ಲೇಖಕ: admin

ಮಡಿಕೇರಿ ಸೆ.1 : ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್‌ ಪೊನ್ನಣ್ಣ ಅವರ ಕಚೇರಿಯನ್ನು ಉದ್ಘಾಟಿಸಲಾಯಿತು. ವಿಧಾನಸೌಧದ 2 ನೇ ಮಹಡಿಯ 237,238 ಕೊಠಡಿಯಲ್ಲಿ ನೂತನವಾಗಿ ಆರಂಭವಾಗಿರುವ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಕೆಪಿಸಿಸಿ ವಕ್ತಾಕರ ಸಂಕೇತ್‌ ಪೂವಯ್ಯ, ಶಾಸಕ ಪೊನ್ನಣ್ಣ ಪತ್ನಿ ಕಾಂಚನ ಪೊನ್ನಣ್ಣ, ಕಾಂಗ್ರೆಸ್‌ ಪ್ರಮುಖರಾದ ತನ್ನೀರ ಮೈನಾ, ನಾಪೋಕ್ಲು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಇಸ್ಮಾಯಿಲ್‌, ವಿರಾಜಪೇಟೆ ಪ.ಪಂ ಸದ್ಯಸ ಮತೀನ್‌, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್‌, ಕಾಂಗ್ರೆಸ್ ಪ್ರಮುಖ ರೆಹಮಾನ್‌ ಖಾನ್‌ ಸೇರಿದಂತೆ ಕೊಡಗಿನ ಕಾಂಗ್ರಸ್‌ ಪಕ್ಷದ ಪ್ರಮುಖರು ಹಾಜರಿದ್ದರು.

Read More

ಸುಂಟಿಕೊಪ್ಪ ಸೆ.1 : ಕೂಡಿಗೆ ಕ್ರೀಡಾ ಶಾಲಾ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಪಂದ್ಯಾವಳಿಯಲ್ಲಿ ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲಾ ಬಾಲಕರ ಹಾಕಿ ತಂಡವು ವಿಜೇತಗೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಮಡಿಕೇರಿಯಲ್ಲಿ ನಡೆಯಲಿದೆ ಎಂದು ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮಹೇಂದ್ರ ತಿಳಿಸಿದ್ದಾರೆ.

Read More

ಸುಂಟಿಕೊಪ್ಪ ಸೆ.1 : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಸುಂಟಿಕೊಪ್ಪ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಸಹೋದರ-ಸಹೋದರಿ ಸಂಕೇತವನ್ನು ಸಾರುವ ರಕ್ಷಾ ಬಂಧನ ಆಚರಿಸಲಾಯಿತು. ಜಿಲ್ಲಾ ಸಾಮರಸ್ಯ ವೇದಿಕೆಯ ಪ್ರಮುಖರಾದ ಡಿ.ನರಸಿಂಹ ಮಾತನಾಡಿ, ರಕ್ಷಾ ಬಂಧನದ ಮಹತ್ವತೆಯ ಬಗ್ಗೆ ತಿಳಿಸಿದರು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ರಕ್ಷಾ ಬಂಧನವನ್ನು ಪರಸ್ಪರ ಕಟ್ಟಿಕೊಳ್ಳುವ ಮೂಲಕ ವಿನಿಮಯ ಮಾಡಿಕೊಂಡು ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭ ತಾಲೂಕು ಕಾಲೇಜು ಪ್ರಮುಖ ವೇಲು ಮುರುಗನ್, ಮುಖ್ಯ ಶಿಕ್ಷಕ ರಾಹುಲ್, ಶಾಖಾ ಕಾರ್ಯ ವಾಹಕ ವಿಜಯ್, ರಾಖೇಶ್, ಇತರರು ಹಾಜರಿದ್ದರು.

Read More

ಸೋಮವಾರಪೇಟೆ ಸೆ.1 : ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಬಾಲಕಿಯರ ವಿಭಾಗದಲ್ಲಿ ಬಿಟಿಸಿಜಿ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ದ್ವಿತೀಯ ಸ್ಥಾನವನ್ನು ಮಾದಾಪುರ ಚನ್ನಮ್ಮ ಪದವಿ ಪೂರ್ವ ಕಾಲೇಜು ತಂಡ ಪಡೆಯಿತು. ಬಾಲಕರ ವಿಭಾಗದಲ್ಲಿ ಕುಶಾಲನಗರ ವಿವೇಕಾನಂದ ಕಾಲೇಜು ಪ್ರಥಮ ಹಾಗೂ ಮಾದಾಪುರ ಚನ್ನಮ್ಮ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು. ಬಿಟಿಸಿಜಿ ಕಾಲೇಜಿನ ಪ್ರಾಂಶುಪಾಲರಾದ ಮಿಲ್ಡ್ರೆಡ್ ಗೋನ್ಸಾಲ್ವೆಸ್, ದೈಹಿಕ ಶಿಕ್ಷಣ ಶಿಕ್ಷಕರಾದ ರಂಗಸ್ವಾಮಿ, ಇಂದಿರಾ ಬಹುಮಾನ ವಿತರಿಸಿದರು. ಶಿಕ್ಷಕಿಯರಾದ ಸೌಮ್ಯ, ದಿವ್ಯ ಇದ್ದರು.

Read More

ಸೋಮವಾರಪೇಟೆ ಸೆ.1 : ಜೇಸಿಐ ಕಳಶದ ವತಿಯಿಂದ ಮಹಾವೀರ ಭವನದಲ್ಲಿ ನಡೆದ ಗ್ರೋತ್ ಅಂಡ್ ಡೆವಲಪ್’ಮೆಂಟ್ ಸಮ್ಮೇಳನದಲ್ಲಿ ಸೋಮವಾರಪೇಟೆ ಜೇಸಿ ಅಧ್ಯಕ್ಷೆ ವಲಯ 14ರ ಅಧ್ಯಕ್ಷೆ ಎಂ.ಎ.ರುಬೀನಾ ಗೆ ಮಹಿಳಾ ಸಾಧನ ಸಖಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮ್ಮೇಳನದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಮಾಡಿ, ಹೆಚ್ಚಿನ ಅಂಕ ಪಡೆದ ಮೊದಲ ಹತ್ತು ಘಟಕಗಳಿಗೆ ಪ್ರಶಸ್ತಿ ಪುರಸ್ಕಾರ ನೀಡಲಾಗಿದ್ದು, ಇದರಲ್ಲಿ ಸೋಮವಾರಪೇಟೆ ಜೇಸಿ ಸಂಸ್ಥೆ ಆರನೇ ಸ್ಥಾನ ಪಡೆಯಿತು. ಜೆಸಿಐ ರಾಷ್ಟ್ರೀಯ ಅಧ್ಯಕ್ಷ ಕಾರ್ತಿಕೇಯನ್ ಅವರಿಂದ ಪ್ರಶಸ್ತಿಯನ್ನು ಅಧ್ಯಕ್ಷೆ ರುಬೀನಾ ಮತ್ತು ತಂಡ ಪಡೆದುಕೊಂಡರು. ಜೆಸಿಐ ಎಕ್ಸಲೆಂಟ್ ಅಚ್ಯೂಮೆಂಟ್, ಎಕ್ಸ್‍ಟೆಂಡಿಂಗ್ ನ್ಯೂ ಲೋಕಲ್ ಆರ್ಗನೈಸೇಷನ್ ಮತ್ತು ಪ್ರತಿಭಾ ಅನ್ವೇಷಣಾ ಪರೀಕ್ಷೆಗೆ ವಿಶೇಷ ಮನ್ನಣೆಯನ್ನು ಸೋಮವಾರಪೇಟೆ ಘಟಕ ಪಡೆದುಕೊಂಡಿದೆ ಎಂದು ರುಬಿನಾ ತಿಳಿಸಿದ್ದಾರೆ. ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತರಾದ ಡಾ. ಜಿ.ಭೀಮೇಶ್ವರ ಜೋಷಿ, ವಲಯ ಉಪಾಧ್ಯಕ್ಷರುಗಳಾದ ಎಚ್.ಆರ್.ಪ್ರಶಾಂತ, ಕೆ.ಡಿ.ಪ್ರಶಾಂತ್, ಕಳಶ ಘಟಕದ ಅಧ್ಯಕ್ಷ ಚರಣ್ ಇದ್ದರು. 

Read More

ಮಡಿಕೇರಿ ಸೆ.1 :  ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನೀಡಲಾಗುವ ಪ್ರತಿಷ್ಟಿತ ನೇಷನ್ ಬಿಲ್ಡರ್ ಪ್ರಶಸ್ತಿಗೆ ಈ ಬಾರಿ ಐವರು ಶಿಕ್ಷಕರು ಆಯ್ಕೆಯಾಗಿದ್ದಾರೆ. ಮಡಿಕೇರಿ ರೋಟರಿ ಸಭಾಂಗಣದಲ್ಲಿ ಸೆ.5 ರಂದು  ಸಂಜೆ 7 ಗಂಟೆಗೆ ನಡೆಯುವ ಗುರು ನಮನ ಹೆಸರಿನ ಸಮಾರಂಭದಲ್ಲಿ ನೇಷನ್ ಬಿಲ್ಡರ್  ಪ್ರಶಸ್ತಿಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಪ್ರಧಾನ ಮಾಡಲಿದ್ದಾರೆ. ಕೊಡಗರಹಳ್ಳಿಯ ಶಾಂತಿನಿಕೇತನ ಶಾಲೆಯಲ್ಲಿ ಪ್ರಾಂಶುಪಾಲೆಯಾಗಿರುವ ಶಿಕ್ಷಣ ಕ್ಷೇತ್ರದಲ್ಲಿ 50 ವಷ೯ಗಳಿಗೂ ಮಿಕ್ಕಿ ಸಾಧನೆ ಮಾಡಿರುವ ಮೇರಿಫಾತಿಮಾ, ನಿವೃತ್ತ ಶಿಕ್ಷಕಿ ಮಡಿಕೇರಿಯ ದೇವಕಿ, ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಮುಖ್ಯ ಶಿಕ್ಷಕ ಶ್ರೀಕೖಷ್ಣ ಭಟ್, ಮಡಿಕೇರಿಯ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲೆ ಕೆ.ಸರಸ್ವತಿ, ಮಡಿಕೇರಿ ಸಂತಮೈಖಲರ ಶಾಲೆಯ ದೈಹಿಕ ಶಿಕ್ಷಕಿ ಸಗಯ ಮೇರಿ ಅವರು ಈ ವಷ೯ ರೋಟರಿ ಮಿಸ್ಟಿ ಹಿಲ್ಸ್ ನ ನೇಷನ್ ಬಿಲ್ಡರ್ ಪ್ರಶಸ್ತಿ ಪಡೆಯಲಿದ್ದಾರೆ. ಕಾಯ೯ಕ್ರಮದಲ್ಲಿ ರೋಟರಿ ಸಹಾಯಕ ಗವನ೯ರ್ ದೇವಣಿರ ತಿಲಕ್, ವಲಯ ಸೇನಾನಿ…

Read More

ಮಡಿಕೇರಿ ಆ.31 : ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ನರಿಯಂದಡ ಗ್ರಾಮದ ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಂಬಾಡಿ ನಿವಾಸಿ ಶರ್ಫುದ್ದೀನ್ (27) ಎಂಬಾತ ಬಂಧಿತ ಆರೋಪಿಯಾಗಿದ್ದು, ಈತನ ಬಳಿ ಇದ್ದ 180 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಡಿಕೇರಿ ಉಪ ವಿಭಾಗದ ಡಿವೈಎಸ್‌ಪಿ ಎಂ.ಜಗದೀಶ್, ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಾಪೋಕ್ಲು ಪಿಎಸ್‌ಐ ಈ.ಮಂಜುನಾಥ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳ ಕಾರ್ಯ ದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.

Read More

ನವದೆಹಲಿ ಆ.31 : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು 2023 ರ FIDE ಚೆಸ್ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದ ಆರ್.ಪ್ರಗ್ನಾನಂದ ಅವರನ್ನು ಭೇಟಿ ಮಾಡಿದರು. ಪ್ರಗ್ನಾನಂದ ಸಾಧನೆ ಕುರಿತು ಹೆಮ್ಮೆ ವ್ಯಕ್ತಪಡಿಸಿದರು. ಪೋಷಕರೊಂದಿಗೆ ಮಾತನಾಡಿ ಹರ್ಷ ಹಂಚಿಕೊಂಡರು.

Read More

ಮಡಿಕೇರಿ ಆ.31 : ಕೇರಳ ರಾಜ್ಯದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಕೊಡಗು ಜಿಲ್ಲೆಯಲ್ಲಿ ನಕಲಿ ಮದ್ಯ ತಯಾರಿಸುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ.NEWS DESK ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ತಾವೂರು ಗ್ರಾಮದ ನಿವಾಸಿ ಹಾಸೀಂ (47) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.NEWS DESK ತಾವೂರು ಗ್ರಾಮದ ತೋಟದ ಲೈನ್ ಮನೆಯೊಂದರಲ್ಲಿ ಕೇರಳ ಮೂಲದ ವ್ಯಕ್ತಿ ಅಕ್ರಮ ಮದ್ಯ ತಯಾರಿಸುತ್ತಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆ ದಾಳಿ ನಡೆಸಿದ ಪೊಲೀಸರು ಆರೋಪಿ ಸಹಿತ ಮದ್ಯ ತಯಾರಿಸಲು ಬಳಸುವ 60 ಕೆ.ಜಿ 300 ಗ್ರಾಂ CAUSTIC CARAMEL, 2000 ಖಾಲಿ ಬಾಟಲ್, ಕ್ಯಾಪ್ ಮತ್ತು ಲೆಬಲ್ ಗಳನ್ನು ವಶಪಡಿಸಿಕೊಂಡರು. ಮಡಿಕೇರಿ ಉಪ ವಿಭಾಗದ ಡಿವೈಎಸ್‌ಪಿ ಎಂ.ಜಗದೀಶ್, ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಭಾಗಮಂಡಲ ಪಿಎಸ್‌ಐ ಶೋಭಾ ಲಮಾಣಿ ಹಾಗೂ ಸಿಬ್ಬಂದಿಗಳು ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಕಾರ್ಯಾಚರಣೆ ನಡೆಸಿದರು.NEWS DESK…

Read More

ಮಡಿಕೇರಿ ಆ.31 : ಮಡಿಕೇರಿ ವಿಭಾಗದ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಕರ್ತವ್ಯದಲ್ಲಿದ್ದ, ಇದೀಗ ರಾಮನಾಥಪುರಕ್ಕೆ ವರ್ಗಾವಣೆಗೊಂಡಿರುವ ವ್ಯವಸ್ಥಾಪಕರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವ್ಯವಸ್ಥಾಪಕಿಯ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದಿಂದ ಕೂಡಿರುವುದರಿಂದ ಕೇವಲ ವರ್ಗಾವಣೆ ಒಂದೇ ಶಿಕ್ಷೆಯಾಗಬಾರದು, ತಕ್ಷಣ ಇವರನ್ನು ಸೇವೆಯಿಂದ ವಜಾಗೊಳಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಕೆಎಸ್‌ಆರ್‌ಟಿಸಿ ನೌಕರ ಹೆಬ್ಬಾಲೆಯ ಅಭಿಷೇಕ್ ಎಂಬುವವರು ಇತ್ತೀಚೆಗೆ ಕೆಎಸ್‌ಆರ್‌ಟಿಸಿ ಡಿಸಿ ಹಾಗೂ ವ್ಯವಸ್ಥಾಪಕರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪ್ರಯತ್ನಕ್ಕೆ ವ್ಯವಸ್ಥಾಪಕರ ಕಿರುಕುಳವೇ ಕಾರಣವೆಂದು ಅಭಿಷೇಕ್ ಆರೋಪಿಸಿದ್ದಾರೆ. ಕಳೆದ 8 ವರ್ಷಗಳಿಂದ ತಮ್ಮ ಪ್ರಭಾವ ಬಳಸಿ ಮಡಿಕೇರಿಯಲ್ಲೇ ಸೇವೆ ಸಲ್ಲಿಸುತ್ತಿದ್ದ ವ್ಯವಸ್ಥಾಪಕರ ವಿರುದ್ಧ ಕಿರುಕುಳದ ಆರೋಪ ಹೊರಿಸಿ ಇಲ್ಲಿನ ನೌಕರರು ಹಾಗೂ ಕಾರ್ಮಿಕ ವರ್ಗ ಹಲವು ಬಾರಿ ಲಿಖಿತ ರೂಪದಲ್ಲಿ ದೂರು ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ. ನೌಕರರ ಇಚ್ಛೆಯಂತೆ ವ್ಯವಸ್ಥಾಪಕರನ್ನು ವರ್ಗಾವಣೆಗೊಳಿಸಲೇಬೇಕೆಂದು ಕಳೆದ 3 ತಿಂಗಳಿನಿಂದ ನಾವುಗಳು…

Read More