ಮಡಿಕೇರಿ ಅ.4 : ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರಸಭಾ ಸದಸ್ಯೆಯರು, ಮಹಿಳೆಯರ ಬಳಗ, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅ.22 ರಂದು ಗಾಂಧಿ ಮೈದಾನದಲ್ಲಿ ಮಹಿಳಾ ದಸರಾ ಆಯೋಜಿಸಲಾಗಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮತ್ತು ಮಹಿಳಾ ದಸರಾ ಸಮಿತಿ ಸಂಚಾಲಕಿ ಶ್ವೇತಾ ಪ್ರಶಾಂತ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅ.22 ರಂದು ಬೆಳಗ್ಗೆ 10 ಗಂಟೆಯಿಂದಲೇ ನಗರದ ಗಾಂಧಿ ಮೈದಾನದಲ್ಲಿ 8ನೇ ವಷ೯ದ ಮಹಿಳಾ ದಸರಾವನ್ನು ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ವಿವಿಧ ಸ್ಪಧೆ೯ಗಳನ್ನು ಜಿಲ್ಲೆಯ ಮಹಿಳೆಯರಿಗಾಗಿ ಆಯೋಜಿಸಲಾಗಿದೆ. ಮಹಿಳಾ ದಸರಾ ಅಂಗವಾಗಿನ ಸ್ಪಧೆ೯ಗಳ ವಿವರ ಇಂತಿದೆ. ಎಥ್ ನಿಕ್ ಫ್ಯಾಷನ್ ಶೋ 20 ರಿಂದ 30, ಮತ್ತು 35 ರಿಂದ 45 ವಷ೯ ವಯೋಮಿತಿಯ ಮಹಿಳೆಯರಿಗೆ. ಕನಾ೯ಟಕದ ವಿವಿಧ ಉಡುಗೆಗಳಿಗೆ ಆದ್ಯತೆ – (ಒಟ್ಟು 3 ರಿಂದ 4 ಗುಂಪುಗಳಿಗೆ ಅವಕಾಶ, 1 ಗುಂಪಿನಲ್ಲಿ 10 ಜನರು ಕಡ್ಡಾಯವಾಗಿ…
ಲೇಖಕ: admin
ಮಡಿಕೇರಿ, ಅ.4 : ಶಾಂತಿನಿಕೇತನ ಯುವಕ ಸಂಘದ 45ನೇ ವರ್ಷದ ಗಣೇಶ ವಿಸರ್ಜನೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಸೆ.19 ರಂದು ಪ್ರತಿಷ್ಠಾಪಿಸಲ್ಪಟ್ಟು 15 ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಗರದ ಗೌರಿಕೆರೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು. ಗಮನ ಸೆಳೆದ ಮಂಟಪ : ಗಣೇಶ ಮೂರ್ತಿ ವಿಸರ್ಜನೋತ್ಸವ ಅಂಗವಾಗಿ ಶಾಂತಿನಿಕೇತನ ಯುವಕ ಸಂಘದ ವತಿಯಿಂದ ರೂ.12 ಲಕ್ಷ ವೆಚ್ಚದಲ್ಲಿ “ಲೋಕ ಕಲ್ಯಾಣಕ್ಕಾಗಿ ಸಿಂಧೂರ ರಾಕ್ಷಸನನ್ನು ವಧಿಸುವ ಮೂಲಕ ಗಣಪತಿಗೆ ಸಿಂಧೂರ ಗಣಪ” ಎಂಬ ಹೆಸರು ಬಂದಿರುವ ಚಲನವಲನ ಹೊಂದಿರುವ ಕಥಾನಕ ಎಲ್ಲರ ಗಮನ ಸೆಳೆಯಿತು. ಮಂಟಪದ ಪ್ರದರ್ಶನ ನಡೆಯಿತು. ಬ್ರಹ್ಮನ ಮಗ ಸಿಂಧೂರ ದೇವಲೋಕವನ್ನು ವಶಪಡಿಸಿಕೊಳ್ಳಲು ಯುದ್ಧಕ್ಕೆ ಮುಂದಾದ ಸಂದರ್ಭ ನಡೆಯುವ ಸನ್ನಿವೇಶಗಳನ್ನು ಮನಮೋಹಕವಾಗಿ ಕಟ್ಟಿಕೊಡಲಾಯಿತು. ಕಥಾನಕ ಪ್ರದರ್ಶನ ಸಂದರ್ಭ ಚಿಮ್ಮುವ ಹೊಗೆ, ಬೆಂಕಿ ಹಾಗೂ ಸಿಡಿಯುವ ಪಟಾಕಿಗಳು ರೋಮಾಂಚನ ಅನುಭವ ನೀಡಿತು. ಶಾಂತಿನಿಕೇತನ, ಕೆಎಸ್‍ಆರ್‍ಟಿಸಿ ಡಿಪೋ ಮುಂಭಾಗ, ಜನರತ್ ತಿಮ್ಮಯ್ಯ ವೃತ್ತ, ಹಳೆಯ ಖಾಸಗಿ ಬಸ್ ನಿಲ್ದಾಣ, ಇಂದಿರಾಗಾಂಧಿ ವೃತ್ತ, ಚೌಡೇಶ್ವರಿಯಲ್ಲಿ …
ಮಡಿಕೇರಿ ಅ.4 : ಕೊಡಗು ಜಿಲ್ಲೆಯ ಪರಿಶಿಷ್ಟ ಪಂಗಡದ ಹಾಡಿ ನಿವಾಸಿಗಳಿಗೆ 2 ನೇ ಬಾರಿಯ ಪೌಷ್ಠಿಕ ಆಹಾರ ವನ್ನು ವಿತರಿಸಲಾಯಿತು. 250 ಹಾಡಿಗಳಲ್ಲಿ ಪರಿಶಿಷ್ಟ ಪಂಗಡದ ಜನಾಂಗದವರು ವಾಸಿಸುತ್ತಿದ್ದು, ಜೇನುಕುರುಬ, ಯರವ, ಕಾಡುಕುರುಬ ಮತ್ತು ಕುಡಿಯ ಜನಾಂಗದವರ ಅಂದಾಜು 9500 ಕುಟುಂಬಗಳಿಗೆ 2023-24 ನೇ ಸಾಲಿನ ಪೌಷ್ಠಿಕ ಆಹಾರದ 2ನೇ ಬಾರಿಯ ಸರಬರಾಜನ್ನು ಪ್ರಾರಂಭಿಸಲಾಗಿದೆ.
ಸೋಮವಾರಪೇಟೆ ಅ.4 : ವೀರಭದ್ರೇಶ್ವರ ವರ್ದಂತಿ ಮಹೋತ್ಸವದ ಅಂಗವಾಗಿ ಗೌಡಳ್ಳಿ ಹಾಗೂ ಕೋಟೆಯೂರು ವೀರಭದ್ರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ನೇತೃತ್ವದಲ್ಲಿ ತಾಲೂಕಿನ ವಿವಿಧ ವೀರಭದ್ರ ದೇವಾಲಯ ಸಮಿತಿ ಸಹಯೋಗದೊಂದಿಗೆ ವರ್ದಂತಿ ಮಹೋತ್ಸವದ ಅಂಗವಾಗಿ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕಲ್ಲು ಮಠದ ಮಹಾಂತ ಸ್ವಾಮೀಜಿ ಸಾನಿಧ್ಯದಲ್ಲಿ ದೇವರಿಗೆ ಅಭಿಷೇಕ, ಅಷ್ಟೋತ್ತರ ಹಾಗೂ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು. ಐದನೇ ವರ್ಷದ ವೀರಭದ್ರೇಶ್ವರ ವರ್ದಂತಿ ನೆನಪಿಗಾಗಿ ದೇವಾಲಯದ ಆವರಣದಲ್ಲಿ ಬಿಲ್ವಪತ್ರೆ ಹಾಗೂ ರುದ್ರಾಕ್ಷಿ ಗಿಡ ನೆಡಲಾಯಿತು. ಈ ಸಂದರ್ಭ ಸಂಘಟನಾ ವೇದಿಕೆಯ ರಾಷ್ಟ್ರೀಯ ಕಾರ್ಯದರ್ಶಿ ಎಸ್.ಮಹೇಶ್.ತಾಲೂಕು ಅಧ್ಯಕ್ಷ ಜಯರಾಜ್, ಹೋಬಳಿ ಅಧ್ಯಕ್ಷ ಪ್ರಸನ್ನ, ಗೌಡಳ್ಳಿ ಗ್ರಾ.ಪಂ ಅಧ್ಯಕ್ಷ ಅಜ್ಜಳ್ಳಿ ನವೀನ್, ದೇವಾಲಯ ಸಮಿತಿ ಅಧ್ಯಕ್ಷ ದಿನೇಶ್, ಗೌಡಳ್ಳಿ ದೇವಾಲಯ ಸಮಿತಿ ಅಧ್ಯಕ್ಷ ರಾಜಪ್ಪ, ಪ್ರಮುಖರುಗಳಾದ ದಿಲೀಪ್, ಸುನೀಲ್, ಲೋಹಿತ್, ದಿನೇಶ್ ಹಾಗೂ ಮುಂತಾದವರು ಹಾಜರಿದ್ದರು.
ನಾಪೋಕ್ಲು ಅ.4 : ಬೆಟ್ಟಗೇರಿ ಸಮೀಪದ ಬಕ್ಕ ಸ್ವಸಹಾಯ, ಸ್ತ್ರೀ ಶಕ್ತಿ, ಗಜಾನನ ಭಕ್ತ ಮಂಡಳಿ ,ಸ್ವಸಹಾಯ ಗುಂಪುಗಳು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ 17ನೇ ವರ್ಷದ ಕೈಲ್ ಪೋಳ್ಡ್ ಕ್ರೀಡಾಕೂಟ ನಡೆಯಿತು. ಬೆಟ್ಟಗೇರಿ ಗ್ರಾ.ಪಂ ಅಧ್ಯಕ್ಷ ಚಳಿಯಂಡ ಕಮಲಾ ಉತ್ತಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ತಹಶೀಲ್ದಾರರಾದ ಸೂದನ ಮೋಹನ್ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವುದು, ಎಲ್ ಕೆ ಜಿ ,ಯು ಕೆ ಜಿ ಮಕ್ಕಳಿಗೆ ಕಪ್ಪೆ ಹಾರುವುದು, ಮೆರಥಾನ್, 100 ಮೀಟರ್ ಓಟ,ಮೂರು ಕಾಲಿನ ಓಟ, ಗೋಣಿಚೀಲದ ಓಟ, ಮಹಿಳೆಯರಿಗೆ ಏರ್ ಗನ್ ಶೂಟಿಂಗ್, ನೀರು ಚೆಂಬಿನ ಓಟ, ನಿಂಬೆ ಹಣ್ಣು ಚಮಚದ ಓಟ, ಬಕೇಟಿಗೆ ಚೆಂಡು ಹಾಕುವುದು, ಹಗ್ಗ ಜಗ್ಗಾಟ, ವಾದ್ಯ ಕುಣಿತ ಸೇರಿದಂತೆ ಕಿರಿಯರಿಂದ ವಯಸ್ಕರ ವರೆಗೆ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಆಟೊಟ ಸ್ಪರ್ಧೆಗಳು ನಡೆದವು. ಸಭಾ ಕಾರ್ಯಕ್ರಮ : ಸಂಜೆ ನಡೆದ ಸಮರೋಪ ಸಮಾರಂಭವನ್ನು…
ನಾಪೋಕ್ಲು ಅ.4 : ಕೊಡವ ಸಮಾಜದ ಅಧಿಕಾರ ಹಸ್ತಾಂತರ ಸಮಾರಂಭವು ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಮಾಜದ ಹಾಲಿ ಅಧ್ಯಕ್ಷ ಅಪ್ಪಚೆಟೋಳಂಡ ಮನು ಮುತ್ತಪ್ಪ ಕೂಡವ ಸಮಾಜ ನಡೆದುಕೊಂಡು ಬಂದಿರುವ ಮಾಹಿತಿ ನೀಡಿದರು. ನೂತನ ಅಧ್ಯಕ್ಷ ಮುಂಡಂಡ. ಸಿ.ನಾಣಯ್ಯ ಸಮಾಜದ ಲೆಕ್ಕಪತ್ರ ಪುಸ್ತಕವನ್ನು ನೀಡುವುದರೊಂದಿಗೆ ಅಧಿಕಾರ ಹಸ್ತಾಂತರಿಸಿ ನೂತನ ಆಡಳಿತ ಮಂಡಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮುಂಡಂಡ.ಸಿ.ನಾಣಯ್ಯ ಮಾತನಾಡಿ, ಕೊಡವ ಜನಾಂಗದ ಅಭಿವೃದ್ಧಿಗೆ ಹಾಗೂ ಕೊಡವ ಸಮಾಜದ ಅಭಿವೃದ್ಧಿಗೆ ಎಲ್ಲಾ ಆಡಳಿತ ಮಂಡಳಿ ಅವರನ್ನು ಒಟ್ಟುಗೂಡಿಸಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು. ವೇದಿಕೆಯಲ್ಲಿ ನೂತನ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ, ನೂತನ ಖಜಾಂಚಿ ಚೌರಿರ ಉದಯ, ನೂತನ ಜಂಟಿ ಕಾರ್ಯದರ್ಶಿ ಮಾಚೇಟಿರ ಕುಸು ಕುಶಾಲಪ್ಪ, ಹಾಲಿ ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ, ಹಾಲಿ ಖಜಾಂಜಿ ಅಪ್ಪರ0ಡ ಸುಧೀರ್ ಅಯ್ಯಪ್ಪ, ಹಾಲಿ ಹಾಗೂ ನೂತನ ನಿರ್ದೇಶಕರು, ಸದಸ್ಯರು ಹಾಜರಿದ್ದರು. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಅ.4 : (ವರದಿ : ಬೊಳ್ಳಜಿರ ಬಿ.ಅಯ್ಯಪ್ಪ) ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸರಕಾರದ ಆದೇಶದಂತೆ ಇತ್ತೀಚೆಗೆ ಕೊಡಗು ವಿಶ್ವವಿದ್ಯಾನಿಯಕ್ಕೆ ಸೇರ್ಪಡೆಗೊಂಡಿದೆ. ಇದಾದ ನಂತರ ಕಾಲೇಜ್ ನಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. 2023-24ನೇ ಸಾಲಿನಲ್ಲಿ ಕಾಲೇಜ್ ಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ 2/3 ರಷ್ಟು ಅತಿಥಿ ಉಪನ್ಯಾಸಕರನ್ನು ಮಾತ್ರ ನೇಮಕ ಮಾಡಲಾಗಿದೆ ಹಾಗೂ ಕೊಡಗು ವಿಶ್ವವಿದ್ಯಾನಿಲಯದಿಂದ ಯಾವುದೇ ಅತಿಥಿ ಉಪನ್ಯಾಸಕರ ನೇಮಕ ಮಾಡಿಲ್ಲ. ಇದರಿಂದ ಕಾಲೇಜ್ ನಲ್ಲಿ ಸುಮಾರು ಶೇ.40ರಷ್ಟು ಅತಿಥಿ ಉಪನ್ಯಾಸಕರ ಕೊರತೆ ಎದುರಾಗಿದ್ದು, ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ತೊಂದರೆಯಾಗಿದೆ. ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶುಚಿತ್ವ, ಭದ್ರತೆ ಹಾಗೂ ಗ್ರೂಪ್ ಡಿ ಸಿಬ್ಬಂದಿಗಳನ್ನು ಒಳಗೊಂಡ 31 ಮಂದಿಯ ಮಾನವ ಸಂಪನ್ಮೂಲ ಸೇವೆಯನ್ನು 2023 ಅಕ್ಟೋಬರ್ 1ಕ್ಕೆ ಅಂತ್ಯಗೊಳಿಸಲಾಗಿದೆ. ಅಲ್ಲದೆ 14 ಮಂದಿ ತಾತ್ಕಾಲಿಕ ನೆಲೆಯಲ್ಲಿ ನೇಮಕಗೊಂಡ ಸಿಬ್ಬಂದಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.…
ವಿರಾಜಪೇಟೆ ಅ.4 : ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗ, ಅಂತರೀಕ ಗುಣಮಟ್ಟ ಭರವಸಾ ಕೋಶ ಹಾಗೂ ಸ್ವಾವಲಂಬಿ ಭಾರತ ಅಭಿಯಾನ, ಕೊಡಗು ಜಿಲ್ಲೆ ಆಶ್ರಯದಲ್ಲಿ ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾವಲಂಬಿ ಭಾರತ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾಲೇಜಿನ ಸಭಾಂಗಣದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸ್ವಾವಲಂಬಿ ಭಾರತ ಅಭಿಯಾನದ ಕರ್ನಾಟಕ ರಾಜ್ಯ ಸಂಚಾಲಕ ಪ್ರೊ.ಸತ್ಯನಾರಯಣ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರಾಚೀನ ಕಾಲದಲ್ಲಿ ಶ್ರೀಮಂತ ರಾಷ್ಟ್ರವಾಗಿದ್ದ ಭಾರತ ಹೇಗೆ ವಿದೇಶಿಯರ ಆಕ್ರಮಣದ ನಂತರ ಬಡರಾಷ್ಟ್ರವಾಯಿತು, ಸ್ವಾತಂತ್ರ್ಯ ನಂತರ ರಾಷ್ಟ್ರದ ಅಭಿವೃದ್ಧಿಗೆ ಹೇಗೆ ವಿವಿಧ ಕಾರ್ಯಕ್ರಮವನ್ನು ಆಯೋಜಿಸಿದರು, 1990ರ ದಶಕದ ನಂತರ ಹೊಸ ಆರ್ಥಿಕ ನೀತಿಯನ್ನು ರೂಪಿಸಿ ಹೇಗೆ ಅಭಿವೃದ್ಧಿಯ ಪಥದಲ್ಲಿ ಸಾಗುತಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಕಳೆದ ಒಂದು ದಶಕದಿಂದ ಭಾರತದ ಬೆಳವಣಿಗೆಯ ದರ ಏರಿಕೆಯಾಗುತ್ತಿರುವುದು ಮತ್ತು ಅದಕ್ಕೆ ಸರ್ಕಾರ ರೂಪಿಸಿದ ಜನಹಿತ ಕಾರ್ಯಕ್ರಮಗಳು ಮತ್ತು ಇಂದು ಭಾರತ ಜಗತ್ತಿನ ಪ್ರಬಲ…
ವಿರಾಜಪೇಟೆ ಅ.4 : ನಗರದ ಕಾಫಿ ತೋಟದ ಒಂದರಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ತಜ್ಞರಾದ ಸತೀಶ್ ಮತ್ತು ಅಮಾನ್ ರಕ್ಷಿಸಿದ್ದಾರೆ. ವಿರಾಜಪೇಟೆ ನಗರದ ಪಂಜರ್ ಪೇಟೆಯ ನಿವಾಸಿ ದಿವಂಗತ ಜನರಲ್ ಕೊದಂಡ ಸೋಮಣ್ಣ ಅವರ ಮನೆಯ ತೋಟದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಇರುವ ಬಗ್ಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಉರಗ ತಜ್ಞರಾದ ಸತೀಶ್ ಹಾಗೂ ಅಮಾನ್ ಸತತ ಎರಡು ಗಂಟೆಯ ಪ್ರಯತ್ನದಿಂದ ಸುಮಾರು 11 ಅಡಿ ಉದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ ವನ್ನು ರಕ್ಷಿಸಿದ್ದಾರೆ. ನಂತರ ಕಾಳಿಂಗ ಸರ್ಪವನ್ನು ಮಾಕುಟ್ಟ ವಲಯ ಅರಣ್ಯಕ್ಕೆ ಬಿಟ್ಟರು. ವರದಿ : ಕಿಶೋರ್ ಕುಮಾರ್ ಶೆಟ್ಟಿ
ಕಡಂಗ ಅ.3 : ನರಿಯಂದಡ ಗ್ರಾಮ ಪಂಚಾಯಿತಿ ಹಾಗೂ ಆಟೋ ಚಾಲಕರ ಸಂಘದ ವತಿಯಿಂದ ಅರಪಟ್ಟು ಕಡಂಗ ಪಟ್ಟಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ಮಹಾತ್ಮ ಗಾಂಧೀಜಿಯವರ ಜನ್ಮ ದಿನದ ಅಂಗವಾಗಿ ಪಟ್ಟಣದ ಮುಖ್ಯರಸ್ತೆಗಳ ಬದಿ ಕಸ ಕಟ್ಟಿಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು. ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಸ್ವಚ್ಛತೆ ಕಾಪಾಡಲು ನಮ್ಮೆಲ್ಲರ ಕರ್ತವ್ಯ ಹಾಗೂ ಸ್ವಚ್ಛತೆಯಿಂದ ಆಗುವ ಪ್ರಾಮುಖ್ಯತೆಯನ್ನು ತಿಳಿಸಲಾಯಿತು. ಗ್ರಾಮ ಪಂಚಾಯತ್ ಸದಸ್ಯರಾದ ಸಿ.ಇ.ಸುಬ್ಬೀರ್ , ಪಾಂಡ0ಡ ರಾಣಿ ಗಣಪತಿ , ವಾಣಿ ತಮ್ಮಯ್ಯ ,ಗ್ರಾಮ ಪಂಚಾಯಿತಿ ಅಧಿಕಾರಿ ಆಶಾ ಕುಮಾರಿ, ದಿನೇಶ್, ಗಣಪತಿ ದೇವಸ್ಥಾನ ಅಧ್ಯಕ್ಷ ಕುಲ್ಲಚಂಡ ಸಾಬಾ ಕರುಂಬಯ್ಯ, ಸ್ಥಳೀಯರಾದ ಝಕರಿಯ , ಆಟೋ ಚಾಲಕರಾದ, ಸಿದ್ದಿಕ್, ತಿಮ್ಮಯ್ಯ, ಹಂಸ, ಲೋಕೇಶ್, ಮಮ್ಮುಟ್ಟಿ ಸುನಿಲ್ ಹಾಜರಿದ್ದರು. ವರದಿ : ನೌಫಲ್ ಕಡಂಗ






