ಲೇಖಕ: admin

ಮಡಿಕೇರಿ ಅ.14 : ಮರಳನ್ನೇ ಮೂಲವಾಗಿರಿಸಿಕೊಂಡು ಅದ್ಭುತ ದೃಶ್ಯ ಕಾವ್ಯ ಸೃಷ್ಟಿಸುವ ಕರ್ನಾಟಕದ ಹೆಸರಾಂತ ಮರಳು ಕಲಾವಿದೆ ಎಂ.ಎನ್.ಗೌರಿ ಈ ಬಾರಿ ಮಡಿಕೇರಿ ದಸರಾದ ವಿಶೇಷ ಆಕರ್ಷಣೆಯಾಗಿ ಮರಳಿನಲ್ಲಿ ವನದೈವದ ಕಲಾಕೃತಿ ರೂಪಿಸಲಿದ್ದಾರೆ. ಮಡಿಕೇರಿ ದಸರಾ ಫೋಟೋ ಗ್ಯಾಲರಿ ಕೂಡ ದಸರಾ ಆಕರ್ಷಣೆಗಳಲ್ಲೊಂದಾಗಲಿದೆ. ಮೈಸೂರಿನ ಚಾಮುಂಡಿ ಬೆಟ್ಟ ತಪ್ಪಲಿನಲ್ಲಿ ಕಳೆದ 5 ವರ್ಷಗಳಿಂದ ತನ್ನದೇ ಆದ ಮರಳು ಕಲಾ ಪ್ರದರ್ಶನ ಗ್ಯಾಲರಿ ಮೂಲಕ ಕರ್ನಾಟಕದ ಏಕೈಕ ಮರಳು ಕಲಾಗ್ಯಾಲರಿ ಹೊಂದಿರುವ ಎಂ.ಎನ್.ಗೌರಿ, ಈ ಸಂಗ್ರಹಾಲಯದಲ್ಲಿ ನೂರಾರು ಮರಳು ಕಲಾಕೃತಿಗಳನ್ನು ದಿನನಿತ್ಯ ಸಾವಿರಾರು ವೀಕ್ಷಕರ ನೋಟಕ್ಕೆ ಅವಕಾಶ ಕಲ್ಪಿಸಿದ್ದಾರೆ. 2013 ರಲ್ಲಿ ಒರಿಸ್ಸಾದಲ್ಲಿ ಆಯೋಜಿತವಾಗಿದ್ದ ಅಂತರರಾಷ್ಟ್ರೀಯ ಮರಳು ಕಲಾಕೃತಿ ಸ್ಪರ್ಧೆಯಲ್ಲಿ ವಿಶ್ವದ ಹಲವೆಡೆಗಳಿಂದ ಪಾಲ್ಗೊಂಡಿದ್ದ 27 ಕಲಾವಿದರಲ್ಲಿ ಭಾರತದ ಗೌರಿ ಏಕೈಕ ಮಹಿಳಾ ಕಲಾವಿದೆಯಾಗಿದ್ದರು. ಫೈನ್ ಆರ್ಟ್ಸನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಗೌರಿ, ಮರಳು ಕಲೆಯತ್ತ ಒಲವು ತೋರಿದ್ದು ಈವರೆಗೂ ರಾಜ್ಯವ್ಯಾಪಿ ನೂರಾರು ಕಲಾಕೖತಿಗಳನ್ನು ಮರಳಿನಲ್ಲಿಯೇ ರೂಪಿಸಿದ್ದಾರೆ. ಸೌದಿ ಅರೇಬಿಯಾದಲ್ಲಿ ಈ ವರ್ಷ…

Read More

ಮಡಿಕೇರಿ ಅ.14 : ಕರಡಿಗೋಡು ಗ್ರಾಮದ ಕಾಫಿ ತೋಟಗಳಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಹೆಜ್ಜೆ ಗುರುತು ಪತ್ತೆಯಾಗಿ ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿತ್ತು. ಇದೀಗ ಮತ್ತೆ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹುಲಿಯ ಚಲನವಲನ ಪತ್ತೆ ಹಚ್ಚಲು ಕ್ಯಾಮೆರಾ ಅಳವಡಿಸಲಾಗಿದೆ. ಹುಲಿಯನ್ನು ಸೆರೆ ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ರೈತ ಸಂಘ ಎಚ್ಚರಿಕೆ ನೀಡಿದೆ.

Read More

ಮಡಿಕೇರಿ ಅ.14 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವ ಕರಗೋತ್ಸವದ ಮೂಲಕ ಅ.15 ರಿಂದ ಆರಂಭಗೊಳ್ಳಿದೆ. ಹತ್ತು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಂತಿಮ ದಿನ ದಶಮಂಟಪಗಳ ಶೋಭಾಯಾತ್ರೆ ನಡೆಯಲಿದ್ದು, ಸಾವಿರಾರು ಜನ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅ.17 ರಂದು ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ ಕೂಡ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ರಾಜ್ಯ ಕ್ಷಿಪ್ರ ಕಾರ್ಯಪಡೆ ತಂಡ ಮಡಿಕೇರಿ ನಗರದಲ್ಲಿ ಪಥ ಸಂಚಲನ ನಡೆಸಿತು. ತ್ಯಾಗರಾಜ ಕಾಲೋನಿಯಿಂದ ಆರಂಭವಾದ ಪಥ ಸಂಚಲನಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅವರು ಚಾಲನೆ ನೀಡಿದರು. ಇಂದಿರಾ ಗಾಂಧಿ ವೃತ್ತ, ಪೇಟೆ ಶ್ರೀ ರಾಮ ಮಂದಿರ, ಎಸ್‌ಬಿಐ, ಕೊಹಿನೂರ್ ರಸ್ತೆ, ಹಳೇ ಖಾಸಗಿ ಬಸ್, ಮೇಜರ್ ಮಂಗೇರಿರ ಮುತ್ತಣ್ಣ ವೃತ್ತ ಸೇರಿದಂತೆ ನಗರದ ಮುಖ್ಯ ಬೀದಿಗಳಲ್ಲಿ ಶಸ್ತç ಸಜ್ಜಿತ ರ‍್ಯಾಪಿಡ್ ಆ್ಯಪಿಡ್ ಆ್ಯಕ್ಷನ್ ಫೋರ್ಸ್ ಸಿಬ್ಬಂದಿಗಳು ಪಥ ಸಂಚನ ನಡೆಸಿ, ಹಬ್ಬಾಚರಣೆ ಸಂದರ್ಭ ಯಾವುದೇ ರೀತಿಯ…

Read More

ಮಡಿಕೇರಿ ಅ.14 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ನಗರದ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವ ಅ.15 ರಿಂದ ಮತ್ತು ಸಾಂಸ್ಕೃತಿಕ ಕಲಾವೈಭವ ಅ.16 ರಿಂದ ಆರಂಭಗೊಳ್ಳುತ್ತಿದ್ದು, ನಗರಸಭೆ ಭರದ ಸಿದ್ಧತೆ ನಡೆಸಿದೆ. ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರ ನೇತೃತ್ವದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ನಗರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡರು. ಶಕ್ತಿ ದೇವತೆಗಳ ಕರಗಗಳು ನಗರ ಸಂಚಾರ ಆರಂಭಿಸುವ ಪಂಪಿನ ಕೆರೆ ಭಾಗದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಯಿತು. ಕುರುಚಲು ಗಿಡಗಳನ್ನು ಕಡಿದು, ಕಸವನ್ನು ತೆರವುಗೊಳಿಸಿ ಸುಣ್ಣಬಣ್ಣ ಬಳಿಯಲಾಯಿತು.  ಬೀದಿದೀಪಗಳನ್ನು ದುರಸ್ತಿ ಪಡಿಸಲಾಯಿತು, ಚರಂಡಿಗಳ ತ್ಯಾಜ್ಯಗಳನ್ನು ತೆಗೆಯಲಾಯಿತು. ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕಾರ್ಯ ಭರದಿಂದ ಸಾಗಿತು. ಹತ್ತು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಗಾಂಧಿ ಮೈದಾನದಲ್ಲಿ ಪ್ರೇಕ್ಷಕರಿಗೆ ಅನುಕೂಲವಾಗುವಂತೆ ಕೆಸರುಮಯವಾಗಿದ್ದ ಮೈದಾನವನ್ನು ಸಮತಟ್ಟುಗೊಳಿಸಲಾಯಿತು. ಇಲ್ಲಿರುವ ಶೌಚಾಲಯಗಳನ್ನು ಸ್ವಚ್ಛಗೊಳಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಯಿತು. ಈ ಭಾಗದಲ್ಲೂ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಯಿತು. ಅಂತಿಮ ಹಂತದ…

Read More

ಮಡಿಕೇರಿ ಅ.13 : ನಿಷೇಧಿತ ಮಾದಕ ವಸ್ತು ‘ಎಂಡಿಎಂಎ’ ಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಮಡಿಕೇರಿಯ ಸೆನ್ ಪೊಲೀಸರು ಮಾಲು ಸಹಿತ ಬಂಧಿಸಿದ್ದಾರೆ. ಪಿರಿಯಾಪಟ್ಟಣ ನಿವಾಸಿ ಮಹಮ್ಮದ್ ಆಲಿಶಾ(29) ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಆತನ ಬಳಿಯಿದ್ದ ಎಂಡಿಎಂಎ ಯನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಮಡಿಕೇರಿಯ ಸಂಪಿಗೆಕಟ್ಟೆ ಬಳಿ ವ್ಯಕ್ತಿಯೋರ್ವ ನಿಷೇಧಿತ ಮಾದಕ ವಸ್ತು ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಮಾಲು ಸಹಿತ ವಶಕ್ಕೆ ಪಡೆದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ಸೆನ್ ಪೊಲೀಸ್ ಠಾಣಾ ವೃತ್ತನಿರೀಕ್ಷಕ ಸಿ.ಕೆ.ರಾಘವೇಂದ್ರ ನೇತೃತ್ವದಲ್ಲಿ ಸೆನ್ ಠಾಣೆಯ ಕ್ರೈಂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.

Read More

ಮಡಿಕೇರಿ ಅ.13 : ಕಂಟೈನರ್ ವಾಹನದಡಿಗೆ ಸಿಲುಕಿ ಬೈಕ್ ಸವಾರನೋರ್ವ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ರೆಸಾರ್ಟ್ ವೊಂದರ ಬಳಿ ನಡೆದಿದೆ. ಮೂಲತಃ ಕೆ.ಆರ್. ನಗರದ ಬೇರ್ಯ ಗ್ರಾಮದ ನಿವಾಸಿ ಬೈರವ(28) ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ. ಮಡಿಕೇರಿಯಿಂದ ಸುಮಾರು 5 ಕಿ.ಮೀ ದೂರದಲ್ಲಿ ಕಾರೊಂದರ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭ ಎದುರಿನಿಂದ ಬರುತ್ತಿದ್ದ ಕಂಟೈನರ್ ವಾಹನದ ಚಕ್ರ ಬೈಕ್ ಸವಾರನ ತಲೆ ಮೇಲೆ ಹರಿದು ಈ ಸಾವು ಸಂಭವಿಸಿದೆ. ಬೈರವ ತಮ್ಮ ಬೈಕ್ ನಲ್ಲಿ ಮಡಿಕೇರಿಯಿಂದ ಕೆ.ಆರ್ ನಗರದ ಕಡೆಗೆ ತೆರಳುತ್ತಿದ್ದಾಗ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಪಘಾತದಿಂದ ಸುಮಾರು 1 ಗಂಟೆ ಕಾಲ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

Read More

ಮಡಿಕೇರಿ ಅ.13 : ನಗರದ ಇತಿಹಾಸ ಪ್ರಸಿದ್ದ 4 ಶಕ್ತಿ ದೇವತೆಗಳ ಕರಗ ಉತ್ಸವವು ಅ.15 ರಂದು ಸಂಜೆ 5 ಗಂಟೆಗೆ ಮಹದೇವಪೇಟೆಯ ಪಂಪಿನಕೆರೆ ಬಳಿ ನಗರ ದಸರಾ ಸಮಿತಿ ವತಿಯಿಂದ ಸಾಂಪ್ರದಾಯಿಕ ಪೂಜೆಯನ್ನು ಸಲ್ಲಿಸಿ ನಗರ ಪ್ರದಕ್ಷಿಣೆಗೆ ಕರಗಗಳನ್ನು ಬರಮಾಡಿಕೊಳ್ಳುವ ಮೂಲಕ ‘ಮಡಿಕೇರಿ ದಸರಾಗೆ ಚಾಲನೆ’ ದೊರೆಯಲಿದೆ ಎಂದು ನಗರ ದಸರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಮಡಿಕೇರಿ ಅ.13 : ನಗರದ ಗಾಂಧಿ ಮಂಟಪದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ‘ಸ್ಮಾರಕ ಉದ್ಯಾನವನ’ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ಸಂಬಂಧ ಶಾಸಕರಾದ ಡಾ.ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸುದೀರ್ಘ ಚರ್ಚೆ ನಡೆಯಿತು. ನಗರದ ಸುದರ್ಶನ ಅತಿಥಿ ಗೃಹದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ನಿಕಟ ಪೂರ್ವ ಅಧ್ಯಕ್ಷರಾದ ಟಿ.ಪಿ.ರಮೇಶ್, ಸದಸ್ಯರಾದ ಮುನೀರ್ ಅಹ್ಮದ್, ಲಿಯಾಕತ್ ಅಲಿ, ಅಂಬೆಕಲ್ಲು ನವೀನ್ ಇತರರ ಉಪಸ್ಥಿತಿಯಲ್ಲಿ ಚರ್ಚೆ ನಡೆಯಿತು. ಈಗಾಗಲೇ ಸರ್ಕಾರದಿಂದ ಗಾಂಧಿ ಸ್ಮಾರಕ ಉದ್ಯಾನವನ ನಿರ್ಮಾಣಕ್ಕೆ 50 ಲಕ್ಷ ರೂ. ಬಿಡುಗಡೆಯಾಗಿದ್ದು, ಮಹಾತ್ಮ ಗಾಂಧೀಜಿಯವರ ಚಿತಾ ಭಸ್ಮವಿಟ್ಟು ಶಾಶ್ವತವಾದ ಸ್ಮಾರಕ ಉದ್ಯಾನವನ ನಿರ್ಮಾಣ ಮಾಡುವಂತಾಗಬೇಕು. ಆ ನಿಟ್ಟಿನಲ್ಲಿ ಅಕ್ಟೋಬರ್, 17 ರಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಿಂದ ಭೂಮಿ ಪೂಜೆ ನೆರವೇರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಮಹಾತ್ಮ ಗಾಂಧೀಜಿಯವರ ಸ್ಮಾರಕ ಉದ್ಯಾನವನ ನಿರ್ಮಿಸುವಲ್ಲಿ ಈಗಾಗಲೇ ಯೋಜನೆ ಸಿದ್ಧವಾಗಿದ್ದು, ಹೊಸ ತಂತ್ರಜ್ಞಾನದಂತೆ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಬೇಕು. ಜೊತೆಗೆ…

Read More

ಮಡಿಕೇರಿ ಅ.13 : ತಾಳತ್ತಮನೆಯ ಶ್ರೀ ದುರ್ಗಾಭಗವತಿ ದೇವಾಲಯದಲ್ಲಿ ಅ.15 ರಿಂದ ಅ.24ರ ವರೆಗೆ ನವರಾತ್ರಿ ಉತ್ಸವ ನಡೆಯಲಿದೆ. ಶರನ್ನವರಾತ್ರಿಯ ಅಂಗವಾಗಿ ಹತ್ತು ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 9.30 ಗಂಟೆಗೆ ವಿಶೇಷ ಅಲಂಕಾರ ಪೂಜೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.

Read More

ಮಡಿಕೇರಿ ಅ.13 : ಕೊಡಗು ಕಸದ ಕೊಂಪೆಯಾಗಿ ಮಾರ್ಪಡುತ್ತಿದ್ದು, ಶಾಸಕದ್ವಯರು ಜಿಲ್ಲೆಯ ವಿವಿಧೆಡೆ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಮುಂದಾಳತ್ವ ವಹಿಸಬೇಕೆಂದು ಅಲ್ಲರಂಡ ರಂಗಚಾವಡಿಯ ಅಧ್ಯಕ್ಷ ಅಲ್ಲರಂಡ ವಿಠಲ್ ನಂಜಪ್ಪ ಮನವಿ ಮಾಡಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಚ್ಛ ಭಾರತವು ಭಾರತೀಯ ಸಂಸ್ಕೃತಿ ಮತ್ತು ಸ್ವಾತಂತ್ರ್ಯ ಹೋರಾಟದ ಒಂದು ಭಾಗ. ಗಾಂಧಿಜಿಯವರು ಸ್ವಾತಂತ್ರ್ಯ ಹೋರಾಟದಷ್ಟೆ ಮಹತ್ವವನ್ನು ಶುಚಿತ್ವದೆಡೆಗೆ ನೀಡಿದ್ದರು. ಅಲ್ಲದೇ ಇಂದು ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಪರಿಕಲ್ಪನೆಯೊಂದಿಗೆ ಸ್ವತಃ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಅದನ್ನು ಕಾರ್ಯಗತಗೊಳಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ. ಆದರೆ ಸ್ವಚ್ಛತೆಯ ವಿಚಾರದಲ್ಲಿ ಹಿಂದುಳಿದಿದ್ದು, ವಿಶ್ವ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೊಡಗಿನ ಎಲ್ಲಾ ನಗರಗಳು ಕಸದ ಕೊಂಪೆಗಳಾಗಿ ಮಾರ್ಪಡುತ್ತಿದ್ದು, ಸಾಂಕ್ರಾಮಿಕ ರೋಗ ಹರುಡುವ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಜಿಲ್ಲೆಯ ಎಲ್ಲಾ ಭಾಗಗಳಲ್ಲೂ…

Read More