ಸೋಮವಾರಪೇಟೆ ಆ.1 : ಕಾವ್ಯ ಲಲಿತ ಕಲೆ ಗಳಲ್ಲೊಂದು, ಇತರ ಕಲೆಗಳಿಗಿಂತ ಭಿನ್ನವಾಗಿ ಒಂದು ವೈಶಿಷ್ಟ ವನ್ನು ಪಡೆದುಕೊಂಡಿದೆ ಎಂದು ಪ್ರಾದ್ಯಪಕ, ಸಾಹಿತಿ, ಜಾನಪದ ವಿದ್ವಾಂಸ ಡಾ. ಮೋಹನ್ ಪಾಳೇಗಾರ್ ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಸಮಾಜದಲ್ಲಿ ನಡೆದ “ನೆಲ ಮುಗಿಲು” ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು. ಅನ್ಯ ಕಲೆಗಳಲ್ಲಿ ಒಂದಕ್ಕೊಂದು ಅದರದೆಯಾದ ಮಾದ್ಯಮವುಂಟು, ಕಾವ್ಯಕ್ಕೆ ಹಾಗೆ ಪ್ರತ್ಯೇಕವಾದ ಮಾಧ್ಯಮವಿಲ್ಲ ಕಾವ್ಯ ಸಾರ್ಥಕವಾಗಬೇಕಾದರೆ ಅದು ಓದುಗರ ಹೃದಯಕ್ಕೆ ಮುಖ ಮಾಡಿರಬೇಕು. ಅವರ ಹೃದಯವನ್ನು ಮುಟ್ಟಬೇಕು ತಟ್ಟಬೇಕು ಇಲ್ಲವಾದರೆ ಅಂತಹ ಕಾವ್ಯ ನಿರರ್ಥಕವಾಗುತ್ತದೆ. ಬಾಹ್ಯ ವಸ್ತುಗಳು ಕವಿಗೆ ಮುಖ್ಯವಲ್ಲ ಅವುಗಳು ನಿಮಿತ್ತ ಮಾತ್ರ, ಅವನು ತಾನು ಅನುಭವಿಸಿದಂತೆ ಚಿತ್ರಿಸಬೇಕು ಎಂದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಜಲಜಾ ಶೇಖರ್ ವಿರಚಿತ “ನೆಲಮುಗಿಲು ಕವನ ಸಂಕಲನ ಮೊದಲ ಪ್ರಯತ್ನದಲ್ಲೇ ಸದನ ಕದನ…
ಲೇಖಕ: admin
ನಾಪೋಕ್ಲು ಆ.1 : ನಾಪೋಕ್ಲು ಕೊಡವ ಸಮಾಜದ ಮೊಮ್ಮಕ್ಕಡ ಪರಿಷತ್ ವತಿಯಿಂದ ಆ.3ರಂದು ಮೂರನೇ ವರ್ಷದ ಕಕ್ಕಡ 18ರ ತೀನಿ ನಮ್ಮೆಯನ್ನು ಹಮ್ಮಿಕೊಳ್ಳಲಾಗಿದ್ದು, ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಭಾಂಗಣದಲ್ಲಿ ವಿವಿಧ ತಿನಿಸುಗಳ ಪ್ರದರ್ಶನ ಮತ್ತು ಪೈಪೋಟಿಯನ್ನು ಏರ್ಪಡಿಸಲಾಗಿದೆ ಎಂದು ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಮೂವೇರ ರೇಖಾ ಪ್ರಕಾಶ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಮಕ್ಕಳು ಹಳೆ ಕಾಲದ ತಿಂಡಿತಿನಿಸುಗಳನ್ನು ಮರೆಯುತ್ತಿದ್ದಾರೆ. ಅಂತಹ ತಿಂಡಿತಿನಿಸುಗಳು ಚರಿತ್ರೆಯಲ್ಲಿ ಮರೆತು ಹೋಗುವ ಸಾಧ್ಯತೆಇದೆ. ಅದನ್ನು ದಾಖಲಿಸುವ ಹಿನ್ನೆಲೆಯಲ್ಲಿ ಕಕ್ಕಡ 18ರ ತೀನಿ ನಮ್ಮೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ತೀನಿ ನಮ್ಮೆಯ ಪೈಪೋಟಿಯಲ್ಲಿ ಪ್ರದರ್ಶನಕ್ಕಿರಿಸುವ ತಿನಿಸುಗಳನ್ನು ತೀರ್ಪುಗಾರರು ಪರೀಕ್ಷಿಸಲಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಈ ಸಂದರ್ಭ ಸಾಧಕ ಮಹಿಳೆಯರನ್ನು ಗೌರವಿಸಲಾಗುವುದು ಎಂದರು. ಅಂದಿನ ಕಾರ್ಯಕ್ರಮವನ್ನು ಪರಿಷತ್ ಖಜಾಂಚಿ ಮೂವೇರ ಧರಣಿ ಗಣಪತಿ ಉದ್ಘಾಟಿಸಲಿದ್ದಾರೆ. ತಿನಿಸುಗಳ ಪ್ರದರ್ಶನವನ್ನು ನಿವೃತ್ತ ಪೋಸ್ಟ್ ಮಾಸ್ಟರ್ ಪೆಬ್ಬಾಟಂಡ ಪುಷ್ಪ ತಮ್ಮಯ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ…
ನಾಪೋಕ್ಲು ಆ.1 : ಕೊಡವ ಜನಾಂಗ ಪಕ್ಷಾತೀತವಾಗಿ ಒಗ್ಗೂಡಿ ಕೆಲಸ ನಿರ್ವಹಿಸಿದರೆ ಜಿಲ್ಲೆಯ ಪ್ರಗತಿ ಸಾಧ್ಯ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ನಾಪೋಕ್ಲು ಕೊಡವ ಸಮಾಜದ ಆಶ್ರಯದಲ್ಲಿರುವ ಕ್ರೀಡಾ ಸಾಂಸ್ಕೃತಿಕ ಮತ್ತು ಮನೋರಂಜನಾ ಕೂಟದ ವಾರ್ಷಿಕ ಒತ್ತೋರ್ಮೆ ಕೂಟದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಚುನಾವಣೆ ಅವಧಿಯಲ್ಲಿ ಪಕ್ಷಕ್ಕಾಗಿ, ಗೆಲುವಿಗಾಗಿ ಹೋರಾಟ ನಡೆಸುವುದು ಅನಿವಾರ್ಯ. ಬಳಿಕ ಸಾಮಾಜಿಕ ಸೇವೆಯಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸಿದರೆ ಎಲ್ಲರ ವಿಶ್ವಾಸಗಳಿಸಲು ಸಾಧ್ಯ ಎಂದರು. ಜನಾಂಗಗಳ ನಡುವೆ ದ್ವೇಷಸಾಧನೆ, ವೈಯಕ್ತಿಕ ಅವಹೇಳನ, ತೇಜೋವಧೆ ಮಾಡುವುದರಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಯುವ ಜನಾಂಗಕ್ಕೆ, ಮುಂದಿನ ಪೀಳಿಗೆಗೆ ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸಲು ವಿಫಲ ಅವಕಾಶ ಇದೆ. ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ನಾಪೋಕ್ಲುವಿನಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದ್ದು, ಜನ ಸಾಮಾನ್ಯರಿಗೆ ಮತ್ತಷ್ಟು ಅನುಕೂಲವಾಗುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗುವುದು. ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಲು ಬೇಡಿಕೆ ಇದ್ದು, ನಾಪೋಕ್ಲುವಿನಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ವಿಧಾನ…
ಮಡಿಕೇರಿ ಆ.1 : ಕೊಡಗು ಜಿಲ್ಲಾ ಪೊಲೀಸ್ ಘಟಕದ ವಿವಿಧ ಠಾಣೆ, ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಿ ಜು.31 ರಂದು ನಿವೃತ್ತಿ ಹೊಂದಿದ ಸಿಪಿಐ ಹೆಚ್.ಜೆ ಶಿವಶಂಕರ್, ಎಎಸ್‌ಐ ಟಿ.ಎಂ ಸುರೇಶ್, ಎಎಸ್‌ಐ ಕೆ.ಹೆಚ್ ಮೊಹಿದೀನ್ ಅವರನ್ನು ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ನಿವೃತ್ತರನ್ನು ಸನ್ಮಾನಿಸಿ ನಿವೃತ್ತ ಜೀವನ ಶುಭಪ್ರದವಾಗಿರಲೆಂದು ಹಾರೈಸಿದರು.
ಮಡಿಕೇರಿ ಆ.1 : ಓಂ ಯುವಕ ಸಂಘದ ಆಶ್ರಯದಲ್ಲಿ ಅರ್ವತೋಕ್ಲು ಅಪ್ಪಂಗಳದ ಶ್ರೀಪತಿ ಹೆಬ್ಬಾರ್ ಅವರ ಗದ್ದೆಯಲ್ಲಿ ನಡೆದ ಹಿಂದೂ ಕಪ್ ಕೆಸರುಗದ್ದೆ ಕ್ರೀಡಾಕೂಟದ ಸಮಾರಂಭದಲ್ಲಿ ಊರಿನ ಹಿರಿಯರು ಹಾಗೂ ದಾನಿಗಳಾದ ಶಂಕರ ನಾರಾಯಣ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಡಿಕೇರಿ ಆ.1 : ಕರಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನೂತನ ಘಟಕವನ್ನು ರಚಿಸಲಾಗಿದ್ದು, ವಿಶ್ವಹಿಂದೂ ಪರಿಷತ್ ಅಧ್ಯಕ್ಷರಾಗಿ ಜಯಪ್ರಕಾಶ್ ಗುಡ್ಡೆಮನೆ, ಬಜರಂಗದಳ ಸಂಚಾಲಕರಾಗಿ ವಿನೋದ್ ಕುಮಾರ್ ನೇಮಕಗೊಂಡಿದ್ದಾರೆ. ವಿಶ್ವಹಿಂದೂ ಪರಿಷತ್ ಕಾರ್ಯದರ್ಶಿಯಾಗಿ ಜಯಂತ್ ಪೆತ್ತಾಜೆ, ಬಜರಂಗದಳ ಸಹ ಸಂಚಾಲಕರಾಗಿ ರಕ್ಷಿತ್ ಕಂಡಿಗೆ, ವಿಶ್ವಹಿಂದೂ ಪರಿಷತ್ ಸೇವಾ ಪ್ರಮುಖ್ ಕೋಡಿ ಭಾರ್ಗವ ಜಯಪ್ರಕಾಶ್, ಸತ್ಸಂಗ ಪ್ರಮುಖ್ ರಾಜೇಶ್ ಚೆತ್ತುಕಾಯ, ಬಜರಂಗದಳ ಗೋರಕ್ಷಕ ಪ್ರಮುಖ್ ಪ್ರಸನ್ನ ಕುಮಾರ್, ಸುರಕ್ಷಾ ಪ್ರಮುಖ್ ದಿಲಿಪ್ ಕುಮಾರ್, ಅಖಾಡ ಪ್ರಮುಖ್ ಚೇತನ್ ಹುಲಿಮನೆ ಆಯ್ಕೆಯಾಗಿದ್ದಾರೆ. ಕರಿಕೆ ವಿಎಸ್‍ಎಸ್‍ಎನ್‍ಎಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮವನ್ನು ಹಿರಿಯರಾದ ಕೋಡಿ ಪೊನ್ನಪ್ಪ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ವಿಶ್ವಹಿಂದೂ ಪರಿಷತ್ತಿನ ಸುಳ್ಯ ತಾಲೂಕಿನ ಅಧ್ಯಕ್ಷ ಸೋಮಶೇಖರ್ ಪೈಕ ಕರಿಕೆಯ ನೂತನ ಪದಾಧಿಕಾರಿಗಳಿಗೆ ಶಾಲು ಹೊದಿಸಿ ಜವಾಬ್ದಾರಿ ನೀಡಿದರು. ಈ ಸಂದರ್ಭ ಸುಳ್ಯ ತಾಲೂಕಿನ ವಿಶ್ವ ಹಿಂದೂ ಪರಿಷತ್ ಸಹಕಾರ್ಯದರ್ಶಿ ಬಾನು ಪ್ರಕಾಶ್ ಪೆರುಮುಂಡ, ಸುಳ್ಯ…
ಮಡಿಕೇರಿ ಆ.1 : ಸಮಸ್ತ ಮದ್ರಸಾ ಅಧ್ಯಾಪಕರ ಒಕ್ಕೂಟದ ಎಸ್.ಕೆ.ಜೆ.ಎಂ.ಸಿ.ಸಿ ಕಾರ್ಯಯೋಜನೆಗಳ ಭಾಗವಾಗಿ ಕಲ್ಲುಗುಂಡಿ ಹಯಾತುಲ್ ಇಸ್ಲಾಂ ಮದ್ರಸಾ ಸಭಾಂಗಣದಲ್ಲಿ ಮುಅಲ್ಲಿಂ ಡೇ ವಿಶೇಷ ಕಾರ್ಯಕ್ರಮ ನಡೆಯಿತು. ಕಲ್ಲುಗುಂಡಿ ಜಮಾಅತ್ ಅಧ್ಯಕ್ಷ ಎಚ್.ಎ.ಅಬ್ಬಾಸ್ ಸಂಟ್ಯಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಹಯಾತುಲ್ ಇಸ್ಲಾಂ ಮದ್ರಸಾ ಸದರ್ ಮುಅಲ್ಲಿಂ ಇಬ್ರಾಹಿಂ ಫೈಝಿ ಮಾಡನ್ನೂರ್ ಉದ್ಘಾಟಿಸಿದರು. ಸ್ಥಳೀಯ ಖತೀಬ್ ಅಹ್ಮದ್ ನಈಂ ಫೈಝಿ ಮುಖ್ಯ ಭಾಷಣ ಮಾಡಿ , ಮುಅಲ್ಲಿಂ ಡೇ ಎಂಬುದು ಮದ್ರಸಗಳಲ್ಲಿ ನಿಸ್ವಾರ್ಥ ಭಾವದಿಂದ ಧಾರ್ಮಿಕ ಶಿಕ್ಷಣವನ್ನು ಬೋಧಿಸುತ್ತಿರುವ ಅಧ್ಯಾಪಕರನ್ನು ಗುರುತಿಸುವ ವಿಶೇಷ ದಿನವಾಗಿದೆ. ಮುಅಲ್ಲಿಮರು ಎಳೆಯ ಮಕ್ಕಳ ಮನಸ್ಸಿಗೆ ಧಾರ್ಮಿಕ ನೈತಿಕ ಮೌಲ್ಯಗಳನ್ನು ತುಂಬುವುದರ ಮೂಲಕ ಸುಸಂಸ್ಕೃತ ಸಮಾಜ ಕಟ್ಟಲು ಕಾರಣರಾಗಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ಅರ್ಹ ಗೌರವದಿಂದ ಕಾಣುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಮದ್ರಸಾ ಅಧ್ಯಾಪಕ ಇಬ್ರಾಹಿಂ ವಹಬಿ ಪೈಂಬಚ್ಚಾಲ್ , ಸಾಜಿದ್ ಅಝ್‌ಹರಿ ಪೇರಡ್ಕ, ಅಬ್ದುಲ್ ಹಮೀದ್ ಮುಸ್ಲಿಯಾರ್ ಕಲ್ಲುಗುಂಡಿ ಹಾಗೂ ಪೋಷಕರ ಪರವಾಗಿ ಎಚ್.ಎ ಅಶ್ರಫ್ ಬಾಲೆಂಬಿ…
ಮಡಿಕೇರಿ ಆ.1 : ಓಂ ಯುವಕ ಸಂಘದ ಆಶ್ರಯದಲ್ಲಿ ಎರಡನೇ ವರ್ಷದ ಹಿಂದೂ ಕಪ್ ಕೆಸರುಗದ್ದೆ ಕ್ರೀಡಾಕೂಟವು ಸಂಭ್ರಮದಿಂದ ನಡೆಯಿತು. ಅರ್ವತೋಕ್ಲು ಅಪ್ಪಂಗಳದ ಶ್ರೀಪತಿ ಹೆಬ್ಬಾರ್ ಅವರ ಗದ್ದೆಯಲ್ಲಿ ನಡೆದ ಕ್ರೀಡಾಕೂಟವನ್ನು ಊರಿನ ಹಿರಿಯರು ಹಾಗೂ ದಾನಿಗಳಾದ ಶಂಕರ ನಾರಾಯಣ ಭಟ್ ಉದ್ಘಾಟಿಸಿದರು. ಕ್ರಿಕೆಟ್, ಹಗ್ಗಜಗ್ಗಾಟ, ರಿಲೆ ಓಟದ ಸ್ಪರ್ಧೆಗಳಲ್ಲಿ ಹಿರಿಯರು ಹಾಗೂ ಕಿರಿಯರು ಮಿಂಚಿದರು. ಕ್ರಿಕೆಟ್‍ನಲ್ಲಿ ಎಂಸಿಬಿ ಮದೆನಾಡ್ ತಂಡ ಪ್ರಥಮ, ಭಗವತಿ ಬಿ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು. ಹಗ್ಗಜಗ್ಗಾಟದಲ್ಲಿ ಕಗ್ಗೋಡ್ಲು ಬಿ ತಂಡ ಪ್ರಥಮ, ಆದರ್ಶ ಸಂಪಾಜೆ ದ್ವಿತೀಯ ಸ್ಥಾನ ಪಡೆದುಕೊಂಡಿತು. ಇದಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ಥಳ ದಾನಿಗಳಾದ ಶ್ರೀಪತಿ ಹೆಬ್ಬಾರ್ ಹಾಗೂ ಬೆಪ್ಪುರನ ಭವಾನಿ ಸುಬ್ರಾಯ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಪಡಂಡ ಭೀಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾನಿಗಳು ಹಾಗೂ ಹಿರಿಯರಾದ ಶಂಕರ ನಾರಾಯಣ ಭಟ್, ಚರುಮಾಡಂಡ ಸತೀಶ್, ದಿನೇಶ್ ಕರುಂಬಯ್ಯ, ನೆಯ್ಯಣಿರ ಹೇಮಕುಮಾರ್, ಮೊಟ್ಟೆರ ಪಳಂಗಪ್ಪ ಹಾಜರಿದ್ದರು. ಸಮಾರೋಪ ಸಮಾರಂಭದಲ್ಲಿ ಭೀಮಯ್ಯ,…
ಮಡಿಕೇರಿ ಆ.1 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಅಹವಾಲು ಸ್ವೀಕರಿಸಿದರು. ಕುಶಾಲನಗರ ಪ್ರವಾಸಿ ಮಂದಿರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು ಹಾಗೂ ಆಯಾ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಅಹವಾಲು ಸ್ವೀಕರಿಸಿದರು. ಈ ಸಂದರ್ಭ ತಾಲ್ಲೂಕು ವ್ಯಾಪ್ತಿಯ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಶಾಸಕರಿಗೆ ವಿವರಿಸಿ, ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಅದೇ ಸಂದರ್ಭ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸಾರ್ವಜನಿಕರ ಸಮಸ್ಯೆಗೆ ತಕ್ಷಣವೇ ಸ್ಪಂದಿಸುವಂತೆ ಸೂಚಿಸಿದರು. ಮುಖಂಡರಾದ ವಿ.ಪಿ.ಶಶಿಧರ್, ಪ್ರಮೋದ್, ಮಂಜುನಾಥ್ ಗುಂಡುರಾವ್, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
ಮಡಿಕೇರಿ ಆ.1 : ಕೊಡಗು ಜಿಲ್ಲೆಗೆ ದೂರ ಸಂಪರ್ಕ ಕಲ್ಪಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ ಮತ್ತು ಐಟಿ ಖಾತೆಯ ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ನವದೆಹಲಿಯಲ್ಲಿ ಸಚಿವರನ್ನು ಭೇಟಿಯಾಗಿ, ರೈಲ್ವೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವಿ ಸಲ್ಲಿಸಿದರು. ನಂತರ ಭಾರತ ಸರ್ಕಾರದ 4ಜಿ ಸ್ಯಾಚುರೇಷನ್ ಯೋಜನೆ ಕಾರ್ಯಕ್ರಮದ ಅಡಿಯಲ್ಲಿ ಕೊಡಗು ಜಿಲ್ಲೆಯಲ್ಲಿ ದೂರ ಸಂಪರ್ಕ ಜಾಲವಿಲ್ಲದ ಗ್ರಾಮಗಳಿಗೆ ದೂರ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲು ಹೊಸದಾದ ಟವರ್‍ಗಳು ಹಾಗೂ ಅಗತ್ಯವಿರುವ ಬ್ಯಾಟರಿಗಳಿಗೆ ಅನುಮೋದನೆ ನೀಡುವಂತೆ ಬೇಡಿಕೆ ಮುಂದಿಟ್ಟರು. ಸಂಸದರ ಮನವಿಗೆ ಸಚಿವರು ಸಕಾರಾತ್ಮಕ ಭರವಸೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.






