ಲೇಖಕ: admin

ಮಡಿಕೇರಿ ಜು.17 : ವಿರಾಜಪೇಟೆಯ ಅರಸು ನಗರದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳು ಕಾಣೆಯಾಗಿರುವ ಬಗ್ಗೆ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಣಿಎರವರ ಕಾಳಿ (24) ಜು.14 ರಂದು ಹಾಲು ಕರೆದು ಅಂಗಡಿ ಹಾಗೂ ಹೊಟೇಲ್‍ಗೆ ನೀಡಿ ಬರುವುದಾಗಿ ಹೇಳಿ ಮನೆಯಿಂದ ಹೊರಹೋದವಳು ವಾಪಾಸ್ಸು ಮನೆಗೆ ಬಂದಿಲ್ಲ ಎಂದು ಮನೆಯ ಮಾಲೀಕರು ದೂರಿನಲ್ಲಿ ತಿಳಿಸಿದ್ದಾರೆ. ಕನ್ನಡ, ಕೊಡವ ಮತ್ತು ಎರವ ಭಾಷೆ ಮಾತನಾಡುವ ಪಣಿಎರವರ ಕಾಳಿ 5.1 ಅಡಿ ಎತ್ತರವಿದ್ದು, ದುಂಡು ಮುಖ, ಕಪ್ಪು ಮೈಬಣ್ಣ, ಕಪ್ಪು ಕೂದಲು, ತೆಳ್ಳನೆಯ ಶರೀರ ಹೊಂದಿದ್ದಾರೆ. ಮಹಿಳೆಯನ್ನು ಕಂಡವರು ವಿರಾಜಪೇಟೆ ನಗರ ಪೊಲೀಸ್ ಠಾಣೆ-08274-257333 ಸಂಪರ್ಕಿಸುವಂತೆ ಕೋರಿದೆ.

Read More

ಮಡಿಕೇರಿ ಜು.17 :  ಗೋಣಿಕೊಪ್ಪಲು ಕಾಫಿ ಮಂಡಳಿ ಆಶ್ರಯದಲ್ಲಿ ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ಸಹಾಯದೊಂದಿಗೆ ಫಾರ್ಮರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಕಾಫಿ ಬೆಳೆಯ ಬಗ್ಗೆ ವಿಚಾರ ಸಂಕಿರಣ ನಡೆಯಿತು. ಗೊಣೆಕೊಪ್ಪಲು ಕಾಫಿ ಮಂಡಳಿಯ ವಿಜ್ಞಾನಿ ಡಾ. ಮುಖಾಲಿಬ್ ವಿಚಾರ ಸಂಕಿರಣ ನಡೆಸಿಕೊಟ್ಟುರು. ಕಾಫಿ ಮಂಡಳಿಯಿಂದ ಬೆಳೆಗಾರರಿಗಾಗಿ ಲಭ್ಯ ವಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಬಾಳೆಲೆ ಭಾಗದಲ್ಲಿ 10,000 ಹೆಕ್ಟೇರ್ ಪ್ರದೇಶದಲ್ಲಿ ರೋಬಸ್ಟಾ ಕಾಫಿ ಬೆಳೆಯುತಿದ್ದು ಮರುನಾಟಿಗೆ, ಕಾಫಿ ಒಣಗಿಸಲು ಸಿಮೆಂಟ್ ಕಣ, ತೋಟಕ್ಕೆ ನೀರು ಹಾರಿಸಲು ಪಂಪ್ ಸೆಟ್ ವ್ಯವಸ್ಥೆ ಗೆ ಸಹಾಯಧನವಿರುವ ಬಗ್ಗೆ ಮಾಹಿತಿ ನೀಡಿದರು. ಬಾಳೆಲೆ ಯನ್ನು ರೋಬಸ್ಟಾ ಬೆಳೆಯುವ ಭಾಗವೆಂದು ಗುರುತಿಸಿದ್ದು, ಈ ಭಾಗದಲ್ಲಿ ಹೊಸ ತೋಟಮಾಡುವವರಿಗೆ ರೋಬಸ್ಟಾ ತಳಿಗೆ ಮಾತ್ರ ಸಹಾಯಧನ ಲಭ್ಯವಿದ್ದು. ಇತ್ತೀಚಿನ ದಿನಗಳಲ್ಲಿ ಹವಾಮಾನ ಎರುಪೇರಾಗುತ್ತಿರುವ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಮಳೆ ಮಳೆಗಾಲದಲ್ಲಿ ಬಿಸಿಲು ಆಗುತ್ತಿದೆ. ಈ ನಿಟ್ಟಿನಲ್ಲಿ ತೋಟಗಳಲ್ಲಿ ನಿರ್ದಿಷ್ಟ ಪ್ರಮಾಣದ ನೆರಳಿನ ವ್ಯವಸ್ಥೆ ಬೇಕಾಗಿದೆ. ಕಾರಣ ಈ ವರ್ಷ ಬೇಸಿಗೆಯಲ್ಲಿ…

Read More

ನಾಪೋಕ್ಲು ಜು.14 : ಇಂದಿರಾ ನಗರದಲ್ಲಿರುವ ಸಮುದಾಯ ಭವನದ ಒಳ ಮತ್ತು ಹೊರಗೆ ಸುಚಿತ್ವ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಸ್ಥಳಿಯ ಶೌರ್ಯ ಸ್ವಯಂ ಸೇವಕರು ಸೇರಿ ಇಡಿ ಭವನದ ಸುತ್ತು ಮುತ್ತ ಕಾಡು, ಕಸ ತೆಗೆದು ಒಳಗೆ ಸ್ವಚ್ಛ ಗೊಳಿಸುವುದರ ಮೂಲಕ ಶ್ರಮದಾನ ಮಾಡಿದರು. ಈ ಸೇವಾ ಕಾರ್ಯದಲ್ಲಿ ಗೀತಾ, ಆಶಾ, ಶರವಣ, ದಮಯಂತಿ, ಹಾಜರಿದ್ದರು. ಶೌರ್ಯ ತಂಡದ ಸದಸ್ಯರು ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ವಿವಿಧ ಸಾಮಾಜಿಕ ಉಪಯೋಗಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಶಾಲೆ, ಅಂಗನವಾಡಿ, ಸಮುದಾಯ ಭವನಗಳ ಸ್ವಚ್ಚತೆ, ರಸ್ತೆ ಗುಂಡಿಗಳ ಮುಚ್ಚುವಿಕೆ, ವೃದ್ಧರಿಗೆ ನೆರವು ಸೇರಿದಂತೆ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ಸಂಯೋಜಕಿ ಬಾಳೆಯಡ ದಿವ್ಯ ನೇತೃತ್ವದಲ್ಲಿ ಶೌರ್ಯ ಸ್ವಯಂ ಸೇವಕ ತಂಡದ ಸದಸ್ಯರು ಹಮ್ಮಿಕೊಳ್ಳುತ್ತಿರುವುದು ಸಾರ್ವಜನಿಕರ ಪ್ರಸಂಸ್ಥೆಗೆ ಪಾತ್ರವಾಗಿದೆ. ವರದಿ : ದುಗ್ಗಳ ಸದಾನಂದ 

Read More

ಮಡಿಕೇರಿ ಜು.16 : ವಿದ್ಯುತ್ ತಂತಿ ತಗುಲಿ ಕಾಡಾನೆಯೊಂದು ಸಾವಿಗೀಡಾಗಿರುವ ಘಟನೆ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದ ಓಂಕಾರ ವಲಯ ವ್ಯಾಪ್ತಿಯ ಕುರುಬರ ಹುಂಡಿ ಗ್ರಾಮದಲ್ಲಿ ನಡೆದಿದೆ. ಆಹಾರ ಅರಸಿ ಬಂದ ಕಾಡಾನೆ ಜಮೀನಿನಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ತಂತಿಯನ್ನು ಸ್ಪರ್ಷಿಸಿ ಸಾವನ್ನಪ್ಪಿದೆ ಎಂದು ಹೇಳಲಾಗಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More

ಮಡಿಕೇರಿ ಜು .17 : ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮವು ಜು.19 ರಂದು  ಮಧ್ಯಾಹ್ನ 3 ಗಂಟೆಗೆ ಮಡಿಕೇರಿಯ ಕೊಡಗು ಪತ್ರಿಕಾ ಭವನ ಟ್ರಸ್ಟ್ ನ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ  ಎಂ.ಪಿ.ಕೇಶವ ಕಾಮತ್  ವಹಿಸಿಕೊಳ್ಳಲಿದ್ದು, ಕಾರ್ಯಕ್ರಮವನ್ನು ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ  ಡಾ. ಶ್ರೀಧರ ಹೆಗಡೆ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಟಿ.ಪಿ ರಮೇಶ್ ನೂತನ ಸದಸ್ಯರುಗಳಿಗೆ ಪ್ರತಿಜ್ಞಾವಿಧಿ ಬೋಧನೆಯನ್ನು  ನೆರವೇರಿಸಲಿದ್ದಾರೆ. ನೂತನ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಅವರಿಗೆ ನಿಕಟ ಪೂರ್ವ ಅಧ್ಯಕ್ಷ  ಅಂಬೇಕಲ್ ನವೀನ್ ಅಧಿಕಾರ ಹಸ್ತಾಂತರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ  ಮುನಿರ್ ಅಹ್ಮದ್ ಮತ್ತು ರೇವತಿ ರಮೇಶ್  ಉಪಸ್ಥಿತರಿರುತ್ತಾರೆ. ನಿಯೋಜಿತ ಅಧ್ಯಕ್ಷರಾದ  ಕಡ್ಲೇರ ತುಳಸಿ ಮೋಹನ್, ಗೌರವ ಕಾರ್ಯದರ್ಶಿಗಳಾಗಿ ನಿಯೋಜಿಸಲ್ಪಟ್ಟಿರುವ ಪುದಿಯನೆರವನ ರಿಷಿತ್ ಮಾದಯ್ಯ, ಬಾಳೆಯಡ…

Read More

ಮಡಿಕೇರಿ ಜು.16 : ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ತಂಬಾಕು ಭಸ್ಮವಾಗಿ ಬ್ಯಾರನ್ ಗೆ ಹಾನಿಯಾದ ಘಟನೆ ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯ ಕಾಮಗೌಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ತಂಬಾಕು ಹದ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ತಂಬಾಕು ಭಸ್ಮವಾಗಿ ಬ್ಯಾರನ್ ಮೇಲ್ಚಾವಣಿ ಸಂಪೂರ್ಣವಾಗಿ ಹಾನಿಯಾಗಿ ಸುಮಾರು 3 ಲಕ್ಷ ರೂ. ನಷ್ಟ ಸಂಭವಿಸಿದೆ. ಬೆಳೆಗಾರನಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಸ್ಥಳೀಯ ಮುಖಂಡರು ಒತ್ತಾಯಿಸಿದ್ದಾರೆ.

Read More

ಮಡಿಕೇರಿ ಜು.17 : ಬಿಳಿಗೇರಿ ಪ್ಲಾಂಟರ್ಸ್ ಕ್ಲಬ್ ವತಿಯಿಂದ ಬಿಳಿಗೇರಿಯಲ್ಲಿ 3ನೇ ವರ್ಷದ ಹಿಂದೂ ಕೆಸರು ಗದ್ದೆ ಕ್ರೀಡಾಕೂಟ ಸಂಭ್ರಮದಿಂದ ನಡೆಯಲಿದೆ. ತುಂತಜಿರ ಕುಟುಂಬಸ್ಥರ ಗದ್ದೆಯಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟವನ್ನು ಕೃಷಿಕರಾದ ತುಂತಜಿರ ಚಂದ್ರಶೇಖರ್ ಉದ್ಘಾಟಿಸಿದರು. ಅತಿಥಿಗಳಾಗಿ ಮಾಜಿ ಕ್ಯಾಪ್ಟನ್ ತುಂತಜಿರ ದಯಾನಂದ್, ಕೃಷಿಕ ತುಂತಜಿರ ಜನಾರ್ಧನ್, ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಅರವಿಂದ್, ತಾ.ಪಂ ಮಾಜಿ ಸದಸ್ಯೆ ತುಂತಜಿರ ಕುಮುದ ಮತ್ತಿತರರು ಪಾಲೊಂಡಿದ್ದರು. ಕ್ರೀಡಾಕೂಟದಲ್ಲಿ ಕ್ರಿಕೆಟ್, ವಾಲಿಬಾಲ್, ಓಟದ ಸ್ಪರ್ಧೆ, ಹಗ್ಗಜಗ್ಗ ಟ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆದವು.

Read More

ಮಡಿಕೇರಿ ಜು.17 :  ಯಾವುದೇ ವಿಚಾರಕ್ಕಾಗಿಯಾದರೂ ಸರಿಯೇ. ಹಿಂದು ಮುಂದು ಆಲೋಚಿಸದೆಯೇ ತಮ್ಮ ಮೂಗಿನ ನೇರಕ್ಕೆ ಸರಿಯೆನಿಸುವ, ಸಮಾಜದ ದೃಷ್ಟಿಯಿಂದ ತಪ್ಪು ಎನ್ನಬಹುದಾದ ಕೃತ್ಯವನ್ನು ಯಾರಾದರೂ ಮಾಡಿದರೆ ಆ ಕೃತ್ಯದ ಪರಿಣಾಮವಾಗಿ ಏನೆಲ್ಲಾ ಮತ್ತು ಯಾರಿಗೆಲ್ಲಾ ಯಾವ್ಯಾವ ರೀತಿಯ ತೊಂದರೆಗಳು ಸಂಭವಿಸಬಹುದು ಎಂಬುದನ್ನು ನಾವಿಂದು ಕಾಣುತ್ತಿದ್ದೇವೆ. ಅಂತಹ ಒಂದು ಕೃತ್ಯ ನಡೆದ ಸಂದರ್ಭದಲ್ಲಿ ನಡೆದ ಘಟನೆಗೆ ನೇರವಾಗಿ ಯಾವುದೇ ರೀತಿಯ ಸಂಬಂಧ ಇಲ್ಲದೇ ಇದ್ದರೂ ಸಹ ಕೇವಲ ಕೃತ್ಯದ ರೂವಾರಿಯ ಜಾತಿ ಮತದವರೆಂಬ ಏಕೈಕ ಕಾರಣದಿಂದ ಅದೆಷ್ಟು ಮುಗ್ಧರಿಗೆ ನೋವಾಗಿರಬಹುದು. ಅದೆಷ್ಟು ಯುವ ಮನಗಳು, ಅದೆಷ್ಟು ಹಿರಿಯ ಕಿರಿಯ ಜೀವಗಳು ಆಸರೆ ಕೈತಪ್ಪಿ ಹೋಗಿ ಜೀವಮಾನದ ಗೊತ್ತು ಗುರಿಗಳು ದಿಕ್ಕುತಪ್ಪಿ ಅಲ್ಲೋಲ ಕಲ್ಲೋಲವಾಗಿಬಹುದು ಎಂದು ನಾವೆಲ್ಲರೂ ಚಿಂತಿಬೇಕಾಗಿದೆ. ಅಂತಹ ಒಂದು ಕುಟುಂಬದ ಏಳುಬೀಳುಗಳ ನಡುವೆ ಬೆಂಕಿಯಲ್ಲಿ ಅರಳಿದ ಹೂವು ಈ ಕೃತಿಕಾರರಾದ  ವಿಜಯಾ ವಿಷ್ಣುಭಟ್ ಡೋಂಗ್ರೆ. ತಾನು ಚಿತ್ಪಾವನ ಬ್ರಾಹ್ಮಣರ ಪಂಗಡಕ್ಕೆ ಸೇರಿದ ಕಾರಣಕ್ಕಾಗಿ ವಿದ್ಯಾಭ್ಯಾಸ ಮೊಟಕುಗೊಂಡಿತು . ಇದ್ದ ಸ್ವಂತ…

Read More

ಮಡಿಕೇರಿ ಜು.17 : ಮನುಷ್ಯರಿಗೆ ಅತ್ಯವಶ್ಯಕವಾದ ಉತ್ತಮ ಪರಿಸರವನ್ನು ಪ್ರತಿಯೊಬ್ಬರೂ ಕಾಪಾಡಿಕೊಳ್ಳಬೇಕಾಗಿದೆ ಎಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ಕೆ.ವಿ.ಶಿವರಾಮ್ ತಿಳಿಸಿದ್ದಾರೆ. ಕುಶಾಲನಗರದ ಕೃಷಿ ಮಾರುಕಟ್ಟೆ ಆವರಣದಲ್ಲಿ ಭಾನುವಾರ ವಾಕರ್ಸ್ ಅಸೋಸಿಯೇಷನ್ ತಂಡದ ಸದಸ್ಯರು ಕುಶಾಲನಗರ ಅರಣ್ಯ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡ ವಾಯು ವಿಹಾರಿಗಳ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಉತ್ತಮ ವಾತಾವರಣದಿಂದ ಉತ್ತಮ ಆರೋಗ್ಯ ಗಳಿಸಲು ಸಾಧ್ಯ ಎಂದ ಶಿವರಾಂ, ಇದೊಂದು ವಿಶೇಷ ಕಾರ್ಯಕ್ರಮವಾಗಿದೆ ಎಂದರು ಗಿಡಗಳನ್ನು ನೆಡುವ ಮೂಲಕ ನಿರ್ವಹಣೆ ಮಾಡಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು. ಕಳೆದ ಹಲವು ವರ್ಷಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ವಾಯು ವಿಹಾರಕ್ಕೆ ತೆರಳುತ್ತಿದ್ದ ಸುಮಾರು 20ಕ್ಕೂ ಅಧಿಕ ವಾಯು ವಿಹಾರಿಗಳು ಇಲಾಖೆ ಅಧಿಕಾರಿ ಸಿಬ್ಬಂದಿಗಳೊಂದಿಗೆ ಸೇರಿ ನೂರಕ್ಕೂ ಅಧಿಕ ಗಿಡಗಳನ್ನು ನೆಡುವಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕಾರ್ಯಕ್ರಮ ಸಂಯೋಜಕರಾದ ಎಂ ಎನ್ ಚಂದ್ರಮೋಹನ್, ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಹೆಚ್.ಟಿ.ರವಿ, ಪ್ರಧಾನ ಕಾರ್ಯದರ್ಶಿ ಬಸವರಾಜ್, ಉಪ ವಲಯ…

Read More

ಮಡಿಕೇರಿ ಜು.17 :  ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಶ್ರೀ ಮಾರಮ್ಮ ದೇವರ ವಾರ್ಷಿಕ ಉತ್ಸವ “ಮಾರಿಗುಡಿ ನಮ್ಮೆ”  ಶ್ರದ್ಧಾಭಕ್ತಿಯಿಂದ ಜರುಗಿತು. ವರ್ಷಂಪ್ರತಿ ಕಕ್ಕಡ ಮಾಸದ ಒಂದು ದಿನದ ಮುಂಚಿತವಾಗಿ ಸಂಕ್ರಮಣದಂದು  ನಡೆಯುವ ಹಳ್ಳಿಗಟ್ಟು ಮಾರಮ್ಮ ದೇವರ ವಾರ್ಷಿಕ ಉತ್ಸವದಲ್ಲಿ ಮಚ್ಚಿಯಂಡ ಕುಟುಂಬದವರೇ ಪೂಜಾರಿಗಳಾಗಿ ವಿವಿಧ ವಿಧಿವಿಧಾನಗಳನ್ನು ಪೂರೈಸುತ್ತಾರೆ. ಹಳ್ಳಿಗಟ್ಟು ಊರಿನಲ್ಲಿ ಪ್ರಮುಖವಾಗಿ ನಾಲ್ಕು ದೇವಸ್ಥಾನಗಳಿದ್ದು, ಇಲ್ಲಿನ ಭದ್ರಕಾಳಿ ದೇವಸ್ಥಾನದಲ್ಲಿ ಮಾತ್ರ ಬ್ರಾಹ್ಮಣರ ಪೂಜೆ ನೆರವೇರಿಸುತ್ತಿದ್ದು ಉಳಿದ ಮೂರು ದೇವಾಲಯಗಳಲ್ಲಿ ಕೊಡವ ಜನಾಂಗದವರೇ ಪೂಜಾರಿಯಾಗಿ ಕಾರ್ಯನಿರ್ವಹಿಸುತ್ತಾರೆ. ಇಲ್ಲಿನ ಗುಂಡಿಯತ್ ಅಯ್ಯಪ್ಪ ದೇವಸ್ಥಾನ ಹಾಗೂ ಪೊಲವಪ್ಪ ದೇವಸ್ಥಾನದಲ್ಲಿ ಚಮ್ಮಟೀರ ಹಾಗೂ ಮೂಕಳೇರ ಕುಟುಂಬ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದರೆ, ಮಾರಮ್ಮ ದೇವಸ್ಥಾನದಲ್ಲಿ ಮಚ್ಚಿಯಂಡ ಕುಟುಂಬ ವಿವಿಧ ಕಟ್ಟುಪಾಡುಗಳೊಂದಿಗೆ ಪೂಜೆಯನ್ನು ನೆರವೇರಿಸುತ್ತಾರೆ. ಭಾನುವಾರ ನಡೆದ ಮಾರಮ್ಮ ದೇವರ ಉತ್ಸವದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ಆಗಮಿಸಿ  ಹರಕೆಗಳನ್ನು ಅರ್ಪಿಸಿದ್ದರು. ಕಕ್ಕಡ ಮಾಸಕ್ಕೆ ಒಂದು ದಿನ ಮುಂಚಿತವಾಗಿ ಹಾಗೂ ಕಕ್ಕಡದ ಮೊದಲ ವಾರದಲ್ಲಿ ನಡೆಯುವ ಹಳ್ಳಿಗಟ್ಟು ಮಾರಿಗುಡಿ ನಮ್ಮೆ ಜು.22ರಂದು…

Read More