ಮುಂಡ್ಕೂರು ಶಾಂಭವಿ ನದಿಯ ದಡದಲ್ಲಿ ಒಂದು ಸುಂದರವಾದ ದೇವಸ್ಥಾನವಿರುವ ಸ್ಥಳ . ಇದು ಕಾರ್ಕಳ ತಾಲೂಕಿನ , ಉಡುಪಿ ಜಿಲ್ಲೆಯಲ್ಲಿದೆ. ಮುಂಡ್ಕೂರು ದೇವಸ್ಥಾನವು ಶ್ರೀ ದುರ್ಗಾಪರಮೇಶ್ವರಿಯ ದೇವಸ್ಥಾನವಾಗಿದ್ದು, ಇದಕ್ಕೆ 1300 ವರ್ಷಗಳಷ್ಟು ಇತಿಹಾಸವಿದೆ. ಇಲ್ಲಿಯ ಶ್ರೀ ದುರ್ಗಾಪರಮೇಶ್ವರಿಯು ಮಹಿಷಮರ್ಧಿನಿಯ ರೂಪದಲ್ಲಿದ್ದು, ತ್ರಿಶೂಲಧಾರಿಯಾಗಿ ಮಹಿಷನನ್ನು ಮರ್ಧಿಸುವ ರೂಪದಲ್ಲಿದೆ. ಮುಂಡಾಸುರನನ್ನು ಶ್ರೀ ದುರ್ಗಾಪರಮೇಶ್ವರಿ ಸಂಹರಿಸಿದ ಪುಣ್ಯ ಕ್ಷೇತ್ರ ಮುಂಡ್ಕೂರು ಎಂದು ಪ್ರಸಿದ್ಧಿ ಪಡೆದಿದೆ. ಸ್ಥಳ ಪುರಾಣ ಅರಿತ ಭಾರ್ಗವ ಋಷಿಗಳು ಸುರಥ ರಾಜನಿಂದ ಈ ಪುಣ್ಯ ಸ್ಥಳದಲ್ಲಿ ಮಹಿಷಮರ್ಧಿನಿ ದೇವಿಯ ವಿಗ್ರಹವನ್ನು ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಿದರು. ಕಾಲಕ್ರಮೇಣ ಜೈನ ವಂಶದ ವೀರವರ್ಮ ಎಂಬ ರಾಜನ ಆಳ್ವಿಕೆಯ ಸಂಧರ್ಭದಲ್ಲಿ ಮಂಜಪ್ಪ ಅಜ್ರಿ ಎಂಬ ದುಷ್ಟ ಮಂತ್ರಿಯ ದುರುಪದೇಶ ರಾಜ್ಯಾದ್ಯಂತ ಅನ್ಯಾಯ, ಅಕ್ರಮ, ಅರಾಜಕತೆಗಳು ತಾಂಡವವಾಡ ತೊಡಗಿದವು. ಶಾಂಭವಿ ನದಿಯ ಪಶ್ಚಿಮದಲ್ಲಿರುವ ಉಳೆಪಾಡಿ ಗ್ರಾಮದ ಗುಡ್ಡೆಸಾನ ಎಂಬಲ್ಲಿ ದೈವಾಂಶ ಸಂಭೂತರಾದ ಕಾಂತ ಬಾರೆ ಬೂದ ಬಾರೆ ಎಂಬ ವೀರ ಸಹೋದರರಿದ್ದರು. ಪ್ರತಿನಿತ್ಯ ಅವರು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಿಯ…
ಲೇಖಕ: admin
ಮಡಿಕೇರಿ ಆ.22 : ಬಸ್ ಡಿಕ್ಕಿಯಾಗಿ ಹಾನಿಗೊಳಗಾಗಿರುವ ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪಿಸಲು ತಗಲುವ ಸಂಪೂರ್ಣ ವೆಚ್ಚವನ್ನು ಕೆಎಸ್‌ಆರ್‌ಟಿಸಿ ಭರಿಸಬೇಕು ಎಂದು ಪೊನ್ನಂಪೇಟೆ ಕೊಡವ ಸಮಾಜದ ನಿರ್ದೇಶಕ ಚೆಪ್ಪುಡಿರ ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜನರಲ್ ತಿಮ್ಮಯ್ಯ ಅವರ ಪ್ರತಿಮೆ ನೆಲಕ್ಕುರುಳಿರುವ ಘಟನೆ ವಿಷಾದನೀಯ, ಇದು ಬಸ್ ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯಿಂದಲೇ ನಡೆದಿದೆ ಎಂದು ಆರೋಪಿಸಿದ್ದಾರೆ. ಈಗ ಇರುವ ವೃತ್ತದಲ್ಲೇ ತಿಮ್ಮಯ್ಯ ಅವರ ಪ್ರತಿಮೆಯನ್ನು ಮರು ಸ್ಥಾಪಿಸಬೇಕು. ವೀರ ಸೇನಾನಿಗೆ ಗೌರವ ಸೂಚಕವಾಗಿ ವೃತ್ತವನ್ನು ಅಭಿವೃದ್ಧಿ ಪಡಿಸಬೇಕು. ಅಪಘಾತಕ್ಕೆ ಕಾರಣಕರ್ತನಾದ ಬಸ್ ಚಾಲಕನನ್ನು ಸೇವೆಯಿಂದ ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕು. ಪ್ರತಿಮೆಯನ್ನು ಮರು ಸ್ಥಾಪಿಸುವ ಯೋಜನೆಗೆ ಕೆಎಸ್‌ಆರ್‌ಟಿಸಿಯಿಂದ ಹಣ ಭರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿರುವ ವೀರ ಯೋಧರ ಪ್ರತಿಮೆ ಹಾಗೂ ಸ್ಮಾರಕಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ರಾಕೇಶ್ ದೇವಯ್ಯ…
ಮಡಿಕೇರಿ ಆ.22 : ಮೈಸೂರು ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಆ.30 ರಂದು ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಸ್ನಾತಕೋತ್ತರ ಸಾಮಾನ್ಯ ಪರೀಕ್ಷೆಯ ಉಚಿತ ಅಣುಕು ತರಬೇತಿ ನಡೆಯಲಿದೆ ಎಂದು ಕಾಲೇಜಿನ ಆಡಳಿತಾಧಿಕಾರಿ ಎ.ಎಂ.ಅನಿರುದ್ಧ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯೋಜಿಸುವ ಪಿಜಿಸಿಇಟಿ ಗೆ ಹಾಜರಾಗುವ ಮೂಲಕ ಸ್ನಾತಕೋತ್ತರ ಕೋರ್ಸ್‍ಗಳ (ಎಂಸಿಎ-ಎಂಬಿಎ) ಪ್ರವೇಶ ಬಯಸುವ ಪದವೀಧರರಿಗೆ ಈ ಅಣುಕು ಪರೀಕ್ಷೆ ಸಹಕಾರಿಯಾಗಲಿದ್ದು, ಅಣುಕು ಪಿಜಿಸಿಇಟಿ ನೈಜ ಪರೀಕ್ಷೆಯನ್ನೇ ಅನುಸರಿಸುತ್ತದೆ ಮತ್ತು ಪ್ರಶ್ನೆ ಪತ್ರಿಕೆಗಳನ್ನು ಆಯಾ ವಿಷಯಗಳ ತಜ್ಞ ಶಿಕ್ಷಕರು ತಯಾರಿಸುತ್ತಾರೆ ಎಂದು ಮಾಹಿತಿ ನೀಡಿದರು. ಆಸಕ್ತ ವಿದ್ಯಾರ್ಥಿಗಳು ಬೆಳಿಗ್ಗೆ 10 ಗಂಟೆಗೆ ಸ್ಥಳಕ್ಕೆ ಹಾಜರಾಜರಾಗುವಂತೆ ಮಾಹಿತಿ ನೀಡಿದ ಅವರು, ಪೂರ್ವ ನೋಂದಣಿ ಕಡ್ಡಾಯವಾಗಿದ್ದು, ಎಂಸಿಎ ಆಕಾಂಕ್ಷಿಗಳು https://forms.gle/Ds3MU51BZNtrTu199 ಹೆಚ್ಚಿನ ವಿವರಗಳಿಗಾಗಿ 9620228107, ಎಂಬಿಎ ಆಕಾಂಕ್ಷಿಗಳು https://forms.gle/apV2u8jhCyj3t36X9 ಹೆಚ್ಚಿನ ವಿವರಗಳಿಗಾಗಿ 9886414144 ಸಂಪರ್ಕಿಸುವಂತೆ ಅನಿರುದ್ಧ ತಿಳಿಸಿದರು. ಆ.28 ರಿಂದ ಸೆ.1 ರ ವರೆಗೆ ಐದು ದಿನಗಳ ಕಾಲ ಡಿಸಿಇಟಿಯ…
ಮಡಿಕೇರಿ ಆ.22 : ಮಾಜಿ ಸೈನಿಕರ ಅನುಕೂಲಕ್ಕಾಗಿ ನಗರದ ಮಹದೇವಪೇಟೆಯಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಸುಸಜ್ಜಿತ ಕಚೇರಿಯನ್ನು ತೆರೆಯಲಾಗಿದ್ದು, ಆ.25 ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಪಿ.ಸೋಮಣ್ಣ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.30 ಗಂಟೆಗೆ ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ ಕಚೇರಿಯನ್ನು ಉದ್ಘಾಟಿಸಲಿದ್ದು, ಮಾಜಿ ಸೈನಿಕರು ಹಾಗೂ ಕುಟುಂಬದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಅಖಿಲ ಕರ್ನಾಟ ಮಾಜಿ ಸೈನಿಕರ ಸಂಘವು 15 ನವೆಂಬರ್ 2021ರಲ್ಲಿ ಅಧಿಕೃತವಾಗಿ ವಿರಾಜಪೇಟೆಯಲ್ಲಿ ಉದ್ಘಾಟನೆಗೊಂಡು ಮೊದಲ ಸರ್ವ ಸದಸ್ಯರ ಸಭೆಯನ್ನು ಮಡಿಕೇರಿಯಲ್ಲಿ ನಡೆಸಿ ಎರಡನೇ ಸರ್ವ ಸದಸ್ಯರ ಸಭೆಯನ್ನು ವಿರಾಜಪೇಟೆಯಲ್ಲಿ ಯಶಸ್ವಿಯಾಗಿ ನಡೆಸಿದೆ. ಈ ವರೆಗೆ ಸಂಘವು ಹಲವು ಕಾರ್ಯಕ್ರಮಗಳನ್ನು ನಡೆಸಿದ್ದು, ಮಾಜಿ ಸೈನಿಕರ ಕಷ್ಟಕ್ಕೆ ಸ್ಪಂದಿಸಿದೆ. ಅಲ್ಲದೆ ಮಾಜಿ ಸೈನಿಕರ ಸೌಲಭ್ಯಗಳಿಗಾಗಿ ಸಕರಾತ್ಮಾಕ ಹೋರಾಟ ನಡೆಸಿದ್ದು, ಕೆಲವು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ಸು ಕಂಡಿದ್ದು, ಹಲವು ಸಮಸ್ಯೆಗಳು ಬಾಕಿ ಉಳಿದುಕೊಂಡಿದೆ ಎಂದರು.…
ಮಡಿಕೇರಿ ಆ.22 : ಗಾಂಜಾ ಸಾಗಾಟ, ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಮತ್ತಿತರ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವ ಆಟೋ ಚಾಲಕರ ‘ಚಾಲನಾ ಪರವಾನಗಿ’ಯನ್ನು ನಿರ್ದಿಷ್ಟ ಅವಧಿಗೆ ರದ್ದುಗೊಳಿಸುವಂತೆ ಆಟೋ ಚಾಲಕರ ಸಂಘದ ಪದಾಧಿಕಾರಿಗಳೇ ಪೊಲೀಸರನ್ನು ಆಗ್ರಹಿಸಿದ್ದಾರೆ. ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಂಚಾರಿ ಠಾಣಾಧಿಕಾರಿ ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೊಲೀಸ್ ಮತ್ತು ಚಾಲಕರ ಸಭೆಯಲ್ಲಿ ಜಿಲ್ಲಾ ಆಟೋ ಚಾಲಕರ ಮತ್ತು ಮಾಲೀಕರ ಸಂಘ ನಿಯಮ ಉಲ್ಲಂಘಿಸುತ್ತಿರುವ ಚಾಲಕರ ಬಗ್ಗೆ ಗಮನ ಸೆಳೆದರು. ಸಂಘದ ಅಧ್ಯಕ್ಷ ಡಿ.ಹೆಚ್.ಮೇದಪ್ಪ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸುವ ಆಟೋ ಚಾಲಕರಿದ್ದಾರೆ. ಇವರುಗಳ ಚಾಲನಾ ಪರವಾನಗಿಯನ್ನು ಕನಿಷ್ಟ ಒಂದು ವರ್ಷದವರೆಗೆ ಸ್ಥಗಿತಗೊಳಿಸುವ ಕಠಿಣ ಕ್ರಮ ಕೈಗೊಳ್ಳಿ. ಇಂತಹ ವಿಚಾರದಲ್ಲಿ ಸಂಘ ಎಂದಿಗೂ ಚಾಲಕರ ಪರ ನಿಲ್ಲುವುದಿಲ್ಲವೆಂದು ಸ್ಪಷ್ಟಪಡಿಸಿದರು. ::: ನಿಲುಗಡೆ ಸಮಸ್ಯೆ ::: ಮಡಿಕೇರಿ ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ವಾಹನ ನಿಲುಗಡೆ ಕಷ್ಟವಾಗಿದೆ. ಆಟೋ ಚಾಲಕರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಗೆ ತೆರಳಿದಾಗ ಆಸ್ಪತ್ರೆಯ…
ಬೆಂಗಳೂರು: ಚಂದ್ರಯಾನ-3 ಮಿಷನ್ ನಿಗದಿತ ಹಂತದಲ್ಲಿದೆ ಎಂದು ಇಸ್ರೋ ಮಂಗಳವಾರ ತಿಳಿಸಿದೆ, ಚಂದ್ರನ ಮೇಲ್ಮೈಯಲ್ಲಿ ತನ್ನ ಲ್ಯಾಂಡರ್‌ನ ನಿಗದಿತ ಸ್ಪರ್ಶದ ಸಮಯವನ್ನು ಅಂದಾಜಿಸಿರುವ ಇಸ್ರೊ ಅದರ ಬಗ್ಗೆ ಮಾಹಿತಿ ನೀಡಿದೆ. ಬೆಂಗಳೂರಿನ ಇಸ್ರೊ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC) ನಲ್ಲಿರುವ ಮಿಷನ್ ಆಪರೇಷನ್ ಕಾಂಪ್ಲೆಕ್ಸ್ (MOX) ಉತ್ಸಾಹದಿಂದ ಯಶಸ್ಸಿಗೆ ಕಾಯುತ್ತಿದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಮಿಷನ್ ವೇಳಾಪಟ್ಟಿಯಲ್ಲಿದೆ. ವ್ಯವಸ್ಥೆಗಳು ನಿಯಮಿತ ತಪಾಸಣೆಗೆ ಒಳಗಾಗುತ್ತಿವೆ. ಸುಗಮ ನೌಕಾಯಾನ ಮುಂದುವರಿಯುತ್ತಿದೆ ಎಂದು ಇಸ್ರೋ ತಿಳಿಸಿದೆ. ಮಾಕ್ಸ್/ಇಸ್ಟ್ರಾಕ್ ನಲ್ಲಿ ಲ್ಯಾಂಡಿಂಗ್ ನ ನೇರ ಪ್ರಸಾರವು ನಾಳೆ ಬುಧವಾರ ಸಂಜೆ 5.20 ಕ್ಕೆ ಪ್ರಾರಂಭವಾಗುತ್ತದೆ, ಸಂಜೆ 6.04 ರ ಸುಮಾರಿಗೆ ದಕ್ಷಿಣ ಧ್ರುವ ಪ್ರದೇಶದ ಬಳಿ ರೋವರ್‌ನೊಂದಿಗೆ ಲ್ಯಾಂಡರ್‌ನ ನಿಗದಿತ ಸ್ಪರ್ಶವಾಗಲಿದೆ.
ಮಡಿಕೇರಿ ಆ.22 : ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕೂಡ್ಲೂರು ಗ್ರಾಮದ ಕಾವೇರಿ ಹೊಳೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಅಂದಾಜು 45 ರಿಂದ 50 ವರ್ಷದ ಮಹಿಳೆಯಾಗಿದ್ದು, ಮೃತದೇಹದಲ್ಲಿ ಬಿಳಿಹರಳಿನ ಲೋಹದಂತಿರುವ ಒಂದು ಜೊತೆ ಓಲೆ, ಎರಡು ಕೈಗಳಲ್ಲಿ ಲೋಹದ ಬಳೆ, ಬಲಗೈನಲ್ಲಿ ಒಂದು ಲೋಹದ ಉಂಗುರ, ಕುತ್ತಿಗೆಯಲ್ಲಿ ಬಿಳಿದಾರದಲ್ಲಿ ಲಿಂಗ ಹಾಗೂ ಒಂದು ಬೀಗ ಕೀ ದೊರಕಿದೆ. ಮೃತ ಹೆಂಗಸಿನ ಬಗ್ಗೆ ಮಾಹಿತಿ ದೊರೆತಲ್ಲಿ ಕುಶಾಲನಗರ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ 08276-278433, 08276-274400, 08272-229000 ಸಂಪರ್ಕಿಸಬಹುದಾಗಿದೆ.
ಮಡಿಕೇರಿ ಆ.22 : ಚೆಂಬು ವಲಯ ಕಾಂಗ್ರೆಸ್ ಸಭೆಯು ವಲಯಾಧ್ಯಕ್ಷ ರವಿರಾಜ್ ಹೊಸೂರು ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪಕ್ಷದ ಸಂಘಟನೆ ಮತ್ತು ಅಭಿವೃದ್ಧಿ ಕೆಲಸಗಳಲ್ಲಿ ಬೂತ್ ಅಧ್ಯಕ್ಷರುಗಳ ಜವಾಬ್ದಾರಿಯ ಬಗ್ಗೆ ಚರ್ಚಿಸಲಾಯಿತು. ಸಭೆಗೆ ಗೈರಾದ ಬೂತ್ ಅಧ್ಯಕ್ಷರು ಮತ್ತು ಪಂಚಾಯತ್ ಸದಸ್ಯರು ಮಾಹಿತಿ ನೀಡುವಂತೆ ಸರ್ವಾನುಮತದಿಂದ ನಿರ್ಧರಿಸಲಾಯಿತು. ಅಲ್ಲದೇ ಪ್ರತಿ ತಿಂಗಳ ಮೂರನೇ ಶನಿವಾರದಂದು ವಲಯ ಕಾಂಗ್ರೆಸ್ ಸಭೆಯನ್ನು ನಡೆಸುವುದಾಗಿ ತೀರ್ಮಾನಿಸಲಾಯಿತು. ಹಿಂದಿನ ಅವಧಿಯ ಹಲವು ಕಾಮಗಾರಿಗಳ ಅವ್ಯವಹಾರದ ಬಗ್ಗೆ ಚರ್ಚಿಸಲಾಯಿತಲ್ಲದೆ ಪ್ರಸಕ್ತ ಗ್ರಾಮದಲ್ಲಿ ನಡೆಯುವ ಕಾಮಗಾರಿಗಳ ಬಗ್ಗೆ ಹಾಗೂ ಮುಂದಿನ ಅಭಿವೃದ್ಧಿಯ ಬಗ್ಗೆ ಸೂರಜ್ ಹೊಸೂರ್ ಸಭೆಗೆ ವಿಸ್ತೃತವಾಗಿ ವಿವರಿಸಿದರು. ಈ ಹಿಂದೆ ನಡೆದ ಜನಸ್ಪಂದನ ಸಭೆಯಲ್ಲಿ ಶಾಸಕರು ಕೈಗೊಂಡ ಹಲವು ನಿರ್ಣಯಗಳ ಬಗ್ಗೆ ಚರ್ಚಿಸಿ, ಈ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಪ್ಪದೇ ಮನವರಿಕೆ ಮಾಡಬೇಕೆಂದು ಕಾರ್ಯಕರ್ತರಿಗೆ ತಿಳಿಸಲಾಯಿತು. ಈಗಾಗಲೇ ಜೆಜೆಎಂ ವರದಿಯನ್ನು ಬೂತ್ ಅಧ್ಯಕ್ಷರು ಹಾಗೂ ಜವಾಬ್ದಾರಿಯುತ ಕಾರ್ಯಕರ್ತರು ನೀಡದಿರುವ ಬಗ್ಗೆ ಜಿ.ವಿ.ಗಣಪಯ್ಯ ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಮುಂದೆ…
ಮಡಿಕೇರಿ ಆ.22 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ನಾ.ಡಿಸೋಜ ಅವರ ಹೆಸರಿನಲ್ಲಿ ಆ.25 ರಂದು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕಥೆ ಬರೆಯುವ ಸ್ಪರ್ಧೆ ಮತ್ತು ಕಥಾ ರಚನಾ ವಿಧಾನದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ನಗರದ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಅಂದು ಬೆಳಿಗ್ಗೆ 10.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜಿನ ಉಪ ನಿರ್ದೇಶಕ ಪುಟ್ಟರಾಜು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ವಹಿಸಿಕೊಳ್ಳಲಿದ್ದಾರೆ. ಕಥೆ ರಚನೆ ಕುರಿತು ಉಪನ್ಯಾಸವನ್ನು ಸಾಹಿತಿ ಸುನೀತಾ ಕುಶಾಲನಗರ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್. ವಿಜಯ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಡ್ಲೆ ರ ತುಳಸಿ ಮೋಹನ್ ಪಾಲ್ಗೊಳ್ಳಲಿದ್ದಾರೆ ಎಂದು ಕೊಡಗು ಜಿಲ್ಲಾ ಕನ್ನಡ…
ಸೋಮವಾರಪೇಟೆ ಆ.22 : ಶ್ರಾವಣ ಮಾಸದ ಪ್ರಥಮ ಹಬ್ಬವಾದ ನಾಗರಪಂಚಮಿಯನ್ನು ಪಟ್ಟಣದ ಸುತ್ತಮುತ್ತಲಿನ ವಿವಿಧ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಮೀಪದ ತೊರೆನೂರು ಗ್ರಾ.ಪಂ ವ್ಯಾಪ್ತಿಯ ಅರಸಿನಕುಪ್ಪೆ ಗ್ರಾಮದಲ್ಲಿರುವ ಶ್ರೀಮಂಜುನಾಥಸ್ವಾಮಿ ಮತ್ತು ನವನಾಗನಾಥಸ್ವಾಮಿ ದೇವಾಲಯದಲ್ಲಿ ನಾಗರಪಂಚಮಿಯನ್ನು ಆಚರಿಸಲಾಯಿತು. ಮುಂಜಾನೆ ಗಣಪತಿಹೋಮದೊಂದಿಗೆ ಆರಂಭವಾದ ಪೂಜಾ ಕೈಂಕರ್ಯಗಳು ಮಧ್ಯಾಹ್ನ ಸಂಪನ್ನಗೊಂಡಿತು. ನಾಗದೇವರ ಸನ್ನಿಧಿಯಲ್ಲಿ ನವನಾಗನಾಥನಿಗೆ ಜಲಾಭಿಷೇಕ, ಹಾಲಿನ ಅಭಿಷೇಕ, ಎಳನೀರು ಅಭಿಷೇಕ, ಪಂಚಾಮೃತ ಅಭಿಷೇಕ, ತಂಬಿಲ ಸೇವೆಯೊಂದಿಗೆ ಪೂಜೆ ಸಲ್ಲಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ಯದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿತು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.






