ಮಡಿಕೇರಿ ಅ.10 : ಪೊನ್ನಂಪೇಟೆಯ ಕೂರ್ಗ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಐಟಿ) ತಾಂತ್ರಿಕ ಶಿಕ್ಷಣ ಸಂಸ್ಥೆ ಮುಂದಿನ ಸಾಲಿಗೆ 25 ವರ್ಷಗಳ ಸಾರ್ಥಕ ಸೇವೆಯನ್ನು ಪೂರ್ಣಗೊಳಿಸಿ ‘ಬೆಳ್ಳಿ ಮಹೋತ್ಸವ’ಕ್ಕೆ ಪಾದಾರ್ಪಣೆ ಮಾಡಲಿದ್ದು, ಈ ಹಿನ್ನೆಲೆ ನ.3 ರಿಂದ 5ರವರೆಗೆ ಸಿಐಟಿಯಲ್ಲಿ ರಾಜ್ಯ ಮಟ್ಟದ ‘ಕೃಷಿ ಯಂತ್ರ ಮೇಳ-2023’ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಕೊಡವ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಡಾ. ಮುಕ್ಕಾಟಿರ ಕಾರ್ಯಪ್ಪ ಮಾತನಾಡಿ, 1999 ರಲ್ಲಿ ಆರಂಭಗೊಂಡ ಸಿಐಟಿ ಸಂಸ್ಥೆ ಸ್ಥಳೀಯ ವಿದ್ಯಾರ್ಥಿಗಳಿಗೆ ಸುಲಭವಾಗಿ ತಾಂತ್ರಿಕ ಶಿಕ್ಷಣ ದೊರಕುವಂತೆ ಮಾಡಿದೆ. ಸಂಸ್ಥೆಯ ಬೆಳ್ಳಿ ಮಹೋತ್ಸವದ ಹಿನ್ನೆಲೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಾಗಿ ತಿಳಿಸಿದರು. ಕಾಲೇಜಿನ ಉಪನ್ಯಾಸಕರಾದ ಡಾ. ರಾಮಕೃಷ್ಣ ಮಾತನಾಡಿ, ‘ಕೃಷಿ ದೇವೋಭವ’ ಘೋಷ ವಾಕ್ಯದಡಿ ಕೃಷಿ ಮೇಳ ಆಯೋಜಿತವಾಗುತ್ತಿದೆ. ಮೇಳದಲ್ಲಿ ಕೃಷಿಗೆ ಪೂರಕವಾದ ಯಂತ್ರಗಳು, ಪಂಪ್‍ಸೆಟ್ ಹೀಗೆ ಕೃಷಿಗೆ ಉಪಯುಕ್ತವಾದ ಯಂತ್ರೋಪಕರಣಗಳ 150 ರಿಂದ 200 ಮಳಿಗೆಗಳು ಪ್ರದರ್ಶಿಸಲ್ಪಡಲಿದೆ. ಈ ಮೇಳದ ಮೂಲಕ ಜಿಲ್ಲೆಯ ಕೃಷಿಕ ಬಂಧುಗಳು ಮಾರುಕಟ್ಟೆ ದರಕ್ಕಿಂತಲೂ ಕಡಿಮೆಯ ದರಕ್ಕೆ…
ಲೇಖಕ: admin
ಮಡಿಕೇರಿ ಅ.10 : ಜಾಗತಿಕವಾಗಿ ಭಾರತೀಯ ಕಾಫಿಗೆ ಬೇಡಿಕೆ ಮತ್ತು ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ದಕ್ಷಿಣ ಭಾರತ ಬೆಳೆಗಾರರ ಒಕ್ಕೂಟ (ಉಪಾಸಿ) ವಿವಿಧ ಕಾಫಿ ಸಂಸ್ಥೆಗಳ ಸಹಕಾರದಲ್ಲಿ ಇಂಡಿಯನ್ ಕಾಫಿ ಬ್ರಾಂಡ್ ರೂಪಿಸುವ ನಿಟ್ಟಿನಲ್ಲಿ ಮುಂದಾಗಿದೆ ಎಂದು ಉಪಾಸಿಯ ಅಧ್ಯಕ್ಷ ಸಿ.ಶ್ರೀಧರನ್ ಹೇಳಿದ್ದಾರೆ. ನಗರದಲ್ಲಿ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ನ 144ನೇ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಧರನ್, ಈಗಾಗಲೇ ವಿಶ್ವದ ಪ್ರಮುಖ ಕಾಫಿ ಕೆಫೆ ಸಂಸ್ಥೆಗಳು ಭಾರತದಲ್ಲಿ ಕೆಫೆ ಪ್ರಾರಂಭಿಸುತ್ತಿವೆ. ಕಾಫಿ ಜಗತ್ತಿನಲ್ಲಿ ಭಾರತದ ಕಾಫಿಯೂ ಗುರುತಿಸಲ್ಪಡುತ್ತಿದೆ. ಬೆಂಗಳೂರಿನಲ್ಲಿ ಕಳೆದ ತಿಂಗಳು ಆಯೋಜಿತ ವಿಶ್ವಕಾಫಿ ಸಮ್ಮೇಳನ ಕೂಡ ಜಾಗತಿಕವಾಗಿ ಭಾರತೀಯ ಕಾಫಿಗೆ ಒಳ್ಳೆಯ ಪ್ರಚಾರ ದೊರಕುವಂತೆ ಮಾಡಿದೆ. ಉಪಾಸಿ ಸಂಸ್ಥೆಯು ಇದೀಗ ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಇಂಡಿಯನ್ ಕಾಫಿ ಎಂಬ ಬ್ರಾಂಡ್ ಮೂಲಕ ಭಾರತೀಯ ಕಾಫಿಗೆ ಜಾಗತಿಕ ಬೇಡಿಕೆ ಮತ್ತು ಮಾನ್ಯತೆ ದೊರಕಿಸಲು ಪ್ರಯತ್ನಿಸುತ್ತಿದೆ ಎಂದರು. ಭಾರತದಲ್ಲಿ ಟೀ ಬೆಳೆಗೆ ಹೆಚ್ಚು ಅವಕಾಶಗಳಿದ್ದರೂ ವೈವಿಧ್ಯಮಯ…
ಮಡಿಕೇರಿ ಅ.11 : ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನಗರದ ಬೆಳ್ಯಪ್ಪ ಸ್ಮಾರಕ ಸಭಾಭವನದಲ್ಲಿ ಸಮಾಜದ ನೂತನ ಕಾರ್ಯಕಾರಿ ಮಂಡಳಿಯನ್ನು ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ.ಕುಶಾಲಪ್ಪ, ಸ್ಥಾಪಕಾಧ್ಯಕ್ಷರಾಗಿ ಮುತ್ತಮ್ಮ ಕೋಟಿ, ಗೌರವಾಧ್ಯಕ್ಷರಾಗಿ ಎಮ್.ಡಿ.ನಾಣಯ್ಯ, ಉಪಾಧ್ಯಕ್ಷರಾಗಿ ಲಯನ್ ದಾಮೋದರ್, ಕಾರ್ಯದರ್ಶಿಯಾಗಿ ಅರುಣ್, ಖಜಾಂಚಿಯಾಗಿ ಗಿರೀಶ್ ಮಡಿಕೆಬೀಡು ಆಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರಾಗಿ ದಿನೇಶ್ ಐಗೂರು, ಅಶ್ವತ್ ಮಡಿಕೆಬೀಡು, ಸುರೇಶ್ ಮಡಿಕೇರಿ, ಅಪ್ಪಾಜಿ, ಪುರುಷೋತ್ತಮ್, ಅಚ್ಚು ಐಗೂರು, ಕೆ.ವೈ.ವಿಠಲ, ಕಾಂತಿಮಣಿ ಮಡಿಕೇರಿ, ಸರಸ್ವತಿ ನೇಮಕಗೊಂಡರು. ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ನಂತರ ಮಾತನಾಡಿದ ಗೌರವ ಅಧ್ಯಕ್ಷ ಎಂ.ಡಿ.ನಾಣಯ್ಯ, ಸಂಘಟನೆ ಬಲಿಷ್ಠವಾದಾಗ ಮಾತ್ರ ಆ ಸಮಾಜವು ಅಭಿವೃದ್ಧಿ ಹೊಂದುತ್ತದೆ. ಅದರಂತೆ ಸಮುದಾಯ ಎಲ್ಲರೂ ಜೊತೆಗೂಡಿ ನಡೆಯಬೇಕು ಎಂದರು. ಮುಂದಿನ ದಿನಗಳಲ್ಲಿ ನೂತನ ಸಮತಿಯು ಹೆಚ್ಚು ಕಾರ್ಯಪ್ರವೃತ್ತವಾಗಿ ಕೆಲಸ ಮಾಡಲಿ ಎಂದು ಶುಭಹಾರೈಸಿದರು. ವ್ಯಾಂಡಮ್ ಎಂಟಪ್ರೈಸಸ್‍ನ ಮಾಲೀಕ ಲಯನ್ ದಾಮೋದರ್ ಎಲ್ಲರೂ ಒಗ್ಗೂಡಿದಾಗ ಮಾತ್ರ ಸಮಾಜದ ಬೆಳವಣಿಗೆ ಸಾಧ್ಯ. ಸಮಾಜದ ಕಟ್ಟ…
ಮಡಿಕೇರಿ ಅ.10 : ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 3000 ಮೀ ಓಟದ ಸ್ಪರ್ಧೆಯಲ್ಲಿ ಮೂರ್ನಾಡು ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಮಹಮ್ಮದ್ ಸಾಬಿತ್ ಪಿ.ಎನ್ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈತ ನಾಸಿರ್ ಪಿ.ಎಸ್ ಹಾಗೂ ತಾಹಿರ ದಂಪತಿಯ ಪುತ್ರ.
ಮಡಿಕೇರಿ ಅ.10 : ಮೈಸೂರು ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಡಾ. ಬಿ.ಜೆ.ವಿಜಯ ಕುಮಾರ್ ಮಡಿಕೇರಿ ಮತಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರನ್ನು ಕುಶಾಲನಗರದಲ್ಲಿ ಭೇಟಿ ಮಾಡಿ, ಪಕ್ಷ ಸಂಘಟನೆ, ಕ್ಷೇತ್ರದ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶಾಸಕರನ್ನು ಅಭಿನಂದಿಸಿ, ಸನ್ಮಾನಿಸಿ ಶುಭ ಆರೈಸಿದರು. ಮೈಸೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಶಿವಪ್ರಸಾದ್, ಪ್ರಮುಖರಾದ ಪದ್ಮನಾಭ ದಾಸನೂರು, ಸಂತೋಷ್ ಮೊಳೆಯೂರು ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ನ ಪ್ರಮುಖರು ಹಾಜರಿದ್ದರು.
ಮಡಿಕೇರಿ ಅ.10 : ಮಡಿಕೇರಿಯಲ್ಲಿ ನಡೆದ 200 ಮೀಟರ್ ಓಟದ ಸ್ಪರ್ಧೆಯಲ್ಲಿ ದಿಗಂತ್ ರೈ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ನಗರದ ಸಂತ ಜೋಸೆಫರ ಶಾಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ದಿಗಂತ್ ರೈ, ಶಾಲೆಯ ದೈಹಿಕ ಶಿಕ್ಷಕಿ ಪ್ರಮೀಳಾ ಅವರ ಮಾರ್ಗ ದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವನು ಮಡಿಕೇರಿಯ ಅನಿಲ್ ರೈ ಹಾಗೂ ಸೋನಿ ರೈ ದಂಪತಿಗಳ ಪುತ್ರ.
ಮಡಿಕೇರಿ ಅ.10 : ಇಸ್ರೇಲ್ ಹಾಗೂ ಪ್ಯಾಲಸ್ರೈನ್ ದೇಶಗಳ ನಡುವೆ ಯುದ್ಧ ನಡೆಯುತ್ತಿದ್ದು, ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ. ಕರ್ನಾಟಕದ ಹಲವರು ಸಿಲುಕಿಕೊಂಡಿರುವ ಮಾಹಿತಿಯಿದೆ. ಕೊಡಗು ಜಿಲ್ಲೆಯ ಯಾರಾದರೂ ಇಸ್ರೇಲ್ ದೇಶದಲ್ಲಿ ಸಿಲುಕಿದ್ದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಟಣೆಯಲ್ಲಿ ತಿಳಿಸಿದೆ. ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ : 08272-221077, 1077 08272-221099 ವಾಟ್ಸಾಪ್ ಸಂಖ್ಯೆ : 8550001077
ಮಡಿಕೇರಿ ಅ.10 : ಕೆದಮಳ್ಳೂರು- ಕಡಂಗ ಕ್ರಿಶ್ಚಿಯನ್ ಕಾಲೋನಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ಗ್ರಾ.ಪಂ ಸದಸ್ಯರು, ಪಕ್ಷದ ಪ್ರಮುಖರು ಹಾಜರಿದ್ದರು.
ನಾಪೋಕ್ಲು ಅ.10 : ಸಿಡಿಲು ಬಡಿದು ಮನೆಯ ವಿದ್ಯುತ್ ಮೀಟರ್ ಬೋರ್ಡು ಗೆ ಹಾನಿಯಾಗಿರುವ ಘಟನೆ ಅಜ್ಜಿಮುಟ್ಟ ಗ್ರಾಮದಲ್ಲಿ ನಡೆದಿದೆ. ನಾಪೋಕ್ಲು ವ್ಯಾಪ್ತಿಯಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಈ ಸಂದರ್ಭ ಅಜ್ಜಿಮುಟ್ಟ ನಿವಾಸಿ ಶಿವಪ್ಪ ಪೂಜಾರಿ ಎಂಬವರ ಮನೆ ಸಮೀಪದ ಕರೆಂಟ್ ಕಂಬಕ್ಕೆ ಇಡಿಲು ಬಡಿದ ಕಾರಣ ಕಂಬ ಹಾಗೂ ಮೀಟರ್ ಬೋರ್ಡ್ ಸುಟ್ಟು ಹೋಗಿ ನಷ್ಟ ಸಂಭವಿಸಿದೆ. ಸಿಡಿಲಿನ ರಭಸಕ್ಕೆ ಶಿವಪ್ಪನವರ ಮನೆ ಸಮೀಪದ ಅಂತೋನಿ ಎಂಬವರ ಮನೆಗೆ ಅಲಾವಡಿಸಿದ್ದ ಇನ್ವರ್ಟರ್ ಕೂಡ ಸುಟ್ಟು ಹೋಗಿದೆ. ಅವಘಡದಿಂದಾಗಿ ಬಹುತೇಕ ಮನಗಳಿಗೆ ಕರೆಂಟ್ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವರದಿ : ದುಗ್ಗಳ ಸದಾನಂದ
ನಾಪೋಕ್ಲು ಅ.10 : ಸಮುದಾಯ ಜೊತೆಯಲ್ಲಿದ್ದಾಗ ಸಮಾಜದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹೇಳಿದರು. ನೆಲಜಿ ಅಂಬಲ ಮಹಿಳಾ ಸಮಾಜದ ವತಿಯಿಂದ ನೆಲಜಿ ಅಂಬಲ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಮೂರನೇ ವರ್ಷದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾಜದಲ್ಲಿ ಇಂದು ಯುವಕರು ತಪ್ಪು ದಾರಿ ಹಿಡಿಯುತ್ತಿದ್ದಾರೆ.ಯುವ ಜನರ ತಪ್ಪುಗಳನ್ನು ಪತ್ತೆ ಹಚ್ಚಿ ತಿದ್ದುವ ಕೆಲಸವನ್ನು ಹಿರಿಯರು ಮಾಡಬೇಕು ಎಂದ ಅವರು ಸಮುದಾಯದಲ್ಲಿ ಆಯೋಜಿಸಲಾಗುವ ಕ್ರೀಡಾಕೂಟಗಳು ಸಾಮರಸ್ಯವನ್ನು ಬೆಸೆಯುತ್ತವೆ. ಸೋಲು ಗೆಲುವು ಜೀವನದ ಭಾಗ. ಒಮ್ಮೆ ಗೆದ್ದವರು ಮತ್ತೊಮ್ಮೆ ಸೋಲಬಹುದು. ಸಾರ್ವಜನಿಕ ಸೇವೆಯಲ್ಲಿಯೂ ಏಳು ಬೀಳುಗಳು ಸಾಮಾನ್ಯ. ಶಾಸಕನಾಗಿ ನಾನು ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದರು. ಸರ್ಕಾರ ರೈತರಿಗೆ 3 ಲಕ್ಷದಿಂದ ಐದು ಲಕ್ಷ ರೂಪಾಯಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ವಿತರಿಸುತ್ತಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸೂಕ್ತ ರೀತಿಯಲ್ಲಿ…






