ಮಡಿಕೇರಿ ಆ.23 : ಮಾಜಿ ಸೈನಿಕರ ಸಂಘ, ಮಡಿಕೇರಿ ಇದರ 2022-2023 ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.27 ರಂದು ಬೆಳಗ್ಗೆ 10.30 ಗಂಟೆಗೆ ನಗರದ ರೋಟರಿ ಹಾಲ್‍ನಲ್ಲಿ ನಡೆಯಲಿದೆ ಎಂದು ಮಡಿಕೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಿ.ಕೆ.ಕುಟ್ಟಪ್ಪ ತಿಳಿಸಿದ್ದಾರೆ.
ಲೇಖಕ: admin
ಮಡಿಕೇರಿ ಆ.22 : ಜನರಲ್ ತಿಮ್ಮಯ್ಯ ಪ್ರತಿಮೆ ಪುನರ್ ಸ್ಥಾಪನೆ ಕುರಿತು ಅಭಿಪ್ರಾಯ ಸಂಗ್ರಹ ಸಭೆ ನಡೆಯಿತು. ಪ್ರತಿಮೆಯನ್ನು ಮರುಸ್ಥಾಪಿಸುವ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ನಿರ್ಧಾರ ಕೈಗೊಳ್ಳಲಾಯಿತು. ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಪುನರ್ ಸ್ಥಾಪನೆ ಸಂಬಂಧ ಶಾಸಕರಾದ ಡಾ.ಮಂತರ್ ಗೌಡ ಹಾಗೂ ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರ ಉಪಸ್ಥಿತಿಯಲ್ಲಿ ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಸಭಾಂಗಣದಲ್ಲಿ ಸುದೀರ್ಘ ಸಮಾಲೋಚನಾ ಸಭೆ ಮಂಗಳವಾರ ನಡೆಯಿತು. ಸಭೆಯಲ್ಲಿ ಮಾತನಾಡಿದ ಶಾಸಕರಾದ ಡಾ.ಮಂತರ್ ಗೌಡ ಅವರು ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ನಿರ್ಮಾಣ ಸಂಬಂಧ ಎಲ್ಲರ ಸಹಕಾರ ಪಡೆಯುವ ನಿಟ್ಟಿನಲ್ಲಿ ಸಭೆ ಆಹ್ವಾನಿಸಲಾಗಿದೆ. ಸದ್ಯ ಈಗಿರುವ ಪ್ರತಿಮೆಯನ್ನು ಸರಿಪಡಿಸಿ ಪುನರ್ ನಿರ್ಮಾಣ ಮಾಡುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರತಿಮೆ ನಿರ್ಮಾಣದ ಖರ್ಚು ವೆಚ್ಚವನ್ನು ಭರಿಸಲಾಗುವುದು ಎಂದು ಅವರು ಹೇಳಿದರು. ಹೊಸ ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ ಈಗಿರುವ ಮಾದರಿಯಲ್ಲಿ ಪ್ರತಿಮೆ ಪರಿಪೂರ್ಣತೆ ಬರುತ್ತದೆ ಎಂದು ಹೇಳುವುದು ಕಷ್ಟಸಾಧ್ಯವಾಗಿದೆ.…
ಮಡಿಕೇರಿ ಆ.22 : ಸೆಸ್ಕ್ ಜಾಗೃತ ದಳದಿಂದ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದ ಕಾಡಂಚಿನ ಗ್ರಾಮದ ನಿವಾಸಿಗಳಿಗೆ ತೋಟದ ಬೇಲಿಗಳಿಗೆ ಅಕ್ರಮ ವಿದ್ಯುತ್ ಬಳಕೆ ಕುರಿತು ಜನ ಜಾಗೃತಿ ಸಭೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪೊಲೀಸ್ ನಿರೀಕ್ಷಕ ಮಹದೇವ ಸ್ವಾಮಿ, ಬೇಲಿಗಳಿಗೆ ವಿದ್ಯುತ್ ಹರಿಸುವುದು ಕಾನೂನು ಅಡಿಯಲ್ಲಿ ಅಪರಾಧವಾಗಿದೆ. ಇಂತಹ ಕೃತ್ಯಗಳು ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ವಿವರಿಸಿದರು. ಸೆಸ್ಕ್ ಜಾಗೃತ ದಳದ ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ಡಿ. ತಿಲಕ್ ಅವರು ಮಾತನಾಡಿ, ಕಾಡು ಪ್ರಾಣಿಗಳ ಹಾವಳಿ ತಡೆಗೆ ಬೇಲಿಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತಿರುವ ಪ್ರಕರಣಗಳು ಕೆಲವು ಕಡೆಗಳಲ್ಲಿ ಕಂಡು ಬಂದಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು, ಅಂತಹ ಕೃತ್ಯಗಳಿಗೆ ಯಾರು ಕೈ ಹಾಕಬಾರದೆಂದು ಮನವಿ ಮಾಡಿದರು. ಅರಣ್ಯ ಇಲಾಖೆ ಡಿಆರ್‍ಎಫ್‍ಓ ಶ್ರೀನಿವಾಸ್ ಮಾತನಾಡಿ, ಕಾಡಾನೆ ಹಾವಳಿ ತಡೆಗೆ ಕೆಲವರು ಬೇಲಿಗಳಿಗೆ ವಿದ್ಯುತ್ ಹರಿಸುತ್ತಿದ್ದಾರೆ. ಇದರಿಂದ ಕಾಡಾನೆಗಳು ಸಾವನ್ನಪ್ಪಿದ ಪ್ರಕರಣಗಳು ನಡೆದಿದೆ. ಇದು ಅರಣ್ಯ ಇಲಾಖೆ ವನ್ಯಜೀವಿ ಸಂರಕ್ಷಣಾ ಕಾಯಿದೆ…
ಸೋಮವಾರಪೇಟೆ ಆ.22 : ಕಾಜೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಕಾಜೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಮನ ಸೆಳೆಯಿತು. ಕಾರ್ಯಕ್ರಮವನ್ನು ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಪ್ರದರ್ಶಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಅವಶ್ಯಕ ಎಂದು ಹೇಳಿದರು. ವೇದಿಕೆಯಲ್ಲಿ ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನು, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಎಸ್‍ಡಿಎಂಸಿ ಉಪಾಧ್ಯಕ್ಷ ಡೇವಿಡ್, ಮುಖ್ಯ ಶಿಕ್ಷಕಿ ಸರಳಾ ಕುಮಾರಿ, ಗ್ರಾಮದ ಹಿರಿಯರಾದ ಅಪ್ಪಚ್ಚು, ಮೇದಪ್ಪ, ಮುತ್ತಪ್ಪ, ತೇಜಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ಸಿಆರ್‍ಪಿ ಗಿರೀಶ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಯಶ್ವಂತ್‍ಕುಮಾರ್ ಇದ್ದರು. 1 ರಿಂದ 4ನೇ ತರಗತಿಯ ಶಾಲಾ ವಿಭಾಗದಲ್ಲಿ ಛದ್ಮವೇಷ ಸ್ಪರ್ಧೆಯಲ್ಲಿ ಕಾಜೂರು ಶಾಲೆಯ ಕೌಶಿಕ್ ಪ್ರಥಮ, ಸೋಮವಾರಪೇಟೆ ಸಂತ ಜೊಸೇಫರ ಶಾಲೆಯ ಚೈತನ್ಯ ದ್ವಿತೀಯ, ಕಿರಗಂದೂರು ಶಾಲೆಯ ಕುಶಾಲ ತೃತೀಯ ಸ್ಥಾನಗಳಿಸಿದರು. ಚಿತ್ರಕಲೆಯಲ್ಲಿ ಸೋಮವಾರಪೇಟೆ ಸಂತ ಜೊಸೇಫರ…
ಮಡಿಕೇರಿ ಆ.21 : ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಾಲಯದಲ್ಲಿ ನಾಗರ ಪಂಚಮಿ ಹಬ್ಬದ ಪ್ರಯುಕ್ತ ವಿವಿಧ ಪೂಜಾ ವಿಧಿವಿಧಾನಗಳು ಶ್ರದ್ಧಾಭಕ್ತಿಯಿಂದ ಜರುಗಿತು. ಮುಂಜಾನೆಯಿಂದಲೇ ನಾಗದೇವರಿಗೆ ಪಂಚಾಮೃತ, ಎಳನೀರು, ಹಾಲು ಹಾಗೂ ಜೇನಿನ ಅಭಿಷೇಕ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರಿಂದ ಸಾಮೂಹಿಕ ಆಶ್ಲೇಷ ಬಲಿ ಪೂಜೆ ನೆರವೇರಿತು. ಬಳಿಕ ಭದ್ರಕಾಳಿ ದೇವರಿಗೆ ವಿಶೇಷ ಮಹಾಮಂಗಳಾರತಿ ನಡೆದು ಪ್ರಸಾದ ವಿನಿಯೋಗ, ನಂತರ ಅನ್ನಸಂತರ್ಪಣೆ ನಡೆಯಿತು. ದೇವಾಲಯದ ಅರ್ಚಕರಾದ ಸುಬ್ರಹ್ಮಣ್ಯ ಕೇಕುನಾಯ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಚಮ್ಮಟೀರ ಸುಗುಣ ಮುತ್ತಣ್ಣ, ಗೌರವ ಕಾರ್ಯದರ್ಶಿ ಮೂಕಳೇರ ರಮೇಶ್, ಉಪಾಧ್ಯಕ್ಷ ಕೊಳೇರ ದಿನು ಕಾಳಯ್ಯ, ಆಡಳಿತ ಮಂಡಳಿ ಸದಸ್ಯರಾದ ಮಚ್ಚಿಯಂಡ ರೇಣಾ ಲೋಕೇಶ್ , ಚಮ್ಮಟೀರ ಪ್ರವೀಣ್ ಉತ್ತಪ್ಪ, ಮಚ್ಚಿಯಂಡ ವೇಣು, ಮೂಕಳೇರ ಧನು ಅಪ್ಪಣ್ಣ, ಸಣ್ಣುವಂಡ ಸನ್ನಿ, ಮೂಕಳೇರ ಪ್ರಥ್ವಿ, ಮಚ್ಚಿಯಂಡ ಶ್ಯಾಮ್, ಚೇಂದಿಮಾಡ ಬಿಂದು ಸೇರಿದಂತೆ ದೇವಾಲಯದ ಆಡಳಿತ ಮಾಜಿ ಅಧ್ಯಕ್ಷ…
ಮಡಿಕೇರಿ ಅ.22 : ಕೊಡಗು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾಲೇಜುಗಳ ಪ್ರಥಮ ಸೆಮಿಸ್ಟರ್ ತರಗತಿಗಳನ್ನು ಕುಲಪತಿಗಳ ಅನುಮೋದನೆ ಅನ್ವಯ ಸೆ.1 ರಿಂದ ಪ್ರಾರಂಭಿಸಲು ತಿಳಿಸಲಾಗಿದೆ.
ಸುಂಟಿಕೊಪ್ಪ,ಆ.22: ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕ ಮಹಾಸಭೆಯು ಆ.23 ಬೆಳಿಗ್ಗೆ 11 ಗಂಟೆಗೆ ದೇವಾಲಯದ ಆವರಣದಲ್ಲಿ ಪಿ.ಉದಯಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕಾರ್ಯದರ್ಶಿ ಶಶಿಕಾಂತ ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಡಿಕೇರಿ ಆ.22 : ಅಮೇರಿಕನ್ ಕೌನ್ಸಿಲ್ ಆಫ್ ಟ್ರೈನಿಂಗ್ ಅಂಡ್ ಡೆವಲಪ್‌ಮೆಂಟ್ (ACTD,USA) ಸಹಯೋಗದೊಂದಿಗೆ ಮೈಸೂರಿನ ಎಎಂಸಿಎಡಿ ಸಂಸ್ಥೆಯಲ್ಲಿ ನಡೆದ ಪದವಿ ಪ್ರಮಾಣ ಘಟಿಕೋತ್ಸವದಲ್ಲಿ ಸುಂಟಿಕೊಪ್ಪ ದ ಸ್ವಸ್ಥ ಶಾಲೆಯಲ್ಲಿ ಸಿಬಿಆರ್ ಸಂಯೋಜಕ ಹಾಗೂ ಸಮಾಜ ಕಾರ್ಯಕರ್ತ ಎಸ್.ಮುರುಗೇಶ್ ಅವರಿಗೆ “ಜೀವನ ಕೌಶಲ್ಯದ ಉತ್ತಮ ತರಬೇತುದಾರ” ಎಂಬ ಪದವಿ ಪ್ರದಾನ ಮಾಡಲಾಯಿತು. ಮೈಸೂರಿನ AMCAD ಸೆಂಟರ್ ಆಫ್ ಎಕ್ಸಲೆನ್ಸ್‌ನ ಅಂತರರಾಷ್ಟ್ರೀಯ ಪ್ರಮಾಣೀಕೃತ “ಲೈಫ್‌ಸ್ಕಿಲ್ ಟ್ರೈನರ್” ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಮುರುಗೇಶ್ ಅವರನ್ನು ಗೌರವಿಸಿ ಪದವಿಯನ್ನು ನೀಡಲಾಯಿತು. ಈ ಸಂದರ್ಭ ಬೆಂಗಳೂರಿನ ಕೃಷಿ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಸುರೇಶ್, ಜೆಸಿಐ ನ ಅಂತರರಾಷ್ಟ್ರೀಯ ತರಬೇತುದಾರ ಟಿ.ವಿ.ಎನ್ ಮೂರ್ತಿ, ಪರಿವರ್ತನ ಶಾಲೆಯ ಡೀನ್, ಜೆಸಿಐ ನ ಅಂತರರಾಷ್ಟ್ರೀಯ ತರಬೇತುದಾರ, ರವಿ ಪುರಸ್ಕಾರ್ ಪ್ರಶಸ್ತಿ ಪುರಸ್ಕೃತ ಚೇತನ್ ರಾಮ್, AMCAD ಸಂಸ್ಥೆಯ ಮುಖ್ಯಸ್ಥರಾದ ಶಾರದ ಚೇತನ್ ರಾಮ್ , ಹೆಸರಾಂತ ವಾಗ್ಮಿ ಗುಂಡೂರಾವ್, ನಿವೃತ್ತ ಸೈನಿಕ ಲೆಫ್ಟಿನೆಂಟ್ ರಂಜನ್ ರಾಮ್, ಯೋಗ ಪಟು ಮತ್ತು ಆಧ್ಯಾತ್ಮಿಕ ತರಬೇತುದಾರ…
ಮಡಿಕೇರಿ ಆ.22 : ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಬಸ್ ಡಿಕ್ಕಿಯಾಗಿ ನೆಲಕ್ಕುರುಳಿದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಲಂಕುಷ ತನಿಖೆ ನಡೆಸಿ ವರದಿಯನ್ನು ಬಹಿರಂಗ ಪಡಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಘಟನೆ ಉದ್ದೇಶಪೂರ್ವಕವಾಗಿ ನಡೆದಿದೆಯೇ ಅಥವಾ ಆಕಸ್ಮಿಕವೇ ಎನ್ನುವುದು ತನಿಖೆಯಿಂದ ಬಹಿರಂಗಗೊಳ್ಳಲಿ. ಬಸ್ ಡಿಕ್ಕಿಯಾದ ಈ ಘಟನೆಯನ್ನು ಯಾರೂ ಲಘುವಾಗಿ ಪರಿಗಣಿಸಬಾರದು, ಪ್ರತಿಮೆಯ ಪತನದ ಹಿಂದಿನ ಪಿತೂರಿ ಕುರಿತು ಕೊಡವರು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಯಾವುದೇ ಕಾರಣಕ್ಕು ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಬೇರೆಡೆ ಪ್ರತಿಷ್ಠಾಪಿಸಬಾರದು. ಈ ಹಿಂದೆ ಇದ್ದ ವೃತ್ತದಲ್ಲೇ ಮರು ಸ್ಥಾಪನೆ ಮಾಡಿ ವೀರ ಸೇನಾನಿಗೆ ಗೌರವ ಅರ್ಪಿಸಬೇಕು. ಪ್ರತಿಮೆ ಮರು ಸ್ಥಾಪನೆಯು ಸುವರ್ಣ ಮಹೋತ್ಸವವಾಗಲಿ, ಈ ಉತ್ಸವಕ್ಕೆ ಪ್ರಧಾನಮಂತ್ರಿ, ರಕ್ಷಣಾ ಸಚಿವರು, ಮುಖ್ಯಮಂತ್ರಿಗಳು ಸೇರಿದಂತೆ ಸೇನಾಧಿಕಾರಿಗಳನ್ನು ಆಹ್ವಾನಿಸಿ ಅರ್ಥಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. 1973 ರಲ್ಲಿ ದೇಶದ ಹೆಮ್ಮೆಯ ಸೇನಾನಿ…
ಮಡಿಕೇರಿ ಆ.22 : ಇಟಲಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ವೇಗದ ಸ್ಕೇಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯ ಕುಶಾಲನಗರದ ಎಂ.ಕಲ್ಪನಾ ಕುಟ್ಟಪ್ಪ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇಟಲಿಯಲ್ಲಿ ಆ.27ರಿಂದ ಆರಂಭಗೊಳ್ಳಲಿರುವ ಸ್ಪರ್ಧೆಗೆ ರಾಜ್ಯದಿಂದ ಇಬ್ಬರು ಸ್ಕೇಟಿಂಗ್ ಪಟುಗಳು ಪ್ರತಿನಿಧಿಸುತ್ತಿದ್ದು, ಕೊಡಗು ಜಿಲ್ಲೆಯ ಕುಶಾಲನಗರದ ಕಲ್ಪನಾ ಕುಟ್ಟಪ್ಪ ಮತ್ತು ಬೆಂಗಳೂರಿನ ಸುವರ್ಣಿಕ ರಾಧಾಕೃಷ್ಣನ್ ಪಾಲ್ಗೊಳ್ಳಲಿದ್ದಾರೆ. ಕಲ್ಪನಾ ಕುಟ್ಟಪ್ಪ ಪ್ರಸಕ್ತ ಮೈಸೂರಿನಲ್ಲಿ ಪಿಯುಸಿ ವ್ಯಾಸಂಗ ಮುಗಿಸಿದ್ದು, ಬೆಂಗಳೂರಿನಲ್ಲಿ ಈ ಹಿಂದೆ ನಡೆದ ರಾಷ್ಟ್ರೀಯ ಮಟ್ಟ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ, ಒಂದು ಬೆಳ್ಳಿ ಪದಕ ಪಡೆದಿದ್ದಾರೆ. ಇದುವರೆಗೆ ರಾಜ್ಯ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ 50ಕ್ಕೂ ಅಧಿಕ ಚಿನ್ನದ ಪದಕ ಪಡೆದಿದ್ದಾಳೆ. ಮುಂದಿನ ಅಕ್ಟೋಬರ್ 20 ರಿಂದ 10 ದಿನಗಳ ಕಾಲ ಚೈನಾದಲ್ಲಿ ನಡೆಯಲಿರುವ ಏಶಿಯನ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕೂಡ ಪಾಲ್ಗೊಳ್ಳಲು ಕಲ್ಪನಾ ಕುಟ್ಟಪ್ಪ ಆಯ್ಕೆಯಾಗಿದ್ದಾರೆ. ಕಲ್ಪನಾ ಏಕಲವ್ಯ ಪ್ರಶಸ್ತಿ ವಿಜೇತ ಸ್ಕೇಟಿಂಗ್ ಪಟು ಪ್ರತೀಕ್ …






