ಲೇಖಕ: admin

ಚೆಟ್ಟಳ್ಳಿ ಅ.11 : ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ಕೈಲ್‍ಪೊಳ್ದ್ ಸಂತೋಷಕೂಟ ಹಾಗೂ ಕೊಡವ ಸಮಾಜದ ವಾರ್ಷಿಕಮಹಾ ಸಭೆ ನಡೆಯಿತು. ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ನಡೆದ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ ಮಾತನಾಡಿ, ಚೆಟ್ಟಳ್ಳಿಯ ಜೋಮಾಲೆ ಪೊಮ್ಮಕ್ಕಡ ಕೂಟದ ಮುತುವರ್ಜಿಯ ಫಲವಾಗಿ ಚೆಟ್ಟಳ್ಳಿ ಕೊಡವ ಸಮಾಜ ಸ್ಥಾಪನೆಯಾಯಿತು. ಕೊಡವ ಜನಾಂಗದ ಆಚಾರ ವಿಚಾರ ಒಗ್ಗಟು ಒತ್ರ್ತೊಮೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಡವ ಸಮಾಜ ಶ್ರಮಿಸಲಿದೆ ಎಂದರು. ಎಲ್ಲರ ಸಹಕಾರ ಇದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮೃತಪಟ್ಟ ಸಂಘದ ಸದಸ್ಯ ಬಲ್ಲಾರಂಡ ಕಾಳಪ್ಪ ರವಿ ಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಕಳೆದ ವರ್ಷದ ಮಹಾಸಭೆಯ ವರದಿ ಹಾಗೂ ಆಡಳಿತ ಮಂಡಳಿ ವರದಿಯನ್ನು ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ವಾಚಿಸಿದರು. ಲೆಕ್ಕಪತ್ರವನ್ನು ಖಜಾಂಜಿ ಪುತ್ತರಿರ ಗಂಗು ಅಚ್ಚಯ್ಯ ಮಂಡಿಸಿದರು. ಸಭೆಯಲ್ಲಿ ಸಮಾಜದ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು. ಪಳಗಂಡ ಗೀತಾ ಸುಬ್ಬಯ್ಯ ಪ್ರಾರ್ಥಿಸಿ, ಜಂಟಿ ಕಾರ್ಯದರ್ಶಿ ಮುಳ್ಳಂಡ…

Read More

ಮಡಿಕೇರಿ ಅ.11 : ಕುಶಾಲನಗರದ ಕೋಣಮಾರಿಯಮ್ಮ ದೇವಸ್ಥಾನದ ಬಳಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕುಶಾಲನಗರದ ನಿವಾಸಿ ಯತೀಶ್.ಎ.ಎಂ ಬಂಧಿತ ಆರೋಪಿಯಾಗಿದ್ದು, ಈತನ ಬಳಿಯಿಂದ 600 ಗ್ರಾಂ ಬೆಳ್ಳಿ ಮತ್ತು 40 ಸಾವಿರ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕೋಣಮಾರಿಯಮ್ಮ ದೇವಸ್ಥಾನದ ಬಳಿಯ ನಿವಾಸಿ ಸತೀಶ್ ಕುಮಾರ್ ಎಂಬುವವರ ಮನೆಯಲ್ಲಿ ಜೂ.24 ರಂದು ಕಳ್ಳತನ ನಡೆದಿತ್ತು. ಸೋಮವಾರಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್.ಎ.ಗಂಗಾಧರಪ್ಪ, ಕುಶಾಲನಗರ ಸಿಪಿಐ ರಾಜೇಶ್.ಕೆ, ಪಿಎಸ್‌ಐ ಹೆಚ್.ವಿ.ಚಂದ್ರಶೇಖರ್, ನಗರ ಪಿಎಸ್‌ಐ ಹೆಚ್.ಟಿ.ಗೀತಾ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿತು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಾಚರಣೆಯನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಶ್ಲಾಘಿಸಿದ್ದಾರೆ. ::: ಮಾಹಿತಿ ನೀಡಿ ::: ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಮತ್ತು ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ನೀಡುವಂತೆ ಮನವಿ ಮಾಡಿರುವ ಪೊಲೀಸರು ಮಾಹಿತಿ ನೀಡಿದವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲವೆಂದು ತಿಳಿಸಿದ್ದಾರೆ.

Read More

ಮಡಿಕೇರಿ ಅ.11 : ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ ಮಳೆ 26.09 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 1.50 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2089.14 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 3211.28 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 27.05 ಮಿ.ಮೀ. ಕಳೆದ ವರ್ಷ ಇದೇ ದಿನ 0.75 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 3069.83 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 4671.69 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 39.20 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.53 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1641.91 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2481.97 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 12.03 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 3.23…

Read More

ಮಡಿಕೇರಿ ಅ.11:  ನಗರದ  ಶ್ರೀ ಕಾವೇರಿ ಭಕ್ತ ಮಂಡಳಿ ವತಿಯಿಂದ 69ನೇ ವರ್ಷದ ಶ್ರೀ ಕಾವೇರಿ ತೀರ್ಥ ವಿತರಣಾ ರಥಯಾತ್ರೆಯು ಅ.18 ರಂದು ನೇರವೇರಲಿದೆ. ಅಂದು ಬೆಳ್ಳಿಗೆ 7 ಗಂಟೆಗೆ ಮ್ಯಾನ್ಸ್‌ ಕಾಂಪೌಂಡ್‌ ಬಳಿ ಗಣಪತಿ ಹೋಮದೊಂದಿಗೆ ಪ್ರಾರಂಭಗೊಂಡು ಶ್ರೀ ಕಾವೇರಿ ಮಾತೆಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯಗಳು ಜರುಗಲಿದೆ.  12 ಗಂಟೆಗೆ ಅನ್ನದಾನದ ನಂತರ ಮಧ್ಯಾಹ್ನ ಶ್ರೀ ಕಾವೇರಿ ತೀರ್ಥ ವಿತರಣಾ ರಥಯಾತ್ರೆಯು ಮ್ಯಾನ್ಸ್‌ ಕಾಂಪೌಂಡ್‌ ಬಳಿಯಿಂದ ಹೊರಟು ಜೂನಿಯರ್‌ ಕಾಲೇಜು ಮಾರ್ಗವಾಗಿ ಓಂಕಾರೇಶ್ವರ ದೇವಾಲಯ, ಜನರಲ್‌ ತಿಮ್ಮಯ್ಯ ವೃತ್ತ, ಶಾಂತಿನಿಕೇತನ, ಮರಳಿ ಜನರಲ್‌ ತಿಮ್ಮಯ್ಯ ವೃತ್ತ, ಗೌಳಿಬೀದಿ, ಕೋಹಿನೂರು ರಸ್ತೆ, ಎಸ್.ಬಿ.ಐ, ಪೇಟೆ ಶ್ರೀ ರಾಮ ಮಂದಿರ, ಚೌಕಿ, ಗಣಪತಿ ಬೀದಿ, ಬನ್ನಿ ಮಂಟಪ, ಮಹದೇವಪೇಟೆ, ಚೌಕಿ, ಸ್ಕ್ವಾಡರ್ನ್‌ ಲೀಡರ್‌ ಅಜ್ಜಮಾಡ ದೇವಯ್ಯ ವೃತ್ತ, ಜೂನಿಯರ್‌ ಕಾಲೇಜು ಮಾರ್ಗವಾಗಿ ಮ್ಯಾನ್ಸ್‌ ಕಾಂಪೌಂಡ್‌ ಬಳಿ ಸಂಪನ್ನಗೊಳ್ಳಲಿದೆ. ಶ್ರೀ ಕಾವೇರಿ ತೀರ್ಥ ವಿತರಣಾ ರಥಯಾತ್ರೆ ಉತ್ಸವದಲ್ಲಿ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ…

Read More

ಮಡಿಕೇರಿ ಅ.11 : ಶ್ರೀಮಂಗಲ ವಿದ್ಯಾಸಂಸ್ಥೆಯ 2023-24ನೇ ಸಾಲಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಬೋಡಂಗಡ ಎಂ ಅಯ್ಯಪ್ಪ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಚಟ್ಟಂಗಡ ರವಿ ಸುಬ್ಬಯ್ಯ, ಕಾರ್ಯದರ್ಶಿಯಾಗಿ ಕಾಳಿಮಾಡ ಪದ್ಮ ಬೆಳ್ಳಿಯಪ್ಪ, ಖಜಾಂಚಿಯಾಗಿ ಎಸ್.ಎಂ.ವಿನಯ್ ನೇಮಗೊಂಡಿದ್ದಾರೆ. ನಿರ್ದೇಶಕರುಗಳಾಗಿ ಅಜ್ಜಮಾಡ ಸಾವಿತ್ರಿ, ಚೆಟ್ಟಂಗಡ ಕಂಬ ಕಾರ್ಯಪ್ಪ, ಅಣ್ಣಾಳಮಾಡ ನರೇಂದ್ರ, ಅಯ್ಯಮಾಡ ಉದಯ, ಚಿಮ್ಮಂಗಡ ಗಣಪತಿ, ತಡಿಯಂಗಡ ಎಂ ಜಯರಾಜ್ ಮತ್ತು ಬಾಚಂಗಡ ಕಾರ್ಯಪ್ಪ ಆಯ್ಕೆಯಾಗಿದ್ದಾರೆ.

Read More

ನಾಪೋಕ್ಲು ಅ.11 : ಸೂಕ್ತ ಸಮಯದಲ್ಲಿ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಇಲ್ಲದೇ ಹೋದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗುತ್ತೇವೆ ಎಂದು ಕಾಟಕೇರಿಯ ಹರ್ ಮಂದಿರ್ ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಹೇಳಿದರು. ಕಾಟಕೇರಿಯ ಹರ್ ಮಂದಿರ್ ಶಾಲೆಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂದಿನ ಮಕ್ಕಳೇ ಮುಂದಿನ ಉತ್ತಮ ಸಮಾಜ ನಿರ್ಮಾಣದ ಶಿಲ್ಪಿಗಳು. ಹಾಗಾಗಿ ಮಕ್ಕಳು ಆರೋಗ್ಯದ ಮಹತ್ವವನ್ನು ತಿಳಿದುಕೊಂಡು ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯಕ ಎಂದರು. ಜಾಗತಿಕ ಮಟ್ಟದಲ್ಲಿ ಪ್ರತಿ ಆರರಲ್ಲಿ ಒಬ್ಬ ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಗಾಗಿರುತ್ತಾರೆ. ನಾವು ನಮ್ಮ ಮನಸ್ಸನ್ನು ಧನಾತ್ಮಕವಾಗಿ ಇಟ್ಟುಕೊಳ್ಳಬೇಕು .ಇದಕ್ಕಾಗಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವನೆ, ವ್ಯಾಯಾಮ, ಧನಾತ್ಮಕ ಮಾತುಗಳು ಹಾಗೂ ಉತ್ತಮ ಹವ್ಯಾಸಗಳು ನಮ್ಮನ್ನು ಯೋಗ್ಯ ವ್ಯಕ್ತಿಯನ್ನಾಗಿ ಮಾಡುತ್ತವೆ ಎಂದರು. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ ಮಕ್ಕಳಲ್ಲಿ ದೈಹಿಕ ತೊಂದರೆಗಳಿದ್ದರೆ ವೈದ್ಯರನ್ನು…

Read More

ಮಡಿಕೇರಿ ಅ.11 :  ವಿರಾಜಪೇಟೆಯ ಕೆದಮುಳ್ಳೂರು ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ  ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಪಿಂಚಣಿ ಆದೇಶ ಪ್ರತಿ  ವಿತರಿಸಿದರು. ಕಂದಾಯ ಇಲಾಖೆ ವತಿಯಿಂದ  12 ಫಲಾನುಭವಿಗಳಿಗೆ 94 ಸಿ ರಡಿ ಹಕ್ಕುಪತ್ರ ಮತ್ತು 30 ಫಲಾನುಭವಿಗಳಿಗೆ ಪಿಂಚಣಿ ಆದೇಶ ಪ್ರತಿ ವಿತರಿಸಲಾಯಿತು.

Read More

ಮಡಿಕೇರಿ ಅ.11 : ಮಡಿಲು ಸರ್ಕಾರಿ ವಿಶೇಷ ದತ್ತು ಸಂಸ್ಥೆ, ನೆಹರು ಯುವ ಕೇಂದ್ರ ಮುಂಭಾಗ, ಕಾವೇರಿ ಲೇ-ಔಟ್, ಮಡಿಕೇರಿ ಈ ಸಂಸ್ಥೆಯು 0 ಯಿಂದ 6 ವರ್ಷದವರೆಗಿನ ಒಪ್ಪಿಸಲ್ಪಟ್ಟ ಹಾಗೂ ಪೋಷಣೆ ಮತ್ತು ರಕ್ಷಣೆಗೆ ಒಳಪಟ್ಟ ಮಕ್ಕಳು ಇರುವ ಸಂಸ್ಥೆ ಆಗಿರುತ್ತದೆ. ಈ ಸಂಸ್ಥೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು 3 ಜನ ಆಯಗಳು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ.ಸಂ. 08272-200450 ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿಯ ಮಡಿಲು ಸರ್ಕಾರಿ ದತ್ತು ಸಂಸ್ಥೆಯ ಅಧೀಕ್ಷಕರು ತಿಳಿಸಿದ್ದಾರೆ.

Read More

ಮಡಿಕೇರಿ ಅ.11 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ವಿಭಾಗ ವತಿಯಿಂದ ಶಿಶಿಕ್ಷು ಅಧಿನಿಯಮ 1961 ರನ್ವಯ ಪೂರ್ಣ ಅವಧಿಯ ತಾಂತ್ರಿಕ ವೃತ್ತಿಯಲ್ಲಿ ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳಿಂದ ಸಂದರ್ಶನಕ್ಕಾಗಿ ಅರ್ಜಿ ಸಲ್ಲಿಸಲು ನವೆಂಬರ್, 4 ಕೊನೆಯ ದಿನವಾಗಿದೆ. ಐಟಿಐ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ನಿಯೋಜನೆಗೆ ಬಾಕಿ ಇರುವ ಖಾಲಿ ಸ್ಥಾನಗಳ ವಿವರ ಇಂತಿದೆ. ಮೆಕ್ಯಾನಿಕ್ ಡೀಸೆಲ್ (40 ಸ್ಥಾನ), ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ (10 ಸ್ಥಾನ), ಎಲೆಕ್ಟ್ರೀಷಿಯನ್(18 ಸ್ಥಾನ), ಮೋಟಾರ್ ಮೆಕ್ಯಾನಿಕ್ ವೆಹಿಕಲ್ (19 ಸ್ಥಾನ), ವೆಲ್ಡರ್(5 ಸ್ಥಾನ), ಫಿಟ್ಟರ್ (5 ಸ್ಥಾನ), ಪಾಸಾ(10 ಸ್ಥಾನ). ತರಬೇತಿ ಅವಧಿ ಒಂದು ವರ್ಷ ಆಗಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ನಿಯೋಜನೆಗೆ ಬಾಕಿ ಇರುವ ಖಾಲಿ ಸ್ಥಾನಗಳ ವಿವರ: ಮೆಕ್ಯಾನಿಕ್ ಡೀಸೆಲ್ ಒಟ್ಟು 29 ಸ್ಥಾನ. ತರಬೇತಿ 2 ವರ್ಷ ಆಗಿರುತ್ತದೆ. ಅರ್ಜಿಯನ್ನು ಆಯೋಗದ ಅಂತರ್ಜಾಲ www.apprenticeshippindia.org  ಮೂಲಕ ನೋಂದಣಿ ಮಾಡುವುದು ಹಾಗೂ ನೋಂದಣಿ…

Read More

ಮಡಿಕೇರಿ ಅ.10 : ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್ ಅವರು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ನಗರಸಭಾ ಪೌರಾಯುಕ್ತರ ಮೇಲೆ ಹಲ್ಲೆಗೆ ಯತ್ನ ಆರೋಪದ ಹಿನ್ನೆಲೆಯಲ್ಲಿ ಪೌರ ಸೇವಾ ನೌಕರರ ಸೇವಾ ಸಂಘದಿಂದ ಕರ್ತವ್ಯಕ್ಕೆ ಹಾಜರಾಗದೆ ನಗರಸಭಾ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಸರ್ಕಾರದ ಅಧೀನ ಕಾರ್ಯದರ್ಶಿಗಳೊಂದಿಗೆ ಸೋಮವಾರ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದ ಸಂದರ್ಭ ಕಚೇರಿ ಪ್ರವೇಶಿಸಿದ ಸತೀಶ್ ಅವರು, ಫಾರಂ ನಂಬರ್ 3 ವಿಚಾರದಲ್ಲಿ ಪೌರಾಯುಕ್ತರೊಂದಿಗೆ ಕಲಹ ನಡೆಸಿದ್ದಾರೆ. ಅಲ್ಲದೆ ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸಿಬ್ಬಂದಿಗಳಿಗೆ ಮಾನಸಿಕ ಕಿರುಕುಳ ನೀಡಬಾರದು, ಶಿಸ್ತನ್ನು ಪಾಲಿಸಬೇಕು, ಸೌಜನ್ಯದಿಂದ ವರ್ತಿಸಬೇಕು, ಸತೀಶ್ ಅವರ ನಗರಸಭಾ ಸದಸ್ಯತ್ವ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ನಗರಸಭಾ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ನಿರತರಾದ ಕಾರಣ ಕಚೇರಿಗೆ ಬಂದ ಸಾರ್ವಜನಿಕರು ಅರ್ಜಿಗಳು ವಿಲೇವಾರಿಯಾಗದೆ ಮರಳಿದರು. ನಿತ್ಯ ನಗರಸಭೆಯಲ್ಲಿ ಒಂದಲ್ಲ ಒಂದು ಗೊಂದಲ, ಶೀತಲ…

Read More