ಮಡಿಕೇರಿ ಆ.1 : ಇತ್ತೀಚಿಗೆ ದೈವಾಧೀನರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಮೀನಾಕ್ಷಿ ಅವರಿಗೆ ಮಡಿಕೇರಿ ಬ್ರಹ್ಮಾಕುಮಾರೀಸ್ ಲೈಟ್‍ಹೌಸ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಲೈಟ್‍ಹೌಸ್ ಸಭಾಂಗಣದಲ್ಲಿ ಮೃತರ ಭಾವಚಿತ್ರಕ್ಕೆ ಅವರ ಸಹೋದರರು, ಬಂಧುಗಳು, ಬ್ರಹ್ಮಕುಮಾರ, ಕುಮಾರಿಯರು ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭ ರಾಜಯೋಗಿನಿ ಬ್ರಹ್ಮಾಕುಮಾರಿ ಗಾಯತ್ರಿ ಜೀ ಮಾತನಾಡಿ, ಕೊಡಗಿನ ಗೋಣಿಕೊಪ್ಪ ಸಮೀಪದ ಚಿಕ್ಕಮಂಡೂರಿನ ಕಳ್ಳಿಚಂಡ ಪರಿವಾರದ ಮೀನಾಕ್ಷಿ ಅವರು ತಮ್ಮ ಮೂಲಕ ಆಧ್ಯಾತ್ಮ ಮಾರ್ಗದಲ್ಲಿ ಸಾಗುವ ಸಂಕಲ್ಪ ಮಾಡಿದರು. 1978ರಲ್ಲಿ ಈಶ್ವರೀಯಜ್ಞಾನ ಪಡೆದು ನಂತರ 1980 ರಿಂದ ಸಮರ್ಪಿತರಾಗಿ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ 1993ರಿಂದ ಕೇರಳದ ಕಣ್ಣೂರು ಜಿಲ್ಲೆಯ ಜಿಲ್ಲಾ ಸಂಚಾಲಕರಾಗಿ 30 ವರ್ಷಗಳಿಂದ ಸೇವೆ ಮಾಡಿ ಅನೇಕರಿಗೆ ಮಾರ್ಗದರ್ಶನ ನೀಡಿ ಆಧ್ಯಾತ್ಮಿಕ ಪ್ರೇರಣೆ ತುಂಬಿ ಅನೇಕ ಸೇವಾ ಕೇಂದ್ರಗಳನ್ನು ತೆರೆದು ಅನೇಕರ ಜೀವನಕ್ಕೆ ಮಾರ್ಗದರ್ಶಕರಾದರು. ತಮ್ಮ 69 ವಯಸ್ಸಿನ ಹಿರಿಯ ಸಹೋದರಿಯವರು ಅನೇಕ ಕಾರ್ಯಕ್ರಮಗಳನ್ನು ನೀಡಿ ಜಿಲ್ಲೆಯಲ್ಲಿ ಯಶಸ್ವಿ ಸೇವೆ ಮಾಡಿದರು. ಕೊಡಗಿನ ಬಗ್ಗೆ ಅಪಾರ ಅಭಿಮಾನ…
ಲೇಖಕ: admin
ಮಡಿಕೇರಿ ಆ.1 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ನೂತನ ಜಿಲ್ಲಾಧ್ಯಕ್ಷರನ್ನಾಗಿ ಪಿ.ಎ.ಹನೀಫ್ ಅವರನ್ನು ಆಯ್ಕೆ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಲೀಲ್ ಭಾಷಾ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿರುವ ಉತ್ಸಾಹಿ ಯುವ ನಾಯಕ ಹನೀಫ್ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿರುವುದರಿಂದ ಜಿಲ್ಲೆಯಲ್ಲಿ ಪಕ್ಷ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನೂತನ ಅಧ್ಯಕ್ಷರು ಅಲ್ಪಸಂಖ್ಯಾತರ ಘಟಕದ ಎಲ್ಲಾ ವಿಭಾಗಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ, ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು. ಪಿ.ಎ.ಹನೀಫ್ ಅವರನ್ನು ಆಯ್ಕೆ ಮಾಡಿದ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಕೆ.ಅಬ್ದುಲ್ ಜಬ್ಬರ್ ಹಾಗೂ ಶಿಫಾರಸ್ಸು ಮಾಡಿದ ಜಿಲ್ಲೆಯ ಎಲ್ಲಾ ಮುಖಂಡರುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಖಲೀಲ್ ಭಾಷಾ ತಿಳಿಸಿದ್ದಾರೆ.
ಮಡಿಕೇರಿ ಆ.1 : ಮನೆಯ ಹಿಂಭಾಗದ ಬರೆ ಕುಸಿಯದಂತೆ ರಕ್ಷಣೆಗಾಗಿ ಪಂಚಾಯ್ತಿಯಿಂದ ನಿರ್ಮಿಸಿದ್ದ ತಡೆಗೋಡೆಯ ಮೇಲೆ ಜನ ಪ್ರತಿನಿಧಿಯೊಬ್ಬರು ಕಾಂಪೌಂಡ್ ವಾಲ್ ನಿರ್ಮಿಸುವ ಮೂಲಕ ಆತಂಕ ಸೃಷ್ಟಿಸಿದ್ದಾರೆಂದು ಸುಂಟಿಕೊಪ್ಪದ ಪಂಪ್ ಹೌಸ್ ಬಡಾವಣೆಯ ನಿವಾಸಿ ಜಿ.ಎನ್.ದಿನೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಪ್ ಹೌಸ್ ಬಡಾವಣೆಯಲ್ಲಿನ ತಮ್ಮ ಮನೆಯ ಹಿಂಭಾಗದ ಬರೆ ಕುಸಿಯದಂತೆ 2009 ರಲ್ಲಿ ಗ್ರಾಮ ಪಂಚಾಯ್ತಿಯಿಂದ ಸುಮಾರು 30 ಅಡಿ ಉದ್ದದ, 8 ಅಡಿ ಎತ್ತರದ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಈ ತಡೆಗೋಡೆಯ ಮೇಲ್ಭಾಗದಲ್ಲಿ ಸುಮಾರು ಮೂವತ್ತು ಅಡಿ ದೂರದಲ್ಲಿ ಪಂಚಾಯ್ತಿ ಜನಪ್ರತಿನಿಧಿಯೊಬ್ಬರ ಮನೆ ಇದೆ. ಈ ತಡೆಗೋಡೆಯ ಮೇಲೆ ಅನಧಿಕೃತವಾಗಿ ಕಾಂಪೌಂಡ್ ವಾಲ್ ನಿರ್ಮಿಸಿ ಮಣ್ಣು ತುಂಬಲಾಗಿದೆ ಎಂದು ಆರೋಪಿಸಿದರು. ಮಣ್ಣಿನ ಹೆಚ್ಚಿನ ಒತ್ತಡದಿಂದಾಗಿ ಹಳೆಯ ತಡೆಗೋಡೆಯ ಅಲ್ಲಲ್ಲಿ ಬಿರುಕುಗಳು ಮೂಡಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ತಡೆಗೋಡೆ ಕುಸಿದಲ್ಲಿ ನಮ್ಮ ಮನೆಗೆ ತೀವ್ರ ಹಾನಿ ಸಂಭವಿಸಲಿದೆ ಎಂದು ಬೇಸರ ವ್ಯಕ್ತಪಡಿಸಿದರು. 2022 ರ ಜ.24 ರಂದು…
ಮಡಿಕೇರಿ ಆ.1 : ನಗರದ ಸರಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ನಿವೃತ್ತ ಉಪ ಪ್ರಾಂಶುಪಾಲರಾದ ನಳಿನಿ ಪೂವಯ್ಯ ಅವರಿಗೆ ಶಾಲಾ ಅಭಿವೃದ್ಧಿ ಸಮಿತಿ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಶಾಲೆಯ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಮಿತಿಯ ಪ್ರಮುಖರು ಹಾಗೂ ಶಿಕ್ಷಕರು ನಳಿನಿ ಪೂವಯ್ಯ ಅವರನ್ನು ಸನ್ಮಾನಿಸಿ ಗೌರವಿಸಿದರು. ನಿವೃತ್ತ ಜೀವನ ಸುಖಕರವಾಗಿರಲೆಂದು ಶುಭ ಹಾರೈಸಿದರು. ಈ ಸಂದರ್ಭ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ಪಿ.ಚಂದ್ರಶೇಖರ್, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸೋಮವಾರಪೇಟೆ ಆ.1 : ನಿಡ್ತ ಮೀಸಲು ಅರಣ್ಯದಲ್ಲಿ ಶ್ರೀಗಂಧ ಮರವನ್ನು ಕಡಿದು, ಸಾಗಿಸಲು ಕೆತ್ತನೆ ಮಾಡುತ್ತಿದ್ದ ಸಂದರ್ಭ ದಾಳಿ ಮಾಡಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಬಸುರುಗುಪ್ಪೆ ಗ್ರಾಮದ ಎ.ಸಿ.ಯೋಗೇಶ್ ಬಂಧಿತ ಆರೋಪಿ. ಅರಣ್ಯದಲ್ಲಿ ಶ್ರೀಗಂಧ ಮರವನ್ನು ಬುಡ ಸಮೇತ ಕಡಿದು, 12 ತುಂಡುಗಳನ್ನಾಗಿ ಪರಿವರ್ತಿಸಿ ಸಾಗಿಸುವ ಪ್ರಯತ್ನದಲ್ಲಿದ್ದಾಗ ಬಂಧಿಸಲಾಗಿದೆ. ಎಸಿಎಫ್ ಎ.ಎ.ಗೋಪಾಲ್ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ವಲಯ ಆರ್‍ಎಫ್‍ಒ ಎಚ್.ಪಿ.ಚೇತನ್, ಡಿಆರ್‍ಎಫ್‍ಒ ಎಚ್.ಎಂ.ರಾಕೇಶ್, ಗಸ್ತುಪಾಲಕರಾದ ಪ್ರಸಾದ ಕುಮಾರ್, ಎ.ಎಸ್. ಸದಾನಂದ ಹಿಪ್ಪರಗಿ, ಅರಣ್ಯ ವೀಕ್ಷಕರಾದ ಪ್ರವೀಣ್, ಚೆಟ್ಟಿಯಪ್ಪ, ವಿಕಾಸ್, ಧರ್ಮ, ಉದಯ್ ಕುಮಾರ್, ವಾಹನ ಚಾಲಕ ಸಂತೋಷ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸೋಮವಾರಪೇಟೆ ಆ.1 : ಬೆಜೆಪಿ ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆಯಲು ಹಿರಿಯ ಮುತ್ಸದಿ ರಾಜಕಾರಣಿ ಬಿ.ಬಿ.ಶಿವಪ್ಪ ಕಾರಣ ಎಂದು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕ ಮಂಜು ಬಣ್ಣಿಸಿದರು. ಮಹಿಳಾ ಸಮಾಜದಲ್ಲಿ ಬಿ.ಬಿ.ಶಿವಪ್ಪ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ 6ನೇ ವರ್ಷದ ಪುಣ್ಯಸ್ಮರಣಾ ಕಾಯಕ್ರವiದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಶಿವಪ್ಪನವರು ತಮ್ಮ ಆಸ್ತಿ ಮಾರಾಟವಾದರೂ ಪರ್ವಾಗಿಲ್ಲ ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸುತ್ತೇನೆ ಎಂದು ಪಣ ತೊಟ್ಟು ಪಕ್ಷ ಸಂಘಟನೆಗೆ ಶ್ರಮಿಸಿದವರು. ಈಗ ರಾಜ್ಯದಲ್ಲಿ ಬಿಜೆಪಿ ಹೆಮ್ಮರವಾಗಿ ಬೆಳೆದಿದೆ. ಅವರು ಸಕಲೇಶಪುರದಲ್ಲಿಯೂ ಪಕ್ಷವನ್ನು ಸಂಘಟಿಸಿದರ ಫಲವಾಗಿ ನಾನು ಈ ದಿನ ಶಾಸಕನಾಗಲು ಸಾಧ್ಯವಾಗಿದೆ. ಇಂತಹ ಧೀಮಂತ ವ್ಯಕ್ತಿಯ ಪುಣ್ಯ ಸ್ಮರಣಾ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಮಟ್ಟದಲ್ಲಿ ಆಚರಿಸುವಂತಾಗಬೇಕೆಂದರು. ಮಾಜಿ ಸಚಿವ ಅಪ್ಪಚು ರಂಜನ್ ಮಾತನಾಡಿ, ಕರ್ನಾಟಕದ ಬಿಜೆಪಿಗೆ ಶಿವಪ್ಪ ಹಾಗೂ ಸುಶೀಲಮ್ಮ ಮಾತಾ-ಪಿತೃಗಳಿದ್ದಂತೆ. ಶಿವಪ್ಪನವರು ಯಾವತ್ತೂ ಅಧಿಕಾರಕ್ಕಾಗಿ ಪಕ್ಷ ಸಂಘದಸಿದವರಲ್ಲ. ಹಿಂದೆ 44 ಮಂದಿ ಬಿಜೆಪಿ ಶಾಸಕರಿದ್ದ ಸಂದರ್ಭ ಬಿ.ಬಿ.ಶಿವಪ್ಪರವರನ್ನು ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡುವಾಗ…
ಮಡಿಕೇರಿ ಆ.1 : ಉಡುಪಿಯ ಬನ್ನಂಜೆಯಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕಿಯರ ಹಾಸ್ಟೆಲ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದರು. ಈ ಸಂದರ್ಭ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿ, ಊಟ, ವಸತಿ ಸೇರಿದಂತೆ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.
ಮಡಿಕೇರಿ ಆ.1 : ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ಕಕ್ಕಡ ಪದ್‍ನೆಟ್ಟ್ ಆಚರಣೆ ಆ.3 ರಂದು ಅಖಿಲ ಕೊಡವ ಸಮಾಜದ ಕಟ್ಟಡದಲ್ಲಿ ನಡೆಯಲಿದೆ. ಈ ಕುರಿತು ಮಾಹಿತಿ ನೀಡಿರುವ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ, ಅಂದು ಬೆಳಗ್ಗೆ 10.30 ಗಂಟೆಗೆ ಕೂಟದ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಾಜಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಮಡಿಕೇರಿ ಅಕಾಶವಾಣಿ ಕೇಂದ್ರದಲ್ಲಿ 30 ವರ್ಷಗಳ ಕಾಲ ಉದ್ಘೋಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೂಪದಿರ ಶಾರದಾ ನಂಜಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಹ್ಮಣಿ, ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಹ್ಮಣಿ, ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಖಜಾಂಚಿ ಮಂಡೆಪಂಡ ಸುಗುಣ ಮುತ್ತಣ್ಣ ಹಾಗೂ ಪೊಮ್ಮಕ್ಕಡ ಕೂಟದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ರಾಣು ಅಪ್ಪಣ್ಣ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ…
ಮಡಿಕೇರಿ ಆ.1 : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಮಡಿಕೇರಿ ಕೊಡಗು ಗೌಡ ಯುವ ವೇದಿಕೆ ಹಾಗೂ ನರಿಯಂದಡ ಅಯ್ಯಪ್ಪ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಆ.13 ರಂದು ಪಾರಾಣೆಯಲ್ಲಿ ‘ಆಟಿ ಜಂಬರ-2023’ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಯ್ಯಪ್ಪ, ಯುವಕ ಸಂಘದ ಗೌರವ ಅಧ್ಯಕ್ಷ ತೋಟಂಬೈಲು ಅನಂತ ಕುಮಾರ್, ಅಂದು ಬೆಳಿಗ್ಗೆ 9 ಗಂಟೆಗೆ ಪಾರಾಣೆ ಗೌಡ ಸಮಾಜದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಪಾರಾಣೆ ಗೌಡ ಸಮಾಜದ ಅಧ್ಯಕ್ಷ ಮುಕ್ಕಾಟಿ ಕುಶಾಲಪ್ಪ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ನರಿಯಂದಡ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಬೆಳಿಯಂಡ್ರ ಹರಿಪ್ರಸಾದ್ ವಹಿಸಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ನರಿಯಂದಡ ಅಯ್ಯಪ್ಪ ಯುವಕ ಸಂಘದ ಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸೈನಿಕ ಬೆಳಿಯಂಡ್ರ ಲಕ್ಷ್ಮಣ್ ಪಾಲ್ಗೊಳ್ಳಲಿದ್ದು, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಗೌರವ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. ತೋಟಂಬೈಲ್ ಅನಂತ್‍ಕುಮಾರ್ ಅವರ ಒಕ್ಕಣೆ ನಂತರ ನಾಟಿ ನೆಡಲಾಗುವುದು. ನಂತರ ಬೆಳಿಗ್ಗೆ…
ಮಡಿಕೇರಿ ಆ.1 : ಪರಿಶುದ್ಧ ಉಮ್ರಾ ನಿರ್ವಹಿಸಲು ಕೊಡಗು ಜಿಲ್ಲೆಯಿಂದ ತೆರಳುತ್ತಿರುವ ಸುಮಾರು 50 ಕ್ಕೂ ಅಧಿಕ ಉಮ್ರ ಯಾತ್ರಾರ್ಥಿಗಳಿಗೆ ಸುಂಟಿಕೊಪ್ಪ ಎಸ್‍ಎಂಎಸ್ ಅರಬಿಕ್ ಕಾಲೇಜಿನ ವತಿಯಿಂದ ಉಮ್ರಾ ತರಬೇತಿ ಶಿಬಿರ ಮತ್ತು ಬೀಳ್ಕೊಡುಗೆ ಸಮಾರಂಭ ನಡೆಯಿತು. ಎಸ್‍ಎಂಎಸ್ ಸಂಸ್ಥೆಯ ಕಾರ್ಯದರ್ಶಿ ಸಿ.ಎಂ.ಹಮೀದ್ ಮುಸ್ಲಿಯಾರ್ ಮಾತನಾಡಿ ಎಸ್‍ಎಂಎಸ್ ಅರಬಿಕ್ ಕಾಲೇಜಿನ ಅಧ್ಯಕ್ಷರಾದ ಉಮ್ಮರ್ ಫೈಝಿ ಅವರ ನೇತೃತ್ವದಲ್ಲಿ ಸುಮಾರು 7 ವರ್ಷಗಳಿಂದ ನೂರಾರು ಮಂದಿಯನ್ನು ಪರಿಶುದ್ಧ ಮಕ್ಕಾಗೆ ಉಮ್ರ ನಿರ್ವಹಿಸಲು ಮತ್ತು ಪ್ರವಾದಿ ಮುಹಮ್ಮದ್ ಪೈಗಂಬರ ಅವರು ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಮದೀನಾ ಶರೀಫನ್ನು ಸಂದರ್ಶಿಸಲು ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಕೊಡಗು ಜಿಲ್ಲೆಯಿಂದ ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗಿ ಕರೆ ತರುವ ಕಾರ್ಯವನ್ನು ಉತ್ತಮ ರೀತಿಯಲ್ಲಿ ನಡೆಸುತ್ತಿದೆ ಎಂದರು. ಸಂಸ್ಥೆಯ ಮೂಲಕ ನಡೆಯುತ್ತಿರುವ ಈ ಯಾತ್ರೆ ಪಾರದರ್ಶಕ ಮತ್ತು ಅತ್ಯುತ್ತಮ ಸೇವೆಯಾಗಿ ಯಾತ್ರೆ ಕೈಗೊಂಡವರ ಪ್ರಶಂಸೆಗೆ ಪಾತ್ರವಾಗಿದೆ. ಮಕ್ಕ ಮದೀನದ ಎರಡು ಹರಮ್ ಶರೀಫುಗಳ ಅತಿ ಹತ್ತಿರವೇ ಯಾತ್ರಾರ್ಥಿಗಳಿಗೆ ವಸತಿಗಳನ್ನು ಒದಗಿಸಿಕೊಡಲಾಗುತ್ತಿದೆ. ಉಮ್ರ ತವಾಫ್…






