್ಮದಿ ನೀಡಲಿ*(ಬಲ್ಲಾರಂಡ ಮಣಿ ಉತ್ತಪ್ಪ, ಚೆಟ್ಟಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘ)
ಮಡಿಕೇರಿ ಅ.22 : ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ 2022-23ನೇ ಸಾಲಿನ ವಾರ್ಷಿಕೋತ್ಸವ ಹಾಗೂ ಶ್ರೀ ನಾರಾಯಣ ಗುರುಗಳ ಗುರು ನಮನ ಕಾರ್ಯಕ್ರಮ ಅ.29 ರಂದು ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಎಸ್.ಸುಧೀರ್ ತಿಳಿಸಿದ್ದಾರೆ. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಬಳಿ ಸಂಘ ನೋಂದಣಿ ಯಾಗಿ 13 ವರ್ಷಗಳ ನಂತರ ಪ್ರಥಮವಾಗಿ ದೊಡ್ಡ ಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ ಪಟ್ಟಣದ ಬೈಚನಹಳ್ಳಿ ಗ್ರಾಮದ ಶ್ರೀ ಮಾರಿಯಮ್ಮ ದೇವಾಲಯ ಬಳಿಯಿಂದ ಕೋಟಿ ಚೆನ್ನಯ್ಯರ ಹಾಗೂ ಶ್ರೀ ನಾರಾಯಣ ಗುರುಗಳ ಭಾವ ಚಿತ್ರವನ್ನು ವಾದ್ಯಗೋಷ್ಠಿ, ಭಜನಾ ತಂಡದೊಂದಿಗೆ ಸಭಾಂಗಣದವರೆಗೆ ಭವ್ಯ ಮೆರವಣಿಗೆ ನಡೆಸಲಾಗುವುದು. ಸಭಾ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರಿಗೆ ವಿವಿಧ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ 500 ಕ್ಕೂ ಅಧಿಕ ಮಂದಿ ಸಮುದಾಯ ಬಾಂಧವರಿದ್ದು, ಸಂಘಟನೆ ಮೂಲಕ ಸಮಾಜಕ್ಕೆ ಆರ್ಥಿಕ ಕ್ರೋಡೀಕರಣ ಮಾಡಲಾಗಿದೆ. ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್, ಕುಶಾಲನಗರ ವೃತ್ತನಿರೀಕ್ಷಕ ರಾಜೇಶ್ ಕೋಟ್ಯಾನ್ ಮತ್ತಿತರರು ಅಂದಿನ ಕಾರ್ಯಕ್ರನದಲ್ಲಿ…
ಮಡಿಕೇರಿ ಅ.22 – ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳ ಎಂಟನೇ ದಿನವಾದ ಸೋಮವಾರ ಆಯುಧಪೂಜಾ ಸಂದಭ೯ ವೈವಿಧ್ಯಮಯ ಕಾಯ೯ಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿಸಲ್ಪಟ್ಟಿದೆ. ಈ ಬಾರಿ ಮಡಿಕೇರಿ ದಸರಾದ ಪ್ರಮುಖ ಆಕಷ೯ಣೆಯಾಗಿರುವ ಭಾರತದ ಹೆಸರಾಂತ ಹಿನ್ನಲೆ ಗಾಯಕ ವಿಜಯಪ್ರಕಾಶ್ ಅವರಿಂದ ಗಾನವೈಭವ ನಡೆಯಲಿದೆ. ಅ. 23 ರಂದು ಸೋಮವಾರ ಶ್ರೀ ಕಾಮಾಕ್ಷಿ ಮಹಿಳಾ ಸಂಘದಿಂದ ಕಥಕ್ಕಳಿ, ಯುವಜಾನಪದ ಬಳಗ ವತಿಯಿಂದ ಜಾನಪದ ನೖತ್ಯ, ಯುವಜನಪದ ಬಳಗದಿಂದ ನೖತ್ಯ, ಮಡಿಕೇರಿ ತಾಲೂಕು ಬಂಟರ ಸಂಘ, ಕ್ವೀನ್ಸ್ ಆಫ್ ಕೂಗ್೯, ಮಂಗಳೂರಿನ ತಾಂಡವಂ ಡಾನ್ಸ್ ಅಕಾಡೆಮಿಯಿಂದ ನೖತ್ಯರಂಗ್ ಸೋಮವಾರದ ಇತರ ಸಾಂಸ್ಕೖತಿಕ ಕಾಯ೯ಕ್ರಮಗಳಾಗಿದೆ.
*ದಸರಾ ಹಬ್ಬದ ಶುಭಾಶಯಗಳು : ಮಾತೆ ಕಾವೇರಿ ಹಾಗೂ ತಾಯಿ ದುರ್ಗೆ ಸರ್ವರಿಗೂ ಶುಭವನ್ನುಂಟು ಮಾಡಲಿ* (ತೇಲಪಂಡ ಶಿವಕುಮಾರ್ ನಾಣಯ್ಯ, ಸದಸ್ಯರು, ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿ)
*ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳು* (ಡಿ.ವಿನೋದ್ ಶಿವಪ್ಪ ಹಾಗೂ ಡಿ.ವಿಶಾಲ್ ಶಿವಪ್ಪ, ಮಾಲೀಕರು ಬೆಟ್ಟಗೇರಿ ಸಮೂಹ ಕಾಫಿ ತೋಟಗಳು)






