ಲೇಖಕ: admin

ಮಡಿಕೇರಿ ಜೂ.16 : ಅಂತರರಾಷ್ಟ್ರೀಯ 9ನೇ ಯೋಗ ದಿನಾಚರಣೆ ಪ್ರಯುಕ್ತ ಜೂ.17 ರಂದು ಬೆಳಗ್ಗೆ 8 ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ಯೋಗ ಜಾಥಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಚಾಲನೆ ನೀಡಲಿದ್ದಾರೆ. ನಗರದ ಗಾಂಧಿ ಮೈದಾನದಿಂದ ಜನರಲ್ ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಸ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ಇಂದಿರಾ ಗಾಂಧಿ ವೃತ್ತ, ಕಾಲೇಜು ರಸ್ತೆ ಮೂಲಕ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದವರೆಗೆ ಯೋಗ ಜಾಥ ನಡೆಯಲಿದೆ. ನಂತರ ಸಂಜೆ 6 ಗಂಟೆಗೆ ನಗರದ ಭಾರತೀಯ ವಿದ್ಯಾಭವನದಲ್ಲಿ ಮಂಗಳೂರು ಯೆನೆಪೋಯ ನ್ಯಾಚುರೋಪತಿ ಮತ್ತು ಯೋಗ ವಿದ್ಯಾಲಯದ ಪ್ರಾಚಾರ್ಯರಾದ ಡಾ.ಪುನೀತ್ ರಾಘವೇಂದ್ರ ಅವರು ಯೋಗದ ಮಹತ್ವ ಕುರಿತು ಮಾಹಿತಿ ನೀಡಲಿದ್ದಾರೆ.

Read More

ಮಡಿಕೇರಿ ಜೂ.16: ಮಂಗಳೂರು ವಿಶ್ವವಿದ್ಯಾನಿಲಯ, ಕೊಡಗು ವಿಶ್ವವಿದ್ಯಾನಿಲಯ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ವತಿಯಿಂದ ಜೂ.19 ಮತ್ತು 20 ರಂದು 74ನೇ ಪ್ರತಿಭೋತ್ಸವ ಮತ್ತು ಕಾಲೇಜು ವಾರ್ಷಿಕೋತ್ಸವ ನಡೆಯಲಿದೆ. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಪ್ರತಿಭೋತ್ಸವ ಕಾರ್ಯಕ್ರಮವು ಜೂ.19 ರಂದು ಬೆಳಗ್ಗೆ 10.30 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ಪಿ.ತಿಮ್ಮಯ್ಯ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಆರ್.ಸವಿತಾ ರೈ, ಪ್ರಾಂಶುಪಾಲರಾದ ಮೇಜರ್ ಡಾ.ಬಿ.ರಾಘವ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ. 74ನೇ ಕಾಲೇಜು ವಾರ್ಷಿಕೋತ್ಸವದ ಉದ್ಘಾಟನೆಯು ಜೂ.20 ರಂದು ಬೆಳಗ್ಗೆ 10.30 ಗಂಟೆಗೆ ಕಾಲೇಜು ಸಭಾಂಗಣದಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಮಂಥರ್ ಗೌಡ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರು ಹಾಗೂ ರೇಡಿಯೋಲಜಿಸ್ಟ್ ಡಾ.ಶ್ಯಾಮ್ ಅಪ್ಪಣ್ಣ, ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಸ್.ಅಶೋಕ್ ಆಲೂರ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ.

Read More

ಮಡಿಕೇರಿ ಜೂ.16 : ಅಂಚೆ ಅದಾಲತ್‍ನ ಸಭೆಯು ಜೂ.30 ರಂದು ಬೆಳಗ್ಗೆ 11.30 ಗಂಟೆಗೆ ಕೊಡಗು ಅಂಚೆ ವಿಭಾಗದ ವಿಭಾಗೀಯ ಕಚೇರಿ ಸಿದ್ದಾಪುರ ರಸ್ತೆ ಅಶೋಕಪುರದಲ್ಲಿ ನಡೆಯಲಿದೆ. ಸಭೆಯಲ್ಲಿ ಕೊಡಗು ಅಂಚೆ ವಿಭಾಗದ ಅಂಚೆ ಸೇವೆಗೆ ಸಂಬಂಧಿಸಿದ ಎಲ್ಲಾ ತರಹದ ದೂರುಗಳನ್ನು ಸ್ವೀಕರಿಸಿ ಚರ್ಚಿಸಲಾಗುತ್ತದೆ. ದೂರುಗಳಿದ್ದಲ್ಲಿ `ಅಂಚೆ ಅದಾಲತ್’ ಎಂದು ಬರೆದು ಅಂಚೆ ಅಧೀಕ್ಷಕರು, ಕೊಡಗು ಅಂಚೆ ವಿಭಾಗ, ಮಡಿಕೇರಿ ಇವರಿಗೆ ಜೂ.28 ರೊಳಗೆ ತಲುಪುವಂತೆ ಕಳುಹಿಸಲು ಕೋರಿದೆ. ನಂತರ ಜೂ.30 ರಂದು ನಡೆಯುವ ಸಭೆಯಲ್ಲಿ ಭಾಗವಹಿಸಬಹುದು ಎಂದು ಕೊಡಗು ಅಂಚೆ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

Read More

ಮಡಿಕೇರಿ ಜೂ.16 : ಪ್ರಸಕ್ತ (2023-24) ಸಾಲಿನ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ (ಪಿಎಂಇಜಿಪಿ) ಕಾರ್ಯಕ್ರಮದಡಿಯಲ್ಲಿ ಕೈಗಾರಿಕೆ / ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ. 18 ವರ್ಷ ತುಂಬಿದ ಪಟ್ಟಣ/ ಗ್ರಾಮಾಂತರ ಪ್ರದೇಶದ ಅರ್ಹ ಅಭ್ಯರ್ಥಿಗಳು www.kvic.org.in (pmegp online application) ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಹಿನೂರು ರಸ್ತೆ, ಮಡಿಕೇರಿ ಇವರ ಕಚೇರಿಯನ್ನು ಹಾಗೂ ದೂ.ಸಂ.08272-228431/ 228746 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Read More

ಮಡಿಕೇರಿ ಜೂ.16 : ಕೊಡವ ಬುಡಕಟ್ಟು ಜನಾಂಗದ ಅಧ್ಯಯನಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವಿರಾಜಪೇಟೆ ಕ್ಷೇತ್ರದ ನೂತನ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದೆ. ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಭೇಟಿಯಾದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದ ನಿಯೋಗ ಸಂಘಟನೆಯ ಸುದೀರ್ಘ ಅವಧಿಯ ಹೋರಾಟ ಮತ್ತು ಕೊಡವರ ಪರವಾದ ನಿಲುವುಗಳನ್ನು ವಿವರಿಸಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಆಯ್ಕೆಯಾದ ಪೊನ್ನಣ್ಣ ಅವರಿಗೆ ಅಭಿನಂದನೆ ಸಲ್ಲಿಸಿದ ನಾಚಪ್ಪ, ಸಿಎನ್‍ಸಿ ಬೇಡಿಕೆಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದರು. ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯ ನ್ಯಾಯಸಮ್ಮತ, ಸಾಂವಿಧಾನಿಕ ಬೇಡಿಕೆಯ ಪರ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಕಾನೂನು ಹೋರಾಟ ನಡೆಸುತ್ತಿರುವ ಬಗ್ಗೆ ಗಮನ ಸೆಳೆದರು. ಕಾನೂನುಬದ್ಧವಾಗಿ ಬುಡಕಟ್ಟು ಸಮುದಾಯವನ್ನು ರಕ್ಷಿಸಲು ಕೊಡವ ಜನಾಂಗದ ಸಮಗ್ರ, ನಿಖರ ಮತ್ತು ನ್ಯಾಯೋಚಿತ ಜನಾಂಗೀಯ ಮರು-ಅಧ್ಯಯನಕ್ಕೆ ಒತ್ತು ನೀಡಬೇಕು.…

Read More

ಮಡಿಕೇರಿ ಜೂ.16 : ನಾಡಪ್ರಭು, ಆದರ್ಶ ಆಡಳಿತಗಾರ ಕೆಂಪೇಗೌಡರ ಜಯಂತಿಯನ್ನು ಜೂ.27 ರಂದು ಆಚರಿಸುವ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯು ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆದರ್ಶ ಆಡಳಿತಗಾರ ಕೆಂಪೇಗೌಡರ ಜಯಂತಿಯನ್ನು ನಗರದ ಕೊಡಗು ಗೌಡ ಸಮಾಜದಲ್ಲಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಶಿಷ್ಟಾಚಾರದಂತೆ ಆಹ್ವಾನ ಪತ್ರ ಮುದ್ರಣ, ಗಣ್ಯರ ಆಹ್ವಾನ, ಉಪನ್ಯಾಸ, ಗೀತಾಗಾಯನ ಕಾರ್ಯಕ್ರಮ ಏರ್ಪಡಿಸುವುದು ಹೀಗೆ ಹಲವು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಸೂಚಿಸಿದರು. ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೆ.ಪಿ.ನಾಗರಾಜು, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ನವೀನ್ ಅಂಬೆಕಲ್ಲು, ಉದಯ ಪೆರಿಯನ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಜಯಂತಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ಪ್ರಮುಖರಾದ ಬೈತಡ್ಕ ಜಾನಕಿ, ಅಮೆ ಸೀತಾರಾಮ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ, ಪಿ.ಟಿ.ಮುತ್ತಮ್ಮ, ಪಿ.ಟಿ.ಧೃತಿ, ದೀಪ್ತಿ ರಂಜಿತ್, ಕೊಡಗು ಗೌಡ ಸಂಘದ ಕಾರ್ಯದರ್ಶಿ ಉದಯ ಕುಮಾರ, ಕೊಡಗು ಗೌಡ ಯುವ…

Read More

ಮಡಿಕೇರಿ ಜೂ.16 : ಅಂತರರಾಷ್ಟ್ರೀಯ 9ನೇ ಯೋಗ ದಿನಾಚರಣೆಗೆ ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಕೋರಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವ ಸಿದ್ಧತೆ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಯೋಗ ಸಂಸ್ಥೆಗಳು, ನೆಹರು ಯುವ ಕೇಂದ್ರ, ರೆಡ್‍ಕ್ರಾಸ್ ಸಂಸ್ಥೆ ಪ್ರತಿನಿಧಿಗಳು, ವಿವಿಧ ಕಾಲೇಜುಗಳ ಎನ್‍ಎಸ್‍ಎಸ್ ಮತ್ತು ಎನ್‍ಸಿಸಿ ಘಟಕಗಳು, ವಸತಿ ಶಾಲೆಗಳು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ಹೀಗೆ ಎಲ್ಲರೂ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಯೋಜಿಸುವಂತಾಗಬೇಕು ಎಂದು ತಿಳಿಸಿದರು. ಇದೇ ಜೂ.21 ರಂದು ನಗರದ ಗೌಡ ಸಮಾಜದಲ್ಲಿ ನಡೆಯುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ…

Read More

ಮಡಿಕೇರಿ ಜೂ.16 : ಜಿಲ್ಲಾ ಕೇಂದ್ರ ಮಡಿಕೇರಿ ನಗರ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಸಂಗ್ರಹವಾಗಿರುವ ಭಾರೀ ಪ್ರಮಾಣದ ತ್ಯಾಜ್ಯ ವಿಲೇವಾರಿ ಸಂಬಂಧ ಮಡಿಕೇರಿ ನಗರಸಭೆ ಸಲ್ಲಿಸಿದ್ದ 6.69 ಕೋಟಿ ರೂ. ವೆಚ್ಚದ ಯೋಜನಾ ವರದಿಗೆ ಪೌರಾಡಳಿತ ನಿರ್ದೇಶನಾಲಯ ಷರತ್ತು ಬದ್ಧವಾದ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ ಎಂದು ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ ತಿಳಿಸಿದ್ದಾರೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನ್ಯಾಯಾಲಯವು 2022ರ ಅಕ್ಟೋಬರ್ 13 ರಂದು ನೀಡಿರುವ ಆದೇಶದಲ್ಲಿ, ಪಾರಂಪರಿಕ ತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸಿ ಗಣನೀಯ ಪ್ರಗತಿ ಸಾಧಿಸಿ 6 ತಿಂಗಳಿಗೊಮ್ಮೆ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನವನ್ನು ನೀಡಿತ್ತು. ಅದರಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಲವಾರು ವರ್ಷಗಳಿಂದ ಶೇಖರಣೆಯಾಗಿರುವ ಹಳೆಯ, ಪಾರಂಪರಿಕ ತ್ಯಾಜ್ಯ ವಸ್ತುಗಳನ್ನು ತ್ವರಿತಗತಿಯಲ್ಲಿ ಬಯೋಮೈನಿಂಗ್ ಮತ್ತು ಬಯೋರಿಮಿಡಿಯೇಷನ್ ಮೂಲಕ ತೆರವುಗೊಳಿಸುವ ಕಾರ್ಯ ಅಗತ್ಯವಾಗಿ ನಡೆಯಬೇಕಿದೆ. ::: ನಗರಸಭೆಯಿಂದ ಪ್ರಸ್ತಾವನೆ ::: ಹಸಿರು ನ್ಯಾಯಾಧೀಕರಣದ ಆದೇಶದ ಹಿನ್ನೆಲೆ ಮಡಿಕೇರಿ ನಗರಸಭೆಯ ಪೌರಾಯುಕ್ತರು ಪ್ರಸಕ್ತ ಸಾಲಿನ…

Read More

ಮಡಿಕೇರಿ ಜೂ.16 : ಕಡಂಗ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗುವಂತೆ  ಆದ್ಯ ಕ್ಲಿನಿಕ್ ಆರಂಭಗೊಂಡಿದ್ದು,  ನರಿಯಂದಡ ಗ್ರಾ.ಪಂ  ಸದಸ್ಯ ಕೋಡಿರ ವಿನೋದ್ ನಾಣಯ್ಯ ಉದ್ಘಾಟಿಸಿದರು. ಸುತ್ತಮುತ್ತಲಿನ ಜನರು ಅನಾರೋಗ್ಯದಿಂದ ತುತ್ತಾದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಪಡೆಯಲು ಮತ್ತು ಇನ್ನಿತರ ತುರ್ತು ಸಮಯದಲ್ಲಿ ಇಂತಹ ಆರೋಗ್ಯ ಘಟಕಗಳು ಅನುಕೂಲವಾಗುತ್ತದೆ ಎಂದು ಆಶಿಸಿದರು. ಈ ಸಂದರ್ಭ  ಗ್ರಾ.ಪಂ ಸದಸ್ಯ  ಸಿ.ಇ.ಸುಬ್ಬೀರ್ , ಸುಗುಣ, ಕಾಳಯ್ಯ, ಮಹಮ್ಮದ್ ಎಡಪಾಲ, ಕಡಂಗ ಜಮಾ ಅಂತ ಅಧ್ಯಕ್ಷ  ಅಬ್ದುಲ್ಲ, ಎಡಪ್ಪಲ ಜಮಾಹತ್ ಅಧ್ಯಕ್ಷ  ಶಾಫಿ , ಅನಿಸ್ ಬಿಲ್ಡಿಂಗ್ ಮಾಲೀಕ  ಅಬೂಬಕರ್, ಪ್ರಮುಖರಾದ ಸಿ.ಎಚ್.ಮಮ್ಮು , ಅಬ್ದುಲ್ ರೆಹಮಾನ್, ಉಬೈಸ್, ವೈದ್ಯಾಧಿಕಾರಿಗಳಾದ ಅಮಲ್ , ಅಖಿಲ ಅಮಲ್ ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ವರದಿ : ನೌಫಲ್ ಕಡಂಗ   

Read More

ಗೋಣಿಕೊಪ್ಪಲು ಜೂ.16 :   ಕಾವೇರಿ ಕಾಲೇಜಿನ ವಿದ್ಯಾಸಂಸ್ಥೆಗೆ ‘ನ್ಯಾಕ್ ‘  ತಂಡ ಭೇಟಿ ನೀಡಿತು. ನ್ಯಾಕ್ ತಂಡದಲ್ಲಿ ಜಗತ್ ಗುರುನಾನಕ್ ದೇವ್ ಪಂಜಾಬ್‍ನ ಓಪನ್ ಯುನಿವರ್ಸಿಟಿ ಪಂಜಾಬ್‍ನ ಉಪ ಕುಲಪತಿ ಡಾ.ಕರಮ್‍ಜಿತ್ ಸಿಂಗ್, ರಾಜಸ್ಥಾನದ ಉದಯ್‍ಪುರ್ ಎಂಎಲ್‍ಎಸ್ ಯುನಿವರ್ಸಿಟಿಯ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಕನ್ನಿಕಾ ಶರ್ಮ, ದೆಹಲಿಯ ಶ್ರೀ ವೆಂಕಟೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ಸುನೀಲ ರೆಡ್ಡಿ ಇದ್ದರು. ನ್ಯಾಕ್ ತಂಡವನ್ನು ಕೊಡವ ಉಡುಪು ಧರಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆತ್ಮೀಯವಾಗಿ ಬರ ಮಾಡಿಕೊಂಡರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಇಟ್ಟಿರ ಬಿದ್ದಪ್ಪ, ಕಾರ್ಯದರ್ಶಿ ಕುಲ್ಲಚಂಡ ಬೋಪಣ್ಣ, ಪ್ರಾಂಶುಪಾಲ ಡಾ.ಕಾವೇರಪ್ಪ ಹೂಗುಚ್ಛ ನೀಡಿ ಸ್ವಾಗತಿಸಿದರು. ತಂಡವು 2 ದಿನಗಳ ಕಾಲ ಮೌಲ್ಯಾಂಕನ ನಡೆಸಲಿದೆ ಎಂದು ಕಾಲೇಜಿನ ಅಧ್ಯಕ್ಷ ಇಟ್ಟಿರ ಬಿದ್ದಪ್ಪ ತಿಳಿಸಿದರು. ಪ್ರಾಂಶುಪಾಲ ಡಾ. ಕಾವೇರಪ್ಪ ಮಾತನಾಡಿ, ಕಾವೇರಿ ಕಾಲೇಜು 2005ರಲ್ಲಿ ಮೊದಲ ಮೌಲ್ಯಾಂಕನಕ್ಕೆ ಒಳಪಟ್ಟಿತ್ತು. ಆ ಸಂದರ್ಭ ಬಿ ಪ್ಲಸ್‌ಪ್ಲಸ್ ದೊರಕಿತ್ತು. 2011ರಲ್ಲಿ 2ನೇ ಮೌಲ್ಯಾಂಕನಕ್ಕೆ ಒಳಪಟ್ಟಂತಹ ಸಂದರ್ಭ ಎ ಶ್ರೇಣಿ ಪಡೆದಿತ್ತು.…

Read More