ಮಡಿಕೇರಿ ಜು.31 : ಅಬ್ಬರದ ಮಳೆ… ನಡು ನಡುವೆ ಅಲ್ಪ ಬಿಸಿಲು… ಮೈ ತಾಕುತ್ತಿದ್ದ ತಂಗಾಳಿ… ಕುಗ್ಗದ ಉತ್ಸಾಹದಲ್ಲಿ ಆಡಿ ನಲಿದು ಸಂಭ್ರಮಿಸುತ್ತಾ, ಹಿಂದಿನ ಪರಂಪರೆಯ ಬಗ್ಗೆ ಇಂದಿನ ಪೀಳಿಗೆಗೆ ತಿಳುವಳಿಕೆ ಮೂಡಿಸುವಲ್ಲಿ ಗಾಳಿಬೀಡುವಿನಲ್ಲಿ ನಡೆದ ಬಂಟ ಸಮುದಾಯದವರ ‘ಆಟಿಡೊಂಜಿ ದಿನ ಕೆಸರ್ದ ಗೊಬ್ಬು’ ಕಾರ್ಯಕ್ರಮ ಯಶಸ್ವಿಯಾಯಿತು. ಗಾಳಿಬೀಡುವಿನ ಕೃಷಿಕ ಹೊರಮಲೆ ಶಿವಪ್ರಸಾದ್ ರೈ ಅವರ ಭತ್ತದ ಗದ್ದೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಯುವಕರು, ಮಹಿಳೆಯರು, ಮಕ್ಕಳು, ಹಿರಿಯರು ಎಲ್ಲರೂ ವಯಸ್ಸಿನ ಅಂತರದ ಅಂಜಿಕೆಯಿಲ್ಲದೆ ಆಡಿ ನಲಿದು ಸಂಭ್ರಮಿಸಿದರು. ಕೆಸರು ಗದ್ದೆಯಲ್ಲಿ ಮನರಂಜನೆಗಾಗಿ ಹ್ಯಾಂಡ್ ಬಾಲ್, ಹಗ್ಗ ಜಗ್ಗಾಟ, ಓಟ, ಮುಂತಾದ ಸ್ಪರ್ಧೆಗಳು ನಡೆದವು. ಆಕರ್ಷಕವಾಗಿ ವಿನ್ಯಾಸಗೊಂಡಿದ್ದ ಮುಖ್ಯ ವೇದಿಕೆ ‘ಹೊರಮಲೆ ಚಾವಡಿ’ಯಲ್ಲಿ ಸಾಂಪ್ರದಾಯಿಕ ಬದುಕಿನ ಚಿತ್ರಣವನ್ನು ತಿಳಿಸುವ ಪ್ರಯತ್ನವಾಯಿತು. ಇಂಥದ್ದೊಂದು ಅಪರೂಪದ ಕಾರ್ಯಕ್ರಮಕ್ಕೆ ವೇದಿಕೆ ಒದಗಿಸಿದ್ದು ಕೊಡಗು ಜಿಲ್ಲಾ ಯುವ ಬಂಟ್ಸ್ ಅಸೋಸಿಯೇಷನ್. ಕೊಡಗು ಜಿಲ್ಲಾ ಬಂಟರ ಸಂಘ, ಮಡಿಕೇರಿ ನಗರ ಬಂಟರ ಮಹಿಳಾ ಘಟಕ, ಗಾಳಿಬೀಡು…
ಲೇಖಕ: admin
ಮಡಿಕೇರಿ ಜು.31 : ಕಳೆದ 30 ವರ್ಷಗಳಿಂದ ಮಡಿಕೇರಿ ಆಕಾಶವಾಣಿಯ ಉದ್ಘೋಷಕಿಯಾಗಿ ಕಾರ್ಯನಿರ್ವಹಿಸಿ ಕೇಳುಗರ ಮೆಚ್ಚುಗೆಗೆ ಪಾತ್ರರಾಗಿದ್ದ ಮತ್ತು ತಮ್ಮದೇ ಆದ ಅಭಿಮಾನಿ ವೃಂದವನ್ನು ಹೊಂದಿದ್ದ ಕೂಪದಿರ ಶಾರದ ನಂಜಪ್ಪ ಅವರನ್ನು ಮುಕ್ಕೋಡ್ಲುವಿನ ವ್ಯಾಲಿ ಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಸಂಘಟನೆ ವಿಭಿನ್ನ ಹಾಗೂ ಸಂಭ್ರಮದಿಂದ ಬೀಳ್ಕೊಟ್ಟಿತು. ಅಸೋಸಿಯೇಷನ್ ಅಧ್ಯಕ್ಷ ಹಂಚೆಟ್ಟಿರ ಮನುಮುದ್ದಪ್ಪ ಹಾಗೂ ಸಂಗಡಿಗರು ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು, ದುಡಿಕೊಟ್ಟು ಹಾಡಿನೊಂದಿಗೆ ಆಕಾಶವಾಣಿ ನಿಲಯದ ದ್ವಾರದವರೆಗೆ ಮೆರವಣಿಗೆ ಮೂಲಕ ಶಾರದ ನಂಜಪ್ಪ ಅವರನ್ನು ಕರೆತಂದು ಬೀಳ್ಕೊಟ್ಟರು. ಈ ಸಂದರ್ಭ ಮಾತನಾಡಿದ ಶಾರದ ನಂಜಪ್ಪ, ಕಳೆದ 30 ವರ್ಷಗಳಿಂದ ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿ, ಪರಂಪರೆ ಸೇರಿದಂತೆ ವಿವಿಧ ವಿಭಿನ್ನ ಕಾರ್ಯಕ್ರಮಗಳನ್ನು ನಿರೂಪಿಸಿರುವುದು ತೃಪ್ತಿ ತಂದಿದೆ. ಎಲ್ಲಾ ವರ್ಗದ ಜನ ಹಾಗೂ ಆಕಾಶವಾಣಿಯ ಸಿಬ್ಬಂದಿಗಳು ನನ್ನನ್ನು ಅಭಿಮಾನದಿಂದ ಕಾಣುತ್ತಿರುವುದನ್ನು ಕಂಡು ಹೃದಯ ತುಂಬಿ ಬಂದಿದೆ. ಈ ರೀತಿಯ ಬೀಳ್ಕೊಡುಗೆಯ ಕ್ಷಣ ಸಂತಸ ತಂದಿದ್ದು, ಅಭಿಮಾನ ತೋರಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುವುದಾಗಿ…
ಮಡಿಕೇರಿ ಜು.31 : ಕೊಡಗು ಜಿಲ್ಲಾ ಕುಲಾಲ ಕುಂಬಾರ ಯುವ ಘಟಕದ ನೂತನ ಸಮಿತಿಯನ್ನು ರಚಿಸಲಾಯಿತು. ನಗರದ ವ್ಯಾಂಡಮ್ ಎಂಟರ್‌ಪ್ರೈಸಸ್ ಸಂಸ್ಥೆಯ ಸಭಾಂಗಣದಲ್ಲಿ ಸರ್ವಾನುಮತದಿಂದ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಚಂದ್ರಶೇಖರ್ ಕುಲಾಲ್ , ಗೌರವ ಸಲಹೆಗಾರರಾಗಿ ಶ್ರೀ ಕುಶಾಲಪ್ಪ, ಲಯನ್ ದಾಮೋದರ, ನಾರಾಯಣ ಮೂಲ್ಯ, ಉಪಾಧ್ಯಕ್ಷರಾಗಿ ಅಶ್ವಥ್, ಜಯಪ್ರಕಾಶ್, ಪ್ರಧಾನಕಾರ್ಯದರ್ಶಿಯಾಗಿ ಪವನ್ ಕುಲಾಲ್, ಸಹ ಕಾರ್ಯದರ್ಶಿಯಾಗಿ ಅರುಣ್ ಕುಲಾಲ್ , ಉದಯ್ ಕುಲಾಲ್ ಆಯ್ಕೆಯಾದರು. ಖಜಾಂಚಿಯಾಗಿ ಸುರೇಶ್, ಕ್ರೀಡಾ ಕಾರ್ಯದರ್ಶಿಯಾಗಿ ಹರೀಶ್, ಲೋಕೇಶ್, ಕ್ರೀಡಾ ಸಹ ಕಾರ್ಯದರ್ಶಿ ಗಳಾಗಿ ಮಂಜುನಾಥ, ದಯಾನಂದ್, ಶೃತಿಕಾ, ಕೌಶಿಕ್ , ಶರಣು, ರಂಜನ್ ಕುಲಾಲ್ ಪುರುಷೋತ್ತಮ್, ಸಂಘಟನಾ ಕಾರ್ಯದರ್ಶಿ ಗಳಾಗಿ ಗಿರೀಶ್ ಕುಲಾಲ್ , ದಿನೇಶ್ ಕುಲಾಲ್, ಅಪ್ಪಾಜಿ, ಅರುಣ್ ಕುಲಾಲ್ , ರಾಮಚಂದ್ರ, ಭರತ್ , ಸಂಘಟನಾ ಸಹ ಕಾರ್ಯದರ್ಶಿಗಳಾಗಿ ಪ್ರಮೋದ್ ಕುಲಾಲ್, ನಾಗೇಶ್ ಕುಲಾಲ್ ಮಕಂದೂರು, ಯತೀಶ್, ಸತೀಶ್ ಕುಲಾಲ್, ಶರಣ್ ನೇಮಕಗೊಂಡರು. ನಿರ್ದೇಶಕರುಗಳಾಗಿ ವಿನು, ಮಂಜುನಾಥ್, ಅಶೋಕ್ , ಕೆ.ವೈ. ಲಕ್ಷ್ಮಣ್, ರಾಜಮಣಿ,…
ಮಡಿಕೇರಿ ಜು.31 : ಬಿಟ್ಟಂಗಾಲ ಗ್ರಾ.ಪಂ ಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯ ಮೂಕಚಂಡ ಪ್ರಸನ್ನ ಸುಬ್ಬಯ್ಯ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಎಚ್.ಜಿ.ಸರಸು ಆಯ್ಕೆಯಾಗಿದ್ದಾರೆ. ಸೋಮವಾರದಂದು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಕಂಡಂಗಾಲ ವಾರ್ಡ್‍ನ ಪ್ರಸನ್ನ ಸುಬ್ಬಯ್ಯ ಧ್ಯಕ್ಷರಾಗಿ ಹಾಗೂ ನಾಂಗಾಲ ವಾರ್ಡ್‍ನ ಸರಸು ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಮುಂದಿನ ಎರಡೂವರೆ ವರ್ಷಗಳ ಕಾಲ ಅಧಿಕಾರ ನಿರ್ವಹಿಸಲಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನೂತನ ಅಧ್ಯಕ್ಷರು ಬಿಟ್ಟಂಗಾಲ ಗ್ರಾ.ಪಂ ಯನ್ನು ಮಾದರಿ ಪಂಚಾಯಿತಿಯನ್ನಾಗಿ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು. ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆ ಅಧಿಕಾರಿ ಲವೀನಾ ಮಾದಪ್ಪ ಕಾರ್ಯನಿರ್ವಹಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ವಿರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ನೆಲ್ಲಿರ ಚಲನ್, ವಿರಾಜಪೇಟೆ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ವಾಟೇರಿರ ಬೋಪಣ್ಣ, ಅಜ್ಜಿಕುಟ್ಟಿರ ಪ್ರವೀಣ್, ಕಾರ್ಯದರ್ಶಿ ಅಮ್ಮುಣಿಚಂಡ ರಂಜಿ ಪೂಣಚ್ಚ, ಬಿಟ್ಟಂಗಾಲ ಗ್ರಾ.ಪಂ ಬಿಜೆಪಿ ಉಸ್ತುವಾರಿ ಪುಲಿಯಂಡ ಪೊನ್ನಣ್ಣ,…
ಮಡಿಕೇರಿ ಜು.31 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಕೊಡವ ಪಂಚಾಂಗದ ಸಾರ್ವತ್ರಿಕ ಕಕ್ಕಡ ಪದ್‍ನೆಟ್ ಆಚರಣೆ ಆ.2 ರಂದು ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್ ನಲ್ಲಿ ನಡೆಯಲಿದೆ. ಈ ಕುರಿತು ಮಾಹಿತಿ ನೀಡಿರುವ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, 28ನೇ ವರ್ಷದ ಸಾರ್ವತ್ರಿಕ ಕಕ್ಕಡ ಪದ್‍ನೆಟ್ ಆಚರಣೆ ಇದಾಗಿದ್ದು, ಕೊಡವ ಸಂಸ್ಕೃತಿ , ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಉದ್ದೇಶದಿಂದ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕಕ್ಕಡ ಪದ್‍ನೆಟ್ ಆಚರಣೆ ಕೊಡವ ಕರೋಣರ (ಅಂದರೆ ಕೊಡವ ಪೂರ್ವಜರು) ಆವಿಷ್ಕಾರವಾಗಿದೆ ಮತ್ತು ಇದನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಸಾರ್ವತ್ರಿಕಗೊಳಿಸಿ ವಿಶ್ವ ಮಟ್ಟದಲ್ಲಿ ಕೊಡವ ಸಂಪ್ರದಾಯವನ್ನು ಪರಿಚಯಿಸಿದೆ. ತಾಯಿ ಜಲದೇವತೆ ಕಾವೇರಿ ಹಾಗೂ ಭೂದೇವಿಯೊಂದಿಗೆ ಮುರಿಯಲಾಗದ ಕೊಡವ ಬಂಧನವನ್ನು ಕಕ್ಕಡ ಪದ್‍ನೆಟ್ ಸೂಚಿಸುತ್ತದೆ. ಇದು ಕೊಡವ ಬುಡಕಟ್ಟು ಪ್ರಪಂಚದ ಜಾನಪದ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಕಕ್ಕಡದ 18 ರಂದು ಮದ್ದ್‍ತ್ತೊಪ್ (ಒಂದು ನಿರ್ದಿಷ್ಟ ಎಲೆ/ಮದ್ದ್‍ತ್ತೊಪ್ ಎಂದು…
ಮಡಿಕೇರಿ ಜು.31 : ನಗರದ ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ 48ನೇ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಪ್ರಭು ರೈ (ಪ್ರಭಾಕರ್) ಹಾಗೂ ಎಂ.ಬಿ.ರಾಜ ಸುಬ್ಬಯ್ಯ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಮುದ್ದುರಾಜು, ಖಜಾಂಚಿಯಾಗಿ ವಿಘ್ನೇಶ್, ಸಹ ಕಾರ್ಯದರ್ಶಿಯಾಗಿ ಕವನ್ ಕೊತ್ತೋಳಿ, ಉಪಾಧ್ಯಕ್ಷರುಗಳಾಗಿ ಅಯ್ಯಪ್ಪ, ಕರಣ್ ಕುಮಾರ್, ದಿನೇಶ್ ಹಾಗೂ ಎಂ.ಜಿ.ಪ್ರಮೋದ್ ನೇಮಕಗೊಂಡಿದ್ದಾರೆ. ಕೋಟೆ ಮಾರಿಯಮ್ಮ ದೇವಾಲಯದ ಆವರಣದಲ್ಲಿ ಬ್ರಿಜೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಾಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಿದ್ದಾಪುರ ಜು.31 : ಮಣಿಪುರ ಜನಾಂಗಿಕ ಸಂಘರ್ಷದ ಕುರಿತು ಜಿಲ್ಲೆಯ ಜನತೆಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಆ.6 ರಂದು ಸಿದ್ದಾಪುರದ ಗುಹ್ಯ ಅಗಸ್ತ್ಯೇಶ್ವರ ಸಹಕಾರ ಸಂಘದ ಸಭಾಂಗಣದಲ್ಲಿ ವಿಚಾರ ಸಂಕಿರಣ ನಡೆಯಲಿದೆ ಎಂದು ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷ ತಿಳಿಸಿದೆ. ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ.ರಮೇಶ್, ಮಣಿಪುರದಲ್ಲಿ ಎರಡು ಜನಾಂಗದ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ನಾಶವಾಗಿ ಪ್ರಾಣಹಾನಿ ಸಂಭವಿಸಿದರು ಕೇಂದ್ರ ಹಾಗೂ ಅಲ್ಲಿನ ಸರ್ಕಾರ ಘರ್ಷಣೆ ತಡೆಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಅತ್ಯಾಚಾರ ಮಾಡಿರುವುದು ವಿಶ್ವದ ಮುಂದೆ ದೇಶ ತಲೆತಗ್ಗಿಸುವಂತಹ ಹೇಯ ಕೃತ್ಯವನ್ನು ಖಂಡಿಸಿದ ಅವರು, ಭೇಟಿ ಬಚಾವೋ-ಭೇಟಿ ಪಡಾವೋ ಅನ್ನುವ ಪ್ರಧಾನಿ ಘಟನೆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಜಾತ್ಯತೀತ ಶಕ್ತಿಗಳಿಂದ ಹೋರಾಟ ರೂಪಿಸುವ ಘಟನೆ ಬಗೆಗಿನ ವಿವರಣೆಯನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಸಂಕೀರ್ಣ ನಡೆಯಲಿದೆ. ಜಾತ್ಯತೀತ ನಿಲುವನ್ನು ಒಪ್ಪುವ ಪ್ರತಿಯೊಬ್ಬರು ಈ…
ಮಡಿಕೇರಿ ಜು.31 : 2006 ರಲ್ಲಿ ಜಾರಿಗೆ ಬಂದಿರುವ ಆದಿವಾಸಿ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದ ಕುರಿತು ಪರಾಮರ್ಶೆ ಮಾಡಲು ಸುಪ್ರೀಂಕೋರ್ಟ್ ರಚಿಸಿರುವ ಸತ್ಯ ಶೋಧನಾ ಸಮಿತಿಯು ಮೈಸೂರು ಜಿಲ್ಲೆಯ ಹುಣುಸೂರು ತಾಲ್ಲೂಕಿನ ವಿವಿಧ ಹಾಡಿಗಳಿಗೆ ಭೇಟಿ ನೀಡಿತು. ಕೊಳವಿಗೆ ಹಾಗೂ ಚಿಕ್ಕಹೆಜ್ಜೂರು ಹಾಡಿಗಳಿಗೆ ಭೇಟಿ ನೀಡಿದ ಸಮಿತಿಯ ಸದಸ್ಯರಾದ ಪರಿಸರ ತಜ್ಞ ವಿ.ಕೆ.ಬಹುಗುಣ, ಸುಪ್ರೀಂಕೋರ್ಟ್ ವಕೀಲ ರಿತ್ವಿಕ್‌ದತ್ತ ಹಾಗೂ ಸಂಜಯ್ ಕುಲಕರ್ಣಿ ಅವರುಗಳು ಸ್ಥಳೀಯ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸಿದರು. ಪಿರಿಯಾಪಟ್ಟಣ ತಾಲ್ಲೂಕಿನ ರಾಣಿಗೇಟ್ ಹಾಡಿ, ಎಚ್.ಡಿ.ಕೋಟೆ ತಾಲೂಕಿನ ಅನೆಮಾಳ ಮತ್ತು ಮಾಳದ ಹಾಡಿ ಸೇರಿದಂತೆ ವಿವಿಧ ಹಾಡಿಗಳ ನಿವಾಸಿಗಳು ನಮಗೆ ಅನ್ಯಾಯವಾಗಿದೆ, ಕಾಯ್ದೆಯಲ್ಲಿ ಸೂಚಿಸಿರುವಷ್ಟು ಭೂಮಿ ನೀಡಿಲ್ಲ, ಅರ್ಜಿಗಳು ವಿಲೇವಾರಿಯಾಗುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು. ಹಾಡಿ ಜನರ ಅಹವಾಲು ಸ್ವೀಕರಿಸಿದ ಸತ್ಯ ಶೋಧನಾ ಸಮಿತಿಯ ಸದಸ್ಯರು ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಮಡಿಕೇರಿ ಜು.31 : 5ನೇ ವಿಶ್ವ ಕಾಫಿ ಸಮಾವೇಶದ ಲೋಗೋವನ್ನು ಸಮಾವೇಶದ ಬ್ರಾಂಡ್ ಅಂಬಾಸಿಡರ್ ಖ್ಯಾತ ಬ್ಯಾಡ್ ಮಿಂಟನ್ ಕ್ರೀಡಾ ಪಟು ರೋಹನ್ ಬೋಪಣ್ಣ ಅನಾವರಣಗೊಳಿಸಿದರು. ಕಾಫಿ ಮಂಡಳಿ ಸಿಇಓ ಹಾಗೂ ಕಾರ್ಯದರ್ಶಿ ಡಾ.ಕೆ.ಜಿ.ಜಗದೀಶ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಕಾಫಿ ಆರ್ಟ್ ನ ಹಿಮ ಬಿಂದು ಅವರ ಕುಂಚದಲ್ಲಿ ಲೋಗೋ ರಚನೆಗೊಂಡಿದೆ. 5ನೇ ವಿಶ್ವ ಕಾಫಿ ಸಮಾವೇಶ ಸೆ.25 ರಿಂದ 28 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು, ವಿಶ್ವದ ವಿವಿಧ ಕಾಫಿ ಉದ್ಯಮಿಗಳು ಹಾಗೂ ಬೆಳೆಗಾರರು ಪಾಲ್ಗೊಳ್ಳಲಿದ್ದಾರೆ.
ಮಡಿಕೇರಿ ಜು.31 : ಮೆಂಡಾ ಫೌಂಡೇಶನ್ ಮತ್ತು ಎಸ್ & ಪಿ ಗ್ಲೋಬಲ್ ಫೌಂಡೇಶನ್ ಪ್ರಾಯೋಜಕತ್ವದೊಂದಿಗೆ ಹಾಗೂ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್, ಚೆಂಬು ಗ್ರಾಮ ಪಂಚಾಯಿತಿ ಯ ಸಹಕಾರದೊಂದಿಗೆ ಚೆಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್” ಅನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ವತಿಯಿಂದ ಶಾಸಕ ಎ.ಎಸ್.ಪೊನ್ನಣ್ಣ, ಯೋಜನೆಯನ್ನು ಅನುಷ್ಠಾನ ಮಾಡಿರುವ ಸಂಸ್ಥೆಯ ಪ್ರಮುಖರು, ಗ್ರಾ.ಪಂ ಅಧ್ಯಕ್ಷೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ 2 ವರ್ಷದಿಂದ ಕಲಿಕಾ ಸಾಮಾಗ್ರಿಗಳನ್ನು ಉಚಿತವಾಗಿ ನೀಡುತ್ತಿದ್ದ ಯತೀಶ ಕುಂದಲ್ಪಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಚೆಂಬು ಗ್ರಾ.ಪಂ ಅಧ್ಯಕ್ಷೆ ಎ. ಕುಸುಮ, ಸದಸ್ಯರುಗಳಾದ ರಮೇಶ ಹುಲ್ಲುಬೆಂಕಿ, ಎನ್.ಟಿ.ವಸಂತ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ್ರು , ಎಸ್.ಡಿ.ಎಂ. ಸಿ ಅಧ್ಯಕ್ಷ ಜಿ.ಆರ್. ಲಕ್ಷ್ಮಣ, ಸೆಲ್ಕೋ ಸೋಲಾರ್ ಸಂಸ್ಥೆಯ ಮ್ಯಾನೇಜರ್ ಬಿ.ಎ. ಆಶಿಕ್, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು, ಶಿಕ್ಷಣ ಇಲಾಖೆಯ ಅಧಿಕಾರಿ…






