ಲೇಖಕ: admin

ಮಡಿಕೇರಿ ಆ.1 : ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಬಳಿಯ ಅಂಗನವಾಡಿಗೆ ಅಪಾಯವನ್ನು ಆಹ್ವಾನಿಸುತ್ತಿದ್ದ ಮೂರು ಮರಗಳನ್ನು ಕೊನೆಗೂ ಅರಣ್ಯ ಇಲಾಖೆ ತೆರವುಗೊಳಿಸಿದೆ. ಮರಗಳಿಂದ ಅಂಗನವಾಡಿಗೆ ಅಪಾಯವಿರುವ ಬಗ್ಗೆ NEWS DESK ವರದಿ ಮಾಡಿ ಅಧಿಕಾರಿಗಳ ಗಮನ ಸೆಳೆದಿತ್ತು. ಕಳೆದ ಅನೇಕ ದಿನಗಳಿಂದ ದೂರು ನೀಡಿದರೂ ಸ್ಪಂದನೆ ದೊರೆಯದೆ ಇರುವ ಬಗ್ಗೆ ಅಂಗನವಾಡಿ ಕೇಂದ್ರದ ಮಕ್ಕಳ ಪೋಷಕರು ಆತಂಕ ವ್ಯಕ್ತಪಡಿಸಿದ್ದರು. NEWS DESK ವರದಿಯಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಇಂದು ಮೂರು ಮರಗಳನ್ನು ತೆರವುಗೊಳಿಸಿತು. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸಹಕಾರ ನೀಡಿದರು.

Read More

ಮಡಿಕೇರಿ ಆ.1 : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 2023 ರ ಆಗಸ್ಟ್ ತಿಂಗಳಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇ.50 ರ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು. ಪುಸ್ತಕ ಪ್ರಿಯರು ಈ ಅವಕಾಶ ಬಳಸಿಕೊಳ್ಳಲು ಕೋರಿದೆ. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಸೌಲಭ್ಯ ದೊರೆಯಲಿದೆ. ಅಲ್ಲದೆ ಕನ್ನಡ ಪುಸ್ತಕ ಪ್ರಾಧಿಕಾರದ ಆನ್‍ಲೈನ್ www.kannadapustakapradhikara.com  (ನಮ್ಮ ಪುಸ್ತಕಗಳ ವಿಭಾಗ) ನಲ್ಲಿ ಕೂಡ ಈ ಶೇ.50 ರಿಯಾಯಿತಿ ಲಭ್ಯವಿದೆ. ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಎಲ್ಲಾ ಪ್ರಕಾರದ ಸಾಹಿತ್ಯ ಕೃತಿಗಳನ್ನು ಈವರೆಗೆ ಪ್ರಕಟಿಸುತ್ತಾ ಬಂದಿದೆ. ಇವುಗಳಲ್ಲಿ ವ್ಯಕ್ತಿ ಚಿತ್ರಗಳು, ನಾಟಕಗಳು, ಅಲೆಮಾರಿ ಸಮುದಾಯ, ವೈದ್ಯಕೀಯ, ಪ್ರಾಚೀನ ಕನ್ನಡ ಸಾಹಿತ್ಯ, ಜಾನಪದ, ಪರಿಸರ, ಕೃಷಿ ಹೀಗೆ…

Read More

ಮಡಿಕೇರಿ ಆ.1 : ಅರಣ್ಯ ಇಲಾಖೆ ವತಿಯಿಂದ ವೈಎಂಸಿಎ ಕೂರ್ಗ್ ಸಹಕಾರದಲ್ಲಿ ಶಾಂತಿ ಚರ್ಚ್ ಆವರಣದಲ್ಲಿ ವನಮಹೋತ್ಸವ ನಡೆಯಿತು. ಶಾಂತಿ ಚರ್ಚ್‍ನ ಗುರುಗಳಾದ ರೆವರೆಂಡ್ ಜೈಸನ್, ವೈಎಂಸಿಎ ಕೂರ್ಗ್ ಸಂಸ್ಥೆ ಅಧ್ಯಕ್ಷರಾದ ಕೆ.ಟಿ.ಬೇಬಿ ಮ್ಯಾಥ್ಯೂ ಗಿಡ ನೆಟ್ಟರು. ಬಳಿಕ ಮಾತನಾಡಿದ ಅವರು ಮರ ಗಿಡಗಳನ್ನು ಹೆಚ್ಚು ಬೆಳೆಸಿ ಪರಿಸರ ಸಂರಕ್ಷಿಸಬೇಕಿದೆ. ಶುದ್ಧ ಗಾಳಿ ಮತ್ತು ನೀರು, ಸ್ವಚ್ಚ ಪರಿಸರ ಪಡೆಯಲು ಮರಗಿಡಗಳು ಅಗತ್ಯ ಎಂದು ಹೇಳಿದರು. ವೈಎಂಸಿಎ ಕೂರ್ಗ್ ಸಂಸ್ಥೆಯ ಕಾರ್ಯದರ್ಶಿ ಅಗಸ್ತ್ಯನ್ ಜಯರಾಜ್, ಖಜಾಂಚಿ ರಿಚರ್ಡ್ ಉಲ್ಲಾಸ್, ಜಂಟಿ ಕಾರ್ಯದರ್ಶಿ ಜಾಯ್ಸ್ ಮೆನೇಜಸ್, ಶಾಮುವಲ್ ಜಯಕುಮಾರ್, ವಿನಯ್ ಜೋಯ್ಸ್ ಇತರರು ಇದ್ದರು.

Read More

ಮಡಿಕೇರಿ ಆ.1 : ಮಡಿಕೇರಿ ತಾಲೂಕಿನಲ್ಲಿರುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನೋಂದಣಿ ಮಾಡುವುದು ಕಡ್ಡಾಯವಾಗಿದೆ ಎಂದು ತಾಲ್ಲೂಕು ಕಾರ್ಮಿಕ ಅಧಿಕಾರಿ ಎಂ.ಎಂ.ಯತ್ನಟ್ಟಿ ತಿಳಿಸಿದ್ದಾರೆ. ಈಗಾಗಲೇ ತಮ್ಮ ಅಂಗಡಿ ಅಥವಾ ವಾಣಿಜ್ಯ ಸಂಸ್ಥೆಯನ್ನು ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡ ಸಂಸ್ಥೆಗಳನ್ನು ಹೊರತುಪಡಿಸಿ ನೋಂದಣಿಯಾಗದಿರುವ ಸಂಸ್ಥೆಗಳು 15 ದಿನಗಳೊಳಗೆ ಕರ್ನಾಟಕ ಸರ್ಕಾರದ ಇ-ಕಾರ್ಮಿಕ ತಂತ್ರಾಂಶದಲ್ಲಿ http://www.ekarmika.Karnataka.gov.in/ekarmika/static/home.aspx ನಿಗಧಿತ ಆನ್‍ಲೈನ್ ಮೂಲಕ ಶುಲ್ಕ ಮತ್ತು ಅವಶ್ಯಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಸಂಸ್ಥೆಗಳ ನೋಂದಣಿ ಪತ್ರ ಪಡೆಯುವಂತೆ ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ ಅವರು ಕೋರಿದ್ದಾರೆ. ಹಾಗೆಯೇ ತಮ್ಮ ಸಂಸ್ಥೆಯಲ್ಲಿ ಕೆಲಸಗಾರರು ಇಲ್ಲದಿದ್ದರೂ ಸಹ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961 ಹಾಗೂ ನಿಯಮಾವಳಿ 1963ರ ಕಲಂ.4(1) ಮತ್ತು (3) ಹಾಗೂ ನಿಯಮ 3 ರ ಮೇರೆಗೆ ಸಂಸ್ಥೆಯನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಮಾಡಿಸಿಕೊಳ್ಳಲು ತಪ್ಪಿದ ಸಂಸ್ಥೆಯ ಮಾಲೀಕರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕು…

Read More

ಮಡಿಕೇರಿ ಆ.1 : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 8 ಫಲಾನುಭವಿ ಆಧಾರಿತ ಯೋಜನೆಗಳನ್ನು ಸುವಿಧಾ ಯೋಜನೆ ಇವರಿಂದ ಡಿಬಿಟಿ (ನೇರ ನಗದು ವರ್ಗಾವಣೆ) ಆನ್‍ಲೈನ್ ವೇದಿಕೆ ತಂತ್ರಾಂಶದಡಿ ಅಳವಡಿಸಲಾಗಿದೆ. ಆದ್ದರಿಂದ ಮೆರಿಟ್ ವಿದ್ಯಾರ್ಥಿ ವೇತನಕ್ಕಾಗಿ ಬಹುಮಾನ ಹಣ, ಆಧಾರ ಯೋಜನೆ, ಮರಣ ಪರಿಹಾರ ನಿಧಿ, ವೈದ್ಯಕೀಯ ಪರಿಹಾರ ನಿಧಿ, ಪ್ರತಿಭೆ ಯೋಜನೆ, ಸಾಧನೆ ಯೋಜನೆ, ನಿರುದ್ಯೋಗ ಭತ್ಯೆ ಮತ್ತು ಶಿಶುಪಾಲನಾ ಭತ್ಯೆ ಈ 8 ಯೋಜನೆಗಳಿಗೆ 2023-24ನೇ ಸಾಲಿಗೆ ವಿಕಲಚೇತನ ಫಲಾನುಭವಿಗಳು ಆನ್‍ಲೈನ್ ಮೂಲಕ https://sevasindhu.karnataka.gov.in/Sevasindhu/DepartmentServices ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್, 31 ಕೊನೆಯ ದಿನವಾಗಿದೆ. ಇದರ ಪ್ರಯೋಜನವನ್ನು ಜಿಲ್ಲೆಯ ವಿಕಲಚೇತನರು ಪಡೆದುಕೊಳ್ಳಲು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಅವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಕಚೇರಿಯ ದೂ.ಸಂ.08272-295829 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವಿಮಲ ಅವರು ತಿಳಿಸಿದ್ದಾರೆ.

Read More

ಮಡಿಕೇರಿ ಆ.1 : ಜಿಲ್ಲೆಯಲ್ಲಿ ಕಳೆದ ಏಳು ತಿಂಗಳಲ್ಲಿ ಗಾಂಜಾ ಸಂಬಂಧಿಸಿದಂತೆ 61 ಪ್ರಕರಣಗಳು ದಾಖಲಾಗಿದ್ದು, 157 ಜನರ ಮೇಲೆ ಮೊಕದ್ದಮೆ ಹೂಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ವತಿಯಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನದ ಪ್ರಯುಕ್ತ ಮಂಗಳವಾರ ನಡೆದ ‘ವ್ಯಸನ ಮುಕ್ತ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ 36 ಕೆ.ಜಿ.ಯಷ್ಟು ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಸುಮಾರು 6 ಕಡೆಗಳಲ್ಲಿ ಗಾಂಜಾ ಬೆಳೆಯುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ಹಾಗೆಯೇ 99 ಗ್ರಾಂ ಎಂಡಿಎಂಎ(ಮೀಥೈಲ್ ಎಡಿಯಾಕ್ಸಿ ಮೆಥಾಂಫೆಟಮೈನ್) ಮತ್ತು 9 ಬ್ಲಾಕ್‍ಗಳಲ್ಲಿ ಸ್ಟ್ರಿಪ್ಸ್ ವಶಪಡಿಸಿಕೊಳ್ಳಲಾಗಿದೆ…

Read More

ಚೆಟ್ಟಳ್ಳಿ ಆ.1 :  ಗೋವಾದಲ್ಲಿ ನಡೆದ ರೈನ್ ಫಾರೆಸ್ಟ್ ಚಾಲೆಂಜ್ ಇಂಡಿಯಾ- 2023 ರ‍್ಯಾಲಿಯಲ್ಲಿ ಕೊಡಗಿನ ಅಮ್ಮತ್ತಿಯ ಉದ್ದಪಂಡ ಚೇತನ್ ಚಂಗಪ್ಪ ಓವರಾಲ್ ನಲ್ಲಿ ದ್ವಿತೀಯ ಹಾಗೂ ಕ್ಯಾಟಗರಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ದೆಹಲಿಯ ಕೂಗರ್ ಮೋಟರ್ಸ್ ವತಿಯಿಂದ  ದಕ್ಷಿಣಗೋವಾದಲ್ಲಿ ನಡೆದ ವಿಶ್ವದಲ್ಲೇ 5ನೇ ಕಠಿಣಕರ ಮೋಟಾರ್ ಕ್ರೀಡೆಯ ರ‍್ಯಾಲಿಯಲ್ಲಿ ಒಂದಾದ ಸಾಹಸಕ್ರೀಡಾ ಪ್ರತೀ ವರ್ಷ ಮಳೆಗಾಲದಲ್ಲಿ ಆಯೋಜಿಸುವ ರೈನ್ ಫಾರೆಸ್ಟ್ ಚಾಲೆಂಜ್ ಇಂಡಿಯಾ- 2023 ರ‍್ಯಾಲಿಯು ಒಟ್ಟು 26 ಕಠಿಣಕರ ಹಂತಗಳಿದ್ದು, ದಟ್ಟ ಕಾಡಿನೊಳಗೆ ಅತೀ ವೇಗದ ಚಾಲನೆಯಂದಿಂಡಿದು ಕೆಸರಿನೊಳಗೆ ಕಲ್ಲು ಇಳಿಜಾರು ತಿರಿವಿನ ರಸ್ತೆಗಳುತುಂಬಿ ಹರಿಯುವ ನದಿಯೊಳಗೆ ವಾಹನವನ್ನು ಚಾಕಚಕ್ಯತೆಯಿಂದ ನಡೆಸಿ ಮುಂದಿನ ಹಂತವನ್ನು ನಡೆಸಬೇಕಿತ್ತು. ಅರುಣಾಚಲಪ್ರದೇಶ, ಚಂಡಿಗಡ್, ದೆಹಲಿ, ಹೈದರ ಬಾದ್, ತೆಂಗಾಣ, ಗೋವಾ, ಕೇರಳ, ಕರ್ನಾಟಕದಿಂದ ಹಲವು ನುರಿತ ರ‍್ಯಾಲಿಪಟುಗಳು ಸೇರಿ ಆಫ್ ರೋಡ್ ರ‍್ಯಾಲಿಗೆ ಸಿದ್ದಗೊಂಡ 4*4 ನ ಒಟ್ಟು 21 ವಾಹನಗಳು ಭಾಗವಹಿಸಿದ್ದವು. ಕೇರಳದ ಕೋಟಾಯಂನ ಆನಂದ್ ಮಂಜುರನ್ ಡ್ರೈವರ್ ಹಾಗು ಕೋಡ್ರೈವರಾಗಿ…

Read More

ಚೆಯ್ಯಂಡಾಣೆ ಆ.1 :  ಕಡಂಗ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಮುಂದಿನ 5 ವರ್ಷದ ಅವಧಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೋಡಿರ ಎಂ.ತಮ್ಮಯ್ಯ ಹಾಗೂ ಉಪಾಧ್ಯಕ್ಷರಾಗಿ ನಂಬಿಯಪಂಡ.ಎ.ಅಯ್ಯಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಕೋಡಿರ.ಎಂ.ನಾಣಯ್ಯ, ಐತಿಚಂಡ ಪಿ.ಮಾದಯ್ಯ, ಪಾಂಡಂಡ.ಎಂ.ಸುಬ್ರಮಣಿ, ಮೇದುರ.ಎನ್.ಕುಶಾಲಪ್ಪ, ನೆಲ್ಲಚಂಡ.ಟಿ.ಕಿರಣ್ ಕಾರ್ಯಪ್ಪ,ಬೆಪುಡಿಯಂಡ.ಎಸ್.ಜಾನ್ಸಿ, ಕೆ.ಜೆ.ಶಾರದ, ಕೈಪಂಗಡ.ಕೆ.ಉತ್ತಪ್ಪ, ಸೊಮ್ಮಯ್ಯ.ಎಂ.ಎ, ಹೆಚ್.ಕೆ.ಗಂಗಮ್ಮ , ಐತಿಚಂಡ.ಕೆ. ವನಿತಾ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ರಿಟರ್ನಿಂಗ್ ಅಧಿಕಾರಿ ಬಿ.ಜಿ. ಸಂದೀಪ್ ಚುನಾವಣೆ ಪ್ರಕ್ರಿಯೆಯನ್ನು  ನಡೆಸಿಕೊಟ್ಟರು. ವರದಿ : ಅಶ್ರಫ್  

Read More

ಮಡಿಕೇರಿ ಆ.1 : ಭಾರತದ ವಿಭಿನ್ನ ಸ್ಥಾನಗಳಿಂದ ಈಶ್ವರೀಯ ಸೇವೆಯಲ್ಲಿ ಸಮರ್ಪಿತರಾಗಿರುವ ರಾಜಯೋಗಿ ಶಿಕ್ಷಕಿಯರು, ಕುಮಾರ ಕುಮಾರಿಯರು 50 ಜನರ ತಂಡ ತಮ್ಮ ತಮ್ಮ ಸ್ಥಾನಗಳ ಸಂಸ್ಕೃತಿಗಳ ಮಾಹಿತಿಗಳನ್ನು ರಷ್ಯಾದ ಸಹೋದರ ಸಹೋದರಿಯರಿಗೆ ಅರಿವು ಮೂಡಿಸಿದರು. ರಷ್ಯಾದ ಮಾಸ್ಕೋ ಮತ್ತು ಸೇಂಟ್ ಪೀಟರ್ಸ್ ಬರ್ಗ್  ಗೆ ಎರಡು ವಾರಗಳ ಪ್ರವಾಸ ಕೈಗೊಂಡ  ಬ್ರಹ್ಮಾಕುಮಾರೀಸ್ ಮಡಿಕೇರಿ ಶಾಖೆಯ ಬ್ರಹ್ಮಾಕುಮಾರಿ ಧನಲಕ್ಷ್ಮಿ ಅಕ್ಕನವರು ಹಾಗೂ  ರಾಜಯೋಗಿ ಶಿಕ್ಷಕಿಯರು, ಕುಮಾರ ಕುಮಾರಿಯರು ಅಲ್ಲಿಯ ಸಂಸ್ಕೃತಿ ಕಲೆಗಳ ಬಗ್ಗೆ ವಿಶೇಷ ಅನುಭವ  ಪಡೆದರು. ಮಡಿಕೇರಿ ಶಾಖೆಯ ಬ್ರಹ್ಮಾಕುಮಾರಿ ಧನಲಕ್ಷ್ಮಿ ಅಕ್ಕ ಮಾತನಾಡಿ, ಅಲ್ಲಿಯ ಜನರ ಕಲಾಭಿಮಾನ ಅಧ್ಯಾತ್ಮ ಪ್ರೀತಿ ಕೇಂದ್ರಗಳ ಸೇವಾ ಕಾರ್ಯಗಳು ವರ್ಣನಾತೀತ. ಭಾರತದ ಬಗ್ಗೆ ಇರುವ ಅಭಿಮಾನ ಪ್ರೀತಿ ಅವರ ಮಾತು ಸತ್ಕಾರಗಳಲ್ಲಿ ಅನುಭವವಾಗುತ್ತಿತ್ತು. ಹಿಂದಿ ಭಾಷೆ ಕಲಿತು ಮಾತನಾಡುವುದು, ಹಾಡುವುದು, ಭಾರತೀಯ ನೃತ್ಯಗಳು ಅಲ್ಲಿಯ ಸಹೋದರ ಸಹೋದರಿಯರು ಆತ್ಮೀಯತೆಯಿಂದ ಕಲಿತು ಎಲ್ಲರ ಮುಂದೆ ಪ್ರದರ್ಶಿಸಿದರು.  ಕಲೆಗೆ ದೇಶ ಭಾಷೆಗಳ ಬಂಧನವಿಲ್ಲ ಎಂಬ ಅರಿವು…

Read More

ಮಡಿಕೇರಿ ಆ.1 : ಮೈಸೂರಿನಲ್ಲಿ ಮಂಜುಶ್ರೀ ಮಾಜಿಕ್ ಸ್ಟೆಪ್ಸ್ ವತಿಯಿಂದ ನಡೆದ 35ನೇ ವರ್ಷದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ನಾಟ್ಯಕಲಾ ಡಾನ್ಸ್ ಸ್ಟುಡಿಯೋ ತಂಡ ಸೀನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ ಮತ್ತು ಸಬ್ ಜೂನಿಯರ್ ಕಪಲ್ ವಿಭಾಗದಲ್ಲಿ ತೃತೀಯ ಬಹುಮಾನ ಪಡೆದಿದೆ. ಡಿಜೆ ಡ್ಯಾನ್ಸ್ ಸ್ಟುಡಿಯೋ ವತಿಯಂದ ಹಾಸನದಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಗೆದ್ದುಕೊಂಡಿದೆ. ನೃತ್ಯ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಆರ್ಯನ್, ತೇಜಸ್, ಪ್ರವೀಣ್, ಕೀರ್ತನ್, ಶಿವ ಕುಮಾರ್, ಚಂದನ್, ಅಭಿನವ್, ಯಾನ ಶೆಟ್ಟಿ, ಜಾಹ್ನವಿ ಬೋಜಮ್ಮ, ಜನನಿ, ವೆನಿಷ, ತಶ್ಮಿತ, ಆಧ್ಯ ದೇಚಮ್ಮ, ವರ್ನಿಕ, ಪ್ರೇಕ್ಷಾ ಬಿ.ಆರ್, ಪ್ರೇಕ್ಷಾ ಎಂ.ಕೆ, ಐಶ್ವರ್ಯ ರೈ, ಪ್ರಜ್ಞಾ, ಕಿಷಿ ಕಾವೇರಮ್ಮ, ಚಾರ್ವಿತ, ಸಬ್ ಜೂನಿಯರ್ ಕಪಲ್ನಲ್ಲಿ ದಿಶಾ ಹಾಗೂ ಸಾನ್ವಿಕ ಪಾಲ್ಗೊಂಡಿದ್ದರು. ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋದ ನೃತ್ಯ ಸಂಯೋಜಕ ಅಭಿಷೇಕ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. 

Read More