ಲೇಖಕ: admin

ಮಡಿಕೇರಿ ಅ.13 : ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಕಳೆದ ಬಾರಿಯಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ ರಾಜಾ ಅವರು ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಉಪ ಸಮಿತಿ ರಚಿಸಲಾಗಿದ್ದು, ಅಧಿಕಾರಿಗಳು ತಮ್ಮ ಹಂತದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸ್ವಾಗತ, ಮೆರವಣಿಗೆ, ಸ್ತಬ್ಧಚಿತ್ರ, ಧ್ಜಜಾರೋಹಣ, ವೇದಿಕೆ, ಪಥಸಂಚಲನ, ಸಾಂಸ್ಕøತಿಕ, ಬಹುಮಾನ ವಿತರಣೆ, ಹೀಗೆ ವಿವಿಧ ಉಪ ಸಮಿತಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. ನಗರದ ಕೋಟೆ ಆವರಣದಿಂದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದವರೆಗೆ ಮೆರವಣಿಗೆ ಏರ್ಪಡಿಸುವುದು, ಮೆರವಣಿಗೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್, ಕೃಷಿ, ತೋಟಗಾರಿಕೆ, ಪಶುಪಾಲನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ನಗರಸಭೆ ವತಿಯಿಂದ ಸ್ತಬ್ಧಚಿತ್ರವನ್ನು ನಿರ್ಮಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. ನಗರದ ಕೋಟೆ ಆವರಣದಿಂದ ಜನರಲ್…

Read More

ಕುಶಾಲನಗರ, ಅ.12  : ಮಂಗಳೂರು  ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರ ವಿಷಯದ ಉಪನ್ಯಾಸಕಿಯಾಗಿರುವ ಮೂಲತಃ   ಕುಶಾಲನಗರ ತಾಲ್ಲೂಕಿನ ಚಿಕ್ಕ ಅಳುವಾರದ ನಿವಾಸಿ ಎಸ್.ಶೃತಿ ಮಂಜುನಾಥ್  ಎಂಬವರು ಮಂಗಳೂರಿನ ಶ್ರೀನಿವಾಸ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅನ್ವಯಿಕ  ವಿಜ್ಞಾನದಲ್ಲಿ ಪ್ರಸಕ್ತ ಸಂಶೋಧನೆ ಕುರಿತು ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಉತ್ತಮ ಪ್ರಬಂಧ ಮಂಡನೆ ಮಾಡಿದ ಎಸ್. ಶೃತಿ ಮಂಜುನಾಥ್  ಅವರಿಗೆ ಪ್ರಶಸ್ತಿ ಲಭಿಸಿದೆ.     “ಕಾರ್ಖಾನೆಗಳಿಂದ  ಹೊರಹೋಗುವ ತ್ಯಾಜ್ಯ ನೀರನ್ನು  ಸ್ವಚ್ಛಗೊಳಿಸಲು ” ಬಣ್ಣ: ಹೊರಹೀರುವಿಕೆ:  ಅಧ್ಯಯನಕ್ಕಾಗಿ ಬಾಳೆ ದಿಂಡಿನ ಖಾಂಡದ  ಕೋಶಗಳುಳ್ಳ ನಾರಿನ ಆಧಾರಿತ ಕಾಂತೀಯ ಅತೀ ಸೂಕ್ಷ್ಮ ಸಂಯೋಜಿತ ವಸ್ತುಗಳನ್ನು ಹೀರಿಕೊಳ್ಳುವ ಅಭಿವೃದ್ದಿ” ಕುರಿತು ಮಂಡಿಸಿದ  ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ  ಶೃತಿ ಮಂಡಿಸಿದ ಉತ್ತಮ ಪ್ರಬಂಧಕ್ಕೆ ದ್ವಿತೀಯ ಸ್ಥಾನ ಲಭಿಸಿದೆ. *ಪಿ.ಎಚ್.ಡಿ.ಅಧ್ಯಯನ* : ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ. ಬಿ ವಿಶಾಲಾಕ್ಷಿ ಯವರ ಮಾರ್ಗದರ್ಶನ ದಡಿಯಲ್ಲಿ ಶೃತಿ ಅವರು ಪಿ ‌ ಎಚ್ ಡಿ ಅದ್ಯಯನ ಮಾಡುತ್ತಿದ್ದಾರೆ.  ಶೃತಿ ಅವರು  ಸೋಮವಾರಪೇಟೆಯ ಪುಷ್ಪ  ಎಸ್. ಸಾಲ್ಯಾನ್ ಅವರ ಪುತ್ರಿಯಾಗಿದ್ದಾರೆ.

Read More

ಚೆಟ್ಟಳ್ಳಿ ಅ.12 : ಚೆಟ್ಟಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷರಾಗಿ ದಾಖಲೆಯ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಉಪಾಧ್ಯಕ್ಷರಾಗಿ ಪೇರಿಯನ ಪೂಣಚ್ಚ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಸುಂಟಿಕೊಪ್ಪ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಲೋಕೇಶ್, ಉಪಚುನಾವಣಾಧಿಕಾರಿಯಾಗಿ ಚೆಟ್ಟಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅಶೋಕ್ ಎನ್.ಎಸ್ ಕಾರ್ಯನಿರ್ವಹಿಸಿದರು. ಇತ್ತೀಚೆಗೆ ನಡೆದ ಸಂಘದ ಚುನಾವಣೆಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಬಲ್ಲಾರಂಡ ಮಣಿ ಉತ್ತಪ್ಪ ಅವರ ಬಳಗ ಭರ್ಜರಿ ಗೆಲವು ಸಾಧಿಸಿತ್ತು. ಎಲ್ಲಾ 12 ಸ್ಥಾನಗಳಲ್ಲಿ ಮಣಿ ಉತ್ತಪ್ಪ ಅವರ ಬೆಂಬಲಿಗರು ಗೆಲುವು ಸಾಧಿಸಿದ್ದರು. ಕಳೆದ ಮೂರು ಅವಧಿಯೂ ಮಣಿ ಉತ್ತಪ್ಪ ಅವರೇ ಅಧ್ಯಕ್ಷರಾಗಿ ಸಂಘದ ಬೆಳವಣಿಗೆಗೆ ಕಾರಣಕರ್ತರಾಗಿದ್ದರು. ನೂತನ ಕಟ್ಟಡ, ನರೇಂದ್ರಮೋದಿ ಸಹಕಾರ ಭವನ, ಕಾಫಿ ಗುಣಮಟ್ಟ ಪರೀಕ್ಷಾ ಕೇಂದ್ರ, ಮಣ್ಣು ಪರೀಕ್ಷಾ ಘಟಕ, ಕುಡಿಯುವ ನೀರಿನ ಘಟಕ, ಈರಳೆ ಶಾಖೆಯ ಅಭಿವೃದ್ಧಿ ಸೇರಿದಂತೆ ಹಲವು…

Read More

ಮಡಿಕೇರಿ ಅ.12 : ಕೊಡವ ಸಮುದಾಯವನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ, ಉದ್ಯೋಗ ಮತ್ತು ಶೈಕ್ಷಣಿಕ ಮೀಸಲಾತಿ ಕಲ್ಪಿಸಲು ಸೂಕ್ತ ಅವಕಾಶ ಕಲ್ಪಿಸಿಕೊಡುವಂತೆ ಒತ್ತಾಯಿಸಿ ‘ಯುನೈಟೆಡ್ ಕೊಡವ ಆರ್ಗನೈಜೇಷನ್ – ಯುಕೊ’  ನಿಯೋಗ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ  ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದತು. ಇಂದು ಬೆಂಗಳೂರಿನ ದೇವರಾಜ ಅರಸು ಭವನದಲ್ಲಿರುವ ಕಛೇರಿಯಲ್ಲಿ ಯುಕೊ  ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರ ನೇತೃತ್ವದಲ್ಲಿ ಆಯೋಗವನ್ನು ಭೇಟಿ ಮಾಡಿ ಚರ್ಚಿಸಿದ  ನಿಯೋಗ ಕೊಡಗು ಜಿಲ್ಲೆಯಲ್ಲಿ ಕೇವಲ 1.75 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಕೊಡವ ಸಮುದಾಯವು ಅಲ್ಪಸಂಖ್ಯಾತ ಜನಾಂಗವಾಗಿದೆ. ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ತನ್ನ ಆದ ವೈಶಿಷ್ಟ್ಯತೆಯನ್ನು ಕಾಪಾಡಿಕೊಂಡು ಬಂದಿರುವ ಈ ಸಣ್ಣ ಸಮುದಾಯ ವಿವಿದ ಆಯಾಮಗಳಲ್ಲಿ ವಿಶ್ವಮಟ್ಟದಲ್ಲಿ  ಗಮನ ಸೆಳೆದಿದೆ. ಪ್ರಸ್ತುತ ಕೊಡವ ಸಮುದಾಯವು ಕರ್ನಾಟಕ ರಾಜ್ಯದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ 3A ಅಡಿಯಲ್ಲಿ ವರ್ಗೀಕರಣಗೊಂಡು ಒಕ್ಕಲಿಗರು ಹಾಗು ಬಲಿಜ…

Read More

ಮಡಿಕೇರಿ ಅ.12 : ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ಗಡಿ ಗುರುತು ಸರ್ವೆ ಮಾಡುವ ಮೂಲಕ ನದಿಯ ಸಂರಕ್ಷಣೆ, ನದಿ ತಟಗಳ ಅಭಿವೃದ್ಧಿ ಹಾಗೂ ನದಿ ವ್ಯಾಪ್ತಿಯ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಸರ್ಕಾರದಿಂದ ಯೋಜನೆ ರೂಪಿಸಬೇಕೆಂದು ಕಾವೇರಿ ರಿವರ್ ಸೇವಾ ಟ್ರಸ್ಟ್ ಮನವಿ ಮಾಡಿದೆ. ಜಿಲ್ಲಾಧಿಕಾರಿ ವೆಂಕಟರಾಜಾ ಹಾಗೂ ಜಿ.ಪಂ ಸಿಇಓ ವರ್ಣಿತ್ ನೇಗಿ ಅವರಿಗೆ ಮನವಿಪತ್ರ ಸಲ್ಲಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಜೀವನದಿ ಕಾವೇರಿ ಕೊಡಗು ಜಿಲ್ಲೆಯಲ್ಲಿ ಮೂಲದಿಂದಲೇ ನಿರಂತರವಾಗಿ ಕಲುಷಿತಗೊಳ್ಳುತ್ತಿದ್ದು ಸಂರಕ್ಷಿಸುವ ಅಗತ್ಯವಿದೆ ಎಂದರು. ನಗರ, ಪಟ್ಟಣ ಮತ್ತು ಗ್ರಾಮಗಳ ತ್ಯಾಜ್ಯ, ಕಲುಷಿತ ನೀರು ನದಿಗೆ ನೇರವಾಗಿ ಸೇರುತ್ತಿದೆ. ನದಿದಂಡೆ ಒತ್ತುವರಿಯಾಗುತ್ತಿದ್ದು, ಅಕ್ರಮವಾಗಿ ಹೊಟೇಲ್, ಅಂಗಡಿ ಮುಂಗಟ್ಟುಗಳು ನಿರ್ಮಾಣವಾಗುತ್ತಿದೆ. ಇಲ್ಲಿಗೆ ಬರುವ ಪ್ರವಾಸಿಗರಿಂದ ಉತ್ಪತ್ತಿಯಾಗುವ ತ್ಯಾಜ್ಯಗಳು ಅವೈಜ್ಞಾನಿಕವಾಗಿ ವಿಲೇವಾರಿಯಾಗಿ ನದಿ ಕಲುಷಿತವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಡಿಕೇರಿ ತಾಲ್ಲೂಕಿನ ತಲಕಾವೇರಿ-ಭಾಗಮಂಡಲದಲ್ಲಿ ಸಮರ್ಪಕ ಕುಡಿಯುವ ನೀರಿನ ಘಟಕ ಸ್ಥಾಪನೆ, ಸಮುದಾಯ ಶೌಚಾಲಯ ಮತ್ತು ಸಮರ್ಪಕ ನಿರ್ವಹಣೆ, ಗ್ರಾ.ಪಂ…

Read More

ಮಡಿಕೇರಿ ಅ.12 : ವಿಶ್ವ ವಿಖ್ಯಾತ ಮೈಸೂರು ದಸರಾ ಸಿನಿಮೋತ್ಸವದಲ್ಲಿ ಕೊಡಗಿನ ನಿರ್ದೇಶಕರು ಹಾಗೂ ಕಲಾವಿದರ ನಾಲ್ಕು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇದೇ ಮೊದಲ ಬಾರಿಗೆ ಕೊಡಗಿನ ನಿರ್ದೇಶಕರುಗಳ ಇಷ್ಟು ಸಂಖ್ಯೆಯ ಚಿತ್ರಗಳು ಆಯ್ಕೆಯಾಗಿದ್ದು, ಚಿತ್ರ ತಂಡಗಳಲ್ಲಿ ಹರ್ಷ ಮೂಡಿದೆ. ಕೂರ್ಗ್ ಕಾಫಿವುಡ್ ಮೂವಿಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ “ಅಂತರ್ಮುಖ” ಕನ್ನಡ ಚಿತ್ರ, ಸ್ವಸ್ತಿಕ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಪ್ರಶಸ್ತಿ ವಿಜೇತ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ, ಹಲವು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ “ಪೊಮ್ಮಾಲೆ ಕೊಡಗ್” ಕೊಡವ ಚಿತ್ರ, ಕೊಡಗಿನ ಪ್ರಥಮ ಮಹಿಳಾ ನಿರ್ದೇಶಕಿ ಎಂಬ ಕೀರ್ತಿಗೆ ಪಾತ್ರರಾಗಿರುವ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ದೇಶನದ “ರಂಗಪ್ರವೇಶ” ಕನ್ನಡ ಚಿತ್ರ ಮತ್ತು ಸಿಂಚನ ಪೊನ್ನವ್ವ ನಿರ್ದೇಶನದ “ಕೌಡಿಕಳಿ” ಕೊಡವ ಚಿತ್ರ ದಸರಾ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ. ಕೊಡಗಿನ ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಗೆ ಒತ್ತು ನೀಡಿರುವ ನಾಲ್ಕು ಚಿತ್ರಗಳು ದಸರಾ ಉತ್ಸವದ ಸಂದರ್ಭ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ. ಅ.16 ರಂದು ಬೆಳಗ್ಗೆ 10.15ಗೆ “ಅಂತರ್ಮುಖ”,…

Read More

ಮಡಿಕೇರಿ ಅ.12 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಟಿ.ಶೆಟ್ಟಿಗೇರಿಯ ತಾಳೇರಿ ನಾಡ್ ಮಂದ್ ನಲ್ಲಿ ಕೊಡವ ಲ್ಯಾಂಡ್ ಹಕ್ಕೊತ್ತಾಯದ ಪಾದಯಾತ್ರೆ ಮತ್ತು ಕೊಡವ ಜಾಗೃತಿ ಸಭೆ ನಡೆಯಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ “ಪೆರುಮಾಳ್” ಪಟ್ಟಿ ನಾಡ್ ಮಂದ್ ನಿಂದ ಟಿ.ಶೆಟ್ಟಿಗೇರಿ ಪಟ್ಟಣದಲ್ಲಿ ಪಾದಯಾತ್ರೆ ಸಾಗಿತು. ಕೊಡವ, ಕೊಡವತಿಯರು ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿ ಪಾಲ್ಗೊಂಡು ಮಾನವ ಸರಪಳಿ ನಿರ್ಮಿಸಿದರು. ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ನಾಚಪ್ಪ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಳೇರಿ ಮೂಂದ್‌ನಾಡ್ ತಕ್ಕ ಕೈಬುಲಿರ ಹರೀಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬೊಳ್ಳಜಿರ ಸುಶೀಲ, ಕೈಬುಲಿರ ಪಾರ್ವತಿ ಅಪ್ಪಯ್ಯ, ಅಜ್ಜಮಾಡ ಸಾವಿತ್ರಿ, ತೀತಿರ ಅನಿತಾ, ಕೈಬುಲಿರ ಪಾರ್ವತಿ, ಮಚ್ಚಮಾಡ ಹೇಮ ನಾಣಯ್ಯ, ಕಳ್ಳಿಚಂಡ ದೇವಿಕ ನಂಜಪ್ಪ, ಮಚ್ಚಮಾಡ ಸವಿ ನಾಣಯ್ಯ, ತಡಿಯಂಗಡ ಗಾನ ಸೋಮಣ್ಣ, ಮುಕ್ಕಾಟಿರ ಅಂಜನ ಪೊನ್ನಣ್ಣ, ಮುಕ್ಕಾಟಿರ ಮಿನಿತ ಸಂದೀಪ್, ಬಾಚಿರ ನಿಶಾ ಪ್ರದೀಪ್, ಬಾಚಿರ ಶೈಲಾ, ಚಟ್ಟಂಗಡ ರಮ್ಯ ಕರುಂಬಯ್ಯ,…

Read More

ಮಡಿಕೇರಿ ಅ.12 :  ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಹುದಿಕೇರಿ ಪಟ್ಟಣ, ಅಂಜಿಗೇರಿ ನಾಡ್ -ಮಡಕೋಡ್ ನಾಡ್ ಮಂದ್ ನಲ್ಲಿ ಕೊಡವ ಲ್ಯಾಂಡ್ ಗಾಗಿ ಒತ್ತಾಯಿಸಿ ಪಾದಯಾತ್ರೆ ನಡೆಯಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕೊಡವ ಲ್ಯಾಂಡ್ ಹಕ್ಕೊತ್ತಾಯದ ಕುರಿತು ವಿವರಿಸಿದರು. ನಾಡ್ ತಕ್ಕರುಗಳಾದ ಚಕ್ಕೇರ ರಾಜೇಶ್, ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ, ಹಿರಿಯರಾದ ಚಕ್ಕೇರ ಕಾಶಿ, ಊರು ತಕ್ಕರಾದ ಬೊಳ್ಳಜಿರ ಮಣಿ, ಪ್ರಮುಖರಾದ ಕಳ್ಳಂಗಡ ಗಣೇಶ್, ಕಿರಿಯಮಾಡ ರಾಯ್ ಕುಶಾಲಪ್ಪ, ಕಿರಿಯಮಾಡ ಸೋನಪ್ಪ, ಚೆಕ್ಕೇರ ಚಂದ್ರಪ್ರಕಾಶ್, ಹೊಟ್ಟೆಂಗಡ ಬಿದ್ದಪ್ಪ, ಬೊಳ್ಳಜಿರ ಜೋಯಪ್ಪ, ಬೊಳ್ಳಜಿರ ಮಹೇಶ್, ಲೋಕನಾಥ್, ಬಿ.ಟಿ.ಅಯ್ಯಪ್ಪ, ಚೆಕ್ಕೇರ ಬೋಪಣ್ಣ, ಕಿರಿಯಮಾಡ ಮಿಲನ್ ಗಣಪತಿ, ನೂರೆರ ಮಾಚಯ್ಯ, ಮಂಡಂಗಡ ಮೋಹನ್, ಬೊಜ್ಜಂಗಡ ತಿಮ್ಮಯ್ಯ, ಬಲ್ಯಮಿದೇರಿರ ಪ್ರಕಾಶ್, ಚಂಗುಲಂಡ ಸೂರಜ್, ಚೆಕ್ಕೇರ ರಂಜಿತ್, ಬಯೊವಂಡ ಕಿಶೋರ್ ಕಾರ್ಯಪ್ಪ, ಅಯ್ಯನೆರವಂಡ ಪ್ರಥ್ವಿ ಪೂವಣ್ಣ, ಮಂಡಂಗಡ ಅಶೋಕ್, ಬೊಟ್ಟಂಗಡ ಪೊನ್ನಪ್ಪ, ಪಟ್ಟಮಾಡ ಲಲಿತ, ಬೊಜ್ಜಂಗಡ…

Read More

ಮಡಿಕೇರಿ ಅ.12 : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ 9 ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ 3ನೇ ಹಂತದ ಪಾದಯಾತ್ರೆ ಪೊನ್ನಂಪೇಟೆಯಲ್ಲಿ ಮುಕ್ತಾಯಗೊಂಡಿತು. ನಾಲ್ಕನೇ ಹಂತದ ಪಾದಯಾತ್ರೆ ಅ.20 ರಿಂದ ಪೊನ್ನಂಪೇಟೆ ತಾಲ್ಲೂಕಿನ ಕುಂದದಿಂದ ಆರಂಭಗೊಳ್ಳಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪೊನ್ನಂಪೇಟೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ನಂತರ ಬಸ್ ನಿಲ್ದಾಣದ ಬಳಿ ಬೃಹತ್ ಮಾನವ ಸರಪಳಿ ನಿರ್ಮಿಸುವ ಮೂಲಕ ಕೊಡವ ಲ್ಯಾಂಡ್ ಗಾಗಿ ಹಕ್ಕೊತ್ತಾಯ ಮಂಡಿಸಲಾಯಿತು. ಎನ್.ಯು.ನಾಚಪ್ಪ ಅವರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕಾರ್ಯಕ್ರಮ ಆರಂಭಿಸಿ ಹಕ್ಕೊತ್ತಾಯಗಳ ಕುರಿತು ವಿವರಿಸಿದರು. ಸಿಎನ್‌ಸಿಯ 9 ಬೇಡಿಕೆಗಳ ಕುರಿತು ಪಾದಯಾತ್ರೆ ಸಂದರ್ಭ ಜನಜಾಗೃತಿ ಮೂಡಿಸಿ ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದರು. ಭೌಗೋಳಿಕ-ರಾಜಕೀಯ ಸ್ವಾಯತ್ತತೆಯು ಯುಎನ್/ವಿಶ್ವ ರಾಷ್ಟ್ರ ಸಂಸ್ಥೆ ಚಾರ್ಟರ್‌ನಲ್ಲಿ ಪ್ರತಿಪಾದಿಸಲ್ಪಟ್ಟ ನಿರ್ದಿಷ್ಟ ಪ್ರದೇಶದ ಪ್ರಾಚೀನ ಸೂಕ್ಷ್ಮ-ಮಿನಿಸ್ಕ್ಯೂಲ್ ರೇಸ್ ಅನ್ನು ರಕ್ಷಿಸಲು, ಉತ್ತೇಜಿಸಲು ಮತ್ತು ಪುನರುಜ್ಜೀವನಗೊಳಿಸಲು ಮೂಲಭೂತ ನೀತಿಯಾಗಿ ಸಾಂವಿಧಾನಿಕ ವ್ಯವಸ್ಥೆಯಾಗಿದೆ. 2002…

Read More

ಮಡಿಕೇರಿ ಅ.12 :  ಮಡಿಕೇರಿ ನಗರ ದಸರಾ ಕ್ರೀಡಾಕೂಟ ಸಮಿತಿ ವತಿಯಿಂದ  ಅ.15  ರಂದು  5+2 ಆಟಗಾರರ ಮುಕ್ತ ಕಾಲ್ಚೆಂಡು ಪಂದ್ಯಾವಳಿ ನಡೆಯಲಿದೆ. ಪಂದ್ಯಾಟವನ್ನು ನಗರದ ಮ್ಯಾನ್ಸ್ ಕಾಂ ಪೌಂಡ್ ಫುಟ್ಬಾಲ್ ಮೈದಾನದಲ್ಲಿ ಏರ್ಪಡಿಸಲಾಗಿದೆ ಪ್ರಥಮ ಬಹುಮಾನವಾಗಿ ನಗದು ರೂಪಾಯಿ15000 ಹಾಗೂ ಆಕರ್ಷಕ ಟ್ರೋಫಿ ದ್ವಿತೀಯ ಬಹುಮಾನವಾಗಿ ನಗದು ರೂಪಾಯಿ 10000 ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು ಪ್ರವೇಶ ಶುಲ್ಕ 800 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಈ ಪಂದ್ಯಾಟದಲ್ಲಿ ಭಾಗವಹಿಸಲು ಇಚ್ಛೆ ಇರುವ ತಂಡಗಳು ಅ. 14  ರ ಮಧ್ಯಾಹ್ನ 2 ಗಂಟೆ ಒಳಗೆ ಮುಂಗಡ ಹಣ ರೂ. 500 ನೀಡಿ ನೊಂದಾಯಿಸಿಕೊಳ್ಳುತಕ್ಕದ್ದು. ಸಂಪರ್ಕಿಸಬೇಕಾದ ಸಂಖ್ಯೆ ಕ್ರಿಸ್ಟೊಫರ್ :-7019909495,  ಉಮೇಶ್ :-9448976406

Read More