ಮಡಿಕೇರಿ ಅ.15 – ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಸಾಂಸ್ಕೃತಿಕ ಕಾಯ೯ಕ್ರಮಗಳು ಅ.16 ರಿಂದ ಪ್ರಾರಂಭವಾಗಲಿದೆ. ಆರಂಭಿಕ ದಿನವೇ ಸಂಗೀತ, ನೖತ್ಯ, ವಾದ್ಯಗಳ ಸಂಗಮದ ವೈವಿಧ್ಯತೆಗಳು ಮೂಡಿಬರಲಿದೆ. ಸಂಜೆ 7 ಗಂಟೆಯಿಂದ ನಗರದ ಗಾಂಧಿ ಮೈದಾನದಲ್ಲಿನ ಕಲಾಸಂಭ್ರಮ ವೇದಿಕೆಯಲ್ಲಿ ಪ್ರಥಮ ದಿನದ ಆಕಷ೯ಣೆಯಾಗಿ ಅಂತರರಾಷ್ಟ್ರೀಯ ಖ್ಯಾತಿಯ ಬೆಂಗಳೂರಿನ ಕಲಾವಿದ ಡ್ರಮ್ ದೇವಾ ಅವರ ತಂಡದಿಂದ ವಾದ್ಯ ಮತ್ತು ಸಂಗೀತ ಕಾಯ೯ಕ್ರಮ ಇರುತ್ತದೆ. ವಿವಿಧ ಭಾಷೆಗಳ 600 ಕ್ಕೂ ಅಧಿಕ ಸಿನಿಮಾಗಳಲ್ಲಿ ವಾದ್ಯಸಂಗೀತಕಾರನಾಗಿ ಕಾಯ೯ನಿವ೯ಹಿಸಿರುವ ಡ್ರಮ್ ದೇವ ವಿದೇಶಗಳಲ್ಲಿಯೂ ಕಾಯ೯ಕ್ರಮ ನೀಡಿದ್ದಾರೆ. ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳ ಮೊದಲ ದಿನ ದೇವಾ ಅವರೊಂದಿಗೆ ಎದೆ ತುಂಬಿ ಹಾಡಿದೆನು ಖ್ಯಾತಿಯ ಗಾಯಕ ಪುರುಷೋತ್ತಮ, ಸರಿಗಮಪ ಖ್ಯಾತಿಯ ಹಂಸಿನಿ, ದಿವ್ಯಾಯಾದವ್, ಮನುಯಾದವ್ ಸೇರಿದಂತೆ ಅನೇಕ ಗಾಯಕರು, ಖ್ಯಾತ ವಾದ್ಯ ಸಂಗೀತಕಾರರಿಂದ ಕಾಯ೯ಕ್ರಮ ಆಯೋಜಿತವಾಗಿದೆ. ವೀರಾಜಪೇಟೆಯ ನಾಟ್ಯಾಂಜಲಿ ನೖತ್ಯ ಸಂಸ್ಥೆಯಿಂದ ನೖತ್ಯ ವೈವಿಧ್ಯ, ಮಡಿಕೇರಿಯ ಕಲಾಕಾವ್ಯ ನಾಟ್ಯಶಾಲಾ ವಿದ್ಯಾಥಿ೯ಗಳಿಂದ ನೖತ್ಯವೈವಿಧ್ಯ , ಮದೆನಾಡಿನ ಶ್ರೀ…
ಲೇಖಕ: admin
ಮಡಿಕೇರಿಯಲ್ಲಿ ಅ.22 ರಂದು ಮಹಿಳಾ ದಸರಕ್ಕಾಗಿ ವೈವಿಧ್ಯಮಯ ಸ್ಪಧೆ೯ಗಳು. ಅ.22 ರಂದು ಮಹಿಳಾ ದಸರಾ – ಸ್ಥಧಿ೯ಗಳು ಸ್ಥಳದಲ್ಲಿಯೇ ಹೆಸರು ನೋಂದಾಯಿಸಬಹುದು. ಮಡಿಕೇರಿ ಅ.15- ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ವತಿಯಿಂದ ನಗರಸಭಾ ಸದಸ್ಯೆಯರು, ಮಹಿಳೆಯರ ಬಳಗ, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೖದ್ದಿ ಇಲಾಖೆ ಸಹಯೋಗದಲ್ಲಿ ಅಕ್ಟೋಬರ್ 22 ರಂದು ಭಾನುವಾರ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿರುವ ಮಹಿಳಾ ದಸರಾದ ವಿವಿಧ ಸ್ಪಧೆ೯ಗಳಿಗೆ ಸ್ಲಳದಲ್ಲಿಯೇ ಹೆಸರು ನೋಂದಾಯಿಸಬಹುದಾಗಿದೆ. ದಸರಾ ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮತ್ತು ಮಹಿಳಾ ದಸರಾ ಸಮಿತಿ ಸಂಚಾಲಕಿ ಕುಡೆಕಲ್ ಸವಿತಾ ಸಂತೋಷ್ ಜಂಟಿ ಪ್ರಕಣೆಯಲ್ಲಿ ತಿಳಿಸಿದ್ದಾರೆ. ಅ.22 ರಂದು ಬೆಳಗ್ಗೆ 10 ಗಂಟೆಯಿಂದಲೇ ನಗರದ ಗಾಂಧಿ ಮೈದಾನದಲ್ಲಿ 8ನೇ ವಷ೯ದ ಮಹಿಳಾ ದಸರಾವನ್ನು ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ವಿವಿಧ ಸ್ಪಧೆ೯ಗಳನ್ನು ಜಿಲ್ಲೆಯ ಮಹಿಳೆಯರಿಗಾಗಿ ಆಯೋಜಿಸಲಾಗಿದೆ. ಮಹಿಳಾ ದಸರಾ ಅಂಗವಾಗಿನ ಸ್ಪಧೆ೯ಗಳ ವಿವರ ಇಂತಿದೆ. ಎಥ್ ನಿಕ್ ಫ್ಯಾಷನ್ ಶೋ 20 ರಿಂದ…
ಮಡಿಕೇರಿ ಅ.15 : ಮಡಿಕೇರಿ ದಸರಾದ ದಶ ಮಂಟಪಗಳಿಗೆ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅವರು ವೈಯುಕ್ತಿಕ ಆರ್ಥಿಕ ನೆರವು ನೀಡಿದ್ದಾರೆ. ದಶಮಂಟಪ ಹಾಗೂ ನಾಲ್ಕು ಕರಗ ಮಂಟಪಗಳಿಗೆ ಕಳೆದ ವರ್ಷದಿಂದ ವೈಯುಕ್ತಿಕ ನೆರವು ನೀಡುತ್ತಾ ಬಂದಿರುವ ಮಡಿಕೇರಿ ಶಾಸಕರು ಈ ಬಾರಿ ಕೂಡ ನೆರವಿನ ಹಸ್ತ ಚಾಚಿದರು. ಇಂದು ದಶಮಂಟಪಗಳ ದೇವಾಲಯಗಳಿಗೆ ಭೇಟಿ ನೀಡಿದ ಡಾ.ಮಂಥರ್ ಗೌಡ ವೈಯುಕ್ತಿಕವಾಗಿ ಕರಗ ದೇವಾಲಯಗಳಿಗೆ ತಲಾ 50 ಸಾವಿರ ರೂ. ಹಾಗೂ ಇತರ ದೇವಾಲಯಗಳಿಗೆ 30 ಸಾವಿರ ರೂ.ಗಳನ್ನು ದೇಣಿಗೆಯಾಗಿ ನೀಡಿ ಪೂಜೆ ಸಲ್ಲಿಸಿದರು. ::: ಹೆಚ್ಚುವರಿ ಅನುದಾನ ::: ಕಳೆದ ವರ್ಷ ದಸರಾ ಸಮಯದಲ್ಲಿ ಖುದ್ದಾಗಿ ಮಂಟಪ ರಚನೆಯ ಕಾರ್ಯಗಳನ್ನು ತಾವು ವೀಕ್ಷಿಸಿದ್ದು, ಮಂಟಪ ಸಿದ್ಧತೆಯಲ್ಲಿ ನೂರಾರು ಪದಾಧಿಕಾರಿಗಳು ಪಡುವ ಶ್ರಮವನ್ನು ಕಣ್ಣಾರೆ ಕಂಡಿದ್ದೇನೆ. ಈ ನಿಟ್ಟಿನಲ್ಲಿ ಮಂಟಪ ಸಮಿತಿಗಳಿಗೆ ಆದ್ಯತೆ ನೀಡಿ ಇದೀಗ 20 ಲಕ್ಷ ರೂ.ಗಳ ಹೆಚ್ಚುವರಿ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದೇನೆ ಎಂದು ತಿಳಿಸಿದರು. ದಶ ಮಂಟಪ…
ಸೋಮವಾರಪೇಟೆ ಅ.15 : ಚಿತ್ರದುರ್ಗ ಬೃಹನ್ಮಠಕೆ ಸೇರಿದ ಬೇಳೂರು ಮಠದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆಡಳಿತಾಧಿಕಾರಿಗಳ ಪರವಾಗಿ ಮಾಹಿತಿ ಸಂಗ್ರಹಿಸಲು ಬಂದಿದ್ದ ಪ್ರತಿನಿಧಿಯ ಮುಂದೆ ವಾಗ್ವಾದ ನಡೆದು ಕೆಲಕಾಲ ಬೇಳೂರು ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ಭಾನುವಾರ ನಡೆದಿದೆ. ಪೋಕ್ಸೋ ಮೋಖದಮ್ಮೆಯಿಂದಾಗಿ ಮುರುಘಾ ಶರಣರು ಜೈಲು ಸೇರಿದ ನಂತರ ಮುರುಘಾ ಮಠದ ವಿಚಾರಗಳು ಒಂದೊಂದಾಗಿ ವಿವಾದ ಪಡೆದುಕೊಳ್ಳುತ್ತಿವೆ. ಕೊಡಗು ಜಿಲ್ಲೆಯಲ್ಲೂ ಅಂದಿನ ರಾಜರು ನೀಡಿದ 3500 ಎಕರೆ ಜಮೀನು ಇಂದು ಕೇವಲ 550 ಎಕರೆಗೆ ಬಂದು ನಿಂತಿದೆ. ಉಳುವವನಿಗೆ ಭೂಮಿ ಕಾಯಿದೆ ಅನ್ವಯ ಒಂದಷ್ಟು ಭೂಮಿ ಉಳುವವರ ಪಾಲಾದರೆ ಬಹುತೇಕ ಭೂಮಿ ಅನಧಿಕೃತವಾಗಿ ಪರಭಾರೆಯಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ವಸ್ತುಸ್ಥಿತಿ ತಿಳಿದು ವರದಿ ನೀಡಲು ಬೃಹನ್ಮಠದ ಆಡಳಿತಾಧಿಕಾರಿಗಳು, ಮಠದ ಕಾನೂನು ಸಲಹೆಗಾರರು ಹಾಗೂ ಹಿರಿಯ ವಕೀಲರಾದ ವಿಶ್ವನಾಥ್ ಅವರು ಶನಿವಾರ ಜಿಲ್ಲೆಗೆ ಆಗಮಿಸಿ ಚಂಗದಹಳ್ಳಿ ಮಠದಲ್ಲಿ ಮಾಹಿತಿ ಸಂಗ್ರಹಿಸಿದರು. ಭಾನುವಾರ ಬೇಳೂರು ಮಠಕ್ಕೆ ಸೇರಿದ ಮಾದಾಪುರ, ಗುತ್ತಿಮಠ ಮತ್ತು…
ಮಡಿಕೇರಿ ಅ.15 : ಮಡಿಕೇರಿ ದಸರಾ ಕರಗ ಮಹೋತ್ಸವಕ್ಕೆ ಭಾನುವಾರ ಶ್ರದ್ಧಾಭಕ್ತಿಯಿಂದ ಚಾಲನೆ ದೊರೆಯಿತು. ಆ ಮೂಲಕ ನಾಲ್ಕು ಶಕ್ತಿ ದೇವತೆಗಳು ನಗರ ಸಂಚಾರವನ್ನು ಆರಂಭಿಸಿದವು. ನಗರದ ನಾಲ್ಕು ಶಕ್ತಿ ದೇವತೆಗಳಾದ ಕುಂದೂರು ಮೊಟ್ಟೆ ಶ್ರೀಚೌಟಿ ಮಾರಿಯಮ್ಮ ದೇವಾಲಯ, ಶ್ರೀದಂಡಿನ ಮಾರಿಯಮ್ಮ ದೇವಾಲಯ, ಶ್ರೀಕೋಟೆ ಮಾರಿಯಮ್ಮ ದೇವಾಲಯ ಮತ್ತು ಶ್ರೀಕಂಚಿ ಕಾಮಾಕ್ಷಿ ದೇವಾಲಯಗಳ ಕರಗಗಳಿಗೆ ನಗರದ ಪಂಪಿನಕೆರೆಯಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಕರಗೋತ್ಸವಕ್ಕೆ ಚಾಲನೆ ನೀಡಲಾಯಿತು. ಕುಂದೂರು ಮೊಟ್ಟೆ ಶ್ರೀಚೌಟಿ ಮಾರಿಯಮ್ಮ ದೇವಾಲಯದ ಕರಗವನ್ನು ಚಾಮಿ, ಶ್ರೀದಂಡಿನ ಮಾರಿಯಮ್ಮ ದೇವಾಲಯದ ಕರಗವನ್ನು ಉಮೇಶ್, ಶ್ರೀಕೋಟೆ ಮಾರಿಯಮ್ಮ ದೇವಾಲಯ ಕರಗವನ್ನು ಅನೀಸ್ ಹಾಗೂ ಶ್ರೀಕಂಚಿ ಕಾಮಾಕ್ಷಿ ದೇವಾಲಯದ ಕರಗವನ್ನು ಕಾರ್ತಿಕ್ ಅವರು ಹೊತ್ತಿದ್ದರು. ನಾಲ್ಕು ಕರಗಗಳು 9 ದಿನಗಳ ನಗರ ಸಂಚಾರ ಮಾಡಿ ಭಕ್ತರಿಂದ ಪೂಜೆ ಸ್ವೀಕರಿಸಲಿವೆ. ಪಂಪಿನಕೆರೆಯಲ್ಲಿ ಪೂಜೆ ಸಲ್ಲಿಸುವ ಸಂದರ್ಭ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ…
ಮಡಿಕೇರಿ ಅ.14 : ಮುಖವಾಡ ಮತ್ತು ಕರ್ಕಷ ಧ್ವನಿ ಹೊರಡಿಸುವ ಎಲ್ಲಾ ಮಾದರಿಯ ತುತ್ತೂರಿಗಳನ್ನು ಈ ಬಾರಿ ಮಡಿಕೇರಿ ದಸರಾದಲ್ಲಿ ನಿಷೇಧಿಸಲಾಗಿದೆ. ಅದನ್ನು ಬಳಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮುಖವಾಡ ಮತ್ತು ಕರ್ಕಷ ಧ್ವನಿಯ ತುತ್ತೂರಿಗಳನ್ನು ಬಳಸುವವರ ವಿರುದ್ಧ ದಂಡ ವಿಧಿಸಲು ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ. ಮಾತ್ರವಲ್ಲದೇ ಇವುಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ತೆರವು ಮಾಡುವಂತೆಯೂ ಪೊಲೀಸರಿಗೆ ತಿಳಿಸಲಾಗಿದೆ ಎಂದು ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ತಿಳಿಸಿದ್ದಾರೆ.
ಮಡಿಕೇರಿ ಅ.14 : ಅ.24ರ ರಾತ್ರಿ ದಶಮಂಟಪಗಳು ನಗರದಲ್ಲಿ ಶೋಭಾ ಯಾತ್ರೆ ನಡೆಸುತ್ತವೆ. ಈ ವೇಳೆ ಎಲ್ಲಾ ದಶ ಮಂಟಪಗಳು ಹೆಚ್ಚು ಪ್ರದರ್ಶನ ನೀಡಬೇಕೆಂದು ಸೂಚಿಸಲಾಗಿದೆ. ಮಾತ್ರವಲ್ಲದೇ ಹೆಚ್ಚು ಪ್ರದರ್ಶನ ನೀಡುವ ಮಂಟಪಕ್ಕೆ ವಿಶೇಷ ಬಹುಮಾನವನ್ನು ದಸರಾ ಸಮಿತಿಯಿಂದ ನೀಡಲಾಗುತ್ತದೆ ಎಂದು ಅನಿತಾ ಪೂವಯ್ಯ ತಿಳಿಸಿದರು. ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಈ ಬಾರಿ 2 ಕೋಟಿ ರೂ. ಅನುದಾನದ ಮೂಲಕ ಮಡಿಕೇರಿ ದಸರಾವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಚಿಂತಿಸಲಾಗಿತ್ತು. ಆದರೆ ಬರದ ಹಿನ್ನೆಲೆಯಲ್ಲಿ ಸರಕಾರ 75 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಮಡಿಕೇರಿ ದಸರಾ ಆಚರಣೆ ಕಷ್ಟಸಾಧ್ಯವಾಗಲಿದೆ. ಈ ಕಾರಣದಿಂದ ದಾನಿಗಳ ಮೂಲಕ ದೇಣಿಗೆ ಸಂಗ್ರಹಿಸಲು ದಸರಾ ಸಮಿತಿ ಮುಂದಾಗಿದ್ದು, ಈ ಹಣದಲ್ಲಿ ದಶ ಮಂಟಪಗಳಿಗೆ ಹೆಚ್ಚಿನ ಅನುದಾನ ನೀಡಲು ಯೋಜನೆ ರೂಪಿಸಲಾಗುತ್ತಿದೆ. ದೇಣೆಗೆ ಸಂಗ್ರಹದಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ನಗರ ಸಭೆ ಪೌರಾಯುಕ್ತರೇ ದೇಣಿಗೆ ವಿಚಾರದ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.…
ಮಡಿಕೇರಿ ಅ.14 : ಮಡಿಕೇರಿ ದಸರಾ ಉತ್ಸವಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಕಾರಣ ಕಾನೂನು ಸುವ್ಯವಸ್ಥೆ ಕಾಪಾಡಲು ಜನದಟ್ಟಣೆ ಏರ್ಪಡುವ ಸ್ಥಳಗಳಲ್ಲಿ ಪೊಲೀಸ್ ವ್ಯೂವ್ ಪಾಯಿಂಟ್ ಅಳವಡಿಸುವುದು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅದರಂತೆ ಪೊಲೀಸ್ ಇಲಾಖೆ ಸೂಚಿಸುವ ಕಡೆಗಳಲ್ಲಿ ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಗಳನ್ನು ನಗರಸಭೆ ಕಡೆಯಿಂದ ಮಾಡಲಾಗುತ್ತದೆ ಎಂದು ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ತಿಳಿಸಿದ್ದಾರೆ.
ಮಡಿಕೇರಿ ಅ.14 : ಐತಿಹಾಸಿಕ ಮಡಿಕೇರಿ ದಸರಾ ಆಚರಣೆಗೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಡಿಕೇರಿ ನಗರ ದಸರಾ ಸಮಿತಿ ತಿಳಿಸಿದೆ. ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ, ಅ.15ರಂದು ನಗರದ ಪಂಪಿನ ಕೆರೆಯಲ್ಲಿ 4 ಶಕ್ತಿ ದೇವತೆಗಳಿಗೆ ಪೂಜೆ ಸಲ್ಲಿಸಿ ಕರಗ ಹೊರಡಿಸುವ ಮೂಲಕ ಮಡಿಕೇರಿ ದಸರಾ ಉತ್ಸವ ಆರಂಭವಾಗಲಿದೆ. ನವ ದಿನಗಳು ಕೂಡ ಕರಗಗಳು ನಗರ ಪ್ರದಕ್ಷಿಣೆ ತೆರಳಲಿವೆ ಎಂದು ಹೇಳಿದರು. ದಸರಾ ಹಬ್ಬಾಚರಣೆ ಹಿನ್ನೆಲೆಯಲ್ಲಿ ಮಡಿಕೇರಿ ನಗರವನ್ನು ಈ ವಿದ್ಯುತ್ ಬೆಳಕಿನಿಂದ ಶೃಂಗರಿಸಲಾಗಿದೆ ಎಂದು ಹೇಳಿದರು. ಕರಗಗಳು ಮತ್ತು ದಶ ಮಂಟಪಗಳು ಸಾಗುವ ನಗರದ ಮುಖ್ಯ ರಸ್ತೆಗಳ ಗುಂಡಿ ಮುಚ್ಚುವುದು, ರಸ್ತೆಯ ಇಕ್ಕೆಲಗಳ ಕಾಡು ಕಡಿದು ಸ್ವಚ್ಛಗೊಳಿಸಲಾಗುತ್ತಿದೆ ಎಂದು ಹೇಳಿದರು. ::: ಸಾಂಸ್ಕೃತಿಕ ವೈಭವ ::: ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನವ ದಿನಗಳ ಕಾಲ ವಿವಿಧ ಕಲಾ ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ…
ಮಡಿಕೇರಿ ಅ.14 : ಲೋಕಾಯುಕ್ತಕ್ಕೆ ದೂರು ಬಾರದಂತೆ ಅಧಿಕಾರಿಗಳು ಎಚ್ಚರದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ಅವರು ಸಲಹೆ ಮಾಡಿದ್ದಾರೆ. ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಿ ಸಮಸ್ಯೆಗಳನ್ನು ಆಲಿಸಿದ ಬಳಿಕ ಅವರು ಮಾತನಾಡಿದರು. ಲೋಕಾಯುಕ್ತಕ್ಕೆ ದೂರು ಬಂದು ವಿಚಾರಣೆ ಆರಂಭಿಸಿದರೆ ಅಲೆಯಬೇಕಾಗುತ್ತದೆ. ಆದ್ದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತುಂಬಾ ಎಚ್ಚರವಹಿಸಬೇಕು. ಆದ್ದರಿಂದ ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕ ಸೇವೆಯನ್ನು ಸರ್ಕಾರದ ಸೇವೆ ಎಂದು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ಸಾರ್ವಜನಿಕರು ಕಚೇರಿಗೆ ಆಗಮಿಸಿದಾಗ ಅವರ ಕುಂದುಕೊರತೆಯನ್ನು ಸಮಾದಾನದಿಂದ ಆಲಿಸಬೇಕು. ಕಚೇರಿಗೆ ಬಂದವರನ್ನು ಕೂರಿಸಿ ಮಾತನಾಡಬೇಕು ಎಂದು ಸುರೇಶ್ ಬಾಬು ಅವರು ಸಲಹೆ ಮಾಡಿದರು. ಸರ್ಕಾರಿ ಸೇವೆಗೆ ಸೇರಿದವರು ಸಾರ್ವಜನಿಕರ ಕರ್ತವ್ಯ ನಿರ್ವಹಿಸಲು ಬಂದಿರುವುದು ಎಂಬುದನ್ನು ಅರಿತುಕೊಳ್ಳಬೇಕು. ಸಾರ್ವಜನಿಕರ ಮನವಿಗೆ ಸ್ಪಂದಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಕೆಲಸ ಆಗದಿದ್ದಲ್ಲಿ ಹಿಂಬರಹವನ್ನಾದರೂ ನೀಡಬೇಕು ಎಂದು ಹೇಳಿದರು. ಜನರ ನಿರೀಕ್ಷೆಯನ್ನು ಅಲ್ಪಸ್ವಲ್ಪವನ್ನಾದರೂ ಈಡೇರಿಸಿದರೆ ಆತ್ಮತೃಪ್ತಿ…






