ಲೇಖಕ: admin

ಮಡಿಕೇರಿ ಅ.18 : ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ 25 ಗ್ರಾಮ ಪಂಚಾಯತ್‍ಗಳಲ್ಲಿ ‘ಸಮಗ್ರ ನಾಗರಿಕ ಸೇವಾ ಕೇಂದ್ರ/ಗ್ರಾಮ ಒನ್ ಕೇಂದ್ರಗಳಿಗೆ ಆಸಕ್ತ ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪ್ರಾಂಚೈಸಿಗಳು https://www.gramaonebls.com/users/registration ಲಿಂಕ್‍ನ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಪ್ರಾಜೆಕ್ಟ್ ಮ್ಯಾನೇಜರ್ ಅಥವಾ ಕೋ-ಆರ್ಡಿನೇಟರ್, ಜಿಲ್ಲಾಧಿಕಾರಿಗಳ ಕಚೇರಿ, ಮಡಿಕೇರಿ, ಇವರನ್ನು ಸಂಪರ್ಕಿಸಬಹುದು.(9611657344/ 9900385301) ಎಂದು ಜಿಲ್ಲಾಧಿಕಾರಿ  ತಿಳಿಸಿದ್ದಾರೆ. 25 ಗ್ರಾಮ ಪಂಚಾಯಿತಿಗಳ ವಿವರ ಇಂತಿದೆ. ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ, ಬೆಟ್ಟದಳ್ಳಿ, ಗರ್ವಾಲೆ, ನೆರುಗಳಲೆ, ತೋಳೂರು ಶೆಟ್ಟಳ್ಳಿ, ಹರದೂರು, ಕುಶಾಲನಗರ ತಾಲ್ಲೂಕಿನ ಕೆದಕಲ್, 7ನೇ ಹೊಸಕೋಟೆ, ನಾಕೂರು ಶಿರಂಗಾಲ, ಗುಡ್ಡೆಹೊಸೂರು, ವಿರಾಜಪೇಟೆ ತಾಲ್ಲೂಕಿನ ಕಾಕೋಟು ಪರಂಬು, ಬೆಟೋಳಿ, ಅಮ್ಮತ್ತಿ, ಪೊನ್ನಂಪೇಟೆ ತಾಲ್ಲೂಕಿನ ನಿಟ್ಟೂರು, ಬಲ್ಯಮಂಡೂರು, ಕೆ.ಬಾಡಗ, ಕುಟ್ಟ, ನಾಲ್ಕೇರಿ, ಬಿ.ಶೆಟ್ಟಿಗೇರಿ, ಕಿರುಗೂರು, ಪೊನ್ನಂಪೇಟೆ. ಮಡಿಕೇರಿ ತಾಲ್ಲೂಕಿನ ಮರಗೋಡು, ಹೊಸ್ಕೇರಿ, ಗಾಳಿಬೀಡು ಮತ್ತು ಕಡಗದಾಳು.

Read More

ಮಡಿಕೇರಿ ಅ.18 :  ಪೊನ್ನಂಪೇಟೆ  ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಾಲಯದಲ್ಲಿ ಅ.15 ರಿಂದ 23ರ ವರೆಗೆ ನವರಾತ್ರಿಯ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ ಎಂದು  ದೇವಾಲಯದ ತಕ್ಕಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಚಮ್ಮಟೀರ ಸುಗುಣ ಮುತ್ತಣ್ಣ ತಿಳಿಸಿದ್ದಾರೆ. ಪ್ರತಿನಿತ್ಯ ಸಂಜೆ 7  ಗಂಟೆಯಿಂದ ದುರ್ಗಾ ಪೂಜೆ ನಡೆಯಲಿದ್ದು, ಅ.24 ರಂದು ಬೆಳಿಗ್ಗೆ ಯಿಂದ ವಿವಿಧ ಪೂಜೆಗಳು ಸೇರಿದಂತೆ ಚಾಮುಂಡೇಶ್ವರಿಗೆ ಮಹಾಮಂಗಳಾರತಿ ನಡೆಯಲಿದೆ ಎಂದು ತಿಳಿಸಿದರು. ಇತಿಹಾಸ ಪ್ರಸಿದ್ದದ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಬಹಳ ಹಿಂದಿನ ಕಾಲದಿಂದಲೇ ಇಲ್ಲಿ ದುರ್ಗಾ ಪೂಜೆ (ದುರ್ಗಾ ನಮಸ್ಕಾರ) ಯನ್ನು  ಹಿರಿಯರು ಆಚರಿಸಿಕೊಂಡು ಬರುತ್ತಿದ್ದಾರೆ. ಹಿಂದಿನ ಕಾಲಘಟ್ಟದಲ್ಲಿ ವಿಧ್ಯಾರ್ಥಿಗಳ ಪರೀಕ್ಷಾ ಸಮಯದಲ್ಲಿ ಈ ಹಬ್ಬ ನಡೆಯುತ್ತಿದ್ದು, ಇದೀಗ ನವರಾತ್ರಿ ಉತ್ಸವದ ಸಮಯ ಶ್ರೇಷ್ಠ ಎಂಬ ಕಾರಣಕ್ಕೆ ಹಲವು ವರ್ಷಗಳಿಂದ ನವರಾತ್ರಿಯ ಒಂಬತ್ತು ದಿನಗಳ ಕಾಲ ನವದುರ್ಗೆಯರ ಸ್ಮರಣೆ ಮಾಡುತ್ತಾ ವಿವಿಧ ಪೂಜೆಯನ್ನು ಮಾಡಲಾಗುತ್ತದೆ ಎಂದು ಚಮ್ಮಟೀರ ಸುಗುಣ ಮುತ್ತಣ್ಣ…

Read More

ಮಡಿಕೇರಿ ಅ.18 :  ಮಡಿಕೇರಿ ನಗರದ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ  ಶರನ್ನವರಾತ್ರಿಯ 3ನೇ ದಿನ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಅಲಂಕಾರ ಮಾಡಿ  ಪೂಜಿಸಲಾಯಿತು.

Read More

ಮಡಿಕೇರಿ ಅ.18  :  ಮಡಿಕೇರಿ ದಸರಾ ಸಾಂಸ್ಕೃತಿಕ ಕಾಯ೯ಕ್ರಮಗಳ  ನಾಲ್ಕನೇ ದಿನವಾದ  ಅ.19 ರಂದು ರಂದು ಜಾನಪದ ದಸರ ಪ್ರಯುಕ್ತ  ವೈವಿಧ್ಯಮಯ ಕಾಯ೯ಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸಂಜೆ 6.30 ಗಂಟೆಯಿಂದ  ಆಯೋಜಿಸಲ್ಪಟ್ಟಿದೆ. ಕುಶಾಲನಗದ ಶಾರದಾ ಕಲಾತಂಡದಿಂದ ಜಾನಪದ ವೈವಿಧ್ಯ, ಮಡಿಕೇರಿಯ ಡಾನ್ಸ್ ಲ್ಯಾಬ್ ತಂಡದಿಂದ ನೖತ್ಯ ವೈವಿಧ್ಯ,, ವಿರಾಜಪೇಟೆಯ ಪ್ರೇಮಾಂಜಲಿ ನಾಟ್ಯ ಮಯೂರಿ ಸಂಸ್ಥೆಯಿಂದ ನೖತ್ಯ ವೈವಿಧ್ಯ, ಮಡಿಕೇರಿಯ ನಾಟ್ಯ ಕಲಾ ಡಾನ್ಸ್ ಸ್ಟುಡಿಯೋದಿಂದ ನೖತ್ಯ,  ಮಡಿಕೇರಿಯ ಪೊಮ್ಮಕ್ಕಡ ಕೂಟದಿಂದ ನೖತ್ಯ, ಮಡಿಕೇರಿಯ ಸ್ಪಂದನ ಮಹಿಳಾ ಸಂಘದಿಂದ ನೖತ್ಯ, ಕೆ.ಪಿ.ಎಸ್.ಬೀಟ್ಸ್  ಕೊಡಗು ಜಿಲ್ಲಾ ಪತ್ರಕತ೯ರ ಸಂಘ(ರಿ) ತಂಡದಿಂದ  ಸಂಗೀತ ರಸಮಂಜರಿ   ಸೇರಿದಂತೆ ಅನೇಕ ಕಾಯ೯ಕ್ರಮಗಳು  ಆಯೋಜಿಸಲ್ಪಟ್ಟಿದೆ. ಬೆಳಗ್ಗೆ 9.30 ಗಂಟೆಯಿಂದ  ಕೊಡಗು ಜಿಲ್ಲಾ ಜಾನಪದ ಪರಿಷತ್ ವತಿಯಿಂದ  ಜಾನಪದ ಕಲಾಜಾಥಾ ನಡೆಯಲಿದ್ದು, ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೂ ವೈವಿಧ್ಯಮಯ ಜಾನಪದ ನೖತ್ಯ, ಗಾಯನ ಕಾಯ೯ಕ್ರಮಗಳು ಆಯೋಜಿಸಲ್ಪಟ್ಟಿದೆ ಎಂದು ಜಾನಪದ ದಸರಾ ಸಂಚಾಲಕ ಅನಿಲ್…

Read More

ಮಡಿಕೇರಿ ಅ.18 : ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ನಿಗದಿಗಿಂತ ಒಂದು ನಿಮಿಷ ಮುಂಚಿತವಾಗಿ ನಸುಕಿನ 1.26 ಗಂಟೆಗೆ ಕರ್ಕಾಟಕ ಲಗ್ನದಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ಪವಿತ್ರ ತೀರ್ಥೋದ್ಭವವಾಯಿತು. ಭಕ್ತರ ಜಯಘೋಷ, ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕುಂಡಿಕೆಯಲ್ಲಿ ತಾಯಿ ಕಾವೇರಿ ತೀರ್ಥರೂಪಿಣಿಯಾಗಿ ಕಾಣಿಸಿಕೊಂಡಳು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಮಠಾಧೀಶರು ಮತ್ತಿತರ ಗಣ್ಯರು ತೀರ್ಥೋದ್ಭವದ ಪವಿತ್ರ ಕ್ಷಣಕ್ಕೆ ಸಾಕ್ಷಿಯಾದರು. ನಸುಕಿನ ವೇಳೆ ತೀರ್ಥೋದ್ಭವವಾದರು ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಭಾಗಮಂಡಲ ಕ್ಷೇತ್ರಕ್ಕೆ ಆಗಮಿಸಿ ಶ್ರೀಭಗಂಡೇಶ್ವರನಿಗೆ ಪೂಜೆ ಸಲ್ಲಿಸಿದರು. ನಂತರ ಕಾಲ್ನಡಿಗೆಯ ಮೂಲಕ ಕಾವೇರಿ ಮಾತೆಯ  ಸ್ಮರಣೆಯೊಂದಿಗೆ ತಲಕಾವೇರಿಗೆ ತೆರಳಿದರು. ನೆರೆದಿದ್ದ ಭಕ್ತರಿಗೆ ಕೊಡಗು ಏಕೀಕರಣ ರಂಗದ ವತಿಯಿಂದ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

Read More

ಮಡಿಕೇರಿ ಅ.17 : ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ನಡೆದ 58ನೇ ಘಟಿಕೋತ್ಸವದಲ್ಲಿ ಮಡಿಕೇರಿಯ ಸುಜನ್.ಪಿ “ಫಿಲ್ಮ್ ಮೇಕಿಂಗ್” ವಿಭಾಗದಲ್ಲಿ ಪಿಜಿ (ಪೋಸ್ಟ್ ಗ್ರಾಜುವೇಶನ್) ಚಿನ್ನದ ಪದಕ ಪಡೆದಿದ್ದಾರೆ. ಇವರು ನಗರದ ರಾಜೇಶ್ವರಿ ಶಾಲೆಯಲ್ಲಿ ಪ್ರಾಥಮಿಕ, ಸಂತ ಮೈಕಲರ ಶಾಲೆಯಲ್ಲಿ ಪ್ರೌಢ, ಮೂರ್ನಾಡು ಎಜುಕೇಷನ್ ಟ್ರಸ್ಟ್ ನಲ್ಲಿ ಪಿಯುಸಿ ಶಿಕ್ಷಣ ಮತ್ತು ಮೈಸೂರಿನ ಸೈಂಟ್ ಫಿಲೋಮಿನಾ ಕಾಲೇಜ್ ನಲ್ಲಿ ಪದವಿ ಪಡೆದಿದ್ದಾರೆ. ಸುಜನ್.ಪಿ ನಗರದ ಕುಂಬಳಗೇರಿ ಉಕ್ಕಡದ ನಿವಾಸಿ, ಎಲ್‌ಐಸಿ ಪ್ರತಿನಿಧಿ ಹೆಚ್.ಎಸ್.ಪ್ರೇಮ್ ಕುಮಾರ್ ಹಾಗೂ ದಿ.ಶೀಲಮ್ಮ ಅವರ ಪುತ್ರ.

Read More

ಚೆಟ್ಟಳ್ಳಿ  ಅ.17 :   : ಚೆಟ್ಟಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ  ಸಂಘದ ವತಿಯಿಂದ 16ನೇ ವರ್ಷ  ಕಾವೇರಿ ತೀರ್ಥ ವಿತರಣಾ ಕಾರ್ಯಕ್ರಮ  ಅ.18 ರಂದು ನಡೆಯಲಿದೆ ಎಂದು  ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ  ತಿಳಿಸಿದ್ದಾರೆ. ಪೂರ್ವಹ್ನ  10.30 ಗಂಟೆಗೆ ಸಹಕಾರ ಸಂಘದ ಮುಂದಿರುವ ಕಾವೇರಿ ಮಾತೆಗೆ ವಿಶೇಷ ಅಲಂಕಾರ ದೊಂದಿಗೆ ಪೂಜೆ ಸಲ್ಲಿಸಿ, ನಂತರ  ತೀರ್ಥ ವಿತರಣಾ ಕಾರ್ಯಕ್ರಮ  ನಡೆಯಲಿದೆ. ಕಳೆದ 15 ವರ್ಷಗಳ ಹಿಂದೆ ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ಕಾವೇರಿ ಮಾತೆಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿ ಅಂದಿನಿಂದ ಪ್ರತೀ ವರ್ಷ ಕಾವೇರಿ ತೀರ್ಥ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

Read More

ಮಡಿಕೇರಿ ಅ.17 : ಟೀಕ್ ವುಡ್ ಎಸ್ಟೇಟ್‍ನ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದಸರಾ ಹಬ್ಬದ ಪ್ರಯುಕ್ತ ಅ.15 ರಿಂದ ಅ.23ರ ವರೆಗೆ ನವರಾತ್ರಿ ಉತ್ಸವ ನಡೆಯಲಿದೆ. ದೇವಾಲಯದಲ್ಲಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿದ್ದು, ಅ.20 ರಂದು ಚಂಡಿಕಾಹೋಮ ನೆರವೇರಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಆಡಳಿತ ಮಂಡಳಿ ಕೋರಿದೆ.

Read More

ಮಡಿಕೇರಿ ಜ.17 : ನಾಡಹಬ್ಬ ದಸರಾ ಆಚರಣೆ ಸಂದರ್ಭ ಡಿಜೆ ಯನ್ನು ನಾಡಿನ ಜನ ಬಯಸಿದ್ದಾರೆ, ಇದಕ್ಕೆ ತಡೆಯೊಡ್ಡುವ ಕೆಲಸವನ್ನು ಜಿಲ್ಲಾಡಳಿತ ಮಾಡಬಾರದು ಎಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜೆ ಕುರಿತು ನ್ಯಾಯಾಲಯದ ಆದೇಶ ಇರುವುದು ನಿಜ, ಆದರೆ ವಿಶೇಷ ಸಂದರ್ಭಗಳಲ್ಲಿ 2-3 ದಿನ ಡಿಜೆ ಬಳಸಲು ರಿಯಾಯಿತಿ ಇದೆ ಎಂದರು. ವರ್ಷಕ್ಕೆ ಒಂದು ಬಾರಿ ಬರುವ ದಸರಾ ಸಂದರ್ಭ ಎರಡು ದಿನಗಳಷ್ಟೇ ಡಿಜೆ ಬೇಕು ಎಂದು ಕೇಳುತ್ತಿದ್ದಾರೆ. ಇದಕ್ಕೆ ತಡೆಯೊಡ್ಡುವುದು ಸರಿಯಲ್ಲ. ಯಾರೋ, ಎಲ್ಲಿಂದಲೋ ಬಂದು ನ್ಯಾಯಾಲಯದ ಹೆಸರು ಹೇಳಿ ಇಲ್ಲಿ ಸುದ್ದಿಗೋಷ್ಠಿ ಮಾಡಿದಾಕ್ಷಣ ಅಧಿಕಾರಿಗಳು ಡಿಜೆಯನ್ನು ನಿಲ್ಲಿಸುವ ಅಗತ್ಯವಿಲ್ಲ. ಇಷ್ಟು ವರ್ಷ ಆಗದೇ ಇರುವ ಅನಾಹುತ ಈಗ ಆಗಿ ಬಿಡುತ್ತದೆಯೇ ಎಂದು ಪ್ರಶ್ನಿಸಿದ ಬೋಪಯ್ಯ ಅವರು, ಯಾವುದೇ ಕಾರಣಕ್ಕು ಜಿಲ್ಲಾಡಳಿತ ಡಿಜೆಗೆ ತಡೆಯೊಡ್ಡಬಾರದು ಎಂದರು.

Read More

ಮಡಿಕೇರಿ ಅ.17 : ಕೊಡಗು ಜಿಲ್ಲೆಯ ಕೃಷಿ ಇಲಾಖೆಯ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಯೋಜನೆಯಡಿ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ 2 ಹುದ್ದೆಗಳಿಗೆ ಒಪ್ಪಂದದ ಆಧಾರದ ಮೇಲೆ 2023-24ನೇ ಸಾಲಿನ ಸೀಮಿತ ಅವಧಿಗೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಸೋಮವಾರಪೇಟೆ ತಾಲ್ಲೂಕು ಹಾಗೂ ವಿರಾಜಪೇಟೆ ತಾಲ್ಲೂಕುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಷರತ್ತಿಗೆ ಒಳಪಟ್ಟು ಅರ್ಜಿ ಆಹ್ವಾನಿಸಲಾಗಿದೆ. ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ವಿದ್ಯಾರ್ಹತೆ ಎಂ.ಎಸ್ಸಿ (ಕೃಷಿ/ ತೋಟಗಾರಿಕೆ/ ಮೀನುಗಾರಿಕೆ/ ಅರಣ್ಯ/ ರೇಷ್ಮೆ). ಕನಿಷ್ಠ 2 ವರ್ಷ ಕೃಷಿ ವಿಸ್ತರಣಾ ಮತ್ತು ಸಂಬಂಧಿತ ಚಟುವಟಿಕೆಯಲ್ಲಿ ಅನುಭವ ಹಾಗೂ ಎಂ.ಎಸ್.ಆಫೀಸ್‍ನಲ್ಲಿ ಪರಿಣಿತಿ ಹೊಂದಿರಬೇಕು. ಗರಿಷ್ಟ ವಯೋಮಿತಿ 45 ವರ್ಷ ಮಾಸಿಕ ರೂ.30 ಸಾವಿರ ಆಗಿದೆ. ಈ ಹುದ್ದೆಗಳಿಗೆ ಅರ್ಹರಿರುವ ಅಭ್ಯರ್ಥಿಗಳು ನ.7 ರೊಳಗೆ ಕಚೇರಿ ವೇಳೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿ(ಆತ್ಮ ವಿಭಾಗ) ಕೊಡಗು…

Read More