ಕುಶಾಲನಗರ, ಜು.16 : ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಕೂಡ್ಲೂರು ಅಂಗನವಾಡಿ ಕೇಂದ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಮೇ ತಿಂಗಳ ಅಂತ್ಯಕ್ಕೆ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ ಸುಶೀಲಮ್ಮ ಅವರಿಗೆ ಕೂಡ್ಲೂರು ಅಂಗನವಾಡಿ ಕೇಂದ್ರದಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ನಿವೃತ್ತಗೊಂಡ ಸುಶೀಲಮ್ಮ ಅವರನ್ನು ಅಂಗನವಾಡಿ ಕೇಂದ್ರ ಹಾಗೂ ಕೂಡುಮಂಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಮಾತನಾಡಿ, ಅಂಗನವಾಡಿ ಕೇಂದ್ರದಲ್ಲಿ ಸುಶೀಲಮ್ಮ ಮಕ್ಕಳ ಆರೋಗ್ಯ ಆರೈಕೆಯೊಂದಿಗೆ ಪಾಲಕರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿದ್ದರು ಎಂದರು. ಫ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಎಚ್.ಎಸ್.ಸುಜಾತ ಮಾತನಾಡಿದರು. ನವಗ್ರಾಮದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಕಲಾವತಿ, ಸಹಾಯಕಿ ತ್ರಿಪುರ ಸುಂದರಿ, ಶಾಲೆಯ ಶಿಕ್ಷಕರು ಇದ್ದರು.
ಲೇಖಕ: admin
ಮಡಿಕೇರಿ ಜು.17 : ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ‘ಪೊಲಿಂಕಾನ ಉತ್ಸವ’ ವಿಶೇಷ ಪೂಜೆ ಜರುಗಿತು. ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮಹಾಗಣಪತಿ, ಮಹಾವಿಷ್ಣು, ಸುಬ್ರಹ್ಮಣ್ಯ, ಭಗಂಡೇಶ್ವರ ದೇವಾಲಯಗಳಿಗೆ ಪೂಜೆ, ಬಳಿಕ ಬಾಳೆದಿಂಡಿನಿಂದ ತಯಾರಿಸಿದ ಸುಮಂಗಲಿ ಮಂಟಪಕ್ಕೆ ದೀಪ ಬೆಳಗಿ ಕರಿಮಣಿ, ತಾಳಿ, ಬಳೆ, ಸೀರೆ, ಬೆಳ್ಳಿತಟ್ಟೆ ಮತ್ತಿತರ ಆಭರಣವಿಟ್ಟು ವಿಶೇಷ ಪೂಜೆ ಸಲ್ಲಿಸಿ ಭಗಂಡೇಶ್ವರ ದೇವಾಲಯದ ಸುತ್ತ ಪ್ರದಕ್ಷಿಣೆ ಮಾಡಲಾಯಿತು. ಬಳಿಕ ತ್ರಿವೇಣಿ ಸಂಗಮದಲ್ಲಿ ಪೂಜಾ ವಿಧಿ ವಿಧಾನಗಳನ್ನು ಕೈಗೊಂಡು ವಿಸರ್ಜಿಸಲಾಯಿತು. ಪೊಲಿಂಕಾನ ಉತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ತಲಕಾವೇರಿ ದೇವಾಲಯದ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಆಷಾಢ ಮಾಸದಲ್ಲಿ ಪೊಲಿಂಕಾನ ಉತ್ಸವ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಭಗಂಡೇಶ್ವರ ದೇವಾಲಯದ ಎಲ್ಲಾ ದೇವರಿಗೆ ಪೂಜೆ ಪುರಸ್ಕಾರ ಕೈಗೊಂಡು ಕರಿಮಣಿ, ಚಿನ್ನದ ಸರ, ತೊಟ್ಟಿಲು, ಬೆಳ್ಳಿತಟ್ಟೆ ಮತ್ತಿತರವನ್ನು ಸುಮಂಗಲಿಯ ಬಾಳೆ ದಿಂಡಿನ ಮಂಟಪಕ್ಕೆ ಹಾಕಿ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು…
ಮಡಿಕೇರಿ ಜು.17 : ಕಡಗದಾಳು ಹಾಗೂ ಇಬ್ನಿವಳವಾಡಿ ವ್ಯಾಪ್ತಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿದರು. ಗ್ರಾ.ಪಂ ನ ಇಬ್ನಿವಳವಾಡಿ ವಾರ್ಡ್ ಸಂಖ್ಯೆ- 2 ರ ಉಪಚುನಾವಣೆಗೆ ಕಣದಲ್ಲಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭವ್ಯಶ್ರೀ ಎಂ.ಕೆ, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಜಿಲ್ಲಾ ಉಪಾಧ್ಯಕ್ಷ ಕೊಕ್ಕಲೇರ ಸುಜು ತಿಮ್ಮಯ್ಯ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ವಲಯಾಧ್ಯಕ್ಷ ರಮೇಶ್ ರೈ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ರೌಫ್, ಉಪಾಧ್ಯಕ್ಷ ಬಿ.ಜಿ.ಮೋಹನ್, ಡಿಸಿಸಿ ಸದಸ್ಯ ಜಾನ್ಸನ್ ಪಿಂಟೋ, ಬ್ಲಾಕ್ ಮಾಜಿ ಉಪಾಧ್ಯಕ್ಷ ನಂದಿನೆರವಂಡ ಮಧು, ಕೆಪಿಸಿಸಿ ಸಾಮಾಜಿ ಜಾಲತಾಣದ ಮಾಜಿ ಉಸ್ತುವಾರಿ ಕೋಚನ ಹರಿಪ್ರಸಾದ್ ಮತ್ತಿತರರು ಹಾಜರಿದ್ದರು.
ಮಡಿಕೇರಿ ಜು.17 : ಸರ್ಕಾರದ ಆದೇಶದಂತೆ ಅಂತ್ಯೋದಯ ಅನ್ನಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿ (ಬಿಪಿಎಲ್) ಪ್ರತಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 05 ಕೆ.ಜಿ ಆಹಾರ ಧಾನ್ಯದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 05 ಕೆ.ಜಿ ಹೆಚ್ಚುವರಿ ಅಕ್ಕಿಯ ಬದಲಾಗಿ ಜುಲೈ ಮಾಹೆಯಿಂದ ಪ್ರತಿ ಕೆ.ಜಿಗೆ ರೂ.34 ರಂತೆ (34*5 ಕೆ.ಜಿ=170) 170 ರೂ.ಗಳನ್ನು ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣವನ್ನು ವರ್ಗಾಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಹಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದರು. ಇನ್ನು 2 ಅಥವಾ 3 ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮೆಯಾಗಲಿದ್ದು, ಈಗಾಗಲೇ ಡಿಬಿಟಿ ಮೂಲಕ ಹಣ ವರ್ಗಾಯಿಸಲಾಗಿದೆ ಎಂದು ಹೇಳಿದರು. ಎಎವೈ ಮತ್ತು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಕೊಡಗು ಜಿಲ್ಲೆಯ 80,525…
ಮಡಿಕೇರಿ ಜು.17 : ನಮ್ಮ ದೇಶದ ಉದ್ದಗಲಕ್ಕೂ ರಾಜ್ಯತ್ವ, ಕೇಂದ್ರಾಡಳಿತ ಪ್ರದೇಶ ಮತ್ತು ಭೌಗೋಳಿಕ-ರಾಜಕೀಯ ಸ್ವಾಯತ್ತತೆಗಾಗಿ ಆಗ್ರಹಿಸುತ್ತಿರುವ ವಿವಿಧ ಹೋರಾಟಗಾರರ ಬೇಡಿಕೆಗಳನ್ನು ಪರಿಶೀಲಿಸಲು 2ನೇ ರಾಜ್ಯ ಮರುಸಂಘಟನೆ ಆಯೋಗವನ್ನು ರಚಿಸುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಒತ್ತಾಯಿಸುತ್ತದೆ ಮತ್ತು ಜನಾಂಗೀಯ ರಾಜ್ಯ ಸ್ಥಾನಮಾನವನ್ನು ಹೊಂದಲು ಬಯಸುತ್ತದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಉತ್ತರಾಂದ್ರ ಚಳವಳಿಯ ನಾಯಕ, ನಿವೃತ್ತ ಐಆರ್‍ಎಸ್ ಅಧಿಕಾರಿ ಮೆಟ್ಟಾ ರಾಮರಾವ್ ಅವರು ತೆಲಂಗಾಣದ ಸಿಕಂದರಾಬಾದ್‍ನಲ್ಲಿ ಆಯೋಜಿಸಿದ್ದ 2 ನೇ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕರ್ನಾಟಕ ಏಕರೂಪದ ರಾಜ್ಯವಲ್ಲ, ಪ್ರಾಕೃತಿಕವಾಗಿ ವೈವಿಧ್ಯಮಯವಾಗಿದ್ದು, 6 ಜನಾಂಗೀಯ ಭಾಷೆ ಪ್ರದೇಶಗಳನ್ನು ಒಳಗೊಂಡಿದೆ. ಹೈದರಬಾದ್ ಕರ್ನಾಟಕದ ಉರ್ದು ಮಾತನಾಡುವ ಪ್ರದೇಶ, ಮುಂಬೈ ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶ, ಹಳೇ ಮೈಸೂರು ಕನ್ನಡ ಮಾತನಾಡುವ ಪ್ರದೇಶ, ತುಳುನಾಡು/ಮಂಗಳೂರು ತುಳು ಮಾತನಾಡುವ ಪ್ರದೇಶ ಅಂದರೆ ಹಿಂದಿನ ಮದ್ರಾಸ್ ಪ್ರೆಸಿಡೆನ್ಸಿಯ ಭಾಗ, ಕೊಂಕಣಿ ಮಾತನಾಡುವ ಪ್ರದೇಶ ಕಾರವಾರ, (ಕೆನರಾ ಜಿಲ್ಲೆ) ಇದು ಹಿಂದಿನ…
ಮಡಿಕೇರಿ ಜು.17 : ಚುನಾವಣೆ ಸಂದರ್ಭ ರಾಜ್ಯದ ಜನತೆಗೆ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳು ಅನುಷ್ಠಾನಗೊಳ್ಳುತ್ತಿದ್ದು, ಸರ್ಕಾರ ನುಡಿದಂತೆ ನಡೆಯುತ್ತಿದೆ. ಜನಪರ ಆಡಳಿತದೊಂದಿಗೆ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ತಿಳಿಸಿದ್ದಾರೆ. ಮೂರ್ನಾಡು ವಲಯ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರ ಸಭೆಯನ್ನು ನಡೆಸಿ ಮಾತನಾಡಿದ ಅವರು ಇದು ಜನಾದೇಶದ ಸರ್ಕಾರವಾಗಿದ್ದು, ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಬದ್ಧವಾಗಿದೆ ಎಂದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವ ಕಾರ್ಯ ಮಾಡುತ್ತಿದೆ. ಐದು ಗ್ಯಾರಂಟಿ ಯೋಜನೆಗಳು ಈಗಾಗಲೇ ಜನರ ಕೈಸೇರುತ್ತಿದೆ, ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಮೂಲಕ ರಾಜ್ಯದ ಜನ ನೆಮ್ಮದಿಯಿಂದ ಇದ್ದಾರೆ ಎಂದು ಅಭಿಪ್ರಾಯಪಟ್ಟರು. ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸರ್ವ ತಯಾರಿ ಮಾಡಿಕೊಳ್ಳಬೇಕು. ಶೀಘ್ರ ವಲಯ ಮಟ್ಟದಿಂದಲೇ ಚಟುವಟಿಕೆ ಆರಂಭಿಸಬೇಕು ಎಂದು ಮಂಥರ್ ಗೌಡ ಕರೆ ನೀಡಿದರು. ಮೂರ್ನಾಡು ವಲಯದ ಮತದಾರರ ಪಟ್ಟಿಯನ್ನು…
ಮಡಿಕೇರಿ ಜು.17 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂತೂರು- ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಬಾಡಗ ವಾರ್ಡ್‍ನ ಉಪಚುನಾವಣೆಯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಿ ಕೆ.ವಿ.ಭಾಗ್ಯ ಅವರು ಇತ್ತೀಚೆಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ವಲಯ ಕಾಂಗ್ರೆಸ್ ಅಧ್ಯಕ್ಷ ಕೇಶವ, ಮೂರ್ನಾಡು ವಲಯದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಡಿಕೇರಿ ಜು.17 : ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಬ್ಬಿವಳವಾಡಿ ವಾರ್ಡ್ ಸಂಖ್ಯೆ- 2 ರ ಉಪಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭವ್ಯಶ್ರೀ ಎಂ.ಕೆ ಇತ್ತೀಚೆಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಉಪಾಧ್ಯಕ್ಷ ವಿ.ಜಿ.ಮೋಹನ್, ಪ್ರಧಾನ ಕಾರ್ಯದರ್ಶಿ ಯಶ್ ದೊಲ್ಪಾಡಿ, ವಲಯಾಧ್ಯಕ್ಷ ರಮೇಶ್ ರೈ, ಬೂತ್ ಅಧ್ಯಕ್ಷ ವಿಜು ಕಾರ್ಯಪ್ಪ, ಕಡಗದಾಳು ಗ್ರಾ.ಪಂ ಸದಸ್ಯೆ ಪುಷ್ಪಾವತಿ, ಪ್ರಮುಖರಾದ ಯೂಸುಫ್, ಖಾಸಿಂ, ಬಿ.ಡಿ.ನಾರಾಯಣ ರೈ, ಉಸ್ಮಾನ್ ಮತ್ತಿತರರು ಉಪಸ್ಥಿತರಿದ್ದರು.
ಕುಶಾಲನಗರ, ಜು.16 : ಕರ್ನಾಟಕ ಅರಣ್ಯ ಇಲಾಖೆಯ ಮಡಿಕೇರಿ ವಿಭಾಗದ ಕುಶಾಲನಗರ ಅರಣ್ಯ ವಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಹಾಗೂ ಎನ್.ಎಸ್.ಎಸ್. ಘಟಕದ ಸಹಯೋಗದಲ್ಲಿ ಕುಶಾಲನಗರ ಸಮೀಪದ ರಸಲ್ ಪುರ ಕಾವೇರಿ ನದಿದಂಡೆಯಂಚಿನಲ್ಲಿ ವನ ಮಹೋತ್ಸವ ಹಾಗೂ ಗೋ ಗ್ರೀನ್ ಅಭಿಯಾನದಡಿ ವಿವಿಧ 600 ಅರಣ್ಯ ಸಸಿಗಳನ್ನು ನೆಡುವ ಪರಿಸರ ಕಾರ್ಯಕ್ರಮದಲ್ಲಿ “ನದಿ ಪಾತ್ರದಲ್ಲಿ ಹಸಿರು ಪರಿಸರ ನಿರ್ಮಾಣ” ದ ಮಹತ್ವ ಕುರಿತು ಮಾತನಾಡಿದರು. ನಮ್ಮ ಸುತ್ತಲಿನ ಪರಿಸರದಲ್ಲಿ ಗಿಡ ನೆಟ್ಟು ಬೆಳೆಸುವ ಮೂಲಕ ಪರಿಸರ ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದ್ದು, ಎಲ್ಲರೂ ಜತೆಗೂಡಿ ಹಸಿರು ಹೊದಿಕೆ ನಿರ್ಮಾಣಕ್ಕೆ ಸಂಕಲ್ಪ ತೊಡಬೇಕು ಎಂದು ಪರಿಸರ ಸಂಘಟಕ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ನ ಕೊಡಗು ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ಮನವಿ ಮಾಡಿದರು. ನದಿಯ ದಂಡೆಗುಂಟ ಬೆಳೆಸುವ ಮರಗಿಡಗಳು ನದಿಯಲ್ಲಿ ನೀರಿನ ಹರಿವನ್ನು ಹೆಚ್ಚಿಸಿ, ವರ್ಷವಿಡೀ ನೀರಿರುವಂತೆ…
ಮಡಿಕೇರಿ ಜು.17 : ಕಳೆದ ಹಲವು ದಶಕಗಳಿಂದ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬಂದ ಸೋಮವಾರಪೇಟೆಯ ತಲ್ತರೆಶೆಟ್ಟಳ್ಳಿಯ ತಮ್ಮ ಜಾಗ ಮತ್ತು ಗಿಡಗಳನ್ನು ತೆರವುಗೊಳಿಸುವ ಮೂಲಕ ಅರಣ್ಯ ಇಲಾಖೆ ಅನ್ಯಾಯವೆಸಗಿದೆ ಎಂದು ಆರೋಪಿಸಿರುವ ಕೃಷಿಕ ಜಿ.ಟಿ.ಭೋಜರಾಜ, ಶಾಸಕರು ಸ್ಥಳಕ್ಕೆ ಭೇಟಿ ನೈಜಾಂಶವನ್ನು ಪರಿಶೀಲಿಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತಳ್ಳಿ ಹೋಬಳಿಯ ತಲ್ತರೆಶೆಟ್ಟಳ್ಳಿಯಲ್ಲಿ ತಮ್ಮ ಅಜ್ಜನಿಗೆ 1939 ರಲ್ಲಿ 90 ಸೆಂಟ್ ಜಾಗವನ್ನು ಮಂಜೂರು ಮಾಡಲಾಗಿತ್ತು. ಬಳಿಕ ಅದರ ಆಸುಪಾಸಿನ ಜಾಗವನ್ನು ಒಳಗೊಂಡಂತೆ ಸುಮಾರು 4.50 ಎಕರೆ ಪ್ರದೇಶದಲ್ಲಿ ಕಳೆದ ಐದು ದಶಕಗಳಿಂದ ತಾವು ಕಾಫಿ, ಕರಿಮೆಣಸು ಕೃಷಿಯನ್ನು ನಡೆಸಿಕೊಂಡು ಬಂದಿದ್ದೇವೆ. ಇದೀಗ ಅರಣ್ಯ ಇಲಾಖೆ ಜಾಗದಲ್ಲಿದ್ದ 7 ಸಾವಿರಕ್ಕೂ ಹೆಚ್ಚಿನ ಕಾಫಿ, ಕರಿಮೆಣಸು ಮತ್ತು ಕಿತ್ತಳೆ ಗಿಡಗಳನ್ನು ತೆಗೆದು, ಜಾಗವನ್ನು ತೆರವುಗೊಳಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಹಿಂದೆ 1993 ರಲ್ಲೆ ಜಾಗ ಮಂಜೂರಾತಿಗೆ ಅಕ್ರಮ ಸಕ್ರಮ ಸಮಿತಿಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ, ತನ್ನ ಅರ್ಜಿ ತಿರಸ್ಕøತವಾದ ಹಿನ್ನೆಲೆಯಲ್ಲಿ…






