ಲೇಖಕ: admin

ಕಡಂಗ ಜೂ.22 :  ಎಡಪಾಲ ಸ.ಹಿ.ಪ್ರಾ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕರಾದ ದೇಚಮ್ಮ ಮತ್ತು ಸಹ ಶಿಕ್ಷಕರ ನೇತೃತ್ವದಲ್ಲಿ ಯೋಗಾಭ್ಯಾಸ ನಡೆಯಿತು. ವಿದ್ಯಾರ್ಥಿಗಳು ಯೋಗಾಸನದಲ್ಲಿ ಪಾಲ್ಗೊಂಡು ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.

Read More

ಕಡಂಗ ಜೂ.22 :  ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಜಯ ವಿದ್ಯಾ ಸಂಸ್ಥೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ  ಸಂಸ್ಥೆಯ ಅಧ್ಯಕ್ಷ   ಬಿದ್ದಪ್ಪ, ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಡಂಗ ಆಯುರ್ವೇದ ವೈದ್ಯಾಧಿಕಾರಿ ಡಾ. ಶೈಲಜಾ ಮುರಳಿ,  ವಿದ್ಯಾರ್ಥಿಗಳಿಗೆ ಯೋಗ ಎಂದರೆ ದೇಹ ಮತ್ತು ಮನಸ್ಸಿನ ಒಂದಾಗುವಿಕೆ ಎಂಬುದನ್ನು ತಿಳಿಸಿ ಏಕಾಗ್ರತೆಯನ್ನು ಸುಲಭವಾಗಿ ಸಾಧಿಸಬಹುದು ಎಂದು ನುಡಿದರು. ಯೋಗ ತರಬೇತುದಾರರಾಗಿ  ಸಿಂಧೂ  ಆಗಮಿಸಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಿದರು. ಸಂಸ್ಥೆ ಮುಖ್ಯ ಉಪಾಧ್ಯಾಯರಾದ ಸುಮಲತಾ ಹಾಗೂ ಸಹ ಶಿಕ್ಷಕರು ಹಾಜರಿದ್ದರು. ವರದಿ : ನೌಫಲ್ ಕಡಂಗ  

Read More

ನಾಪೋಕ್ಲು  ಜೂ.22 :  ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಪ್ರೌಢಶಾಲಾ ವಿಭಾಗದ ಪೊಲೀಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ರೋಟರಿ ಇಂಟರಾಕ್ಟ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಾಪೋಕ್ಲು ಗ್ರಾ.ಪಂ, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ಶೌರ್ಯ ವಿಪತ್ತು ತಂಡ, ಶ್ರೀ ಮಕ್ಕಿ ಶಾಸ್ತಾವು ಸೇವಾ ಕಾರ್ಯಪಡೆ ಇದರ ಸಯೋಗದೊಂದಿಗೆ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲೆಯ ಆವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ “ವಸುದೈವ ಕುಟುಂಬಕ್ಕಾಗಿ ಯೋಗ ಅರ್ ಆಂಗನ್ ಯೋಗ ” ಎಂಬ ಘೋಷ ವಾಕ್ಯದ ಪೋಸ್ಟರ್ ಬಿಡುಗಡೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಲೆಯ ಆಡಳಿ ಮಂಡಳಿ ಉಪಾಧ್ಯಕ್ಷ ಕೆ.ಎ. ಹ್ಯಾರಿಸ್ ಮನುಷ್ಯನ ದೈಹಿಕ ಮತ್ತು ಮಾನಸಿಕ ಸದೃಢ ಬೆಳವಣಿಗೆಗೆ ಯೋಗ ಬಹಳ ಮುಖ್ಯ. ಹಿಂದಿನ ಕಾಲದಲ್ಲಿಯೇ ಯೋಗವನ್ನು ಸಂತರು, ಋಷಿಮುನಿಗಳು ಮಾಡುತ್ತಿದ್ದರು. ಆದರೆ ಇದರ ಬಗ್ಗೆ ಯಾವುದೇ ಪ್ರಚಾರವಾಗುತ್ತಿರಲಿಲ್ಲ, ಯೋಗವನ್ನು ಭಾರತ ಇಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿ ಕೀರ್ತಿಯನ್ನುಪಡೆದುಕೊಂಡಿದೆ. ಯೋಗ ಒಂದು ದಿನಕ್ಕೆ…

Read More

ಸೋಮವಾರಪೇಟೆ ಜೂ.22 :  ವೀರಶೈವ ಸಮಾಜದ ಅಕ್ಕನ ಬಳಗದ ನೂತನ 2023-28ನೇ ಸಾಲಿನ ಆಡಳಿತ ಮಂಡಳಿ ರಚಿಸಲಾಗಿದೆ. ಪಟ್ಟಣದ ಕರ್ಕಳ್ಳಿಯಲ್ಲಿರುವ ಅಕ್ಕನ ಬಳಗದ ಸಭಾಂಗಣದಲ್ಲಿ ಹಿಂದಿನ ಸಾಲಿನ ಅಧ್ಯಕ್ಷೆ ಜಲಜಾಶೇಕರ್ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ಅದ್ಯಕ್ಷರಾಗಿ ಚಂದ್ರಕಲಾಗಿರಿಶ್, ಉಪಾಧ್ಯಕ್ಷರಾಗಿ ಗೀತರಾಜು, ಕಾರ್ಯದರ್ಶಿಯಾಗಿ ಮಾಯಾಗಿರೀಶ್, ಸಹ ಕಾರ್ಯದರ್ಶಿಯಾಗಿ ದಿವ್ಯ ದಯಾಕರ್, ಖಜಾಂಚಿಯಾಗಿ ಸರಿತಾ ಮಲ್ಲಿಕಾರ್ಜುನ್ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಆಶಾ ಹೂವಯ್ಯ, ನಂದಿನಿಮಾಂತೇಶ್, ಸವಿತಾ ನೀಲಕಂಠ, ಜಗದಾಂಬ ಗುರುಪ್ರಸಾದ್, ಸವಿತಾ ಶಿವಕುಮಾರ್, ರಜಿನಿ ಯತೀಶ್, ಮಂಜುಳ ಬಸವರಾಜು,ಅನುರಾಜು ಅವಿರೋಧವಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದರು. 

Read More

ಮಡಿಕೇರಿ ಜೂ.22 :  ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ  ಕೊಪ್ಪದ ಭಾರತ್ಮಾತ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಯೋಗಾಭ್ಯಾಸ ಪ್ರದರ್ಶಿಸಿದರು. ನಂತರ  ಯೋಗ ದಿನದ ಮಹತ್ವ ಹಾಗೂ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ರಕ್ಷಣೆಗೆ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಲಾಯಿತು.

Read More

ಮಡಿಕೇರಿ ಜೂ.22 :  ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ ಪುರಸ್ಕತ ಹಾಗೂ ಕಾಲೇಜಿನ ಸಂಚಾಲಕ  ಕೆ. ಆರ್. ಗಂಗಾಧರ್ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಗತ್ತಿಗೆ ಭಾರತದ ಪ್ರಮುಖ ಕೊಡುಗೆಗಳಲ್ಲಿ ಯೋಗ ಪ್ರಮುಖವಾಗಿದೆ. ಪ್ರಧಾನಿ ನರೇಂದ್ರ ಮೋದಿ ಭಾರತೀಯ ಯೋಗ ಪರಂಪರೆಗೆ ಅಂತಾರಾಷ್ಟ್ರೀಯ ಮಾನ್ಯತೆಯನ್ನು ತಂದು ಕೊಟ್ಟಿದ್ದಾರೆಂದು ಉಲ್ಲೇಖಿಸಿದರು. ಬಾಲ್ಯದಿಂದ ನಿರಂತರವಾಗಿ ಯೋಗವನ್ನು ಅಭ್ಯಾಸ ಮಾಡಿದಾಗ ಆರೋಗ್ಯಯುತ ಜೀವನ ಸಾಗಿಸಲು ಸಾಧ್ಯ ಎಂದರು. ಭೌತಶಾಸ್ತ್ರ ಉಪನ್ಯಾಸಕ ಹಾಗೂ ಪತಂಜಲಿ ಯೋಗ ಸಂಸ್ಥೆಯ ಸದಸ್ಯ ಸುರೇಶ್ ವಾಗ್ಲೆ ವಿದ್ಯಾರ್ಥಿಗಳಿಗೆ ಸೂಕ್ಷ್ಮ ವ್ಯಾಯಾಮ, ಆಸನಗಳು ಪ್ರಾಣಾಯಾಮಗಳ ಮಹತ್ವವನ್ನು ತಿಳಿಸಿ ಅಭ್ಯಾಸಮಾಡಿಸಿದರು.  ಯೋಗ ಪರಿಣಿತ ದ ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮಕುಮಾರ್ ಸಹಕರಿಸಿದರು. ಕಾಲೇಜಿನ ಪ್ರಾಂಶುಪಾಲ ಎಸ್.ರಮೇಶ್  ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಸಾಯನಶಾಸ್ತ್ರ ಉಪನ್ಯಾಸಕ ಲಿಂಗಪ್ಪ, ದೈಹಿಕ ಶಿಕ್ಷಣ ಉಪನ್ಯಾಸಕಿ ಶಾಂತಿ, ಗಣಿತಶಾಸ್ತ್ರ ಭಾಗ್ಯಶ್ರೀ, ಸಮಾಜಶಾಸ್ತ್ರ ಉಪನ್ಯಾಸಕಿ  ನಂದಿನಿ…

Read More

ಸೋಮವಾರಪೇಟೆ ಜೂ.22 : ಎಲ್‍ಐಸಿ ಯಲ್ಲಿ 34 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ವಾಕರ್ಸ್ ವಿಂಗ್ ಸಂಸ್ಥೆಯ ಮಾಜಿ ಅಧ್ಯಕ್ಷ ಪಿ.ನಾಗೇಶ್ ಅವರನ್ನು ಸೋಮವಾರಪೇಟೆ ವಾಕರ್ಸ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಪಟ್ಟಣದ ಸುವಿದ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಮುಖರು ಹಾಗೂ ಪದಾಧಿಕಾರಿಗಳು ಸನ್ಮಾನಿಸಲಾಯಿತು. ವಾಕರ್ಸ್ ಅಧ್ಯಕ್ಷ ಮೋಹನ್ ನಿಶಾಂತ್, ಖಜಾಂಚಿ ನವೀನ್, ಪದಾಧಿಕಾರಿಗಳಾದ ಎಸ್.ಡಿ.ವಿಜೇತ್, ಶ್ರೀಹರ್ಷ, ಉದಯರವಿ, ಕುಮಾರ್, ಬಿ.ಟಿ. ತಿಮ್ಮಶೆಟ್ಟಿ, ಆಶಾ ಮೋಹನ್, ಇಂದಿರಾ ರವಿ, ವಿದ್ಯಾ ಸುಂದರ್, ಲತಾ ನಾಗೇಶ್, ಪ್ರೇಮಾ ಹೃಶಿಕೇಶ್, ರಾಣಿ ದಿನೇಶ್, ಲತಾ ನವೀನ್, ಶರ್ಮಿಳಾ ರಮೇಶ್, ಅಶ್ವಿನಿ ಉದಯ್ ಕುಮಾರ್ ಇದ್ದರು.

Read More

ಸೋಮವಾರಪೇಟೆ ಜೂ.22 : ಪುಷ್ಪಗಿರಿ ಜೇಸಿ ಸಂಸ್ಥೆಗೆ ಅನುಬಂಧ ಸ್ನೇಹ ಸಂಬಂಧಗಳ ದರ್ಶನ ಶೀರ್ಷಿಕೆಯಡಿಯಲ್ಲಿ ಗೋಲ್ಡನ್ ಕಾಲರ್ ಪ್ರಸಿಡೆಂಟ್ ಅವಾರ್ಡ್ ದೊರಕಿದೆ. ಬೀರೂರಿನಲ್ಲಿ ನಡೆದ ಜೆಸಿಐ ವಲಯ 14 ರ ಅರ್ಧವಾರ್ಷಿಕ ಸಮ್ಮೇಳನ-2023 ಕಾರ್ಯಕ್ರಮದಲ್ಲಿ ಕಳೆದ ಆರು ತಿಂಗಳಲ್ಲಿ ವಲಯ ಮತ್ತು ಜೆಸಿಐ ನೀಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ ಘಟಕವನ್ನು ಗುರುತಿಸಿ ಅರ್ಧವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪುಷ್ಪಗಿರಿ ಜೇಸಿ ಸೋಮವಾರಪೇಟೆ ಅಧ್ಯಕ್ಷೆ ಎಂ.ಎ.ರುಬೀನಾ ಅವರಿಗೆ ವಲಯ ಅಧ್ಯಕ್ಷರಾದ ಯಶಸ್ವಿನಿ, ವಲಯ ಉಪಾಧ್ಯಕ್ಷ ಎಚ್.ಆರ್. ಪ್ರಶಾಂತ್ ಗೋಲ್ಡನ್ ಕಾಲರ್ ಹಾಕುವ ಮೂಲಕ ಗೋಲ್ಡನ್ ಕಾಲರ್ ಪ್ರಸಿಡೆಂಟ್ ಅವಾರ್ಡ್ ನೀಡಿ ಗೌರವಿಸಿದರು. ಇದರೊಂದಿಗೆ ಔಟ್ ಸ್ಟ್ಯಾಂಡಿಂಗ್ ಲಾಮ್ ವಿನ್ನರ್, ಔಟ್ ಸ್ಟ್ಯಾಂಡಿಂಗ್ ಫರ್ ಮಾರ್ಮರ್ ಪಿ.ಆರ್ ಅಂಡ್ ಮಾರ್ಕೆಟಿಂಗ್, ನೀಡ್ ಬ್ಲಡ್ ಕಾಲ್ ಜೆಸಿಐ ನಲ್ಲಿ ವಿನ್ನರ್, ಗೋ ಗ್ರೀನ್, ಮ್ಯಾನೇಜ್‍ಮೆಂಟ್ ಏರಿಯ ಕಾರ್ಯಕ್ರಮ ಮತ್ತು ಗೋ ಗ್ರೀನ್ ನಲ್ಲಿ ಸೆಕೆಂಡ್ ರನ್ನರ್ ಅಫ್ ಪ್ರಶಸ್ತಿಗಳನ್ನು ಘಟಕ ಪಡೆದುಕೊಂಡಿತು. ಈ ಸಂದರ್ಭ…

Read More

ಸೋಮವಾರಪೇಟೆ ಜೂ.22 : ಅಪ್ಪು ಅಭಿಮಾನಿಗಳ ಬಳಗದ ವತಿಯಿಂದ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಹರೀಶ್ ಮತ್ತು ಖಾಸಗಿ ಕ್ಲಿನಿಕ್ ವೈದ್ಯರಾದ ಶರ್ಮಿಳಾ ಫರ್ನಾಂಡೀಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಭಿಮಾನಿ ಬಳಗದ ಅಧ್ಯಕ್ಷ ಅಬ್ಬೂರುಕಟ್ಟೆ ರವಿಕುಮಾರ್, ಗ್ರಾ.ಪಂ ಸದಸ್ಯರುಗಳಾದ ಅಜಿತ್‍ಕುಮಾರ್ ಪ್ರಕಾಶ್ ಹಾಜರಿದ್ದರು.

Read More

ಸೋಮವಾರಪೇಟೆ ಜೂ.22 : ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ವಾರ್ಷಿಕ ಸಭೆಯು ಸಂಘದ ಅಧ್ಯಕ್ಷ ಸಿ.ಕೆ.ಮಲ್ಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಟ್ಟಣದ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಘಕ್ಕೆ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಮುಂದಿನ ಸಾಲಿನಲ್ಲಿ ಅದ್ಧರೂರಿಯಾಗಿ ರಜತಮಹೋತ್ಸವ ನಡೆಸಲು ಸಭೆ ತೀರ್ಮಾನಿಸಿತು. ಈ ಸಂದರ್ಭ ಸಂಘದ ಸಾಧನೆಯ ಸ್ಮರಣ ಸಂಚಿಕೆ ಹೊರತರಬೇಕೆಂದು ಸದಸ್ಯರು ಸೂಚಿಸಿದರು. ಸಂಘದ ಅಧ್ಯಕ್ಷ ಸಿ.ಕೆ.ಮಲ್ಲಪ್ಪ ಮಾತನಾಡಿ, ಇಂದಿಗೂ ಸಾಕಷ್ಟು ನಿವೃತ್ತ ಸರ್ಕಾರಿ ನೌಕರರು ಸಂಕಷ್ಟದ ಜೀವನ ನಡೆಸುತ್ತಿದ್ದು, ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಪರದಾಡುತ್ತಿದ್ದಾರೆ. ನಮ್ಮ ನೆರವಿಗಾಗಿ ಸರ್ಕಾರ ಆರೋಗ್ಯ ಸಂಜೀವಿನಿಯಲ್ಲಿ ನಿವೃತ್ತ ಸರ್ಕಾರಿ ನೌಕರರನ್ನು ಸೇರ್ಪಡೆಗೊಳಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರೂ, ಇಂದಿಗೂ ಈಡೇರಿಲ್ಲ. ಸಂಘದ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದರು. ಸಂಘದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಳವಾಗಬೇಕಿದೆ. ಎಲ್ಲ ನಿವೃತ್ತ ನೌಕರರನ್ನು ಸದಸ್ಯರನ್ನಾಗಿ ಮಾಡಬೇಕಾಗಿದೆ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದಸ್ಯರ ಅನುಕೂಲಕ್ಕಾಗಿ ಇನ್ನೂ ಹೆಚ್ಚಿನ ಕೆಲಸ…

Read More