ಮಡಿಕೇರಿ ಜು.27 : ಮಾಯಮುಡಿ ಗ್ರಾ.ಪಂ ನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಯಮುಡಿ ಗ್ರಾ.ಪಂ ಗೆ ನಾಲ್ಕು ಬಾರಿ ಮಾಯಮುಡಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಟಾಟು ಮೊಣ್ಣಪ್ಪ ಮೊದಲ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಒಂದು ಅವಧಿಗೆ ಕಿರುಗೂರು ಕ್ಷೇತ್ರದಿಂದ ವಿರಾಜಪೇಟೆ ತಾಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದರು. ಉಪಾಧ್ಯಕ್ಷರಾಗಿ ಮಾಯಮುಡಿ ಗ್ರಾ.ಪಂ ಗೆ ಎರಡು ಬಾರಿ ಆಯ್ಕೆಯಾಗಿದ್ದ ಪಿ.ಎಸ್.ಶಾಂತ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಮೀನುಗಾರಿಕೆ ಇಲಾಖೆಯ ನಿರ್ದೇಶಕ ಸಚಿನ್ ಕಾರ್ಯನಿರ್ವಹಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ, ನಿರ್ಗಮಿತ ಅಧ್ಯಕ್ಷರಾದ ಎಂ.ಪಿ.ಮೀನಾ, ಉಪಾಧ್ಯಕ್ಷರಾದ ಕೆ.ವಿ.ಸುಮಿತ್ರ, ಸದಸ್ಯರುಗಳಾದ ಆಪಟ್ಟೀರ ವಿಠಲ ನಾಚಯ್ಯ, ಟಿ.ಸಿ.ನಾರಾಯಣ, ಕೆ.ಕೆ.ಶಭರಿಷ್, ವಲಯ ಕಾಂಗ್ರೆಸ್ ಅಧ್ಯಕ್ಷರಾರ ಸಿ.ಕೆ.ಚಿಣ್ಣಪ್ಪ, ಸಣ್ಣವಂಡ ಎಂ.ವಿಶ್ವನಾಥ್, ನಾಮೇರ ನರೇಶ್ ವಿಶ್ವನಾಥ್, ಆಪಟ್ಟೀರ ಅರುಣ, ಆಪಟ್ಟೀರ ಅಯ್ಯಪ್ಪ, ಸಿದ್ದಪ್ಪ, ಹೆಚ್.ಆರ್.ಸುಶೀಲ, ವಿನೋದ್ ಕುಮಾರ್ ಸೇರಿದಂತೆ ಹದಿನೈದು ಮಂದಿ ಗ್ರಾ.ಪಂ ಸದಸ್ಯರು ಹಾಜರಿದ್ದರು.
ಲೇಖಕ: admin
ಮಡಿಕೇರಿ ಜು.27 : ಮಡಿಕೇರಿಯ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ರೋಟರಿ ವುಡ್ಸ್ ಮತ್ತು ನೆಹರು ಯುವಕೇಂದ್ರದ ವತಿಯಿಂದ ವನಮಹೋತ್ಸವ ಆಚರಿಸಲಾಯಿತು. ತಿಮ್ಮಯ್ಯ ಸ್ಮಾರಕ ಭವನ ವ್ಯಾಪ್ತಿಯಲ್ಲಿ ಹತ್ತು ಸಸಿಗಳನ್ನು ನೆಡಲಾಯಿತು. ರೋಟರಿ ವುಡ್ಸ್ ಅಧ್ಯಕ್ಷ ಕೆ.ವಸಂತ್ ಕುಮಾರ್, ಕಾಯ೯ದಶಿ೯ ಕಿಗ್ಗಾಲು ಹರೀಶ್, ಸಹಾಯಕ ಗವನ೯ರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ಕ್ಲಬ್ ಖಜಾಂಜಿ ಧನಂಜಯ ಶಾಸ್ತ್ರಿ, ನೆಹರು ಯುವಕೇಂದ್ರದ ಸುಕುಮಾರ್, ದೀಪ್ತಿ, ರಂಜಿತ , ತಿಮ್ಮಯ್ಯ ಮ್ಯೂಸಿಯಂ ವ್ಯವಸ್ಥಾಪಕ ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ ಸೇರಿದಂತೆ ರೋಟರಿ ಸದಸ್ಯರು ಪಾಲ್ಗೊಂಡಿದ್ದರು.
ಮಡಿಕೇರಿ ಜು.27 : ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳು, ಇಂದಿನ ನೀರಿನ ಮಟ್ಟ 2853.61 ಅಡಿಗಳು. ಕಳೆದ ವರ್ಷ ಇದೇ ದಿನ 2856.46 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 16.40 ಮಿ.ಮೀ., ಇಂದಿನ ನೀರಿನ ಒಳಹರಿವು 14267 ಕ್ಯುಸೆಕ್, ಕಳೆದ ವರ್ಷ ಇದೇ ದಿನ 2394 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 13000 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 1841 ಕ್ಯುಸೆಕ್. ನಾಲೆಗೆ 20 ಕ್ಯುಸೆಕ್.
ಮಡಿಕೇರಿ ಜು.27 : ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 34.49 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 2.46 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1497.82 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1880.23 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 60.25 ಮಿ.ಮೀ. ಕಳೆದ ವರ್ಷ ಇದೇ ದಿನ 3.97 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2191.20 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2639.55 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 15.90 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 1.66 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1113.68 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1485.86 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 27.33 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 1.76 ಮಿ.ಮೀ.…
ಮಡಿಕೇರಿ ಜು.27 : ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸೈನಿಕರಿಗೆ, ಮಾಜಿ ಸೈನಿಕರಿಗೆ ದೊರಕಬೇಕಾದ ಸೂಕ್ತ ಗೌರವ ಸಿಕ್ಕುತ್ತಿಲ್ಲ ಎಂಬ ನೋವು ಕಾಡುತ್ತದೆ ಎಂದು ವಿಷಾದಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಯುದ್ದಕಾಲದಲ್ಲಿ ಮಾತ್ರ ಸೈನಿಕರನ್ನು ಸ್ಮರಿಸುವ ಬದಲಿಗೆ ಸದಾ ದೇಶ ರಕ್ಷಣೆಯ ಪಣ ತೊಟ್ಟಿರುವ ಭಾರತೀಯ ಸೈನಿಕರನ್ನು ಸ್ಮರಿಸುವಂತಾಗಬೇಕು ಎಂದು ಕರೆ ನೀಡಿದರು. ಕಾಗಿ೯ಲ್ ವಿಜಯ ದಿನಾಚರಣೆ ಹಿನ್ನಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಬುಧವಾರ ಸಂಜೆ ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂನ ಅಮರ್ ಜವಾನ್ ಸ್ಮಾರಕದಲ್ಲಿ ಪುಪ್ಪನಮನ ಸಲ್ಲಿಸಿದ ಪೊನ್ನಣ್ಣ ತರುವಾಯ ಕಾಯ೯ಕ್ರಮದಲ್ಲಿ ಮಾತನಾಡಿ, ದೇಶದ ವೀರಇತಿಹಾಸದೊಂದಿಗೇ ಸೈನಿಕರ ಕೊಡುಗೆಯನ್ನೂ ಮರೆಯಬಾರದು ಎಂದರು. ಯೋಧರ ನಾಡು ಎನಿಸಿದ ಕೊಡಗಿನಲ್ಲಿ ಯೋಧಸ್ಮರಣೆಗೆ ಮತ್ತಷ್ಟು ಹೆಚ್ಚಿನ ಪ್ರಚಾರ ದೊರಕಬೇಕು ಎಂದು ಅಭಿಪ್ರಾಯಪಟ್ಟರು. ಭಾರತದ ಸಂರಕ್ಷಣೆಗೆ ಯೋಧರು ನೀಡಿರುವ ತ್ಯಾಗಬಲಿದಾನವನ್ನು ಎಂದಿಗೂ ಮರೆಯಬಾರದು. ಇತಿಹಾಸದಲ್ಲಿ ಸೈನಿಕರು ದೇಶರಕ್ಷಣೆ ನಿಟ್ಟಿನಲ್ಲಿ ಮಾಡಿದ ಪರಾಕ್ರಮವನ್ನು ಸದಾ ಸ್ಮರಿಸಬೇಕು. ಇತಿಹಾಸ ಮರೆತದ್ದೇ ಆದರೆ ಯಾರೂ ಹೊಸ…
ಮಡಿಕೇರಿ ಜು.27 : ವನ್ಯಜೀವಿಗಳ ಅಂಗಾoಗ ಮತ್ತು ಬೇಟೆಗೆ ಬಳಸುವ ಆಯುಧಗಳನ್ನು ಹೊಂದಿದ್ದ ಆರೋಪಿಯನ್ನು ಹನೂರು ತಾಲ್ಲೂಕಿನ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಹನೂರು ತಾಲ್ಲೂಕಿನ ಜಲ್ಲಿಪಾಳ್ಯ ಗ್ರಾಮದ ನಿವಾಸಿ ಚಿನ್ನತಂಬಿ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಖಚಿತ ಮಾಹಿತಿಯ ಹಿನ್ನೆಲೆ ಈತನ ಮನೆಯ ಮೇಲೆ ದಾಳಿ ಮಾಡಿದ ಅರಣ್ಯ ಸಿಬ್ಬಂದಿಗಳು ಚಿಪ್ಪುಹಂದಿಯ ಚಿಪ್ಪುಗಳು, ಉಗುರುಗಳು, ಒಂದು ಚುಕ್ಕೆ ಜಿಂಕೆಯ ಕೊಂಬು, ಒಂದು ಕಸಾಪ್ ಕತ್ತಿ, 4 ಉರುಳುಗಳು ಮತ್ತು ಒಂದು ಚಾಕನ್ನು ವಶಪಡಿಸಿಕೊಂಡಿದ್ದಾರೆ.
ಮಡಿಕೇರಿ ಜು.27 : ಕಾರ್ಗಿಲ್ ದಿವಸ್ ಅಂಗವಾಗಿ ಮಾಜಿ ಸೈನಿಕ ಹಾಗೂ ಶಿವು ಸೈನಿಕ್ ಅಕಾಡೆಮಿ ವತಿಯಿಂದ ಪಿರಿಯಾಪಟ್ಟಣದಲ್ಲಿ ಬೈಕ್ ರ‍್ಯಾಲಿ ನಡೆಯಿತು.ರ‍್ಯಾಲಿಯನ್ನು ಉದ್ಘಾಟಿಸಿ ಮಾತನಾಡಿದ ಸೈನಿಕ್ ಅಕಾಡೆಮಿ ಅಧ್ಯಕ್ಷ ರಾವಂದೂರು ಶಿವು ಕಾರ್ಗಿಲ್ ಯುದ್ಧದಲ್ಲಿ ಸುಮಾರು 47 ಯೋಧರು ಹುತಾತ್ಮರಾಗುವ ಮೂಲಕ ನಮ್ಮ ದೇಶವನ್ನು ರಕ್ಷಿಸಿದ್ದಾರೆ. ಗಡಿಯಲ್ಲಿ ದೇಶ ಕಾಯುತ್ತಿರುವ ಪ್ರತಿಯೊಬ್ಬ ಸೈನಿಕನಿಗೂ ಗೌರವ ಅರ್ಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಾತಿ, ಮತ ಮತ್ತು ಧರ್ಮಗಳ ಹೆಸರಿನಲ್ಲಿ ಕಲಹ ನಡೆಸದೆ ಒಗ್ಗಟ್ಟನಿಂದ ದೇಶವನ್ನು ಕಟ್ಟಬೇಕು. ದೇಶ ಮತ್ತು ದೇಶದ ಕಾನೂನಿಗೆ ಗೌರವ ನೀಡಬೇಕು ಎಂದು ಕರೆ ನೀಡಿದರು. ಅಕಾಡಮಿ ಉಪಾಧ್ಯಕ್ಷ ಸ್ವಾಮಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಜೆ.ಅಶೋಕ್, ಮುಖಂಡ ಎಲೆ ಮಂಜು, ಮಾಜಿ ಸೈನಿಕರಾದ ಮಲ್ಲಯ್ಯ, ಮಂಜುನಾಥ್, ಜವರೇಗೌಡ ವಿದ್ಯಾರ್ಥಿಗಳಾದ ಕಿಶೋರ್, ಪ್ರಜ್ವಲ್, ಆದರ್ಶ್, ಮನೋಜ್, ಕಿರಣ್, ಸಂತೋಷ್, ಸುಮಂತ್, ಚಂದನ್ ಸೇರಿದಂತೆ ಮತ್ತಿತರರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಮಡಿಕೇರಿ ಜು. 27 : ಮಕ್ಕಳು ಹದಿಹರೆಯದ ವಯಸ್ಸಿನಲ್ಲಿ ಮನಸ್ಸಿನ ಸ್ವ ನಿಯಂತ್ರಣದೊಂದಿಗೆ ಕಠಿಣ ಪರಿಶ್ರಮದ ಮೂಲಕ ಗುರಿ ತಲುಪಬೇಕೆಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಕರೆ ನೀಡಿದ್ದಾರೆ. ನ್ಬಹುದೆಂದು ಕಿವಿ ಮಾತು ಹೇಳಿದರು.ಯುವ ಜನಾಂಗ ಮಾದಕ ವಸ್ತುಗಳ ಸೇವನೆ ಯಿಂದ ಮುಕ್ತ ರಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದರು. ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕೆ.ರಾಮರಾಜನ್ ಯುವ ಜನಾಂಗ ಮಾದಕ ವಸ್ತುಗಳ ಸೇವನೆ ಯಿಂದ ಮುಕ್ತ ರಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಕರೆ ನೀಡಿದರಲ್ಲದೇ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಎದುರಿಸ ಬಹುದಾದ ಸಮಸ್ಯೆ ಗಳು ಹಾಗೂ ಅವುಗಳನ್ನು ಹೇಗೆ ಮೆಟ್ಟಿ ನಿಂತು ಮುಂದೆ ಬರಬಹುದು ಎಂಬುದನ್ನು ತನ್ನ ಸ್ವಂತ ಅನುಭವದ ಮೂಲಕ ತಿಳಿಸಿದರು. ವಿದ್ಯಾರ್ಥಿಗೆ ಭವಿಷ್ಯದ ಗುರಿ ಉದ್ದೇಶ ಸ್ಪಷ್ಟ ವಾಗಿದ್ದು ನಿರಂತರ ಪ್ರಯತ್ನದಿಂದ ಯಶಸ್ಸು ಸಾಧಿಸಬಹುದು ಎನ್ನುವುದಕ್ಕೆ ತಮ್ಮ ಜೀವನದ ಹಾಗೂ ಅವರ ಸಹಪಾಠಿಗಳ…
ಮಡಿಕೇರಿ ಜು.27 : ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಪ್ರವಾಹದ ಪರಿಸ್ಥಿತಿಯಿಂದ ಕಾಫಿ ತೋಟಗಳು ಹಾನಿಗೀಡಾಗಿವೆ. ಕಾಫಿಗೆ ಕೊಳೆ ರೋಗ ತಗುಲಿದ್ದು, ಕಾಫಿ ಉದುರುತ್ತಿದೆ, ರೋಬಸ್ಟಾ ಕಾಫಿಗೆ ಹೆಚ್ಚು ಹಾನಿಯಾಗಿದೆ. ಬೆಳೆಗಾರರು ನಷ್ಟದ ಆತಂಕವನ್ನು ಎದುರಿಸುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಮನು ಸೋಮಯ್ಯ ಒತ್ತಾಯಿಸಿದ್ದಾರೆ. ರೈತ ಸಂಘ ನಡೆಸಿದ ಸಮೀಕ್ಷೆ ಪ್ರಕಾರ ಶೇ.50 ರಷ್ಟು ಬೆಳೆ ನಷ್ಟವಾಗಿದೆ. ಜಿಲ್ಲಾಡಳಿತ ತಕ್ಷಣ ಬೆಳೆಹಾನಿ ಸಮೀಕ್ಷೆಗೆ ಆದೇಶಿಸಬೇಕು ಮತ್ತು ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಮೂಲಕ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮಡಿಕೇರಿ ಜು.27 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರ ನೂತನ ಕಚೇರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಉದ್ಘಾಟಿಸಿದರು. ನಗರದ ಜಿಲ್ಲಾಡಳಿತ ಭವನ ಒಂದನೇ ಮಹಡಿಯಲ್ಲಿ ನೂತನವಾಗಿ ಆರಂಭವಾಗಿರುವ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಸೇರಿದಂತೆ ಮತ್ತಿರರು ಕಾರ್ಯಕರ್ತರು ಹಾಜರಿದ್ದರು.






