ಮಡಿಕೇರಿ ಜೂ.21 : ಪರಿಶಿಷ್ಟ ಪಂಗಡದ ಕಾನೂನು ಪದವೀಧರರಿಗೆ ವೃತ್ತಿ ತರಬೇತಿ ಅವಧಿಯಲ್ಲಿ ಶಿಷ್ಯ ವೇತನ ನೀಡುವ ಕಾರ್ಯಕ್ರಮ ಅನುಷ್ಠಾನಗೊಳಿಸುವ ಸಂಬಂಧ 2023-24ನೇ ಸಾಲಿನಲ್ಲಿ ವೃತ್ತಿ ತರಬೇತಿಗೆ ಪರಿಶಿಷ್ಟ ವರ್ಗದ ಅರ್ಹ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪರಿಶಿಷ್ಟ ಪಂಗಡ ಜಾತಿಗೆ ಸೇರಿದ್ದು, ಕೊಡಗು ಜಿಲ್ಲೆಯವರಾಗಿರಬೇಕು. 40 ವರ್ಷ ವಯೋಮಿತಿಯೊಳಗಿರಬೇಕು. ಅಭ್ಯರ್ಥಿಯ ಮತ್ತು ಪೋಷಕರ ವಾರ್ಷಿಕ ಆದಾಯ ರೂ.2.50 ಲಕ್ಷ ಮೀರಿರಬಾರದು. ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕಕ್ಕೆ ಮೊದಲು ಯಾವುದೇ ಪದವಿ ನಂತರ 3 ವರ್ಷಗಳ ಅಥವಾ ಪಿಯುಸಿ ನಂತರ 5 ವರ್ಷಗಳ ಕೋರ್ಸುಗಳ ಕಾನೂನು ಪದವಿ ಪಡೆದಿರಬೇಕು. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು 15 ವರ್ಷಕ್ಕೆ ಕಡಿಮೆಯಿಲ್ಲದಂತೆ ಸೇವೆ ಸಲ್ಲಿಸಿರುವ ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್/ ಸರ್ಕಾರಿ ವಕೀಲರು/ ವೃತ್ತಿಪರ ವಕೀಲರ ಬಳಿ ತರಬೇತಿಗೆ ನಿಯೋಜಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ತರಬೇತಿಯನ್ನು ಪೂರ್ಣಗೊಳಿಸದೆ ಬಿಟ್ಟು ಹೋಗಬಾರದು. ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರಿ ಸಿಕ್ಕಿದಲ್ಲಿ ಮಾತ್ರ…
ಲೇಖಕ: admin
ಮಡಿಕೇರಿ ಜೂ.21 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ವತಿಯಿಂದ ಅಂತರರಾಷ್ಟ್ರೀಯ 9ನೇ ಯೋಗ ದಿನಾಚರಣೆಯು ನಗರದ ಗೌಡ ಸಮಾಜದಲ್ಲಿ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೊಡಗು ವೈದ್ಯಕೀಯ ಶಿಕ್ಷಣ, ಜಿಲ್ಲಾ ಪೊಲೀಸ್, ಯುವ ಸಬಲೀಕರಣ ಮತ್ತು ಕ್ರೀಡೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಸಮಾಜ ಕಲ್ಯಾಣ, ಪದವಿ ಪೂರ್ವ ಶಿಕ್ಷಣ, ಎನ್‍ಎಸ್‍ಎಸ್ ಮತ್ತು ಎನ್‍ಸಿಸಿ ಘಟಕ, ನೆಹರು ಯುವ ಕೇಂದ್ರ, ಕೊಡಗು ಯುವ ಒಕ್ಕೂಟ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಯೋಗ ಭಾರತಿ, ಪ್ರಣವ ಯೋಗ ಕೇಂದ್ರ, ಪತಂಜಲಿ ಯೋಗ ಶಿಕ್ಷಣ, ಆರ್ಟ್ ಆಪ್ ಲಿವಿಂಗ್, ಸ್ಕೌಟ್ಸ್ ಮತ್ತು ಗೈಡ್ಸ್, ನೀಮಾ ಸಂಸ್ಥೆ ಹೀಗೆ ಸರ್ಕಾರಿ ಮತ್ತು ಸರ್ಕಾರೇತರ ವಿವಿಧ ಸಂಸ್ಥೆಗಳ ಸಹಕಾರದಲ್ಲಿ ವಸುದೈವ ಕುಟುಂಬಕ್ಕಾಗಿ ಯೋಗ ಆ ಹೆಸರಿನಲ್ಲಿ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಆರೋಗ್ಯವೇ ಭಾಗ್ಯವಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯೋಗ ಸಹಕಾರಿಯಾಗಿದೆ…
ಮಡಿಕೇರಿ ಜೂ.21 : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸ್ನಾತಕೋತ್ತರ (ಡಿಪ್ಲೊಮಾ) ಯೋಗವಿಜ್ಞಾನ ವಿಭಾಗ, ಎನ್‍ಸಿಸಿ, ಎನ್‍ಎಸ್‍ಎಸ್ ಹಾಗೂ ಕೆನರಾ ಬ್ಯಾಂಕ್ ನ ಸಹಯೋದಲ್ಲಿ ಅಂತರಾಷ್ಟ್ರೀಯ ಯೋಗದಿನಾಚರಣೆಯನ್ನು ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ ಯೋಗಾಭ್ಯಾಸದಿಂದ ದೈಹಿಕ ಕ್ಷಮತೆಯನ್ನು ಪಡೆದುಕೊಳ್ಳಬಹುದು. ಆ ಮೂಲಕ ಶಿಸ್ತುಬದ್ಧ ಬದುಕನ್ನು ನಡೆಸಲು ಸಾಧ್ಯವಾಗುತ್ತದೆ. ಭಾರತೀಯ ಪರಂಪರೆಯಲ್ಲಿ ಯೋಗಾಭ್ಯಾಸಕ್ಕೆ ಮಹತ್ತರವಾದ ಸ್ಥಾನವಿದೆ ಎಂದು ಅಭಿಪ್ರಾಯಪಟ್ಟರು. ಮಡಿಕೇರಿಯ ಕರ್ನಾಟಕ 19ನೇ ಬಟಾಲಿಯನ್ ನ ಆಡಳಿತ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಚಾಕೋ ವಿ.ಡಿ ಮತ್ತು ಮಡಿಕೇರಿಯ ಕೆನರಾ ಬ್ಯಾಂಕ್ ಪಶ್ಚಿಮ ಶಾಖೆಯ ವ್ಯವಸ್ಥಾಪಕ ಪಿ.ಕೆ.ಅವಿನಾಶ್ ಹಾಜರಿದ್ದರು. ಪ್ರಾಯೋಗಿಕ ಯೋಗಾಭ್ಯಾಸದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಡಾ. ಗಾಯತ್ರಿ ಪಾಲ್ಗೊಂಡಿದ್ದರು. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಸ್ನಾತಕೋತ್ತರ (ಡಿಪ್ಲೊಮಾ) ಯೋಗವಿಜ್ಞಾನ ವಿಭಾಗದ ಸಂಯೋಜಕ ಡಾ. ಎಂ.ಪಿ.ಕೃಷ್ಣ ವಂದಿಸಿದರು. ಸ್ನಾತಕೋತ್ತರ (ಡಿಪ್ಲೊಮಾ) ಯೋಗವಿಜ್ಞಾನ ವಿಭಾಗದ ಅಧ್ಯಾಪಕ ಎಂ.ಎಸ್.ಗುರುಕಿರಣ್ ಮತ್ತು ಅಖಿಲಾ ಎನ್‍ಸಿಸಿ, ಎನ್‍ಎಸ್‍ಎಸ್…
ಮಡಿಕೇರಿ ಜೂ.21 : ಎಲ್ಲರೂ ನಮ್ಮ ದೇಶದ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಬಿ.ಪಿ.ರೇಖಾ ಹೇಳಿದರು. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ನಾಪೋಕ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹಯೋಗದೊಂದಿಗೆ ಏರ್ಪಡಿಸಿದ್ದ ಪರಂಪರೆ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪರಂಪರೆ ಅನಾದಿ ಕಾಲ ಘಟದಿಂದಲೂ ಕೂಡಿಕೊಂಡು ಬಂದಿದೆ. ಭಾರತದಲ್ಲಿ ನಡೆದ ಐತಿಹಾಸಿಕ ಘಟನೆಗಳ ಹಿನ್ನಲೆ ಮತ್ತು ಮಹಾನ್ ಪುರುಷರ ಆಚಾರ ವಿಚಾರಗಳು, ಸಿದ್ದಾಂತ ಮತ್ತು ಸಂಸ್ಕೃತಿಗಳನ್ನು ತಿಳಿದುಕೊಳುವುದು ಇಂದಿನ ಕಾಲಘಟದಲ್ಲಿ ಅತ್ಯಂತ ಅವಶ್ಯ ಎಂದರು. ಪ್ರಾಚೀನ ಮತ್ತು ಪ್ರಚಲಿತ ನಾಣ್ಯಗಳ ಹಾಗೂ ನೋಟುಗಳ ಸಂಗ್ರಹಕಾರ ಕೆ.ಪಿ.ಕೇಶವಮೂರ್ತಿ ಮಾತನಾಡಿ, ನಾಣ್ಯಗಳು ನಮ್ಮ ದೇಶವನ್ನು ಆಳಿದ ರಾಜ ಮನೆತನದ ವೈಭವಕ್ಕೆ ಸಾಕ್ಷಿಯಾಗಿದೆ. ಎಷ್ಟೋ ಇತಿಹಾಸ ಕುರುಹುಗಳನ್ನು ಹುಡುಕಿಕೊಡುವುದರಲ್ಲಿ ಮಹತ್ತರ ಪಾತ್ರವಹಿಸಿದೆ. ಇತಿಹಾಸವನ್ನು ನಾಣ್ಯಗಳ ಸಂಗ್ರಹ ರೂಪದಲ್ಲಿ ಇಂದಿನ ಪೀಳಿಗೆಗೆ ತಿಳಿಸುತ್ತಿರುವುದು ನನ್ನ ಸೌಭಾಗ್ಯವಾಗಿದೆ. ಪ್ರತಿ ವಿದ್ಯಾರ್ಥಿಗಳು ಇತಿಹಾಸ ಅದರ ಪರಂಪರೆಯನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.…
ಮಡಿಕೇರಿ ಜೂ.21: ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ ಮುಂದುವರೆದಿದ್ದು, ಕಾಫಿ ತೋಟವೊಂದರಲ್ಲಿ ಹಂದಿಯನ್ನು ಹುಲಿ ಭೇಟೆಯಾಡಿದ ಘಟನೆ ನಡೆದಿದೆ. ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾ.ಪಂ ವ್ಯಾಪ್ತಿಯ ನಾಯಡ ವಿಕ್ಕಿ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಹುಲಿ ಹಂದಿಯನ್ನು ಬಲಿಪಡೆದಿದೆ. ಕಾಫಿತೋಟದಲ್ಲಿ ಹಂದಿಯ ಮೇಲೆ ದಾಳಿ ನಡೆಸಿದ ಹುಲಿ ಸುಮಾರು 50ರಿಂದ 55 ಕೆ.ಜಿ. ಭಾರದ ಹಂದಿಯ ಕಳೇಬರವನ್ನು ಸ್ಥಳದಿಂದ ದೂರ ಎಳೆದೊಯ್ದು ಅರ್ಧಂಬರ್ಧ ತಿಂದು ಹಾಕಿದೆ. ಹುಲಿ ದಾಳಿ ನಡೆಸಿದ ಸ್ಥಳದ ಸಮೀಪದಲ್ಲೇ ಮನೆಗಳಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಹುಲಿದಾಳಿ ನಡೆಸಿದ ಸ್ಥಳದಲ್ಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ವಿರಾಜಪೇಟೆಯ ಅರಣ್ಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು. ಆದರೆ ಹುಲಿ ಜಾಡು ಮಾತ್ರ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪತ್ತೆಯಾಗಲಿಲ್ಲ ಎಂದು ತಿಳಿದು ಬಂದಿದೆ.
ಕುಶಾಲನಗರ, ಜೂ.21 : ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಮಕ್ಕಳು ಯೋಗಾಭ್ಯಾಸ ಪ್ರದರ್ಶಿಸಿದರು. ಯೋಗ ದಿನದ ಮಹತ್ವ ಹಾಗೂ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ರಕ್ಷಣೆಗೆ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಂ.ಎಲ್.ಸುಕುಮಾರಿ, ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಿದರು. ವಿದ್ಯಾರ್ಥಿಗಳು ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು. ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ.ದಯಾನಂದ ಪ್ರಕಾಶ್, ಬಿ.ಡಿ.ರಮ್ಯ, ಎಸ್.ಎಂ.ಗೀತಾ, ಬಿ.ಎಸ್.ಅನ್ಸಿಲಾ ರೇಖಾ ಇತರರು ಇದ್ದರು. ಪ್ರಾಥಮಿಕ ಶಾಲೆಯಲ್ಲಿ ಯೋಗಾಭ್ಯಾಸ : ಕೂಡುಮಂಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ತರಬೇತುದಾರ ಡಿ.ವಿ.ಗಣೇಶ್, ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಿದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಚ್.ಎಸ್.ಸುಜಾತ ಹಾಗೂ ಶಿಕ್ಷಕರು ಇದ್ದರು.
ಮಡಿಕೇರಿ ಜೂ.21 : “ಅನುಬಂಧ ಸ್ನೇಹ ಸಂಬಂಧಗಳ ದರ್ಶನ” ಶೀರ್ಷಿಕೆಯಡಿಯಲ್ಲಿ ಬೀರೂರಿನಲ್ಲಿ ಜರುಗಿದ ಜೆಸಿಐ ವಲಯ 14 ರ ಅರ್ಧವಾರ್ಷಿಕ ಸಮ್ಮೇಳನ-2023 ರಲ್ಲಿ ಕಳೆದ ಆರು ತಿಂಗಳಲ್ಲಿ ವಲಯ ಮತ್ತು ಜೆಸಿಐ ಭಾರತ ನೀಡುವ ಮಾರ್ಗದರ್ಶನದಂತೆ ಘಟಕಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದ್ದು, ಅದರಲ್ಲಿ ಸಾಧನೆಗೈದ ಘಟಕವನ್ನು ಗುರುತಿಸಿ ಅರ್ಧವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೆಸಿಐ ಸೋಮವಾರಪೇಟೆ ಪುಷ್ಪಗಿರಿಯ ಅಧ್ಯಕ್ಷೆ ಎಂ.ಎ.ರುಬೀನಾ ಗೆ ವಲಯ ಅಧ್ಯಕ್ಷರಾದ ಯಶಸ್ವಿನಿ, ವಲಯ ಉಪಾಧ್ಯಕ್ಷ ಹೆಚ್.ಆರ್.ಪ್ರಶಾಂತ್ ಗೋಲ್ಡನ್ ಕಾಲರ್ ಹಾಕುವ ಮೂಲಕ ಗೋಲ್ಡನ್ ಕಾಲರ್ ಪ್ರಸಿಡೆಂಟ್ ಅವಾರ್ಡ್ ನೀಡಿ ಗೌರವಿಸಿದರು. ಜೊತೆಗೆ ಔಟ್ ಸ್ಟ್ಯಾಂಡಿಂಗ್ ಲಾಮ್ ವಿನ್ನರ್, ಔಟ್ ಸ್ಟ್ಯಾಂಡಿಂಗ್ ಫರ್ ಮಾರ್ಮರ್ ಪಿ ಆರ್ ಅಂಡ್ ಮಾರ್ಕೆಟಿಂಗ್, ನೀಡ್ ಬ್ಲಡ್ ಕಾಲ್ ಜೆಸಿಐ ನಲ್ಲಿ ವಿನ್ನರ್, ಗೋ ಗ್ರೀನ್, ಮ್ಯಾನೇಜ್ ಮೆಂಟ್ ಏರಿಯ, ಪ್ರೋಗ್ರಾಂ ಏರಿಯ ಮತ್ತು ಗೋ ಗ್ರೀನ್ ನಲ್ಲಿ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿಗಳನ್ನು ಘಟಕಕ್ಕೆ ಲಭಿಸಿದೆ. ಪುಷ್ಪಗಿರಿ ಘಟಕದಿಂದ ಜೆಸಿ…
ಮಡಿಕೇರಿ ಜೂ.21 : ಕೊಡಗು ನೂತನ ಜಿಲ್ಲಾಧಿಕಾರಿಯಾಗಿ ವೆಂಕಟ್ ರಾಜ ಅಧಿಕಾರ ಸ್ವೀಕರಿಸಿದರು. 2013ರ ಬ್ಯಾಚ್‍ನ ಅಧಿಕಾರಿಯಾಗಿರುವ ವೆಂಕಟ್ ರಾಜ ಅವರಿಗೆ ನಿರ್ಗಮಿತ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಅಧಿಕಾರ ಹಸ್ತಾಂತರಿಸಿ, ಶುಭಕೋರಿದರು. ಮೂಲತಃ ರಾಜಸ್ಥಾನ ಮೂಲದವರಾದ ವೆಂಕಟ್ ರಾಜ, ಹಾಸನದಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದು, ಬಳಿಕ ಬೀದರ್ ಉಪ ವಿಭಾಗದಲ್ಲಿ ಉಪ ವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ, ರಾಜ್ಯ ಪರೀಕ್ಷಾಂಗ ಪ್ರಾಧಿಕಾರ, ಬೆಂಗಳೂರು ಅಬಕಾರಿ ಇಲಾಖೆಯಲ್ಲಿ ಹೆಚ್ಚುವರಿ ಆಯುಕ್ತರಾಗಿ, ಬೆಂಗಳೂರು ಕೋವಿಡ್ ಕಂಟ್ರೋಲ್ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಹಿಂದೆ ಕೋಲಾರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಇದೀಗ ಕೊಡಗು ಜಿಲ್ಲಾಧಿಕಾರಿಯಾಗಿ ವೆಂಕಟ್ ರಾಜ ಅವರನ್ನು ರಾಜ್ಯ ಸರಕಾರ ನಿಯೋಜಿಸಿದೆ. ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜ, ಕೊಡಗು ಜಿಲ್ಲೆಯ ಬಗ್ಗೆ ಹೆಮ್ಮೆ ಇದೆ ಎಂದು ಮೆಚ್ಚುಗೆಯ ನುಡಿಯಾಡಿದರು. ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಸಂದರ್ಭ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ…
ಮಡಿಕೇರಿ ಜೂ.21 : ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನ ನಿದೇ೯ಶಕ ದೇವಣಿರ ತಿಲಕ್ ರೋಟರಿ ವಲಯ 6 ರ ಸಹಾಯಕ ಗವನ೯ರ್ ಆಗಿ ನೇಮಕಗೊಂಡಿದ್ದಾರೆ. ದೇವಣಿರ ತಿಲಕ್, ಮಡಿಕೇರಿ ರೋಟರಿ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್, ರೋಟರಿ ವುಡ್ಸ್, ವಿರಾಜಪೇಟೆ ರೋಟರಿ, ಗೋಣಿಕೊಪ್ಪ ರೋಟರಿ ಕ್ಲಬ್ ಮತ್ತು ಪಿರಿಯಾಪಟ್ಟಣ ರೋಟರಿ ಸಂಸ್ಥೆಗಳ ಸಹಾಯಕ ಗವನ೯ರ್ ಆಗಿ 2023-24 ನೇ ರೋಟರಿ ವಷ೯ದಲ್ಲಿ ಜು. 1 ನಿಂದ ಕಾಯ೯ನಿವ೯ಹಿಸಲಿದ್ದಾರೆ. ಡಿ.ಎಂ.ತಿಲಕ್ 2017-18 ನೇ ಸಾಲಿನಲ್ಲಿ ರೋಟರಿ ಜಿಲ್ಲೆಯ ಸಾಜೆ೯ಂಟ್ ಎಟ್ ಆಮ್ಸ್೯ ಆಗಿ ಕಾಯ೯ನಿವ೯ಹಿಸಿದ್ದು, ಈವರೆಗೂ ರೋಟರಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾಯ೯ನಿವ೯ಹಿಸಿದ್ದಾರೆ. ರೋಟರಿ ಮಿಸ್ಟಿ ಹಿಲ್ಸ್ ನ 18 ವಷ೯ಗಳ ಅವಧಿಯಲ್ಲಿ ಬಿ.ಕೆ.ರವೀಂದ್ರ ರೈ, ಡಾ.ಸಿ.ಆರ್.ಪ್ರಶಾಂತ್, ಅನಿಲ್ ಎಚ್.ಟಿ. ಸಹಾಯಕ ಗವನ೯ರ್ ಆಗಿ ಕಾಯ೯ನಿವ೯ಹಿಸಿದ್ದು, ಇದೀಗ ನಾಲ್ಕನೇ ಸಹಾಯಕ ಗವನ೯ರ್ ನ್ನು ಮಿಸ್ಟಿ ಹಿಲ್ಸ್ ನಿಂದ ವಲಯ 6 ಕ್ಕೆ ನೀಡಿರುವ ಹೆಗ್ಗಳಿಕೆಗೆ ಮಿಸ್ಟಿ ಹಿಲ್ಸ್ ಪಾತ್ರವಾಗಿದೆ.
ಚೆಯ್ಯಂಡಾಣೆ, ಜೂ 21 : ನರಿಯಂದಡ ಗ್ರಾ.ಪಂ ವತಿಯಿಂದ ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯಿತಿಯ ಕಾರ್ಯಾಲಯದ ಕಟ್ಟಡವನ್ನು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಡೀ ದೇಶಾದ್ಯಂತ ಪಂಚಾಯಿತಿಗಳಿಗೆ ಒಂದು ಸುಸಜ್ಜಿತವಾದ ಕೇಂದ್ರಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರಕಾರದಿಂದ ಅನುದಾನ ನೀಡಬೇಕೆಂದು ನರೇಗಾ ಯೋಜನೆಯನ್ನು 2008 ರಲ್ಲಿ ಜಾರಿಗೆ ತಂದು ಒಂದು ಪಂಚಾಯಿತಿ ಕೇಂದ್ರ ನಿರ್ಮಾಣಕ್ಕೆ ನೀಡಲಾಗುತ್ತಿತ್ತು. ಈ ಯೋಜನೇ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರವಾಗಿ ಪ್ರಾರಂಭವಾಗಿದ್ದರು ಎಲ್ಲೂ ಕೂಡ ಕೇಂದ್ರಗಳು ನಿರ್ಮಾಣವಾಗಲಿಲ್ಲ. ಹಳೇ ಕಟ್ಟಡಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ದೈನಂದಿನ ಕೆಲಸಗಳು ಮುಂದುವರಿಯುತಿತ್ತು. ಆದರೆ 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಬಂದನಂತರ ಪಂಚಾಯಿತಿಗಳಿಗೆ ಕೊಡುವ ಅನುದಾನವನ್ನು 18.75 ಸಾವಿರಕ್ಕೆ ಏರಿಸಿದ್ದು, ಇಂದು ಸುಸಜ್ಜಿತ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ ಎಂದರು. ಅಧ್ಯಕ್ಷರ ಕೊಠಡಿ ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೆÇನ್ನಣ್ಣ, ಸಂವಿದಾನವನ್ನು 72 ತಿದ್ದುಪಡಿಯ ಮೂಲಕ ಗ್ರಾ.ಪಂ ಅನ್ನು 1992 ರಲ್ಲಿ…






