ಲೇಖಕ: admin

ಕೂಡಿಗೆ / ಕುಶಾಲನಗರ, ಅ.5  : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕರು ಮತ್ತು ಬಾಲಕಿಯರಿಗೆ ಅ.8 ರಂದು ಮೈಸೂರು ವಿಭಾಗದ ಹಾಕಿ ಪಂದ್ಯಾವಳಿ ಹಾಗೂ ಅ.9 ರಂದು ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯನ್ನು ಕೂಡಿಗೆಯ ಸರ್ಕಾರಿ ಕ್ರೀಡಾಶಾಲೆಯ ಹಾಕಿ ಟರ್ಫ್ ಮೈದಾನದಲ್ಲಿ ನಡೆಯಲಿದೆ. ಅ.8 ರಂದು ಬೆಳಿಗ್ಗೆ 10 ಗಂಟೆಗೆ ಒಂದು ದಿನ ಮೈಸೂರು ವಿಭಾಗದ ಹಾಕಿ ಪಂದ್ಯಾವಳಿ ಪ್ರಾರಂಭವಾಗಲಿದೆ. ಅ.9 ಮತ್ತು 10 ರಂದು ಎರಡು ದಿನಗಳ ಕಾಲ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕರು ಮತ್ತು ಬಾಲಕಿಯರಿಗೆ ರಾಜ್ಯಮಟ್ಟದ ಹಾಕಿ ಟೂರ್ನಿ ನಡೆಯಲಿದೆ ಎಂದು ಹಾಕಿ ಟೂರ್ನಿಯ ಸಂಚಾಲಕ,  ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ.ಸದಾಶಿವಯ್ಯ ಎಸ್.ಪಲ್ಲೇದ್ ತಿಳಿಸಿದ್ದಾರೆ. ಅ.9 ರಂದು  ಬೆಳಿಗ್ಗೆ 10 ಗಂಟೆಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ  ಅಧ್ಯಕ್ಷತೆಯಲ್ಲಿ ಆರಂಭವಾಗಲಿರುವ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಗೆ  ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎನ್.ಬೋಸರಾಜು ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು,…

Read More

ಮಡಿಕೇರಿ ಅ.5 : ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಪ್ರವರ್ಗ-3ಎ ನಲ್ಲಿ ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ಗಂಗಡ್ ಕಾರ್ ಒಕ್ಕಲಿಗ, ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ, ಗೌಡ ಹಳ್ಳಿಕಾರ್, ಕುಂಚೆಟಿಗ, ಗೌಡ, ಕಾಪು, ಹೆಗ್ಗಡೆ, ಕಮ್ಮಾರೆಡ್ಡಿ, ಗೌಡರ್, ನಾಮಧಾರಿ ಗೌಡ, ಉಪ್ಪಿನ ಕೊಳಗ, ಉತ್ತಮ ಕೊಳಗ ಸಮುದಾಯದ ಜನರ ಆರ್ಥಿಕ ಅಭಿವೃದ್ಧಿಗಾಗಿ 2023-24 ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಸ್ವಯಂ ಉದ್ಯೋಗ ವಿವಿಧ ಯೋಜನೆಗಳಲ್ಲಿ ಸೌಲಭ್ಯ ಪಡೆಯಬಯಸುವವರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ ಸಾಲ ಯೋಜನೆ: ಒಕ್ಕಲಿಗ ಸಮುದಾಯದವರು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗೆ ಅನುಸಾರ ಸೌಲಭ್ಯ ಒದಗಿಸಲಾಗುವುದು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯೊಳಗಿರಬೇಕು. ಕುಟುಂಬದ ವಾರ್ಷಿಕ ಅದಾಯ ಗ್ರಾಮೀಣ ಪ್ರದೇಶದವರಿಗೆ 98 ಸಾವಿರ ರೂಗಳು, ಪಟ್ಟಣ ಪ್ರದೇಶದವರಿಗೆ ರೂ.1.20 ಲಕ್ಷ ಗಳ ಒಳಗಿರಬೇಕು. ಅರ್ಜಿದಾರರ ಆಧಾರ್ ಸಂಖ್ಯೆಯು ಚಾಲ್ತಿಯಲ್ಲಿರುವ ಬ್ಯಾಂಕ್…

Read More

ಮಡಿಕೇರಿ ಅ.5 : ಯು.ಎಸ್.ಎ.ಯ ಸ್ಟ್ಯಾನ್‌ಫೋರ್ಡ್ ವಿ.ವಿ. ಮತ್ತು ಎಲ್ಸ್‍ವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಕಟಿಸಿರುವ ವಿಶ್ವದ ಅತ್ಯುನ್ನತ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಡಾ.ಜೆ.ಜಿ.ಮಂಜುನಾಥ ಅವರು ಸತತ ನಾಲ್ಕನೇ ಬಾರಿ ಸ್ಥಾನ ಪಡೆದಿರುತ್ತಾರೆ. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಜೆ.ಜಿ.ಮಂಜುನಾಥ ಅವರು “ಅನಲೈಟಿಕಲ್ ಮತ್ತು ಎನರ್ಜಿ” ವಿಷಯಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಿರುವ ಸಂಶೋಧನಾ ಲೇಖನಗಳ ಆಧಾರದ ಮೇಲೆ ಇವರು 2023ರ ಸಾಲಿನ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ 4509ನೇ ಸ್ಥಾನವನ್ನು ಮತ್ತು ವಿಶ್ವದ ವೃತ್ತಿ ಜೀವಮಾನ ಸಾಧಕರ ಪಟ್ಟಿಯಲ್ಲಿ 89561 ನೇ ಸ್ಥಾನವನ್ನು ಪಡೆದಿರುತ್ತಾರೆ (ಸಂಯೋಜಿತ ಅಂಕಗಳ ಆಧಾರದ ಮೇಲೆ ಶ್ರೇಣಿ). ಇವರ ಈ ಸಾಧನೆಯೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ಹೆಮ್ಮೆ ತಂದಿದೆ ಎಂದು ವಿ.ವಿಯ ಕುಲಪತಿಯವರು, ಕುಲಸಚಿವರು ಮತ್ತು ಕಾಲೇಜಿನ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ಸಮಸ್ತ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Read More

ಮಡಿಕೇರಿ ಅ.5 : ಚೇರಂಬಾಣೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷರಾಗಿ ಬಾಚರಣಿಯಂಡ ಪಿ.ಸುಮನ್ ಅವರು ನಾಲ್ಕನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪೋಡನೋಳನ ಟಿ.ಶ್ರೀನಿವಾಸ್ ಮೂರನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ನಿರ್ದೇಶಕರುಗಳಾಗಿ ಸಾಮಾನ್ಯ ವರ್ಗದಿಂದ ಅಯ್ಯಂಡ ಬಿ.ಬೆಳ್ಯಪ್ಪ, ಮುಕ್ಕಾಟಿ ಆರ್.ನಾಣಯ್ಯ, ಕುಂಞಳಿ ಪಿ.ಸಂತೋಷ್ ಕುಮಾರ್, ಕೂರನ ವಿ.ಕಿಶೋರ್ ಕುಮಾರ್, ಬಿಸಿಎಂ(ಬಿ) ಕೇಕಡ ಎಂ.ಸುಗುಣ, ಬಿ.ಸಿ.ಎಂ(ಎ) ನಾಳಿಯಮ್ಮಂಡ ಸಿ.ಜೀವನ್, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಕೂರನ ಸುಶೀಲ ಅಪ್ಪಾಜಿ, ಚಿಯಬೆರ ವೀಣಾ ಸೋಮಯ್ಯ, ಪರಿಶಿಷ್ಟ ಪಂಗಡದಿಂದ ಎಂ.ಕೆ.ವಸಂತ ಹಾಗೂ ಪರಿಶಿಷ್ಟ ಜಾತಿ ಎಂ.ಸರಸಮ್ಮ ಅವಿರೋಧವಾಗಿ ಆಯ್ಕೆಯಾದರು. ಸಾಲಗಾರರಲ್ಲದ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ತೊತ್ತಿಯನ ಎಸ್.ಚೇತನ್ ನಿರ್ದೇಶಕರಾಗಿ ಗೆಲವು ಸಾಧಿಸಿದರು. ಒಟ್ಟು 13 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಗೆದ್ದುಕೊಂಡರು.

Read More

ಮಡಿಕೇರಿ ಅ.5 : ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯು ಇತ್ತೀಚೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಟೆಬಲ್ ಟೆನ್ನಿಸ್ ಒಳಾಂಗಣ ಕ್ರೀಡೆ ನಡೆದಿದ್ದು, ಅಪರ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಯುವ ಸಬಲೀಕರಣ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ, ಜನನಿ ಆರೋಗ್ಯ ಕೇಂದ್ರದ ಡಾ.ನವೀನ್ ಎಂ.ಎಸ್, ಡಾ ರಾಜೇಶ್ವರಿ ಬಿ.ಕೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಪುರುಷರ ವಿಭಾಗ ಸಿಂಗಲ್ಸ್ ನಲ್ಲಿ ವಿಜೇತರು ಪಿ.ಎಲ್.ಮಂಜುನಾಥ್, ರನ್ನರ್ ಕೋರನ ಕುಮರೇಶ್, ಪುರುಷರ ವಿಭಾಗ ಡಬ್ಬಲ್ಸ್ ನಲ್ಲಿ ವಿಜೇತರು ಡೇರಿಕ್ ಹಾಗೂ ರಚನ್ ಪೊನ್ನಪ್ಪ, ರನ್ನರ್ ಪಿ.ಎಲ್ ಮಂಜುನಾಥ್ ಹಾಗೂ ರಾಮ್ ಜೀವ್, ಮಹಿಳೆಯರ ವಿಭಾಗ ಸಿಂಗಲ್ಸ್ ವಿಜೇತರು ನಮಿತಾ ಪೊನ್ನಪ್ಪ, ರನ್ನರ್ ರೀನಾ ಅನಿಲ್, ಮಹಿಳೆಯರ ವಿಭಾಗ ಡಬ್ಬಲ್ಸ್ ವಿಜೇತರು ಸ್ವಾತಿ ತಂಗಮ್ಮ ಹಾಗೂ ನಮಿತ ಪೊನ್ನಪ್ಪ, ರನ್ನರ್ಸ್ ವಚನ್ ಎಂ.ಎಸ್ ಹಾಗೂ ಸಿಂಚನ ಎಂ.ಎ, ವೆಟರನ್ಸ್ ಸಿಂಗಲ್ ವಿಜೇತರು ಬಿ.ಎಲ್ ಹರೀಶ್ ರನ್ನರ್ ಅಜರ್ ವಾಸಿಮ್ ವೆಟರನ್ಸ್, ಡಬ್ಬಲ್ಸ್ ವಿಜೇತರು ರಾಮ್ ಜೀವ್ ಹಾಗೂ…

Read More

ಮಡಿಕೇರಿ ಅ.5 : ಮೈಸೂರಿನಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್ ನ ವಿದ್ಯಾರ್ಥಿಗಳು ಚಿನ್ನ ಮತ್ತು ಬೆಳ್ಳಿ ಗೆದ್ದುಕೊಂಡಿದ್ದಾರೆ. ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ವಿದ್ಯಾರ್ಥಿನಿ ಲಿಪಿಕಾ ಎಂ.ಆರ್ ಚಿನ್ನ, ಮಡಿಕೇರಿಯ ಇಮ್ರಾನ್ ಎಂ.ಐ ಚಿನ್ನ ಮತ್ತು ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಾದ ಪ್ರಜ್ಞಾ ಎನ್.ಕೆ ಬೆಳ್ಳಿ ಹಾಗೂ ಮನಸ್ವಿ ಬಿ. ಬೆಳ್ಳಿ ಗೆದ್ದು ಅ.13 ರಂದು ಬೆಂಗಳೂರಿನಲ್ಲಿ ನಡೆಯುವ ಸಿಎಂ ಕಪ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರುಗಳು ಮರ್ಕರ ಟೆಕ್ವಾಂಡೋ ಕ್ಲಬ್ ನ ಮಾಸ್ಟರ್ ಕುಶಾಲ್ ಕುಮಾರ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Read More

ಮಡಿಕೇರಿ ಅ.5 : ಅರೆಭಾಷೆ ಗೌಡ ಸಮಾಜಗಳು ಹಾಗೂ ಸಮುದಾಯದ ಪ್ರಮುಖರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಬೆಂಗಳೂರಿನ ಕಚೇರಿಯಲ್ಲಿ ಭೇಟಿಯಾಗಿ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿದರು. ಮದೆನಾಡಿನಲ್ಲಿರುವ ಸಂಘದ 13 ಏಕರೆ ಜಾಗಕ್ಕೆ ಸಂಬಂಧಿಸಿದಂತೆ ಕೆಲವು ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳಿದ್ದು, ಇವುಗಳಿಗೆ ಪರಿಹಾರ ಸೂಚಿಸುವಂತೆ ಅರೆಭಾಷೆ ಗೌಡ ನಿಯೋಗ ಮನವಿ ಮಾಡಿತು. ಅರೆಭಾಷೆ ಜನಾಂಗದ ಅಭಿವೃದ್ಧಿ ಮತ್ತು ಕಂದಾಯ ಇಲಾಖೆ ಸಮಸ್ಯೆಗಳ ಕುರಿತು ಗಮನ ಸೆಳೆಯಿತು. ಇದೇ ಸಂದರ್ಭ ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ್ ಅವರು ಮಂಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅರೆಭಾಷೆ ಗೌಡ ಸಮುದಾಯದವರಿಗೆ ಅವಕಾಶ ಮಾಡಿಕೊಡಬೇಕೆಂದು ಸಚಿವ ಕೃಷ್ಣ ಭೈರೇಗೌಡರಲ್ಲಿ ಮನವಿ ಮಾಡಿದರು. ವಿರಾಜಪೇಟೆ ಶಾಸಕ ಪೊನ್ನಣ್ಣ ಅವರೊಂದಿಗೆ ಚರ್ಚಿಸಿದ ಅರೆಭಾಷೆ ಗೌಡ ಸಮಾಜಗಳ ಪ್ರಮುಖರು ತಲಕಾವೇರಿ ತೀರ್ಥೋದ್ಭವದ ಸಂದರ್ಭ ಯಾವುದೇ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಬೇಕು. ಶಾಂತಿಯುತ ಹಬ್ಬ ಆಚರಣೆಗೆ ಕ್ರಮ…

Read More

ಮಡಿಕೇರಿ ಅ.5 : ಮೈಸೂರಿನಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್ ನ ವಿದ್ಯಾರ್ಥಿಗಳು ಚಿನ್ನ ಮತ್ತು ಬೆಳ್ಳಿ ಗೆದ್ದುಕೊಂಡಿದ್ದಾರೆ. ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ವಿದ್ಯಾರ್ಥಿನಿ ಲಿಪಿಕಾ ಎಂ.ಆರ್ ಚಿನ್ನ, ಮಡಿಕೇರಿಯ ಇಮ್ರಾನ್ ಎಂ.ಐ ಚಿನ್ನ ಮತ್ತು ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಾದ ಪ್ರಜ್ಞಾ ಎನ್.ಕೆ ಬೆಳ್ಳಿ ಹಾಗೂ ಮನಸ್ವಿ ಬಿ. ಬೆಳ್ಳಿ ಗೆದ್ದು ಅ.13 ರಂದು ಬೆಂಗಳೂರಿನಲ್ಲಿ ನಡೆಯುವ ಸಿಎಂ ಕಪ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರುಗಳು ಮರ್ಕರ ಟೆಕ್ವಾಂಡೋ ಕ್ಲಬ್ ನ ಮಾಸ್ಟರ್ ಕುಶಾಲ್ ಕುಮಾರ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Read More

ಪುತ್ತೂರು ಅ.5 : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಮತ್ತು ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತಾ ಮಂಡಳಿಯ (National Board of Accreditation) ಮಾನ್ಯತೆ ಸಿಕ್ಕಿದೆ. NBA ಯು ನವದೆಹಲಿಯ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ (AICTE) ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟವನ್ನು ಪರೀಕ್ಷಿಸುವ ಜೊತೆಗೆ ಭಾರತದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಉತ್ತೇಜಿಸುವ ಸ್ವಾಯತ್ತ ಸಂಸ್ಥೆಯಾಗಿದೆ. ಎನ್‌ಬಿಎ ಎನ್ನುವುದು ಶೈಕ್ಷಣಿಕ ಸಂಸ್ಥೆಯು ನಿರ್ಧಿಷ್ಟ ಗುಣಮಟ್ಟವನ್ನು ಹೊಂದಿದೆಯೇ ಅಥವಾ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುತ್ತದೆಯೇ ಎನ್ನುವುದನ್ನು ವೃತ್ತಿಪರ ಪರಿಶೀಲನೆಯ ಅಧಾರದ ಮೇಲೆ ಮೌಲ್ಯಮಾಪನ ಮಾಡಿ ದೃಢೀಕರಿಸುವ ಪ್ರಕ್ರಿಯೆ. ಇದರಿಂದಾಗಿ ವಿದ್ಯಾರ್ಥಿಗಳ ಗುಣಮಟ್ಟ ಮತ್ತು ಸಂಖ್ಯಾ ದೃಷಿಯಿಂದ ದಾಖಲಾತಿಯು ಸುಧಾರಿಸುತ್ತದೆ. ವಿವಿಧ ಮೂಲಗಳಿಂದ ಆದಾಯವನ್ನು ಗಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಪದವೀಧರರ ಉದ್ಯೋಗಾವಕಾಶವನ್ನು ಹೆಚ್ಚಿಸುತ್ತದೆ. ಬಹುರಾಷ್ಟ್ರೀಯವಾಗಿ ಗುರುತಿಸಲು ಅನುಕೂಲ ಕಲ್ಪಿಸುತ್ತದೆ. ಸಂಸ್ಥೆಯಲ್ಲಿ ಉತ್ತಮ ಮತ್ತು ಪರಿಣಾಮಕಾರಿ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸಲು ನೆರವಾಗುತ್ತದೆ.…

Read More

ಮಡಿಕೇರಿ ಅ.5 :  ದಿನ ಕಳೆದಂತೆ ಜನರೂ, ಅವರ ವೇಷ ಭೂಷಣಗಳು, ತಿಂಡಿ ತಿನಿಸುಗಳು ಬದಲಾಗುತ್ತಿದೆ. ಹಿಂದೆಲ್ಲಾ ಅಮ್ಮ ಒಲೆಯ ಮುಂದೆ ಕುಳಿತು ಕೈಯಿಂದ ತಟ್ಟಿ ಓಡಿನಲ್ಲಿ ಕಾಯಿಸುತ್ತಿದ್ದ ರೊಟ್ಟಿ, ಚುಂಯ್ಯೆಂದು ಸುತ್ತಿ ಸುತ್ತಿ ಹಾಕುತ್ತಿದ್ದ ಗರಿ ಗರಿ ದೋಸೆ, ದೊಡ್ದ ಪಾತ್ರೆಗಳಲ್ಲಿ ಬೇಯಿಸುತ್ತಿದ್ದ ಕಡುಬು, ಇಡ್ಲಿ ಎಲ್ಲಾ ಕಾಣಲು ಈಗ ಹಳ್ಳಿಗೆ ಹೋಗ ಬೇಕಷ್ಟೆ. ಅಂದು ಅಪರೂಪಕ್ಕೆ ನೆಂಟರು ಬಂದಾಗ ಮಾತ್ರ ವಿಶೇಷ ನಾಟಿ ಕೋಳಿ ಸಾರು. ಆದರೆ ಇಂದು ಅದೆಲ್ಲಾ ನೆನಪು ಮಾತ್ರ. ಈಗಂತೂ ಪೇಟೆಗಳ ಯಾವುದೇ ಗಲ್ಲಿಗೆ ಹೋದರೂ ಹುರಿದ ಮೀನು, ಚಿಕನ್ ಕಬಾಬ್, ಗೋಬಿ ಮಂಚೂರಿ, ನೂಡಲ್ , ಬಿರಿಯಾನಿಯ ಘಮ ಮೂಗಿಗೆ ಹೊಡೆಯುತ್ತಿರುತ್ತದೆ. ನಗರಗಳಲ್ಲಿ ಮಾಂಸಾಹಾರದ ಹೋಟೆಲ್ ಗಳಿಗಂತು ಎಲ್ಲೂ ಬರವಿಲ್ಲ. ಸಂಜೆಯ ವೇಳೆ ರಸ್ತೆ ಬದಿಗಳಲ್ಲಿ ಒಂದು ಮುರುಕು ಗಾಡಿ, ಅದರ ಪಕ್ಕದಲ್ಲಿ ಒಂದು ಗ್ಯಾಸ್ ಸ್ಟವ್ , ಸುತ್ತಲೂ ಪ್ಲೇಟ್ ಹಿಡಿದು ನಿಂತಿರುವ ಜನ, ಸಾಮಾನ್ಯ ದೃಶ್ಯ. ಹಾದಿ ಉದ್ದಕ್ಕೂ ಮೂಗಿಗೆ…

Read More