ಮಡಿಕೇರಿ ಜು.16 : NEWSDESK ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ದಂಧೆ ವ್ಯಾಪಕವಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ.NEWSDESK ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ದಾಳಿಗಳನ್ನು ಮುಂದುವರೆಸಿದೆ. ಜಿಲ್ಲಾ ವ್ಯಾಪ್ತಿಯ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಗಳಲ್ಲಿ ಪ್ರವಾಸದ ನಿಮಿತ್ತ ತಂಗಲು ಬರುವ ಪ್ರವಾಸಿಗರು ಮಾದಕ ವಸ್ತು ಬಳಕೆ, ಮಾರಾಟ ಮಾಡುವುದು ಕಂಡು ಬಂದಲ್ಲಿ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಗಳ ಮಾಲೀಕರು, ಮಧ್ಯವರ್ತಿಗಳು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡದೆ ದಾಳಿ ಸಂದರ್ಭ ಮಾದಕ ವಸ್ತು ಸೇವನೆ, ಮಾರಾಟ ಕಂಡು ಬಂದಲ್ಲಿ ಮಾಲೀಕರು ಹಾಗೂ ಮಧ್ಯವರ್ತಿಗಳ ವಿರುದ್ದ ಎನ್.ಡಿ.ಪಿ.ಎಸ್. ಕಾಯಿದೆ ಕಲಂ 25ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡು ಅವುಗಳ ಪರವಾನಗಿ ರದ್ದು ಮಾಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ.NEWSDESK
ಲೇಖಕ: admin
ಮಡಿಕೇರಿ ಜು.16 : ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮತ್ತು ಸೇವನೆಯ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಒಟ್ಟು 1 ಕೆ.ಜಿ.702 ಗ್ರಾಂ ಗಾಂಜಾ ಮತ್ತು 9 ಸಂಖ್ಯೆಯ ನಿಷೇಧಿತ ಐಎಸ್‌ಡಿ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.NEWSDESK ಮಡಿಕೇರಿ ಸಮೀಪದ ಮಕ್ಕಂದೂರು ಗ್ರಾಮದ ಹೋಂ ಸ್ಟೇ ಒಂದರಲ್ಲಿ ಮಾದಕ ವಸ್ತು ಮಾರಾಟ ಮತ್ತು ಬಳಕೆ ಕುರಿತು ಪೊಲೀಸ್ ಠಾಣೆಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು 414 ಗ್ರಾಂ ಗಾಂಜಾ ಮತ್ತು 9 ಸಂಖ್ಯೆಯ ನಿಷೇಧಿತ ಐಎಸ್‌ಡಿ ಮಾದಕ ವಸ್ತು ಸಹಿತ ಹಲವರನ್ನು ವಶಕ್ಕೆ ಪಡೆದರು.NEWSDESK ಮಂಗಳೂರು ಮೂಲದ ರಿತಿಕ್(23), ವಿಘ್ನೇಶ್ ಅಜೀತ್ ಅಂಚನ್(21), ಸುಮನ್ ಹರ್ಷಿತ್(26), ಚಿರಾಗ್ ಸಾನಿಲ್(24), ಮಂಜುನಾಥ್(30), ಲತೀಶ್ ನಾಯಕ್(32), ಸಚಿನ್(26), ರಾಹುಲ್(26), ಪ್ರಜ್ವಲ್(32), ಅವಿನಾಶ್(28), ಪ್ರತಿಕ್ ಕುಮಾರ್(27), ಧನುಷ್(28), ರಾಜೇಶ್(45), ದಿಲ್ ರಾಜು(30) ಹಾಗೂ ಮಡಿಕೇರಿ ನಿವಾಸಿ ಹೋಂ ಸ್ಟೇ ಮಧ್ಯವರ್ತಿ…
ಮಡಿಕೇರಿ ಜು.16 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಪ್ರಮುಖ ಎರಡು ಬೇಡಿಕೆಗಳ ಕುರಿತು ಚರ್ಚಿಸಿತು. ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರ ಮೂಲಕ “ಕೃಷ್ಣಾ” ದಲ್ಲಿ ಭೇಟಿ ಮಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಪ್ರಮುಖರು ಕುಲಶಾಸ್ತç ಅಧ್ಯಯನ ಮತ್ತು ಕೊಡವ ಪದ ಬಳಕೆ ಕುರಿತು ಗಮನ ಸೆಳೆದರು. ಸರ್ಕಾರಿ ದಾಖಲೆಗಳಲ್ಲಿ “ಕೊಡಗರು” ಪದ ಬಳಕೆ ಬದಲಿಗೆ “ಕೊಡವರು” ಎಂದು ಬಳಸಲು ಡಾ.ದ್ವಾರಕಾನಾಥ್ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರಬೇಕು. ಕೊಡವ ಬುಡಕಟ್ಟು ಜನಾಂಗಕ್ಕೆ ಎಸ್‌ಟಿ ಟ್ಯಾಗ್ ನೀಡಲು ಕೊಡವರ ಕುಲಶಾಸ್ತç ಅಧ್ಯಯನವನ್ನು ಶೀಘ್ರ ಆರಂಭಿಸಬೇಕೆಂದು ನಾಚಪ್ಪ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆಯ ನಂತರ ಸರ್ಕಾರದ ದಾಖಲೆಗಳಲ್ಲಿ ಮತ್ತು ರಾಜ್ಯದ ಗೆಜೆಟ್ ನಲ್ಲಿ “ಕೊಡಗರು” ಬದಲಿಗೆ “ಕೊಡವ” ಪದ ಬಳಕೆಗೆ ಕ್ರಮ ಕೈಗೊಳ್ಳಲಾಗುವುದು. ಕೊಡವರ ಕುಲಶಾಸ್ತç ಅಧ್ಯಯನವನ್ನು ಶೀಘ್ರ ಆರಂಭಿಸಲಾಗುವುದು ಎಂದು…
ಮಡಿಕೇರಿ ಜು.15 : ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು, ಪ್ರತ್ಯೇಕ ಲೋಕಸಭಾ ಕ್ಷೇತ್ರ ರಚಿಸಬೇಕು ಹಾಗೂ ವಿಧಾನಸಭಾ ಕ್ಷೇತ್ರದ ಸಂಖ್ಯೆಯನ್ನು 3ಕ್ಕೆ ಹೆಚ್ಚಿಸಬೇಕು ಎಂದು ವೀರನಾಡು ರಕ್ಷಣಾ ವೇದಿಕೆ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ರಾಜಕೀಯವಾಗಿ ಕೊಡಗಿಗೆ ಅನ್ಯಾಯವಾಗುತ್ತಿರುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಟಿಗೊಳ್ಳುತ್ತಿವೆ ಎಂದು ಅಭಿಪ್ರಾಯಪಟ್ಟರು. ಕಳೆದ ಸರ್ಕಾರದಲ್ಲೂ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ದೊರೆಯಲಿಲ್ಲ, ಇದೀಗ ಬಹುಮತದ ಸರ್ಕಾರ ಬಂದಿದ್ದರೂ ಸಚಿವ ಸ್ಥಾನವನ್ನು ನೀಡಿಲ್ಲ. ಹೊರ ಜಿಲ್ಲೆಯವರು ಉಸ್ತುವಾರಿ ಸಚಿವರಾಗಿ ಬಂದರೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿರುವುದಿಲ್ಲ ಮತ್ತು ಅಭಿವೃದ್ಧಿ ಕಾರ್ಯಗಳೆಡೆಗೆ ಹೆಚ್ಚು ಆಸಕ್ತಿ ತೋರುವುದಿಲ್ಲ. ಆದ್ದರಿಂದ ಜಿಲ್ಲೆಯವರಿಗೇ ಸಚಿವ ಸ್ಥಾನ ಮತ್ತು ಉಸ್ತುವಾರಿ ಜವಾಬ್ದಾರಿ ನೀಡಬೇಕು ಎಂದು ಒತ್ತಾಯಿಸಿದರು. ::: 3 ಕ್ಷೇತ್ರ ::: ಈ ಹಿಂದೆ ಕೊಡಗು ಮೂರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿತ್ತು, ಆದರೆ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭ…
ಮಡಿಕೇರಿ ಜು.15 : ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ‘ಅನ್ನಭಾಗ್ಯ’ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲಿಗೆ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ 170 ರೂ.ನಂತೆ ‘ನೇರ ನಗದು ವರ್ಗಾವಣೆ’ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು, ಈ ಸಂಬಂಧ ಕೊಡಗು ಜಿಲ್ಲೆಯಲ್ಲಿ 12,930 ಮಂದಿಯ ಬ್ಯಾಂಕ್ ಖಾತೆ ಬಗ್ಗೆ ಹೋಬಳಿ ಮಟ್ಟದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಆದ್ಯತೆ ಮೇಲೆ ಮಾಹಿತಿ ಪಡೆದು ಯೋಜನೆ ಅನುಷ್ಠಾನಗೊಳಿಸುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ’ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಡಿತರ ಚೀಟಿದಾರರಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡುವ ಬಗ್ಗೆ 12,930 ಮಂದಿಯ ಬ್ಯಾಂಕ್ ಖಾತೆ ಪರಿಶೀಲನೆ ಸಂಬಂಧ ಹೋಬಳಿವಾರು ಮಾಹಿತಿ ಸಂಗ್ರಹಿಸಿ ಸರಿಪಡಿಸುವ ಕಾರ್ಯವು ಒಂದು ವಾರದೊಳಗೆ ಸಮರೋಪಾದಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.…
ಮಡಿಕೇರಿ ಜು.15 : ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಕೈಗಾರಿಕಾ ಸ್ಪಂದನಾ ಸಭೆಯು ಜು.20 ರಂದು ನಡೆಯಲಿದೆ. ಈ ಸಭೆಯಲ್ಲಿ ಉದ್ದಿಮೆದಾರರ ಸಮಸ್ಯೆಗಳನ್ನು ಚರ್ಚಿಸಲಾಗುವುದು. ಆದ್ದರಿಂದ ಕೈಗಾರಿಕೆಗಳಲ್ಲಿ ಸಮಸ್ಯೆಗಳಿದ್ದಲ್ಲಿ, ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ಈ ಕಾರ್ಯಾಲಯಕ್ಕೆ ಜು.18 ರೊಳಗೆ ಇ-ಮೇಲ್ dicjdkodagu@gmail.com ಮುಖಾಂತರ ಅಥವಾ ಖುದ್ದಾಗಿ ಲಿಖಿತವಾಗಿ ಸಲ್ಲಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಮಡಿಕೇರಿ ಜು.15 : ಸದೃಢ ಭಾರತದ ನಿರ್ಮಾಣಕ್ಕೆ ಸೇವಾದಳದ ಶಿಕ್ಷಣ ಅತ್ಯವಶ್ಯಕವಾಗಿದೆ. ಸೇವೆಗಾಗಿ ಬಾಳು ಎಂಬಂತೆ ಪ್ರತಿ ಶಾಲೆಯಲ್ಲಿ ಭಾರತ ಸೇವಾದಳದ ಶಾಖೆ ತೆರೆಯಬೇಕು ಎಂದು ಭಾರತ ಸೇವಾದಳದ ಜಿಲ್ಲಾ ಸಂಘಟಕ ಜಿ.ಈ.ರೇವಣ್ಣ ಕರೆ ನೀಡಿದರು. ವಿರಾಜಪೇಟೆಯ ಜಯಪ್ರಕಾಶ್ ನಾರಾಯಣ ಪ್ರೌಢಶಾಲೆಯಲ್ಲಿ ನಡೆದ ಭಾರತ ಸೇವಾದಳದ ಪುನಶ್ಚೇತನ ಶಿಬಿರ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಘಟನೆಯನ್ನು ಬಲಗೊಳಿಸುವ ಉದ್ದೇಶ ಸಂಘಟನೆಗಳದ್ದಾಗಿರುತ್ತದೆ. ಆದರೆ ಭಾರತ ಸೇವಾದಳವು ಮಕ್ಕಳನ್ನು ಹಾಗೂ ಯುವಜನರನ್ನು ಸಂಘಟಿಸಿ ದೇಶದ ಪ್ರಗತಿಗೆ ಮತ್ತು ಭಾವೈಕ್ಯತೆಗೆ ಸಹಕರಿಸುತ್ತಿದೆ ಎಂದರು. ದೇಶ ಗಳಿಸಿದ ಸ್ವಾತಂತ್ರ್ಯದ ಉಳಿವು ಇಂದಿನ ಅವಶ್ಯಕತೆಯಾಗಿದೆ. ಯುವ ಸಮೂಹದಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರೀಯ ಭಾವೈಕ್ಯತೆ ಮತ್ತು ಸರ್ವಧರ್ಮ ಸಮಾನತೆಯ ಕೊರತೆ ಎದ್ದು ಕಾಣುತ್ತಿದೆ. ಇಂತಹ ಸನ್ನಿವೇಶದಲ್ಲಿ ರಾಷ್ಟ್ರಪ್ರೇಮವನ್ನು ಮೂಡಿಸಲು ಭಾರತ ಸೇವಾದಳ ಸಹಕಾರಿಯಾಗಿದೆ ಎಂದು ತಿಳಿಸಿದ ರೇವಣ್ಣ ಅವರು, ಸೇವಾದಳದ ಇತಿಹಾಸದ ಕುರಿತು ಮಾಹಿತಿ ನೀಡಿದರು. ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪ್ರಕಾಶ್…
ವಿರಾಜಪೇಟೆ ಜು.15 : ಮಾನವೀಯ ಗುಣಗಳನ್ನು ಹೊಂದಿರುವವರು ಹಣದ ಮೌಲ್ಯ ನಿರ್ಣಯ ಮಾಡುವುದಿಲ್ಲ. ಪರರಿಗೆ ಉಪಯುಕ್ತವಾಗುವ ಕಾರ್ಯವನ್ನು ತೆರೆಯ ಹಿಂದೆ ಮಾಡುತ್ತಾರೆ.ಇದಕ್ಕೆ ಸಾಕ್ಷಿಯಂತೆ ವ್ಯಕ್ತಿಯೊಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಉಚಿತವಾಗಿ ಹೊದಿಕೆಗಳನ್ನು ನೀಡಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಪಟ್ಟಣದ ಆರ್.ಐ.ಹೆಚ್.ಪಿ. ಆಸ್ಪತ್ರೆಗೆ ರಿ ಬಿಲ್ಡ್ ಕೊಡಗು ಸಂಸ್ಥಾಪಕ ಕೆ.ಎ.ಕುಶಾಲಪ್ಪ ತನ್ನ ತಂದೆಯಾದ ದಿವಂಗತ ಕೆ.ಪಿ. ಅಯ್ಯಪ್ಪ ಹೆಸರಿನಲ್ಲಿ ತಂದೆಯ ಹುಟ್ಟು ಹಬ್ಬದ ಪ್ರಯುಕ್ತ ಅರವತ್ತು ಹೊದಿಕೆಗಳನ್ನು ಉಚಿತವಾಗಿ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ. ಕೊಡಗು ಸಂಸ್ಥೆಯ ಸಂಸ್ಥಾಪಕ ಕುಶಾಲಪ್ಪ ಅಯ್ಯಪ್ಪ ಆಸ್ಪತ್ರೆ ಯ ಮುಖ್ಯ ಶಸ್ತ್ರಚಿಕಿತ್ಸಾಕರು ಹಾಗೂ ಮುಖ್ಯಾಧಿಕಾರಿ ಡಾ.ಚಂದ್ರು ಅವರುಗಳಿಗೆ ಹೊದಿಕೆಗಳನ್ನು ಹಸ್ತಾಂತರ ಮಾಡಿದರು. ಆರ್.ಐ.ಹೆಚ್.ಪಿ. ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮ ದಲ್ಲಿ ರಿ ಬಿಲ್ಡ್ ಕೊಡಗು ಸಂಸ್ಥೆಯ ಸಂಸ್ಥಾಪಕ ಕುಶಾಲಪ್ಪ ಮಾತನಾಡಿ, ಸಮಾಜಕ್ಕೆ ಒಳಿತು ಮಾಡುವ ಉದ್ದೇಶದಿಂದ ಸಾಮಾಜಿಕ ಕಳಕಳಿಯ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ಕೊರತೆ ಕಾಣಿಸಿದ ರೋಗಿಗಳಿಗೆ ಉಪಯುಕ್ತ ವಾಗುವಂತೆ ಹೊದಿಕೆಗಳನ್ನು ಉಚಿತವಾಗಿ ನೀಡಿದ್ದೇನೆ. ಇದರ ಸದುಪಯೋಗವಾಗಬೇಕು…
ಮಡಿಕೇರಿ ಜು.15 : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಜು.23 ರ ಭಾನುವಾರದಂದು ನಡೆಯಲ್ಲಿದೆ. ಮಡಿಕೇರಿಯ ಪತ್ರಿಕಾಭವನದಲ್ಲಿ ಬೆಳಿಗ್ಗೆ 12 ಗಂಟೆಗೆ ನಡೆಯಲ್ಲಿರುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಉದ್ಘಾಟಿಸಲ್ಲಿದ್ದಾರೆ. ಸಂಘದ ಅಧ್ಯಕ್ಷರಾದ ಬಿ.ಆರ್.ಸವಿತಾ ರೈ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪಾಲ್ಗೊಳ್ಳಲ್ಲಿದ್ದಾರೆ. ಮುಖ್ಯ ಅತಿಥಿಗಳಾಗಿ ತೇಲಪಂಡ ಶಿವಕುಮಾರ್ ನಾಣಯ್ಯ, ರಾಜ್ಯ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ,ರಾಜ್ಯ ಸಂಘದ ನಿರ್ದೇಶಕರಾದ ಟಿ.ಎನ್.ಮಂಜುನಾಥ್, ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರಾದ ಸುನಿಲ್ ಪೊನ್ನೆಟ್ಟಿ ಪಾಲ್ಗೊಳ್ಳಲ್ಲಿದ್ದಾರೆ. ಒಟ್ಟು 15 ಪತ್ರಕರ್ತರಿಗೆ ಈ ಸಂದರ್ಭ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಇದೇ ಸಂದರ್ಭ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪ್ರಶಸ್ತಿ ಪಡೆದ ಅಜ್ಜಮಾಡ ರಮೇಶ್ ಕುಟ್ಟಪ್ಪ, ರಾಜ್ಯ ಸಂಘದ ಪ್ರಶಸ್ತಿ ಪಡೆದುಕೊಂಡಿರುವ ಪುತ್ತರೀರ…
ಮಡಿಕೇರಿ,ಜು.15 : ಮ್ಯಾನ್ಸ್ ಕಾಂಪೌಂಡ್ ಫುಟ್‌ಬಾಲ್ ಕ್ಲಬ್(ಎಂಸಿಸಿ)ನ ಅಧ್ಯಕ್ಷರಾಗಿ ಕ್ರಿಸ್ಟೋಫರ್ ಹಾಗೂ ಕಾರ್ಯದರ್ಶಿಯಾಗಿ ಉಮೇಶ್‌ಕುಮಾರ್ ಪುನರಾಯ್ಕೆಯಾಗಿದ್ದಾರೆ. ಕ್ಲಬ್‌ನ ಅಧ್ಯಕ್ಷ ಎ.ಎಂ. ಕ್ರಿಸ್ಟೋಫರ್ ನೇತೃತ್ವದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕ ಪತ್ರ ಮಂಡನೆ ನಂತರ 2023-24 ರ ಸಾಲಿನ ಕ್ಲಬ್ ನವೀಕರಣ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಕ್ಲಬ್‌ನ ಆಡಳಿತ ಮಂಡಳಿಯಲ್ಲಿ ಕೆಲವೊಂದು ಮಾರ್ಪಡುಗಳ ಜೊತೆಗೆ ಹೊಸ ಸಮಿತಿಯನ್ನು ರಚಿಸಲಾಯಿತು. ಉಪಾಧ್ಯಕ್ಷರಾಗಿ ಎ.ಜೆ ಪೀಟರ್, ಖಜಾಂಜಿಯಾಗಿ ಪ್ರಸನ್ನ, ಸಹಕಾರ್ಯದರ್ಶಿಯಾಗಿ ತೌಶಿಫ್, ಕಾನೂನು ಸಲಹೆಗಾರರಾಗಿ ಸಚಿನ್ ವಾಸುದೇವ್, ದೃಶ್ಯ ಮಾಧ್ಯಮ ವಕ್ತಾರರಾಗಿ ಸುರ್ಜಿತ್, ಪತ್ರಿಕಾ ಮಾಧ್ಯಮ ವಕ್ತರರಾಗಿ ಕುಡೆಕಲ್ ಸಂತೋಷ್, ಜಂಟಿ ಸಹಾಯಕರಾಗಿ ಅಶೋಕ್, ಪ್ರತಿನಿಧಿಯಾಗಿ ದಿನೇಶ್, ಗೌರವ ನಿರ್ದೇಶಕರು ಹಾಗೂ ಸಲಹೆಗಾರರಾಗಿ ಚಿನ್ನಪ್ಪ ಹಾಗೂ ತಂಡದ ಹಿರಿಯ ಆಟಗಾರರನ್ನು ಆಡಳಿತ ಮಂಡಳಿಯ ನಿರ್ದೇಶಕರುಗಳನ್ನಾಗಿ ಆಯ್ಕೆ ಮಾಡಲಾಯಿತು. ತಂಡದ ಆಯ್ಕೆ ಮತ್ತು ನಿರ್ವಹಣೆಯನ್ನು ಸಚಿನ್, ಲೋಹಿತ್ ,ತೌಶಿಫ್ ಇವರಿಗೆ ವಹಿಸಲಾಯಿತು. ಮುಂದಿನ ದಿನಗಳಲ್ಲಿ ಕ್ಲಬ್‌ನ ವತಿಯಿಂದ ಜಿಲ್ಲಾ, ತಾಲೂಕು, ಶಾಲಾ ಮಟ್ಟದ ಪಂದ್ಯಾಟವನ್ನು…






