ಲೇಖಕ: admin

ಮಡಿಕೇರಿ ಅ.22 : ಡಾರ್ಜಿಲಿಂಗ್ ಗೂರ್ಖಾಲ್ಯಾಂಡ್ ಮತ್ತು ಬೋಡೋಲ್ಯಾಂಡ್ ಮಾದರಿಯಲ್ಲಿ ಸಂವಿಧಾನದ ಆರ್ಟಿಕಲ್ 244 ಆರ್/ಡಬ್ಲ್ಯೂ 6ನೇ ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ. ಕೊಡವ ಲ್ಯಾಂಡ್ ಗಾಗಿ ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಬಿಟ್ಟಂಗಾಲ ಜಂಕ್ಷನ್ ಬಳಿಯಿಂದ ಪಾದಯಾತ್ರೆ ನಡೆಯಿತು. ನಂತರ ಪಟ್ಟಿಬಾಣೆ ಮಂದ್ ಪೆರವನಾಡ್ ನಲ್ಲಿ ಕೊಡವ ಜಾಗೃತಿ ಸಭೆ ನಡೆಸಿದ ನಾಚಪ್ಪ ಅವರು, ಕೊಡವರ ಸಾಂವಿಧಾನಿಕ ಭದ್ರತೆಗಾಗಿ 9 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸುತ್ತಿದ್ದು, ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದರು. ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು ಎನ್ನುವುದು ಮುಖ್ಯ ಬೇಡಿಕೆಯಾಗಿದ್ದು, ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಹೈಕೋರ್ಟ್ನಲ್ಲಿ ಈ ಕುರಿತು ಅರ್ಜಿ ಸಲ್ಲಿಸಿ ನಮ್ಮ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಹಿರಿಯರಾದ ಸ್ವಾಮಿ ಅವರು ನಮಗೆ ಸ್ಫೂರ್ತಿಯಾಗಿದ್ದು, ಅವರಿಂದ ಪ್ರೇರಣೆಗೊಂಡು ಅವರ ಜನ್ಮದಿನದಿಂದ ಪಾದಯಾತ್ರೆಯನ್ನು…

Read More

ಮಡಿಕೇರಿ ಅ.22 : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ವೈದ್ಯರ ಕೊರತೆ ಇದ್ದರೂ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳದೆ ಇರುವುದನ್ನು ಗಮನಿಸಿದರೆ ಜನರ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ತಾತ್ಸಾರ ಮನೋಭಾವವಿದೆ ಎನ್ನುವುದು ಸಾಬೀತಾಗುತ್ತದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು. ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಸಾಕಷ್ಟಿದ್ದರೂ ಕಾಂಗ್ರೆಸ್ ಸರ್ಕಾರ ವಾಸ್ತವ ಪರಿಸ್ಥಿತಿ ಅರಿಯದೆ ಅವಿವೇಕತನದಿಂದ ವರ್ತಿಸುತ್ತಿದೆ. ರಾಜ್ಯದಲ್ಲಿ ವೈದ್ಯರ ಕೊರತೆ ಇಲ್ಲ ಎಂದು ಹೇಳುತ್ತಿರುವುದು ನಿಜಕ್ಕೂ ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದರು. ಇತ್ತೀಚೆಗೆ ನಾನು ಉತ್ತರ ಕರ್ನಾಟಕದ ರಾಜ್ಯ ಪ್ರವಾಸ ಕೈಗೊಂಡಾಗ ಅಲ್ಲಿನ ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಂದರ್ಭ ಸಾಕಷ್ಟು ವೈದ್ಯರುಗಳಿಲ್ಲದೆ ಮತ್ತು ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಸಾವಿರಾರು ರೋಗಿಗಳು ಪರದಾಡುತ್ತಿರುವ ಅಮಾನವೀಯ ಪರಿಸ್ಥಿತಿಯನ್ನು ಖುದ್ದಾಗಿ ನೋಡಿದ್ದೇನೆ. ಕ್ಯಾಬಿನೆಟ್ ಸಭೆಯ ನಂತರದ ಸರ್ಕಾರದ ಹೇಳಿಕೆ ನೋಡಿ…

Read More

ಮಡಿಕೇರಿ ಅ.22 : ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ಪಾದಯಾತ್ರೆಯ 4ನೇ ಹಂತ ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗಾಮದ ಬೋಟೋಳಿನಾಡ್ ನಲ್ಲಿ ಪೂರ್ಣಗೊಂಡಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಕೋವಿಯೊಂದಿಗೆ ಪಾದಯಾತ್ರೆ ನಡೆಸಿದ ಗ್ರಾಮದ ಕೊಡವ, ಕೊಡವತಿಯರು ಕೊಡವಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆ ಪರ ಘೋಷಣೆಗಳನ್ನು ಕೂಗಿದರು. ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಬೋಟೋಳಿನಾಡ್ “ತಿರಿಕೆ ಪಾಳಿ ಮಂದ್” ನಲ್ಲಿ ಕೊಡವ ಜನಜಾಗೃತಿ ಸಭೆ ನಡೆಸಿದ ನಾಚಪ್ಪ ಅವರು, ಅತ್ಯಂತ ಸೂಕ್ಷö್ಮ ಜನಾಂಗವಾಗಿರುವ ಕೊಡವರಿಗೆ ಸಾಂವಿಧಾನಿಕ ಭದ್ರತೆ ಸಿಗಬೇಕಾದರೆ ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಯ ಬೇಡಿಕೆ ಈಡೇರಬೇಕೆಂದು ಪ್ರತಿಪಾದಿಸಿದರು. ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕು, ಕೊಡವ ಜನಾಂಗದ ಸಮಗ್ರ ಕುಲಶಾಸ್ತç ಅಧ್ಯಯನ ಆರಂಭಿಸಬೇಕು, ಕೊಡವ ಕಸ್ಟಮರಿ ಜನಾಂಗೀಯ ‘ಸಂಸ್ಕಾರ ಗನ್’ ಹಕ್ಕುಗಳನ್ನು ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿ ನಮ್ಮ ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಕೊಡವರ “ಧಾರ್ಮಿಕ…

Read More

ಮಡಿಕೇರಿ ಅ.21 :  ಅಖಿಲ ಕೊಡವ ಸಮಾಜ ಮಾಜಿ ಅಧ್ಯಕ್ಷ ಮಾತಂಡ ಮೊಣ್ಣಪ್ಪ ನಿಧನಕ್ಕೆ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.

Read More

ಚೆಟ್ಟಳ್ಳಿ ಅ.21 :   ಬಂಟ್ವಾಳ ತಾಲೂಕಿನ ಬ್ರಹ್ಮಗಿರಿ ಗೋವಿನ ತೋಟ ಹಾಗೂ ಗೋ ಸೇವಾ ಗತಿವಿಧಿ ಸಂಯುಕ್ತ ಆಶ್ರಯದಲ್ಲಿ ಗೋ ರಥಯಾತ್ರೆಗೆ  ಚೆಟ್ಟಳ್ಳಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ರಥಯಾತ್ರೆಯ ಗೋವಿಗೆ ಬಾಳೆ ಹಣ್ಣು ಹಾಗೂ ಹಸಿ ಹುಲ್ಲನ್ನು ತಿನ್ನಿಸುವ ಮೂಲಕ ಗೌರವ ಸಲ್ಲಿಸಿದರು. ಹಿಂದೂ ಸಂಘಟನೆಯ ಪ್ರಮುಖರಾದ ಬಲ್ಲಾರಂಡ ಕಂಠಿಕಾರ್ಯಪ್ಪ ಮಾತನಾಡಿ, ಹಿಂದೂ ಧರ್ಮ ದಲ್ಲಿ ಗೋವಿಗೆ ಪೂಜ್ಯ ಸ್ಥಾನವಿದ್ದು, ಪ್ರತಿಯೊಂದು ಕಾರ್ಯ ದಲ್ಲೂ ಗೋವಿಗೆ ಪೂಜೆ ಸಲ್ಲಿಸಲಾಗುತ್ತದೆ.ತಾಯಿಯು ಮಗುವಿಗೆ ಒಂದೆದಡು ವರ್ಷ ಹಾಲುಣಿಸಿ ಪೋಷಿಸಿದರೆ ಗೋವು ಸಾವಿನವರೆಗೂ ಹಾಲುಣಿಸುವ ಪುಣ್ಯ ಕಾರ್ಯ ವನ್ನು ಮಾಡುವ‌ ಮೂಲಕ ಗೋಮಾತೆ ಎನಿಸಿಕೊಂಡಿದೆ. ಗೋವನ್ನು ಕಸಾಯಿಕಾನೆಗೆ ಮಾರಾಟಮಾಡುವುದು ತಡೆ ಯಾಗಬೇಕೆಂದರು. ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ,  ಈಗಿನ‌ ದಿನಗಳಲ್ಲಿ ಗೋವನ್ನು ಪೋಷಿಸುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಪ್ರತಿಯೊಂದು ಮನೆಯಲ್ಲೂ ಗೋವನ್ನು ಪೋಷಿಸುವಂತಾಗ ಬೇಕೆಂದು  ತಿಳಿಸಿದರು. ಕಾವೇರಿ ತೀರ್ಥವನ್ನು ವಿತರಿಸುವ ಮೂಲಕ…

Read More

ಕಡಂಗ ಅ.21 :   ಬದ್ರಿಯ ಸುನ್ನಿ ಮುಸ್ಲಿಂ ಜಮಾಅತ್ ಅಶ್ರಯದಲ್ಲಿ ತಾಜುಲ್ ಉಲಮರವರ ಹೆಸರಿನಲ್ಲಿ ನ.18 ರಂದು ಉರೂಸ್ ಮುಬಾರಕ್ ಕಾರ್ಯಕ್ರಮ ನಡೆಯಲಿದ್ದು, ಇದರ ಅಂಗವಾಗಿ  ಜುಮಾ ನಮಾಜ್ ನಂತರ ಬದ್ರಿಯ ಜಮಾಅತ್ ಅಧ್ಯಕ್ಷ  ಅಬ್ದುಲ್ ರಹ್ಮನ್ ಅರಫಾ ಅಧಿಕೃತವಾಗಿ ಪೋಸ್ಟರ್ ಬಿಡುಗಡೆ ಗೊಳಿಸಿದರು. ಈ ಸಂದರ್ಭ ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಸುಲೈಮಾನ್ ಸಿ.ಎಂ., ಎಸ್ ವೈ ಎಸ್ ಅಧ್ಯಕ್ಷ ಅಶ್ರಫ್ ಸಿ.ಎ., ಕೆಎಂಜೆ ಪ್ರಧಾನ ಕಾರ್ಯದರ್ಶಿ ಸಲಾಂ,ಎಸ್ ಎಸ್ ಎಫ್ ಕಾರ್ಯದರ್ಶಿ ರಾಝಿಕ್, ಬದ್ರಿಯಾ ಜಮಾಅತ್ ಪ್ರಧಾನ ಕಾರ್ಯದರ್ಶಿ ರಾಶೀದ್,ಕೋಶಾಧಿಕಾರಿ ಸಿ.ಎ. ರಜಾಕ್,ಬದ್ರಿಯಾ ಮಸೀದಿ ಖತೀಬ್ ಇಸ್ಮಾಯಿಲ್ ಲತೀಫಿ, ಜಮಾಅತ್ ಪದಾಧಿಕಾರಿಗಳು, ಎಸ್ ಎಸ್ ಎಫ್, ಎಸ್ ವೈ ಎಸ್, ಕೆಎಂಜೆ ಯ ಪದಾಧಿಕಾರಿಗಳು ಮತಿತ್ತರರು ಇದ್ದರು. ವರದಿ :  ನೌಫಲ್ ಕಡಂಗ 

Read More

ಮಡಿಕೇರಿ ಅ.21 : ಪೊನ್ನಂಪೇಟೆಯ ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಸಿ.ಐ.ಪಿ.ಯು.ಸಿ ಕಾಲೇಜು ಭಾರತ ಸರ್ಕಾರ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಲಯ ಜಿಲ್ಲಾ ಆಡಳಿತ .ಜಿಲ್ಲಾ ಪಂಚಾಯತ್ ಕೊಡಗು ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ, ವಿರಾಜಪೇಟೆ ತಾಲ್ಲೂಕು ಯುವ ಒಕ್ಕೂಟ ಇವರ ಅಶ್ರಯದಲ್ಲಿ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನ ನಡೆಯಿತು. ಪೊನ್ನಂಪೇಟೆ ತಾಲ್ಲೂಕು ಮಟ್ಟದ ಅಮೃತ ಕಳಸ ಯಾತ್ರೆಯಲ್ಲಿ ಸಿ.ಐ.ಟಿಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬೋದಕ ವೃಂದದವರು ಮನೆ ಮನೆಗೆ ತೆರಳಿ ಮಣ್ಣನ್ನು ಸಂಗ್ರಹಿಸಿದರು. ಜೊತೆಗೆ ಅತಿಥಿ ಗಣ್ಯರು, ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ವೃಂದದವರು ಅಮೃತ ಕಳಸಕ್ಕೆ ಮಣ್ಣನ್ನು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮವು ಕೊಡವ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಸಿ.ಪಿ.ರಾಕೇಶ್ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಅಮೃತ ಕಳಸದಲ್ಲಿ ಸಂಗ್ರಹಿಸಿದ ಮಣ್ಣನ್ನು ಜಿಲ್ಲಾ…

Read More

ಮಡಿಕೇರಿ ಅ.21 : ಅಖಿಲ ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರ ನಿಧನಕ್ಕೆ ಕೊಡಗು ಜಿಲ್ಲಾ ಏಲಕ್ಕಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸೂದನ ಎಸ್.ಈರಪ್ಪ ತೀವ್ರ ಸಂತಾಪ ಸೂಚಿಸಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಅತ್ಯಂತ ಆತ್ಮೀಯರಾಗಿದ್ದ ಸ್ನೇಹಜೀವಿ ಮೊಣ್ಣಪ್ಪ ಅವರ ನಿಧನ ಅತೀವ ದು:ಖವನ್ನು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕೊಡವ ಸಮಾಜ, ಸಹಕಾರಿ ಕ್ಷೇತ್ರದ ಸೇವೆ ಮಾತ್ರವಲ್ಲದೆ ಸಾಮಾಜಿಕ ಕಳಕಳಿಯ ವ್ಯಕ್ತಿತ್ವದೊಂದಿಗೆ ಗುರುತಿಸಿಕೊಂಡಿದ್ದ ಮೊಣ್ಣಪ್ಪ ಅವರು ಸಾಧು, ಸಜ್ಜನಿಕೆಯಿಂದ ಇತರರಿಗೆ ಮಾದರಿಯಾಗಿದ್ದರು ಎಂದು ಸೂದನ ಈರಪ್ಪ ಬಣ್ಣಿಸಿದ್ದಾರೆ.

Read More

ಮಡಿಕೇರಿ ಅ.24 : ವಿಜಯದಶಮಿಯ ಅ.24 ರ ರಾತ್ರಿ ಮಡಿಕೇರಿ ನಗರದಲ್ಲಿ ನಡೆಯುವ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಮಂಟಪಗಳ ತೀರ್ಪಗಾರಿಕೆ ಎಷ್ಟು ಗಂಟೆಗೆ ಎಲ್ಲೆಲ್ಲಿ ನಡೆಯುತ್ತದೆ ಎನ್ನುವ ಬಗ್ಗೆ ಸಮಿತಿ ಅಧ್ಯಕ್ಷ ಹೆಚ್.ಮಂಜುನಾಥ್ ಮಾಹಿತಿ ನೀಡಿದ್ದಾರೆ. ಪೇಟೆ ಶ್ರೀರಾಮ ಮಂದಿರ ರಾತ್ರಿ 10 ಗಂಟೆಗೆ ಗಾಂಧಿ ಮೈದಾನ, ದೇಚೂರು ಶ್ರೀರಾಮಮಂದಿರ ರಾತ್ರಿ 11 ಗಂಟೆಗೆ ಶ್ರೀ ಆಂಜನೇಯ ದೇಗುಲದ ಮುಂಭಾಗ, ಶ್ರೀ ಕೋಟೆ ಗಣಪತಿ ರಾತ್ರಿ 11.45 ಗಂಟೆಗೆ ನಗರ ಪೊಲೀಸ್ ಠಾಣೆ ಮುಂಭಾಗ, ಶ್ರೀ ಚೌಡೇಶ್ವರಿ ರಾತ್ರಿ 12.30 ಗಂಟೆಗೆ ಹೋಟೆಲ್ ಪಾಪ್ಯುಲರ್ ಮುಂಭಾಗ, ಶ್ರೀ ಕೊಟೆ ಮಾರಿಯಮ್ಮ ರಾತ್ರಿ 1.15 ಗಂಟೆಗೆ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಮುಂಭಾಗ, ಶ್ರೀ ಕೋದಂಡ ರಾಮ ರಾತ್ರಿ 1.45 ಗಂಟೆಗೆ ಮೆಟ್ರೋ ಫ್ರೆಷ್ ಮುಂಭಾಗ, ಶ್ರೀ ಕರವಲೆ ಭಗವತಿ ರಾತ್ರಿ 2.15 ಗಂಟೆಗೆ ಸಿಂಧೂರ್ ಬಟ್ಟೆ ಮಳಿಗೆ ಮುಂಭಾಗ, ಶ್ರೀ ದಂಡಿನ ಮಾರಿಯಮ್ಮ ರಾತ್ರಿ 3 ಗಂಟೆಗೆ ಕೊಡವ ಸಮಾಜದ ಮುಂಭಾಗ, ಶ್ರೀ ಕಂಚಿ…

Read More

ಮಡಿಕೇರಿ ಅ.21 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ವಿಶೇಷ ಮೆರುಗನ್ನು ನೀಡುವ ದಶಮಂಟಪಗಳ ಶೋಭಾಯಾತ್ರೆಯನ್ನು ಕಾನೂನು ನಿಯಮಗಳಿಗೆ ಬದ್ಧವಾಗಿ ಆಚರಿಸಲು ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ದಶಮಂಟಪ ಸಮಿತಿ ಅಧ್ಯಕ್ಷ ಹೆಚ್.ಮಂಜುನಾಥ್ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ನಿರ್ದೇಶನಗಳಿಗೆ ಅನುಗುಣವಾಗಿ ಶಬ್ಧ ಮಾಲಿನ್ಯಕ್ಕೆ ಅವಕಾಶವಿಲ್ಲದಂತೆ ದಸರಾ ಶೋಭಾಯಾತ್ರೆ ನಡೆಸಲು ದಶಮಂಟಪ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಮಂಟಪಗಳು ಅನುಸರಿಸಬೇಕಾದ 17 ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದರು. ಶೋಭಾಯಾತ್ರೆಯಲ್ಲಿ ಮಂಟಪಗಳ ಕಥಾ ಸಾರಾಂಶವನ್ನು ಜನರಿಗೆ ತಲುಪಿಸಲು ಧ್ವನಿವರ್ಧಕ ಅತ್ಯವಶ್ಯ. ಹೀಗಿದ್ದೂ ನ್ಯಾಯಾಲಯದ ಆದೇಶಗಳಿಗೆ ಬದ್ಧವಾಗಿ, ಪೊಲೀಸ್ ಇಲಾಖೆಯ ಸೂಚನೆಯಂತೆ ಅಬ್ಬರದ ಧ್ವನಿ ಬಳಕೆಗೆ ಕಡಿವಾಣ ಹಾಕಬೇಕು ಮತ್ತು ಇತಿ ಮಿತಿಯಲ್ಲಷ್ಟೆ ಧ್ವನಿವರ್ಧಕ ಬಳಸುವಂತೆ ಸ್ಪಷ್ಟ ಸೂಚನೆಯನ್ನು ದಶ ಮಂಟಪ ಸಮಿತಿಗಳಿಗೆ ನೀಡಲಾಗಿದೆ. ಶೋಭಾಯಾತ್ರೆಯ ಸಂದರ್ಭ ಪಾಶ್ಚಾತ್ಯ ಸಂಗೀತ, ಚಿತ್ರಗೀತೆಗಳಿಗೆ ಬದಲಾಗಿ ಭಕ್ತಿ ಸಂಗೀತಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವಂತೆಯೂ ಸೂಚಿಸಲಾಗಿದೆ ಎಂದು ತಿಳಿಸಿದರು. ಲೇಸರ್ ಲೈಟ್‍ಗೆ ಅವಕಾಶವಿಲ್ಲ- ಈ ಬಾರಿಯ…

Read More