ಲೇಖಕ: admin

ಮಡಿಕೇರಿ, ಜು.30 :  ಕೊಡಗಿನ  ಕಾವೇರಿ ನದಿ ದಡದಲ್ಲಿ ನೂರಾರು ಬಡ ಕುಟುಂಬಗಳು ಜೀವನ ನಡೆಸುತ್ತಿದ್ದು, ಇವರಿಗೆ ಸೂಕ್ತ ಪುನರ್ವಸತಿ ಕಲ್ಪಿಸಬೇಕೆಂದು ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಜಾಸೀರ್ ಮೂರ್ನಾಡು ಒತ್ತಾಯ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಜಾಸೀರ್ ಮೂರ್ನಾಡು, ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಜೀವ ಕೈಯಲ್ಲಿ ಹಿಡಿದು ನದಿ ಪಾತ್ರದ ನಿವಾಸಿಗಳು ಜೀವನ ನಡೆಸುತ್ತಿದ್ದಾರೆ. ಪ್ರವಾಹದ ಭೀತಿಯಲ್ಲಿ ಪ್ರತೀ ವರ್ಷ ಮನೆ ಖಾಲಿ ಮಾಡುತ್ತಿದ್ದಾರೆ. 2018 ರಲ್ಲಿ ಪ್ರಾಕೃತಿಕ ವಿಕೋಪದಲ್ಲಿ ಸೂರು ಕಳೆದುಕೊಂಡವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಸೂರು ಒದಗಿಸಿದ್ದರು. ಆದರೆ 2019 ರಲ್ಲಿ ಕಾವೇರಿ ನದಿ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಲು ಜಾಗವನ್ನು ಗುರುತಿಸುವ ಕೆಲಸ ಕಳೆದ ನಾಲ್ಕು ವರ್ಷಗಳಲ್ಲಿ ಈ ಹಿಂದಿನ ಸರ್ಕಾರ ಮಾಡದೇ ಸಂತ್ರಸ್ತರ ಜೀವನದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆರೋಪಿಸಿದರು. ನದಿ ತೀರದ ನಿವಾಸಿಗಳು ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ…

Read More

ಮಡಿಕೇರಿ, ಜು.31 : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ), ಸಂಘದ ಕ್ರೀಡಾ ಸಮಿತಿ ಹಾಗೂ ಕೊಡಗು ಪ್ರೆಸ್‍ಕ್ಲಬ್ ಬೆಳ್ಳಿಮಹೋತ್ಸವ ಕ್ರೀಡಾ ಸಮಿತಿ ಆಶ್ರಯದಲ್ಲಿ ಇದೇ ಆ.5ರಂದು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗಾಗಿ ಒಳಾಂಗಣ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಚೆಸ್, ಟೇಬಲ್ ಟೆನ್ನಿಸ್, ಕೇರಂ ಮತ್ತು ಮೈಂಡ್ ಗೇಮ್ ಸ್ಪರ್ಧೆಗಳು ನಡೆಯಲಿವೆ. ಟೇಬಲ್ ಟೆನಿಸ್‍ನಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಹಾಗೂ ಮಹಿಳೆಯರಿಗೆ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಟೇಬಲ್ ಟೆನಿಸ್ ಮತ್ತು ಕೇರಂ ಡಬಲ್ಸ್‍ಗೆ ಸ್ಪರ್ಧಿಗಳೇ ಜೋಡಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ರವೇಶ ಶುಲ್ಕ 100 ರೂ. ನಿಗದಿಪಡಿಸಲಾಗಿದ್ದು, ಹೆಸರು ನೋಂದಾವಣೆಗೆ ಕೊನೇ ದಿನ ಆ.1 ಸಂಜೆ 5 ಗಂಟೆ. ಸ್ಪರ್ಧಿಗಳು ನವೀನ್ ಸುವರ್ಣ (9880191566) ಅವರಲ್ಲಿ ಹೆಸರು ನೋಂದಾಯಿಸಿಕೊಂಡು, ಅದೇ ಮೊಬೈಲ್ ಸಂಖ್ಯೆಗೆ ಪ್ರವೇಶ ಶುಲ್ಕದ ಹಣವನ್ನು ಆನ್‍ಲೈನ್ ಮೂಲಕ ಪಾವತಿಸಬೇಕು ಎಂದು, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ರೀಡಾ ಸಮಿತಿ ಸಂಚಾಲಕ ಮಂಜು ಸುವರ್ಣ ಹಾಗೂ ಕೊಡಗು…

Read More

ಮಡಿಕೇರಿ ಜು.30 : “ಜಾತ್ಯಾತೀತತೆ ಭಾರತದ ಧರ್ಮ” ಎಂಬ ಶೀರ್ಷಿಕೆಯೊಂದಿಗೆ ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವದಂದು SYS ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ನೆಲ್ಯಾಹುದಿಕೇರಿಯಲ್ಲಿ ನಡೆಯಲಿರುವ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮದ ಪ್ರಚಾರ SKSSF ಶಾಖಾ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಕಾರ್ಯಕ್ರಮದಲ್ಲಿ SYS ಕೊಡಗು ಜಿಲ್ಲಾಧ್ಯಕ್ಷರಾದ ಬಶೀರ್ ಹಾಜಿ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ, ಪ್ರಮುಖರಾದ ಉಮರ್ ಫೈಝಿ, ಕುಂಜ್ಞಾಪ ಹಾಜಿ, ಕೊಡ್ಲಿಪೇಟೆ ಶಾಖಾಧ್ಯಕ್ಷರಾದ ಇಬ್ರಾಹಿಂ ಮಲ್ಲಳ್ಳಿ, ಕೋಶಾಧಿಕಾರಿ ಅಬ್ದುಲ್ ರಹಮಾನ್, ಅಬ್ದುಲ್ ಬಾಸಿತ್, ಸಾಬ್ ಜಹಾನ್ ಹಾಗೂ ಶಾಖೆಯ ಇತರ ಸದಸ್ಯರುಗಳು ಭಾಗವಹಿಸಿದ್ದರು.

Read More

ಮಡಿಕೇರಿ, ಜು.30 : ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಹಾಗೂ ಆದರ್ಶಗಳು ಇಂದಿನ ಕಾಲಘಟ್ಟಕ್ಕೂ ಪ್ರಸ್ತುತ. ಉತ್ತಮ ಸಮಾಜ ನಿರ್ಮಾಣಕ್ಕೆ ಅವರ ಜೀವನಾದರ್ಶನಗಳನ್ನು ಎಲ್ಲರು ಅಳವಡಿಸಿಕೊಳ್ಳಬೇಕಾಗಿದೆ ಎಂದು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಡಾ. ಬಿ.ಆರ್. ಕವಿತಾ ರೈ ಕರೆ ನೀಡಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಶೈಕ್ಷಣಿಕ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದರು. ಕರಪತ್ರಗಳ ಮೂಲಕ ವಿಷಯಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಸ್ವಾತಂತ್ರö್ಯ ಪೂರ್ವದಲ್ಲಿ ಸಾಗಿಸಿ ವಿಚಾರ ವಿನಿಮಯ ಮಾಡಿಕೊಳ್ಳಲಾಗುತಿತ್ತು. ಹೆರ್ಮನ್ ಮ್ಯೋಗ್ಲಿಂಗ್ ಮಂಗಳೂರು ಸಮಾಚಾರ ಆರಂಭಿಸಿ ಕರ್ನಾಟಕದಲ್ಲಿ ಪತ್ರಿಕೆ ಹುಟ್ಟಿಗೆ ಕಾರಣೀಭೂತರಾದರು. ಪತ್ರಕರ್ತರಿಗೆ ಜವಾಬ್ದಾರಿ, ನೈತಿಕತೆ ಇರಬೇಕು. ಇಂದು ವಿದ್ಯುನ್ಮಾನಗಳ ಆವಿಷ್ಕಾರದಿಂದ ಸುದ್ದಿಗಳು ಸುಲಭವಾಗಿ ಜನರಿಗೆ ದೊರೆಯುತ್ತದೆ. ಆದರೆ, ಯಾವುದೇ ಯಂತ್ರೋಪಕರಣವಿಲ್ಲದ ಸಮಯದಲ್ಲಿ ಪತ್ರಿಕೆಗಳು ಆರಂಭಗೊಂಡು ಸಮಾಜದ ಸುಧಾರಣೆಗೆ ಕಾರಣವಾದವು. ದೊಡ್ಡ ಮಟ್ಟದ…

Read More

ಮಡಿಕೇರಿ ಜು.30 : ಮುಂಗಾರಿನ ಆರ್ಭಟ ಕೊನೆಗೊಂಡ ಹಂತದಿಂದಲೇ ಜಿಲ್ಲೆಯ ಕೃಷಿಕರ ಸಮಸ್ಯೆಗಳು ಆರಂಭವಾಗಿದ್ದು, ಉತ್ತು ಬಿತ್ತಿ ಮಾಡಿದ್ದ ಕೃಷಿ ಮಳೆೆ, ಪ್ರವಾಹದಿಂದ ನಾಶವಾಗಿದ್ದರೆ, ಹೆಚ್ಚಿನ ಮಳೆಯಿಂದ ಉದುರುತ್ತಿರುವ ಕಾಫಿ, ಕರಿಮೆಣಸಿನಿಂದ ಗ್ರಾಮೀಣರು ಕಂಗೆಟ್ಟಿದ್ದಾರೆ. ಎಡೆಬಿಡದೆ ಸುರಿದ ಮಳೆಯಿಂದ ಕಿರು ತೊರೆಗಳು ಉಕ್ಕಿ ಹರಿದು ಮನೆಗಳಿಗೆ, ರಸ್ತೆಗಳಿಗೆ ಹಾನಿಯನ್ನುಂಟುಮಾಡಿದೆ. ಇದಕ್ಕೂ ಮಿಗಿಲಾಗಿ, ಕೃಷಿಯನ್ನೆ ನಂಬಿ ಬದುಕುತ್ತಿರುವ ಜಿಲ್ಲೆಯ ಗ್ರಾಮೀಣ ಭಾಗದ ಜನತೆಯ ಬದುಕು ಸಂಪೂರ್ಣ ಕತ್ತಲಲ್ಲಿ ಮುಳುಗುವಂತಾಗಿದೆ. ಕಾವೇರಿ ನದಿ ಪಾತ್ರದ ಬಹುತೇಕ ಭಾಗಗಳಲ್ಲಿ ವಾರದ ಕಾಲ ಪ್ರವಾಹದ ನೀರು ಗದ್ದೆ ಬಯಲುಗಳನ್ನು ಆವರಿಸಿದ್ದರಿಂದ ಹಲವೆಡೆಗಳಲ್ಲಿ ನಾಟಿ ಮಾಡಿದ್ದ ಭತ್ತದ ಸಸಿಗಳು ಕೊಳೆತು ಹೋಗಿವೆ. ಹಲವೆಡೆಗಳಲ್ಲಿ ಪ್ರವಾಹದ ನೀರು ಹೊತ್ತು ತರುವ ಮನ್ಣು ಮರಳು ಕೃಷಿ ಭೂಮಿಯನ್ನು ಆವರಿಸುವುದರಿಂದ ನಿರೀಕ್ಷೆಯ ಫಸಲನ್ನು ಕೃಷಿಕ ಪಡೆಯಲು ಸಾಧ್ಯವಾಗದೆ ಇರುವ ದುರ್ಬರ ಸನ್ನಿವೇಶಗಳು ನಿಧಾನವಾಗಿ ಅನಾವರಣಗೊಳ್ಳಲಾರಂಭಿಸಿದೆ. ಕೊಡಗಿನಲ್ಲಿ ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಮಳೆ ಆರಂಭವಾಗುತ್ತದೆ. ಹದವಾಗಿ ಸುರಿಯುವ ಮಳೆಯನ್ನು ಆಧರಿಸಿ, ಜೂನ್ ಕೊನೆಯ ಭಾಗದಲ್ಲಿ…

Read More

ಮಡಿಕೇರಿ ಜು.30 : ಚೆನ್ನೈನಲ್ಲಿ ನಡೆದ “ರಾಬಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಫೆಸ್ಟಿವಲ್” ನಲ್ಲಿ ಕುಶಾಲನಗರದ ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ನೃತ್ಯ ಶಾಲೆಯು ಭಾಗವಹಿಸಿ ಪ್ರಶಸ್ತಿ ಗೆದ್ದು ಇದೀಗ 3 ನೇ ವಿಶ್ವ ದಾಖಲೆಯ ಗರಿಯನ್ನು ಮುಡಿಗೇರಿಸಿಕೊಂಡಿದೆ. ಸುಮಾರು 90ಕ್ಕೂ ಅಧಿಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದು ಐವತ್ತಕ್ಕೂ ಹೆಚ್ಚು ಮಕ್ಕಳ ಹೆಸರನ್ನು ವಿಶ್ವದಾಖಲೆ ಪುಸ್ತಕದಲ್ಲಿ ನಮೂದಿಸಿಕೊಂಡಿದ್ದ ಹೆಗ್ಗಳಿಕೆಯ ಏಕೈಕ ನೃತ್ಯ ಶಾಲೆ ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ನ 11 ವಿದ್ಯಾರ್ಥಿಗಳು “ಹಸಿವಿನ ಬೆಲೆ ಮತ್ತು ಆಹಾರವನ್ನು ಅನಾವಶ್ಯಕ ಪೋಲು ಮಾಡಬಾರದು” ಎಂಬ ಸಂದೇಶದ ವಿಭಿನ್ನ ನೃತ್ಯವನ್ನು ಪ್ರದರ್ಶಿಸಿ ಪ್ರೇಕ್ಷಕರು ಹಾಗೂ ತೀರ್ಪುಗಾರರನ್ನು ಭಾವುಕರನ್ನಾಗಿಸಿ ಮೆಚ್ಚುಗೆಗೆ ಪಾತ್ರರಾದರು. ವಿದ್ಯಾರ್ಥಿಗಳಾದ ಪ್ರಾರ್ಥನಾ ಎಂ.ಪಿ, ಕೋಯಲ್ ಪೊನ್ನಕ್ಕ ಯು.ಎ, ಲಿಯೋನೆಲ್ ಲ್ಯೂಕ್ ಡಿಸೋಜಾ, ಧನ್ಯ ಎಸ್.ಎಲ್, ರನ್ಯ ವಿ, ಚಿನ್ಮಯ್ ಎನ್.ಗೌಡ, ಅಕ್ಷಿತಾ ಕೆ.ಎಲ್, ವಿಸ್ಮಯ ಎಂ.ಎ, ಇಬ್ಬನಿ ಪಿ.ಎಲ್, ಅನನ್ಯ ಜೆ.ಎನ್ ಹಾಗೂ ಕೌಶಿಕ್…

Read More

ಮಡಿಕೇರಿ ಜು.30 : ಕಳೆದ ವಾರ ಸುರಿದ ಭಾರೀ ಮಳೆಯಿಂದ ಸೇತುವೆ ಮುರಿದು ಸಂಪರ್ಕ ಕಡಿದುಕೊಂಡ ದಕ್ಷಿಣ ಕೊಡಗಿನ ನಿಟ್ಟೂರು ಗ್ರಾ.ಪಂ ವ್ಯಾಪ್ತಿಯ ಚಿಣ್ಣರ ಹಾಡಿಗೆ ತೆರಳುವ ತೋಡಿಗೆ ಮಳೆಗಾಲದ ನಂತ ನೂತನ ಸೇತುವೆ ನಿರ್ಮಿಸಲಾಗುವುದು ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭರವಸೆ ನೀಡಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ ಮಳೆಹಾನಿ ಪ್ರದೇಶಗಳನ್ನು ಪರಿಶೀಲಿಸಿದ ಅವರು ಚಿಣ್ಣರ ಹಾಡಿಗೆ ತೆರಳುವ ತೋಡಿಗೆ ತಾತ್ಕಾಲಿಕವಾಗಿ ನಿರ್ಮಿಸಿರುವ ಕಾಲು ಸೇತುವೆಯನ್ನು ವೀಕ್ಷಿಸಿದರು. ಇಲ್ಲಿನ ನಿವಾಸಿಗಳ ಸಂಚಾರಕ್ಕೆ ಈ ಸೇತುವೆ ಸುರಕ್ಷಿತವಾಗಿರದೆ ಇರುವುದರಿಂದ ಮಳೆಗಾಲ ಕಳೆದ ತಕ್ಷಣ ನೂತನ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊನ್ನಣ್ಣ ತಿಳಿಸಿದರು. ನಿಟ್ಟೂರು ಗ್ರಾ.ಪಂ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ, ಉಪಾಧ್ಯಕ್ಷೆ ಅಳಮೇಂಗಡ ಪವಿತಾ, ಸದಸ್ಯರಾದ ಚಕ್ಕೇರ ಸೂರ್ಯ ಅಯ್ಯಪ್ಪ. ಪಡಿಞರಂಡ ಕವಿತಾ ಪ್ರಭು, ಅಪ್ಪಣ್ಣ ಅಮ್ಮಣಿ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಪೊರಂಗಡ ಪವನ್ ಚಿಟ್ಟಿಯಪ್ಪ, ಜಿ.ಪಂ ಮಾಜಿ ಸದಸ್ಯರಾದ ಬಾನಂಡ ಪ್ರಥ್ವಿ, ಬಾಳೆಲೆ ಪಂಚಾಯ್ತಿ ಸದಸ್ಯರಾದ ಅದೇಂಗಡ…

Read More

ಮಡಿಕೇರಿ ಜು.30 : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ), ಸಂಘದ ಕ್ರೀಡಾ ಸಮಿತಿ ಹಾಗೂ ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿಮಹೋತ್ಸವ ಕ್ರೀಡಾ ಸಮಿತಿ ಆಶ್ರಯದಲ್ಲಿ ಇದೇ ಆಗಸ್ಟ್ 5ರಂದು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗಾಗಿ ಒಳಾಂಗಣ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಚೆಸ್, ಟೇಬಲ್ ಟೆನ್ನಿಸ್, ಕೇರಂ ಮತ್ತು ಮೈಂಡ್ ಗೇಮ್ ಸ್ಪರ್ಧೆಗಳು ನಡೆಯಲಿವೆ. ಟೇಬಲ್ ಟೆನಿಸ್‌ನಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಹಾಗೂ ಮಹಿಳೆಯರಿಗೆ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಟೇಬಲ್ ಟೆನಿಸ್ ಮತ್ತು ಕೇರಂ ಡಬಲ್ಸ್ಗೆ ಸ್ಪರ್ಧಿಗಳೇ ಜೋಡಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ರವೇಶ ಶುಲ್ಕ 100 ರೂ. ನಿಗದಿಪಡಿಸಲಾಗಿದ್ದು, ಹೆಸರು ನೋಂದಾವಣೆಗೆ ಕೊನೇ ದಿನ ಆಗಸ್ಟ್ 01, ಸಂಜೆ 5 ಗಂಟೆ. ಸ್ಪರ್ಧಿಗಳು ನವೀನ್ ಸುವರ್ಣ (9880191566) ಅವರಲ್ಲಿ ಹೆಸರು ನೋಂದಾಯಿಸಿಕೊಂಡು, ಅದೇ ಮೊಬೈಲ್ ಸಂಖ್ಯೆಗೆ ಪ್ರವೇಶ ಶುಲ್ಕದ ಹಣವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು ಎಂದು, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ರೀಡಾ ಸಮಿತಿ ಸಂಚಾಲಕ ಮಂಜು ಸುವರ್ಣ…

Read More

ಮಡಿಕೇರಿ ಜು.30 : ಸುಮಾರು 20 ವರ್ಷದ ಗಂಡು ಕಾಡಾನೆಯೊಂದು ತೋಟದಲ್ಲಿ ಸತ್ತು ಬಿದ್ದಿರುವ ಘಟನೆ ಸುಂಟಿಕೊಪ್ಪ ಹೋಬಳಿಯ ಕಂಬಿಬಾಣೆ ಗ್ರಾಮದ ಪರ್ಚಿಕೆರೆ ಎಂಬಲ್ಲಿ ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿಯೇ ಈ ಘಟನೆ ನಡೆದಿದ್ದು, ತಡವಾಗಿ ಕಾಡಾನೆಯ ದೇಹ ಗೋಚರಿಸಿದೆ. ವಿದ್ಯುತ್ ಸ್ಪರ್ಷದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆಯಾದರೂ ಬೇಲಿಗೆ ಬಳಸುವ ಮುಳ್ಳು ತಂತಿಯ ಉರುಳು ಕುತ್ತಿಗೆಯಲ್ಲಿರುವುದು ಕಂಡು ಬಂದಿದೆ. ಅರಣ್ಯ ಇಲಾಖೆ ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ, ಡಿಸಿಎಫ್ ಪೂವಯ್ಯ, ಪೊಲೀಸ್ ಶ್ವಾನದಳ, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡರು. ಪಶುವೈದ್ಯ ಡಾ.ಚಿಟ್ಟಿಯಪ್ಪ ಅವರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

Read More

ಮಡಿಕೇರಿ ಜು.30 : ನಿಷೇಧಿತ ಮಾದಕ ವಸ್ತುಗಳ ಸರಬರಾಜು ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಕೊಡಗು ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಕೊಟ್ಟಮುಡಿ ನಿವಾಸಿ ರಿಜ್ವಾನ್ ಎಂ.ಎ(26) ಬಂಧಿತ ಆರೋಪಿಯಾಗಿದ್ದಾನೆ. ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಜಗದೀಶ್ ಎಂ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಉಮೇಶ್ ಯು, ಪಿಎಸ್‌ಐ ವಾಣಿಶ್ರೀ ಬಿ.ಎಸ್, ಸಿಬ್ಬಂದಿಗಳು ಹಾಗೂ ಡಿಸಿಆರ್‌ಬಿ ಅವರುಗಳನ್ನೊಳಗೊಂಡ ವಿಶೇಷ ತಂಡ ತನಿಖೆ ಕೈಗೊಂಡು ಬೆಂಗಳೂರು ದಾಸರಹಳ್ಳಿಯಲ್ಲಿ ಆರೋಪಿಯನ್ನು ಬಂಧಿಸಿತು. ಪೊಲೀಸರ ದಕ್ಷ ಕಾರ್ಯಾಚರಣೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮಾದಕ ವಸ್ತುಗಳನ್ನು ಬಳಸುವ ಮತ್ತು ಮಾರಾಟ ಮಾಡುವ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಕೆ.ಎಸ್.ಪಿ ತಂತ್ರಾಂಶ/ಆಪ್‌ನ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.

Read More