ಲೇಖಕ: admin

ನಾಪೋಕ್ಲು ಅ.10 : ಜಿಲ್ಲಾ ಮಟ್ಟದ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದ ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ನಾಪೋಕ್ಲುವಿನ ಸೇಕ್ರೆಟ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಎಂ.ಬಿ ರಿಯಾಶರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾಡಳಿತ ,ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದ ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗೆ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬದ0ಜೆಟ್ಟಿರ ಗಪ್ಪಣ್ಣ ಹಾಗೂ ಶಿಕ್ಷಕ ವೃಂದ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ್ದರು. ವರದಿ : ದುಗ್ಗಳ ಸದಾನಂದ

Read More

ಮಡಿಕೇರಿ ಅ.10 : ಅಡುಗೆ ಅನಿಲ ಸೋರಿಕೆಯಿಂದ ಉಂಟಾದ ಬೆಂಕಿ ಅವಘಡದಲ್ಲಿ ಮೃತಪಟ್ಟ ಜೀವನದಾರಿ ಆಶ್ರಮದ ಸ್ಥಾಪಕ ರಮೇಶ್ ಅವರ ಪತ್ನಿ ರೂಪಾ (38) ಇಂದು ನಿಧನರಾಗಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ನಾಲ್ಕು ದಿನಗಳ ಕಾಲ ಚಿಂತಾಜನಕ ಸ್ಥಿತಿಯಲ್ಲಿದ್ದ ರೂಪಾ ಚಿಕಿತ್ಸೆ ಫಲಕಾರಿ ಆಗದೆ ಸೋಮವಾರ ನಡು ರಾತ್ರಿ ಕೊನೆಯುಸಿರು ಎಳೆದಿದ್ದಾರೆ. ಮೃತರು ಮೂವರು ಪುತ್ರಿಯರನ್ನು ಅಗಲಿದ್ದು, ಇಂದು ಮಡಿಕೇರಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

Read More

ನಾಪೋಕ್ಲು ಅ.10 : ಕಳೆದ 25 ವರ್ಷಗಳಿಂದ ಬಹಳ ಅರ್ಥಪೂರ್ಣವಾಗಿ ಬೆಂಗಳೂರಿನಲ್ಲಿ ಬಾಳೆಯಡ ಕುಟುಂಬಸ್ಥರು ಸಂತೋಷ ಕೂಟವನ್ನು ನಡೆಸಿಕೊಂಡು ಬರುತ್ತಿದ್ದು, ಪ್ರತಿಯೊಬ್ಬರ ಕಷ್ಟ ಸುಖಕ್ಕೂ ಭಾಗಿಯಾಗುತ್ತಿದ್ದೇವೆ.ಇದೀಗ 25ನೇ ವರ್ಷಕ್ಕೆ ಕಾಲಿಟ್ಟಿದ್ದು ಕುಟುಂಬದವರ ಒಗ್ಗಟ್ಟು ಹೀಗೆ ಇರಲಿ ಎಂದು ಕಾರ್ಯದರ್ಶಿ ರವಿ ಉತ್ತಯ್ಯ ಹೇಳಿದರು. ಬೆಂಗಳೂರಿನ ಇಂಟರ್ ನ್ಯಾಷನಲ್ ಏರ್ ರ್ಪೋರ್ಟ್ ರೋಡಿನ ಗೋಲ್ಡನ್ ಫಿಂಚ್ ರೆಸ್ಟೋರೆಂಟ್ ನಲ್ಲಿ ಬಾಳೆಯಡ ಕುಟುಂಬದ 25ನೇ ವರ್ಷದ ಸಂತೋಷಕೂಟದಲ್ಲಿ ಅವರು ಮಾತನಾಡಿದರು. ಕುಟುಂಬದ ಹಿರಿಯರಾದ ಬಾಳೆಯಡ ಶೀಲಾ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಮೊದಲಿಗೆ ಶ್ರೀ ಕಾವೇರಿ ಮಾತೆಯ ನೆನೆದು ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯರಾದ ಶೀಲಾ ಸೇರಿದಂತೆ ಒಲಿಂಪಿಯನ್ ಕರ್ನಲ್ ಬಾಳೆಯಡ ಸುಬ್ರಮಣಿ, ಅಂತಾರಾಷ್ಟ್ರೀಯ ಹಾಕಿ ಆಟಗಾರ ಸುಮನ್ ಪೂಣಚ್ಚ, ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಂತಹ ಕರುಣ್ ಕಾಳಪ್ಪ ಅವರು ಕುಟುಂಬದಲ್ಲಿ ಪಿ ಹೆಚ್ ಡಿ, ವಕೀಲ ವೃತ್ತಿ, ಇಂಜಿನಿಯರ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ 60 ಜನರನ್ನು ಸನ್ಮಾನಿಸಲಾಯಿತು. ಬಳಿಕ ಚಿಕ್ಕ ಮಕ್ಕಳಿಂದ…

Read More

ಮಡಿಕೇರಿ ಅ.10 : ಭಾಗಮಂಡಲದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯಗಳಲ್ಲಿ ಅ.17 ರಂದು ರಾತ್ರಿ 1.27 ನಿಮಿಷಕ್ಕೆ (18 ರ ಬೆಳಗ್ಗೆ) “ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ” ಜಾತ್ರೆಯು ಜರುಗಲಿದ್ದು, ಈ ಸಮಯದಲ್ಲಿ ದೇವಾಲಯಕ್ಕೆ ಬರುವ ಭಕ್ತಾದಿಗಳು / ಯಾಥ್ರಾರ್ತಿಗಳು ಶ್ರೀ ಕಾವೇರಿಯ ಪವಿತ್ರ ತೀರ್ಥವನ್ನು ಶೇಖರಿಸಿಕೊಂಡು ಹೋಗಲು ಪ್ಲ್ಯಾಸ್ಟಿಕ್ ಬಿಂದಿಗೆ, ಪ್ಲ್ಯಾಸ್ಟಿಕ್ ಬಾಟಲ್ ಮತ್ತು ಪ್ಲ್ಯಾಸ್ಟಿಕ್ ಕ್ಯಾನ್‍ಗಳನ್ನು ಬಳಕೆ ಮಾಡುತ್ತಿರುತ್ತಾರೆ. ಆದರೆ ಅಧಿಸೂಚಿತ ಸಂಸ್ಥೆಗಳಲ್ಲಿ ನಿಷೇಧಿತ ಪ್ಲ್ಯಾಸ್ಟಿಕ್‍ಗಳನ್ನು ನಿರ್ಬಂಧಿಸುವಂತೆ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಬೆಂಗಳೂರು ಇವರ ಸುತ್ತೋಲೆಯಲ್ಲಿ ಸೂಚಿಸಿರುತ್ತಾರೆ. ಆದ್ದರಿಂದ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳು ಪವಿತ್ರ ತೀರ್ಥವನ್ನು ಶೇಖರಿಸಲು ಪ್ಲ್ಯಾಸ್ಟಿಕ್ ಉತ್ಪನ್ನಗಳನ್ನು ಬಳಸದಂತೆ ನಿರ್ಬಂಧಿಸಲಾಗಿದೆ ಎಂದು ಶ್ರೀಭಗಂಡೇಶ್ವರ-ತಲಕಾವೇರಿ ಮತ್ತು ಸಮೂಹ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.

Read More

ಮಡಿಕೇರಿ ಅ.10 : “ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ’ ಜಾತ್ರೆಯ ಪ್ರಯುಕ್ತ ಶ್ರೀ ಭಗಂಡೇಶ್ವರ ದೇವರ ಸನ್ನಿಧಿಗಳಲ್ಲಿ ಊಧ್ವಾರ್ಚನೆ (ಶುಚಿತ್ವ) ಕಾರ್ಯವು ಅ.12 ರಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿದೆ. ಈ ಸಮಯದಲ್ಲಿ ಸಾರ್ವಜನಿಕ ಭಕ್ತಾದಿಗಳಿಗೆ ದೇವಾಲಯದ ಪ್ರವೇಶ ಹಾಗೂ ಯಾವುದೇ ಸೇವೆಗಳು ಇರುವುದಿಲ್ಲ. ಆದ್ದರಿಂದ ಎಂದಿನಂತೆ ಸಾರ್ವಜನಿಕ ಭಕ್ತಾದಿಗಳು ಸಹಕರಿಸುವಂತೆ ದೇವಾಲಯದ ಆಡಳಿತಾಧಿಕಾರಿಯವರ ಪರವಾಗಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಾರ್ವಜನಿಕ ಭಕ್ತಾದಿಗಳಲ್ಲಿ ಮನವಿ ಮಾಡಿದ್ದಾರೆ.

Read More

ಮಡಿಕೇರಿ ಅ.10 : ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಶನ್ ನ ಕೊಡಗು ಶಾಖೆ ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಠಾನದ ಕುರಿತು ಮಡಿಕೇರಿಯಲ್ಲಿ ಶಿಕ್ಷಣ ತಜ್ಞರ ವಿಶೇಷ ಸಭೆ ನಡೆಯಿತು. ನಗರದ ಕಾವೇರಿ ಹಾಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ನೀತಿಯ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಯಿತು. ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಪಿ.ಸುಬ್ರಮಣ್ಯ ಯಡಿಪಡಿತ್ತಾಯ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯ ಕರಡುನ್ನು ಒಂದು ಬಾರಿಯಾದರು ಓದಲೇಬೇಕು. ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಚಿಂತಾಜನಕ ಸ್ಥಿತಿಯಲ್ಲಿದ್ದು, ವಿದ್ಯಾರ್ಥಿಗಳಿಗೆ ವಾಸ್ತವದ ಸ್ಥಿತಿಗತಿಗಳ ಬಗ್ಗೆ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಪಠ್ಯಪುಸ್ತಕದ ಹೊರತಾಗಿಯೂ ಶಿಕ್ಷಣ ನೀಡುವಂತಾಗಬೇಕು ಎಂದರು. ಜೀವನ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವ ಸಾಮಥ್ರ್ಯ, ಕೌಶಲ್ಯ, ಚಾಕಚಕ್ಯತೆ, ಇಚ್ಛಾಶಕ್ತಿ ಇಲ್ಲದಂತಾಗಿದೆ. ಅಂಕಗಳೇ ಮುಂದಿನ ಗುರಿ ಅಲ್ಲ, ಒಮ್ಮೆ ಗುರಿ ಇಟ್ಟ ನಂತರ ಅದನ್ನು ಬದಲಾಯಿಸಬಾರದು, ಬದಲಾಯಿಸಬೇಕಾದರೆ ತಂತ್ರಗಾರಿಕೆ ಮುಖ್ಯ ಎಂದು ತಿಳಿಸಿದರು. ಪೊನ್ನಂಪೇಟೆ ಸಾಯಿಶಂಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಕೊಡಗು ಅನುದಾನ…

Read More

ಮಡಿಕೇರಿ ಅ.10 : ಕುಶಾಲನಗರ 220/11 ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಎಫ್2 ಕಾವೇರಿ ಇಂಡಸ್ಟ್ರೀಯಲ್ ಏರಿಯಾ ಫೀಢರ್‍ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ಅ.11 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಕೂಡ್ಲೂರು, ಕೂಡುಮಂಗಳೂರು, ಕೂಡಿಗೆ, ಸುಂದರನಗರ, ಚಿಕ್ಕತ್ತೂರು, ದೊಡ್ಡತ್ತೂರು, ಹಳೆಕೂಡಿಗೆ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ. ವಿದ್ಯುತ್ ವ್ಯತ್ಯಯ : ನಗರದ 66/11 ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಎಫ್5 ಜಿ.ಟಿ.ರಸ್ತೆ ಹಾಗೂ ಎಫ್1 ಕೋಟೆ ದಸರಾ ಹಬ್ಬದ ಪ್ರಯುಕ್ತ ತುರ್ತು ನಿರ್ವಹಣೆ ಕಾರ್ಯ ನಿರ್ವಹಿಸಬೇಕಿರುವುದರಿಂದ ಅಕ್ಟೋಬರ್, 11 ರಂದು ಬೆಳಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಪುಟಾಣಿನಗರ, ದೇಚೂರು, ಚೈನ್‍ಗೇಟ್, ಸುದರ್ಶನ ಸರ್ಕಲ್, ಜಿ.ಟಿ.ರಸ್ತೆ, ಅಶೋಕಪುರ, ಪೆಸನ್ಸ್‍ಲೇನ್, ಕೆ.ಎಸ್.ಆರ್.ಟಿ.ಸಿ. ಇಂಡಸ್ಟ್ರಿಯಲ್ ಏರಿಯಾ, ಕಾಲೇಜುರಸ್ತೆ, ಪ್ರಕೃತಿ ಬಡಾವಣೆ…

Read More

ಮಡಿಕೇರಿ ಅ.10 : ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ‘ಗೋಡೆ ಗಡಿಯಾರ’ವನ್ನು ಕೊಡುಗೆಯಾಗಿ ನೀಡಲಾಯಿತು. ಮಡಿಕೇರಿಯ ಮಹೇಶ್ ಎಂಟರ್ ಪ್ರೈಸಸ್‍ನ ಮಾಲೀಕರಾದ ಹರೀಶ್ ಅವರು ರೋಟರಿ ಮಿಸ್ಟಿಹಿಲ್ಸ್ ಮೂಲಕ ನೀಡಿದ ಗೋಡೆ ಗಡಿಯಾರವನ್ನು ಮಿಸ್ಟಿಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿಗೆ ಅವರಿಗೆ ಹಸ್ತಾಂತರಿಸಿದರು. ತಿಮ್ಮಯ್ಯ ಮ್ಯೂಸಿಯಂ ವೀಕ್ಷಣೆಗೆ ಬರುವ ಸಂದರ್ಶಕರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಈ ಗೋಡೆ ಗಡಿಯಾರವನ್ನು ನೀಡುತ್ತಿರುವುದಾಗಿ ದಾನಿಗಳಾದ ಹರೀಶ್ ಹೇಳಿದರು. ಈ ಸಂದರ್ಭ ರೋಟರಿ ಮಿಸ್ಟಿ ಹಿಲ್ಸ್‍ನ ನಿರ್ದೇಶಕರಾದ ಎ.ಕೆ.ವಿನೋದ್, ಅನಿಲ್ ಎಚ್.ಟಿ, ಮಹೇಶ್ ಎಂಟರ್ ಪ್ರೈಸಸ್ ಪಾಲುದಾರ ರಂಜಿತ್, ಸಿದ್ದಿಕಿ, ಶಮಿಕ್ ರೈ, ತಿಮ್ಮಯ್ಯ ಮ್ಯೂಸಿಯಂನ ಮೋಹನ್ ಇದ್ದರು.

Read More

ಮಡಿಕೇರಿ ಅ.10 : ಬರಹಗಾರರು ಸ್ವಂತಿಕೆಯನ್ನು ಬೆಳೆಸಿಕೊಳ್ಳಬೇಕೆಂದು ಹಿರಿಯ ಸಾಹಿತಿ ಭಾರಧ್ವಜ ಕೆ. ಆನಂದ ತೀರ್ಥ ಸಲಹೆ ನೀಡಿದರು. ಬೆಂಗಳೂರಿನ ವೀರಲೋಕ ಪ್ರಕಾಶನ, ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಜೂನಿಯರ್ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ದೇಸಿ ಜಗಲಿ ಕಥಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಬರಹಗಾರರು ಎನಿಸಿಕೊಂಡವರು ಮತ್ತೊಬ್ಬ ಬರಹಗಾರರ ಬರವಣಿಗೆಯ ಶೈಲಿಯನ್ನು ಅನುಕರಿಸುವುದು ಸರಿಯಿಲ್ಲ. ಸ್ವಂತಿಕೆ ಎಂಬುದನ್ನು ಬೆಳೆಸಿಕೊಂಡರೆ ಮಾತ್ರ ಉತ್ತಮ ಬರಹಗಾರರಾಗಿ ಹೊರ ಹೊಮ್ಮಲು ಸಾಧ್ಯ ಎಂದ ಓದುವ ಹವ್ಯಾಸವನ್ನು ರೂಢಿಸಿಕೊಂಡವರು ಮಾತ್ರ ಬರವಣಿಗೆಯಲ್ಲಿ ಯಶಸ್ಸು ಕಾಣಬಹುದಾಗಿ ಎಂದು ನುಡಿದರು. ಕಥಾ ಕಮ್ಮಟದಲ್ಲಿ ತರಬೇತುರರಾಗಿದ್ದ ಪ್ರಭಾಕರ ಶಿಶಿಲ ಅವರು ಮಾತನಾಡಿ ಜೀವನದ ಬಗ್ಗೆ ಪ್ರೀತಿ ಬೆಳೆಸಿಕೊಂಡರೆ ಮಾತ್ರ ಕಥೆ ಬರೆಯಲು ಸಾಧ್ಯವಾಗುತ್ತದೆ. ಸಮಾಜದಲ್ಲಿನ ಅಸಮಾನತೆಯನ್ನು ಬರವಣಿಗೆಯ ಮೂಲಕ ಹೋಗಲಾಡಿಸಲು ಬರಹಗಾರರು ಪ್ರಯತ್ನಿಸಬೇಕು. ಬೇರೆ ಬೇರೆ ಪುಸ್ತಕಗಳನ್ನು ಓದುವ ಮೂಲಕ…

Read More

ಮಡಿಕೇರಿ ಅ.9 : ಜೀವನದಾರಿ ಅನಾಥಾಶ್ರಮ ಆಶ್ರಮದ ಸ್ಥಾಪಕ ರಮೇಶ್ ಅವರ ನಿಧನಕ್ಕೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತವಾರಿ ಸಚಿವರಾದ ಎನ್ ಎಸ್ ಭೋಸರಾಜು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜೀವನದಾರಿ ಆಶ್ರಮದ ಮೂಲಕ ರಮೇಶ್ ಅವರ ಸಮಾಜಸೇವೆ ಶ್ಲಾಘನೀಯ. ಅನಾಥಾಶ್ರಮದ ಉಸ್ತುವಾರಿ ರಮೇಶ್ ಅವರ ಅಕಾಲಿಕ ಮರಣದಿಂದ ಆಶ್ರಮವಾಸಿಗಳಿಗೆ ಯಾವುದೇ ತೊಂದರೆ ಆಗಬಾರದು. ಅನಾಥಾಶ್ರಮದಲ್ಲಿರುವವರಿಗೆ ತೊಂದರೆ ಆಗದಂತೆ ಅಗತ್ಯ ಸಹಕಾರವನ್ನು ಜಿಲ್ಲಾಡಳಿತ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Read More