ಲೇಖಕ: admin

ಬೆಂಗಳೂರು ಅ.12 :  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) 2022ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳಿಗೆ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾಧ್ಯಮದಲ್ಲಿ ಪ್ರಕಟವಾದ/ಪ್ರಸಾರವಾದ ವರದಿ ಸಹಿತ ಅರ್ಜಿಗಳನ್ನು ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, ಕಂದಾಯ ಭವನ, 3ನೇ ಮಹಡಿ, ಕೆ.ಜಿ.ರೋಡ್, ಬೆಂಗಳೂರು-560009 ಇಲ್ಲಿಗೆ ದಿನಾಂಕ 30.10.2023 ರೊಳಗಾಗಿ ತಲಪುವಂತೆ ಕಳುಹಿಸಲು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಗಳ ವಿವರ: 1. ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿಗೆ) 2. ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿಗೆ) 3. ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿಗೆ) 4. ಬಿ. ಎಸ್. ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿಗೆ) 5. ಕೆ. ಎ. ನೆಟ್ಟಕಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾ ವರದಿಗೆ) 6. ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ರಾಜಕೀಯ ವಿಮರ್ಶಾತ್ಮಕ ವರದಿ) 7. ಮಂಗಳ ಎಂ. ಸಿ. ವರ್ಗಿಸ್ ಪ್ರಶಸ್ತಿ (ವಾರ ಪತ್ರಿಕೆಯಲ್ಲಿ ಪ್ರಕಟವಾದ…

Read More

ಮಡಿಕೇರಿ ಅ.12 :  ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವ ಈ ಬಾರಿ ಸಂಪ್ರದಾಯಿಕವಾಗಿ ನಡೆಯುತ್ತಿದ್ದು, ಮಡಿಕೇರಿ ನಗರ ದಸರಾ ಅಲಂಕಾರ ಸಮಿತಿ ವತಿಯಿಂದ ನವರಾತ್ರಿ ಅಂಗವಾಗಿ ವಿವಿಧ ಅಲಂಕಾರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅ.15 ರಂದು ಕರಗ ಸಾಗುವ ರಸ್ತೆಯಲ್ಲಿ ರಂಗೋಲಿ ಸ್ಪರ್ಧೆ ಆಯೋಜಿತವಾಗಿದ್ದು ಚುಕ್ಕಿ,, ಪುಡಿ. ಅಳೆ.ಮತ್ತು ಪುಷ್ಪ ರಂಗೋಲಿ ವಿಭಾಗಗಳ ಸ್ಪರ್ಧೆಗಳು ಜರುಗಲಿದೆ. ಅ.23 ರಂದು ಆಯುಧ ಪೂಜೆ ಅಂಗವಾಗಿ ಗಾಂಧಿ ಮೈದಾನದಲ್ಲಿ ವಾಹನ ಅಲಂಕಾರ ಸ್ಪರ್ಧೆ ಆಯೋಜಿತವಾಗಿದ್ದು. ಲಾರಿ, ಬಸ್, ಕಾರ್, ಸೈಕಲ್, ಬೈಕ್, ಆಟೋ, ಟಾಟಾಏಸ್, ಜೀಪ್, ಪಿಕ್ಅಪ್, ಜೆಸಿಬಿ ಹಾಗೂ ಇನ್ನಿತರ ವಾಹನ ಅಲಂಕಾರ ಸ್ಪರ್ಧೆ ಜರುಗಲಿದೆ. ನವರಾತ್ರಿಯ ಪ್ರಯುಕ್ತ ಮಡಿಕೇರಿ ನಗರಾಲಂಕಾರ ಸ್ಪರ್ಧೆಯ ಅಂಗವಾಗಿ ನಗರದ ವಿವಿಧ ಕಟ್ಟಡಗಳ ಅಲಂಕಾರ ಸ್ಪರ್ಧೆ ಜರುಗಲಿದ್ದು, ನವರಾತ್ರಿಯ 9 ದಿನವೂ ಮಡಿಕೇರಿ ನಗರದ ದಶ ದೇವಾಲಯಗಳು, ಸರಕಾರಿ, ಅರೆ ಸರಕಾರಿ ಕಚೇರಿಗಳು, ವಿವಿಧ ಕಟ್ಟಡಗಳು, ಚಿನ್ನದ ಅಂಗಡಿ, ಬಟ್ಟೆ ಅಂಗಡಿ, ಬೇಕರಿ, ಹೋಟೆಲ್, ಬ್ಯಾಂಕ್, ಸೇರಿದಂತೆ ವಿವಿಧ…

Read More

ಮಡಿಕೇರಿ ಅ.12 : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಯ ಮಿತ್ರ ಪಕ್ಷ ಆಮ್ ಆದ್ಮಿ ಪಾರ್ಟಿಗೆ ಕೊಡಗು- ಮೈಸೂರು ಕ್ಷೇತ್ರವನ್ನು ಹಂಚಿಕೆ ಮಾಡಬೇಕೆಂದು ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ 28 ಪಕ್ಷಗಳ ಮೈತ್ರಿಯ ಇಂಡಿಯಾ ಒಕ್ಕೂಟ ಸ್ಥಾಪನೆಯಾಗಿದ್ದು, ಅದರಲ್ಲಿ ಆಮ್ ಆದ್ಮಿ ಪಾರ್ಟಿ ಕೂಡ ಒಂದಾಗಿದೆ. ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದರಿಂದ ಗೆಲುವು ಸಾಧಿಸುವುದು ಸುಲಭವಾಗಲಿದೆ. ಆಮ್ ಆದ್ಮಿ ಪಾರ್ಟಿಯಲ್ಲಿ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಆದ್ದರಿಂದ ಕೊಡಗು- ಮೈಸೂರು ಕ್ಷೇತ್ರವನ್ನು ನಮ್ಮ ಪಕ್ಷಕ್ಕೆ ನೀಡಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಬೇಕೆಂದು ಮನವಿ ಮಾಡಿದ್ದಾರೆ. ಕಳೆದ 9.5 ವರ್ಷಗಳ ಕೇಂದ್ರ ಸರ್ಕಾರದ ಆಡಳಿತದಲ್ಲಿ ಅಗತ್ಯ ವಸ್ತುಗಳ ನಿರಂತರ ಬೆಲೆ ಮತ್ತು ತೆರಿಗೆ ಏರಿಕೆಯಿಂದ ಜನಸಾಮಾನ್ಯರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಯುವ ಸಮೂಹ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದರೂ ಕೊಡಗು- ಮೈಸೂರು ಕ್ಷೇತ್ರದ ಸಂಸದರು…

Read More

ಕಡಂಗ ಅ.12 : ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರ ಜನ್ಮದಿನಾಚರಣೆಯ ಪ್ರಯುಕ್ತ ಜಿಲ್ಲೆಯ ಪ್ರತಿಷ್ಠಿತ ಸಮನ್ವಯ ವಿದ್ಯಾ ಸಂಸ್ಥೆ ಅನ್ವಾರುಲ್ ಹುದಾ ಹಾಗೂ ಸುನ್ನೀ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಅನುಪಮ ವ್ಯಕ್ತಿತ್ವ ಅನಘ್ರ್ಯ ಸಂದೇಶ ಎಂಬ ಘೋಷಣೆಯೊಂದಿಗೆ ವಿರಾಜಪೇಟೆ ಪಟ್ಟಣದಲ್ಲಿ ಬೃಹತ್ ಸಂದೇಶ ಜಾಥಾ ನಡೆಯಿತು. ಸ್ವಾಗತ ಸಮಿತಿ ಮುಖ್ಯಸ್ಥ ಸಯ್ಯದ್ ಮಹ್ದೀಅಲ್ ಬುಖಾರಿ ತಙಂಳ್ ಅವರ ಪ್ರಾರ್ಥನೆಯೊಂದಿಗೆ ಜಾಥಾಕ್ಕೆ ಪಂಜರ್ ಪೇಟೆಯಿಂದ ಚಾಲನೆ ನೀಡಲಾಯಿತು. ಪಂಜರಪೇಟೆಯಿಂದ ಪ್ರಾರಂಭಗೊಂಡ ಜಾಥಾ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಗಡಿಯಾರಕಂಬ ಮುಖಾಂತರ ಪಟ್ಟಣದ ಮುಖ್ಯ ಬೀದಿಯಲ್ಲಿ ಸಂಚರಿಸಿ ಅನ್ವಾರುಲ್ ಹುದಾ ಕ್ಯಾಂಪಸ್ ನಲ್ಲಿ ಸಮಾಪನಗೊಂಡಿತು. ಅನ್ವಾರುಲ್ ಹುದಾ ಸಂಸ್ಥೆಯ ಸಾರಥಿ ಶೈಖುನಾ ಅಶ್ರಫ್ ಅಹ್ಸನಿ ಉಸ್ತಾದ್ ಮಾತನಾಡಿ, ಮೊಹಮ್ಮದ್ ಪೈಗಂಬರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಬೇಕು, ಯುವ ಸಮೂಹದ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಕರೆ ನೀಡಿದರು. ದಫ್, ಸ್ಕೌಟ್ ಹಾಗೂ ವಿದ್ಯಾರ್ಥಿಗಳ ಪ್ಲವರ್ ಶೋ ಪ್ರದರ್ಶನ ಜಾಥಾದಲ್ಲಿ ಆಕರ್ಷಣೆಯಾಗಿತ್ತು. ಡೋನೇಟರ್ಸ್ ಚಾರಿಟೇಬಲ್ ಟ್ರಸ್ಟ್ ಸದಸ್ಯರು ಪಟ್ಟಣದಲ್ಲಿ…

Read More

ಮಡಿಕೇರಿ ಅ.12 : ಉಡುಪಿಯ ಸಾಲಿಗ್ರಾಮ ಡಿವೈನ್ ಪಾರ್ಕ್ ಟ್ರಸ್ಟ್ ನ ಅಂಗ ಸಂಸ್ಥೆಯಾದ ಮೂರ್ನಾಡುವಿನ ವಿವೇಕ ಜಾಗ್ರತ ಬಳಗದ ವತಿಯಿಂದ ಅ.15 ರಂದು ಮರಗೋಡಿನಲ್ಲಿ ವಿಶಿಷ್ಟ “ಆತ್ಮೋನ್ನತಿ ಶಿಬಿರ” ನಡೆಯಲಿದೆ. ಅಂದು ಬೆಳಗ್ಗೆ 9.30 ಗಂಟೆಯಿಂದ 1.30 ರವರೆಗೆ ಮರಗೋಡಿನ ಗೌಡ ಸಮಾಜದಲ್ಲಿ ಡಿವೈನ್ ಪಾರ್ಕ್ ನ ಅಧಿಕಾರಿಗಳಾದ ರಾಜೇಶ್ ನಾಯರ್ ಹಾಗೂ ಪ್ರೇಮ ಪ್ರಭಾಕರ್ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆತ್ಮೋನ್ನತಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಮೂರ್ನಾಡು ವಿವೇಕ ಜಾಗ್ರತ ಬಳಗದ ಅಧ್ಯಕ್ಷರಾದ ಬಿ.ಟಿ.ದಿವ್ಯ ತೇಜಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ವರವಾಗಿ ಬಂದಿರುವ ಈ ಮಾನವ ಜನ್ಮದ ಒಳಗಿರುವ ಪ್ರಾಣಶಕ್ತಿಯಾದ ದೇವರ ಮಧುರ ವಾಣಿಯನ್ನು ಒಳಕಿವಿಯಿಂದ ಕೇಳಿ, ದಿವ್ಯದರುಶನ ಭಾಗ್ಯ ಪಡೆದು ದೇವರೇ ಆಗಿ ಇತರರನ್ನೂ ದೇವರಾಗಿಸುವುದು ಶಿಬಿರದ ಉದ್ದೇಶವಾಗಿದೆ. ಒಳಗಿರುವ ಆತ್ಮಶಕ್ತಿಯನ್ನು ಮೇಲೇರಿಸಿ ಪುನೀತರಾಗುವುದೇ ಆತ್ಮೋನ್ನತಿಯ ಸರಳ ವಿಧಾನವಾಗಿದೆ. ಪಶುತ್ವದಿಂದ ಮಾನವತ್ವವನ್ನು ಪಡೆದು, ದೈವತ್ವಕ್ಕೇರುವ ಅತ್ಯಪರೂಪದ ಈ ಸೌಭಾಗ್ಯವೇ ಆತ್ಮೋನ್ನತಿ ಶಿಬಿರವಾಗಿದೆ. ಬಂಧನ,…

Read More

ಮಡಿಕೇರಿ ಅ.12 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ದಸರಾ ಹಬ್ಬದ ಪ್ರಯುಕ್ತ ಅ.15 ರಿಂದ ಅ.24ರ ವರೆಗೆ ದೇವಿಗೆ ವಿಶೇಷ ಅಲಂಕಾರ ಪೂಜೆ ನಡೆಯಲಿದೆ. ಶ್ರೀ ದಂಡಿನ ಮಾರಿಯಮ್ಮ ದೇವಾಲಯವು 93ನೇ ವರ್ಷದ ಅದ್ದೂರಿ ದಸರಾ ಉತ್ಸವವನ್ನು ಆಚರಿಸುತ್ತಿದ್ದು, ಹತ್ತು ದಿನಗಳ ಕಾಲ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿದೆ. ಅ.15 ರಂದು ಬೆಳ್ಳಿಯ ಅಲಂಕಾರ, ಅ.16 ರಂದು ಹೂವಿನ ಅಲಂಕಾರ, ಅ.17 ರಂದು ಮಹಾಲಕ್ಷ್ಮಿ ಅಲಂಕಾರ, ಅ.18 ರಂದು ಬಾಗಿನ ದೀಪ ಅಲಂಕಾರ, ಅ.19 ರಂದು ಕಟೀಲು ದುರ್ಗಾ ಅಲಂಕಾರ, ಅ.20 ರಂದು ಶಾರದದೇವಿ, ಅ.21 ರಂದು ತಾವರೆ ಅಲಂಕಾರ, ಅ.22 ರಂದು ಬಳೆ ಅಲಂಕಾರ, ಅ.23 ರಂದು ನಿಂಬೆ ಹಣ್ಣಿನ ಅಲಂಕಾರ, ಅ.24 ರಂದು ವಜ್ರದ ಅಲಂಕಾರ ನಡೆಯಲಿದೆ. ಅಲಂಕಾರ ಸೇವೆ ದುರ್ಗಾದೀಪ ನಮಸ್ಕಾರ ಪೂಜೆ ಹಾಗೂ ರಂಗ ಪೂಜೆ ಮಾಡಲು ಇಚ್ಚಿಸುವ ಭಕ್ತಾಧಿಗಳು 9886976306, 8792432414 ಸಂಪರ್ಕಿಸಬಹುದಾಗಿದೆ ಎಂದು…

Read More

ಮಡಿಕೇರಿ ಅ.12 : ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜನ್ನು ಉಳಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಪೋಷಕರು ಶಿಕ್ಷಕರು ಒಂದಾಗಿ ಮುನ್ನಡೆಯಬೇಕು ಎಂದು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಪೋಷಕ ಶಿಕ್ಷಕರ ಸಂಘದ ಅಧ್ಯಕ ಕೆ.ಪಿ.ಮಾಥ್ಯೂ ಅಭಿಪ್ರಾಯಪಟ್ಟರು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪೋಷಕ ಶಿಕ್ಷಕರ ಸಂಘದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಲೇಜು ಸಮಾಜಕ್ಕೆ ಮಹನೀಯ ಸಾಧಕರನ್ನು ಕೊಡುಗೆಯಾಗಿ ನೀಡಿದೆ. ಚಾರಿತ್ರಿಕವಾಗಿ ಕಾಲೇಜಿಗೆ ಮಹತ್ತರವಾದ ಸ್ಥಾನಮಾನ ಇದೆ. ಆ ಹಾದಿಯನ್ನು ಕಾಲೇಜಿನ ಚರಿತ್ರೆಗೆ ಕುಂದುಬರದಂತೆ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ನಾವುಗಳು ರೂಪುರೇಷೆ ಕೈಗೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ಬಿ.ರಾಘವ, ಕಾಲೇಜಿಗೆ 75 ವರ್ಷಗಳ ಸುದೀರ್ಘ ಇತಿಹಾಸ ಇದೆ. ಮುಂದಿನ ವರ್ಷ ಕಾಲೇಜು ತನ್ನ 75 ವರ್ಷಗಳ ಸಂಭ್ರಮಾಚರಣೆಗೆ ಸಿದ್ಧವಾಗುತ್ತಿದೆ. ಕಾಲೇಜು ಶೈಕ್ಷಣಿಕವಾಗಿ ಮಹೋನ್ನತವಾದ ಸಾಧನೆಯನ್ನು ತನ್ನ ಚರಿತ್ರೆಯ ಪುಟದಲ್ಲಿ ದಾಖಲಿಸಿದೆ. ಈ ಬಾರಿ ಅತೀ ಹೆಚ್ಚು…

Read More

ಮಡಿಕೇರಿ ಅ.12 : ಉತ್ತರ ಪ್ರದೇಶ ರಾಜ್ಯದಿಂದ ಪಂಚಾಯತ್ ರಾಜ್ ಸಂಸ್ಥೆಗಳ ಸುಮಾರು 30 ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಂಡ ಕರ್ನಾಟಕ ರಾಜ್ಯಕ್ಕೆ ಅಧ್ಯಯನ ಪ್ರವಾಸವನ್ನು ಕೈಗೊಂಡಿದ್ದಾರೆ. ಕರ್ನಾಟಕದಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆ, ಪಂಚಾಯತ್ ರಾಜ್ ಸಂಸ್ಥೆಗಳ ಯೋಜನೆ ಮತ್ತು ಮೇಲ್ವಿಚಾರಣೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮ ಮತ್ತು ಯೋಜನೆಗಳ ಅನುಷ್ಠಾನ, ವಿನೂತನ ಚಟುವಟಿಕೆಗಳು ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳುವ ಮತ್ತು ಸೂಕ್ತವಾದವುಗಳನ್ನು ಅನುಕರಣೆ ಮಾಡುವ ಉದ್ದೇಶದಿಂದ ಪ್ರವಾಸವನ್ನು ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸ್ವಂತ ಮೂಲ ಆದಾಯ ನಿರ್ವಹಣೆ ಬಗ್ಗೆ ಸಂವಾದ ಮತ್ತು ಕ್ಷೇತ್ರ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

Read More

ಪುತ್ತೂರು ಅ.12 : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿನಿ ಧನ್ಯ.ಪಿ ಕೆಡೆನ್ಸ್ ಡಿಸೈನ್ ಸಿಸ್ಟಮ್ಸ್ (Cadence Design Systems) ಸಂಸ್ಥೆಗೆ ಆಯ್ಕೆಯಾಗಿದ್ದಾರೆ. 2024ನೇ ಸಾಲಿನ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯನ್ವಯ ಸೆಪ್ಟೆಂಬರ್ 30 ಹಾಗೂ ಅಕ್ಟೋಬರ್ 1 ರಂದು ನಡೆದ ನೇಮಕಾತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿ ಧನ್ಯ ಆಯ್ಕೆಯಾಗಿದ್ದಾರೆ.  ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ಕ್ಷೇತ್ರದ ದಿಗ್ಗಜ ಕೆಡೆನ್ಸ್ ಡಿಸೈನ್ ಸಿಸ್ಟಮ್ಸ್ ಸಂಸ್ಥೆಯು ಕಾಲೇಜಿಗೆ ಭೇಟಿ ನೀಡಿತ್ತು. ಈ ನೇಮಕಾತಿ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 14 ಇಂಜಿನಿಯರಿಂಗ್ ಕಾಲೇಜುಗಳ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ 470 ಅರ್ಹ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಟ್ಟು ಏಳು ಸುತ್ತಿನಲ್ಲಿ ಆಯ್ಕೆ ಪ್ರಕ್ರಿಯೆಯು ನಡೆದಿದ್ದು, ಅಂತಿಮವಾಗಿ ಇಬ್ಬರು ಆಯ್ಕೆಯಾಗಿದ್ದಾರೆ. ವಾರ್ಷಿಕ 15 ಲಕ್ಷ ರೂಪಾಯಿ ವೇತನ ನೀಡುವ ಹುದ್ದೆಗೆ ನಡೆದ ನೇಮಕಾತಿ ಇದಾಗಿದೆ. ಕಾಲೇಜಿನ ಎಲ್ಲಾ…

Read More

ಮಡಿಕೇರಿ ಅ.12 : ಕಾರ್ಮಿಕ ಇಲಾಖೆ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿಯಲ್ಲಿ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‍ಗಳು ನಿರಂತರವಾಗಿ ಅಪಘಾತಗಳಿಗೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಅಪಘಾತಕ್ಕೀಡಾದಾಗ ಮರಣಕ್ಕೆ ತುತ್ತಾಗುವ, ಶಾಶ್ವತ ದುರ್ಬಲತೆ ಅಥವಾ ತಾತ್ಕಲಿಕ ದುರ್ಬಲತೆ ಹೊಂದಿದ ಸಂದರ್ಭದಲ್ಲಿ, ಅವರ ದುಡಿಮೆಯನ್ನೇ ಅವಲಂಬಿಸಿರುವ ಅವರ ಕುಟುಂಬವು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತದೆ. ಇಂತಹ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಅಪಘಾತ ಪರಿಹಾರ ಸೌಲಭ್ಯ ಒದಗಿಸುವ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರವು ‘ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ’’ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು 2012 ರಲ್ಲಿ ಜಾರಿಗೆ ತಂದಿದೆ. ಈ ಯೋಜನೆಯಡಿ ದೊರಕುವ ಸೌಲಭ್ಯಗಳು ಇಂತಿವೆ. ಅಪಘಾತ ಪರಿಹಾರ ಯೋಜನೆಯ ವಿಶೇಷತೆಗಳು. ಈ ಯೋಜನೆಯು ಕರ್ನಾಟಕ ರಾಜ್ಯಕ್ಕೆ ಮಾತ್ರ ಅನ್ವಯಿಸುತ್ತದೆ. ಯೋಜನೆಯು…

Read More