ಮಡಿಕೇರಿ ಮೇ 21 : ಭಾರೀ ಬಿರುಗಾಳಿ ಮಳೆಗೆ ಮನೆಗಳ ಮೇಲ್ಚಾವಣಿಗಳು ಹಾರಿ, ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ಹುಣುಸೂರು ತಾಲ್ಲೂಕು ವ್ಯಾಪ್ತಿಯಲ್ಲಿ ನಡೆದಿದೆ. ಹಲವು ಗ್ರಾಮಗಳಲ್ಲಿ 25ಕ್ಕೂ ಹೆಚ್ಚು ಮನೆಗಳ ಮೇಲ್ಚಾವಣಿ ಹಾರಿ ಹೋಗಿದೆ. ಮರಗಳು ಧರೆಗುರುಳಿವೆ, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಹನಗೋಡು ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಎಚ್.ಡಿ.ಕೋಟೆ ಹಾಗೂ ಹನಗೋಡು ಮುಖ್ಯ ರಸ್ತೆಯಲ್ಲಿ ಮರಗಳು ವಿದ್ಯುತ್ ಮಾರ್ಗದ ಮೇಲೆ ಬಿದ್ದಿದೆ. ಜೋಳದ ಬೆಳೆ ಮಳೆ ನೀರಿನಿಂದ ಆವೃತವಾಗಿದೆ. ಹುಣಸೂರು-ಎಚ್.ಡಿ.ಕೋಟೆ ಮುಖ್ಯರಸ್ತೆ ವ್ಯಾಪ್ತಿಯಲ್ಲೂ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ.
ಲೇಖಕ: admin
ಮಡಿಕೇರಿ ಮೇ 21 : ರಾಜ್ಯವ್ಯಾಪಿ ಸಿಡಿಲಿನಾರ್ಭಟದೊಂದಿಗೆ ಗಾಳಿ ಮಳೆಯಾಗುತ್ತಿದ್ದು, ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿರುವ ಘಟನೆ ಹುಣುಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯ ಮಂಟಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಹರೀಶ್ (42) ಎಂಬುವವರೇ ಮೃತ ದುರ್ದೈವಿ. ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಈ ಘಟನೆ ನಡೆದಿದೆ. ಗುಡುಗು, ಮಿಂಚು, ಗಾಳಿ ಸಹಿತ ಮಳೆ ಸುರಿಯುತ್ತಿದ್ದ ಕಾರಣ ಜಮೀನಿನಲ್ಲಿದ್ದ ಗುಡಿಸಲ ಬಳಿ ಆಶ್ರಯ ಪಡೆದಿದ್ದರು. ಈ ವೇಳೆ ಸಿಡುಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಾಸಕ ಜಿ.ಡಿ.ಹರೀಶ್‌ಗೌಡ ಭೇಟಿ ನೀಡಿ ಸಾಂತ್ವನ ಹೇಳಿದರು.
ಮಡಿಕೇರಿ ಮೇ 21 : ಗರ್ಭಿಣಿ ಕಾಡಾನೆಯೊಂದನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಕುಶಾಲನಗರ ತಾಲ್ಲೂಕು ಗುಡ್ಡೆಹೊಸೂರು ಗ್ರಾಮದ ಬಾಳುಗೋಡು ಎಂಬಲ್ಲಿ ನಡೆದಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 18 ರಿಂದ 20 ವರ್ಷದ ಹೆಣ್ಣಾನೆಗೆ ಎರಡು ಗುಂಡು ತಗುಲಿದೆ ಎಂದು ಹೇಳಲಾಗಿದ್ದು, ಆನೆ ಸ್ಥಳದಲ್ಲೇ ಮೃತಪಟ್ಟಿದೆ. ಭಾನುವಾರ ಬೆಳಗ್ಗೆ ಅಧಿಕಾರಿಗಳು ಸ್ಥಳ ಮಹಜರು ನಡೆಸುತ್ತಿದ್ದ ಸಂದರ್ಭ ಕಾಡಾನೆ ಮೃತಪಟ್ಟ ಸ್ಥಳದಿಂದ ಅನತಿ ದೂರದಲ್ಲಿ ಖಾಲಿ ತೋಟಾಗಳು ಪತ್ತೆಯಾಗಿದೆ. ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆಸಲಾಗಿದೆ. ಘಟನಾ ಸ್ಥಳಕ್ಕೆ ಮಡಿಕೇರಿ ಡಿಸಿಎಫ್ ಶಿವರಾಮ್ ಬಾಬು, ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಮ್, ಉಪವಲಯ ಅರಣ್ಯಾಧಿಕಾರಿಗಳ ಅನಿಲ್ ಡಿಸೋಜ, ದೇವಯ್ಯ, ರಂಜನ್ ಹಾಗೂ ಆರ್.ಆರ್.ಟಿ ಸಿಬ್ಬಂದಿಗಳು ಭೇಟಿ ನೀಡಿ ಮಹಜರು ನಡೆಸಿದರು.
ಮಡಿಕೇರಿ ಮೇ 21 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಡಾ.ಮಂತರ್ ಗೌಡ ಅವರು ಆಯ್ಕೆಯಾಗಿರುವುದು ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆ ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ರಕ್ತದಾನ ಶಿಬಿರ ನಡೆಯಿತು. ನಗರದ ಜಿಲ್ಲಾಸ್ಪತ್ರೆಯಲ್ಲಿ ಪಕ್ಷದ ನಗರಾಧ್ಯಕ್ಷ ಬಿ.ವೈ.ರಾಜೇಶ್ ಅವರ ಮಾರ್ಗದರ್ಶನದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಎಂ.ಜಿ ಅವರ ನೇತೃತ್ವದಲ್ಲಿ ರಕ್ತದಾನ ಮಾಡಿದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಪ್ರಮೋದ್ ಮಾತನಾಡಿ ಜನಪರವಾಗಿರುವ ಕಾಂಗ್ರೆಸ್ ಸರ್ಕಾರದಿಂದ ಕೊಡಗು ಜಿಲ್ಲೆ ಅಭಿವೃದ್ಧಿಯಾಗಲಿದೆ. ಅಲ್ಲದೆ ನೂತನ ಶಾಸಕ ಡಾ.ಮಂತರ್ ಗೌಡ ಅವರು ಮಡಿಕೇರಿ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಪೋಕ್ಲು ಮೇ 21 : ಇಂದು ನಾಪೋಕ್ಲಿನಲ್ಲಿ 21ನೇ ಕೌಟುಂಬಿಕ ಕ್ರಿಕೆಟ್ ಹಬ್ಬವು ಮುಕ್ತಾಯವಾಯಿತು. ಈ ವರ್ಣರಂಜಿತ ಕ್ರಿಕೆಟ್ ಫೈನಲ್ ನಲ್ಲಿ ಹಲವು ದಾಖಲೆಗಳು ನಿರ್ಮಾಣವಾದವು. ಹಾಕಿಯ ನಕ್ಷತ್ರಗಳಾದ 1975ನೇ ಹಾಕಿ ವಿಶ್ವಕಪ್ ನ ಚಿನ್ನ ಗೆದ್ದ ಅಸ್ಲಾಂ ಶೇರ್ ಖಾನ್, ಅರ್ಚರಣ್ ಸಿಂಗ್, ವಿ.ಜೆ.ಫಿಲಿಪ್ಸ್, ಗೋವಿಂದ, ಕಾಳಯ್ಯ ಹಾಗೂ ಒಲಂಪಿಯನ್ ಎಂ.ಎಂ.ಸೋಮಯ್ಯ ಅವರ ಸಮ್ಮುಖದಲ್ಲಿ ಇಂದೆಂದೂ ಕಂಡು-ಕೇಳರಿಯದ ಬಹಳ ಉತ್ತಮ ಮಟ್ಟದ ಪಂದ್ಯಾವಳಿಯು ನಡೆಯಿತು. ಬಹಳಷ್ಟು ಕ್ರೀಡಾ ಪ್ರೇಮಿಗಳು ಹಾಕಿ ದಿಗ್ಗಜರನ್ನು ನೋಡಲು ತುದಿಗಾಲಿನಲ್ಲಿ ನಿಂತಿದ್ದರು. ಅವರೊಂದಿಗೆ ಸೆಲ್ಫಿ ಹಾಗೂ ಫೋಟೋ ತೆಗೆಯಲು ಕಾತರರಾಗಿದ್ದರು. ಅದ್ಭುತವಾದ ತಾಂತ್ರಿಕ ಸಮಿತಿ, ಒಳ್ಳೆಯ ವೀಕ್ಷಕ ವಿವರಣೆ ಹಾಗೂ ವೇದಿಕೆ ತುಂಬಿದ ಟ್ರೋಫಿಗಳು ನೋಡುವವರ ಕಣ್ಣು ಕುಕ್ಕುವಂತಿತ್ತು. ಇದೆಲ್ಲವೂ ಬಾಳೆಯಡ ಕುಟುಂಬದಲ್ಲಿ ಇಂದು ನಡೆಯಿತು. ಯಾವುದಕ್ಕೂ ಕಪ್ಪು ಚುಕ್ಕೆ ಬಾರದಂತೆ ಸಂಘಟನೆಗಾರರು ಶಿಸ್ತು ಬದ್ಧರಾಗಿದ್ದರು. ಪ್ರತಿಯೊಬ್ಬರಿಗೂ ಕಿರು ಕಾಣಿಕೆಯನ್ನು ಕೊಟ್ಟು ತಮ್ಮ ಗೌರವವನ್ನು ವ್ಯಕ್ತಪಡಿಸಿದರು. ಕ್ರಿಕೆಟ್ ಹಬ್ಬದಲ್ಲಿ ಮುಖ್ಯ ಅತಿಥಿಗಳು ಎಲ್ಲರ ಮನ ಗೆದ್ದರು.ಅವರು …
ಮಡಿಕೇರಿ ಮೇ 21 : ನಗರದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ನಾಗ ಪ್ರತಿಷ್ಠಾಪನಾ ಮಹೋತ್ಸವ, ನಾಗದರ್ಶನ, ಪಾಷಾಣಮೂರ್ತಿ ದೈವದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ದೈವ ಕೋಲವು ಮೇ 22 ರಿಂದ ಆರಂಭಗೊಳ್ಳಲಿದೆ. ಪಯ್ಯನ್ನೂರ್ ಆಚಾರ್ಯ ಈಶ್ವರನ್ ನಂಬೂದರಿ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ. ಮೇ 22 ರಂದು ಸಂಜೆ 6 ಗಂಟೆಗೆ ಆಚಾರ್ಯ ವರಣಂ, ಪುಣ್ಯಹ ಶುದ್ಧಿ, ಸುದರ್ಶನ ಹೋಮ, ದೇವಿ ಪೂಜೆ, ಲಲಿತಾ ಸಹಸ್ರನಾಮಾರ್ಚನೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಮೇ 23 ರಂದು ಬೆಳಿಗ್ಗೆ 6 ಗಂಟೆಯಿಂದ ಮಹಾಗಣಪತಿ ಹೋಮ, ನವಕ ಪಂಚಗವ್ಯ, ಕಳಸ ಪೂಜೆ, ಕಳಶಾಭಿಷೇಕ, ಸರ್ವಾಲಂಕಾರ, ಮಹಾಪೂಜೆ ಹಾಗೂ ಪಾಷಾಣಮೂರ್ತಿ ದೈವದ ಕಳಸ ಪೂಜೆ, ಅಲಂಕಾರ ಪೂಜೆ ಮತ್ತು ಮಂಗಳಾರತಿ ನಡೆಯಲಿದೆ. ::: ನಾಗದರ್ಶನ ::: ಬೆಳಿಗ್ಗೆ 8 ಗಂಟೆಗೆ ಆಶ್ಲೇಷ ಬಲಿ, ನಾಗಪೂಜೆ, ಕ್ಷೀರಾಭೀಷೇಕ ನಡೆಯಲಿದ್ದು, ಪೂವಾಹ್ನ 11 ಗಂಟೆಗೆ ನಾಗದರ್ಶನ,…
Dear all, We have upcoming Mega Udyoga Mela at Madikeri(Coorg) 26th may 2023 Friday. Requesting everyone to refer our post in friend’s circle, social media and what’s app group and status. Click here for location: https://g.co/kgs/q7K8vq Click here for Job Registration: https://forms.gle/TVFcFYGhkFo5jVSd6 Contact Person: – Surya (HR) Contact Number: – 9845378454 Regards, HR Department
ಮಡಿಕೇರಿ ಮೇ 20 : ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ವತಿಯಿಂದ ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿಗಳಾದ ಕೆ.ಎ. ಸಬಿತ ಅಡುಗೆ ಸಹಾಯಕಿ ಮತ್ತು ಅನಿಲ್ ಎಲೆಕ್ಟ್ರಿಷಿಯನ್ ಅವರನ್ನು ಜೆಸಿಐ ಅಧ್ಯಕ್ಷೆ ಎಂ.ಎ.ರುಬೀನಾ ಎಂ.ಎ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶಿವಪ್ರಸಾದ್, ಸರ್ಜನ್ ಡಾ. ಸತೀಶ್, ಗುತ್ತಿಗೆದಾರರು ಚಿಂತು, ನಿಕಟ ಪೂರ್ವ ಅಧ್ಯಕ್ಷ ಪ್ರಕಾಶ್ ಕೆ.ಎ., ಅಶೋಕ್, ಲಕ್ಷ್ಮೀಕುಮಾರ್, ರೇಶ್ಮಾವತಿ, ಆಸ್ಪತ್ರೆಯ ಸಿಬ್ಬಂದಿ ತಸ್ಮಿಯಾ ಮತ್ತು ಭವ್ಯ ಉಪಸ್ಥಿತರಿದ್ದರು.
ಸೋಮವಾರಪೇಟೆ ಮೇ 20 : ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತ ಹಾಗೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಂಭ್ರಮಾಚರಣೆ ನಡೆಯಿತು. ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿದರು ಸಂಭ್ರಮಿಸಿದರು. ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ನಗರ ಘಟಕದ ಅಧ್ಯಕ್ಷ ಎಚ್.ಎ. ನಾಗರಾಜು, ಪಕ್ಷದ ಪ್ರಮುಖರಾದ ಈಶ್ವರಚಂದ್ರ ವಿದ್ಯಾಸಾಗರ್, ಎಚ್.ಸಿ. ನಾಗೇಶ್, ಮಂಜುನಾಥ್, ಇಂದ್ರೇಶ್, ಕೆ.ಎ.ಪ್ರಕಾಶ್, ಕುಸುಬೂರು ಉಲ್ಲಾಸ್, ಶಶಿಕಲಾ ಚೌಟ, ಮೀನಾ ಕುಮಾರಿ, ಆನಂದ, ಸಂದ್ಯಾ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.
ಮಡಿಕೇರಿ ಮೇ 20: ಈ ಬಾರಿಯ ಮಳೆಗಾಲದಲ್ಲಿ ಕೊಡಗು ಮತ್ತು ಕೇರಳ ಪ್ರಾಂತ್ಯದಲ್ಲಿ ಪ್ರವಾಹ ಅಥವಾ ಭೂಕುಸಿತ ಆತಂಕ ಇರುವುದಿಲ್ಲ ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಇಲಾಖೆಯ ನಿವೃತ್ತ ಉಪ ಮಹಾನಿರ್ದೇಶಕ ಡಾ. ಹೆಚ್ ಎಸ್ ಎಂ ಪ್ರಕಾಶ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಮುನ್ಸೂಚನೆ ಮಾಹಿತಿ ನೀಡಿದ್ದು, 2023ನೇ ವರ್ಷದ ಮುಂಗಾರು ಅವಧಿಯ ಮಳೆ ವಿಷಯದಲ್ಲಿ ಮೀಟಿಯೋರಲಜಿ ಅಧ್ಯಯನ ಆಧಾರದ ಮೇಲೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಬಾರಿ ಸಾಮಾನ್ಯ ಮುಂಗಾರು ಗಿಂತಲೂ ಕಡಿಮೆ ಮಳೆ ಬೀಳುವ ಸಾಧ್ಯತೆ ಇದೆ. ಭಾರತದ ಸುತ್ತಮುತ್ತಲು ಇರುವ ನೆಲದ ಮೇಲಿನ ಹಾಗೂ ಸಮುದ್ರದ ಒಳಗಿನ ಹಲವಾರು ದೊಡ್ಡ ಪ್ರಮಾಣದ ಜ್ವಾಲಾಮುಖಿಗಳು ಸದ್ಯದಲ್ಲಿ ನಿಷ್ಕ್ರಿಯವಾಗಿವೆ. ಇದರಿಂದ ಆವಿಯ ಮೂಲಗಳು ಸ್ಥಗಿತವಾಗಿವೆ. 2017 ರಿಂದ 3 ವರ್ಷಗಳ ಅವಧಿಯಲ್ಲಿ ಇವುಗಳು ಅತಿ ಹೆಚ್ಚಿನ ಮಟ್ಟದಲ್ಲಿ ಸಕ್ರಿಯವಾಗಿದ್ದವು ಎಂದು ತಿಳಿಸಿದ್ದಾರೆ. ಸದ್ಯದ ಮಟ್ಟಿನಲ್ಲಿ ಇವುಗಳು ಸಕ್ರಿಯವಾಗುವ ಮುನ್ಸೂಚನೆಗಳು ಕಂಡು ಬರುತ್ತಿಲ್ಲ. ಅದೇ ರೀತಿಯಲ್ಲಿ ಜಾಗತಿಕ ಮಟ್ಟದ…






