ಸುಂಟಿಕೊಪ್ಪ ಜೂ.22 : ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಯೋಗ ದಿನಾಚರಣೆಯ ಅಂಗವಾಗಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಯೋಗಭ್ಯಾಸ ನಡೆಸಿದರು. ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಕರಾದ ಸುನೀತ ಹಾಗೂ ಈಶ ವಿದ್ಯಾರ್ಥಿಗಳೊಂದಿಗೆ ಯೋಗಭ್ಯಾಸ ಮಾಡಿದರು. ಈ ಸಂದರ್ಭ ಕಾಲೇಜಿನ ಪ್ರಾಚಾರ್ಯ ಪಿ.ಎಸ್.ಜಾನ್, ಉಪನ್ಯಾಸಕರಾದ ಪದ್ಮಾವತಿ, ಕವಿತಭಕ್ತ್, ಮಂಜುಳಾ, ಸರಳಾ, ಅನುಷಾ, ಸಂಧ್ಯಾ, ಅಭಿಷೇಕ್ ಹಾಗೂ ಕನಕ ಹಾಜರಿದ್ದರು.
ಲೇಖಕ: admin
ಸುಂಟಿಕೊಪ್ಪ ಜೂ.22 : ವಿದ್ಯಾರ್ಥಿ ಜೀವನದಲ್ಲಿ ಮತದಾನದ ಹಕ್ಕಿನ ಮಹತ್ವತೆಯನ್ನು ಅರಿತುಕೊಳ್ಳಲು ಕಾಲೇಜು ಸಂಸತ್ ರಚನೆ ಚುನಾವಣೆ ಸಹಕಾರಿ ಎಂದು ಕಾಲೇಜು ಪ್ರಾಚಾರ್ಯ ಪಿ.ಎಸ್.ಜಾನ್ ತಿಳಿಸಿದರು. ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮತದಾನ ಹಾಗೂ ಸಂಸತ್ ರಚನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾನದ ಬಗ್ಗೆ ಅರಿವನ್ನು ಹೊಂದಿ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ತಿಳಿದುಕೊಳ್ಳಲಿ ಎಂಬ ಸದುದ್ದೇಶ ಇರಿಸಿಕೊಂಡು ಕಾಲೇಜಿನಲ್ಲಿ ಸಂಸತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ತಪ್ಪದೆ ಮತದಾನದಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದರು. ಮತದಾನ ಸಂಚಾಲಕರಾದ ಉಪನ್ಯಾಸಕಿ ಸರಳಾ ಮಾದರಿ ವiತಗಟ್ಟೆಯನ್ನು ರಚಿಸಿ ಮತದಾನ ಮಾಡುವ ರೀತಿಯನ್ನು ವಿವರಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಮತ ಪತ್ರಗಳನ್ನು ಸಿದ್ಧಪಡಿಸಿದರು. ಉಪನ್ಯಾಸಕಿಯರಾದ ಸುನೀತ, ಕವಿತಾ ಮತ ಎಣಿಕೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಕಾಲೇಜು ನಾಯಕನಾಗಿ ಹಸೈನಾರ್, ಉಪನಾಯಕ ಕೃತಿಕ್, ಆರೋಗ್ಯ ಮತ್ತು ಸ್ವಚ್ಚತಾ ಮಂತ್ರಿಯಾಗಿ ಭೂಮಿಕ, ಸಾಂಸ್ಕøತಿಕ ಚಟುವಟಿಕೆ ನಿರ್ವಹಣಾ ಮಂತ್ರಿಯಾಗಿ ರಾಜಿಲಾ ಮತದಾನದಲ್ಲಿ ಜಯಗಳಿಸುವ ಮೂಲಕ ಅಧಿಕಾರದ ಗದ್ದುಗೇರಿದರು. ಈ…
ಮಡಿಕೇರಿ ಜೂ.22 : ಮಡಿಕೇರಿ- ಸಂಪಾಜೆ ರಸ್ತೆಯ ದೇವರಕೊಲ್ಲಿಯಲ್ಲಿ ಲಾರಿ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಲಾರಿ ಮಗುಚಿಕೊಂಡಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಸಂಪೂರ್ಣವಾಗಿ ಜಖಂಗೊoಡಿದ್ದು, ಅದೃಷ್ಟವಶಾತ್ ಇದರಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಲಾರಿ ಮಂಗಳೂರಿಗೆ ತೆರಳುತ್ತಿದ್ದರೆ, ಕಾರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಡಿಕೇರಿ ಜೂ.22 : ಬಿದ್ದಂಡ ಇಂದಿರಾ ಪೊನಪ್ಪ ಅವರು ಜೂ.21 ರಂದು ಸಂಜೆ ಕರಡ ಗ್ರಾಮದ ತಮ್ಮ ಎಸ್ಟೇಟ್ ನಿವಾಸದಲ್ಲಿ ನಿಧನರಾದರು. ಮೃತರ ಅಂತ್ಯಕ್ರಿಯೆ ಜೂ.22 ರಂದು ಮಧ್ಯಾಹ್ನ ಮಡಿಕೇರಿ ಕೊಡವ ಸಮಾಜದ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ವರ್ಗ ತಿಳಿಸಿದೆ.
ಮಡಿಕೇರಿ ಜೂ.21 : ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್ ನ್ನು ಭಾರತದಾದ್ಯಂತ ಜೂನ್ 29 ರಂದು ಆಚರಿಸಲಾಗುತ್ತದೆ. ಅಂದಿನ ಈದುಲ್ ಅಝ್ಹಾ ನಮಾಝನ್ನು ಮಡಿಕೇರಿ ನಗರದ ಎಂ. ಎಂ.ಮಸೀದಿಯಲ್ಲಿ ಬೆಳಿಗ್ಗೆ 7:30 ಗಂಟೆಗೆ ನಿರ್ವಹಿಸಲಾಗುವುದು ಎಂದು ಜಮಾಅತ್ ನ ಕಾರ್ಯದರ್ಶಿಗಳಾದ ಎಂ.ಎಂ.ಹಾರೂನ್ ಹಾಜಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಡಿಕೇರಿ ಜೂ.21 : ಕುಶಾಲನಗರ ಪಟ್ಟಣ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸೋಮವಾರಪೇಟೆ ನಿವಾಸಿ ಅಶ್ರಫ್ (40) ಹಾಗೂ ಕೊಟ್ಟಮುಡಿ ನಿವಾಸಿ ಇಸ್ಮಾಯಿಲ್(31) ಎಂದು ಗುರುತಿಸಲಾಗಿದೆ. ಇವರ ಬಳಿ ಇದ್ದ 19 ಗ್ರಾಂ ನಿಷೇಧಿತ ಮಾದಕ ವಸ್ತು (ಎಂಡಿಎಂಎ)ವನ್ನು ವಶಪಡಿಸಿಕೊಳ್ಳಲಾಗಿದೆ. ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್.ಬಿ.ಜಿ, ಠಾಣಾಧಿಕಾರಿ ರವೀಂದ್ರ ಹಾಗೂ ಸಿಬ್ಬಂದಿಗಳ ವಿಶೇಷ ತಂಡಕ್ಕೆ ಕುಶಾಲನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಯಿತು. ಪ್ರಕರಣ ಪತ್ತೆ ಹಚ್ಚಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ದಕ್ಷತೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ಜೂ.21 : ಜನ ಸ್ನೇಹಿ ಮತ್ತು ಪಾರದರ್ಶಕ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ನೂತನ ಜಿಲ್ಲಾಧಿಕಾರಿ ವೆಂಕಟ್ ರಾಜ ಹೇಳಿದರು. ಇಂದು ಅಧಿಕಾರ ಸ್ವೀಕಾರಿಸಿ ಮಾತನಾಡಿದ ಅವರು, ಕೊಡಗು ಜಿಲ್ಲೆಯ ಬಗ್ಗೆ ಹೆಮ್ಮೆ ಇದೆ ಎಂದು ಮೆಚ್ಚುಗೆಯ ನುಡಿಯಾಡಿದರು. ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಸಂದರ್ಭ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಮಳೆಗಾಲ ಎದುರಿಸಲು ಮೊದಲ ಆಧ್ಯತೆ ನೀಡಲಾಗುತ್ತದೆ ಎಂದು ಹೇಳಿದರು. ಈಗಾಗಲೇ ಜಿಲ್ಲಾಧಿಕಾರಿಗಳಾಗಿದ್ದ ಡಾ. ಬಿ.ಸಿ.ಸತೀಶ ಅವರಿಂದಲೂ ಮಳೆಗಾಲದ ಕುರಿತು ಮಾಹಿತಿ ಪಡೆದಿರುವುದಾಗಿ ಹೇಳಿದರು. ಜಿಲ್ಲೆಯ ಸಮಸ್ಯೆಗಳ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆಯುವುದಾಗಿ ತಿಳಿಸಿದರು.
ಮಡಿಕೇರಿ ಜೂ.21 : ನಗರದ ಜಿಲ್ಲಾಧಿಕಾರಿಗಳ ಕಟ್ಟಡದ ಆವರಣದಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಹಾಗೂ ಭವನವನ್ನು ನಿರ್ಮಿಸುವಂತೆ ಪ್ರೊ. ಬಿ.ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕೊಡಗು ಜಿಲ್ಲಾ ಸಮಿತಿ ಒತ್ತಾಯಿಸಿದೆ. ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ಅವರ ನೇತೃತ್ವದಲ್ಲಿ ಸಮಿತಿಯ ಪ್ರಮುಖರು ಹಾಗೂ ಪದಾಧಿಕಾರಿಗಳು ಶಾಸಕರಿಗೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇ ಗೌಡ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆಕಾಶ್ ಹಾಗೂ ಸಮಾಜ ಕಲ್ಯಾಣಧಿಕಾರಿಗಳಿಗೆ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಿದರು. ಭಾರತದ ಇತಿಹಾಸದ ಪುಟಗಳಲ್ಲಿ ಅಂಬೇಡ್ಕರ್ ಅವರ ಸಾಧನೆ ಅಜರಾಮರವಾಗಿದ್ದು, ಜೀವನದ ಪ್ರತಿಕ್ಷಣವನ್ನು ಶೋಷಿತರ ಧ್ವನಿಯಾಗಿ ಕಳೆದವರು. ಅಂಬೇಡ್ಕರ್ ಅವರನ್ನು ವಿಶ್ವವೇ ಹಾಡಿ ಹೊಗಳಿದರೂ ಜಿಲ್ಲಾ ಮತ್ತು ತಾಲೂಕು ಕಚೇರಿ ಮುಂಭಾಗ ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಸರ್ಕಾರದ ಅನುದಾನದಲ್ಲಿ ಪುತ್ಥಳಿ ಹಾಗೂ ಭವನವನ್ನು ನಿರ್ಮಾಣ ಮಾಡದೇ ಇರುವುದು ಸಂವಿಧಾನ ಶಿಲ್ಪಿಗೆ ಅಗೌರವ ತೋರಿದಂತೆ ಎಂದರು. ಆದ್ದರಿಂದ ಶೀಘ್ರವೇ ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿ ಜಿಲ್ಲಾಧಿಕಾರಿಗಳ ಕಟ್ಟಡದ ಆವರಣದಲ್ಲಿ ಹಾಗೂ…
ಕುಶಾಲನಗರ ಜೂ.21 : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಕೊಡ ಮಾಡುವ ರಾಜ್ಯಮಟ್ಟದ ಕಾಯಕ ರತ್ನ 2023 ಪ್ರಶಸ್ತಿ ಗೆ ಕೊಡಗು ಜಿಲ್ಲೆಯ ಕುಶಾಲನಗರದ ಶಾಂತ ಶ್ರೀಪತಿ ಆಯ್ಕೆಯಾಗಿದ್ದಾರೆ. ನಗರದ ಶಾರದಾ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹಲವು ವರ್ಷಗಳ ಸಾಧನೆ ಮೂಲಕ ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿರುವ ಶಾಂತ ಶ್ರೀಪತಿ ಅªರಿಗೆ ಜೂ.25ರಂದು ದೊಡ್ಡಬಳ್ಳಾಪುರದಲ್ಲಿ ನಡೆಯುವ ಪರಿಷತ್ತಿನ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಮಾರಂಭದಲ್ಲಿ ಇಸ್ರೋ ಮಾಜಿ ಅಧ್ಯಕ್ಷರಾದ ಡಾ.ಎ. ಎಸ್, ಕಿರಣ್ ಕುಮಾರ್, ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಕೊಡಗು ಜಿಲ್ಲಾ ಅಧ್ಯಕ್ಷರಾದ ವನಿತಾ ಚಂದ್ರಮೋಹನ್ ತಿಳಿಸಿದ್ದಾರೆ.
ಮಡಿಕೇರಿ ಜೂ.21 : ಪ್ರಸಕ್ತ(2023-24) ಸಾಲಿನ ಮೇ-2023 ರ ಅಂತ್ಯದವರೆಗಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮ ಸೇರಿದಂತೆ) ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಅಧ್ಯಕ್ಷತೆಯಲ್ಲಿ ಜೂ.27 ರಂದು ಬೆಳಗ್ಗೆ 11.30 ಗಂಟೆಗೆ ನಗರದ ಕೊಡಗು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ತಿಳಿಸಿದ್ದಾರೆ.






