ಲೇಖಕ: admin

ಮಡಿಕೇರಿ ಸೆ.2 : ವಿದ್ಯಾಭಾರತಿ ಬಡಾವಣೆಯ ಸ್ಫೂರ್ತಿ ಯುವಕ ಸಂಘದ ವತಿಯಿಂದ ಹದಿಮೂರನೇ ವರ್ಷದ ಗೌರಿ ಗಣೇಶೋತ್ಸವದ ನೂತನ ಸಮಿತಿ  ರಚನೆಯಾಗಿದ್ದು,  ಅಧ್ಯಕ್ಷರಾಗಿ ಸುರೇಂದ್ರ ಅಧಿಕಾರ ಸ್ವೀಕರಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಅಧ್ಯಕ್ಷರಾಗಿ ಗಮನಾರ್ಹ ಸೇವೆಸಲ್ಲಿಸಿದ್ದ ರವಿಚಂದ್ರ ಅವರ ಮಾರ್ಗದರ್ಶನದಲ್ಲಿ ಗಣಪತಿ ಉತ್ಸವ ಸಮಿತಿಯ ವತಿಯಿಂದ ಕೆ.ನಿಡುಗಡೆ ಗ್ರಾ.ಪಂ ವ್ಯಾಪ್ತಿಯಲ್ಲಿ ಶ್ರಮದಾನ  ನಡೆಯಿತು. ಗ್ರಾಮದ ಮೂರನೇ ಮೈಲಿನಲ್ಲಿರುವ ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆ ಮೊಣಕಾಲ್ಮುರಿ ಯಲ್ಲಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು. ನಂತರ ವಿದ್ಯಾ ಭಾರತಿ ಬಡಾವಣೆಯ ಬಸ್ ನಿಲ್ದಾಣವನ್ನು ದುರಸ್ತಿಗೊಳಿಸಿ ಸುಣ್ಣ ಬಣ್ಣ ಹೊಡೆದು, ಊರಿನ ನೀರಿನ ಟ್ಯಾಂಕ್ ಶುಚಿಗೊಳಿಸಿ ಆಕರ್ಷಕ ಬಣ್ಣ ಬಳಿಯುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು. ಸಂಘದ ಉಪಾಧ್ಯಕ್ಷ ಸುನಿಲ್, ಕಾರ್ಯದರ್ಶಿ ಗಿರೀಶ್, ಖಜಾಂಜಿ ರಜಿತ್, ಪತ್ರಕರ್ತ ರಂಜಿತ್ ಕವಲಪಾರ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು  ಪಾಲ್ಗೊಂಡಿದ್ದರು.

Read More

ಶ್ರೀಹರಿಕೋಟಾ: ಚಂದ್ರಯಾನ-3 ಯಶಸ್ಸಿನ ಖುಷಿಯಲ್ಲಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇದೀಗ ತನ್ನ ಬಹು ನಿರೀಕ್ಷಿತ ಆದಿತ್ಯಾ L1 ಉಪಗ್ರಹ ಉಡಾವಣೆಯನ್ನು ಯಶಸ್ವಿಯಾಗಿ ಉಡಾಯಿಸಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಆದಿತ್ಯಾ ಎಲ್ 1 ನೌಕೆಯನ್ನು ಹೊತ್ತ ಪಿಎಲ್ಎಲ್ ವಿ- ಸಿ-57 ರಾಕೆಟ್ ಬೆಳಗ್ಗೆ 11.50ಕ್ಕೆ ನಭಕ್ಕೆ ಹಾರಿತು. ತನ್ನ ಎಲ್ಲ ಹಂತಗಳನ್ನು ಅತ್ಯುತ್ತಮವಾಗಿ ನಿಭಾಯಿಸಿದ ಪಿಎಸ್ ಎಲ್ ವಿ ಸಿ 57 ನೌಕೆ ಎಲ್ಲ ಮೂರೂ ಹಂತಗಳನ್ನು ಯಶಸ್ವಿಯಾಗಿ ನಿಭಾಯಿಸಿ ನೌಕೆಯನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ತಲುಪಿಸಿತು. ಇಸ್ರೋ ಆದಿತ್ಯ ಎಲ್‌-1 ನೌಕೆಯನ್ನ ಭೂಮಿಯಿಂದ 1.5 ಮಿಲಿಯನ್‌ ಕಿಲೋಮೀಟರ್‌ ದೂರದ ಲಾಂಗ್ರೇಜ್‌ ಪಾಯಿಂಟ್‌ಗೆ ತಲುಪಿ ಸೂರ್ಯನ ಬಗ್ಗೆ ಅಧ್ಯಯನ ನಡೆಸಲಿದೆ.

Read More

ನೆಲ್ಲೂರು: ಪಿಎಸ್‌ಎಲ್‌ವಿಯಲ್ಲಿ ಭಾರತದ ಚೊಚ್ಚಲ ಸೌರ ಮಿಷನ್ ಆದಿತ್ಯ ಎಲ್1 ಇನ್ನು ಕೆಲವೇ ಗಂಟೆಗಳಲ್ಲಿ ಉಡಾವಣೆಗೊಳ್ಳಲಿದ್ದು, ಇದಕ್ಕೂ ಮುನ್ನ ಯೋಜನೆ ಯಶಸ್ವಿಯಾಲೆಂದು ಪ್ರಾರ್ಥಿಸಿ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಮತ್ತು ವಿಜ್ಞಾನಿಗಳ ತಂಡ ತಿರುಪತಿ ಹಾಗೂ ಸುಳ್ಳೂರುಪೇಟೆ ಪಟ್ಟಣದ ಚೆಂಗಾಲಮ್ಮ ದೇವಸ್ಥಾನದಲ್ಲಿ ಭೇಟಿ ನೀಡಿ ವಿಶೇಶ ಪೂಜೆ ಸಲ್ಲಿಸಿದರು. ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯ ಪ್ರತಿಕೃತಿಯನ್ನು ಹೊತ್ತೊಯ್ದ ವಿಜ್ಞಾನಿಗಳ ತಂಡ, ಯೋಜನೆ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದರು. ಚೆಂಗಾಲಮ್ಮ ದೇವಸ್ಥಾನದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಎ ಶ್ರೀನಿವಾಸುಲು ರೆಡ್ಡಿ ನೇತೃತ್ವದಲ್ಲಿ ಅರ್ಚಕರು ವಿಜ್ಞಾನಿಗಳಿಗೆ ಅದ್ಧೂರಿಯಾಗಿ ಸ್ವಾಗತ ಕೋರಿದರು.

Read More

ನಾಪೋಕ್ಲು ಸೆ.2 : ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ರೂ.39.92 ಲಕ್ಷ ನಿವ್ವಳ ಲಾಭಗಳಿಸಿ ಉತ್ತಮ ಶ್ರೇಣಿಯಲ್ಲಿದೆ ಎಂದು ಸಂಘದ ಅಧ್ಯಕ್ಷ ಮಾಳೆಯಂಡ ಎಂ.ಅಪ್ಪಚ್ಚ ತಿಳಿಸಿದರು. ಸಂಘದ ಸಂಭಾ0ಗಣದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಒಟ್ಟು 1,137 ಸದಸ್ಯರಿದ್ದಾರೆ. ಸಂಘದಲ್ಲಿ ಪಾಲು ಬಂಢವಾಳ 1.50 ಕೋಟಿ ರೂ. ಇದೆ. ಸದಸ್ಯರು 3.58 ಕೋಟಿ ರೂ ಗಳನ್ನು ಠೇವಣಿ ಇರಿಸಿದ್ದು ಸದಸ್ಯರಿಗೆ ಕೆ.ಸಿ.ಸಿ.ಸಾಲ ರೂ. 10.48 ಕೋಟಿ ರೂಗಳನ್ನು ಸಾಲ ವಿತರಣೆ ಮಾಡಲಾಗಿದೆ. ಹಾಗೂ ಜಾಮಿನು ಸಾಲ ಹಾಗೂ ಗೊಬ್ಬರ ಸಾಲ 94.62 ಲಕ್ಷ ಸಾಲ ವಿತರಣೆ ಮಾಡಲಾಗಿದೆ. ಸಂಘವು ಪ್ರಸಕ್ತ 2022-23 ಸಾಲಿನಲ್ಲಿ ಉತಮ್ಮ ವಹಿವಾಟು ನಡೆಸುವುದರ ಮೂಲಕ 39.92 ಲಕ್ಷ ನಿವ್ವಳ ಲಾಭಗಳಿಸಿ ಉತಮ್ಮ ಶ್ರೇಣಿಯಲ್ಲಿದೆ ಎಂದು ಮಾಹಿತಿ ನೀಡಿದರು. ಸದಸ್ಯರಿಗೆ ಈ ವರ್ಷ ಶೇ.15 ಡಿವಿಡೆಂಡ್ ನೀಡಲಾಗುವುದು. ಸಂಘದಲ್ಲಿ ನಿರುಖು ಠೇವಣಿದಾರರಿಗೆ ಶೆ. 7.50 ಹಿರಿಯಾ ನಾಗರಿಕರಿಗೆ 8.00 ಬಡ್ಡಿ…

Read More

ಮಡಿಕೇರಿ ಸೆ.2 : ಕೊಡಗು ಜಿಲ್ಲೆಯಲ್ಲಿ ಸೆ.3 ರಂದು ನಡೆಯುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗಳನ್ನು ಯಾವುದೇ ಅವ್ಯವಹಾರಗಳಿಲ್ಲದಂತೆ ಸುಗಮವಾಗಿ ನಡೆಸುವ ಸಲುವಾಗಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ), ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು(ಬ್ಲಾಕ್-01), ಸರ್ಕಾರಿ ಪದವಿ ಪೂರ್ವ ಕಾಲೇಜು(ಬ್ಲಾಕ್-02) ಮತ್ತು ನಗರದ ಸಂತ ಮೈಕಲರ ಪ್ರೌಢಶಾಲೆ ಈ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿರ್ಬಂಧಿತ ಸ್ಥಳ ಎಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಆದೇಶಿಸಿದ್ದಾರೆ. ನಿಷೇಧಿತ ವಲಯದಲ್ಲಿ ಯಾವುದೇ ರೀತಿಯಲ್ಲಿ ಪರೀಕ್ಷೆಯಲ್ಲಿ ನಕಲು ಹೊಡೆಯಲು ಸಹಾಯ ಮಾಡುವುದು, ಚೀಟಿ ಅಥವಾ ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು ಹಂಚುವುದು, ಇನ್ನಾವುದೇ ವಸ್ತುಗಳನ್ನು ಹಂಚುವುದು/ ರವಾನಿಸುವುದು ಮತ್ತಿತರ ಚಟುವಟಿಕೆ ಸಂಪೂರ್ಣ ನಿಷೇಧಿಸಿದೆ. ಪರೀಕ್ಷಾ ಕೇಂದ್ರದೊಳಗೆ ಮೊಬೈಲ್, ಸ್ಮಾರ್ಟ್ ವಾಚ್ ಮುಂತಾದ ಎಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ಒಯ್ಯುವುದು ಮತ್ತು ಬಳಸುವುದನ್ನು ನಿಷೇಧಿಸಿದೆ. ಪರೀಕ್ಷಾ ಕೇಂದ್ರದೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ, ಚಿತ್ರೀಕರಣ ಮುಂತಾದವುಗಳನ್ನು ಸಂಪೂರ್ಣವಾಗಿ…

Read More

ಸಿದ್ದಾಪುರ ಆ.2 : ಶಾಂತಿ ಸಹಬಾಳ್ವೆಯ ಸಹೋದರತ್ವ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜ ಸುಧಾರಣೆ ಮೂಲಕ ಅಭಿವೃದ್ಧಿಯೊಂದಿಗೆ ಮುನ್ನಡೆಯಲು ಸಾಧ್ಯವಾಗಲಿದ್ದು, ಶಿಕ್ಷಣದೊಂದಿಗೆ ಮುಖ್ಯವಾಹಿನಿಗೆ ಬರಬೇಕೆಂದು ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಸಿದ್ದಾಪುರದ ಸ್ವರ್ಣ ಮಾಲಾ ಸಭಾಂಗಣದಲ್ಲಿ ಶ್ರೀ ನಾರಾಯಣ ಗುರು ಪರಿಪಾಲನಾ ಯೋಗಂ ಜಿಲ್ಲಾ ಘಟಕದ ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,  19ನೇ ಶತಮಾನದಲ್ಲಿ ನಾರಾಯಣ ಗುರುಗಳು ಪ್ರತಿಪಾದನೆ ಮಾಡಿದಂತ ತತ್ವ ಸಿದ್ಧಾಂತ ಆದರ್ಶಗಳನ್ನ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಅಭಿವೃದ್ಧಿಯೊಂದಿಗೆ ಮುನ್ನಡೆದಲ್ಲಿ ಇಂತಹ ಆಚರಣೆಗಳು ಯಶಸ್ಸು ಕಾಣಲು ಸಾಧ್ಯವಾಗಲಿದೆ. ಕೊಡಗು ಜಿಲ್ಲೆಯಲ್ಲೂ ಎಸ್ ಎನ್ ಡಿ ಪಿ ಸಂಘಟನೆ ನಿರಂತರ ಸೇವಾ ಮನೋಭಾವದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿದ್ದು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೆಯ ಇಂತಹ ಆಚರಣೆಗಳಿಗೆ ಹೆಚ್ಚು ಸಹಕಾರ ನೀಡುವ ಮೂಲಕ ಮತ್ತಷ್ಟು ಬಲಿಷ್ಠ ಸಂಘಟನೆಯಾಗಿ ಯುವ…

Read More

ಮಡಿಕೇರಿ ಸೆ.2 :  ಮಡಿಕೇರಿಯ ಹಳೆಯ ಬಸ್ ನಿಲ್ದಾಣದಲ್ಲಿರುವ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಹಾನಿಗೊಳಗಾದ ವೃತ್ತವನ್ನು ಸಾರಿಗೆ ನಿಗಮ ದುರಸ್ತಿ ಪಡಿಸಿದೆ. ಅಜ್ಜಮಾಡ ದೇವಯ್ಯ ಪ್ರತಿಮೆ ಇರುವ ವೃತ್ತಕ್ಕೆ ಬಸ್ ಡಿಕ್ಕಿಯಾಗಿ ವೃತ್ತಕ್ಕೆ ಹಾನಿಯಾದ ಹಿನ್ನೆಲೆ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ದೂರು ದಾಖಲಿಸಿದ್ದರು.

Read More

ಮಡಿಕೇರಿ ಸೆ.2 : ಕೇಂದ್ರ ಸರ್ಕಾರವು 2018-19 ನೇ ಸಾಲಿನ ಬಜೆಟ್‍ನ ಕಿಸಾನ್ ಕ್ರೇಡಿಟ್ ಕಾರ್ಡ್ ಸೌಲಭ್ಯವನ್ನು ಮೀನುಗಾರಿಕೆ ಚಟುವಟಿಕೆ ಹಾಗೂ ಮೀನು ಕೃಷಿಕರಿಗೆ ವಿಸ್ತರಣೆ ಮಾಡಿ ಘೋಷಿಸಿದೆ. ಈ ಯೋಜನೆಯಡಿ ಮೀನು ಕೃಷಿಕರು ಅಲ್ಪಾವದಿ ಸಾಲವನ್ನು ಬ್ಯಾಂಕ್‍ಗಳ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಪಡೆಯಬಹುದಾಗಿದೆ. ಈಗಾಗಲೇ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಂಡಿರುವ ರೈತರು ಮೀನುಗಾರಿಕೆ ಚಟುವಟಿಕೆಗಳಿಗೂ ಬ್ಯಾಂಕ್‍ಗಳಿಂದ ಅಲ್ಪಾವದಿ ಸಾಲವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿ ಹಾಗೂ ಸಾಲದ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿ ಸೆಪ್ಟೆಂಬರ್, 15 ರೊಳಗೆ ಸಂಬಂಧಪಟ್ಟ ತಾಲ್ಲೂಕು ಮೀನುಗಾರಿಕೆ ಇಲಾಖೆಗೆ ಸಲ್ಲಿಸುವಂತೆ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Read More

ಮಡಿಕೇರಿ ಸೆ.1 : ಬದಲಾದ ಇಂದಿನ ಕಾಲಘಟ್ಟದಲ್ಲಿ ಕೊಡವ ಭೂಮಿ ಮತ್ತು ಅತ್ಯಂತ ಸೂಕ್ಷ್ಮ ಕೊಡವ ಬುಡಕಟ್ಟು ಜನಾಂಗದ ಸಂರಕ್ಷಣೆಯ ಅನಿವಾರ್ಯತೆ ಎದುರಾಗಿದೆ ಎಂದು ಹೈ ಕೋರ್ಟ್ ನ್ಯಾಯವಾದಿ ಕೀರನ್ ನಾರಾಯಣ್ ಪ್ರತಿಪಾದಿಸಿದ್ದಾರೆ. ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮಡಿಕೇರಿ ನಗರದ ಹೊರ ವಲಯದ ಕ್ಯಾಪಿಟಲ್ ವಿಲೇಜ್ ಮಂದ್ ನಲ್ಲಿ ನಡೆದ 29ನೇ ವರ್ಷದ ಸಾರ್ವತ್ರಿಕ “ಕೈಲ್ ಪೊಳ್ದ್” ಹಬ್ಬದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡವರ ಅನನ್ಯ ಭೂಮಿ ಮತ್ತು ಸುಂದರವಾದ ಕೊಡವ ರೇಸ್ ಅನ್ನು ಒಟ್ಟಿಗೆ ಸಂರಕ್ಷಿಸಬೇಕಾಗಿದೆ. ಶಿಕ್ಷಣ, ಆರ್ಥಿಕ ಪ್ರಗತಿ ಮತ್ತು ಭವಿಷ್ಯವನ್ನು ಹುಡುಕಿಕೊಂಡು ಇಂದು ಯುವ ಜನಾಂಗ ಕೊಡಗಿನಿಂದ ಹೊರ ಹೋಗುತ್ತಿದ್ದಾರೆ. ಆದ್ದರಿಂದ ಭೂಮಿ ಮತ್ತು ಕೊಡವ ಜನಾಂಗವನ್ನು ಒಟ್ಟಿಗೆ ಸಂರಕ್ಷಿಸುವುದು ಬಹಳ ಮುಖ್ಯ. ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯನ್ನು ಸಾಧಿಸುವ ಮೂಲಕ ಆ ಎಲ್ಲಾ ಉತ್ತಮ ಅವಕಾಶಗಳನ್ನು ಸೃಷ್ಟಿಸಲಾಗುತ್ತದೆ ಮತ್ತು ಕೊಡವ ಜನಾಂಗದ ಸರ್ವಾಂಗೀಣ ಸಬಲೀಕರಣ ಸಶಕ್ತಗೊಳಿಸಲು ಹಾದಿ ಸುಗಮವಾಗುತ್ತದೆ ಎಂದು…

Read More

ಮಡಿಕೇರಿ ಸೆ.1 : ಇತ್ತೀಚೆಗೆ ಮಡಿಕೇರಿಯ ಕೆಎಸ್ ಆರ್ ಟಿಸಿ ಡಿಪೋದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿ ಅಭಿಷೇಕ್  ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಭೇಟಿಯಾದ ಶಾಸಕ ಡಾ.ಮಂತರ್ ಗೌಡ, ಆರೋಗ್ಯ ವಿಚಾರಿಸಿದರು. ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದ ಶಾಸಕರು, ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.

Read More